ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅವರು ವಿಧಾನಸೌಧಕ್ಕೆ ನಾಮಪತ್ರ ಸಲ್ಲಿಕೆಗೆ ಆಗಮಿಸಬೇಕಿತ್ತು. ಆದರೆ ಕೂಡಲೇ ಅದು ಅಸಾಧ್ಯವಾಗಿದ್ದರಿಂದ ಅವರನ್ನು ತುಮಕೂರಿನಿಂದ ಏರ್ಲಿಫ್ಟ್ ಮಾಡಲಾಗಿದೆ. ತುಮಕೂರಿನಿಂದ ಜಕ್ಕೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಹೇಮಲತಾ ಅವರು ಕೊನೆಗೆ ರಸ್ತೆ ಮಾರ್ಗವಾಗಿ ವಿಧಾನಸೌಧ ತಲುಪಿದ್ದಾರೆ. ವಿಧಾನಸೌಧ ತಲುಪುತ್ತಿದ್ದಂತೆಯೇ ಓಡೋಡಿ ವಿಧಾನಸೌಧದ ಮೆಟ್ಟಿಲು ಏರಿ ಬಂದಿದ್ದಾರೆ.
ಸಂಸದ ಸಂಗಣ್ಣ ಕರಡಿ ಅವರ ಕಟ್ಟಾ ಬೆಂಬಲಿಗರಾಗಿರುವ ಹೇಮಲತಾ, ಸಂಗಣ್ಣ ಕರಡಿ ಅವರು ಬಿಜೆಪಿಗೆ ಬಂದಾಗ ಬಿಜೆಪಿಗೆ ಬಂದಿದ್ದರು. ಇವರು ಹಾಲಿ, ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯೆ ಆಗಿದ್ದಾರೆ. ಈ ಹಿಂದೆ ಕೊಪ್ಪಳ ನಗರಸಭೆಗೆ ಸ್ಪರ್ಧೆಗೆ ಟಿಕೆಟ್ ಕೇಳಿದ್ದರು. ಆಗ ಟಿಕೆಟ್ ಸಿಕ್ಕಿರಲಿಲ್ಲ.
ಈ ಹಿಂದೆ ನಗರಸಭೆಯ 18ನೇ ವಾರ್ಡಿಗೆ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಮೂಲದ ಹೇಮಲತಾ , ಕೊಪ್ಪಳದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ಪರೀಕ್ಷಿತರಾಜ್ಕೊ, ಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.
Post a Comment