ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷಾ ಆಶ್ರಯ ನೀಡಿದ್ದ ಉಗ್ರ arrested

ಬೆಂಗಳೂರಲ್ಲಿ ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಜಮ್ಮು ಕಾಶ್ಮೀರದ ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ
ಬೆಂಗಳೂರು: ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಉಗ್ರ ತಾಲಿಬ್ ಹುಸೇನ್ (38)​ನನ್ನು ಜಮ್ಮು ಮತ್ತ ಕಾಶ್ಮೀರದ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇದನ್ನೂ ಓದಿ: Kupwara Encounter: ಕಾಶ್ಮೀರದ ಕುಪ್ವಾರಾದಲ್ಲಿ ಎನ್​ಕೌಂಟರ್; ಸೇನಾ ಪಡೆಯಿಂದ ಇಬ್ಬರು ಎಲ್​ಇಟಿ ಉಗ್ರರ ಹತ್ಯೆ

ಬೆಂಗಳೂರಿನಲ್ಲಿ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡ್ತಿದ್ದ ಉಗ್ರ ತಾಲಿಬ್, ಬಿಎನ್​ಎಲ್​ ಏರ್​ ಸರ್ವಿಸ್​ನಲ್ಲಿ ಕೆಲಸ ಮಾಡುತ್ತಿದ್ದ. ಕಾಶ್ಮೀರದಿಂದ ಬೆಂಗಳೂರಿಗೆ ಬರುವ ವೇಳೆಯಲ್ಲಿ ಪೊಲೀಸ್​ ಪತ್ನಿಯನ್ನೇ ಕರೆತಂದಿದ್ದಾನೆ. ಅದರಂತೆ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ನೆಲಸಿದ್ದನು.

ಉಗ್ರನಿಗೆ ಆಶ್ರಯ ನೀಡಿದ ಮಸೀದಿ ಮುಖ್ಯಸ್ಥ

ಉಗ್ರ ತಾಲಿಬ್ ಹುಸೇನ್​ಗೆ ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷಾ ಆಶ್ರಯ ನೀಡಿದ್ದಾನೆ. ಅಷ್ಟೇ ಅಲ್ಲದೆ ಅಲ್ಲಿನ ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಶಂಕೆಯೂ ವ್ಯಕ್ತವಾಗಿದೆ. ಸದ್ಯ ಉಗ್ರ ತಾಲಿಬ್​ನನ್ನು ಪೊಲೀಸರು ಬಂಧಿಸಿ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದುಬರಬೇಕಿದೆ.

Post a Comment

Previous Post Next Post