*ಬೆಂಗಳೂರು ದಕ್ಷಿಣದಲ್ಲಿ ಶನಿವಾರ ಮುಂಜಾನೆ ದಾಖಲೆ*

*ಬೆಂಗಳೂರು ದಕ್ಷಿಣದಲ್ಲಿ ಶನಿವಾರ ಮುಂಜಾನೆ ದಾಖಲೆ*

14ರ ಶನಿವಾರ ಮುಂಜಾನೆ ಸರಿ ಸುಮಾರು 8.30 ರಿಂದ 10.15ರ ವರೆವಿಗೂ ಹಬ್ಬದ ವಾತಾವರಣ  ಏರ್ಪಟ್ಟಿತ್ತು.  

*ಕಾರಣ:*

ಮಂತ್ರಾಲಯ ಮಠಾದೀಶರಾದ ಶ್ರೀ ಶ್ರೀ ಸುಭುದೆಂದ್ರತೀರ್ಥರಿಗೆ  ಏರ್ಪಡಿಸಲಾಗಿದ್ದ ವೈಭವೋಪೇತ ದ್ವಿಚಕ್ರ ವಾಹನಗಳ  rally.

9ರ ಸುಮಾರಿಗೆ ಜಯನಗರ ಐದನೇ ಬ್ಲಾಕ್ ನಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಿಂದ ಪ್ರಾರಂಭವಾದ ಸಾಲುಗಟ್ಟಿ ನಿಂತಿದ್ದ ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಸಲುವಾಗಿ ಯುವಕರು, ಮಹಿಳೆಯರು, ಜ್ಞಾನವೃದ್ಧರು ಕಾತುರ ಗೊಂಡಿದ್ದರು.

ಅಲಂಕೃತಗೊಂಡ ತೆರೆದ ಜೀಪಿನಲ್ಲಿ ವಿರಾಜಮಾನರಾಗಿದ್ದ  ಸ್ವಾಮಿಗಳು ಇಕ್ಕೆಲಗಳಲ್ಲೂ   ಸಾಗುತ್ತಿದ್ದ ವಾಹನದಲ್ಲಿನ ಪ್ರಯಾಣಿಕರಿಗೂ 
ಪಾದಚಾರಿಗಳಿಗೂ ಆಶೀರ್ವಾದ ಮಾಡುತ್ತಿದ್ದ ದೃಶ್ಯ ಎಲ್ಲರ ಮನ ಸೂರೆ ಗೊಂಡಿತ್ತು.

ತಾಳ ಮದ್ದಳೆ ಮತ್ತು ವಾದ್ಯಗಳ ಘೋಷಣೆಯನ್ನು ನುಡಿಸುವವರ ಜೀಪ್ ಸದ್ದು ಮಾಡುತ್ತಾ ಮುನ್ನಡೆದಿದ್ದು ಜನಾಕರ್ಷಣೀಯವಾಗಿತ್ತು.

ನೂರಾರು ದ್ವಿಚಕ್ರವಾಹನಗಳು ಸರತಿ ಸಾಲಿನಲ್ಲಿ ಮುಂದೆ ಸಾಗುತ್ತಿದ್ದರೆ 
ಗಾಂಭೀರ್ಯದಿಂದ ಸ್ವಾಮೀಜಿಗಳು
ಆಸೀನರಾಗಿದ್ದ ಜೀಪ್ಹಿಂಬಾಲಿಸುತ್ತಿದ್ದರೆ
 ಸಹಸ್ರಾರು ಕಣ್ಣುಗಳು ಈ ದಾಖಲೆಯ rally ಯನ್ನು ಮೆಚ್ಚಿ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು. 

ಕೆಲವು ನಿಮಿಷಗಳ ಕಾಲ ಅನಿಯಮಿತವಾಗಿ ಸಿಡಿದ ಪಟಾಕಿ, ಸಿಡಿಮದ್ದು, ಜಯನಗರ, ನೆಟ್ಟಕಲ್ಲಪ್ಪ ವೃತ್ತ  ಎನ್. ಅರ್. ಕಾಲೋನಿಯ ರಾಘವೇಂದ್ರ ಮಠದ ಬಳಿ ಹೆಚ್ಚಿನ ಆಕರ್ಷಣೆಯೊಂದಿಗೆ  ಪೂರಕ ಮೆರಗು ನೀಡಿತ್ತು. 

ಪ್ರತಿಯೊಂದು ದ್ವಿಚಕ್ರದ ಮೇಲೂ ವಾಯುಪುತ್ರನ ಕೇಸರಿ ದ್ವಜ ರಾರಾಜಿಸುತ್ತಿದ್ದುದನ್ನು ಸಾವಿರಾರು ಜನ ಮೂಕ ವಿಸ್ಮಿತರಾಗಿ ಗಮನಿಸುತ್ತಿ ದ್ದರೆ, ಹಿಂಬಾಲಿಸಿ ಬರುತ್ತಿದ್ದ ಪೊಲೀಸರು ಇಂತಹ ಶಿಸ್ತಿನ rally ಯಲ್ಲಿ ತಮಗೇನು ಕೆಲಸವೇ ಇಲ್ಲವೇನೋ ಎಂದು ಮೆಚ್ಚುಗೆ ನುಡಿ ಗಳನ್ನಾಡುತ್ತಿದ್ದರು.

ನೂರಾರು ಸಂಖ್ಯೆಯ ಭಕ್ತಾದಿಗಳು ಮಹಿಳೆಯರು, ಮಕ್ಕಳು ಸೇರಿದಂತೆ ನೆಟ್ಟಕಲ್ಲಪ್ಪ ವೃತ್ತದಿಂದ ಪಾದಯಾತ್ರೆ ಯಲ್ಲಿ ಪಾಲ್ಗೊಂಡು ಜಯ ಘೋಷ ಮುಗಿಲು ಮುಟ್ಟು ವಂತೆ ಕೂಗುತ್ತಿದ್ದುದು ಸಂಭ್ರಮಾಚರಣೆಗೆ ಇಂಬುಕೊಟ್ಟಿತ್ತು. ನರಸಿಂಹರಾಜ ಕಾಲೊನಿ ರಾಘವೇಂದ್ರ ಸ್ವಾಮಿ ಮಠದೊಳಗೆ ಹರ್ಷೋದ್ಗಾರದ  ನಡುವೆ ಪ್ರವೇಶಿಸಿದ ಮಂತ್ರಾಲಯದ  ಶ್ರೀಗಳು ನರಸಿಂಹ  ಜಯಂತಿಯ ಆಚರಣೆ ಮತ್ತಿತರ ಪೂಜಾ ಕೈಂಕರ್ಯ ದಲ್ಲಿ ತೊಡಗಿಸಿ ಕೊಂಡಿದ್ದರು.

ಧನ್ಯವಾದಗಳು🙏🏻🙏🏻

ಸುಧೀಂದ್ರ ರಾವ್
ರಾವ್ಸ್ ಅಕಾಡೆಮಿ.
ಬಸವನಗುಡಿ-ಬೆಂಗಳೂರು
9900575990
✅✅

Post a Comment

Previous Post Next Post