ಬಾಂಗ್ಲಾ : ಇಸ್ಕಾನ್ ರಾಧಾಕಾಂತ ದೇವಾಲಯದ ಮೇಲೆ 200ಕ್ಕೂ ಹೆಚ್ಚು ಜನರು ಗುರುವಾರ ದಾಳಿ , ಧ್ವಂಸ

ಬಾಂಗ್ಲಾದೇಶ: ಢಾಕಾದ ವಾರಿಯ 222 ಲಾಲ್ ಮೋಹನ್ ಸಹಾ ಬೀದಿಯಲ್ಲಿರುವ ಇಸ್ಕಾನ್ ರಾಧಾಕಾಂತ ದೇವಾಲಯದ ಮೇಲೆ 200ಕ್ಕೂ ಹೆಚ್ಚು ಜನರು ಗುರುವಾರ ದಾಳಿ ನಡೆಸಿ, ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಲೂಟಿ ಮಾಡಿರೋದಾಗಿ ತಿಳಿದು ಬಂದಿದೆ.ವರದಿಗಳ ಪ್ರಕಾರ, ಸುಮಂತ್ರ ಚಂದ್ರ ಶ್ರವಣ್, ನಿಹಾರ್ ಹಲ್ದಾರ್, ರಾಜೀವ್ ಭದ್ರಾ ಸೇರಿದಂತೆ ಅನೇಕ ಜನರು ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಈ ಗುಂಪಿನ ನೇತೃತ್ವವನ್ನು ಹಾಜಿ ಶಫಿವುಲ್ಲಾ ವಹಿಸಿದ್ದರು ಎಂದು ವರದಿಯಾಗಿದೆ.

ಕಳೆದ ವರ್ಷವೂ ಇದೇ ದೇವಾಲಯದ ಮೇಲೆ ದಾಳಿ ನಡೆಸಲಾಗಿತ್ತು. ಆಗ ಕನಿಷ್ಠ ಮೂರು ಜನರು ಕೊಲ್ಲಲ್ಪಟ್ಟಿದ್ದರು.

ಬಾಂಗ್ಲಾದೇಶದ ಕೊಮಿಲ್ಲಾ ಪಟ್ಟಣದ ನನುರ್ ದಿಘಿ ಸರೋವರದ ಬಳಿಯ ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಡಿದ ನಂತರ ಹಿಂಸಾಚಾರ ಭುಗಿಲೆದ್ದ ನಂತ್ರ ಈ ಘಟನೆ ನಡೆದಿದೆ.

ಈ ಹಿಂದೆ, ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್ ನ ಕೊತ್ವಾಲಿಯಿಂದ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.

Post a Comment

Previous Post Next Post