*ಆಟೋಮೊಬೈಲ್ ಉದ್ಯಮದಲ್ಲಿ ಉದ್ಯೋಗ ಸೃಜನೆ ಹಾಗೂ ಆರ್ಥಿಕತೆ ಅಭಿವೃದ್ಧಿಗೆ ಹೆಚ್ವು ಅವಕಾಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಮೇ 07 :ಆಟೋಮೊಬೈಲ್ ಉದ್ಯಮಕ್ಕೆ ಹೆಚ್ಚು ಉದ್ಯೋಗ ಒದಗಿಸುವ ಅವಕಾಶವಿದೆ. ದೊಡ್ಡ.ಮಟ್ಟದಲ್ಲಿ ಆರ್ಥಿಕ ಚಟುವಟಿಕೆಯನ್ನು ಸೃಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
*ಅವರು ಇಂದು 4800 ಕೋಟಿ* ರೂಪಾಯಿ ಮೊತ್ತದ ಬಂಡವಾಳ ಹೂಡಿಕೆಯ ಒಡಂಬಡಿಕೆ ಪತ್ರಕ್ಕೆ ಕರ್ನಾಟಕ ಸರ್ಕಾರ ಮತ್ತು ಟೊಯೋಟಾ ಕಿರ್ಲೋಸ್ಕರ ಕಂಪನಿ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದರು.
ಆಟೋಮೊಬೈಲ್ ಉದ್ಯಮ ಬಹಳ ಮುಖ್ಯವಲಯ. ಜವಳಿ, ಸ್ಟೀಲ್, ಗಣಿಗಾರಿಕೆ, ಆಟೋಮೊಬೈಲ್ ಉತ್ಪಾದನಾ ವ್ಯವಸ್ಥೆಯು ಶ್ರೇಣೀಕೃತ ಪರಿಣಾಮವನ್ನು ಹೊಂದಿದೆ. ಟಾಟಾ , ಟಯೋಟಾ ಜೊತೆಗೆ ಇನ್ನಷ್ಟು ದೊಡ್ಡ ಕಂಪನಿಗಳು ಕರ್ನಾಟಕಕ್ಕೆ ಬಂದರೆ ಆಶ್ಚರ್ಯವಿಲ್ಲ ಎಂದರು.
ಕರ್ನಾಟಕದ ಮೂಲಭೂತ ಸೌಕರ್ಯಗಳನ್ನು ಹಾಗೂ ನೀತಿಗಳನ್ನು ಬಿಂಬಿಸಲು ಟಯೋಟಾ ಸಂಸ್ಥೆಯೇ ಸಾಕು. ಟಯೋಟ ಕಿರ್ಲೋಸ್ಕರ್ ಸಂಸ್ಥೆ ರಾಜ್ಯದಲ್ಲಿ ಇನ್ನಷ್ಟು ನಾವೀನ್ಯತೆ ಮೂಲಕ ವಿಸ್ತರಿಸಬೇಕೆಂಬ ಇಂಗಿತವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
*5000 ಕೋಟಿ ರೂ.ಗಳ ಹೂಡಿಕೆಗೆ ಸಿದ್ಧವಾಗಿರಿ*
4800 ಕೋಟಿ ವಿಸ್ತರಣೆ ಸ್ವಾಗತಾರ್ಹ ವಾಗಿದ್ದು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000 ಕೋಟಿ ಹೂಡಿಕೆಗೆ ಸಿದ್ಧವಾಗಿರಿ. ಸರ್ಕಾರ ಎಲ್ಲಾ ರೀತಿಯಲ್ಲಿಯೂ ನೆರವು ಹಾಗೂ ಬೆಂಬಲ ನೀಡಲಿದೆ ಎಂದರು. ಜಾಗತೀಕರಣದ ನಂತರ ಹಲವಾರು ವಲಯಗಳಲ್ಲಿ ಬದಲಾವಣೆಗಳಾಗಿವೆ. ಖಾಸಗಿ ಮತ್ತು ಸಾರ್ವಜನಿಕ ವಲಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಭವಿಷ್ಯ ಕ್ಕಾಗಿ ನಾವು ಬದಲಾಗೋಣ. ಹೆಜ್ಜೆಗೆ, ಹೆಜ್ಜೆ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.
*ಕರ್ನಾಟಕ ಕೈಗಾರಿಕಾ ಬಂಡವಾಳ ಸ್ನೇಹಿಯಾದ ರಾಜ್ಯ :*
ಕರ್ನಾಟಕದ ಆಟೋಮೊಬೈಲ್ ಕ್ಷೇತ್ರದಲ್ಲಿ ಟೊಯೋಟಾ ಕಂಪನಿ ದೊಡ್ಡ ಇತಿಹಾಸವನ್ನು ರಚಿಸಿದೆ. ಕರ್ನಾಟಕಮತ್ತು ಟೊಯೋಟಾ ಕಂಪನಿಯದು ಹಳೆಯ ಬಾಂಧವ್ಯ.ಕೃಷಿ ಯಂತ್ರೋಪಕರಣದಿಂದ ಪ್ರಾರಂಭಿಸಿ ಮಷೀನ್ ಟೂಲ್ಸ್, ಎಲೆಕ್ಟ್ರಿಟಿಕ್ ಮೋಟರ್ಸ್ ಗಳ ನಂತರ ಆಟೋಮೊಬೈಲ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಮೂಲತ: ಮಹಾರಾಷ್ಟ್ರದವರಾದರೂ ರವಿಕಿರ್ಲೋಸ್ಕರ್ ಅವರ ಹೃದಯ ಮಾತ್ರ ಕರ್ನಾಟಕಕ್ಕೆ ಸೇರಿದ್ದು.ಟೊಯೋಟಾ ಎಂಡಿ ವಿಕ್ರಂ ಕಿರ್ಲೋಸ್ಕರ್ ಅವರು ತಿಳಿಸಿರುವಂತೆ ಇಡೀ ದೇಶದಲ್ಲಿ ಕರ್ನಾಟಕ ಕೈಗಾರಿಕಾ ಬಂಡವಾಳ ಸ್ನೇಹಿಯಾದ ರಾಜ್ಯವಾಗಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ನೀತಿಗಳಿವೆ ಎಂದರು. ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬಿಸನೆಸ್ ನೀತಿಯಿದ್ದು,ಇದನ್ನು ಮತ್ತಷ್ಟು ಸರಳೀಕರಿಸಲಾಗುವುದು ಎಂದರು.
*ಆರ್ಥಿಕತೆಯ ಅಭಿವೃದ್ಧಿಯಲ್ಲಿ ಕೈಗಾರಿಗಳ ಪಾತ್ರ :*
ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕತೆಯ ಅಭಿವೃದ್ಧಿಗೆ ಕೈಗಾರಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಎರಡು ವಿಶ್ವಯುದ್ಧಗಳ ಪರಿಣಾಮ ಆಧುನಿಕ ತಂತ್ರಜ್ಞಾನ, ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆಯ ಅಭಿವೃದ್ಧಿಯಾಯಿತು. ಆಟೋಮೊಬೈಲ್ ಕ್ಷೇತ್ರದಲ್ಲಿ ಇಂಜಿನ್ ಹಾಗು ಟ್ರಾನ್ಸಮಿಷನ್ ನಲ್ಲಿನ ಬದಲಾವಣೆ ಇಡೀ ಸಾರಿಗೆ ವಲಯವನ್ನೇ ಬದಲಾಯಿಸಿತು. ಶಿಕ್ಷಣದಲ್ಲಿ ಮೊದಲು ಕಲಿತು ನಂತರ ಪರೀಕ್ಷೆ ಬರೆಯುತ್ತೇವೆ. ಆದರೆ ನಿಜಜೀವನದಲ್ಲಿ ಮೊದಲು ಪರೀಕ್ಷೆ ನೀಡಿ ನಂತರ ಕಲಿಯುತ್ತೇವೆ. ಆದ್ದರಿಂದ ಯಶಸ್ವಿಯಾಗಲು ಜೀವನ ಕಲಿಸುವ ಪಾಠಗಳು ಮುಖ್ಯವಾಗುತ್ತವೆ. ಆಡಳಿತದಲ್ಲಿ ಆಳವಾದ ಚಿಂತನೆಯ ಅಗತ್ಯ. 1997 ರಲ್ಲಿ ರಾಜ್ಯದಲ್ಲಿ ಟೊಯೋಟಾ ಕಂಪನಿಗೆ ಸವಲತ್ತು,ರಿಯಾಯತ್ತಿಗಳನ್ನು ನೀಡುವ ನಿರ್ಧಾರ ಸೂಕ್ತವಾಗಿದ್ದರಿಂದ ಟಯೋಟಾ ಕಂಪನಿಯಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಇದರ ಪರಿಣಾಮವಾಗಿ ಆರ್ಥಿಕತೆ, ಆರ್ ಎಂಡ್ ಡಿ, ಎಕೋಸಿಸ್ಟಂ ಗಳ ಸುಧಾರಣೆ ಸಾಧ್ಯವಾಯಿತು. ಕೃಷಿ, ಸೇವಾ, ಸಾಫ್ಟ್ ವೇರ್ , ಉತ್ಪಾದನಾ ವಲಯಗಳನ್ನೂ ಸೇರಿದಂತೆ ಎಲ್ಲ ವಲಯಗಳ ಕೈಗಾರಿಕೆಗಳು ರಾಜ್ಯದಲ್ಲಿ ದೂರದೃಷ್ಟಿ ಚಿಂತನೆಯುಳ್ಳ ಆಡಳಿತ ಕರ್ನಾಟಕದಲ್ಲಿದೆ ಎಂಬ ಆತ್ಮವಿಶ್ವಾಸವನ್ನು ಹೊಂದಲು ತಿಳಿಸಿದರು. ಸವಾಲುಗಳ ನಡುವೆಯೇ ಸಾಧನೆ ಮಾಡುವುದೇ ವಿಶಿಷ್ಟವಾದುದು ಎಂದರು.
Post a Comment