[17/03, 5:57 PM] +91 90088 29855: *ಚಿಕ್ಕಮಗಳೂರಿನ ಬಾಳೆಹೊನ್ನೂರು ಮಠದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ಶ್ರೀ ರಂಭಾಪುರಿ ಶ್ರೀಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕರಿಸುತ್ತೇನೆ.
ಧರ್ಮ ಪೀಠದಲ್ಲಿ ನಡೆಯುತ್ತಿರುವ ಸಾಹಿತ್ಯ ಸಭೆಗೆ ಆಹ್ವಾನ ನೀಡುತ್ತಿದ್ದೀರಿ. ನಾನು ರಾಜಕಾರಣಿ ನನ್ನಿಂದ ಯಾವ ಭಾಷಣ ನಿರೀಕ್ಷೆ ಮಾಡುತ್ತಿದ್ದೀರಿ.
ಇಲ್ಲಿ ಬಹಳ ಬರಹಗಾರ್ತಿಯರು ಸೇರಿದ್ದೀರಿ. ಇವರಿಗೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಯಾವುದೇ ಗ್ರಾಮಕ್ಕೆ ಹೋದರೂ ನಾವು ಗ್ರಾಮ ದೇವತೆಗಳಿಗೆ ಪೂಜೆ ಮಾಡುತ್ತೇವೆ.
ವೆಂಕಟೇಶ್ವರ ದೇವರನ್ನು ಲಕ್ಷ್ಮೀ ವೆಂಕಟೇಶ್ವರ, ಪರಮೇಶ್ವರನನ್ನು, ಪಾರ್ವತಿ ಪರಮೇಶ್ವರ, ಗಣೇಶನನ್ನು ಗೌರಿ ಗಣೇಶ ಎಂದು ಸ್ತ್ರೀಗೆ ಮೊದಲ ಆದ್ಯತೆ ನೀಡಲಾಗುವುದು.
ಇಂದು ಯಾರು ಒಪ್ಪಲಿ ಬಿಡಲಿ ಹೆಣ್ಣು ಒಬ್ಬ ಶಿಕ್ಷಕಿ. ತಾಯಿಯೇ ನಮ್ಮ ಮೊದಲ ಗುರು. ಧರ್ಮ ಪೀಠದಲ್ಲಿ ಇರುವ ಗುರುಗಳು ಎರಡನೇ ಗುರುಗಳು.
ನಾವ್ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿರಲಿಲ್ಲ. ನಾವು ಎಷ್ಟೇ ಜಾತಿ, ಧರ್ಮ ಬೇಡ ಎಂದರು ಸರ್ಕಾರ ಅರ್ಜಿಯಲ್ಲಿ ನಿನ್ನ ಜಾತಿ, ಧರ್ಮ ಕೇಳುತ್ತದೆ.
ಉಪನಯನ, ಕಿವಿ, ಮೂಗು ಚುಚ್ಚುವುದು ಧರ್ಮ ಅಲ್ಲವೇ. ಮದುವೆ ಸಮಯದಲ್ಲಿ ಒಂದು ಗಂಡು ಹೆಣ್ಣು ಇದ್ದಂತೆ ಒಂದೆಡೆ ಅಕ್ಕಿ ಹಾಗೂ ಮತ್ತೊಂದೆಡೆ ಆರಿಶಿನ ಸೇರಿ ಮಂತ್ರಾಕ್ಷತೆ ಆಗುತ್ತದೆ.
ನಾವು ಸಾಯುವಾಗ ಹೆಣ ಸುಡಬೇಕೋ, ಮಣ್ಣು ಮಾಡಬೇಕೋ ಎಂದು ನಿರ್ಧರಿಸುವುದು ಧರ್ಮ. ಹೀಗೆ ನಾವು ಧರ್ಮವನ್ನು ಬಿಡುತ್ತೇವೆ ಎಂದರು ಅದು ನಮ್ಮನ್ನು ಬಿಡುವುದಿಲ್ಲ.
ನಾವೆಲ್ಲರೂ ಇಲ್ಲಿ ಧರ್ಮ ಪೀಠದಲ್ಲಿ ಸೇರಿದ್ದೇವೆ. ನಾವು ನಮ್ಮ ಧರ್ಮ ಉಳಿಸಿಕೊಳ್ಳಬೇಕು.
ಧರ್ಮದ ವಿಚಾರದಲ್ಲಿ ನಾವು ರಾಜಕಾರಣಿಗಳು ತಲೆ ಹಾಕಬಾರದು ಎಂದು ಹೇಳಿ ನಾನು ಕ್ಷಮೆ ಕೇಳಿದ್ದೆ. ಅದು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಶ್ರೀಗಳ ಸನ್ನಿದಿಗಿಂತ ಬೇರೆ ಪವಿತ್ರ ಸ್ಥಳ ಇಲ್ಲ ಎಂದು ನಾನು ಕ್ಷಮೆ ಕೇಳಿದ್ದೆ. ಅದಕ್ಕೆ ಸಾಕಷ್ಟು ಟೀಕೆ ಟಿಪ್ಪಣಿ ಆಯಿತು. ಆದರೆ ಈ ಪೀಠದ ಅಜ್ಜರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ, ನಾಡು ಧರ್ಮದ ಸಾಮ್ರಾಜ್ಯವಾಗಲಿ ಎಂದು ಹೇಳಿಕೊಟ್ಟಿದ್ದಾರೆ. ನಾವು ಅದನ್ನು ಉಳಿಸಿಕೊಳ್ಳಬೇಕು.
ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ. ಧರ್ಮಕ್ಕಾಗಿ ಆಳಿರಿ, ಧರ್ಮಕ್ಕಾಗಿ ತಾಳಿರಿ ಎಂದು ಹೇಳಿದ್ದರು.
ನಾವು ಧರ್ಮ ಉಳಿಸಿಕೊಳ್ಳಬೇಕು. ಎಲ್ಲರೂ ಕೂಡ ಆ ಕೆಲಸ ಮಾಡಬೇಕು. ಆದರೆ ನಾವು ರಾಜಕಾರಣಿಗಳು ಅದರಿಂದ ಸ್ವಲ್ಪ ದೂರ ಇರಬೇಕು.
ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು.
ಇಲ್ಲಿ ಸಾಕಷ್ಟು ತಾಯಂದಿರು ಬಂದಿದ್ದಾರೆ. ತಾಯಿ ನೆನಪು ಪ್ರೀತಿಯ ಮೂಲ. ಗುರು ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿ ಮೂಲ, ಈ ಮೂವರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ.
ಇಂದು ನಮ್ಮ ಶ್ರೀಗಳು ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ ಕಲ್ಪಿಸಿದ್ದಾರೆ. ದೇಶದ ಅಕ್ಷರ ಭಂಡಾರದಲ್ಲಿ ಅನೇಕ ಧರ್ಮ, ಸಂಸ್ಕೃತಿ ಅಡಗಿದೆ.
ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು.
ಯಾವ ಧರ್ಮದಲ್ಲಾದರೂ ಬೇರೆಯವರಿಗೆ ತೊಂದರೆ ಕೊಡಲು ಹೇಳಿದೆಯಾ? ಇಲ್ಲ.
ನಾವು ಭಾರತದಂತ ಅತ್ಯುತ್ತಮ ಸಂಸ್ಕೃತಿ, ಪರಿಸರ ಇರುವ ಪವಿತ್ರ ಭೂಮಿಯಲ್ಲಿ ಇದ್ದೇವೆ.
ನಮ್ಮ ನೆಲದಲ್ಲಿ ಇಂತಹದು ಇಲ್ಲ ಎನ್ನುವಂತಿಲ್ಲ. ಬಸವಣ್ಣನವರು ನಮಗೆ ಒಂದು ತತ್ವ ಸಿದ್ಧಾಂತ ನೀಡಿದ್ದಾರೆ. ಈ ನಾಡನ್ನು ಬಸವಣ್ಣನ ನಾಡು ಎಂದು ಇಡೀ ವಿಶ್ವ ಒಪ್ಪಿದೆ.
ಭಾರತ ದೇಶದಲ್ಲಿ ಎಷ್ಟೇ ಜಾತಿ, ಧರ್ಮ ಇದ್ದರೂ, ನಾವೆಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದು ದೇಶದ ಏಕತೆ, ಸಮಗ್ರತೆ, ಶಾಂತಿಗೆ ನಾವು ಹೋರಾಡುತ್ತಿದ್ದೇವೆ.
ದೇಶದಲ್ಲಿ ಧರ್ಮ ಪೀಠಗಳು ಅನ್ನ, ಅಕ್ಷರದ ದಾಸೋಹ ನೀಡಿ ತಮ್ಮದೇ ಆದ ಸೇವೆ ಮಾಡುತ್ತಿವೆ.
ಗ್ರೇಟ್ ಅಲೆಕ್ಸಾಂಡರ್ ಅವರು ಭಾರತ ವಶಪಡಿಸಿಕೊಳ್ಳಲು ನಿರ್ಧರಿಸಿ, ಆರಿಸ್ಟಾಟಲ್ ಅವರನ್ನು ಭೇಟಿ ಮಾಡಿದಾಗ ಅವರು ಅಲೆಕ್ಸಾಂಡರ್ ಗೆ ಒಂದು ಮಾತು ಹೇಳುತ್ತಾರೆ.
ನೀನು ಭಾರತವನ್ನು ಗೆಲ್ಲುತ್ತೀಯೋ ಇಲ್ಲವೋ, ನೀನು ಇಲ್ಲಿಗೆ ಬರುವಾಗ ಐದು ವಸ್ತು ತೆಗೆದುಕೊಂಡು ಬಾ. ಒಂದು ರಾಮಾಯಣ ಗ್ರಂಥ, ಒಂದು ಮಹಾಭಾರತದ ಭಗವದ್ಗೀತೆ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ಭಾರತದ ಧರ್ಮ ಪೀಠದ ಧರ್ಮ ಗುರುಗಳನ್ನು ಕರೆದುಕೊಂಡು ಬಾ. ನೀನು ಇಡೀ ಭಾರತವನ್ನೇ ತಂದಂತೆ.
ಹೀಗೆ ನಮ್ಮ ಧರ್ಮ ಗುರುಗಳು ಮಹತ್ವ ಪಡೆದಿದ್ದಾರೆ. ನಾವು ಪ್ರತಿ ವಿಚಾರದಲ್ಲೂ ಧರ್ಮ ಗುರುಗಳ ಆಶೀರ್ವಾದ ಪಡೆಯುತ್ತೇವೆ.
ಕೃಷ್ಣ ಕೊಳಲು ಆಗಿರುವುದು ಬಿದಿರಿನಿಂದ. ಆ ಕೊಳಲಿನಿಂದ ನಾದ ಹೊಮ್ಮಿ ಆನಂದ ಸಿಗುತ್ತದೆ. ಬಿದಿರಿಗೆ ತನ್ನ ಈ ಶಕ್ತಿ ಬಗ್ಗೆ ಗೊತ್ತಿರುವುದಿಲ್ಲ.
ಹೀಗಾಗಿ ನೀವು ನಮ್ಮಿಂದ ಏನೋ ಆಗುವುದಿಲ್ಲ ಎಂದು ಭಾವಿಸಬೇಡಿ. ನಾವು ನಮ್ಮ ಪಕ್ಷದಲ್ಲಿ ಮಹಿಳೆಯರಿಗಾಗಿ ನಾ ನಾಯಕಿ ಎಂಬ ಕಾರ್ಯಕ್ರಮ ರೂಪಿಸಿದ್ದೇವೆ. ಹೆಣ್ಣು ಹುಟ್ಟುತ್ತಲೇ ನಾಯಕಿ. ಆಕೆಗೆ ಶಕ್ತಿ, ಸ್ಫೂರ್ತಿ ನೀಡಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ.
ನೀವು ಎಷ್ಟೇ ದೊಡ್ಡವರಾದರೂ ಅವರ ಮನೆಯಲ್ಲಿ ಮಹಿಳೆಯ ನೆರವು ಅಗತ್ಯ. ಹೀಗಾಗಿ ಮಹಿಳೆಗೆ ಶಕ್ತಿ, ಶಿಕ್ಷಣ, ಪ್ರೋತ್ಸಾಹ ನೀಡಿದರೆ ಸಮಾಜ ಹಾಗೂ ಸಂಸಾರ ಎರಡು ಯಶಸ್ಸು ಸಾಧಿಸುತ್ತದೆ. ಹೀಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ.
ನೀವು ನನ್ನ ಕಷ್ಟ ಕಾಲದಲ್ಲಿ ಜತೆಯಲ್ಲಿ ನಿಂತಿದ್ದೀರಿ, ನಿಮ್ಮ ಪ್ರೀತಿ ಮರೆಯಲು ಸಾಧ್ಯವಿಲ್ಲ. ನಾನು ಸದಾ ನಿಮ್ಮ ಜತೆ ಇರುತ್ತೇನೆ.
[17/03, 7:12 PM] +91 90088 29855: ಬಾಳೆಹೊನ್ನೂರಿನಲ್ಲಿ ಗುರುವಾರ ನಡೆದ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಡಿಜಿಟಲ್ ಸದಸ್ಯತ್ವ ನೋಂದಣಿ ಕರ್ನಾಟಕದ ಮುಖ್ಯಸ್ಥ ರಘುನಂದನ್ ರಾಮಣ್ಣ, ಮಾಜಿ ಸಚಿವೆ ಮೋಟಮ್ಮ, ಶಾಸಕ ಟಿ.ಡಿ. ರಾಜೇಗೌಡ,[ಎಂಎಲ್ಸಿ ಚುನಾವಣೆ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ...., ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗ, ಮಾಜಿ ಶಾಸಕ ಶ್ರೀನಿವಾಸ್ ತರೀಕೆರೆ ಮತ್ತಿತರರು ಭಾಗವಹಿಸಿದ್ದರು.
[17/03, 7:38 PM] +91 90088 29855: ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಸಂಜೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
[ಎಂಎಲ್ಸಿ ಚುನಾವಣೆ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ... ಚುನಾವಣೆ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ...
Post a Comment