ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ,ಎಸ್ಟಿ ಕುಟುಂಬದ ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ. ತಿಂಗಳಿಗೆ 75 ಯುನಿಟ್ ವರೆಗೆ ಬಿಲ್ ಪಾವತಿಸುವ ಅಗತ್ಯವಿರುವುದಿಲ್ಲ.

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಮನೆಗಳಿಗೆ ಸರ್ಕಾರದಿಂದ ಉಚಿತ ವಿದ್ಯುತ್ ಕೊಡುಗೆ ನೀಡಲಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ,ಎಸ್ಟಿ ಕುಟುಂಬದ ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ. ತಿಂಗಳಿಗೆ 75 ಯುನಿಟ್ ವರೆಗೆ ಬಿಲ್ ಪಾವತಿಸುವ ಅಗತ್ಯವಿರುವುದಿಲ್ಲ.ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಆದೇಶ ಅನ್ವಯವಾಗಲಿದೆ. ಮೇ 13ರ ಆದೇಶದಲ್ಲಿ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಉಲ್ಲೇಖಿಸಲಾಗಿತ್ತು. ಆದರೆ, ಪರಿಷ್ಕೃತ ಆದೇಶದ ಪ್ರಕಾರ ನಗರ ಪ್ರದೇಶಕ್ಕೂ ಅನ್ವಯವಾಗಲಿದೆ.


ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದ ಕುಟುಂಬದವರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರತಿ ತಿಂಗಳಿಗೆ 75 ಯುನಿಟ್ ಗಳ ವರೆಗಿನ ಬಳಕೆಗೆ ಬಿಲ್ ಕಟ್ಟುವ ಅಗತ್ಯ ಇರುವುದಿಲ್ಲ.


ಇದರಿಂದ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ ಮಾಸಿಕ 75 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಈ ಮೊದಲು ಗ್ರಾಮೀಣ ಪ್ರದೇಶಕ್ಕೆ ಸೀಮಿತಗೊಳಿಸಲಾಗಿದ್ದ ಸೌಲಭ್ಯವನ್ನು ನಗರ ಪ್ರದೇಶದ ಬಡವರಿಗೂ ವಿಸ್ತರಿಸಲಾಗಿದೆ. ಗೃಹ ವಿದ್ಯುತ್ ಬಳಕೆದಾರರು ಮಾಸಿಕ ಶುಲ್ಕವನ್ನು ಪಾವತಿ ಮಾಡಿದ ನಂತರ ಒಟ್ಟಾರೆ ಬಳಕೆಯ ವಿದ್ಯುತ್ ಪ್ರಮಾಣದಲ್ಲಿ 75 ಯುನಿಟ್ ಶುಲ್ಕದ ಮೊತ್ತವನ್ನು ಗ್ರಾಹಕರ ಖಾತೆಗೆ ನೇರ ವರ್ಗಾವಣೆಗೆ ಸರ್ಕಾರ ಮರುಪಾವತಿಸಲಿದೆ. ಮೇ 1 ರಿಂದ ಯೋಜನೆ ಜಾರಿಗೆ ಬಂದಿದೆ. ಏಪ್ರಿಲ್ 30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರು ಎಂದು ಹೇಳಲಾಗಿದೆ.

Post a Comment

Previous Post Next Post