ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ಹತ್ತಾರು ಜನರ ಬಣ್ಣ ಬಯಲಾಗುತ್ತಿದೆ. ಈಗ ಈ ಮಹಾ ಅಕ್ರಮದ ಹಿಂದಿರುವ ಸೂತ್ರದಾರ ಯಾರೆಂಬುದೂ ಬಯಲಾಗಿದೆ.... BTv news

ಪಿಎಸ್ ಐ ನೇಮಕಾತಿ ಹಗರಣದ ಮಾಸ್ಟರ್ ಮೈಂಡ್ ಯಾರು ಎಂಬ ಕುರಿತು ಹಲವು ದಿನಗಳಿಂದ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಜೊತೆಗೆ ರಾಜಕೀಯ ವಲಯದಲ್ಲೂ ಈ ಕುರಿತು ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಈಗ ಈ ಅಕ್ರಮದ ಕಿಂಗ್ ಪಿನ್ ಯಾರೆಂಬುದು ತಿಳಿದು ಬಂದಿದೆ. ಪೊಲೀಸ್ ನೇಮಕಾತಿ ವಿಭಾಗದ DySP ಶಾಂತ ಕುಮಾರ್ ಈ ಹಗರದ ಕಿಂಗ್ ಪಿನ್.

ರಾಜ್ಯದಲ್ಲಿ OMR ದಂಧೆಯನ್ನು ಶುರು ಮಾಡಿದ್ದೇ ಶಾಂತಕುಮಾರ್. ನೇಮಕಾತಿ ವಿಭಾಗದ ಫುಲ್ ಇನ್ ಚಾರ್ಜ್ ಆಗಿರುವ ಶಾಂತಕುಮಾರ್ ಮೊದಲು CARನಲ್ಲಿ ಕಾನ್ಸ್​ಟೇಬಲ್​ ಆಗಿದ್ದ. ಈತನಿಗೆ ಕಂಪ್ಯೂಟರ್​​ ನಾಲೆಡ್ಜ್​​​​​ ಇದೆ ಎಂದು CIDಗೆ ಡೆಪ್ಟೇಷನ್​​ ಮೇಲೆ ವರ್ಗಾವಣೆ ಮಾಡಲಾಗಿತ್ತು. CID ನೇಮಕಾತಿ ವಿಭಾಗದಲ್ಲಿ ಇದ್ದುಕೊಂಡು ಈತ PSI ಪರೀಕ್ಷೆ ಬರೆದಿದ್ದ. ತಾನೇ ಪರೀಕ್ಷೆ ಬರೆದು..ತಾನೇ ಮೌಲ್ಯಮಾಪನ ಮಾಡಿ.. ಪಿಎಸ್ ಐ ಆಗಿ ಸೆಲೆಕ್ಟ್ ಆಗಿದ್ದ. ನಂತರ 2005ನೇ ಬ್ಯಾಚ್​ನ CAR ಪಿಎಸ್​ಐ ಆಗಿ ನೇಮಕಗೊಂಡಿದ್ದ ಶಾಂತಕುಮಾರ್​​, ನೇಮಕಾತಿ ವಿಭಾಗದಲ್ಲೇ ಕಂಟಿನ್ಯೂ ಆಗಿದ್ದ. ಇನ್ನು ಡೆಪ್ಟೇಷನ್​ ಮೇಲೆ ಅಲ್ಲೇ ಇನ್ಸ್​ಪೆಕ್ಟರ್​​, DySPಯಾಗಿ ಪ್ರಮೋಷನ್​​ ಕೂಡ ದೊರೆತಿರುತ್ತದೆ.ಶಾಂತಕುಮಾರ್ ನೇಮಕಾತಿ ವಿಭಾಗದಲ್ಲಿ ಇದ್ದುಕೊಂಡೇ ತಾನು ಪಾಸಾದ ರೀತಿಯಲ್ಲೇ ನೂರಾರು ಜನರನ್ನು ಕಳ್ಳದಾರಿ ಮೂಲಕ ಪಾಸ್ ಮಾಡಿದ್ದ. ಈತ OMR ದಂಧೆ ಮೂಲಕವೇ ಕೋಟಿ-ಕೋಟಿ ಸಂಪಾದನೆ ಮಾಡಿದ್ದ. ಈತ ಬೆಂಗಳೂರಿನ ಒಬ್ಬ ACP, ಉತ್ತರ ಕರ್ನಾಟಕದ ಒಬ್ಬ DySP ಜತೆ ಸೇರಿ ಪಿಎಸ್ ಐ ನೇಮಕಾತಿ ಡೀಲ್​​​ ಎಂಬ ಮಾಹಿತಿ ಹೊರಬಿದ್ದಿದೆ.

ಇನ್ನು 2015-16ರಲ್ಲೇ ಶಾಂತಕುಮಾರ್ ಅಕ್ರಮದ ವಾಸನೆ ಖಡಕ್​​ IPS ಮಧುಕರ್​​ ಶೆಟ್ಟಿಗೆ ಬಡಿದಿತ್ತು. 2015ರಲ್ಲಿ ನೇಮಕಾತಿ ವಿಭಾಗದ DIGಯಾಗಿದ್ದ ಮಧುಕರ್​ ಶೆಟ್ಟಿ ಅವರು ಅಂದಿನ ಸರ್ಕಾರಕ್ಕೆ ಶಾಂತಕುಮಾರ್​ ವಿರುದ್ಧ ​​ ರಿಪೋರ್ಟ್ ನೀಡಿದ್ದರು. ಆದರೆ ಶೆಟ್ಟಿ ನೀಡಿದ್ದ ರಿಪೋರ್ಟ್ ಅನ್ನು ಅಂದಿನ ಗೃಹ ಇಲಾಖೆ ಸಲಹೆಗಾರರು ಮುಚ್ಚಿ ಹಾಕಿದ್ದರು. ಶಾಂತಕುಮಾರ್​​​ ವಿರುದ್ಧ ನೀಡಿದ್ದ ರಿಪೋರ್ಟ್ ಬಹಿರಂಗ ಆಗಲೇ ಇಲ್ಲ.

Post a Comment

Previous Post Next Post