ಶ್ರೀ ಗುರುಭ್ಯೋ ನಮಃ....ಶ್ರೀಮಂತರಾದ ಅವರ ಮಗ ಸಂಗೀತಗಾರ ಬಹಳ ಚೆನ್ನಾಗಿ ಹಾಡುತ್ತಿದ್ದನಂತೆ. ಅವರ ದಾಯಾದಿಗಳಿಗೆ ಈ ಹುಡುಗನನ್ನು ನೋಡಿ ಇಷ್ಟು ಚೆನ್ನಾಗಿ ಹಾಡುತ್ತಾನಲ್ಲಾ ಎಂದು ಹೊಟ್ಟೆ ಉರಿದುಕೊಳ್ಳುತ್ತಿದರಂತೆ.... ಪಾಪ ರಾಯರ ಭಕ್ತರು ಮೇಲಾಗಿ ಯಾರಿಗೂ ಕೇಡು ಬಯಸದವರು ಇದ್ದಕಿದ್ದ ಹಾಗೆ ಮಗನಿಗೆ ಮಾತೇ ನಿಂತು ಹೋಯಿತು.

ಶ್ರೀ ಗುರುಭ್ಯೋ ನಮಃ 
ಪರಮ ಪೂಜ್ಯ ಪ್ರೀತಿಯ ಗುರು ಶ್ರೀ ರಾಘವೇಂದ್ರರು ಹುಟ್ಟಿದ ದಿನ... 
ಹುಟ್ಟಿದ್ದು ಬಡತನ, ಬದುಕಿದ್ದು ಬಡತನ, ಸಾಧಿಸಿದ್ದು ಅಗಾಧ ವಾದದ್ದು, ಅಕ್ಷಯ ವಾದದ್ದು... 
1ಇವತ್ತಿಗೂ ಬಡವ, ಬಲ್ಲಿದ, ದೀನ, ದರಿದ್ರ, ಶಕ್ತ, ಅಶಕ್ತರು ದೇವರನ್ನು ಬಿಟ್ಟರೆ ಇವರನ್ನೇ ಶ ರ ನು ಬರುತ್ತಾರೆ... ಉದ್ಧಾರ ವಾಗುತ್ತಾರೆ, ಆಗುತ್ತಿದ್ದಾರೆ... ಆಗೋದು ಖಚಿತ... 
ಅಂಥವರ ದರ್ಶನ, ಸ್ತುತಿ, ಸ್ಮರಣೆ ಮಾಡೋಣ ಬನ್ನಿ.... 
ಆಚಾರ-ವಿಚಾರ ಭಾಗ 390
ರಾಘವೇಂದ್ರ ಗುರುಗಳ ವರ್ಧಂತಿಯ ಪ್ರಯುಕ್ತ
ಮನುಷ್ಯರಲ್ಲಿ ಹೊಟ್ಟೆಕಿಚ್ಚು ಎನ್ನುವುದು ಎಲ್ಲಾ ಕಾಲದಲ್ಲಿಯೂ ಇರುವುದು ನಿಜ .ಒಂದು ಹಾಡು ಹೇಳಿ, ಅದಕ್ಕೂ ಹೊಟ್ಟೆ ಕಿಚ್ಚು, ವಿದ್ಯೆ ಕಲಿಯಿರಿ, ಅದಕ್ಕೂ ಹೊಟ್ಟೆಕಿಚ್ಚು, ಮಕ್ಕಳಿಗೆ ಒಳ್ಳೆಯ ನಡತೆ ಇರಲಿ,ಅದಕ್ಕೂ ಅತಿಯಾದ ಹೊಟ್ಟೆ ಕಿಚ್ಚು. ದಾಯಾದಿಗಳ ಈ ಹೊಟ್ಟೆಕಿಚ್ಚು ಅಂದಿನಿಂದ ಇಂದಿನವರೆಗೂ ..ಮುಂದುವರೆ ಯುತ್ತಲೆ ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆ....
ಒಮ್ಮೆ ಪೂಜ್ಯರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಮಹಾರಾಷ್ಟ್ರದಲ್ಲಿ ಕರಾಡ್ ಎಂಬಲ್ಲಿಗೆ ಸಂಚಾರಕ್ಕೆ ಹೋಗಿದ್ದರಂತೆ,ಅಲ್ಲಿ ರಾಯರ ಶಿಷ್ಯರೊಬ್ಬರು ವಿಶೇಷ ಸೇವೆಯನ್ನು ಮಾಡುವ ಪರಮ ಭಕ್ತರಿದ್ದರು.ಬಹಳ ಶ್ರೀಮಂತರಾದ ಅವರ ಮಗ ಸಂಗೀತಗಾರ ಬಹಳ ಚೆನ್ನಾಗಿ ಹಾಡುತ್ತಿದ್ದನಂತೆ. ಅವರ ದಾಯಾದಿಗಳಿಗೆ ಈ ಹುಡುಗನನ್ನು ನೋಡಿ  ಇಷ್ಟು ಚೆನ್ನಾಗಿ ಹಾಡುತ್ತಾನಲ್ಲಾ ಎಂದು ಹೊಟ್ಟೆ ಉರಿದುಕೊಳ್ಳುತ್ತಿದರಂತೆ.... ಪಾಪ ರಾಯರ ಭಕ್ತರು ಮೇಲಾಗಿ ಯಾರಿಗೂ ಕೇಡು ಬಯಸದವರು ಇದ್ದಕಿದ್ದ ಹಾಗೆ ಮಗನಿಗೆ ಮಾತೇ ನಿಂತು ಹೋಯಿತು. ದಾಯಾದಿಗಳು ಮಾಟ ಮಂತ್ರ ಪ್ರಯೋಗ ಮಾಡಿ  ಮಾತೇ ಅಡದಿರುವಂತೆ ಮಾಡಿದರು. ಇನ್ನೆಂತಹಾ ಹೊಟ್ಟೆ ಉರಿ ಇರಬಹುದು ದಾಯದಿಗಳದು ? ರಾಯರು ಇವರ ಊರಿಗೆ ಬಂದ ಸಮಯವದು .ಪೂಜೆ ಎಲ್ಲಾ ಮುಗಿಯಿತು. ಎಲ್ಲರೂ ಆ ಹುಡುಗನನ್ನು ಹಾಡು ಹೇಳಲು ಕೇಳಿದರು. ಬಲವಂತ ಮಾಡುತ್ತಿದ್ದಾರೆ ಆದರೆ ಅವರು, ಪಾಪ ಮಗನಿಗೆ ಮಾತು ನಿಂತು ಹೋಗಿರುವುದು ಸಂಬಂಧಿಕರಿಗೆ ಹೇಳಿಕೊಂಡಿರುವುದಿಲ್ಲ, ಎಲ್ಲರೂ ಬಲವಂತ ಮಾಡುತ್ತಿದ್ದಾರೆ ಹುಡುಗ ಏನು ಹಾಡಿಯಾನು ಮಾತೇ ನಿಂತು ಹೋಗಿದೆ ತಂದೆಗೆ ಅತೀವ ದುಃಖ .ರಾಯರು ಹಾಡಲಿ ಹಾಡಿಸಿ ಎಂದರು .ಆಗ ಅವರು ತಮಗೆ ತಿಳಿಯದಿರುವುದು ಏನಿದೆ ಗುರುಗಳೇ ಎಂದರಂತೆ ಆಗ ರಾಯರು ಏತಕೆ ನನಗೆ ತಿಳಿಸಿಲ್ಲ  ?!.ಎಂದಾಗ ಏನು ಹೇಳುವುದು ಸಂದರ್ಭ ಬಂದಿರಲಿಲ್ಲ ಸ್ವಾಮಿ ಎಂದು ಕಣ್ಣಿರು ಹರಿಸಿದರಂತೆ .ಆಗ ನಮ್ಮ ಕರುಣಾಮಯಿಗಳು ಆ ಹುಡುಗನನ್ನು ಕರೆದರಂತೆ, ಆತ ರಾಯರಿಗೆ ನಮಸ್ಕರಿಸಲು ರಾಯರು ಮಂತ್ರಾಕ್ಷತೆಯನ್ನು ತಲೆ ಮೇಲೆ ಹಾಕಿ ಎದುರಿಗೆ ಕುಳಿತುಕೋ ಎಂದರಂತೆ, ರಾಯರನ್ನೇ ನೋಡುತ್ತಾ  ಕಣ್ಣೀರಿಡುತ್ತಿದ್ದ ಬಾಲಕನ ಮೇಲೆ ಇದ್ದಕ್ಕಿದ್ದಂತೆ ರಾಯರ ಎರಡೂ ಕಣ್ಣಿನಿಂದ ಬೆಳಕು ಬಂದು ಆ ಹುಡುಗನ ಗಂಟಲಿಗೆ ಹೊಡೆದಂಗೆ ಆಯಿತಂತೆ . ನೋಡನೋಡುತ್ತಿದ್ದಂತೆಯೇ ಆ ಹುಡುಗ ಶ್ರೀ ಗುರುರಾಜರಿಗೆ ನಮಸ್ಕಾರವನ್ನು ಮಾಡಿ ಹಾಡಲಾರಂಬಿಸಿದನು.  ರಾಯರ ಮಹಿಮೆ ಅಪಾರ.  ಒಬ್ಬರ ಏಳಿಗೆಯನ್ನು ನೋಡಿ ಸಹಿಸಿಕೊಳ್ಳುವ ಮನೋವೈಶಾಲ್ಯತೆ ಬರಬೇಕು.ಅನ್ಯರನ್ನು ಕಂಡು ಅಸಹ್ಯಪಡುವುದನ್ನು ಬಿಡೋಣ. ವಸುದೈವ ಕುಟುಂಬಕಂ ಎಂಬ ಮನೋಭಾವದೊಂದಿಗೆ ಬಾಳೋಣ.ರಾಘವೇಂದ್ರಗುರುರಾಯರನ್ನು ನಂಬಿದ  ಭಕ್ತರು ಎಂದಿಗೂ ಎಂದೆಂದಿಗೂ ಅವರ ಕಾರುಣ್ಯದ ನೆರಳಲ್ಲಿ ನಿಶ್ಚಿಂತೆಯಿಂದ ಇರುವರು.ಸಂದೇಹ ಬೇಡ. ಮಂದಭಾಗ್ಯರಿಗೆ ದೊರಕದಿವರ ಸೇವಾ. 
ಶ್ರೀಮಧ್ವೇಶಾರ್ಪಣಮಸ್ತು

Post a Comment

Previous Post Next Post