ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ( Gang Rape ) ಪ್ರಕರಣ ನಡೆದಿರೋದಾಗಿ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರು ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಅತ್ಯಾಚಾರವೆಸಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಆರೋಪಿಗಳನ್ನು ಪೊಲೀಸರು ಎಡೆಮುರಿಕಟ್ಟಿ ಬಂಧಿಸಿದ್ದಾರೆ.ನಗರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ಪಶ್ಚಿಮ ಬಂಗಾಳ ಮೂಲಕ ಯುವತಿಯೊಬ್ಬಳು, ರಜತ್ ಎಂಬಾತ ಪರಿಚಯ ಮಾಡಿಕೊಂಡಿದ್ದನು. ಮಾರ್ಚ್ 24ರಂದು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿದ್ದಂತ ಆತ, ತಡರಾತ್ರಿಯಾದ ಕಾರಣ, ನಮ್ಮ ರೂಂಗೆ ಹೋಗೋಣ ಬಾ ಎಂಬುದಾಗಿ ಕರೆದುಕೊಂಡು ಹೋಗಿದ್ದಾನೆ.
Puneeth Rajkumar: ಅಪ್ಪು ಸಮಾಧಿಗೆ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭೇಟಿ, ಭಾವುಕರಾಗಿ ಕಣ್ಣೀರು
ರೂಂಗೆ ತೆರಳಿದಂತ ಯುವತಿಯನ್ನು ಬೆದರಿಸಿದಂತ ರಜತ್ ಹಾಗೂ ಟೀಂ, ಆಕೆಯ ಮೇಲೆ ಸರಣಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಜಯ ನಗರ ಠಾಣೆಗೆ ಯುವತಿ ದೂರು ನೀಡಿದ ಪರಿಣಾಮ, ಪೊಲೀಸರು ದೆಹಲಿ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
BIGG NEWS: ತುಮಕೂರಿನ '45 - 25′ ಲವ್ ಸ್ಟೋರಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್: 'ಶಂಕ್ರಣ್ಣ ಆತ್ಮಹತ್ಯೆ' ಹಿಂದಿನ ಅಸಲಿ ಸತ್ಯ ಬಿಟ್ಟಿಟ್ಟ ಪತ್ನಿ ಮೇಘನಾ.!
ಅಂದಹಾಗೇ ಬಂಧಿತ ಆರೋಪಿಗಳನ್ನು ರಜತ್, ಶಿವ್ ರಾಣಾ, ದೇವ್ ಸರೋಯಿ ಮತ್ತು ಯೋಗೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಷ್ಟ್ರಮಟ್ಟದ ಸ್ವಿಮ್ಮರ್ ಗಳಾಗಿದ್ದು, ಅಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು, ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿಯೇ ಅಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
Post a Comment