ವಿವಿಧ ಮಾಧ್ಯಮಗಳೇ Atal Bihari Vajapayee ಅವರ ಈ ಭವಿಷ್ಯವಾಣಿ ನಿಜ ಸಾಬೀತಾಗುತ್ತದೆ ಎಂದು ಕಾಂಗ್ರೆಸ್ ಕನಸಲ್ಲೂ ಊಹಿಸಿರಲಿಕ್ಕಿಲ್ಲ! ... ಎಂದು ನೆನಪಿಸಿವೆ....

ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳಲ್ಲಿ ಹತಾಶೆಯ ವಾತಾವರಣ ನಿರ್ಮಾಣವಾಗಿದೆ. ಆದರೆ ಇದೆಲ್ಲದರ ನಡುವೆ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಅತಿ ಹೆಚ್ಚು ನಿರಾಸೆಯಾಗಿದೆ ಎಂದರೆ, ಅದುವೇ ಕಾಂಗ್ರೆಸ್ ಪಕ್ಷ ( Congress).ಏಕೆಂದರೆ ಅದು ತನ್ನ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ. ಚುನಾವಣೆಗಳು ನಡೆದ 5 ರಾಜ್ಯಗಳ ಪೈಕಿ 4ರಲ್ಲಿ ಬಿಜೆಪಿ (BJP) ಮತ್ತು 1 ರಲ್ಲಿ ಆಮ್ ಆದ್ಮಿ ಪಕ್ಷ (Aam Admi Party) ಸರ್ಕಾರ ರಚಿಸಲಿವೆ. ಆದರೆ, ಈ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಸರಕಾರವಿದ್ದು, ಆಪ್‌ಗೆ ಹೋದ ಒಂದು ರಾಜ್ಯ ಕಾಂಗ್ರೆಸ್‌ನ ಸುಭದ್ರಕೋಟೆಯಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ..

ಇದು ಕಾಂಗ್ರೆಸ್ ಸೂರ್ಯಾಸ್ತವೇ?
ಅಂದರೆ ಕಾಂಗ್ರೆಸ್ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಸ್ಪಷ್ಟವಾಗುತ್ತಿದೆ. ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ, ಬಿಜೆಪಿಗೆ ದೊರೆತ ಬೃಹತ್ ವಿಜಯ, ಮುಂಬರುವ ವರ್ಷಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ಸಮಯ ಇಲ್ಲ ಎಂಬುದನ್ನು ಸೂಚಿಸುತ್ತಿದೆ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಅನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ ಮತ್ತು ಕಡಿಮೆ ಸಂಖ್ಯೆ ಹೊಂದಿದ್ದ ಜನಸಂಘವನ್ನು (Jansangh) (ಇಂದಿನ ಬಿಜೆಪಿ) ಕಾಂಗ್ರೆಸ್ ಗೇಲಿ ಮಾಡಿದ ಸಮಯವನ್ನು ಕಾಂಗ್ರೆಸ್ ಗೆ ನೆನಪಿಸುತ್ತಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ನುಡಿದ ಭವಿಷ್ಯವಿದು
ಆದರೆ, ಆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದ ಮಾಜಿ ಪ್ರಧಾನಿ ಮತ್ತು ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ದಿ.ಅಟಲ್ ಬಿಹಾರಿ ವಾಜಪೇಯಿ, 'ನಾವು ಸ್ಪಷ್ಟ ಬಹುಮತ ಪಡೆಯುವ ಕ್ಷಣಕ್ಕಾಗಿ ಕಾಯುತ್ತೇವೆ. ಇಂದು ನೀವು ನಮ್ಮನ್ನು ಅಪಹಾಸ್ಯ ಮಾಡಬಹುದು. ಆದರೆ, ಮುಂದೊಂದು ದಿನ ಜನರು ನಿಮ್ಮ ಕುರಿತು ಅಪಹಾಸ್ಯ ಮಾಡಲಿದ್ದಾರೆ' ಎಂದಿದ್ದರು. ಅಷ್ಟೇ ಅಲ್ಲ ಆಗ ವಾಜಪೇಯಿ ಅವರು 'ಮುಂದೊಂದು ದಿನ ಇಡೀ ದೇಶದಲ್ಲಿ ಕಮಲ ಅರಳಲಿದೆ' ಎಂದಿದ್ದರು. ಎರಡು ದಶಕಗಳ ಹಿಂದೆ ಬಿಜೆಪಿಯ ದೃಢತೆಯನ್ನು ಸಂಸತ್ತಿನಲ್ಲೀ ಮಂಡಿಸಿದ್ದ ಅವರು, 'ನಾವು ಕಷ್ಟಪಟ್ಟಿದ್ದೇವೆ, ಹೋರಾಟ ಮಾಡಿದ್ದೇವೆ' ಎಂದು ಹೇಳಿದ್ದರು. 'ನಮ್ಮ ಪಕ್ಷ ವರ್ಷದ 365 ದಿನಗಳ ಕಾಲ ನಡೆಯುವ ಪಕ್ಷವಾಗಿದೆ. ಇದು ಚುನಾವಣೆಯಲ್ಲಿ ನಾಯಿಕೊಡೆಗಳಂತೆ ಬೆಳೆಯುವ ಪಕ್ಷವಲ್ಲ...ಬಹುಮತಕ್ಕಾಗಿ ಕಾಯುತ್ತೇವೆ' ಎಂದು ವಾಜಪೇಯಿ ಹೇಳಿದ್ದರು. ಈಗ ಬಿಜೆಪಿಯ ಆ ಕಾಯುವಿಕೆ ಮುಗಿದಿದೆ ಎಂದರೆ ತಪ್ಪಾಗಲಾರದು. ಕಳೆದ 8 ವರ್ಷಗಳಿಂದ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಬಂಪರ್ ಬಹುಮತ ಸಿಗುತ್ತಿದೆ.

Yogi Adityanath Resignation : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ ಆದಿತ್ಯನಾಥ್!

ಅಟಲ್ ಜಿ ಸರ್ಕಾರ ಒಂದು ಮತ ಅಂತರದಿಂದ ಪತನವಾಗಿತ್ತು
ಲೋಕಸಭೆಯಲ್ಲಿ ಕಾಂಗ್ರೆಸ್ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ ಭವಿಷ್ಯ ಇಂದು ನಿಜವಾಗುತ್ತಿದೆ. ಒಂದು ಕಾಲದಲ್ಲಿ ದೇಶವನ್ನೇ ಆಳಿದ ಕಾಂಗ್ರೆಸ್ ಪಕ್ಷಕ್ಕೆ ಇಂದು ಉತ್ತರ ಪ್ರದೇಶದಲ್ಲಿ 5 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಎಷ್ಟಿತ್ತೆಂದರೆ, ಪಕ್ಷದ ಓರ್ವ ಸಂಸದ ಗಿರ್ಧರ್ ಗೋಮಾಂಗ್, ಒಡಿಶಾದ ಮುಖ್ಯಮಂತ್ರಿಯಾಗಿದ್ದುಕೊಂಡು ಲೋಕಸಭೆಯಲ್ಲಿ ಮತ ಚಲಾಯಿಸಿದ್ದರು ಮತ್ತು ಆ ಒಂದು ಮತ ಇಡೀ ರಾಜಕೀಯ ಆಟವನ್ನೇ ಬದಲಾಯಿಸಿತ್ತು. ಕಾಂಗ್ರೆಸ್‌ಗೆ ಅದು ನೆನಪಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ, ಆದರೆ ಜನರು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವಾಜಪೇಯಿ ಅವರ ಮಾತುಗಳನ್ನು ಕಾಂಗ್ರೆಸ್ ಗೆ ನೆನಪಿಸುತ್ತಿದ್ದು, #atalbiharivajpayee ಟ್ರೆಂಡಿಂಗ್ ನಲ್ಲಿರುವುದು ಮಾತ್ರ ನಿಜ.

ಗಂಗಾ-ಜಮುನಾ-ತೆಹಜೀಬ್ ಭೂಮಿಯಲ್ಲಿ ಯೋಗಿ ಗೆದ್ದಿದ್ದು ಹೇಗೆ..?

ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಪತನ
ಜನರು ಈ ಸಾಲುಗಳನ್ನು ನೆನಪಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ, ಜನರು ವಾಜಪೇಯೀ ಅವರ ಈ ಸಾಲುಗಳನ್ನು ನೆನಪಿಸಿಕೊಂಡಿದ್ದರು. ಇಂದು ಯಾವ ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ದಿಗ್ಗಜ ನಾಯಕರನ್ನು ನೀಡಿದೆಯೋ, ಅದೇ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಶೇ.2.33 ರಷ್ಟು ಮತಗಳು ಬಂದಿದ್ದಾರೆ, ಬಿಜೆಪಿಗೆ ಶೇ.41.29 ರಷ್ಟು ಮತಗಳು ಪ್ರಾಪ್ತಿಯಾಗಿವೆ, ಪಂಜಾಬ್ ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಗೆ ಶೇ. 22.98 ರಷ್ಟು ಮತಗಳು ಬಂದಿದ್ದರೆ, ಆಮ್ ಆದ್ಮಿ ಪಕ್ಷವು ಶೇಕಡಾ 42.01 ಮತಗಳನ್ನು ಪಡೆದಿದೆ.

Post a Comment

Previous Post Next Post