ಚಿಂತನೆ

[24/03, 11:33 AM] Pandit Venkatesh. Astrologer. Kannada: ಧರ್ಮಶಾಸ್ತ್ರದ ಪ್ರಕಾರವಾಗಿ ಅಕ್ಕನ ಮಗಳು ಸೋದರಮಾವನ ಮಗಳು – ಸೋದರತ್ತೆಯ ಮಗಳು ಇವರಲ್ಲಿ ಯಾರೂ ವಿವಾಹ ಯೋಗ್ಯರಲ್ಲ. - ಇವರು ಸೋದರ ಸೋದರಿ ಭಾವದಿಂದ ಇರಬೇಕೆಂದು ಮನುಧರ್ಮಶಾಸ್ತ್ರ ಧರ್ಮಸಿಂಧು, ಗೌತಮಧರ್ಮಶಾಸ್ತ್ರ ಮುಂತಾದ ಧರ್ಮಶಾಸ್ತ್ರಗಳು ಹೇಳುತ್ತಿವೆ. ಇದನ್ನು ಜೀವಶಾಸ್ತ್ರವೂ (ವಿಜ್ಞಾನ) ಅಂಗೀಕರಿಸುವುದಿಲ್ಲ. ಇದು ಉತ್ತಮ ಸಂಪ್ರದಾಯವೂ ಅಲ್ಲ.

ಮಹಾಭಾರತ ಇತಿಹಾಸವನ್ನು ನೋಡಿದರೆ ಅರ್ಜುನನ ಧರ್ಮಪತ್ನಿ ಸುಭದ್ರೆ ಅರ್ಜುನನಿಗೆ ಸೋದರ ಮಾವನ ಮಗಳು. ಶ್ರೀಕೃಷ್ಣನ ಹೆಂಡತಿ 'ಭದ್ರಾದೇವಿ' ಕೃಷ್ಣನ ಸೋದರತ್ತೆಯಾದ 'ಶೃತಕೀರ್ತಿ'ಯ ಮಗಳು. ಶ್ರೀಕೃಷ್ಣನ ಮಗನಾದ ಪ್ರದ್ಯಮ್ನನು ರುಕ್ಮಿಣಿ ಅಣ್ಣನ ಮಗಳನ್ನು ಮದುವೆಯಾದ. ಭಾರತ ಯುದ್ಧಾನಂತರ ಈ ರೀತಿಯ ಸಂಬಂಧಗಳನ್ನು ಋಷಿ ಸಂಪ್ರದಾಯವು ತಿರಸ್ಕರಿಸಿದೆ ಎನಿಸುತ್ತದೆ. ಈ ರೀತಿಯ ಸಂಬಂಧಗಳು ಶುಭದಾಯಕವಲ್ಲವೆಂದು ಘೋಷಿಸಿದೆ. ಸುಭದ್ರಾರ್ಜುನರಿಗೆ ಹುಟ್ಟಿದ ಅಭಿಮನ್ಯು ಅಲ್ಪಾಯುಷಿಯಾದನು. ಭದ್ರಾದೇವಿ- ಕೃಷ್ಣನಿಗೆ ಹುಟ್ಟಿದ ಹತ್ತು ಜನ ಮಕ್ಕಳು ಪುಂಡಪೋಕಿರಿಗಳಾದರು. ಪ್ರದ್ಯುಮ್ನನ ಮಕ್ಕಳೂ ಹಾಗೆ ಆದರು. ಈ ಕಾರಣಗಳಿಂದಾಗಿ ಉತ್ತರ ಭಾರತೀಯರು ಅಕ್ಕನ ಮಗಳನ್ನು ಮದುವೆಯಾಗುವುದಿಲ್ಲ. "ಕುಲಮಗ್ರೇ ಪರಿಕ್ಷೇತ ಮಾತೃತಃ ಪಿತೃತಸ್ಚೇತಿ" ಮದುವೆಗೆ ತಾಯಿಸಂಬಂಧಿಕರಲ್ಲಿ ಐದು ತಲೆಮಾರಿನವರನ್ನು ತಂದೆಯ ಸಂಬಂಧಿಕರಲ್ಲಿ ಏಳು ತಲೆಮಾರಿನವರನ್ನು ಬಿಡಬೇಕೆಂದು 'ಧರ್ಮಸಿಂಧು' ಹೇಳುತ್ತಿದೆ. ಮನುಧರ್ಮಶಾಸ್ತ್ರವೂ ಇದನ್ನೇ ಹೇಳುತ್ತಿದೆ.

ನಮ್ಮ ಮಕ್ಕಳು ನಮ್ಮ ಕಣ್ಣಿನ ಮುಂದೆ ಇರಬೇಕೆಂಬ ಕೆಟ್ಟ ವ್ಯಾಮೋಹದಿಂದಲೋ, ಪಿತ್ರಾರ್ಜಿತವಾಗಿ ಬಂದ ಅಥವಾ ತಾವು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಯಾರೋ ಹೊರಗಿನವಳು ಬಂದು ಏಕೆ ಅನುಭವಿಸಬೇಕೆಂಬ ಸಂಕುಚಿತ ಭಾವನೆಯಿಂದಲೋ ಹಿರಿಯರೇ ಇಂಥಾ ಮದುವೆಗಳನ್ನು ಮಾಡುತ್ತಿದ್ದಾರೆ. ವರದಕ್ಷಿಣೆಯ ಭೂತ ಬಂದ ಮೇಲೆ ಈ ರೀತಿ ಮದುವೆಗಳು ಜಾಸ್ತಿಯಾಗಿವೆ. ಹಿರಿಯರ ಯೋಚನೆಯಲ್ಲಿ ಸ್ವಲ್ಪ ಸ್ವಾರ್ಥವೂ ಇದೆ. ಮಗನಿಗೆ ಮೊಮ್ಮಗಳನ್ನು ಮಾಡಿಕೊಂಡರೆ ಮುಪ್ಪಿನ ಸಮಯದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆಂಬ ಸ್ವಾರ್ಥ ಭಾವನೆಯಿಂದಲೂ ಈ ರೀತಿಯ ಮದುವೆಗಳು ನಡೆಯಲು ಕಾರಣವಾಗುತ್ತಿದೆ.

ಹತ್ತಿರ ಸಂಬಂಧಿಕರಲ್ಲಿ ಮದುವೆಯಾಗಿರುವ ದಂಪತಿಗಳಲ್ಲಿ ಪ್ರೀತಿ ಕಡಿಮೆ ಇರುತ್ತದೆ. ಶೃಂಗಾರದ ಇಚ್ಚೆಯೂ ಕಡಿಮೆ ಇರುತ್ತದೆ. ಇದು ಪೀಳಿಗೆಯಲ್ಲಿ ಮತ್ತೆ ಮತ್ತೆ ಪುನರಾವರ್ತಿವಾಗಿ ಮುಂದುವರೆದರೆ ಮುಂದೆ ಇವರಿಗೆ ಹುಟ್ಟುವ ಮಕ್ಕಳು ಮಂದಮತಿಗಳಾಗುತ್ತಾರೆ. ರೋಗಿಷ್ಟರುಗಳಾಗುತ್ತಾರೆ. ಅವಯವಲೋಪಗಳಿರುತ್ತವೆ. ವಂಶನಾಶಕರಾಗುತ್ತಾರೆ. ವಿದ್ಯಾವಂತರಾಗುವುದಿಲ್ಲ. ಮೆದುಳು ಚಿಕ್ಕದಾಗಿರುತ್ತದೆ.

ದೂರದ ಸಂಬಂಧದಲ್ಲಿ ಈ ಸಮಸ್ಯೆಗಳಿರುವುದಿಲ್ಲ. ರಕ್ತ ವ್ಯತ್ಯಾಸ (ವಿಭಿನ್ನ ಬ್ಲಡ್‌ಗ್ರೂಪ್) ದಿಂದ ದಂಪತಿಗಳು ಅನುರಾಗದಿಂದ ಕೂಡಿರುತ್ತಾರೆ. ನಾವು ಏನು ಮಾಡಿದರೂ ಎಷ್ಟು ದುಡಿದರೂ ಮಕ್ಕಳಿಗಾಗಿಯೇ ಅಂದಮೇಲೆ ಮಕ್ಕಳ ಸುಖವನ್ನು ನೋಡಬೇಕೆ ವಿನಹ ನಮ್ಮ ಸ್ವಾರ್ಥವನ್ನು ಮಕ್ಕಳ ತಲೆಗೆ ಸುತ್ತಬಾರದು. ದಿನದಿನಕ್ಕೂ ವಿಜ್ಞಾನವು ವೃದ್ಧಿಯಾಗುತ್ತಿದೆ. ನಮ್ಮಲ್ಲಿರುವ ಲೋಪದೋಷಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು. ಆಗಲೇ ಅಭಿವೃದ್ಧಿ.

ಶಿವಾರ್ಪಣಮಸ್ತು 
ಸದ್ವಿಚಾರ ಸಂಗ್ರಹ
[24/03, 11:38 AM] Pandit Venkatesh. Astrologer. Kannada: ಸಪ್ತ ಋಷಿಗಳು ಯಾರು
ವೈದಿಕ ಕ್ಷೇತ್ರದಲ್ಲಿನ 7 ಪ್ರಮುಖ ಮಹರ್ಷಿಗಳನ್ನು ಅಥವಾ ಋಷಿಗಳನ್ನು ಸಪ್ತ ಋಷಿಗಳು ಎನ್ನಲಾಗುತ್ತದೆ. ಅವರು ಯೋಗದ ಶಕ್ತಿಯಿಂದ ದೀರ್ಘಾಯುಷ್ಯವನ್ನು ಹೊಂದಿದವರು.
ಈ 7 ಋಷಿಗಳನ್ನು ಅಮರರು ಎನ್ನಲಾಗುತ್ತದೆ. ಭೂಮಿಯ ಮೇಲಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಮಾನವ ಜನಾಂಗಕ್ಕೆ ಮಾರ್ಗದರ್ಶನ ನೀಡಲು, ದೇವರುಗಳ ಪ್ರತಿನಿಧಿಯಾಗಿ ಸೇವೆಸಲ್ಲಿಸಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಅವರನ್ನು ಭೂಮಿಯಲ್ಲಿ ನೇಮಿಸುತ್ತಾರೆ. ಬೃಹದರಣ್ಯಕ ಉಪನಿಷತ್‌ನ ಪ್ರಕಾರ, ಪ್ರಸ್ತುತ ಮನ್ವಂತರದ ಸಪ್ತ ಋಷಿಗಳು ಅಥವಾ 7 ಋಷಿಗಳು ಇಲ್ಲಿದ್ದಾರೆ.
ಭಾರದ್ವಜ ಋಷಿ
ಭರಧ್ವಜ ಋಷಿಗಳು ವೈಧಿಕ ಕಾಲದ ಶ್ರೇಷ್ಠ ಋಷಿಗಳಲ್ಲೊಬ್ಬರಾಗಿದ್ದರು ಮತ್ತು ಇವರು ಅಂಗೀರಸ ಮುನಿಯವರ ವಂಶಸ್ಥರಾಗಿದ್ದರು. ಭರಧ್ವಜ ಋಷಿಗಳ ತಂದೆ ದೇವಋಷಿ ಬೃಹಸ್ಪತಿ. ಋಷಿ ಭರಧ್ವಜರನ್ನು ಆಯುರ್ವೇದದ ಲೇಖಕ ಎಂದು ಪರಿಗಣಿಸಲಾಗುತ್ತದೆ. ಭರಧ್ವಜ ಋಷಿಗಳು ದ್ರೋಣಾಚಾರ್ಯರ ತಂದೆ ಹಾಗೂ ಇವರ ಆಶ್ರಮವನ್ನು ಇಂದಿಗೂ ನಾವು ಅಲಹಾಬಾದ್‌ನಲ್ಲಿ ನೋಡಬಹುದು. ಭರಧ್ವಜ ಋಷಿಗಳು ದೇವಸ್ತ್ರಗಳ ಹಾಗೂ ಯುದ್ಧ ಕಲೆಯ ಪ್ರವೀಣರಾಗಿದ್ದರು.ಭರಧ್ವಜ ಋಷಿಗಳ ಪತ್ನಿ ಸುಸೀಲಾ ಹಾಗೂ ದೇವವರ್ಣಿನಿ ಎನ್ನುವ ಮಗಳು ಮತ್ತು ಗರ್ಗಾ ಎನ್ನುವ ಮಗನಿದ್ದನು. ದ್ರೋಣಾಚಾರ್ಯರು ಅಪ್ಸರ ಮತ್ತು ಭರಧ್ವಜ ಋಷಿಗಳ ಮಗನಾಗಿದ್ದಾನೆ. ಕೆಲವು ಪುರಾಣಗಳ ಪ್ರಕಾರ, ಭರಧ್ವಜ ಋಷಿಯು ಗಂಗಾ ನದಿಯ ದಡದಲ್ಲಿ ಭರತ ಎನ್ನುವ ರಾಜನಿಗೆ ಸಿಕ್ಕಿದನು. ಅಲ್ಲಿಂದ ಆತನನ್ನು ಭರತ ರಾಜನು ದತ್ತುಮಗನಾಗಿ ಸಾಕಿದನೆಂದು ಹೇಳಲಾಗುತ್ತದೆ.
ವಿಶ್ವಾಮಿತ್ರ
ಸಪ್ತ ಋಷಿಗಳಲ್ಲಿ ವಿಶ್ವಾಮಿತ್ರ ಮುನಿಯು ಅತ್ಯಂತ ಪ್ರಸಿದ್ಧ ಋಷಿಯಾಗಿದ್ದರು. ಗಾಯತ್ರಿ ಮಂತ್ರವನ್ನು ಕಂಡುಹಿಡಿದ ವೇದಗಳ ಕಾಲದ ಪ್ರಮುಖ ಋಷಿಮುನಿಗಳಲ್ಲಿ ವಿಶ್ವಾಮಿತ್ರರು ಒಬ್ಬರಾಗಿದ್ದಾರೆ. ಬ್ರಹ್ಮರ್ಷಿಯ ಮಟ್ಟಕ್ಕೆ ಏರಲು ಕೇವಲ ಆತನ ಅರ್ಹತೆ ಮಾತ್ರವಲ್ಲ, ಅದಕ್ಕೆ ಬ್ರಹ್ಮ ದೇವನ ಅನುಮತಿಯೂ ಬೇಕಾಗುತ್ತದೆ. ಆದರೆ ವಿಶ್ವಾಮಿತ್ರರ ವಿಷಯದಲ್ಲಿ ಇದು ಸುಳ್ಳಾಗಿದೆ. ವಿಶ್ವಾಮಿತ್ರರು ಕೇವಲ ತಮ್ಮ ಸ್ವ ಅರ್ಹತೆಯಿಂದ ಬ್ರಹ್ಮರ್ಷಿಗಳಾದವರು.ವಸಿಷ್ಠರೊಂದಿಗಿನ ವಿಶ್ವಾಮಿತ್ರರ ಹೋರಾಟ ಗಣನೀಯವಾಗಿದೆ. ವಿಶ್ವಾಮಿತ್ರರು ಬ್ರಾಹ್ಮಣರಾಗಿರಲಿಲ್ಲ. ಬದಲಾಗಿ ಇವರು ಕ್ಷತ್ರಿಯ ಧರ್ಮದಲ್ಲಿ ಜನಿಸಿದವರಾಗಿದ್ದರು. ಒಮ್ಮೆ ವಿಶ್ವಾಮಿತ್ರರ ನಡುವೆ ಮತ್ತು ವಸಿಷ್ಠರ ನಡುವೆ ಹೋರಾಟ ನಡೆದಾಗ ವಿಶ್ವಾಮಿತ್ರರು ಇದರಲ್ಲಿ ಸೋಲನ್ನು ಅನುಭವಿಸುತ್ತಾರೆ. ವಸಿಷ್ಠರ ವಿರುದ್ಧದ ಸೋಲಿನಿಂದ ವಿಶ್ವಾಮಿತ್ರರು ತಪಸ್ಸಿನಿಂದ ಪಡೆದ ಶಕ್ತಿಯು ದೈಹಿಕ ಶಕ್ತಿಗಿಂತ ಮಿಗಿಲಾದದ್ದು ಎಂದು ಅರಿತುಕೊಂಡರು.ಆಗ ವಿಶ್ವಾಮಿತ್ರರು ತನ್ನ ರಾಜ್ಯವನ್ನು ದಾನ ಮಾಡಿ ವಸಿಷ್ಢರಿಗಿಂತಲೂ ದೊಡ್ಡ ಋಷಿಯಾಗಬೇಕೆಂದು ಹೊರಡುತ್ತಾರೆ. ಅಂದಿನಿಂದ ಅವರ ವಿಶ್ವಾಮಿತ್ರ ಎನ್ನುವ ಹೆಸರನ್ನು ಪಡೆದರು. ವಿಶ್ವಾಮಿತ್ರರ ಮೂಲ ಹೆಸರು ಕೌಶಿಕ. ಸಾವಿರಾರು ವರ್ಷಗಳ ಕಠಿಣ ತಪಸ್ಸಿನಿಂದ, ಜ್ಞಾನದಿಂದ, ಪ್ರಯೋಗಗಳಿಂದ ಕೊನೆಗೂ ವಿಶ್ವಾಮಿತ್ರರು ಬ್ರಹ್ಮ ಮತ್ತು ವಸಿಷ್ಠರಿಂದ ಬ್ರಹ್ಮರ್ಷಿ ಎನ್ನುವ ಬಿರುದನ್ನು ಪಡೆದುಕೊಂಡರು.
ವಸಿಷ್ಠ ಋಷಿ
ವಸಿಷ್ಠ ಮುನಿಗಳು ಮನ್ವಂತರದಲ್ಲಿನ ಸಪ್ತಋಷಿಗಳಲ್ಲಿ ಒಬ್ಬರು ಮತ್ತು ಅರುಂಧತಿ ಯ ಪತಿ. ವಸಿಷ್ಠ ಮಹರ್ಷಿಯು ಬ್ರಹ್ಮನ ಮಾನಸಪುತ್ರದಿಂದ ಜನಿಸಿದ ಮಗ. ಹಾಗೂ ಸೂರ್ಯ ವಂಶದ ಅಥವಾ ಸೌರ ರಾಜವಂಶದ ರಾಜಗುರುವಾಗಿದ್ದವರು. ವಸಿಷ್ಠರು ಚುನಾವಣಾ ಜ್ಯೋತಿಷ್ಯ ಕುರಿತ ಗ್ರಂಥವಾದ ವಸಿಷ್ಠ ಸಂಹಿತೆಯ ಲೇಖಕರು. ಋಗ್ವೇದದ ಸ್ತೋತ್ರಗಳಲ್ಲಿ ವಸಿಷ್ಠ ಬ್ರಹ್ಮರ್ಷಿಯನ್ನು ಮತ್ತು ಆತನ ಕುಟುಂಬವನ್ನು ವೈಭವೀಕರಿಸಲಾಗಿದೆ. ಭಗವಾನ್‌ ರಾಮನು ಕೇಳಿದ ಲೌಕಿಕ ಪ್ರಶ್ನೆಗಳಿಗೆ ವಸಿಷ್ಠ ಮಹರ್ಷಿ ಉತ್ತರವನ್ನು ನೀಡುತ್ತಾನೆ. ಇವುಗಳೇ ಯೋಗ ವಸಿಷ್ಠ ಎನ್ನುವ ಗ್ರಂಥದ ಸಂದರ್ಭ ಮತ್ತು ವಿಷಯವಾಗಿದೆ.
ಗೌತಮ ಮಹರ್ಷಿ
ಮಹರ್ಷಿ ಗೌತಮರು ಸಪ್ತ ಋಷಿಗಳಲ್ಲಿ ಒಬ್ಬರು ಹಾಗೂ ಇವರು ಅಂಗೀರಸ ವಂಶಕ್ಕೆ ಸೇರಿದವರಾಗಿದ್ದರು. ಗೌತಮ ಮಹರ್ಷಿಗಳು ಗವತಮ ಧರ್ಮ ಸೂತ್ರವನ್ನು, ಋಗ್ವೇದದ ಮತ್ತು ಸಾಮವೇದದ ಮಂತ್ರಗಳನ್ನು ಬರೆದಿದ್ದಾರೆ. ಗೌತಮ ಮುನಿಗಳು ಬ್ರಹ್ಮ ದೇವನ ಮಗಳಾದ ಅಹಲ್ಯಾಳನ್ನು ವಿವಾಹವಾಗುತ್ತಾರೆ. ಬ್ರಹ್ಮನು ಸೂಕ್ತ ಸಮಯದಲ್ಲಿ ಯಾರು ಭೂಮಿಯನ್ನು ಸುತ್ತುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸುತ್ತಾನೆ.ಆಗ ಎಲ್ಲಾ ಋಷಿ, ಮುನಿಗಳು ಷರತ್ತನ್ನು ಗೆಲ್ಲಲು ಮುಂದಾಗುತ್ತಾರೆ ಆದರೆ ಗೌತಮ ಮಹರ್ಷಿಗಳು ಒಂದು ದೈವಿಕ ಹಸುವಿನ ಸುತ್ತಲೂ ಸುತ್ತುತ್ತಾರೆ. ಆಗ ಅವರ ಬುದ್ಧಿವಂತಿಕೆಯನ್ನು ಹಾಗೂ ಷರತ್ತಿನಲ್ಲಿ ಗೆಲುವನ್ನು ನೋಡಿದ ಬ್ರಹ್ಮನು ತನ್ನ ಪುತ್ರಿ ಅಹಲ್ಯಾಳನ್ನು ಗೌತಮ ಮುನಿಗಳಿಗೆ ವಿವಾಹ ಮಾಡಿಕೊಡುತ್ತಾರೆ. ಗೌತಮ ಋಷಿ ಅಹಂಕಾರವಿಲ್ಲದ ವ್ಯಕ್ತಿ. ದೇಶದಲ್ಲಿ ಬರಗಾಲ ಬಂದಾಗ ಅವರು ಮಳೆಗಾಗಿ ವರುಣ ದೇವನನ್ನು ಕಠಿಣ ಧ್ಯಾನದ ಮೂಲಕ ಒಲಿಸಿಕೊಂಡು ಜನರನ್ನು ಬರಗಾಲದಿಂದ ಮುಕ್ತಿಗೊಳಿಸಿದವರು.
ಅತ್ರಿ ಮಹರ್ಷಿ
ಅತ್ರಿ ಮಹರ್ಷಿ ಕೂಡ ಬ್ರಹ್ಮ ದೇವನ ಮಗ ಹಾಗೂ ಮನ್ವಂತರದ ಸಪ್ತ ಋಷಿಗಳಲ್ಲಿ ಒಬ್ಬರು. ಪವಿತ್ರ ದಾರಗಳನ್ನು ಪ್ರತಿಪಾದಿಸಿದ ಋಷಿಗಳಲ್ಲಿ ಇವರೂ ಕೂಡ ಒಬ್ಬರು. ಅನುಸೂಯಾ ಅತ್ರಿ ಮಹರ್ಷಿಗಳ ಪತ್ನಿಯಾಗಿದ್ದಳು. ಅತ್ರಿಯವರನ್ನು ಪವಿತ್ರ ಮಂತ್ರಗಳ ಮಹಾನ್‌ ಅನ್ವೇಷಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ವನವಾಸದಲ್ಲಿದ್ದ ಶ್ರೀರಾಮನು ಇವರ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಶ್ರೀರಾಮನಿಗೆ ಬೋಧಿಸಿದ್ದರು. ಅಷ್ಟು ಮಾತ್ರವಲ್ಲ ಕೆಲವು ಕಾಲಗಳವರೆಗೆ ಬ್ರಹ್ಮರ್ಷಿ ಪಟ್ಟದಲ್ಲೂ ಕೂಡ ಕುಳಿತಿದ್ದರು. ಅತ್ರಿ ಮಹರ್ಷಿಗಳು ಅತ್ರಿ ಸಂಹಿತಾ ಮತ್ತು ಅತ್ರಿ ಸ್ಮೃತಿ ಎನ್ನುವ ಎರಡು ಮಹಾನ್‌ ಕೃತಿಗಳನ್ನು ಬರೆದಿದ್ದರು.
ಕಶ್ಯಪ ಮಹರ್ಷಿ
ಕಶ್ಯಪ ಮಹರ್ಷಿಗಳು ಅತ್ಯಂತ ಜನಪ್ರಿಯ ಹಾಗೂ ಪ್ರಾಚೀನ ಋಷಿಗಲು ಮತ್ತು ಸಪ್ತಋಷಿಗಳಲ್ಲಿ ಒಬ್ಬರಾಗಿದ್ದರು. ಕಶ್ಯಪ ಮಹರ್ಷಿಗಳು ಋಷಿ ಮಾರೀಚಿಯ ಮಗ ಮತ್ತು ಬ್ರಹ್ಮನ ಮೊಮ್ಮಗ. ಕಶ್ಯಪ ಮಹರ್ಷಿಗಳು ದೇವರ, ಅಸುರರ, ನಾಗರ, ಗರುಡರ, ವಾಮನ, ಅಗ್ನಿ, ಆದಿತ್ಯ, ದೈತ್ಯರ, ಆರ್ಯಮಾನ್‌ರ, ಮಿತ್ರ, ಪುಸಾನ, ವರುಣ ಮತ್ತು ಎಲ್ಲಾ ಮಾನವೀಯತೆಯ ತಂದೆ ಎಂದು ಹೇಳಲಾಗುತ್ತದೆ. ಕಶ್ಯಪ ಮಹರ್ಷಿಗಳು ಕಶ್ಯಪ ಸಂಹಿತೆಯ ಲೇಖಕರಾಗಿದ್ದರು. ಬ್ರಹ್ಮನ ಸೃಷ್ಟಿ ಕರ್ತವ್ಯದಲ್ಲಿ ಕಶ್ಯಪನ ಪಾತ್ರ ಮಹತ್ತರವಾದುದ್ದಾಗಿದೆ.
ಜಮದಗ್ನಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ  ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 
ಜಮದಗ್ನಿಯು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ತಂದೆ. ಜಮದಗ್ನಿ ಋಷಿಯು ಬ್ರಹ್ಮನು ಸೃಷ್ಟಿಸಿದ ಪ್ರಜಾಪತಿಗಳಲ್ಲಿ ಒಬ್ಬನಾದ ಭೃಗು ಋಷಿಯ ವಂಶಸ್ಥನು. ಜಮದಗ್ನಿಯ ಪತ್ನಿ ಹೆಸರು ರೇಣುಕಾ. ಈಕೆ ಯಾವಾಗಲು ಪರಿಶುದ್ಧತೆಯ ಶಕ್ತಿಯಿಂದ ತಯಾರಿಸಿದ ಮಣ್ಣಿನ ಮಡಿಕೆಯಲ್ಲಿ ನಿರನ್ನು ತರುತ್ತಿದ್ದಳು. ಒಮ್ಮೆ ಈಕೆ ಕೊಳದಿಂದ ನೀರನ್ನು ತರುವಾಗ ಗಂಧರ್ವರನ್ನು ನೋಡುತ್ತಾಳೆ ಹಾಗೂ ಆಕೆಯ ಮನಸ್ಸು ಗಂಧರ್ವರತ್ತ ಆಕರ್ಷಿತವಾಗುತ್ತದೆ.ಇದರಿ೦ದಾಗಿ ಆಕೆಯ ಕೈಯಲ್ಲಿದ್ದ ಮಣ್ಣಿನ ಮಡಕೆಯು ಕರಗುತ್ತದೆ. ಇದನ್ನು ತನ್ನ ಧ್ಯಾನ ಶಕ್ತಿಯಿಂದ ಅರಿತ ಜಮದಗ್ನಿಯು ತನ್ನ ಮಕ್ಕಳನ್ನು ಕರೆದು ತಾಯಿಯನ್ನು ಕೊಲ್ಲಲು ಹೇಳುತ್ತಾನೆ. ಆದರೆ ಆತನ ಯಾವ ಮಕ್ಕಳು ಒಪ್ಪುವುದಿಲ್ಲ. ಆಗ ಜಮದಗ್ನಿಯ ಮಕ್ಕಳಲ್ಲಿ ಒಬ್ಬನಾದ ಪರಶುರಾಮನು ತಂದೆಯ ಮಾತಿಗೆ ಬೆಲೆಕೊಟ್ಟು ತಾಯಿಯ ಶಿರಚ್ಛೇದ ಮಾಡುತ್ತಾನೆ. ಜಮದಗ್ನಿಯು ತನ್ನ ಉಳಿದ ಮಕ್ಕಳು ತನ್ನ ಮಾತನ್ನು ನಿರಾಕರಿಸಿದರೆಂದು ಮಕ್ಕಳನ್ನೇ ಸಾಯಿಸುತ್ತಾನೆ. ತದ ನಂತ ಮಗ ಪರಶುರಾಮನ ಪಿತೃ ಭಕ್ತಿಗೆ ಪತ್ನಿ ರೇಣುಕಾ ದೇವಿಯನ್ನು ಬದಕಿಸುತ್ತಾನೆ ಜೈ ಶ್ರೀ ರಾಮ 💐💐🙏🙏🙏

Post a Comment

Previous Post Next Post