*ಮುಖ್ಯಮಂತ್ರಿಗಳಿಂದ ಇಂದು ಸಂಜೆ ತುರ್ತು ಸಭೆ*
ಬಜೆಟ್ ಅನುಷ್ಠಾನ, ಕಡತ ವಿಲೇವಾರಿ ಸಂಬಂಧಿಸಿದಂತೆ ಚರ್ಚೆ
ಬೆಂಗಳೂರು, ಮೇ 17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಮಂಗಳವಾರ ದಿ.17.05.2022) ಸಂಜೆ 05.00 ಗಂಟೆಗೆ ಸಮ್ಮೇಳನ ಸಭಾಂಗಣ, ಕೊಠಡಿ ಸಂಖ್ಯೆ 334, ವಿಧಾನ ಸೌಧದಲ್ಲಿ ತುರ್ತು ಸಭೆ ಕರೆದಿದ್ದಾರೆ.
2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಆಡಳಿತವನ್ನು ಚುರುಕುಗೊಳಿಸುವುದು, ಕಡತ ವಿಲೇವಾರಿ ಹಾಗೂ ಇನ್ನಿತರೆ ವಿಷಯಗಳ ಕುರಿತಂತೆ ಚರ್ಚಿಸಲು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯನ್ನು ಕರೆದಿದ್ದಾರೆ.
Post a Comment