ಅಯೋದ್ಯೆ ರಾಮ ಮಂದಿರಕ್ಕೆ ನೀಡಿದ್ದ 22ಕೋಟಿ ರೂ. ಮೊತ್ತದ ಚೆಕ್ಗಳೂ ಬೌನ್ಸ್!
ಅಯೋದ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಕಾಮಗಾರಿಗಾಗಿ ದೇಣಿಗೆ ಅಭಿಯಾನದ ಮೂಲಕ ಸಂಗ್ರಹಿಸಲಾದ ಹಣದಲ್ಲಿ 22ಕೋಟಿ ಮೌಲ್ಯದ ಚೆಕ್ ಬೌನ್ಸ್ ಆಗಿವೆ ಎಂದೂ ತಿಳಿದು ಬಂದಿದೆ. ವರದಿಗಳ ಪ್ರಕಾರ, ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ (ವಿ ಹೆಚ್ ಪಿ )ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ಬರೋಬ್ಬರಿ 5. 457ಕೋಟಿ ರೂಪಾಯಿ ಸಂಗ್ರಹವಾಗಿತ್ತು.ಇದರಲ್ಲಿ ಹೆಚ್ಚಿನ ಹಣ ಚೆಕ್ ಮೂಲಕ ಸನದಯಾಗಿತ್ತು. ಆ ಚೆಕ್ ಗಳ ಪೈಕಿ 22ಕೋಟಿ ರೂ. ಮೌಲ್ಯದ ಚೆಕ್ ಚೆಕ್ಗಳು ಬೌನ್ಸ್ ನಾ ಕಾರಣ ತಿಳಿದು ಕೊಳ್ಳಲು ಮಂದಿರ ಟ್ರಸ್ಟ್ ಮುಂದಾಗಿದ್ದು. ತಾಂತ್ರಿಕ ಕಾರಣಗಳಿದ್ದರೆ ಸರಿ ಪಡಿಸಲು ತೀರ್ಮಾನಮಾನಿಸಿದೆ ಎಂದೂ ತಿಳಿದು ಬಂದಿದೆ. ಮೂಲಗಳ ಪ್ರಕಾರ, ಬೌನ್ಸ್ ಆಗಿರುವ ಚೆಕ್ಗಳನ್ನು ಪ್ರತ್ಯೇಕಿಸಿ ಹೊಸ ಅಡಿಟ್ ವರದಿಯನ್ನು ಸಿದ್ದ ಪಡಿಸಲಾಗುತ್ತಿದೆ.
Post a Comment