21-6-2022
ಪ್ರಕಟಣೆಯ ಕೃಪೆಗಾಗಿ
ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಯೋಗ
ಸಹಕಾರಿ - ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ಪತಂಜಲಿ ಮಹರ್ಷಿಗಳು ಬರೆದ ‘ಯೋಗ’ಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದೆ. ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಯೋಗವು ಸಹಕಾರಿ. ಅದು ಸುಖ ಮತ್ತು ನೆಮ್ಮದಿಯನ್ನೂ ನೀಡಬಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಇಂದು ಬೆಳಿಗ್ಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿದರು. ಯೋಗ ಮಾಡಿದವರು ಹೇಗಿರುತ್ತಾರೆ ಎಂಬುದಕ್ಕೆ ಮೋದಿಯವರೇ ಉದಾಹರಣೆ ಎಂದು ನುಡಿದರು.
ಋಷಿಮುನಿಗಳು ತಪಸ್ಸಿನ ಆಧಾರದಲ್ಲಿ ಯೋಗದ ಪರಿಚಯ ಮಾಡಿದರು. ಯೋಗ ಅಧ್ಯಾತ್ಮಕ್ಕೆ ದಾರಿ. ಕಣ್ಮುಚ್ಚಿ ಭಗವಂತನನ್ನು ನೋಡಿದ ದೇಶ ಭಾರತ. ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ ಎಂದು ವಿವರಿಸಿದರು. ಯೋಗವು ಜಗದ್ಗುರು ಭಾರತ ನಿರ್ಮಾಣಕ್ಕೆ ದಾರಿ ಮಾಡಿ ಕೊಡಲಿ ಎಂದು ಹಾರೈಸಿದರು.
ಇವತ್ತಿನ ದಿನವನ್ನು ಕರ್ನಾಟಕದ ಜನತೆ ಇತಿಹಾಸದಲ್ಲಿ ಬರೆದಿಡಬೇಕಾದ ದಿನ. ಜೂನ್ 21 ಅನ್ನು ಜಗತ್ತಿನ ಯೋಗ ದಿನವನ್ನಾಗಿ ನರೇಂದ್ರ ಮೋದಿಯವರು ಘೋಷಿಸಿದರು. 187 ದೇಶಗಳು ಅದನ್ನು ಅನುಮೋದಿಸಿದ ದಿನವಿದು. ಇದೇ ದಿನ ಕರ್ನಾಟಕದ ಮೈಸೂರಿನಲ್ಲಿ ಪ್ರಧಾನಿಯವರು ಯೋಗ ದಿನದಲ್ಲಿ ಭಾಗವಹಿಸುತ್ತಿರುವುದು ಕರ್ನಾಟಕಕ್ಕೆ ಅತ್ಯಂತ ಮಹತ್ವದ ದಿನ ಎಂದು ಅವರು ವಿವರಿಸಿದರು.
ಕನ್ನಡ ಚಲನಚಿತ್ರ ನಟಿ ಅದಿತಿ ಪ್ರಭುದೇವ್ ಅವರು ಮಾತನಾಡಿ, ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಪ್ರಮುಖವಾದ ಪಾತ್ರ ವಹಿಸುತ್ತದೆ. ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ ಎಂದರು. ಜೀವನಶೈಲಿ, ಸಮಯ ಸಿಗದೆ ಇರುವ ಕಾರಣ ಪ್ರತಿನಿತ್ಯ ಯೋಗಾಭ್ಯಾಸ ಸಾಧ್ಯವಾಗದಿದ್ದರೂ, ವಾರಕ್ಕೆ ಎರಡು ಮೂರು ದಿನ ಯೋಗಾಭ್ಯಾಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಯೋಗಾಭ್ಯಾಸದಿಂದ ಮನೆಗೆ ಮತ್ತು ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಆಗಿ ಹೊರಹೊಮ್ಮಬಹುದು. ಯೋಗಕ್ಕೆ ಒಂದು ಧರ್ಮಕ್ಕೆ ಸೀಮಿತ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಆದರೆ, ಮೋದಿಜಿ ಅವರು ತಿಳಿಸಿದಂತೆ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕೆಂದು ತಿಳಿಸಿದರು.
ವ್ಯಾಸ ಯೋಗ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ|| ಬಿ.ಆರ್.ರಾಮಕೃಷ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ. ಜಯಕರ್ ಶೆಟ್ಟಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ.ನಾರಾಯಣ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.
ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ[20/06, 1:04 PM] +91 83103 04771: 20-06-2022
ಪ್ರಕಟಣೆಯ ಕೃಪೆಗಾಗಿ
ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ
ಆರಂಭ ಮಹತ್ವದ ಕೊಡುಗೆ- ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಜ£ಪರ ಕಾರ್ಯಕ್ರಮಗಳ ಮೂಲಕ ಅಪಾರ ಜನಮನ್ನಣೆ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿಜಿ ಅವರು ರಾಜ್ಯದಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮತ್ತು ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ ಉದ್ಘಾಟನೆ ನೆರವೇರಿಸಿರುವುದು ರಾಜ್ಯಕ್ಕೆ ಮಹತ್ವದ ಕೊಡುಗೆಗಳು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
43.35 ಎಕರೆ ಪ್ರದೇಶದಲ್ಲಿ ವಿವಿ ಆವರಣವನ್ನು ಸುಮಾರು 201 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ಬೋಧನೆ ಹಾಗೂ ಸಂಶೋಧನೆಯಲ್ಲಿ ಹೊಸ ಮಾದರಿಯನ್ನು ಸ್ಥಾಪಿಸಿ, ನೀತಿ ರಚನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಹಕಾರಿಯಾಗಲಿದೆ. ಇದು ದೇಶಕ್ಕೆ ಪ್ರಧಾನಿ ಮೋದಿಜಿ ಅವರು ಕೊಟ್ಟ ಪ್ರಮುಖ ಸಂದೇಶವಾಗಿದೆ. ಈ ಪ್ರಮುಖ ನಿರ್ಧಾರವನ್ನು ಕೈಗೊಂಡ ಪ್ರಧಾನಿಯವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
20-6-2022
ಪ್ರಕಟಣೆಯ ಕೃಪೆಗಾಗಿ
ಪ್ರಧಾನಿ ಮೋದಿಜಿ ಭೇಟಿಯಿಂದ ಕಾರ್ಯಕರ್ತರಲ್ಲಿ
ಹೆಚ್ಚಿದ ಉತ್ಸಾಹ- ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ಗೌರವಾನ್ವಿತ ಮತ್ತು ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಕರ್ನಾಟಕ ಭೇಟಿಯು ಕಾರ್ಯಕರ್ತರಲ್ಲಿ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಮೋದಿಯವರ ಕರ್ನಾಟಕ ಭೇಟಿ ನಿಜಕ್ಕೂ ನಮ್ಮೆಲ್ಲ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಮೋದಿಜಿ ಅವರು ಸುಮಾರು 33 ಸಾವಿರ ಕೋಟಿಗೂ ಹೆಚ್ಚು ಮೊತ್ತದ 19 ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದು, ಇದರಿಂದ ಕರ್ನಾಟಕವು ಸಮಗ್ರ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮುನ್ನಡೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯೋಗದ ಮೂಲಕ ಸ್ವಸ್ಥ ಮನಸ್ಸಿನಿಂದ ಆರೋಗ್ಯವಂತ ಜಗತ್ತಿನ ನಿರ್ಮಾಣವಾಗಬೇಕು ಎಂಬ ಸಂದೇಶ ನೀಡಿದ ಮೋದಿಜಿ ಅವರು, ಸಾಂಸ್ಕøತಿಕ ರಾಜಧಾನಿ ಮೈಸೂರಿಗೆ ಭೇಟಿ ಕೊಟ್ಟು ಯೋಗ ದಿನಾಚರಣೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಮಾನ್ಯ ಪ್ರಧಾನಿಯವರ ಈ ಭೇಟಿಯಿಂದ ಪಕ್ಷದ ಕಾರ್ಯಕರ್ತರು ಪ್ರೇರಣೆ ಪಡೆದಿದ್ದು, 2023ರಲ್ಲಿ ಪಕ್ಷವು ಮತ್ತೆ 150ಕ್ಕೂ ಹೆಚ್ಚು ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಏರಲು ನೆರವಾಗಲಿದೆ ಎಂಬ ವಿಶ್ವಾಸವನ್ನು ನಳಿನ್ ಕುಮಾರ್ ಕಟೀಲ್ ಅವರು ವ್ಯಕ್ತಪಡಿಸಿದ್ದಾರೆ.
ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment