ತುಮಕೂರು: ರಾಜ್ಯದ ಹಿರಿಯ ಕಾರ್ಮಿಕ ನಾಯಕ (Leader), ಸಿಎಂಐ (CPI) ಲೀಡರ್ ಎನ್. ಶಿವಣ್ಣ (N. Shivanna) ನಿಧನರಾಗಿದ್ದಾರೆ. 80 ವರ್ಷದ ಶಿವಣ್ಣ ಹೃದಯಾಘಾತದಿಂದ (Heart Attack) ನಿನ್ನೆ ಬೆಂಗಳೂರಿನಲ್ಲಿರುವ (Bengaluru) ತಮ್ಮ ಪುತ್ರನ (Son) ನಿವಾಸದಲ್ಲಿ ನಿಧನರಾಗಿದ್ದಾರೆ.

ತುಮಕೂರು: ರಾಜ್ಯದ ಹಿರಿಯ ಕಾರ್ಮಿಕ ನಾಯಕ (Leader), ಸಿಎಂಐ (CPI) ಲೀಡರ್ ಎನ್. ಶಿವಣ್ಣ (N. Shivanna) ನಿಧನರಾಗಿದ್ದಾರೆ. 80 ವರ್ಷದ ಶಿವಣ್ಣ ಹೃದಯಾಘಾತದಿಂದ (Heart Attack) ನಿನ್ನೆ ಬೆಂಗಳೂರಿನಲ್ಲಿರುವ (Bengaluru) ತಮ್ಮ ಪುತ್ರನ (Son) ನಿವಾಸದಲ್ಲಿ ನಿಧನರಾಗಿದ್ದಾರೆ.

ತುಮಕೂರು (Tumkur) ಜಿಲ್ಲೆಯ ಗುಬ್ಬಿ (Gubbi) ತಾಲ್ಲೂಕು ನಂದಿಹಳ್ಳಿ ಶಿವಣ್ಣ ಅವರ ಜನ್ಮಸ್ಥಳವಾಗಿದ್ದು, ರೈತ ನಾಯಕರಾಗಿ (Farmer Leader), ಕಾರ್ಮಿಕ ನಾಯಕರಾಗಿ, ಜನಪರ ಹೋರಾಟಗಾರರಾಗಿ ರಾಜ್ಯಾದ್ಯಂತ ಶಿವಣ್ಣ ಗುರುತಿಸಿಕೊಂಡಿದ್ದರು. ಇನ್ನು ಶಿವಣ್ಣ ಅವರು ತಮ್ಮ ಪತ್ನಿ, ಪುತ್ರ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶಿವಣ್ಣ ಅವರ ಇಚ್ಛೆಯಂತೆ ಮೃತ ದೇಹವನ್ನು (Body) ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ದಾನ (Donate) ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡಿದ್ದ ಶಿವಣ್ಣ

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ನಂದಿಹಳ್ಳಿ ಶಿವಣ್ಣ ಅವರ ಜನ್ಮಸ್ಥಳವಾಗಿದ್ದು, ರೈತ ನಾಯಕರಾಗಿ, ಕಾರ್ಮಿಕ ನಾಯಕರಾಗಿ, ಜನಪರ ಹೋರಾಟಗಾರರಾಗಿ ರಾಜ್ಯಾದ್ಯಂತ ಶಿವಣ್ಣ ಗುರುತಿಸಿಕೊಂಡಿದ್ದರು.ಶಿವಣ್ಣ ಅವರು ಎಐಟಿಯುಸಿ ರಾಜ್ಯ ಕಾರ್ಯದರ್ಶಿ, ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿ ಸಂಘಟನೆ ಮುನ್ನಡೆಸಿದ್ದರು. ಒಮ್ಮೆ ತುರುವೇಕೆರೆ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು.

ವಿದ್ಯಾರ್ಥಿ ದೆಸೆಯಿಂದಲೂ ಹೋರಾಟ

ಡಿಪ್ಲೊಮಾ ಶಿಕ್ಷಣ ಮುಗಿಸಿ, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ ಶಿವಣ್ಣ ಅವರು ಅಲ್ಲೂ ಕಾರ್ಮಿಕ ಸಂಘಟನೆ ಕಟ್ಟಿ ಬೆಳೆಸುವ ಮೂಲಕ ಕಾರ್ಮಿಕರಿಗೆ ಹಲವು ಸವಲತ್ತು ಕೊಡಿಸಿದ್ದರು. ನಂತರ ಕಾರ್ಮಿಕ ಸಂಘಟನೆ, ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿಕೊಂಡು, ಅವರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ನಿರತರಾಗಿದ್ದರು.

ಕಾರ್ಖಾನೆಯಲ್ಲೂ ಹೋರಾಟ ಮರೆಯದ ನಾಯಕ

ಎನ್. ಶಿವಣ್ಣ ಅವರು ತುಮುಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಮತ್ತು ಹತ್ತಾರು ಕಾರ್ಖಾನೆಯ ನಾಯಕರಾಗಿ ಸೇವೆಸಲ್ಲಿಸಿದ್ದರು. ಇವರು ಸಿಪಿಐ ಪಕ್ಷದ ಮುಂದಾಳು ಕೂಡ ಆಗಿದ್ದರು. ಅಸಂಘಟಿತ ಕ್ಷೇತ್ರಗಳಾದ ಕಟ್ಟಡ,ಆಂಗನವಾಡಿ, ಬಿಸಿಯೂಟ. ಮತ್ತಿತರ ಕಾರ್ಮಿಕರ ಹಕ್ಕು ,ಮೂಲ ಸೌಲಭ್ಯಗಳಿಗಾಗಿ ದುಡಿಯುತ್ತಿದ್ದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಕಹಿ ಉಣಿಸಿದ್ದ ಶಿವಣ್ಣ

ಎನ್. ಶಿವಣ್ಣ ಅವರು 2019ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೋಲಿಗೆ ಕಾರಣವಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಒಂದು ರೀತಿಯಲ್ಲಿ ದೇವೇಗೌಡರ ಸೋಲಿಗೂ ಶಿವಣ್ಣ ಕಾರಣರಾದರು ಎಂದು ವಿಶ್ಲೇಷಿಸಲಾಗಿತ್ತು. ಈ ಚುನಾವಣೆಯಲ್ಲಿ 15 ಸಾವಿರಕ್ಕೂ ಅಧಿಕ ಮತ ಗಳಿಸಿದ್ದರು. ಈ ಮತ ವಿಭಜನೆಯಿಂದಾಗಿಯೇ ದೇವೇಗೌಡರು ಸೋತರು ಎಂದು ವಿಶ್ಲೇಷಿಸಲಾಗಿತ್ತು.

ಕಾರ್ಮಿಕ ಸಂಘಟನೆಗಳಿಂದ ಸಂತಾಪ

ಇನ್ನು ಕಾರ್ಮಿಕ ನಾಯಕ ಶಿವಣ್ಣ ನಿಧನಕ್ಕೆ ಕಾರ್ಮಿಕ ಸಂಘಟನೆಗಳು, ಜನಪರ ಸಂಘಟನೆಗಳು ಸಂತಾಪ ಸೂಚಿಸಿವೆ. ಶಿವಣ್ಣನವರ ಸಾವು ಕಾರ್ಮಿಕರ ಚಳುವಳಿಗೆ ದೊಡ್ಡ ನಷ್ಟವನ್ನು ಉಂಟುಮಾಡಿದೆ.ತಮ್ಮ ಜೀವನದ ಹೆಚ್ಚುಸಮಯವನ್ನು ಕಮ್ಯೂನಿಸ್ಟ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ರೈತ- ಕಾರ್ಮಿಕರ ಹಕ್ಕುಗಳಿಗೆ, ಮತ್ತು ಕೋಮು ಸೌರ್ಹಾಧತೆಗಾಗಿ, ಸಮಾನತೆ, ಸಮಾಜದ ಸಮತೋಲನಕ್ಕಾಗಿ ಪ್ರತಿ ದಿನವು ದುಡಿಯುತ್ತಿದ್ದರು ಎಂದು ಸಿಐಟಿಯು ರಾಜ್ಯ ಸಮತಿ ಶ್ರದ್ಧಾಂಜಲಿ ಅರ್ಪಿಸಿದೆ.


ಶ್ರೀ ಡಿ ಎಸ್ ನಾಗಭೂಷಣ ಅವರ ನಿಧನ ಗಾಂಧಿ ವಲಯಕ್ಕೆ ತುಂಬಲಾರದ ನಷ್ಟ. 
ಅವರ 'ಗಾಂಧಿ ಕಥನ" ಚಿರಸ್ಥಾಯಿಯಾಗಿ ಉಳಿಯುವ ಕೆಲಸ. ಈ ನಾಡು ಒಬ್ಬ ಧೀಮಂತ ಚಿಂತಕರನ್ನು ಕಳೆದುಕೊಂಡು ಬಡವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ನನ್ನ ಪ್ರಾರ್ಥನೆ.
ವೂಡೇ ಪಿ ಕೃಷ್ಣ
ಅಧ್ಯಕ್ಷರು
ಕರ್ನಾಟಕ ಗಾಂಧಿ ಸ್ಮಾರಕ ನಿಧಿ
ಗಾಂಧಿ ಭವನ
ಬೆಂಗಳೂರು

Post a Comment

Previous Post Next Post