ಮಾಜಿ D. C. M. ಲಕ್ಷ್ಮಣ್ ಸವದಿ ಸಹೋದರನ ಕಾರು ಚಾಲಕನ ಭೀಕರ ಹತ್ಯೆ !:,,,,

ಮಾಜಿ D. C. M. ಲಕ್ಷ್ಮಣ್ ಸವದಿ ಸಹೋದರನ ಕಾರು ಚಾಲಕನ ಭೀಕರ ಹತ್ಯೆ !:,,,, 

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಕಚೇರಿ ಮುಂಭಾಗದಲ್ಲಿ ದರೂರು ಗ್ರಾಮದ ಚಾಲಕ ಸಿದ್ದಾರೂಢ ಶಿರುಗುಪ್ಪಿ ಎಂಬುವವರ ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸಿದ್ದಾರೂಢ ಶಿರುಗುಪ್ಪಿ ಅವರು ಕಳೆದ ಹಲವು ವರ್ಷಗಳಿಂದ ಬಿ. ಜೆ. ಪಿ. ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸಹೋದರ ಪರಪ್ಪಾಸವದಿ ಅವರ ಕಾರು ಚಾಲಕನಾಗಿದ್ದರು. ಕಳೆದ ರಾತ್ರಿ ಪರಪ್ಪಸವದಿ ಜೊತೆ ಉಗಾರ ಗ್ರಾಮಕ್ಕೆ ತೆರಳಿದ ಶಿರುಗುಪ್ಪಿ ಯವರು, ರಾತ್ರಿ 11ಘಂ ಗೆ, ಮರಳಿ ಮನೆಗೇ ಹೋಗುವ ಸಂದರ್ಭದಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post