ಅಪರಾ ಏಕಾದಶಿ, ಇದೇ ಮೇ 26, ಗುರುವಾರದಂದು

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌   ‌                                                                    ‌                                                                                                                                 *ಅಪರಾ ಏಕಾದಶಿ ವ್ರತ* 
 ‌                                                                                                           ಇದೇ ಮೇ 26, ಗುರುವಾರದಂದು ಅಪರಾ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಅಂದು ಶ್ರೀಮಹಾವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಏಕಾದಶಿಯಂದು ಉಪವಾಸ ವ್ರತ ಕೈಗೊಂಡರೆ ಸಕಲ ಸಂಕಷ್ಟವೂ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಪರಾ ಏಕಾದಶಿ ಮಾಡುವುದು ಹೇಗೆ ಹಾಗೂ ಅದರ ಮಹತ್ವ ಹೀಗಿದೆ:

ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿ ಎನ್ನುವರು. ಈ ಏಕಾದಶಿಯಂದು ಶ್ರೀ ಮಹಾವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಉಪವಾಸವನ್ನು ನಾವು ಆಚರಿಸಿದರೆ ನಮ್ಮ ದುಃಖ, ಕಷ್ಟ, ಕಾರ್ಪಣ್ಯಗಳೆಲ್ಲವೂ ದೂರಾಗುತ್ತದೆ ಎಂಬ ನಂಬಿಕೆಯಿದೆ. ಗುರುವಾರದಂದು ಆಚರಿಸಲಿರುವ ಅಪರಾ ಏಕಾದಶಿಯನ್ನು ಸಾಮಾನ್ಯವಾಗಿ ಜಲಕ್ರಿದ ಏಕಾದಶಿ, ಅಚಲ ಏಕಾದಶಿ ಮತ್ತು ಭದ್ರಕಾಳಿ ಏಕಾದಶಿ ಎಂದೂ ಕೂಡ ಕರೆಯಲಾಗುತ್ತದೆ. ಅಪರಾ ಏಕಾದಶಿಯ ಮಹತ್ವವೇನು ಗೊತ್ತಾ..?
 ‌                                                                                               *​ಶ್ರೀ ಹರಿಯ ವಿಶೇಷ ಅವತಾರಕ್ಕೆ ಪೂಜೆ*

ಅಪರಾ ಏಕಾದಶಿಯಂದು ಶ್ರೀವಿಷ್ಣುವಿನ ಇನ್ನೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನದಂದು ವಾಮನ ಅವತಾರವನ್ನು ಪೂಜಿಸಿದರೆ ಮನುಷ್ಯನು ತನ್ನೆಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆಂದು ನಂಬಲಾಗಿದೆ. ಈ ದಿನ ಗಂಗಾ ಸ್ನಾನಕ್ಕೂ ಕೂಡ ಅಷ್ಟೇ ಮಹತ್ವವಿದೆ. ಅಪರಾ ಏಕಾದಶಿಯಲ್ಲಿ ಗಂಗಾ ಸ್ನಾನ ಮಾಡಿದರೆ ಕೂಡ ಪಾಪಗಳು ಪರಿಹಾರವಾಗುತ್ತದೆ ಎನ್ನಲಾಗಿದೆ.  ಆದರೂ ಕೂಡ ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಮನೆಯಲ್ಲಿ ಗಂಗಾ ಜಲವಿದ್ದರೆ ಆ ನೀರನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಬಹುದು.

*​ಅಪರಾ ಏಕಾದಶಿಯ ಮುಹೂರ್ತ*

ಅಪರಾ ಏಕಾದಶಿಯು ಇದೇ ಬುಧವಾರ ಮೇ 25 ರಂದು ಹಗಲು 10.31 ರಿಂದ ಆರಂಭವಾಗಲಿದ್ದು, ಮರುದಿನ ಅಂದರೆ ಗುರುವಾರ ಮೇ 26 ರ ಹಗಲು 10.53 ಕ್ಕೆ ಮುಕ್ತಾಯಗೊಳ್ಳಲಿದೆ.          ‌      ‌      ‌                                                                                               *ಪಾರಣ ಮುಹೂರ್ತ* ವು ಶುಕ್ರವಾರ ಮೇ 27 ರ ಬೆಳಗ್ಗೆ 5.53 ರಿಂದ ಆರಂಭವಾಗಿ 8.26 ಕ್ಕೆ ಮುಕ್ತಾಯಗೊಳ್ಳುತ್ತದೆ.

*​ಅಪರಾ ಏಕಾದಶಿಯ ಪೂಜಾ ವಿಧಿ*

ಅಪರಾ ಏಕಾದಶಿಯಂದು ಬೆಳಗ್ಗೆ  ಸ್ನಾನ ಮಾಡಿ ಶುಚಿಯಾಗಿ ಮಹಾವಿಷ್ಣು ದೇವರನ್ನು ಪ್ರಾರ್ಥಿಸಿ, ವ್ರತವು ನಿರ್ವಿಘ್ನವಾಗಿ ಮುಕ್ತಾಯಗೊಳ್ಳಲಿ ಎಂದು ಮನಪೂರ್ವಕವಾಗಿ ಬೇಡಿಕೊಂಡು ಉಪವಾಸ ವ್ರತವನ್ನು ಆರಂಭಿಸಿ. ತದನಂತರ ಗಂಗಾ ಜಲದಲ್ಲಿ ವಿಷ್ಣುವಿನ ಫೋಟೋವನ್ನು ಹಾಗೂ ವಾಮನ ಪೋಟೋವನ್ನು ಶುದ್ಧೀಕರಿಸಿ ಪೂಜೆಯನ್ನು ಪ್ರಾರಂಭಿಸಿ. ಪೂಜೆ ಪ್ರಾರಂಭಿಸುವ ಮೊದಲು ಅಕ್ಷತೆ, ತಿಲಕ, ಬಿಳಿಬಣ್ಣದ ಹೂವು, ಫಲವನ್ನು ಎತ್ತಿಟ್ಟುಕೊಳ್ಳಿ. ಪೂಜೆ ಆರಂಭವಾಗುತ್ತಿದ್ದಂತೆ ಈ ಎಲ್ಲಾ ವಸ್ತುವನ್ನು ದೇವರಿಗೆ ಅರ್ಪಿಸಿ, ಈ ದಿನ ಬೆಳಗ್ಗೆ ಮತ್ತು ಸಂಜೆ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಬೇಕು. ದೇವಾಲಯಕ್ಕೆ ಹೋಗಲು ಸಾಧ್ಯವಿಲ್ಲದ ಕಾರಣ ಮನೆಯಲ್ಲಿರುವ ದೇವರ ಕೋಣೆಯಲ್ಲೇ ಪೂಜೆಯನ್ನು ಮಾಡಿ. ಪೂಜೆಯು ಸಂಪೂರ್ಣ ಮುಗಿದ ನಂತರ, ಹಣ್ಣುಗಳನ್ನು ಅಥವಾ ನಿಮ್ಮ ಕೈಲಾದಷ್ಟು ಧನ, ಫಲಾಹಾರವನ್ನು ನಿರ್ಗತಿಕರಿಗೆ, ಸತ್ಪಾತ್ರರಿಗೆ ಅಥವಾ ಬ್ರಾಹ್ಮಣರಿಗೆ ದಾನ ಮಾಡಬೇಕು.

*​ಜಾಗರಣೆ*

ಅಪರಾ ಏಕಾದಶಿಯಂದು ನಿಮಗೆ ಸಾಧ್ಯವಾದರೆ ರಾತ್ರಿಯಿಡೀ ಎಚ್ಚರವಿದ್ದು, ವಿಷ್ಣುವಿನ ಸ್ತೋತ್ರಗಳನ್ನು ಪಠಿಸಿ. ಒಂದು ವೇಳೆ ನಿಮ್ಮ ಕೈಯಲ್ಲಿ ಜಾಗರಣೆ ಮಾಡಲು ಸಾಧ್ಯವಾಗದಿದ್ದರೆ ಹಾಸಿಗೆಯ ಮೇಲೆ ಮಲಗುವ ಬದಲು ನೆಲದ ಮೇಲೆ ಮಲಗಿಕೊಳ್ಳಬಹುದು. ಮರುದಿನ ಬೆಳಗ್ಗೆ ಸೂರ್ಯೋದಯದ ಮುನ್ನ ಎದ್ದು, ಸ್ನಾನ ಮಾಡಿ ನಂತರ ವಿಷ್ಣುವಿಗೆ ಧೂಪ, ದೀಪವನ್ನು ಬೆಳಗಿ ನಿನ್ನೆಯ ಉಪವಾಸ ವ್ರತಕ್ಕೆ ಧನ್ಯವಾದವನ್ನು ಸಲ್ಲಿಸಿ. ನಂತರ ಸೂರ್ಯದೇವನಿಗೂ ಕೂಡ ತುಳಸಿ ಹಾಕಿದ ನೀರನ್ನು ಅರ್ಪಿಸಿ, ತುಳಸಿಯನ್ನು ಪೂಜಿಸಿ. ಈ ರೀತಿ ಮಾಡುವುದರಿಂದ ನಮ್ಮೆಲ್ಲಾ ಬಯಕೆಗಳು ಈಡೇರುತ್ತದೆ ಎಂದು ನಂಬಲಾಗಿದೆ.

*​ಉಪವಾಸದ ನಂತರ ಈ ತಪ್ಪನ್ನು ಮಾಡದಿರಿ*
                                                                                                                                ಅಪರಾ ಏಕಾದಶಿ ವ್ರತವನ್ನು ಕೈಗೊಂಡವರು ಕೆಲವೊಂದು ವಸ್ತುಗಳ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಬೇಕು. ಇಲ್ಲವಾದಲ್ಲಿ ಅವರು ಉಪವಾಸ ಮಾಡಿದ ಫಲವನ್ನು ಅನುಭವಿಸಲಾರರು. ಉಪವಾಸ ವ್ರತ ಮಾಡುವವರು ಆ ದಿನದಂದು ಟೂತ್‌ಬ್ರಷ್‌ನ್ನು ಉಪಯೋಗಿಸುವ ಬದಲು ಕಹಿ ಬೇವಿನ ಕಡ್ಡಿಯನ್ನು ಅಥವಾ ಕೈ ಬೆರಳುಗಳಿಂದಲೇ ಹಲ್ಲನ್ನು ಶುಚಿಗೊಳಿಸಿಕೊಳ್ಳಬೇಕು. ಅಪರಾ ಏಕಾದಶಿಯ ಉಪವಾಸ ವ್ರತದಂದು ಎಲೆ ಅಡಿಕೆಯನ್ನಾಗಲಿ, ಮದ್ಯ, ಧೂಮಪಾನವನ್ನಾಗಲಿ ಸೇವಿಸಬಾರದು. ಹಾಸಿಗೆಯ ಮೇಲೆ ಮಲಗುವ ಬದಲು ನೆಲದ ಮೇಲೆ ಮಲಗಿರಿ. ಅಕ್ಕಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಹಾಗೂ ಆ ಸಮಯದಲ್ಲಿ ನಮ್ಮ ಮನಸಿನಲ್ಲೂ ಕೂಡ ಯಾರೊಬ್ಬರ ಬಗ್ಗೆಯು ಅಸೂಯೆ ಪಡಬಾರದು.

Post a Comment

Previous Post Next Post