ಬೆರಳಚ್ಚು ವಿಭಾಗದ ಇನ್ಸಪೇಕ್ಟರ್ ಆನಂದ್ ಮೇತ್ರಿ ವಿಚಾರಣಾಧಿನ ಕೈದಿ ನಂಬರ್ 18196 ಹಾಗೂ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ವಿಚಾರಣಾಧಿನ ಕೈದಿ ನಂಬರ್ 18197.

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ‌ ಎಸಗಿರುವ ಆರೋಪದ ಮೇಲೆ ಬಂಧಿಯಾಗಿರುವ ಸಿಪಿಐ ಡಿವೈಎಸ್ಪಿ ‌ಮಲ್ಲಿಕಾರ್ಜುನ್ ಸಾಲಿ ಅವರು ಇದೀಗ ವಿಚಾರಣಾಧೀನ ಕೈದಿ ನಂಬರ್‌ 18197!


ಡಿವೈಎಸ್ಪಿ ‌ಮಲ್ಲಿಕಾರ್ಜುನ್ ಸಾಲಿ ಜತೆ ಸಿಪಿಐ ಆನಂದ‌ ಮೇತ್ರಿ ಅವರನ್ನೂ ಬಂಧನಕ್ಕೆ ಒಳಪಡಿಸಲಾಗಿದ್ದು, ಎಲ್ಲರಿಗೂ ಇದೀಗ ಕೈದಿ ನಂಬರ್‌ ನೀಡಲಾಗಿದೆ.ಇಷ್ಟು ದಿನ ಈ ಇಬ್ಬರು ಅಧಿಕಾರಿಗಳು ಆರೋಪಿಗಳಗೆ ಜೈಲಿಗೆ ಕಳುಹಿಸಿ ಖೈದಿ‌ ನಂಬರ್ ಕೊಡಸ್ತಿದ್ದರು. ಆದರೆ ಇದೀಗ ಅಕ್ರಮದಲ್ಲಿ ಭಾಗಿಯಾಗಿ ತಾವೇ ಕೈದಿ ನಂಬರ್ ಪಡೆಯುವ ಪರಿಸ್ಥಿತಿ ಬಂದಿದೆ.

ಬೆರಳಚ್ಚು ವಿಭಾಗದ ಇನ್ಸಪೇಕ್ಟರ್ ಆನಂದ್ ಮೇತ್ರಿ ವಿಚಾರಣಾಧಿನ ಕೈದಿ ನಂಬರ್ 18196 ಹಾಗೂ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ವಿಚಾರಣಾಧಿನ ಕೈದಿ ನಂಬರ್ 18197.

ಅಕ್ರಮ ನೇಮಕಾತಿಯಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಆರ್ ಡಿ ಪಾಟೀಲ್‌ಗೆ ನೀಡಿರುವ ಆರೋಪ ಸಿಪಿಐ ಆನಂದ್ ಮೇತ್ರಿ ಅವರ ಮೇಲಿದೆ. ಅಲ್ಲದೆ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆಯಲ್ಲಿ ಮೇಲ್ವಿಚಾರಕರಾಗಿ ಅಕ್ರಮ ಎಸಗಿದ್ದರು ಎನ್ನಲಾಗಿದೆ.

ಅಕ್ರಮದ ಮಾಹಿತಿ ಪಡೆದು ಬ್ಲ್ಯಾಕ್ ಮೇಲ್ ಮಾಡಿ ಕಿಂಗ್‌ಪಿನ್‌ಗಳಿಂದ ಹತ್ತು ಲಕ್ಷ ಹಣ ಪಡೆದಿರುವ ಆರೋಪ ಲಿಂಗಸೂಗರು ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಅವರ ಮೇಲಿದೆ. ಇಬ್ಬರು ಬಂಧಿತ ಪೊಲೀಸ್ ಅಧಿಕಾರಗಳಿಗೆ ಹಗಲು ರಾತ್ರಿ ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಕಿಂಗ್‌ಪಿನ್ ಆರ್.ಡಿ‌. ಪಾಟೀಲ್‌ಗೆ ಸಿಐಡಿ ಶಾಕ್ ಕೊಟ್ಟಿದೆ. ಆರ್.ಡಿ.ಪಿಗೆ ಸೇರಿದ ಬ್ಯಾಂಕ್ ಅಕೌಂಟ್​ಗಳನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಇತರೆ ಬ್ಯಾಂಕ್​ಗಳಲ್ಲಿರುವ ಖಾತೆಗಳನ್ನ ಸಿಐಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.

ಪಿಎಸ್​ಐ ನೇಮಕಾತಿ ಪರೀಕ್ಷೆಯ ಕಿಂಗ್​ಪಿನ್ ಆರ್. ಡಿ. ಪಾಟೀಲ್ ಅಕ್ರಮದಿಂದ ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ಆರೋಪ ಕೇಳಿಬಂದ ಕಾರಣ ಅಕೌಂಟ್ ಫ್ರೀಜ್​ ಮಾಡಲಾಗಿದೆ. ಈತ ತನ್ನ ಆಪ್ತರ ಹೆಸರಿನಲ್ಲೂ ಬೇನಾಮಿ ಆಸ್ತಿ ಮಾಡಿರೋ ಶಂಕೆ ಇದೆ. ಈ ನಿಟ್ಟಿನಲ್ಲೂ ಸಿಐಡಿ ತಂಡ ತನಿಖೆ ಕೈಗೊಂಡಿದೆ. ಆರ್.ಡಿ. ಪಾಟೀಲ್ ಸಿಐಡಿ ಕಸ್ಟಡಿ ಸಮಯಾವಕಾಶ ಮುಕ್ತಾಯವಾಗಿದೆ. ಈ ಹಿನ್ನೆಲೆ ಮತ್ತೆ ಎರಡು ದಿನಗಳ ಕಾಲ ಸಿಐಡಿ, ಕಸ್ಟಡಿ ವಿಸ್ತರಣೆ ಮಾಡಿ ವಶಕ್ಕೆ ಪಡೆದಿದೆ

Post a Comment

Previous Post Next Post