ಪಕ್ಷಾಂತರ ಕೇವಲ ಊಹಾಪೋಹ: ಸಿಎಂ ಬಸವರಾಜ ಬೊಮ್ಮಾಯಿ

 ಪಕ್ಷಾಂತರ ಕೇವಲ ಊಹಾಪೋಹ:  ಸಿಎಂ ಬಸವರಾಜ ಬೊಮ್ಮಾಯಿ


ಬೆಂಗಳೂರು, ಮಾರ್ಚ್ 13:ಬಿಜೆಪಿಯಿಂದ ಯಾರೂ  ಪಕ್ಷಾಂತರ ಮಾಡುವ ಪ್ರಶ್ನೆಯೇ ಇಲ್ಲ. ಮೊದಲೂ ಇರಲಿಲ್ಲ.ಈಗಲೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಅವರು ಇಂದು ತಮ್ಮ ನಿವಾಸದ ಬಳಿ  ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 



ನಮ್ಮ ಪಕ್ಷದಿಂದ ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ನಿಖರವಾಗಿ ಹೇಳಬಹುದು. ಬೇರೆ ಪಕ್ಷದಿಂದ ಬಿಜೆಪಿಗೆ  ಬರುವವರ ಬಗ್ಗೆ ಕಾಡು ನೋಡಿ ಎಂದರು. 


ರಾಜ್ಯ ಪ್ರವಾಸ: 


ಮಾರ್ಚ್ 30 ಹಾಗೂ 31 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಪ್ರವಾಸದ ಕುರಿತು ಹಾಗೂ ಎಲ್ಲ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. 


ಅವಧಿ ಪೂರ್ವ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದ ಮುಖ್ಯ ಮಂತ್ರಿಗಳು  ಸಂಪುಟ ವಿಸ್ತರಣೆ ಕುರಿತು ವರಿಷ್ಠರಿಂದ ಸೂಚನೆ ಬಂದ ಕೂಡಲೇ ದೆಹಲಿಗೆ ತೆರಳುವುದಾಗಿ ಹೇಳಿದರು.


ಉಕ್ರೇನ್ ನಲ್ಲಿ ಬಾಂಬ್ ದಾಳಿ ನಿಂತ ಕೂಡಲೇ ನವೀನ್ ಮೃತ ದೇಹ ತರುವ ಬಗ್ಗೆ ಪ್ರಕ್ರಿಯೆಗೆ ಪುನಃ ಚಾಲನೆ ನೀಡಲಾಗುವುದು ಎಂದರು.

Post a Comment

Previous Post Next Post