ಬೆಂಗಳೂರು: ರಾಜ್ಯದಲ್ಲಿ ಎದ್ದಿದ್ದಂತ ಆಜಾನ್ ವರ್ಸಸ್ ಸುಪ್ರಭಾತದ ಸಮರ ಕೊಂಚ ತಣ್ಣಗಾಗುವ ನಿಟ್ಟಿನಲ್ಲಿ ಮುಂದುವರೆದಿದೆ. ಬೆಳಿಗ್ಗೆ 5 ಗಂಟೆಗೆ ಕೂಗಲಾಗುತ್ತಿದ್ದಂತ ಆಜಾನ್ ( Azan ) ಅನ್ನು, ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 6 ಗಂಟೆಗೆ ಕೂಗಲು ಮುಸ್ಲೀಂ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಸಂಬಂಧ ಮುಸ್ಲೀಂ ಧರ್ಮಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಮಹತ್ವದ ಸಭೆ ನಡೆಯಿತು. ಅಮೀರ್ ಎ ಷರಿಯತ್ ಆಗಿರುವ ಮೌಲಾನ ಸಗೀರ್ ಅಹಮದ್ ಅಧ್ಯಕ್ಷತೆಯಲ್ಲಿ ಷರಿಯತ್ ಎ ಹಿಂದ್ ಸಂಘಟನೆ ಈ ಸಭೆಯನ್ನು ಏರ್ಪಡಿಸಿತ್ತು. ಈ ಸಭೆಯಲ್ಲಿ ಬೆಳಿಗ್ಗೆ 5 ಗಂಟೆಗೆ ಕೂಗಲಾಗುತ್ತಿದ್ದಂತ ಆಜಾನ್ ಬದಲಾಗಿ, ಬೆಳಿಗ್ಗೆ 6 ಗಂಟೆಗೆ ಆಜಾನ್ ಕೂಗಲು ಒಮ್ಮತದ ನಿರ್ಧರವನ್ನು ಕೈಗೊಳ್ಳಲಾಗಿದೆ.ಈ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಸಂಘಟನೆಯ ಉಮರ್ ಶರೀಫ್ ಅವರು, ಮುಸ್ಲೀಮರು ದೇಶದ ಕಾನೂನಿಗೆ ಬಲೆ ಕೊಡುತ್ತಿದ್ದೇವೆ. ಭಾರತದ ಕಾನೂನು ಪಾಲಿಸಲಿದ್ದೇವೆ. ನಾವು ಕಾನೂನು ಪಾಲಿಸುತ್ತಿಲ್ಲ ಎಂಬುದು ಸುಳ್ಳು. ಕಾನೂನಿಗೆ ಬೆಲೆ ಕೊಟ್ಟು ಬೆಳಗಿನ ಜಾವ 5 ಗಂಟೆಗೆ ಕೂಗಲಾಗುತ್ತಿದ್ದಂತ ಆಜಾನ್ ಬದಲಾಗಿ, ಬೆಳಿಗ್ಗೆ 6 ಗಂಟೆಗೆ ಧ್ವನಿ ವರ್ಧಕರ ಮೂಲಕ ಮಸೀದಿಗಳಲ್ಲಿ ಆಜಾನ್ ಕೂಗಲು ನಿರ್ಧರಿಸಲಾಗಿದೆ ಎಂದು ಹೇಳಿದರು

Post a Comment

Previous Post Next Post