[11/03, 7:49 PM] Suma Suma. Mys: ವೈರಮುಡಿ ಉತ್ಸವ ಬಹಳ ವಿಜೃಂಭಣೆಯಿಂದ ಆಗಲಿದೆ: ಸಿ.ಎಸ್.ಪುಟ್ಟರಾಜು
ಐತಿಹಾಸಿಕ ಮೇಲುಕೋಟೆ ಪುಣ್ಯ ಕ್ಷೇತ್ರ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುವುದುದಾಗಿ ಸರ್ಕಾರ ತೀರ್ಮಾನ ಮಾಡಿದ್ದು,
ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿ ಉತ್ಸವಕ್ಕೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಮೇಲುಕೋಟೆ ಶಾಸಕರಾದ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಮೇಲುಕೋಟೆ ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ದತೆ ಕುರಿತು ಮೇಲಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯ ಮಂತ್ರಿಗಳು ಮಾರ್ಚ್ 14 ರಂದು ಉತ್ಸವಕ್ಕೆ ಆಗಮಿಸಿ ದಳವಾಯಿ ಕೆರೆಯಲ್ಲಿ ಬಾಗಿನ ಅರ್ಪಿಸಿ ನಂತರ ದೇವರ ದರ್ಶನ ಮಾಡಿ ಪುಷ್ಪಾರ್ಚನೆ ಮಾಡುವರು. ಮೇಲುಕೋಟೆಯಲ್ಲಿ ಕೆಲವು ಸರ್ಕಾರಿ ಕಾಮಗಾರಿಗೆ ಶಂಕು ಸ್ಥಾಪನೆ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸುವರು ಎಂದು ಹೇಳಿದರು.
ಸುಮಾರು 10 ಲಕ್ಷ ಭಕ್ತಾದಿಗಳು ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ ಭಕ್ತಾದಿಗಳಿಗೆ ಯಾವುದೇ ರೀತಿಯ ಕುಂದುಕೊರತೆಯಾಗದೆ ಎಲ್ಲರಿಗೂ ದೇವರ ದರ್ಶನ ಮಾಡಲು ಅವಕಾಶಮಾಡಿಕೊಡಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಬಹಳ ಜವಾಬ್ದಾರಿಯುತವಾಗಿ ಉತ್ಸವದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಮಾರ್ಚ್ 18 ರಂದು ನಡೆಯುವ ತೆಪ್ಪೋತ್ಸವ ಕಾರ್ಯಕ್ರಮವು ಈ ಬಾರಿ ಬಹಳ ವಿಶೇಷವಾಗಿ ಆಚರಣೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಂಡುಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಪಾಂಡವಪುರ ತಹಶೀಲ್ದಾರರಾದ ಪ್ರಮೋದ್ ಪಾಟೀಲ್, ಮೇಲುಕೋಟೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
[12/03, 7:45 AM] Suma Suma. Mys: ಮಾರ್ಚ್ 14 ರಂದು ಮೇಲುಕೋಟೆ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‌ಗಳ ವ್ಯವಸ್ಥೆ
ಮಾರ್ಚ್ 14 ರಂದು ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಬ್ರಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂಡ್ಯ ವಿಭಾಗದ ವತಿಯಿಂದ ಬೆಂಗಳೂರು, ಮೈಸೂರು, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು ಮಳವಳ್ಳಿ ಪಾಂಡವಪುರ, ಕೆ.ಆರ್.ಪೇಟೆ ಬಸ್ ನಿಲ್ದಾಣಗಳಿಂದ ಮೇಲುಕೋಟೆಗೆ ಒಟ್ಟು 100 ವಿಶೇಷ ಕರ್ನಾಟಕ ಸಾರಿಗೆ ವಾಹನವನ್ನು ಹಾಗೂ ಬೆಂಗಳೂರು ಮತ್ತು ಮೈಸೂರಿನಿಂದ ಮೇಲುಕೋಟೆಗೆ ವೋಲ್ವೊ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸದರಿ ವಿಶೇಷ ವಾಹನಗಳನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳುವಂತೆ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
Post a Comment