* ಗುರು ಪುಷ್ಯ ಯೋಗ: ಈ ಮಂತ್ರ ಪಠಿಸಿದರೆ ಸಕಲವೂ ಶುಭ..!*, ಶ್ರಾವಣ ಪೂಜೆ, ಗ್ರಹಗತಿ, ಧಾರ್ಮಿಕ ಜ್ಞಾನ ಪ್ರಸಾರ

[28/07, 7:16 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️‌ ‌ ‌ ‌ ‌
* ಗುರು ಪುಷ್ಯ ಯೋಗ: ಈ ಮಂತ್ರ ಪಠಿಸಿದರೆ ಸಕಲವೂ ಶುಭ..!*
Pandit Venkatesh. Astrologer. Kannada+91 94826 55011
ಗುರು ಪುಷ್ಯ ಯೋಗವು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಏಕೆಂದರೆ ಇದನ್ನು ಅನನ್ಯ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ. ಇದೇ ಜುಲೈ 28 ರ ಗುರುವಾರ, ಅಂದರೆ ನಾಳೆ ಗುರು ಪುಷ್ಯ ಯೋಗವಾಗುತ್ತಿದೆ. ಇದು ಜ್ಯೋತಿಷ್ಯದಲ್ಲಿ ಹೇಳಲಾಗುವ ಅತ್ಯುತ್ತಮ ಮತ್ತು ಅಪರೂಪದ ಯೋಗಗಳಲ್ಲಿ ಒಂದಾಗಿದೆ. ಅದಕ್ಕಾಗಿ ಇದನ್ನು *ಗುರು ಪುಷ್ಯ ಅಮೃತಸಿದ್ಧಿ ಯೋಗ* ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ, ಗ್ರಹಗಳಲ್ಲೇ ಅತ್ಯಂತ ಶುಭಪ್ರದ ಆಗಿರುವ ಗುರುವನ್ನು ಪುಷ್ಯ ನಕ್ಷತ್ರದ ಪ್ರಧಾನ ದೇವತೆ ಎಂದು ಪರಿಗಣಿಸಲಾಗುತ್ತದೆ. ಗುರುವಾರ ಮತ್ತು ಪುಷ್ಯ ನಕ್ಷತ್ರ ಕಾಕತಾಳೀಯವಾಗಿ ರೂಪುಗೊಂಡ ಈ ಶುಭ ಸಂದರ್ಭವು ಅನೇಕ ಶುಭ ಯೋಗಗಳನ್ನು ಅದರೊಂದಿಗೆ ತಂದಿದೆ. ಈ ಬಾರಿ ಗುರು ಪುಷ್ಯ ಯೋಗವನ್ನು ಆಷಾಢ ಅಮಾವಾಸ್ಯೆ ಅಂದರೆ ಭೀಮನ ಅಮಾವಾಸ್ಯೆ ದಿನದಂದು ಆಚರಿಸಲಾಗುತ್ತಿರುವುದು ಧರ್ಮ ಮತ್ತು ಸಂಪತ್ತಿನ ಬೆಳವಣಿಗೆಗೆ ಬಹಳ ಶುಭವೆಂದು ಹೇಳಲಾಗುತ್ತಿದೆ. ಗುರು ಪುಷ್ಯ ಯೋಗದ ಜೊತೆಗೆ, ಸರ್ವಾರ್ಥ ಸಿದ್ಧಿ ಎಂಬ ಶುಭ ಯೋಗವೂ ಈ ದಿನ ಇರುತ್ತದೆ. ಈ ಕಾರಣದಿಂದಾಗಿ ಈ ದಿನದ ಮಹತ್ವವು ಅನೇಕ ಪಟ್ಟು ಹೆಚ್ಚಾಗಿದೆ. ಈ ಶುಭ ಸಂಯೋಜನೆ ಸಂದರ್ಭದಲ್ಲಿ ಸಂಪತ್ತನ್ನು ಹೆಚ್ಚಿಸಲು ನಾವು ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ನೀವು ಜೀವನದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ, ಈ ದಿನ ನಾವು ಏನು ಮಾಡಬೇಕು..?
                     *​ಧನ ಪ್ರಾಪ್ತಿಗಾಗಿ ಹೀಗೆ ಮಾಡಿ*

ಜ್ಯೋತಿಷ್ಯದ ಪ್ರಕಾರ, ಪುಷ್ಯ ಪೂರ್ಣಿಮಾದೊಂದಿಗೆ ಗುರು ಪುಷ್ಯ ಯೋಗದ ಕಾಕತಾಳೀಯತೆಯಿಂದಾಗಿ ಈ ದಿನ ಲಕ್ಷ್ಮೀ ನಾರಾಯಣನ ಆರಾಧನೆಯೊಂದಿಗೆ ಮಹಾಲಕ್ಷ್ಮಿಗೆ ಕಮಲದ ಹೂವುಗಳನ್ನು ಮತ್ತು ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಬೇಕು. 'ಕಮಲದ ಬೀಜದ ಜಪಮಾಲೆಯೊಂದಿಗೆ' 108 ಬಾರಿ ಈ ಮಂತ್ರವನ್ನು ಪಠಿಸಿ 'ಓಂ ಶ್ರೀಂ ಹ್ರೀಂ ದಾರಿದ್ರ್ಯ ವಿನಾಶಿನ್ಯೇ ಧನಧಾನ್ಯ ಸಮೃದ್ಧಿ ದೇಹಿ ದೇಹಿ ನಮಃ'. ಈ ಶುಭ ಯೋಗದಲ್ಲಿ ಲಕ್ಷ್ಮಿ ಮಂತ್ರವನ್ನು ಪಠಿಸುವುದರಿಂದ, ಧನ ಪ್ರಾಪ್ತಿಯಾಗುವುದು.

              *​ಶಂಖ ಪೂಜೆ ಮತ್ತು ಪ್ರಯೋಜನಗಳು*

ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕಿ ಮತ್ತು ಮುಖ್ಯ ಬಾಗಿಲಿನ ಮುಂದೆ ರಂಗೋಲಿಯನ್ನೂ ಬಿಡಿಸಿ. ಇದರ ನಂತರ, ಮನೆಯಲ್ಲಿ ದಕ್ಷಿಣಾವರ್ತೀ ಶಂಖ ಚಿಪ್ಪನ್ನು ಇಡಿ ಮತ್ತು ಅದರ ಮೇಲೆ ಲಕ್ಷ್ಮಿ ಮಂತ್ರವನ್ನು ಬರೆಯಿರಿ, ಹಾಗೆ ಮಾಡುವುದರಿಂದ ಧನಲಾಭವಾಗುವುದು ಎಂದು ಪರಿಗಣಿಸಲಾಗುತ್ತದೆ ಮತ್ತು ಹಲವು ವರ್ಷಗಳಿಂದ ಕೈಗೆ ಬರಬೇಕಾಗಿದ್ದ ಹಣ ಮರಳಿ ಬರುತ್ತದೆ. ಭಗವಾನ್ ವಿಷ್ಣುವಿನ ಆಯುಧವಾಗಿರುವುದರಿಂದ ಈ ಶಂಖವನ್ನು ಅತ್ಯಂತ ಶಕ್ತಿಯುತವೆಂದು ಹೇಳಲಾಗುತ್ತದೆ. ಇದು ಸಾಲ ಮತ್ತು ಕಾಯಿಲೆಯಿಂದ ಮುಕ್ತಿಯನ್ನು ನೀಡುತ್ತದೆ. ಹಾಗೂ ಆರ್ಥಿಕ ಸಂಕಷ್ಟವೂ ದೂರಾಗುತ್ತದೆ.

*​ಗ್ರಹಗಳು, ನಕ್ಷತ್ರಪುಂಜಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ*

ಗುರು ಪುಷ್ಯ ಯೋಗದಂದು ಅಗ್ರಪೂಜಿತ ಗಣಪತಿ ಮತ್ತು ಜಗದೀಶ ಶಿವನನ್ನೂ ಪೂಜಿಸಿ. ಈ ದಿನ ನೀವು ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ. ಇದನ್ನು ಮಾಡುವುದರಿಂದ, ದುರುದ್ದೇಶಪೂರಿತ ಗ್ರಹಗಳ ಪ್ರಭಾವವು ಶಾಂತವಾಗುತ್ತವೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತವೆ. ಇದರೊಂದಿಗೆ, ನಿಮ್ಮ ಕೆಲಸಗಳಲ್ಲಿನ ಅಡಚಣೆಯನ್ನು ಸಹ ತೆಗೆದುಹಾಕಲಾಗುತ್ತದೆ ಮತ್ತು ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಈ ದಿನ, ನೀವು ಹಳದಿ ವಸ್ತುಗಳನ್ನು ದಾನ ಮಾಡಬಹುದು ಮತ್ತು ಸಂಜೆ ಸಮಯದಲ್ಲಿ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು.

        *​ಗುರುವು ಶುಭ ಫಲವನ್ನು ನೀಡುವನು*
                                                                                                      ನಿಮ್ಮ ಜಾತಕದಲ್ಲಿ ಗುರು ದೋಷವಿದ್ದರೆ, ಈ ದಿನ ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ ನಂತರ ಭಗವಾನ್‌ ವಿಷ್ಣುವಿನೊಂದಿಗೆ ಲಕ್ಷ್ಮೀ ದೇವಿಯನ್ನು ಕೂಡ ಪೂಜಿಸಬೇಕು. ಇದರ ನಂತರ ವಿಷ್ಣು ಸಹಸ್ರನಾಮವನ್ನು ಪಠಿಸಿ. ಹಳದಿ ಬಣ್ಣದ ವಸ್ತುವನ್ನು ಮತ್ತು ಕಡಲೆ ಬೇಳೆಯನ್ನು ದಾನ ಮಾಡಿ. ಅಲ್ಲದೆ, ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿ. ಈ ದಿನ ಯಾರಿಂದಲೂ ಸಾಲ ಪಡೆಯಬಾರದು ಅಥವಾ ಕೊಡಬಾರದು ಎಂಬುದನ್ನು ನೆನಪಿನಲ್ಲಿಡಿ. ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

              *ಐಶ್ವರ್ಯ ಹೆಚ್ಚಾಗುತ್ತದೆ*
                                                                                                                                                                         ಗುರು ಪುಷ್ಯ ಯೋಗದ ದಿನ, ಕೆಂಪು ಹಸುವಿಗೆ ಬೆಲ್ಲ ಮತ್ತು ಸಿಹಿ ಬ್ರೆಡ್ ನೀಡಿ. ಇದನ್ನು ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ, ಈ ಶುಭ ಕಾಕತಾಳೀಯದಲ್ಲಿ, ಸಂಪತ್ತು ಮತ್ತು ಸಂಪತ್ತನ್ನು ಹೆಚ್ಚಿಸಲು ಶ್ರೀಯಂತ್ರವನ್ನು ಮನೆಗೆ ತರುವುದು ಅತ್ಯಂತ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ಶುಭ ಫಲಿತಾಂಶಗಳಿಗೆ ಕಾರಣವಾಗುವುದಲ್ಲದೆ, ಲಕ್ಷ್ಮೀ ದೇವಿಯೂ ಆಶೀರ್ವದಿಸುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ.

      *​ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುವುದು*
         ‌ ಈ ಶುಭ ದಿನದಂದು ಲಕ್ಷ್ಮೀ ಸ್ತೋತ್ರ ಮತ್ತು ಕನಕಧಾರಾ ಸ್ತೋತ್ರವನ್ನು ಸಹ ಪಠಿಸಬೇಕು. ಈ ಸ್ತೋತ್ರವನ್ನು ಪಠಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಈ ಸ್ತೋತ್ರವನ್ನು ಓದುವುದರಿಂದ ಮತ್ತು ಕೇಳುವುದರಿಂದ ಹಣ ಮತ್ತು ಧಾನ್ಯದ ಕೊರತೆ ಉಂಟುಮಾಡುವುದಿಲ್ಲ ಮತ್ತು ನಿಮ್ಮ ಸುತ್ತ ಸಕಾರಾತ್ಮಕ ಶಕ್ತಿಯ ಹರಿವು ರೂಪುಗೊಳ್ಳುತ್ತದೆ. ಅವುಗಳನ್ನು ನಿಯಮಿತವಾಗಿ ಪಠಿಸುವ ಮೂಲಕ, ಒಬ್ಬರು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾರೆ. ಅವುಗಳನ್ನು ಪಠಿಸುವುದರಿಂದ ಶತ್ರುಗಳಿಂದ ಸ್ವಾತಂತ್ರ್ಯವೂ ಸಿಗುತ್ತದೆ.

 ಪುಷ್ಯ ನಕ್ಷತ್ರ ಶುಭ ಸಮಯ :

  ಪುಷ್ಯ ನಕ್ಷತ್ರ ಪ್ರಾರಂಭ ಸಮಯ : *ಜುಲೈ 28, ಗುರುವಾರ ಹಗಲು 07:03 ಗಂಟೆಗೆ*
 ‌ ‌ ‌ಪುಷ್ಯ ನಕ್ಷತ್ರ ಅಂತ್ಯ ಸಮಯ : *ಜುಲೈ 29, ಶುಕ್ರವಾರ ಹಗಲು 09:45 ಗಂಟೆಯವರೆಗೆ*
[28/07, 7:37 AM] Pandit Venkatesh. Astrologer. Kannada: ಅಮಾವಸ್ಯೆಯ ಅಧಿದೇವತೆ ಕುಹೂ ದೇವಿಗೆ ಪ್ರಣಾಮಗಳು.
ಓಂ ಮಹಾದೇವೀಂ ನಿಶಾಚಾರಿಂ ರುದ್ರಭಯಂಕರಂ ಸಕಲಜೀವರಕ್ಷಿತಂ ಕುಹೂದೇವೀಂ ಪ್ರಣಮಾಮ್ಯಹಂ.

ಓಂ ಕೃಷ್ಣಸುಂದರೀಂ ಕಳಾಪೂರ್ಣವದನಂ ಮಹಾಚೈತನ್ಯದೇಹಂ ಸುಂದರಾತಿಸುಂದರಂ ಕುಹೂದೇವೀಂ ಪ್ರಣಮಾಮ್ಯಹಂ

ಓಂ ವರದಾಯಕಂ ಮಹಾರಕ್ಷಂ ಭಕ್ತಸೌಭಾಗ್ಯಂ ಸರ್ವಾರೋಗ್ಯಪ್ರದಾಯಕಂ ಕುಹೂದೇವೀಂ ಪ್ರಣಮಾಮ್ಯಹಂ
ಓಂಕುಹೂಓಂ
[28/07, 8:13 AM] Pandit Venkatesh. Astrologer. Kannada: #ಬ್ರಾಹ್ಮೀ_ಮುಹೂರ್ತವೆಂದರೆ_ಏನು.
#ಬೆಳಿಗ್ಗೆ_ಯಾಕಾಗಿ_ಬೇಗ_ಏಳಬೇಕು.
     ಸ್ನೇಹಿತರೆ, ನಾವು ಪ್ರತಿದಿನ ಬೆಳಿಗ್ಗೆ ಯಾವಾಗ ಏಳಬೇಕು? ಇದೊಂದು ಸಹಜ ಪ್ರಶ್ನೆ.  
ಮುಖ್ಯವಾಗಿ ಸೂರ್ಯೋದಯಕ್ಕೆ ಮೊದಲು ನಾವು ಏಳಬೇಕು. ಈ ನಿಯಮವನ್ನು ಹಾಕಿಕೊಂಡು ಅದನ್ನು ತಪ್ಪದೇ ಪಾಲಿಸಬೇಕು. 
ಮನುಸ್ಮೃತಿಯಲ್ಲಿ ಈ ರೀತಿ ಹೇಳಿದೆ. ನೋಡಿ.

"ಬ್ರಾಹ್ಮೇ ಮುಹೂರ್ತೇ ಯಾ ನಿದ್ರಾಸಾ ಪುಣ್ಯಕ್ಷಯಕಾರಿಣೀ
ಬ್ರಾಹ್ಮೇ ಮುಹೂರ್ತೇ ಬುದ್ಧ್ಯೇತ ಧರ್ಮಾರ್ಥೌ ಚಾನುಚಿಂತಯೇತ್" ||

ಇದರ ಅರ್ಥ-- ಬ್ರಾಹ್ಮೀ ಮುಹೂರ್ತದಲ್ಲಿ ನಿದ್ದೆ ಮಾಡುವುದರಿಂದ ನಾವು ಗಳಿಸಿದ ಪುಣ್ಯ ನಾಶವಾಗುತ್ತದೆ. ಆದ್ದರಿಂದ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಧರ್ಮಾರ್ಥಗಳನ್ನು ಚಿಂತಿಸಬೇಕು. 
ಬ್ರಾಹ್ಮೀ ಮುಹೂರ್ತವೆಂದರೆ ಸೂರ್ಯೋದಯಕ್ಕಿಂತ ಒಂದು ಯಾಮ ಮೊದಲಿನ ಅವಧಿ. ಒಂದು ದಿನಕ್ಕೆ ಎಂಟು ಯಾಮಗಳು. ಒಂದು ಯಾನಕ್ಕೆ ಮೂರು ತಾಸುಗಳು. ಆದ್ದರಿಂದ ಬ್ರಾಹ್ಮೀ ಮುಹೂರ್ತವೆಂದರೆ ಸೂರ್ಯೋದಯಕ್ಕಿಂತ ಮೂರು ತಾಸು ಮೊದಲಿನ ಅವಧಿ. ಅಂದರೆ ನಸುಕಿನ ಸುಮಾರು ಮೂರು ಗಂಟೆಯಿಂದ ಆರು ಗಂಟೆಯ ಒಳಗಿನ ಅವಧಿ. ಅದರಲ್ಲೂ ಪ್ರಶಸ್ತವಾದ ಕಾಲ ನಸುಕಿನ ಮೂರು ಗಂಟೆಯ ಸಮಯ. ಆಗ ಏಳಬೇಕು ಎನ್ನುತ್ತದೆ. ಯಾಕೆಂದರೆ ಸ್ಪಷ್ಟವಾಗಿ ಬ್ರಾಹ್ಮೀ ಮುಹೂರ್ತವೆಂದರೆ ರಾತ್ರಿಯ ಕೊನೆಯ ಯಾಮದ ಮೊದಲ ಅರ್ಧ ಭಾಗ ಎಂದು ಹೇಳಲಾಗಿದೆ. ಈ ಶ್ಲೋಕ ಇದು ಕಾಶೀಖಂಡ ಎಂಬ ಗ್ರಂಥದಲ್ಲಿ ಬರುತ್ತದೆ.

ಬ್ರಾಹ್ಮ ಮುಹೂರ್ತಃ ರಾತ್ರೇಃ ಪಶ್ಚಿಮೋ ಯಾಮಃ ರಜನೀ ಪ್ರಾತರ್ಯಾಮಾರ್ಧಃ ಬ್ರಾಹ್ಮಃ ಸಮಯ ಉಚ್ಯತೇ ಇತಿ ಕಾಶೀಖಂಡಃ ||
ಅಂದರೆ ಏಳಲು ಪ್ರಶಸ್ತ ಕಾಲ ನಸುಕಿನ ಮೂರರಿಂದ ನಾಲ್ಕೂವರೆಯ ನಡುವಿನ ಅವಧಿ. ಅದು ಬ್ರಾಹ್ಮೀ ಮುಹೂರ್ತ. 
" ಬೇಗ ಮಲಗಿ ಬೇಗ ಏಳು " ಎಂಬ ಒಂದು ಗಾದೆಯಮಾತಿದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಆ ಮಾತಿನ ಅರ್ಥ. ಮುಂಜಾವಿನ ಸಮಯ ಆರೋಗ್ಯಕ್ಕೆ ತುಂಬ ಒಳ್ಳೆಯದು. ಆಗ ವಾತಾವರಣದಲ್ಲಿ ವಿಪುಲವಾಗಿ ಶುದ್ಧ ಸಂಸ್ಕರಿಸಲ್ಪಟ್ಟ ಹವಾಮಾನವಿರುತ್ತದೆ. ಅದರಲ್ಲಿ ಪ್ರಾಣವಾಯು ತುಂಬ ಶುದ್ಧವಾಗಿರುತ್ತದೆ. ನಿಸರ್ಗವೂ ಪ್ರಶಾಂತ ಮತ್ತು ರಮಣೀಯವಾಗಿರುತ್ತದೆ. ತಂಪಾಗಿರುತ್ತದೆ. ಮಂದ ಮಾರುತ ಬೀಸುತ್ತಾ ಆಗತಾನೇ ಅರಳುವ ಹೂವುಗಳ ಪರಿಮಳವನ್ನು ಎಲ್ಲೆಡೆ ಪಸರಿಸುತ್ತ ಧಾವಿಸುತ್ತದೆ. ಅಂತಹ ವಾತಾವರಣದಲ್ಲಿ ನಮ್ಮ ಶರೀರ ಮತ್ತು ಮನಸ್ಸು ಎರಡೂ ಮುದಗೊಂಡು ಆ ದಿನದ ಚಟುವಟಿಕೆಗಳಿಗೆ ಲವಲವಿಕೆಯಿಂದ ಸಿದ್ಧವಾಗುತ್ತವೆ. ಅಲ್ಲದೆ ಬೇಗ ಎದ್ದಾಗ ನಮಗೆ ಸಾಕಷ್ಟು ಸಮಯ ದೊರೆತು, ನಮ್ಮ ಮುಂಜಾನೆಯ ನೈಮತ್ತಿಕ ಕಾರ್ಯಗಳು, ಶೌಚ ಇತ್ಯಾದಿಗಳಿಗೆ ಸಾಕಷ್ಟು ಸಮಯ ಸಿಗುತ್ತದೆ. ಗಡಿಬಿಡಿಯಿಂದ ಮಾಡಿ ಮುಗಿಸಿ ಮಾನಸಿಕವಾಗಿ ಅಶೌಚವಾಗಿಯೇ ಇದ್ದ ಭಾವನೆ ಇರುವುದಿಲ್ಲ. ಮನಸ್ಸು ನೆಮ್ಮದಿಯಿಂದ ಇರುತ್ತದೆ.  

ಆದ್ದರಿಂದ ಬೆಳಿಗ್ಗೆ ಕನಿಷ್ಠ ಐದು ಗಂಟೆಗಾದರೂ ಏಳುವ ಪ್ರಯತ್ನ ಮಾಡೋಣ. ಕೆಲಸಮಯದ ನಂತರ ಏಳುವ ಸಮಯ ಐದರಿಂದ ಹಿಂದಕ್ಕೆ ಸ್ವಲ್ಪ ಸ್ವಲ್ಪವಾಗಿ ಸರಿಸುತ್ತ ನಾಲ್ಕು ಅಥವಾ ನಾಲ್ಕುವರೆಗೆ ಏಳುವ ಅಭ್ಯಾಸ ಮಾಡೋಣ. ಎದ್ದ ಕೂಡಲೇ ಎರಡು ಅಂಗೈಗಳನ್ನು ಒಂದಕ್ಕೊಂದು ಉಜ್ಜಿಕೊಂಡು ಆಮೇಲೆ ಅವುಗಳನ್ನು ನೋಡುತ್ತಾ ಈ ಶ್ಲೋಕವನ್ನು ಹೇಳಬೇಕು. 
 " ಕರಾಗ್ರೇ ವಸತಿರ್ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಮಿತೆ ಗೌರೀ ಪ್ರಭಾತೇ ಕರದರ್ಶನಮ್ " 
ಹೀಗೆ ಅಂಗೈಗಳನ್ನು ಉಜ್ಜುವುದರಿಂದ ಶರೀರದಲ್ಲಿಯ ನರಗಳು ಬಿಸಿಯಾಗಿ ರಕ್ತ ಸಂಚಾರ ಸರಾಗವಾಗುತ್ತದೆ. ಅಲ್ಲದೆ ಕತ್ತಲೆಯಲ್ಲಿಯೇ ನಿಸರ್ಗದಲ್ಲಿ ದೂರದ ವರೆಗೆ ಕಣ್ಣುಗಳ ದೃಷ್ಟಿಯನ್ನು ಕೆಲ ನಿಮಿಷಗಳ ವರೆಗೆ ಹಾಯಿಸಬೇಕು. ಅಂದರೆ ದೂರದವರೆಗೆ ಕತ್ತಲೆಯಲ್ಲಿಯೇ ನೋಡುತ್ತಿರಬೇಕು. ಕಣ್ಣುಗಳ ಆರೋಗ್ಯಕ್ಕೆ ಇದು ತುಂಬ ಒಳ್ಳೆಯದು. ಮುಂಜಾವಿನ ವಾಯುವಿಹಾರವೂ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇವೆಲ್ಲವನ್ನು ಮಾಡಲು ವಿಶೇಷ ಶಕ್ತಿಯನ್ನಾಗಲಿ ಶ್ರಮವನ್ನಾಗಲೀ ವ್ಯಯಿಸಬೇಕಿಲ್ಲ. ಕೇವಲ ಮಾನಸಿಕಸಿದ್ಧತೆಯಿದ್ದರಾಯಿತು  
 #ಬೇಗ ಏಳಲು ರಾತ್ರೆ ಯಾವಾಗ ಮಲಗಬೇಕು? ಸಾಮಾನ್ಯವಾಗಿ ನಮಗೆ ಆರರಿಂದ ಎಂಟು ತಾಸಿನ ನಿದ್ದೆ ಬೇಕು. ಅದಕ್ಕೆ ಅನುಸಾರವಾಗಿ ರಾತ್ರೆ ಸಾಮಾನ್ಯವಾಗಿ ಒಂಬತ್ತರಿಂದ ಹತ್ತು ಗಂಟೆಯ ಒಳಗೆ ಮಲಗಬಹುದು.  
" ಸುಸ್ಥಿರ ಆರೋಗ್ಯೇನ ಜೀವಂತು ಶರದಾಮ್ ಶತಾಮ್ " ಎಂಬ ಮಾತಿನಂತೆ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡೋಣ. ಮನೆಯಲ್ಲಿಯ ಮಕ್ಕಳಿಗೂ ಇದರ ಅಭ್ಯಾಸವಾಗುವಂತೆ ನೋಡಿಕೊಳ್ಳೋಣ.
ದಿಗ್ವಿಜಯ ಲಕ್ಷ್ಮಿನರಸಿಂಹಸ್ವಾಮಿ ಸನ್ನಿಧಿ🙏🙏
ಸತ್ಸಂಗ ಸಂಗ್ರಹ.🙏🙏🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏
[28/07, 1:15 PM] Pandit Venkatesh. Astrologer. Kannada: 🌸🕉️🌸

ಆದಿಪರಾಶಕ್ತಿ
ಜಗತ್ತಿನ ಮೂಲ ಕಾರಣಗಳು. ಓಂಕಾರ ಪರಬ್ರಹ್ಮ ಸ್ವರೂಪಳು. ಅವಳು ಮೂರು ರೂಪದಲ್ಲಿ ವ್ಯಕ್ತವಾಗುತ್ತಾಳೆ. ಆದ್ದರಿಂದಲೇ ಆಕೆ ತ್ರಿಗುಣಾತ್ಮಿಕೆ.

ಮಹಾಕಾಳಿ
ಕಪ್ಪುಬಣ್ಣ, ಉಗ್ರರೂಪ, ಜಗತ್ತಿನದೋಷಗಳನ್ನು ತಾನು ನುಂಗಿ, ಒಳಿತನ್ನು ಹಂಚುತ್ತಾಳೆ.

ಮಹಾಲಕ್ಷ್ಮಿ
ಕೆಂಪುಬಣ್ಣ, ಸುಂದರರೂಪ, ಇಡೀ ಜಗತ್ತಿನ ಸಂಪತ್ತಿಗೆ ಒಡತಿ‌. ಅಂದರೆ ಬ್ರಹ್ಮಾಂಡದ ಒಡತಿ. ಅದಕ್ಕೇ ಅವಳು ಶ್ರೀ ಲಕ್ಷ್ಮಿ.

ಮಹಾ ಸರಸ್ವತೀ
ಬಿಳೀ ಬಣ್ಣ, ಅತಿಸೌಮ್ಯರೂಪ. ಪರಬ್ರಹ್ಮಜ್ಞಾನಸ್ವರೂಪಿಣಿ. ಜ್ಞಾನ ದಾತ್ರಿ.

ಶಕ್ತಿ-ಸಂಪತ್ತು-ಜ್ಞಾನ ಬದುಕಿಗೆ ಆಧಾರ, ಬ್ರಹ್ಮಾಂಡದ ಮೂಲಗುಣ.
[28/07, 1:15 PM] Pandit Venkatesh. Astrologer. Kannada: *ಸ್ನೇಹಿತರೆ ಪಾಸಿಟಿವ್ ಕೇತು ಬಗ್ಗೆ ಹೆಚ್ಚಿನ ಮಾಹಿತಿ ನಿಮಗಾಗಿ*

🔱 ನಿಮ್ಮ ಕೇತುವನ್ನು ನೀವು ಪಾಸಿಟಿವ್ ಮಾಡಿದಾಗ ಅವನು ಉತ್ತಮ ಫಲಿತಾಂಶಗಳನ್ನು ನೀಡುತ್ತಾರೆ.
 
🔱 ಕೆಲವೊಮ್ಮೆ ನೀವು ಮೌನವಾಗಿರುತ್ತೀರಿ ಮತ್ತು ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ.

 🔱ನೀವು ದೇವರನ್ನು ಪೂಜಿಸಲು ತುಂಬಾ ಸಮಯ ಕಳೆದರೂ ಅದನ್ನು ನೀವು ತೋರಿಸಿ ಕೊಳ್ಳುವುದಿಲ್ಲ. ಅಥವಾ ಹೇಳಿ ಕೊಳ್ಳಲು ಇಷ್ಟಪಡುವುದಿಲ್ಲ.

🔱ಕೇತು ಚೆನ್ನಾಗಿ ಇದ್ದರೆ ನೀವು ಸಾಕುಪ್ರಾಣಿಗಳನ್ನು ತುಂಬಾನೇ ಇಷ್ಟಪಡುತ್ತೀರಿ. ಅದು ವಿಶೇಷವಾಗಿ ನಾಯಿಗಳು.

🔱 ಶ್ವಾನ ಪ್ರೇಮಿಗಳು ಯಾವಾಗಲೂ ಕೇತುವಿನಿಂದ ಆಶೀರ್ವದಿಸಲ್ಪಡುತ್ತಾರೆ.

 🔱ಕೆಲವೊಮ್ಮೆ ನೀವು ಇದ್ದಕ್ಕಿದ್ದಂತೆ ಆಸ್ತಿ ಅಥವಾ ಹಣವನ್ನು ಗಳಿಸುತ್ತಿರಿ.

 🔱 ಕೇತು ಚೆನ್ನಾಗಿ ಇದ್ದರೆ ನಿಮ್ಮ ಗುಪ್ತ ಶತ್ರುಗಳು ನಿಮ್ಮ ಮುಂದೆ ಶರಣಾಗುತ್ತಾರೆ.

🔱 ಕೆಲವೊಮ್ಮೆ ನಿಮ್ಮ ಶತ್ರುಗಳ ಮೂಲಕ ಕೂಡ ನೀವು ಲಾಭವನ್ನೂ ಪಡೆಯುವಿರಿ.

 🔱 ಕೇತು ಚೆನ್ನಾಗಿದ್ದಾಗ ವಿಧವೆಯೊಂದಿಗೆ ಅಥವಾ ವಿಚ್ಛೇದನ ಪಡೆದ ಸ್ತ್ರೀ ಯ ಜೋತೆ ಉತ್ತಮ ಸಂಬಂಧ ಅಥವಾ ಅವರಿಂದ ಒಳ್ಳೆಯ ಸಹಾಯ ಪಡೆಯುತ್ತೀರಿ.

🔱ಕೇತು ಚೆನ್ನಾಗಿದ್ದರೆ ನಮ್ಮ ಅಂತಃಪ್ರಜ್ಞೆಯು ಚೆನ್ನಾಗಿ ಕೆಲಸ ಮಾಡುತ್ತದೆ.

🔱ಕೇತು ಚೆನ್ನಾಗಿದ್ದಾಗ ಇದ್ದಕ್ಕಿದ್ದಂತೆ ನಾವು ನಮ್ಮ ಜೀವನದಲ್ಲಿ ಒಬ್ಬ ಗುರು ಅಥವಾ ಮಹಾನ್ ಆಧ್ಯಾತ್ಮಿಕ ಗುರುವನ್ನು ಭೇಟಿಯಾಗುತ್ತೇವೆ.
[28/07, 1:15 PM] Pandit Venkatesh. Astrologer. Kannada: ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು..

"ಕಲಶದ ವೀಳ್ಯದೆಲೆ"ಯನ್ನು, ಪೂಜೆಯ ನಂತರ ಏನು ಮಾಡಬೇಕು..?

ಕಲಶದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮಾತ್ರ ಹಾಕಿಕೊಳ್ಳಬೇಕು..
(ಹಿರಿಯರು ಯಾರು ಯಾರು ಎಂದು ತಿಳಿದು ಮಾಡಿ)
ಬೇರೆಯವರು ಹಾಕಿಕೊಳ್ಳಬಾರದು..
ಮಗಳು ಅಳಿಯ ಇದ್ದರೆ ಹಾಕಿಕೊಳ್ಳಬಹುದು ..

ಕಲಶದ ವೀಳ್ಯದೆಲೆಯನ್ನು ಒಣಗಿಸಿದರೆ(ಕೆಲವು ವಿಶೇಷ ಸಮಯದಲ್ಲಿ ಜಾಸ್ತಿದಿನ ಇರುತ್ತದೆ, ತೊಂದರೆ ಇಲ್ಲ) , ಅಥವಾ ಕಸದಲ್ಲಿ ಗುಡಿಸಿದರೆ..
ಆ ಮನೆಗೆ ದಾರಿದ್ರ್ಯ ಬಂದು ಬಿಡುತ್ತದೆ..
ಕಲಶದೇವಿಯ ಶಾಪವಾಗಿ ಆ ಮನೆಯಲ್ಲಿ ಸಂಪಾದಿಸಿದ ಹಣ ಬೇರೆಯವರ ಪಾಲಾಗಿ, ತುಂಬಾ ಕಷ್ಟದ ಜೀವನ ಮಾಡುತ್ತೀರಿ..
ಸಾಲದಭಾದೆ ಇಂದ ನರಳುವಿರಿ..
ಶತೃಭಾಧೆ ಜಾಸ್ತಿಯಾಗುತ್ತದೆ ..

ಪೂಜಿಸಿದ ಕಲಶದ ವೀಳ್ಯದೆಲೆಯನ್ನು ತುಳಸೀ ಕಟ್ಟೆಗೆ ಹಾಕಿದರೆ,
ಅವರು ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ ..
ಬಹಳ ತೇಜೋವಂತರೂ ಕಾಂತಿವಂತರೂ ಆಗಿ, ನೆಮ್ಮದಿಯ ಜೀವನ ಮಾಡುತ್ತಾರೆ..
ಸರ್ವ ತೀರ್ಥಗಳೂ ತುಳಸಿಯಲ್ಲಿ ಇರುವುದರಿಂದ ಸರ್ವ ಶ್ರೇಷ್ಠ..
(ಯಾವ ಸಮಯದಲ್ಲಿ ಹಾಕಬೇಕು, ಯಾರು ಹಾಕಬೇಕು ತಿಳಿದು ಮಾಡಿ)

ಕಲಶದ ವೀಳ್ಯದೆಲೆಯನ್ನು ಪೂಜ್ಯ ಭಾವನೆಯಿಂದ , ಕುಲದೇವತಾ ಸ್ಮರಣೆ ಮಾಡಿ, ಹರಿಯುವ ನದಿಯಲ್ಲಿ ಬಿಟ್ಟರೆ ,
ಪೂಜಿಸಿದ ದೇವರು, ಕಲಶದ ದೇವರು, ಕುಲದೇವರ ಆಶೀರ್ವಾದ ಎಂದೆಂದೂ ಇದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ..
(ಪೂರ್ವವಾಹಿನಿ, ಉತ್ತರವಾಹಿನಿ ನದಿಗಳಲ್ಲಿ ಮಾತ್ರ ಬಿಡಬೇಕು)
ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ..
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದು ಎಲ್ಲರೂ ಆರೋಗ್ಯವಂತರಾಗಿರುತ್ತಾರೆ..

ಕಲಶಕ್ಕೆ ಬಿಳೀ ವೀಳ್ಯದೆಲೆ ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ ..
ದಟ್ಟದಾರಿದ್ಯ ಅನುಭವಿಸುತ್ತಿರಿ .

ಕಲಶಕ್ಕೆ ಇಡೋ ವೀಳ್ಯದೆಲೆ ಹಸಿರು ಬಣ್ಣದ್ದಾಗಿರಬೇಕು..
ಎಳೆಯ ವೀಳ್ಯದೆಲೆ ಆಗಿರಬೇಕು..
ಹಸ್ತದ ಆಕಾರ ಇರಬೇಕು..
ಭಿನ್ನವಾಗಿರಬಾರದು..
[28/07, 1:15 PM] Pandit Venkatesh. Astrologer. Kannada: 🌹ಓಂ ನಮಃ ಶಿವಾಯ 🌹
*ಪೂರ್ವ ಜನ್ಮದ ಸುಕೃತಗಳು*

*ಆಯುಃ ಕರ್ಮ ಚ ವಿತ್ತಂಚ ವಿದ್ಯಾ ನಿಧನಮೇವ ಚ |*
*ಪಂಚೈತಾನಿ ಹಿ ಸೃಜ್ಯಂತೆ*
*ಗರ್ಭಸ್ಥಸ್ಯೈವ ದೇಹಿನಃ॥*.

(೧)ಆಯುಷ್ಯ,   
(೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ,
  (೩)ಹಣ,
    (೪)ಗಳಿಸಬಹುದಾದ ವಿದ್ಯೆ
        (೫) ಮರಣ.
ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಣಯವಾಗಿರುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳಿಗೆ ಅನುಗುಣವಾಗಿ ನೀಚ- ಉಚ್ಚ , ಬಡವ- ಬಲ್ಲಿದ, ಸಾಕ್ಷರ- ನಿರಕ್ಷರ, ರೋಗಿ ನಿರೋಗಿ ಜನ್ಮ ಬರುವದೆಂದು ನಂಬಲಾಗುತ್ತದೆ.
ಅದರ ವಿವರವನ್ನು ಈ ಸುಭಾಷಿತದಲ್ಲಿ ಕಾಣ ಬಹುದು.

*ಮೊದಲನೆಯದಾಗಿ ಆಯುಷ್ಯ.*

 ಇಂಥ ವ್ಯಕ್ತಿಗೆ ಇಷ್ಟೇ ಆಯುಷ್ಯ ,
ಇಂಥಲ್ಲಿ ಹೀಗೇ ಮರಣ ಎಂದು ಗರ್ಭದಲ್ಲಿರುವಾಗಲೇ
ಬರೆಯಲ್ಪಡುತ್ತದೆ.
ಈ ಹಣೆಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ.

*ಕರ್ಮ* 
    ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯ ಕರ್ಮಗಳು .ಇವು ನೆರಳಿನಂತೆ ಮುಂದಿನ ಜನ್ಮದಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ಕರು ಸಾವಿರಾರು ಹಸುಗಳಲ್ಲಿ ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗುವಂತೆ ಪೂರ್ವಾರ್ಜಿತ ಕರ್ಮಗಳು ನಮ್ಮನು ಬೆಂಬೆತ್ತಿ ಬರುತ್ತವೆ.

*ಹಣ*

ಲಕ್ಷ್ಮಿ ಚಂಚಲೆ. ಎಲ್ಲೂ ಕಾಲೂರಿ ನಿಂತವಳಲ್ಲ. ಒಮ್ಮೆ ಏರಿಸುತ್ತಾಳೆ. ದಿಢೀರನೆ ಕೆಡವುತ್ತಾಳೆ. ತಮ್ಮ ಜೀವನದಲ್ಲಿ ಅನೇಕ ಜನ ಕೃಷಿ,ವಾಣಿಜ್ಯೋದ್ಯಮ ,ಕೈಗಾರಿಕೆ ಮುಂತಾದುವುಗಳ ಮೂಲಕ ಶ್ರೀಮಂತರಾಗಲು ಹೊರಟು ಭಾರೀ ಸೋಲುಂಡವರನ್ನು ಕಾಣುತ್ತೇವೆ.
ಆತ ಪಡೆದದ್ದು ಉಣ್ಣಬೇಕೆ ಹೊರತು ದುಡಿದದ್ದಲ್ಲ.ಇದನ್ನೇ .ಕವಿವಾಣಿ ಹೇಳುವುದು

*"ಸಿರಿಯದು ನೀರಿನ ತೆರೆಯಂತೆ*
  *ಜೀವನ ಮಿಂಚಿನ ಸೆಳಕಂತೆ*
   *ಅರಿತಿದ ನಡೆ ನೀ ನಿನ್ನಂತೆ*
     *ಅಳಿದೂ ಉಳಿಯುವ ತೆರನಂತೆ......*
ಎಂದು ನಮ್ಮನ್ನು ಎಚ್ಚರಿಸಿದೆ.

*ಶುಚೀನಾಂ ಶ್ರೀಮತಾಂ ಗೇಹೆ ಯೋಗಭ್ರಷ್ಟೋ ಅಭಿಜಾಯತೇ*
ಅಂದರೆ ಯೋಗಿಯಾಗ ಹೊರಟು ಪೂರ್ಣ ಸಿದ್ಧಿ ಪಡೆಯಲಾಗದೇ ಮಡಿದವನು ಮುಂದಿನ ಜನ್ಮದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸುತ್ತಾನೆ ಎಂದು ಗೀತೆ ಸಾರುತ್ತದೆ.

*ವಿದ್ಯೆ*

ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ಯಾವಂತನಾಗಲು ಹೊರಟು ಅಲ್ಲಿ 
ಸಫಲತೆ ಯನ್ನು ಪಡೆಯದೇ ಹೋದವನು , ಆ ಸಂಸ್ಕಾರ ಬಲ ದಿಂದ ಮುಂದಿನ ಜನ್ಮದಲ್ಲಿ ಹುಟ್ಟಿನಿಂದಲೇ ಪ್ರತಿಭಾವಂತನಾಗಿ ಜನಿಸುತ್ತಾನೆ. ಒಂದೇ ತರಗತಿಯಲ್ಲಿ ಓದುವ ಮಕ್ಕಳಲ್ಲಿ ಅಜ-ಗಜಾಂತರವಿರುವುದನ್ನು ಕಾಣುತ್ತೇವೆ. ಅದಕ್ಕೆ ಪೂರ್ವ ಜನ್ಮದ
ಸಂಸ್ಕಾರ ಹಾಗೂ ಅದರ ಅಭಾವವೇ ಕಾರಣ.

*ಮರಣ* 
ಮರಣವೂ ಅಷ್ಟೆ.ಇಂಥವನಿಗೆ ಹೀಗೆ , ಇಂಥಲ್ಲಿಯೇ ಮರಣವೆಂಬುದು ಮೊದಲೇ ಬರೆದಿರುತ್ತದೆ...!!!
ಆದ್ದರಿಂದ ಮುಂದೆ ಒಳ್ಳೆಯ ಜನ್ಮ ,ದೀರ್ಘ ಆಯುಷ್ಯ ,ಆರೋಗ್ಯ , ವಿದ್ಯೆ , ವಿತ್ತ,(ಹಣ)ಎಲ್ಲವೂ ಬೇಕೆಂದು ಬಯಸುವವರು.. ಈ ಜನ್ಮದಲ್ಲೇ ಎಚ್ಚೆತ್ತು ಒಳ್ಳೆಯ ಕಾರ್ಯದಲ್ಲಿ ನಿರತರಾಗುವುದು ಒಳಿತು.
🙏🙏🙏🙏🙏🙏🙏🙏🙏
[28/07, 1:15 PM] Pandit Venkatesh. Astrologer. Kannada: ತೆಂಗಿನಕಾಯಿ ಮತ್ತು ವಿಶೇಷತೆ"..

ಧರ್ಮಶಾಸ್ತ್ರಗಳಲ್ಲಿ ಹೇಳಿದೆ. "ತಾಂಬೂಲದ ಜೊತೆ ತೆಂಗಿನಕಾಯಿ ಇಟ್ಟು ದಾನ ಮಾಡಿದರೆ "ಅಶ್ವಮೇಧಯಾಗದ " ಫಲ ಬರುತ್ತದೆ..

ತೆಂಗಿನಕಾಯಿಯಲ್ಲಿ 5 ತರಹ ಇದೆ..

1. ಎಳನೀರು ಕಾಯಿ..
2. ಸಿಪ್ಪೆ ಸುಲಿದ ತೆಂಗಿನಕಾಯಿ ..
3. ಒಣಕೊಬ್ಬರಿ ಕಾಯಿ..
4. ಶ್ರೀಫಲ
5. ವಿಶೇಷ ತೆಂಗಿನಕಾಯಿ ..

ಶ್ರೀಫಲ : ಇದು ಸಮುದ್ರ ದಂಡೆಯ ಮೇಲೆ ದೊರಕುವ ಅಪರೂಪದ "ತೆಂಗಿನಕಾಯಿ ಆಕಾರದ ಚಿಕ್ಕ ಫಲ. ಇದನ್ನು ಮನೆಯಲ್ಲಿ ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟು ಪೂಜಿಸಿದರೆ, ಧನಕನಕ ಅಭಿವೃದ್ಧಿಯಾಗುತ್ತದೆ.., ಬಡತನ ನಿವಾರಣೆಯಾಗಿ, ಶ್ರೀಮಂತಿಕೆ ಪ್ರಾಪ್ತಿಯಾಗುತ್ತದೆ...

ವಿಶೇಷ ತೆಂಗಿನಕಾಯಿಗಳು ಅಂದರೆ ಗರ್ಭ ತೆಂಗಿನಕಾಯಿ, ಪೂರ್ಣಫಲ.. ಇತ್ಯಾದಿ. ಗರ್ಭ ತೆಂಗಿನಕಾಯಿ ಅಂದರೆ, ತೆಂಗಿನಕಾಯಿ ಒಳಗೆ ಮತ್ತೊಂದು ಚಿಕ್ಕ ತೆಂಗಿನಕಾಯಿ ಇರೋದಕ್ಕೆ ಗರ್ಭತೆಂಗಿನಕಾಯಿ ಅಂತಾರೆ..

1. ಎಳನೀರು ಕಾಯಿಯನ್ನು ಪೂಜಿಸಿದರೆ ದೈವಬಲ ಜಾಸ್ತಿಯಾಗುತ್ತದೆ ..

2. ಎಳನೀರು ಕಾಯಿಯನ್ನು 3 ದಿನ, 8, 12.. ದಿನ ಪೂಜಿಸುತ್ತಾ ಬಂದರೆ ಮನೆಯ ದಾರಿದ್ರ್ಯ ಮತ್ತು ಬಡತನ ನಿವಾರಣೆಯಾಗುತ್ತದೆ ..

3. ಎಳನೀರು ಕಾಯಿಯನ್ನು ಕೊಟ್ಟು ಈಶ್ವರನಿಗೆ ಅಭಿಷೇಕ ಮಾಡಿಸಿದರೆ, kidney problems solve aaguttade..

4. Throat infection ಇರುವವರು ಯಾರಿಗಾದರೂ ಎಳನೀರನ್ನು ಕುಡಿಯಲು ಕೊಟ್ಟರೆ, ಬಹಳ ಬೇಗ ವಾಸಿಯಾಗುತ್ತದೆ ..

5. ದೇಹದಲ್ಲಿ fluid ಆಗಾಗ ಕಡಿಮೆ ಆಗುತ್ತಿದ್ದರೆ , ಅಂಥವರು ದುರ್ಗಾದೇವಿಗೆ , ಎಳನೀರಿನಿಂದ ಅಭಿಷೇಕ ಮಾಡಿಸುತ್ತಾ ಬಂದರೆ, ದೇಹದಲ್ಲಿ fluid ಜಾಸ್ತಿಯಾಗುತ್ತದೆ ..

6. ಯಾರಿಗಾದರೂ ಬಿಕ್ಕಳಿಗೆ ಆಗಾಗ ಬರುತ್ತಿದ್ದರೆ, ಈಶ್ವರ ದೇವರಿಗೆ ಎಳನೀರಿನಿಂದ ಅಭಿಷೇಕ ಮಾಡಿಸಿದರೆ ಬಿಕ್ಕಳಿಕೆ ಬರುವುದಿಲ್ಲ..

7. ಎಳನೀರು ಕಾಯಿಯನ್ನು ಬ್ರಾಹ್ಮಣರಿಗೆ, ಗುರುಗಳಿಗೆ, ಆಚಾರ್ಯರಿಗೆ , ಯತಿಗಳಿಗೆ .. ಕೊಟ್ಟು ನಮಸ್ಕಾರ ಮಾಡಿದರೆ, ನಿಮ್ಮ ಸಕಲ ಕಾರ್ಯಗಳೂ ಬಹಳ ಬೇಗ ಯಶಸ್ವಿಯಾಗಿ, ಸಕಲ ಕಷ್ಟಗಳಿಂದಲೂ ಬಿಡುಗಡೆ ಹೊಂದಿ, ಕೀರ್ತಿವಂತರಾಗಿ ಜಯಶೀಲರಾಗುತ್ತೀರಿ...

8. ಬಿಸಿಲಿನಿಂದ ಬಂದ ಅತಿಥಿಗಳಿಗೆ ಕುಡಿಯಲು ಎಳನೀರು ಕೊಟ್ಟರೆ, ಆ ಮನೆಯ ಸಕಲ ವಾಸ್ತು ದೋಷಗಳೂ ನಿವಾರಣೆಯಾಗುತ್ತದೆ ...
[28/07, 1:15 PM] Pandit Venkatesh. Astrologer. Kannada: 💢🌿ಶಿವನ ತಂದೆ ತಾಯಿ ಯಾರು...
🔮ಶಿವನು ಸ್ವಯಂಭೂ (ಅವನು ತಾನೇ ಸೃಷ್ಟಿಸಿಕೊಂಡನು) ಮತ್ತು ಆದ್ದರಿಂದ ಶಿವನಿಗೆ ತಂದೆತಾಯಿಗಳಿಲ್ಲ.
🛑ಶಿವ ಜಗತ್ಪಿತ, ಇಡೀ ವಿಶ್ವಕ್ಕೆ ತಂದೆ.
ಶಿವ ಯಾವುದಾದರೂ ಇರುವದಕ್ಕಿಂತ ಮುಂಚೆ ಇದ್ದನು ಮತ್ತು ಎಲ್ಲವೂ ಅಸ್ತಿತ್ವದಲ್ಲಿಲ್ಲದಿದ್ದರೂ ಸಹ ಇರುತ್ತಾನೆ.

🔮ಭಗವಾನ್ ಶಿವನು ಹುಟ್ಟು ಮತ್ತು ಮರಣವನ್ನು ಮೀರಿದವನು

🛑ಶಿವನು ನಿರಾಕಾರ ಪರಬ್ರಹ್ಮನಾಗಿದ್ದಾನೆ..

🔮ಹಿಂದೂ ಧರ್ಮದ ಪ್ರಕಾರ, ದಂಪತಿಗಳು ಮದುವೆಯಾಗುವಾಗ, ಮದುವೆಯ ಶುಭ ಸಂದರ್ಭದಲ್ಲಿ ವಧು ಮತ್ತು ವರನ ಹಾಜರಾತಿ ಕಡ್ಡಾಯವಾಗಿದೆ.

🛑ಶಿವನು ಪಾರ್ವತಿಯನ್ನು ಮದುವೆಯಾಗಲಿರುವಾಗ, ಶಿವನ ಹೆತ್ತವರಾಗಿ ಯಾರು ಕುಳಿತು ವರನ ತಂದೆತಾಯಿಗಳ ವಿಧಿವಿಧಾನಗಳನ್ನು ಪೂರೈಸುತ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಆಗ ಶಿವನು ಹೇಳಿದನು "ನನಗೆ ಮಾತೆ ಅನಸೂಯೆ , ನನ್ನ ತಾಯಿಯ ಜವಾಬ್ದಾರಿಯನ್ನು ಪೂರೈಸಲು ಮತ್ತು ನನ್ನ ತಂದೆಯಾಗಿ ಅತ್ರಿ ಋಷಿ" .

🔮ಅನಸೂಯ ಎಂದರೆ ಅಸೂಯೆ ಇಲ್ಲದವಳು (ಅಸೂಯ ಎಂದರೆ ಅಸೂಯೆ) ಮಾತಾ ಅನಸೂಯೆಯನ್ನು ಶಿವನ ತಾಯಿ ಎಂದು ಹೇಳಿದ್ದು ಹಿಂದಿನ ದಿನ:: ಒಂದು ದಿನ ನಾರದ ಋಷಿಯು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯನ್ನು ಭೇಟಿ ಮಾಡುತ್ತಾರೆ ಮತ್ತು ಅತ್ರಿ ಋಷಿಯ ಪತ್ನಿಯಾದ ಮಹಾನ್ ಪತಿವ್ರತೆ ಅನಸೂಯೆಯನ್ನು ನಿರಂತರವಾಗಿ ಸ್ತುತಿಸುತ್ತಾ ಅಸೂಯೆಪಡುತ್ತಾರೆ.

🛑ಇದನ್ನು ಕೇಳಿದ ಮೂರು ದೇವತೆಗಳು ಅಸೂಯೆ ಪಟ್ಟರು ಮತ್ತು ಅನಸೂಯಳ ಪತಿವ್ರತಾ ಗುಣವನ್ನು ಪರೀಕ್ಷಿಸಲು ಶಿವ, ವಿಷ್ಣು ಮತ್ತು ಬ್ರಹ್ಮನನ್ನು ಕೇಳುತ್ತಾರೆ.

🔮ನಂತರ ತ್ರಿಮೂರ್ತಿಗಳು ಆಶ್ರಮಕ್ಕೆ ಅತಿಥಿಗಳಾಗಿ ಭೇಟಿ ನೀಡಿ ಆಹಾರ ಕೇಳುತ್ತಾರೆ. ಅವರು ಷರತ್ತನ್ನು ಹಾಕಿದರು, ಅವಳು ಬೆತ್ತಲೆಯಾಗಿ ಬಂದು ಅವರಿಗೆ ಊಟ ಬಡಿಸಬೇಕು! ನಂತರ ಅನಸೂಯ ತನ್ನ ಯೋಗ ಶಕ್ತಿಯಿಂದ ತ್ರಿಮೂರ್ತಿಗಳಿಗೆ ಮಾಟ ಮಾಡಿ 3 ಚಿಕ್ಕ ಶಿಶುಗಳನ್ನಾಗಿ ಮಾಡಿ ತನ್ನ ಸ್ವಂತ ಮಕ್ಕಳಂತೆ ಉಣಬಡಿಸುತ್ತಾಳೆ.

🛑 ಅಮೃತ ವಚನ ▶️ *ಶಿವ ಪಾರ್ವತಿ / ತಂದೆ ತಾಯಿಯ ಆಶೀರ್ವಾದ ನಮ್ಮ ಮೇಲೆ ಇದ್ರೆ.. ಸಾವಿರಾರು ಜನರ ಶಾಪ ಕೂಡ ನಮಗೆ ಏನು ಮಾಡಕ್ಕಾಗಲ್ಲ...*
*ಅದೇ ಸಾವಿರಾರು ಜನರ ಆಶೀರ್ವಾದ ಇದ್ದು ತಂದೆ ತಾಯಿಯವರ ಶಾಪ ಇದ್ದರೆ ಆ ಬ್ರಹ್ಮ ಬಂದರೂ ನಮ್ಮನ್ನು ಕಾಪಾಡಲು ಸಾಧ್ಯವಿಲ್ಲ..

 💢 ನಮ್ಮ ಹಿಂದೂ ಸಂಸ್ಕೃತಿ ಉಳಿಸಲು ನಮ್ಮ ಕೊಡುಗೆ ಇರಲಿ 👌🙏💞

💢 ಗೋಮಾತೆಯನ್ನು ಪೂಜಿಸಿ, ಗೋಮಾತೆಯನ್ನು ರಕ್ಷಿಸುವ. 

ಹರಿಹರರೇ ಪರದೈವ .  
ಜಗತ್ತು ಸತ್ಯ 🙏   
ದೇವರ ಸ್ಮರಣೆ ಮುಖ್ಯ 🙏🙏.

ಸಂಗ್ರಹ ಕೃಪೆ:✍️ ಫೇಸ್ಬುಕ್ ಬುಕ್
[28/07, 1:15 PM] Pandit Venkatesh. Astrologer. Kannada: ಸಾಲಿಗ್ರಾಮ ಪೂಜೆ ಮಾಡುವುದರಿಂದ ಆಗುವ ಲಾಭಗಳು .

ಗಾಢವಾದ ಕಪ್ಪು ಬಣ್ಣ ಹಾಗೂ ನುಣುಪಾದ ಕಲ್ಲಿನ ರೂಪದಲ್ಲಿ ಇರುವುದೇ ಸಾಲಿಗ್ರಾಮ. ಈ ಕಲ್ಲನ್ನು ವಿಷ್ಣುವಿನ ರೂಪ ಎಂದು ಪರಿಗಣಿಸಲಾಗುವುದು. ದೈವ ಶಕ್ತಿಯನ್ನು ಹೊಂದಿರುವ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಆಗಮಿಸುವುದು. ಇದನ್ನು ಮನೆಯಲ್ಲಿ ಪ್ರತಿಷ್ಠೆ ಮಾಡುವಾಗ ಅಥವಾ ಮನೆಯಲ್ಲಿ ಇಟ್ಟುಕೊಳ್ಳುವಾಗ ಸೂಕ್ತ ಕ್ರಮದಡಿಯಲ್ಲಿ ಆರಾಧನೆ ನಡೆಯಬೇಕು. ಇಲ್ಲವಾದರೆ ಅದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು.

ವೈಷ್ಣವರು ಹಾಗೂ ವಿಷ್ಣು ಭಕ್ತರು ಸಾಲಿಗ್ರಾಮವನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಭಗವಾನ್ ವಿಷ್ಣುವಿಗೆ ಗೌರವ ನೀಡಿದಂತೆ ಎಂದು ಹೇಳಲಾಗುವುದು. ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಅರ್ಪಿಸಿದರೆ ವಿಷ್ಣು ದೇವನು ಸಂತೃಪ್ತನಾಗುವನು. ಯಾರು ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಇಟ್ಟು ಪೂಜಿಸುತ್ತಾರೋ ಅವರು ಮನೆಯಲ್ಲಿ ನೆಮ್ಮದಿ, ಸಂತೋಷವನ್ನು ಪಡೆದುಕೊಳ್ಳುವರು. ಅವರಿಗೆ ಎಂದಿಗೂ ಬಡತನ, ಹಣದ ಸಮಸ್ಯೆ, ಅಸಮಾಧಾನ, ಭಯ, ಭ್ರಮೆ ಯಾವುದೂ ಉಂಟಾಗದು. ಜೊತೆಗೆ ಮನೆಯೊಳಗೆ ಯಾವುದೇ ಋಣಾತ್ಮಕ ಶಕ್ತಿ ಮತ್ತು ರೋಗವನ್ನು ತರುವ ಕೀಟಗಳು ಪ್ರವೇಶಿಸುವುದಿಲ್ಲ ಎಂದು ಹೇಳಲಾಗುವುದು.

ಸಾಲಿಗ್ರಾಮ ಎನ್ನುವುದು ನೇಪಳದ ಗಂಡಕಿ ನದಿಯ ಭಾಗದಲ್ಲಿ ಕಂಡುಬರುತ್ತದೆ. ಸಾಲಿಗ್ರಾಮ ಎನ್ನುವುದು ದೈವ ಶಕ್ತಿಯನ್ನು ಹೊಂದಿರುವ ಒಂದು ಕಲ್ಲಿನ ರೂಪ. ಹಿಂದೂ ಧರ್ಮದಲ್ಲಿ ಪ್ರಕೃತಿಯ ಪ್ರತಿಯೊಂದು ಸಂಗತಿಯಲ್ಲೂ ದೇವರ ರೂಪವನ್ನು ಕಾಣಲಾಗುವುದು. ಅಂತೆಯೇ ಅದಕ್ಕೆ ವಿಶೇಷ ,ಪೂಜೆ -ಪುನಸ್ಕಾರವನ್ನು ಸಲ್ಲಿಸಲಾಗುವುದು. ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸುವುದು ಒಂದು ಶ್ರೇಷ್ಠ ಪದ್ಧತಿ. ಈ ಪದ್ಧತಿಯ ಹಿಂದೆ ಇರುವ ಹಿನ್ನೆಲೆ, ಉಪಯೋಗ ಹಾಗೂ ಭವಿಷ್ಯಕ್ಕೆ ತರುವ ಅದೃಷ್ಟ ಹೀಗೆ ವಿವಿಧ ಸಂಗತಿಗಳನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗದೆ.

ಸಂಪ್ರದಾಯದಲ್ಲಿ ಸಾಲಿಗ್ರಾಮ

ಭಗವಾನ್ ವಿಷ್ಣುವಿನ ಅವತಾರಗಳು ಪುರಾಣ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಅಂತಹ ಅವತಾರಗಳಲ್ಲಿ ರಾಮ ಮತ್ತು ಕೃಷ್ಣನ ಅವತಾರವೂ ಒಂದು ರಾಮನಿಗೆ ಮೀಸಲಾದ ರಾಮನವಮಿ ಹಾಗೂ ಕೃಷ್ಣನಿಗೆ ಮೀಸಲಾದ ಕೃಷ್ಣ ಜನ್ಮಾಷ್ಠಮಿಯಂದು ಸಾಲಿಗ್ರಾಮವನ್ನು ಪೂಜಿಸಲಾಗುವುದು. ಅದು ವಿಷ್ಣುವಿನ ಪುಟ್ಟ ರೂಪ ಎಂದು ಪರಿಗಣಿಸಲಾಗುವುದು. ಅಂದು ಸಾಲಿಗ್ರಾಮದ ಪೂಜೆ, ಶ್ಲೋಕ, ಹವನ, ಯಜ್ಞ ಮತ್ತು ಮಂತ್ರಗಳನ್ನು ಹೇಳುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಅತ್ಯಂತ ಪವಿತ್ರ ಎನ್ನಲಾಗುತ್ತದೆ.

ಅಂದು ಸಾಮಾನ್ಯವಾಗಿ ಸಾಲಿಗ್ರಾಮಕ್ಕೆ ಗಂಗಾ ಅಥವಾ ಪವಿತ್ರ ನೀರಿನ ಅಭಿಷೇಕ ಮಾಡುವರು. ಜೊತೆಗೆ ಐದು ಶುಭ ಪದಾರ್ಥಗಳಾದ ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು ಮತ್ತು ಹಾಲನ್ನು ಸೇರಿಸಿ ಪಂಚಾಮೃತವನ್ನು ತಯಾರಿಸುವರು. ಅದನ್ನು ಸಾಲಿಗ್ರಾಮಕ್ಕೆ ಅಭಿಷೇಕ ಮಾಡುವುದರ ಮೂಲಕ ಪೂಜೆಯನ್ನು ಮಾಡುತ್ತಾರೆ. ಸಾವಿರ ಶಿವಲಿಂಗದ ದರ್ಶನ ಪಡೆಯುವುದು ಹಾಗೂ ಒಂದು ಸಾಲಿಗ್ರಾಮದ ದರ್ಶನ ಪಡೆಯುವುದು ಒಂದೇ ಎಂದು ಶಿವನು ಹೇಳಿದ್ದಾನೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಸಾಲಿಗ್ರಾಮದ ಉಗಮ

ಒಮ್ಮೆ ಶಿವ ಮತ್ತು ರಾಕ್ಷಸ ಜಲಂಧರ ನಡುವೆ ಯುದ್ಧ ಪ್ರಾರಂಭವಾಯಿತು. ಆಗ ಶಿವನು ವಿಷ್ಣುವಿನ ಹತ್ತಿರ ಸಹಾಯ ಕೇಳಿದನು. ವಿಷ್ಣು ವೃಂದಾಳ ಪತಿ ಜಲಂಧರನ ರೂಪವನ್ನು ತಾಳಿ ವೃಂದಾಳ ಪವಿತ್ರತೆಯನ್ನು ಕೆಡವಿದನು. ನಂತರ ಶಿವನು ಜಲಂಧರನನ್ನು ಸೋಲಿಸಿದನು. ಆಗ ವೃಂದಾ ಕೃಷ್ಣನಿಗೆ ಕಲ್ಲು ಹುಲ್ಲುಮರವಾಗಿ ಹೋಗು ಎಂದು ಶಾಪ ನೀಡಿದಳು. ಅವಳ ಶಾಪದಿಂದ ವಿಷ್ಣು ದೇವನು ಸಾಲಿಗ್ರಾಮದ ಕಲ್ಲು, ದರ್ಬೆ ಮತ್ತು ಅಶ್ವತ್ಥ ಮರವಾಗಿ ಹುಟ್ಟಿದನು ಎಂದು ಹೇಳಲಾಗುತ್ತದೆ. ದರ್ಬೆ ಹುಲ್ಲು ಮತ್ತು ಸಾಲಿಗ್ರಾಮ ಮತ್ತು ಅಶ್ವತ್ತ್ಥ ಮರದ ಪೂಜೆಯನ್ನು ಮಾಡಲಾಯಿತು. ಪ್ರತಿ ಶನಿವಾರ ಅಶ್ವತ್ತ್ಥ ಮರಕ್ಕೆ ನೀರನ್ನು ಹಾಕುವುದು ಹಾಗೂ ಪೂಜೆ ಮಾಡುವುದು ಮಾಡಿದರೆ ಅತ್ಯಂತ ಪುಣ್ಯ ಪ್ರಾಪ್ತಿಯಾಗುವುದು. ವೃಂದಾಳ ಶಾಪದಿಂದ ವಿಷ್ಣು ಕಲ್ಲಿನ ರೂಪವಾಗಿ ಸಾಲಿಗ್ರಾಮವಾದನು. ಅಂದಿನಿಂದ ಸಾಲಿಗ್ರಾಮದ ಕಲ್ಲನ್ನು ವಿಷ್ಣುವಿನ ರೂಪ ಎಂದು ಪರಿಗಣಿಸಲಾಯಿತು.

ಸಾಲಿಗ್ರಾಮದಲ್ಲಿ ಚಕ್ರದ ಗುರುತು

ಭಗವಾನ್ ವಿಷ್ಣುವಿನ ಕೈಯಲ್ಲಿ ಸುದರ್ಶನ ಚಕ್ರ ಇರುವುದು ಸಾಮಾನ್ಯ. ಸಾಲಿಗ್ರಾಮವು ಶ್ರೀ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಸಾಲಿಗ್ರಾಮದ ಮೇಲೆ ಚಕ್ರಗಳ ಗುರುತು ಇರುವುದನ್ನು ಕಾಣಬಹುದು. ಆ ಚಕ್ರಗಳು ವಿಭಿನ್ನ ಸಂಖ್ಯೆಗಳಿಂದಲೂ ಕೂಡಿರುವುದನ್ನು ಕಾಣಬಹುದು. ವಿಷ್ಣುವಿನ ರೂಪವನ್ನು ಪ್ರತಿಬಿಂಬಿಸುವ ಈ ಕಲ್ಲಿಗೆ ಪೂಜೆಯನ್ನು ಸಲ್ಲಿಸಿದರೆ ಪುಣ್ಯ ಪ್ರಾಪ್ತಿಯಾಗುವುದು. ವಿಷ್ಣು ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಸಾಲಿಗ್ರಾಮವು ಶಂಖ, ಗಧಾ, ರಂಧ್ರ, ದೊಡ್ಡ ಮತ್ತು ಸಣ್ಣ ಗಾತ್ರ, ಸುರುಳಿ ಗಾತ್ರ, ಅಂಡಾಕಾರಗಳ ಆಕೃತಿಯಲ್ಲಿ ಹಾಗೂ ಕೆಂಪು, ಹಳದಿ, ಬಹುತೇಕವಾಗಿ ಕಪ್ಪು ಬಣ್ಣಗಳಲ್ಲಿ ಕಂಡು ಬರುತ್ತದೆ ಎಂದು ಹೇಳಲಾಗಿದೆ.

ಸಾಲಿಗ್ರಾಮದ ಸ್ಥಾಪನೆ

ಸಾಲಿಗ್ರಾಮದ ಕಲ್ಲು ವಿಷ್ಣುದೇವರ ಪ್ರತಿರೂಪ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸಬಹುದು. ಸಾಲಿಗ್ರಾಮವನ್ನು ಲಕ್ಷ್ಮಿ, ಸರಸ್ವತಿ, ಗಣೇಶ ಸೇರಿದಂತೆ ಇತರ ದೇವತೆಗಳನ್ನು ಹೊಂದಿದ್ದರೂ ಸಹ ಇಟ್ಟು ಪೂಜಿಸಬಹುದು. ಇದನ್ನು ಮನೆಯಲ್ಲಿ ಇಟ್ಟ ಬಳಿಕ ನಿತ್ಯವೂ ಪೂಜಿಸುವುದನ್ನು ಮರೆಯಬಾರದು.

ಪಾಪವನ್ನು ತೊಳೆಯುವುದು

ಸಾಲಿಗ್ರಾಮವನ್ನು ಪವಿತ್ರ ಸ್ಥಾನದಲ್ಲಿ ಇಟ್ಟು, ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡಬೇಕು. ಹಾಗೆ ಮಾಡಿದಾಗ ನಮ್ಮ ಹಿಂದಿನ ಜನ್ಮದಲ್ಲಿ ಹಾಗೂ ಈ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳೆಲ್ಲವೂ ತೊಳೆದುಹೋಗುತ್ತವೆ. ಮನೆಯಲ್ಲಿ ಒಂದು ಸಾಲಿಗ್ರಾಮವನ್ನು ಇಟ್ಟು ಪೂಜಿಸಿದರೆ 1000 ಹಸುಗಳನ್ನು ಬ್ರಾಹ್ಮಣನಿಗೆ ದಾನ ಮಾಡಿದ ಪುಣ್ಯ ಬರುವುದು.

ಉತ್ತಮ ಆರೋಗ್ಯ ಲಭಿಸುವುದು

ಮನೆಯಲ್ಲಿ ಸಾಲಿಗ್ರಾಮವನ್ನು ಇಟ್ಟು ಪೂಜಿಸುವಾಗ ಧಾರ್ಮಿಕ ರೀತಿ-ನೀತಿಗಳು ಸೂಕ್ತ ಕ್ರಮದಲ್ಲಿ ನಡೆಯಬೇಕು. ಆಗ ಭಗವಾನ್ ವಿಷ್ಣುವು ವರ ಮತ್ತು ಆಶೀರ್ವಾದವನ್ನು ಕರುಣಿಸುವನು. ವ್ಯಕ್ತಿಯು ಉತ್ತಮ ಆರೋಗ್ಯ ಹಾಗೂ ಉತ್ತಮ ಆಧ್ಯಾತ್ಮಿಕ ಚಿಂತನೆಗಳನ್ನು ಮನಗೊಳ್ಳುವನು. ಇದನ್ನು ಪೂಜಿಸುವಾಗ ವಿಷ್ಣು ದೇವರ ಸಹಸ್ರನಾಮ, ಅಷ್ಟೋತ್ತರ, ವಿಶೇಷ ಮಂತ್ರ, ಶ್ಲೋಕ ಅಥವಾ ಹಾಡನ್ನು ಹೇಳಬೇಕು. ಶುದ್ಧವಾದ ಎಣ್ಣೆಯಲ್ಲಿ ದೀಪವನ್ನು ಬೆಳಗುವುದರ ಮೂಲ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು.

ಸಾಲಿಗ್ರಾಮಕ್ಕೆ ತುಳಸಿ ಎಲೆ

ಸಾಲಿಗ್ರಾಮದ ಕಲ್ಲಿಗೆ ತುಳಸಿ ಎಲೆಯನ್ನು ಅರ್ಪಿಸಿ ಪೂಜೆಯನ್ನು ಗೈಯಬೇಕು. ಅದು ಅತ್ಯಂತ ಶ್ರೇಷ್ಠವಾದ ಸಂಗತಿ. ಈ ರೀತಿಯ ಪೂಜೆಯಿಂದ ವಿಷ್ಣು ದೇವನು ಸಂತುಷ್ಟನಾಗುವನು. ಹಾಗಾಗಿಯೇ ಪ್ರತಿ ವರ್ಷ ಮಾಡುವ ತುಳಸಿ ಪೂಜೆಯನ್ನು ಸಾಲಿಗ್ರಾಮದ ಕಲ್ಲನ್ನು ಇಟ್ಟು ವಿವಾಹ ಮಾಡುವ ಪದ್ಧತಿ ಇದೆ. ತುಳಸಿಯೊಂದಿಗೆ ಸಾಲಿಗ್ರಾಮದ ಪೂಜೆ ಮಾಡಿದರೆ ಆ ಮನೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿಯು ಸದಾ ಕಾಲ ನೆಲೆಗೊಳ್ಳುವುದು.

ಸಾಲಿಗ್ರಾಮ ಪೂಜೆಯಿಂದ ಯಮನು ದೂರ ನಿಲ್ಲುವನು!!!

ಸಾಲಿಗ್ರಾಮದ ಪೂಜೆಯನ್ನು ಮಾಡುವವರ ಹತ್ತಿರ ಯಮದೂತನು ಬರುವುದಿಲ್ಲ. ಯಮ ಮತ್ತು ಅವನ ಸೇವಕರು ಬಂದರೆ ನರಕ ಪ್ರಾಪ್ತಿಯಾಗುವುದು. ಅದೇ ಸಾಲಿಗ್ರಾಮವನ್ನು ಪೂಜೆ ಮಾಡುವವರು ಮೋಕ್ಷದ ನಂತರ ವೈಕುಂಠ ಧಾಮ ಅಂದರೆ ವಿಷ್ಣುವಿನ ಪವಿತ್ರ ಸ್ಥಳಕ್ಕೆ ಹೋಗುವರು. ಹಾಗಾಗಿ ಸಾಲಿಗ್ರಾಮವನ್ನು ಮುಕ್ತಿನಾಥ್ ಸಾಲಿಗ್ರಾಮ ಎಂದು ಸಹ ಕರೆಯುವರು. ವಿಷ್ಣು ದೇವನು ಪ್ರತಿಯೊಂದು ಜೀವಿಗೂ ಸ್ವಾತಂತ್ರ್ಯ ಹಾಗೂ ಮುಕ್ತಿಯನ್ನು ನೀಡುವನು ಎಂದು ಹೇಳಲಾಗುವುದು.

ಸಾಲಿಗ್ರಾಮಕ್ಕೆ ನಿತ್ಯ ಪೂಜೆ

ಸಾಲಿಗ್ರಾಮವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವಾಗ ಸರಿಯಾದ ಧಾರ್ಮಿಕ ಕ್ರಮವನ್ನು ಅನುಸರಿಸಬೇಕು. ಸಾಲಿಗ್ರಾಮದ ಪೂಜೆ ಮಾಡುವಾಗ ಮುಖ್ಯವಾಗಿ ಪಂಚಾಮೃತದ ಅಭಿಷೇಕ ಮಾಡಬೇಕು. ಅದರೊಂದಿಗೆ ಶುದ್ಧ ನೀರು ಹಾಗೂ ತುಳಸಿಯ ನೀರಿನಿಂದಲೂ ಅಭಿಷೇಕ ಮಾಡಬೇಕು ಎಂದು ಹೇಳಲಾಗುವುದು. ಈ ಕ್ರಮವನ್ನು ಅನುಸರಿಸಿದರೆ ಭಗವಾನ್ ವಿಷ್ಣು ಅತ್ಯಂತ ತೃಪ್ತಿಯನ್ನು ಹೊಂದುವನು. ಜೊತೆಗೆ ಅದೃಷ್ಟವನ್ನು ಆಶೀರ್ವದಿಸುವನು.

ವಿವಿಧ ಹೆಸರಿನ ಸಾಲಿಗ್ರಾಮ

ಸಾಲಿಗ್ರಾಮಕ್ಕೆ ವಿವಿಧ ಹೆಸರುಗಳಿಂದ ಕರೆಯಲಾಗುವುದು. ಲಡ್ಡು ಗೋಪಾಲ ಸಾಲಿಗ್ರಾಮ, ಹಯಗ್ರೀವ ಸಾಲಿಗ್ರಾಮ, ಕೃಷ್ಣ ಸಾಲಿಗ್ರಾಮ, ಕೂರ್ಮ ಸಾಲಿಗ್ರಾಮ, ನರಸಿಂಹ ಸಾಲಿಗ್ರಾಮ, ಸುದರ್ಶನ ಸಾಲಿಗ್ರಾಮ, ಬಲರಾಮ ಸಾಲಿಗ್ರಾಮ, ವರಹ ಸಾಲಿಗ್ರಾಮ, ವಾಮನ ಸಾಲಿಗ್ರಾಮ, ಕಲ್ಕಿ ಸಾಲಿಗ್ರಾಮ, ಬುದ್ಧ ಸಾಲಿಗ್ರಾಮ, ಮತ್ಸ ಸಾಲಿಗ್ರಾಮ, ಪದ್ಮನಾಭ ಸಾಲಿಗ್ರಾಮ, ಪರಶುರಾಮ ಸಾಲಿಗ್ರಾಮ ಸೇರಿದಂತೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುವುದು.
ಸಾಲಿಗ್ರಾಮ ಪೂಜೆಗೆ ಹೇಳುವ ಮಂತ್ರಗಳು
ಸಾಲಿಗ್ರಾಮವನ್ನು ಪೂಜಿಸುವಾಗ ಈ ಕೆಳಗಿನ ವಿಶೇಷ ಮಂತ್ರಗಳನ್ನು ಹೇಳಬೇಕು. ಇದರಿಂದ ದೇವನು ಸಂತುಷ್ಟನಾಗುವನು.

" ಓಂ ಶ್ರೀ ಬಾಲಗೋಪಾಲಾಯ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಕೇಶವಾಯ ನಮಃ
ಓಂ ಶ್ರೀ ಅನಂತಾಯ ನಮಃ
ಓಂ ಶ್ರೀ ಮಾಧವ್ಯ ನಮಃ
ಓಂ ಶ್ರೀ ಗಂದಕಿ ನಾಯಕಾಯ ನಮಃ
ಓಂ ನಮೋ ನಾರಾಯಣಾಯ ನಮಃ
ಓಂ ನಮೋ ವಾಗ್ವತೇ ಬಸುದೇವಾಯ ನಮಃ
ಓಂ ಶ್ರೀ ಮುಕ್ತ ಚಿತ್ರ ಗೋವಿಂದಾಯ ನಮಃ
ಓಂ ಶ್ರೀ ಸಾಲಿಗ್ರಾಮ ಶಿಲಾ ರೂಪಾಯ ನಮಃ
ಓಂ ಶ್ರೀ ಶಿವ ಸ್ತುತಾಯ ನಮಕ
ಓಂ ಶ್ರೀ ಕೇಶವಾಯ ನಮಃ"

"ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ."

ಬ್ರಹ್ಮ ಹತ್ಯಾ ದೋಷ ನಿವಾರಣೆ

ನಿತ್ಯವೂ ಸಾಲಿಗ್ರಾಮದ ಪೂಜೆ ಮಾಡಿದರೆ ನಮ್ಮ ಪಾಪ ಕರ್ಮಗಳು ತೊಳೆಯುವುದು ಬ್ರಹ್ಮ ಹತ್ಯೆ ಮಾಡಿದ ಪಾಪವು ಸಹ ಸಾಲಿಗ್ರಾಮದ ಪೂಜೆ ಮಾಡುವುದರ ಮೂಲಕ ತೊಳೆದು ಹೋಗುವುದು .
[28/07, 1:15 PM] Pandit Venkatesh. Astrologer. Kannada: ಮಗಳೆಂದರೆ... ವರ್ತಮಾನ; ಮಗಳೆಂದರೆ ಭವಿಷ್ಯ;

ಮಗಳು ಎಂದರೆ ಬೆಲೆ ಕಟ್ಟಲಾಗದು ದೇವರ ಸೃಷ್ಟಿ.
ಮಗಳು ಈ ಹೆಸರಲ್ಲಿ ಎಂಥ ಸುಖ, ಎಂಥ ಅದ್ಭುತ ..

ಜೀವನ ರಹಸ್ಯವೆಂದರೆ, ದೇವರು ಯಾವಾಗ ತನ್ನ ಭಕ್ತನ ಮೇಲೆ ತುಂಬಾ ಹೆಚ್ಚು ಸಂತೃಪ್ತಗೊಂಡಾಗ ಅತೀ ಸಂತೋಷಗೊಂಡಾಗ ಭಕ್ತನಿಗೆ ಮಗಳನ್ನು ಪಡೆಯುವ ಸಂತಾನ ಭಾಗ್ಯದ ವರ ಕೊಡುತ್ತಾನೆ.

ಮಗಳು ಮದುವೆ ಮಂಟಪದಿಂದ ಅತ್ತೆಯ ಮನೆಗೆ ಹೋಗುತ್ತಾಳೆ, ಆಗ ಆಕೆ ಬೇರೆಯವಳಾಗಿ ಕಾಣುವುದಿಲ್ಲ,
ಆದರೆ ಆಕೆ ತವರುಮನೆಗೆ ಬಂದಾಗ ಮುಖ ತೊಳೆದು ಎದುರಿಗೇ ಇರುವ ಟವೆಲ್ ನ ಬದಲಿಗೆ ತನ್ನ ಬ್ಯಾಗಿನಲ್ಲಿರುವ ಕರವಸ್ತ್ರದಿಂದ ಮುಖ ಒರೆಸಿಕೊಂಡಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ.

ಆಕೆ ಅಡುಗೆ ಮನೆಯ ಬಾಗಿಲಲ್ಲಿ ಅಪರಿಚಿತಳಾಗಿ ನಿಂತಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ ಅವಳು ವಾಷಿಂಗ್ ಮಷೀನ್ ಬಳಸಲೇ, ಫ್ಯಾನ್ ಹಾಕಲೇ ಎಂದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ.

ಟೇಬಲ್ ಮೇಲೆ ಊಟ ಬಡಿಸಿದ್ದಾಗಲೂ ಆಕೆ ಮುಚ್ಚಳ ತೆಗೆದು ನೋಡುವುದಿಲ್ಲ, ಆಗ ಆಕೆ ಬೇರೆಯವಳಾಗಿ ಕಾಣುತ್ತಾಳೆ. ದುಡ್ಡು ಎಣಿಸುತ್ತಿದ್ದಾಗ ತನ್ನ ದೃಷ್ಟಿಯನ್ನು ಆಕಡೆ ಈಕಡೆ ತಿರುಗಿಸಿದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ.

ಮಾತುಮಾತಿಗೂ ತಮಾಷೆ ಮಾಡಿ ನಗುವ ನಾಟಕ ಮಾಡುತ್ತಿರುವಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ..
ಹಾಗೂ ಮರಳಿ ಹೋಗುವಾಗ ಮತ್ತೆ ಯಾವಾಗ ಬರ್ತೀಯಾ, ಎಂದಾಗ ನೋಡೋಣ-ಯಾವಾಗ ಬರಲು ಆಗುತ್ತೋ.... ಎಂದು ಉತ್ತರ ನೀಡುವಾಗ ಆಕೆ ಶಾಶ್ವತವಾಗಿ ಬೇರೆಯವಳಾಗಿಬಿಟ್ಟಳು ಎಂದೆನಿಸುತ್ತದೆ.

ಆದರೆ.....ಆಕೆ ಗಾಡಿಯಲ್ಲಿ ಕುಳಿತು, ಮೌನವಾಗಿ ತನ್ನ ಕಣ್ಣುಗಳನ್ನು ಪಕ್ಕಕ್ಕೆ ತಿರುಗಿಸಿ-ಕಣ್ಣೀರು ವರೆಸುವ ಪ್ರಯತ್ನ ಮಾಡುವಾಗ ಆ ಬೇರೆತನ ಒಂದೇ ಕ್ಷಣದಲ್ಲಿ ಹರಿದು ಹೋಗಿಬಿಡುತ್ತದೆ...

ಮೊದಲು ಆಕೆ ಸೆರಗಿನಲ್ಲಿ ಅಡಗಿಕೊಳ್ಳುತ್ತಿದ್ದಳು, ಈಗ ಬೇರೆಯವರನ್ನು ಸೆರಗಿನಲ್ಲಿ ಅಡಗಿಸಿಕೊಳ್ಳುತ್ತಾಳೆ.

ಮೊದಲು ಆಕೆ ಬೆರಳು ಸುಟ್ಟುಹೋದರೂ ಇಡೀ ಮನೆಯವರನ್ನು ತನ್ನತ್ತ ಗಮನ ಸೆಳೆಯುತ್ತಿದ್ದಳು.... ಈಗ ಕೈ ಸುಟ್ಟುಹೋದರೂ ಅಡುಗೆ ಮಾಡುತ್ತಾಳೆ,

ಮೊದಲು ಚಿಕ್ಕ ಚಿಕ್ಕ ಮಾತಿಗೂ ಅತ್ತುಬಿಡುತ್ತಿದ್ದಳು, ಈಗ ದೊಡ್ಡ ದೊಡ್ಡ ಮಾತುಗಳನ್ನೂ ಹೃದಯಲ್ಲಿ ಮುಚ್ಚಿಡುತ್ತಾಳೆ, ಮೊದಲು ಸಹೋದರ, ಸ್ನೇಹಿತರ ಜೊತೆಗೆ ಜಗಳ ಮಾಡುತ್ತಿದ್ದಳು, ಈಗ ಅವರ ಜೊತೆಗೆ ಮಾತನಾಡಲು ಕಾತರಿಸುತ್ತಾಳೆ.

ಅಮ್ಮಾ, ಅಮ್ಮಾ, ಎಂದು ಮನೆಯ ತುಂಬಾ ಓಡಾಡುತ್ತಿದ್ದವಳು, ಈಗ ಅಮ್ಮಾ ಎಂಬ ಶಬ್ದ ಕೇಳಿ ನಿಧಾನವಾಗಿ ಮರುಗುತ್ತಾ ಮುಗುಳ್ನಗುತ್ತಾಳೆ,
ಮೊದಲು ಹತ್ತು ಗಂಟೆಗೆ ಎದ್ದರೂ ಬೇಗ ಎದ್ದುಬಿಟ್ಟೆ, ಎಂದು ಹೇಳುತ್ತಿದ್ದವಳು ಈಗ ಏಳು ಗಂಟೆಗೆ ಎದ್ದರೂ ತಡವಾಯಿತು ಎಂದುಕೊಳ್ಳುತ್ತಾಳೆ.

ಆಗ ಇಡೀ ದಿನ ಖಾಲಿ ಇದ್ದರೂ ಬಿಜಿ ಇದ್ದೇನೆ ಎಂದು ಹೇಳುತ್ತಿದ್ದಳು....ಈಗ ಇಡೀ ದಿನ ಕೆಲಸ ಮಾಡಿದರೂ ಕೈಲಾಗದವಳು ಅನಿಸಿಕೊಳ್ಳುತ್ತಾಳೆ,   

ಒಂದು ಪರೀಕ್ಷೆಗೋಸ್ಕರ ಇಡೀ ವರ್ಷ ಓದುತ್ತಿದ್ದವಳು, ಈಗ ಅಣಿಯಾಗದೆಯೇ ಪ್ರತಿದಿನ ಪರೀಕ್ಷೆ ಎದುರಿಸುತ್ತಾಳೆ, ಎಂಥ ವೇದನೆ ತನ್ನೊಳಗೆ ಬಚ್ಚಿಟ್ಟುಕೊಂಡ ಸಹನಾ- ಮೂರ್ತಿ ಇವಳಲ್ಲವೆ....

ಈ ಮನೆಯ ಎಲ್ಲರ ಮುದ್ದಿನ ಮಗಳು ಯಾವಾಗ ತಾಯಿಯಾದಳೋ...ಯಾವಾಗ ಮಗಳ ಪಯಣ ತಾಯಿಯ ಪಯಣದಲ್ಲಿ ಬದಲಾಯಿತೋ ಗೊತ್ತಿಲ್ಲ. ಯಾವಾಗ ಮಗಳು ದೊಡ್ಡವಳಾಗಿಬಿಟ್ಟಳೋ ಗೊತ್ತಿಲ್ಲ...
 
ಅದಕ್ಕೇ ಹೇಳೋದು "ಮಗಳು" ಈ ಮೂರಕ್ಷರದಲ್ಲಿ ಅದೇನೋ ವಿಚಿತ್ರ ಸೆಳೆತವಿದೆ. ಅದಕ್ಕೆ ಕಾರಣ ಹಲವಾರು. ಆದರೆ ಎಲ್ಲಕ್ಕಿಂತ ಮುಖ್ಯವಾದದ್ದು ಅವಳಲ್ಲಿರುವ ತಾಯಿಯಂತಹ ಪ್ರೀತಿ...

 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
[28/07, 1:15 PM] Pandit Venkatesh. Astrologer. Kannada: -:ಶಕುನದ "ಗೂಬೆ" ಲಕ್ಷ್ಮಿ ವಾಹನ :- 
ಗೂಬೆ ಲಕ್ಷ್ಮಿಯ ವಾಹನ ವಾದ ಕುರಿತು ಎರಡು ಕಥೆಗಳು: 
ಒಂದು ಕತೆಯ ಪ್ರಕಾರ:
ಪುರಾಣಕಾಲದಲ್ಲಿ ಕೌಶಿಕ ಎಂಬ ವಿಷ್ಣು ಭಕ್ತ ನಿದ್ದನು. ಅವನು ಸಂಗೀತದಲ್ಲಿ ಪಾಂಡಿತ್ಯ ಪಡೆದಿದ್ದನು. ಸುಮಧುರವಾಗಿ ಅವನು ಹೇಳುತ್ತಿದ್ದ ಹರಿಭಕ್ತ ಕೀರ್ತನೆಗಳಿಂದ ವಿಷ್ಣು ಸಂತುಷ್ಟನಾಗಿದ್ದನು. ಹರಿಭಕ್ತ ಕೌಶಿಕ ಮರಣ ಹೊಂದಿದ ಮೇಲೆ ಅವನ ಆತ್ಮ ವಿಷ್ಣುವಿನ ಸಾನಿಧ್ಯ ಸೇರಿತು. ಶ್ರೀಹರಿ ಕೌಶಿಕನನ್ನು ಸ್ವಾಗತಿಸಿ ಅವನಿಗಾಗಿ ಸಂಗೀತ ಸಭೆ ಎಂದು ನಿರ್ಮಾಣ ಮಾಡಿದನು ಸಂಗೀತ ವಿದ್ವಾಂಸರು, ಹಾಗೂ ತುಂಬುರ ರಿಗೆ ಸ್ವಾಗತ ಕೋರಲಾಯಿತು. ಆದರೆ ನಾರದರಿಗೆ ಸಂಗೀತದ ಜ್ಞಾನ ಅಷ್ಟು ಇಲ್ಲವೆಂದು ಆ ಸಭೆಗೆ ಆಹ್ವಾನ ಕೊಡಲಿಲ್ಲ. ನಾರದರಿಗೆ ಸಭೆಗೆ ಹೋಗುವ ಆಸೆ ಇತ್ತು. ಅವರು ಲಕ್ಷ್ಮಿಯ ಆಸ್ಥಾನಕ್ಕೆ ಬಂದರು. ಲಕ್ಷ್ಮಿಯ ಸಖಿಯರು ಅವರನ್ನು ಒಳಗೆ ಬಿಡಲಿಲ್ಲ. ಇದರಿಂದ ಕೋಪಗೊಂಡ ನಾರದರು, ಗೂಬೆಗೆ ಹಗಲಿನಲ್ಲಿ ಕಣ್ಣು ಕಾಣುವುದಿಲ್ಲ. ನನ್ನನ್ನು ಅವಮಾನ ಮಾಡಿದ ನಿನಗೆ ಗೂಬೆ ವಾಹನವಾಗಲಿ ಎಂದರು. 

ಇದನ್ನು ತಿಳಿದ ಲಕ್ಷ್ಮೀ- ನಾರಾಯಣರು, ನಾರದರಲ್ಲಿ ಕ್ಷಮೆಯಾಚಿಸಿದರು. ನಾರದರಿಗೆ ದುಡುಕಿನ ಅರಿವಾಗಿತ್ತು ಕ್ಷಮೆ ಕೇಳಿದರು.ವಿಷ್ಣು ಆಗುವುದೆಲ್ಲಾ ಒಳ್ಳೆಯದಕ್ಕೆ ಲೋಕಕಲ್ಯಾಣಕ್ಕಾಗಿ ಎಂದರೂ ಮನಸ್ಸಿಗೆ ಸಮಾಧಾನವಾಗದ ನಾರದರು. ಕಣ್ಣೀರು ಹರಿಸುತ್ತಿದ್ದಾಗ, ವಿಷ್ಣು ಸಮಾಧಾನ ಮಾಡಿ ನೀವು ಸಂಗೀತ ಕಲಿತು ನಮ್ಮ ಕೃಪೆಗೆ ಪಾತ್ರರಾಗಬೇಕೆಂದರೆ ಮಾನಸ ಸರೋವರದ ಎತ್ತರದ ಒಂದು ಪರ್ವತದಲ್ಲಿ ಇರುವ "ಉಲೂಕಪತಿ' ಗೆ ಸೇವೆಗಳನ್ನು ಮಾಡಿ ಸಂಗೀತವನ್ನು ಕಲಿಯಲು ಸಲಹೆ ಕೊಟ್ಟನು. ಸಲಹೆ ಮೇರೆಗೆ ನಾರದರು ಮಾನಸ ಸರೋವರಕ್ಕೆ ಬಂದರು. ಅಲ್ಲಿ ಗಂಧರ್ವರು, ಕಿನ್ನರರು ಅಪ್ಸರೆಯರು ಸಂಗೀತಾಭ್ಯಾಸವನ್ನು ಮಾಡುತ್ತಿದ್ದರು. 

ಉಲೂಕಪತಿ ನಾರದರನ್ನು ಸತ್ಕರಿಸಿ ಗೌರವದಿಂದ ಆಸನದಲ್ಲಿ ಕೂರಿಸಿದನು. ನಾರದರು ಬಂದ ಕಾರಣ ಕೇಳಿದಾಗ ನಡೆದ ಘಟನೆಯನ್ನು ಹೇಳಿದರು. ತುಂಬುರರು, ವಿದ್ವಾಂಸರು, ಕೌಶಿಕರು, ಸಂಗೀತ ಕಲಿತು ಮಹಾವಿಷ್ಣುವನ್ನು ಒಲಿಸಿಕೊಂಡಿದ್ದಾರೆ. ಆ ಸೌಭಾಗ್ಯ ನನಗೂ ಬೇಕು ಎಂದರು. ಇದನ್ನೆಲ್ಲ ಕೇಳಿ ಉಲೂಕಪತಿ ತನ್ನ ಪೂರ್ವ ಜನ್ಮದ ವೃತ್ತಾಂತ ಹೇಳಿದನು. ಪೂರ್ವದಲ್ಲಿ ಧರ್ಮಿಷ್ಠ, ಹಾಗೂ ಸತ್ ಸಂಪ್ರದಾಯದ ಭುವನೇಶ್ವರ ಎಂಬ ರಾಜನಿದ್ದನು. ಆದರೆ ಸಂಗೀತ ವಿರೋಧಿಯಾಗಿದ್ದನು. ಯಾರೇ ಸಂಗೀತ ಹೇಳಿದರೂ ಅವರಿಗೆ ಮರಣದಂಡನೆ ಶಿಕ್ಷೆಯಾಗಿತ್ತು. ದೇವರ ಸ್ತುತಿಯನ್ನು ಹಾಡಲು ಅವಕಾಶವಿರಲಿಲ್ಲ. ಹೀಗಿರುವಾಗ ಹರಿಮಿತ್ರ ನೆಂಬ ವಿದ್ವಾಂಸನು ಇದರ ಅರಿವು ಇಲ್ಲದೆ ಹರಿ ಕೀರ್ತನೆ ಮಾಡುತ್ತಾ, ನಲಿದಾಡುತ, ಕುಣಿದಾಡುತ ಜೊತೆ ಯವರೊಡನೆ ಬರುತ್ತಿದ್ದನು. ಅವನ ಸಂಗೀತ ಮಾಧುರ್ಯಕ್ಕೆ ಪ್ರಜೆಗಳು ಸೋತಿದ್ದರು. ಇದನ್ನು ತಿಳಿದ ರಾಜ್ಯದ ಮಂತ್ರಿಗಳು ಆತನನ್ನು ಬಂಧಿಸಿ ರಾಜನೆದುರು ಕರೆತಂದರು. ಮರಣದಂಡನೆ ಕೊಡಲು ರಾಜನಿಗೆ ಮನಸ್ಸು ಬರಲಿಲ್ಲ. ಏಕೆಂದರೆ ಬ್ರಾಹ್ಮಣನನ್ನು ಕೊಂದರೆ ಬ್ರಹ್ಮಹತ್ಯಾದೋಷ ಬರುತ್ತದೆ. ಆದ್ದರಿಂದ ಅವನ ಸಂಪತ್ತನ್ನು ಕಿತ್ತುಕೊಂಡು ರಾಜ್ಯದಿಂದ ಹೊರಗೆ ಓಡಿಸಿದನು. 

ಇದಾದ ಕೆಲವು ದಿನಗಳಲ್ಲಿ ರಾಜ ಮರಣಹೊಂದಿದನು. ಮುಂದಿನ ಜನ್ಮದಲ್ಲಿ ಗೂಬೆಯಾಗಿ ಹುಟ್ಟಿದನು. ಈಗ ಆ ಉಲೂಕ ಪತಿಯೇ ನಾರದನಿಗೆ ಸಂಗೀತ ಹೇಳಿಕೊಡುವ ಗೂಬೆಯಾಗಿದ್ದನು. ಇದನ್ನೆಲ್ಲ ಕೇಳಿದ ನಾರದರಿಗೆ, ಲಕ್ಷ್ಮೀ ದೇವಿಗೆ ನಿಮ್ಮ ವಾಹನ ಗೂಬೆ ಆಗಲಿ ಎಂದು ಶಪಿಸಿದ್ದು ಒಳ್ಳೆಯದಾಯಿತು, ಈ ಮೂಲಕ ನಾರದರು, ಗೂಬೆಯಾದ ಉಲೂಕಪತಿ ಯಿಂದ ಸಂಗೀತ ಕಲಿಯುವುದು ನಾರದರಿಗೆ ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ವಾಯಿತು ಎಂದುಕೊಂಡು ಸಂತೋಷಗೊಂಡರು. 

ಎರಡನೇ ಕಥೆ: 

ಒಮ್ಮೆ ದೇವಾನುದೇವತೆಗಳು ಭೂ ಪರ್ಯಟನೆ ಮಾಡಲು ನಡೆದು ಬರುತ್ತಿದ್ದರು. ಅವರು ಬರುವಾಗ ಅವರೇ ಸೃಷ್ಟಿಸಿದ ಪ್ರಾಣಿ ಪಕ್ಷಿಗಳು ಎದುರಿಗೆ ಬಂದವು. ತಮ್ಮನ್ನು ಸೃಷ್ಟಿಸಿದ ದೇವತೆಗಳನ್ನು ನೋಡಿ ಪ್ರಾಣಿ-ಪಕ್ಷಿಗಳಿಗೆ ತುಂಬಾ ಖುಷಿಯಾಯಿತು. ನಾವು ಅವರಿಗೆ ಏನಾದರೂ ಉಪಕಾರ ಮಾಡಬೇಕೆಂದು, ನಡೆದು ಹೋಗುತ್ತಿರುವ ಅವರಿಗೆ ವಾಹನವಾಗಲು ನಿರ್ಧರಿಸಿ. ಕೃತಜ್ಞತೆ ಸಲ್ಲಿಸುವಾಗ ಇದನ್ನು ತಿಳಿಸಿದವು. ದೇವರುಗಳು‌ ಒಪ್ಪಿದರು. ಆಯ್ಕೆಯ ಪ್ರಕ್ರಿಯೆ ನಡೆಯಿತು. ಎಲ್ಲಾ ಪ್ರಾಣಿ ಪಕ್ಷಿಗಳು ಲಕ್ಷ್ಮಿಗೆ ವಾಹನವಾಗಲು ತುದಿಗಾಲಲ್ಲಿ ನಿಂತಿದ್ದವು. ಅವುಗಳಲ್ಲಿ ಗೊಂದಲ ಸೃಷ್ಟಿಯಾಯಿತು. ಆಗ ಲಕ್ಷ್ಮಿಯು ನಾನು ಪ್ರತಿ ಕಾರ್ತಿಕ ಅಮಾವಾಸ್ಯೆ ಭೂಮಿ ಪರ್ಯಟನೆಗೆ ಬರುತ್ತೇನೆ. ಯಾರು ಮೊದಲು ನನ್ನ ಎದುರಿಗೆ ಬರುತ್ತಾರೋ, ಅವರೇ ನನ್ನ ವಾಹನ ಎಂದಳು. ಕಾರ್ತಿಕ ಮಾಸದ ಅಮಾವಾಸ್ಯೆ ರಾತ್ರಿ ಎಲ್ಲಾ ಪ್ರಾಣಿಗಳು ಕಾಯುತ್ತಿದ್ದವು. ಲಕ್ಷ್ಮಿ ಅವಳು ಹೇಳಿದಂತೆ ಕಾರ್ತಿಕ ಅಮಾವಾಸ್ಯೆ ರಾತ್ರಿ ಭೂಲೋಕಕ್ಕೆ ಬಂದಳು. ತನ್ನ ತೀಕ್ಷ್ಣವಾದ ಕಣ್ಣುಗಳಿಂದ ಗೂಬೆಯು ದೂರದಿಂದಲೇ ಲಕ್ಷ್ಮಿ ಬರುವುದನ್ನು ನೋಡಿತು. ಓಡಿ ಬಂದು ತನ್ನನ್ನೇ ವಾಹನವನ್ನಾಗಿ ಮಾಡಿಕೊಳ್ಳಲು ಬೇಡಿ ಕೊಂಡಿತು. ಮಹಾಲಕ್ಷ್ಮಿ ಸುತ್ತಮುತ್ತ ನೋಡಿದಳು ಯಾವುದೇ ಪ್ರಾಣಿಗಳು ಬಂದಿರಲಿಲ್ಲ. ಆಗ ಅವಳು ಗೂಬೆಯನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡಳು. ಈ ರೀತಿ ಅಂದಿನಿಂದ ಗೂಬೆ ಲಕ್ಷ್ಮಿ ವಾಹನ ವಾಯಿತು. 

ಗೂಬೆಯ ಕುರಿತು ಕೆಲವು ಸಂಗತಿಗಳು: 

ಗೂಬೆಗೆ ಭವಿಷ್ಯ ತಿಳಿಸುವ ಅದ್ಭುತ ಶಕ್ತಿ ಇದೆ ಎಂಬ ಅಭಿಪ್ರಾಯವಿದೆ.
ಮುಂಜಾನೆ ಎಂಟು ಗಂಟೆ ಒಳಗೆ ಗೂಬೆ ಮುಖ ನೋಡಿದರೆ ಶುಭಶಕುನ ವೆಂದು, ನಂತರ ಮಧ್ಯಾಹ್ನ 1 ಗಂಟೆ ಒಳಗೆ ನೋಡಿದರೆ ಅಶುಭವೆಂದು ಪರಿಗಣಿಸುತ್ತಾರೆ. ಗೂಬೆ ಕೂಗಿದರೆ ಅಪಶಕುನ ಎಂದು ಧರ್ಮರಾಜನು ಹೇಳಿದ್ದನಂತೆ, ಮನೆಯ ಮುಂದಿನ ಬಲಭಾಗದಿಂದ ಮೂರು ಸಾರಿ ಕೂಗಿದರೆ ಅಶುಭವೆಂದು ಹೇಳುತ್ತಾರೆ. ಗೂಬೆಯ ಮುಖವನ್ನು ಮುಂಜಾನೆ ನೋಡುವ ಸಲುವಾಗಿ ಕದ್ದುಮುಚ್ಚಿ ಸಾಕಿರುತ್ತಾರೆ. ಇದಕ್ಕಾಗಿ ಕದ್ದು ಸಾಗಣೆ ಮಾಡುತ್ತಾರೆ. 

ಗೂಬೆಗೆ ಕತ್ತಲಲ್ಲಿ ಕಾಣುತ್ತದೆ, ಹಗಲಲ್ಲಿ ಕಾಣುವುದಿಲ್ಲ, ಆದ್ದರಿಂದ ಅದು ಹಗಲು ಅಡಗಿದ್ದು ರಾತ್ರಿ ಸಂಚಾರ ಮಾಡುತ್ತದೆ. ಅದು ಯಾವ ಸಮಯದಲ್ಲಿ ಎಲ್ಲಿಗೆ ಹೋಗುತ್ತದೆ ಅನ್ನುವುದು ಗೊತ್ತೇ ಆಗುವುದಿಲ್ಲ. ಇದು ಲಕ್ಷ್ಮಿಗೆ ಅಗತ್ಯವಾಗಿತ್ತು. ಮಹಾಲಕ್ಷ್ಮಿ ಚಂಚಲೆ ಎಲ್ಲಿಂದ ಎಲ್ಲಿಗೆ, ಯಾವಾಗ, ಹೇಗೆ ಸಂಚರಿಸುತ್ತಾಳೆ ಗೊತ್ತಿರುವುದಿಲ್ಲ. ಇಂದು ಇಲ್ಲಿ , ನಾಳೆ ಇನ್ನೆಲ್ಲೋ ಎಂಬಂತೆ, ಹೀಗಾಗಿ ಲಕ್ಷ್ಮಿಯ ವಾಹನ ಗೂಬೆ. ಅದರ ದುಂಡನೆ ಕಣ್ಣುಗಳು ದುಂಡಗಿರುವ ಸುವರ್ಣ ನಾಣ್ಯಗಳನ್ನು ನೆನಪಿಸುತ್ತದೆ. ಲಕ್ಷ್ಮಿಗೆ ಗೂಬೆ ವಾಹನವಾದ ಕುರಿತು ಬೇರೆಬೇರೆ ಕಥೆಗಳು ಇದ್ದಾವೆ. 

ವಂದೇ ಲಕ್ಷ್ಮೀಂ ಪರಶಿವಮಯೀಂ
ಶುದ್ಧ ಜಾಂಬುನದಾಭಾಂ
ತೇಜೋರೂಪಂ ಕನಕ ವಸನಾಂ
ಸರ್ವ ಭೊಷೋಜ್ವಲಾಂಗೀಮ್
ಬಿಜಾಪೂರಂ ಕನಕ ಕನಕ ಕಲಶಂ
ಹೇಮ ಪದ್ಮಂ ದಧಾನಾಂ
ಆಧ್ಯಾಂ ಶಕ್ತಿಂ ಸಕಲ ಜನನೀಂ
ವಿಷ್ಣು ವಾಮಾಂಶ ಸಂಸ್ಥಾಮ್ ! 

ವಂದನೆಗಳೊಂದಿಗೆ,
ಸಂಗ್ರಹಣೆ : ಫೇಸ್ಬುಕ್ ಬುಕ್
[28/07, 1:16 PM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌ ‌ ‌ ‌ ‌ ‌ ‌                                                          
*ಗುರು ಪುಷ್ಯ ಯೋಗ: ಈ ದಿನ ಯಾವೆಲ್ಲ ಕೆಲಸ ಕಾರ್ಯಗಳಿಗೆ ಶುಭದಿನ ಗೊತ್ತಾ?*

ಭಾರತೀಯ ಜ್ಯೋತಿಷ್ಯದ ಪ್ರಕಾರ ಕೆಲವು ತಿಥಿ, ನಕ್ಷತ್ರ ಹಾಗೂ ದಿನಗಳ ಸಂಯೋಜನೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ದಿನದಂದು ಕೆಲವು ಕಾರ್ಯಗಳನ್ನು ಕೈಗೊಂಡರೆ ಅಥವಾ ಹೊಸದನ್ನು ಪ್ರಾರಂಭಿಸಿದರೆ ಶುಭವೆಂದು ಹೇಳಲಾಗುತ್ತದೆ. ಈ ಶುಭ ಸಮಯ ಅಥವಾ ಶುಭ ಮುಹೂರ್ತವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಶುಭ ದಿನದಲ್ಲಿ ಗುರು ಪುಷ್ಯ ಯೋಗವೂ ಒಂದು. ಪುಷ್ಯಾ ನಕ್ಷತ್ರವು ಗುರುವಾರದಂದು ಬಂದರೆ ಅದನ್ನು ಗುರು ಪುಷ್ಯ ಯೋಗವೆಂದು ಕರೆಯಲಾಗುತ್ತದೆ. ಈ ಯೋಗದ ಮಹತ್ವ ಹಾಗೂ ಈ ತಿಂಗಳಲ್ಲಿ ಗುರು ಪುಷ್ಯ ಯೋಗ ಯಾವಾಗ ಬರಲಿದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.
                                                                                                          *ಗುರು ಪುಷ್ಯ ಯೋಗ ಎಂದರೆ*

ಯಾವಾಗ ಪುಷ್ಯಾ ನಕ್ಷತ್ರವು ಗುರುವಾರದ ದಿನ ಬೀಳುತ್ತದೆಯೋ ಆ ಶುಭ ಯೋಗವನ್ನು ಗುರು ಪುಷ್ಯ ಯೋಗವೆಂದು ಕರೆಯುತ್ತಾರೆ. ಈ ಯೋಗವನ್ನು ಗುರು ಪುಷ್ಯ ಅಮೃತ ಯೋಗವೆಂದೂ ಕರೆಯುತ್ತಾರೆ. ಗುರುಗ್ರಹವು ಜ್ಞಾನದ ಸಂಕೇತವಾಗಿದೆ. ಇದಲ್ಲದೇ ಗುರುವನ್ನು ಅತ್ಯಂತ ಶುಭಗ್ರಹವೆಂದು ಕರೆಯುತ್ತಾರೆ. ಇದಲ್ಲದೇ ಪುಷ್ಯಾ ನಕ್ಷತ್ರವನ್ನೂ ಮೃದು ಹಾಗೂ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಹಾನಕ್ಷತ್ರವೆಂದೂ ಕರೆಯುತ್ತಾರೆ. ಈ ಗುರು ಗ್ರಹ ಹಾಗೂ ಪುಷ್ಯಾ ನಕ್ಷತ್ರ ಸೇರಿದಾಗ ಉತ್ತಮ ಅವಧಿ ಪ್ರಾರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ಕೈಗೊಂಡ ಯಾವುದೇ ಚಟುವಟಿಕೆಯು ಶುಭವಾಗಿ ಪರಿಣಮಿಸುತ್ತದೆ. ಇದೇ ಪುಷ್ಯಾ ನಕ್ಷತ್ರವು ಭಾನುವಾರ ಬಂದರೆ ಅದನ್ನು ರವಿಪುಷ್ಯ ಯೋಗವೆಂದು ಕರೆಯುತ್ತಾರೆ. ಇದೇ ಜುಲೈ 29 ರಂದು ಅಂದರೆ ನಾಳೆ ಗುರುವಾರ ಶುಭಯೋಗವಾದ ಗುರು ಪುಷ್ಯ ಯೋಗ ಉಂಟಾಗಲಿದೆ. 

*​ದೀರ್ಘಾವಧಿಯ ಫಲ ನೀಡುವ ಈ ಯೋಗ*

ಯಾವುದೇ ಶುಭ ಕಾರ್ಯವನ್ನು ಈ ದಿನ ಪ್ರಾರಂಭಿಸಬಹುದು. ಆದರೆ ಈ ಶುಭ ಯೋಗದಲ್ಲಿ ಮದುವೆಯ ಆಚರಣೆಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಯೋಗವು ಮದುವೆಯ ವಿಚಾರದಲ್ಲಿ ಶಾಪಗ್ರಸ್ತ ಯೋಗವಾಗಿದೆ. ವಿಶೇಷ ಲಾಭವನ್ನು ಪಡೆಯಲು ಮಾಡುವಂತಹ ಹವನಗಳಿಗೆ ಈ ದಿನ ಅತ್ಯಂತ ಶುಭ ಹಾಗೂ ಫಲದಾಯಕ. ಗುರು ಪುಷ್ಯ ಯೋಗದಂದು ಗುರು ಮಂತ್ರವನ್ನು ಪಠಿಸಬಹುದು. ವ್ಯವಹಾರಕ್ಕೆ ಸಂಬಂಧಪಟ್ಟ ಮಾತುಕತೆಗೂ ಇದು ಶುಭದಿನ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವಂತೆ ಶನಿ ಮತ್ತು ಗುರು ಇಬ್ಬರೂ ಈ ಯೋಗದ ಮೇಲೆ ಶುಭ ಪರಿಣಾಮವನ್ನು ಬೀರುತ್ತಾರೆ. ಆದ್ದರಿಂದ ದೀರ್ಘಕಾಲದವರೆಗೆ ಪ್ರಯೋಜನ ಪಡೆಯುವಂತಹ ಕೆಲಸಗಳನ್ನು ಈ ಯೋಗದಲ್ಲಿ ಪ್ರಾರಂಭಿಸಬೇಕು.

*​ಯಾವ ಕಾರ್ಯಗಳನ್ನು ಮಾಡಬಹುದು ಗೊತ್ತಾ ?*

ಗುರುಪುಷ್ಯಯೋಗವು ಈ ಕೆಳಗೆ ಹೇಳಿರುವಂತಹ ಕಾರ್ಯಗಳ ಆರಂಭಕ್ಕೆ ಅತ್ಯಂತ ಶುಭದಿನವಾಗಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ, ಶಿಲಾಕಲ್ಲು ಹಾಕಲು,
ಮಂತ್ರ-ತಂತ್ರವನ್ನು ಕಲಿಯಲು, ಹಾಗೂ ತಂದೆ, ಅಜ್ಜ, ಗುರುವು ಕಲಿತ ಜ್ಞಾನವನ್ನು ಸಂಪಾದಿಸಲು.
ಹೊಸ ಅಂಗಡಿ- ಕಚೇರಿಯ ಉದ್ಘಾಟನೆಗೆ
ಚಿನ್ನ ಮತ್ತು ಆಭರಣಗಳ ಖರೀದಿಗೆ ಶುಭ ದಿನ
ಹೊಸ ಮನೆ ಖರೀದಿಗೆ ಅಥವಾ ಹೊಸ ಮನೆ ಸ್ಥಳಾಂತರಕ್ಕೆ ಶುಭದಿನ
ದೊಡ್ಡ ವ್ಯವಹಾರಗಳನ್ನು ಆರಂಭಿಸಲೂ ಗುರು ಪುಷ್ಯ ಯೋಗವು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
 ‌ ಆದರೆ,​ *ಗುರು ಪುಷ್ಯ ಯೋಗದಲ್ಲಿ ಮದುವೆ ಕಾರ್ಯ ನಿರ್ವಹಿಸುವುದು ಮಾತ್ರ ಅಶುಭ*. ಏಕೆಂದರೆ,
ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ತನ್ನ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮದುವೆ ದಿನ ಬ್ರಹ್ಮನು ತನ್ನ ಮಗಳ ಅಪ್ರತಿಮ ಸೌಂದರ್ಯವನ್ನು ನೋಡಿ, ಆಕರ್ಷಿತನಾಗುತ್ತಾನೆ. ಮನಸ್ಸು ಗೊಂದಲಕ್ಕೊಳಗಾಗುತ್ತದೆ. ತಾನೇ ತನ್ನ ಸ್ವಂತ ಪುತ್ರಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಬ್ರಹ್ಮನ ಈ ಮೋಹವು ಭಂಗವಾಗುತ್ತದೆ. ಇದರಿಂದ ಕೋಪಿಷ್ಠನಾದ ಬ್ರಹ್ಮನು ಪುಷ್ಯಾ ನಕ್ಷತ್ರವನ್ನು ಶಾಪಕ್ಕೀಡು ಮಾಡುತ್ತಾನೆ. ಅದೇನೆಂದರೆ ಯಾರು ಪುಷ್ಯಾ ನಕ್ಷತ್ರದಲ್ಲಿ ಮದುವೆಯಾಗುತ್ತಾರೋ ಅವರ ವೈವಾಹಿಕ ಜೀವನವು ವಿಫಲವಾಗಲಿ ಎಂದು ಈ ನಕ್ಷತ್ರಪುಂಜವನ್ನು ಶಪಿಸಿದನು. ಅಂದಿನಿಂದ ಪುಷ್ಯಾ ನಕ್ಷತ್ರದಲ್ಲಿ ವಿವಾಹ ವಿಧಿಗಳನ್ನು ನೆರವೇರಿಸಲಾಗುವುದಿಲ್ಲ.

​ಹೊಸ ಯೋಜನೆಗಳಿಗೆ ಸಕಾಲ
ಪ್ರಸ್ತುತ ಗುರು ಮತ್ತು ಶನಿಯ ವಕ್ರ ಚಲನೆಯು ಸ್ವಲ್ಪ ಸಮಾಧಾನಕರವಾಗಿರುತ್ತದೆ. ಅನೇಕ ಸ್ಥಗಿತಗೊಂಡಿರುವ ಯೋಜನೆಗಳು ಮತ್ತು ಕಾರ್ಯಗಳು ಆರಂಭಗೊಳ್ಳುವುದು. ವೈದ್ಯಕೀಯ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶಗಳು ಸಿಗುವುದು. ಜನರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರ ಪ್ರತಿಫಲವು ಮುಂದಿನ ದಿನಗಳನ್ನು ಉತ್ತಮವಾಗಿರಿಸುವುದು.
[28/07, 1:16 PM] Pandit Venkatesh. Astrologer. Kannada: 🤩🍁" ಗೌರಿ ಬಾಗಿನ - ದಾನಗಳು ಮತ್ತು ಫಲಗಳು"🍁🤩



🍇ಕೆಲವು ದಾನಗಳ ಮಾಹಿತಿ ಅದರಲ್ಲೂ ಗೌರಿ ಬಾಗಿನ ದಾನಗಳು ಮತ್ತು ಫಲಗಳು..

🌻ಅರಿಶಿನ ದಾನ :

🌷ಅರಿಶಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಶಿನ ಕೊಡುತ್ತಾರೆ.

🌻ಕುಂಕುಮ ದಾನ :

🌷ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸುನಿಂದ ಕಾಣುವರು ಕುಂಕುಮ ಧಾರಣೆಯಿಂದ ದೈವಶಕ್ತಿ ಅಧಿಕವಾಗುತದೆ. ದೃಷ್ಟಿದೋಷ ನಿವಾರಣೆ ಆಗುತ್ತದೆ. ಕೋಪ, ಹಠ,ಕಡಿಮೆ ಆಗುತ್ತದೆ.

🌻ಸಿಂಧೂರ ದಾನ :

🌷ಸತಿ, ಪತಿ ಕಲಹ ನಿವಾರಣೆ , ರೋಗಭಾಧೆ, ಋಣಭಾದೆ, ನಿವಾರಣೆ. ಮನೆಯಲ್ಲಿ ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ಈ ಕಾರಣಕ್ಕೆ ಶ್ರೀ ಆಂಜನೇಯ ಸ್ವಾಮಿಗೆ ಕೇಸರಿ ಅಲಂಕಾರ ಮಾಡುತ್ತಾರೆ.

🌻ಕನ್ನಡಿ ದಾನ :

🌷ಕನ್ನಡಿಗೆ ಸಂಸ್ಕೃತದಲ್ಲಿ "ದರ್ಪಣ" ಎನ್ನುತ್ತಾರೆ. ಇದನ್ನು ಯಾರು ಪ್ರತಿದಿನ ನೋಡುತ್ತಾರೆಯೋ ಅವರಿಗೆ ಅಪಮೃತ್ಯು ಬರುವುದಿಲ್ಲ. ಮನೆಯಲ್ಲಿ ಕನ್ನಡಿ, ದೇವರ , ಹಿರಿಯರು ಉಪಯೋಗಿಸುವ ಬೆತ್ತ , ಒಡೆಯಬಾರದು. ಕನ್ನಡಿ ದಾನ ಮಾಡುವುದರಿಂದ ಚರ್ಮವ್ಯಾಧಿ ಬರುವುದಿಲ್ಲ, ದೇವರಿಗೆ, ದೇವಾಲಯಗಳಲ್ಲಿ ದರ್ಪಣ ಸೇವೆ ಮಾಡಿಸಿದರೆ, ನಿಮ್ಮ ಸಮಸ್ತ ಪಾಪಗಳೂ ನಿವಾರಣೆಯಾಗುತ್ತದೆ. ಮನೆಯಲ್ಲಿ ಮುಸುಕಾದ, ಒಡೆದ ಕನ್ನಡಿಯನ್ನು ಬಳಸಿದರೆ, ದಾರಿದ್ರ್ಯ ಹಾಗೂ ಬಡತನ ಬರುತ್ತದೆ.

🌻ಬಾಚಣಿಗೆ ದಾನ :

🌷ಬಾಚಣಿಗೆ ದಾನ ಮಾಡುವುದರಿಂದ, ಮುಖದಲ್ಲಿ ತೇಜಸ್ಸು ಹೆಚ್ಚಾಗಿ, ಮನೆಯಲ್ಲಿ ಅಲಂಕಾರದ ವಸ್ತುಗಳು ಜಾಸ್ತಿಯಾಗುತ್ತದೆ.

🌻ಕಾಡಿಗೆ :

🌷ಕಾಡಿಗೆ ದಾನ ಮಾಡುವುದರಿಂದ ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತದೆ, ಮನೆಯ ಮೇಲೆ ಆಗಿರುವ, ಅಥವ ದಂಪತಿಗಳ ಮೇಲೆ ಆಗಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

🌻ಅಕ್ಕಿ :

🌷ಅಕ್ಕಿ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಅನ್ನಪೂರ್ಣೇಶ್ವರೀ ದೇವಿ ತೃಪ್ತಳಾಗುತ್ತಾಳೆ. ಧನಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮನೆಯಲ್ಲಿ ಶಾಂತ ವಾತಾವರಣ ಇದ್ದು, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ.
ತೊಗರಿಬೇಳೆ :

🌷ತೊಗರಿಬೇಳೆ ದಾನ ಮಾಡುವುದರಿಂದ ಕುಜದೋಷ ನಿವಾರಣೆಯಾಗುತ್ತದೆ. ಪ್ರತಿದಿವಸ ತೊಗರಿಬೇಳೆಯನ್ನು ಯಾರು ತಿನ್ನುತ್ತಾರೋ ಅವರಿಗೆ ಧೈರ್ಯ ಜಾಸ್ತಿ ಇರುತ್ತದೆ , ಈ ಕಾರಣಕ್ಕೆ ಹುಳಿ ಮತ್ತು ಸಾಂಬಾರ್ ತೊಗರಿಬೇಳೆ ಜಾಸ್ತಿ ಉಪಯೋಗಿಸುವುದು. ತೊಗರಿಬೇಳೆ ದಾನದಿಂದ ಸತಿಪತಿ ಕಲಹ ನಿವಾರಣೆಯಾಗುತ್ತದೆ, ದೇಹದಲ್ಲಿರುವ ಹೊರಟುಹೋಗುತ್ತದೆ. ಅಧಿಕ ರಕ್ತದ ಒತ್ತಡ ಇರುವವರು ಒಂಬತ್ತು ಮಂಗಳವಾರ ತೊಗರಿಬೇಳೆ ದಾನವನ್ನು ಮಾಡಿದರೆ, ಆರೋಗ್ಯವಂತರಾಗಿ, ಧೃಡಕಾಯ ಶರೀರ ಪಡೆಯುತ್ತಾರೆ.

🌻ಉದ್ದಿನ ಬೇಳೆ :

🌷ಪ್ರತೀ ತಿಂಗಳು, ಪ್ರತೀ ವರ್ಷ, ಮಹಾಲಯ ಅಮಾವಾಸ್ಯೆ, ತರ್ಪಣ ಕೊಡದೇ ಇದ್ದರೆ, ವೈಧಿಕ ಮಾಡುವಾಗ ದೋಷಗಳಾಗಿದ್ದರೆ, ಜಾತಕದಲ್ಲಿ ಪಿತೃಶಾಪ ಇದ್ದರೆ, ಮಕ್ಕಳು ಕೆಟ್ಟದಾರಿಯಲ್ಲಿ ನಡೆಯುತ್ತಿದ್ದರೆ, ಶತೃಗಳ ಕಾಟ ಜಾಸ್ತಿ ಆಗಿದ್ದರೆ, ಉದ್ದಿನ ಬೇಳೆ ದಾನ ಮಾಡುವುದರಿಂದ ಈ ದೋಷಗಳೆಲ್ಲಾ ನಿವಾರಣೆಯಾಗುತ್ತದೆ .

🌻ತೆಂಗಿನಕಾಯಿ:

🌷ತೆಂಗಿನಕಾಯಿಗೆ ಅಧಿದೇವತೆ ಸಂತಾನ ಲಕ್ಷ್ಮಿ, ಇಷ್ಟಾರ್ಥ ಪ್ರದಾಯಿನಿ ಅಂತನೂ ಕರೆಯುತ್ತಾರೆ. ಮಕ್ಕಳಾಗಿಲ್ಲ, ಸಂತಾನ ಸಮಸ್ಯೆ ಇರುವರು ತೆಂಗಿನಕಾಯಿ ದಾನ ಮಾಡುತ್ತಾ ಬಂದರೆ ಸಂತಾನವಾಗುತ್ತದೆ. ನಮ್ಮ ಕಾರ್ಯಗಳು ಶೀಘ್ರವಾಗಿ ಮತ್ತು ನಿರ್ವಿಘ್ನವಾಗಿ, ಲಾಭವಾಗಿ ನಡೆಯಲಿ ಅನ್ನೋ ಕಾರಣಕ್ಕೆ " ಪೂರ್ಣಫಲ" ಇಟ್ಟು ನೈವೇದ್ಯ ಮಾಡಬೇಕು. ತಾಂಬೂಲದ ಜೊತೆ ತೆಂಗಿನಕಾಯಿ ದಾನ ಮಾಡುವುದರಿಂದ "ಅಶ್ವಮೇಧಯಾಗದ" ಫಲ ಬರುತ್ತದೆ. ಸಕಲ ಕಷ್ಟಗಳೂ ನಿವಾರಣೆಯಾಗುತ್ತದೆ .

🌻ವೀಳ್ಯದೆಲೆ :

🌷ವೀಳ್ಯದೆಲೆಗೆ ದೇವತೆ ಧನಲಕ್ಷ್ಮೀ. ವೀಳ್ಯದೆಲೆ ತಾಂಬೂಲ ದಾನ ಮಾಡುವುದರಿಂದ ಅಧಿಕವಾದ ಧನ ಪ್ರಾಪ್ತಿಯಾಗುತ್ತದೆ , ಮಹಾಲಕ್ಷ್ಮಿಯು ಅಂತಹ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ, ಗಂಗಾದೇವಿ ಪ್ರಸನ್ನಳಾಗುತ್ತಾಳೆ. ಮನೆಯ ಮುಂದೆ ವೀಳ್ಯದೆಲೆ ಬಳ್ಳಿ ಬೆಳೆದರೆ, ಆ ಮನೆಯ ಸರ್ವ ದೋಷವೂ, ವಾಸ್ತು ದೋಷವೂ ನಿವಾರಣೆಯಾಗುತ್ತದೆ .

🤩ವೀಳ್ಯದೆಲೆ :

🌷ವೀಳ್ಯದೆಲೆಗೆ ದೇವತೆ ಧನಲಕ್ಷ್ಮೀ. ವೀಳ್ಯದೆಲೆ ತಾಂಬೂಲ ದಾನ ಮಾಡುವುದರಿಂದ ಅಧಿಕವಾದ ಧನ ಪ್ರಾಪ್ತಿಯಾಗುತ್ತದೆ , ಮಹಾಲಕ್ಷ್ಮಿಯು ಅಂತಹ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ, ಗಂಗಾದೇವಿ ಪ್ರಸನ್ನಳಾಗುತ್ತಾಳೆ. ಮನೆಯ ಮುಂದೆ ವೀಳ್ಯದೆಲೆ ಬಳ್ಳಿ ಬೆಳೆದರೆ, ಆ ಮನೆಯ ಸರ್ವ ದೋಷವೂ, ವಾಸ್ತು ದೋಷವೂ ನಿವಾರಣೆಯಾಗುತ್ತದೆ .

🌻ಅಡಿಕೆ :

🌷ಅಡಿಕೆಗೆ ಸಂಸ್ಕೃತದಲ್ಲಿ ಪೂಗೀಫಲ ಎನ್ನುತ್ತಾರೆ. ಯಾರು ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ, ಬಹಳ ಬೇಗ ಬಯಕೆಗಳು ಈಡೇರುತ್ತವೆ. ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾದೋಷ ಬರುತ್ತದೆ.

🌻ಫಲದಾನ :

🌷ಫಲದಾನಕ್ಕೆ ಜ್ಞಾನಲಕ್ಷ್ಮಿ ಅಧಿಪತಿ. ಫಲದಾನ ಮಾಡುವುದರಿಂದ ನಿಮ್ಮ ಕಾರ್ಯಗಳು ಸುಸೂತ್ರವಾಗಿ, ಸುಗಮವಾಗಿ ನಡೆಯುತ್ತದೆ, ಹಾಗೂ ಲಾಭದಾಯಕವಾಗುತ್ತದೆ. ಸ್ತ್ರೀ ಶಾಪ ನಿವಾರಣೆಯಾಗುತ್ತದೆ, ಗುರು ಪೂಜೆ ಮಾಡಿ ಹಣ್ಣು ದಾನ ಮಾಡಿದರೆ ಗುರುದೋಷಗಳು ನಿವಾರಣೆಯಾಗುತ್ತದೆ. ಅಮಾವಾಸ್ಯೆ ಅಥವ ವೈಧಿಕದ ದಿನ ಹಣ್ಣುದಾನ ಮಾಡಿದರೆ ಸಕಲ ಪಿತೃದೋಷ ನಿವಾರಣೆಯಾಗುತ್ತದೆ.

🌻ಬೆಲ್ಲದಾನ :

🌷ಬೆಲ್ಲದಲ್ಲಿ ಬ್ರಹ್ಮದೇವರು, ಶ್ರೀ ಮಹಾಲಕ್ಷ್ಮಿಯು, ಶ್ರೀ ಮಹಾ ಗಣಪತೀ ದೇವರ ಸಾನಿಧ್ಯ ಇರುತ್ತದೆ. ಬೆಲ್ಲವನ್ನು ದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ, ನಿತ್ಯದಾರಿದ್ರ್ಯ ಅನುಭವಿಸುವವರು ಬೆಲ್ಲಕ್ಕೆ ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾ ಬಂದರೆ ದಾರಿದ್ರ್ಯ ಹಾಗೂ ಬಡತನ ನಿವಾರಣೆಯಾಗುತ್ತದೆ. ಗಣಪತಿಗೆ ಬೆಲ್ಲ ಮತ್ತು ಮಹಾಲಕ್ಷ್ಮಿಗೆ ಬೆಲ್ಲದನ್ನ ನೈವೇದ್ಯ ಮಾಡಿದರೆ ತುಂಬಾ ವಿಶೇಷ, ಧನ ಧಾನ್ಯ ಸಮೃದ್ಧಿಯಾಗುತ್ತದೆ.


🤩ವಸ್ತ್ರದಾನ :

🌷ವಸ್ತ್ರದಾನ ಮಾಡುವುದರಿಂದ ಕುಲದೇವತೆ ತೃಪ್ತಿಯಾಗುತ್ತಾರೆ, ಸುಮಂಗಲೀ ದೋಷ ನಿವಾರಣೆಯಾಗುತ್ತದೆ. ಸ್ತ್ರೀ ದೋಷ ಮತ್ತು ಶಾಪಗಳು ನಿವಾರಣೆಯಾಗುತ್ತದೆ, ಸಕಲ ದೇವತೆಗಳು ತೃಪ್ತರಾಗುತ್ತಾರೆ. ಆರೋಗ್ಯಭಾಗ್ಯವಾಗುತ್ತದೆ. ದಾನವನ್ನು ತೆಗೆದುಕೊಂಡ ವಸ್ತ್ರಗಳನ್ನು ದಾನ ಮಾಡಬಾರದು. ಸುಮಂಗಲಿಯರು ಪ್ರತ್ಯಕ್ಷ ಸ್ತ್ರೀ ದೇವತೆಗಳ ಸ್ವರೂಪ, ಹಾಗೂ ಕುಲದೇವತಾ ಸ್ವರೂಪ. ಸುಮಂಗಲಿಯರಿಗೆ ಸೀರೆ ಸಮೇತ ವಸ್ತ್ರದಾನ ಮಾಡಿದರೆ, ಮನೆಯ ದಾರಿದ್ರ್ಯ ನಿವಾರಣೆಯಾಗುತ್ತದೆ .

🌻ಹೆಸರುಬೇಳೆ :

🌷ವಿದ್ಯಾಲಕ್ಷ್ಮಿ ಅನುಗ್ರಹವಾಗುತ್ತದೆ, ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಾರೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಹೆಸರುಬೇಳೆ ದಾನದಿಂದ ಸಕಲ ದೇವಿಗಳೂ ತೃಪ್ತರಾಗುತ್ತಾರೆ. ಮಾಟ ಮಂತ್ರ ಮನೆಯ ಮೇಲೆ ಕೆಲಸ ಮಾಡುವುದಿಲ್ಲ. ಹೆಂಗಸರ ಗರ್ಭಕೋಶದ ಸಮಸ್ಯೆ ನಿವಾರಣೆಯಾಗುತ್ತದೆ.

🌷ಬಾಗಿನದಲ್ಲಿ ನೀವು ಮೇಲಿನ ಹಂತಗಳನ್ನು ಅನುಸರಿಸಿದರೆ ನೀವು ಎಲ್ಲಾ ದೋಷಗಳನ್ನು ತೊಡೆದುಹಾಕಬಹುದು.
🍒"ಶ್ರೀ ಕೃಷ್ಣಾರ್ಪಣಮಸ್ತು"🍒
[28/07, 1:16 PM] Pandit Venkatesh. Astrologer. Kannada: ಅಮಾವಾಸ್ಯೆಯಂದು ವಿಶೇಷ ಸಂಯೋಗಗಳು ಇರುವ ಕಾರಣ ಈ ಶುಭ ಸಂದರ್ಭವನ್ನು ಬಳಿಸಿಕೊಳ್ಳಿ 

*ಧನಕ್ಕಾಗಿ* - ವಿಷ್ಣುಸಹಸ್ರನಾಮ ಹೇಳಿರಿ .

*ವಿದ್ಯೆಗಾಗಿ* ಗಣಪತಿ ಸಹಸ್ರನಾಮ ಪಾರಾಯಣ ಮಾಡಿ

*ಯಶಸ್ಸಿಗಾಗಿ* ಶಿವನ ಶತನಾಮವನ್ನು ೨೧ ದಿನಗಳ ಕಾಲ ಹೇಳಿ 

*ಉದ್ಯೋಗಕ್ಕಾಗಿ* ಲಲಿತಾ ಸಹಸ್ರನಾಮ ನಾಳೆಯ ದಿನ 3 ಬಾರಿ ಹೇಳಿ 

*ಶತ್ರು ನಿಗ್ರಹಕ್ಕಾಗಿ* ಕಾಲಿ ಚಾಲಿಸಾ 12 ಬಾರಿ ಪಠಿಸಿ 

*ನವಗ್ರಹ ದೋಷ ನಿವಾರಣೆಗೆ* ನವಗ್ರಹ ಸ್ತೋತ್ರ 21 ಬಾರಿ ಅಥವಾ ಸೂಕ್ತವನ್ನು 11 ಬಾರಿ ಹೇಳಿ 

*ಆರೋಗ್ಯಕ್ಕಾಗಿ* ಓಂ ದಂ ಧನ್ವಂತರಿಯೇ ನಮಃ 1008 ಬಾರಿ ಹೇಳಿ 

*ವಿವಾಹಕ್ಕಾಗಿ* ಗೌರಿ ಶತನಾಮವನ್ನು ಹೇಳಿ 

*ಕೀರ್ತಿಗಾಗಿ* ಶುಕ್ರ ಗಾಯತ್ರಿ 1008 ಬಾರಿ ಹೇಳಿ 

*ಶಾಂತಿಗಾಗಿ* ಶಿವಾಲಯದಲ್ಲಿ ತುಪ್ಪದ ದೀಪ ಹಚ್ಚಿ 

*ಸಂತಾನಕ್ಕಾಗಿ* ವಿಷ್ಣು ದೇವಳದಲ್ಲಿ ಪತಿ ಪತ್ನಿ ಇಬ್ಬರು 3 ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಅಥವಾ ಬಲ್ಲವರಿಂದ ಮಾಡಿಸಿ ಲಡ್ಡು ದಾನ ಮಾಡಿ .

*ಶಿವಾರ್ಪಣಂ*
[28/07, 1:16 PM] Pandit Venkatesh. Astrologer. Kannada: {ಗಾಯತ್ರಿ ಮಂತ್ರಗಳು} :-

ಓಂ ಭೂರ್ಭುವ: ಸ್ವ:
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನ: ಪ್ರಚೋದಯಾತ್


ಶ್ರೀ ಗಣೇಶ ಗಾಯತ್ರಿ ಮಂತ್ರಗಳು

ಓಂ ಲಂಬೋದರಾಯ ವಿದ್ಮಹೇ,
ಮಹೋದರಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಓಂ ಏಕದಂತಾಯ ವಿದ್ಮಹೇ,
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಓಂ ತತ್ಪುರುಷಾಯ ವಿದ್ಮಹೇ,
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್

ಶ್ರೀ ಅಗ್ನಿ ಗಾಯತ್ರಿ ಮಂತ್ರಗಳು

ಓಂ ಮಹಾಜ್ವಾಲಾಯ ವಿದ್ಮಹೇ,
ಅಗ್ನಿದೇವಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್
ಓಂ ವೈಶ್ವಾನರಾಯ ವಿದ್ಮಹೇ,
ಲಾಲೀಲಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್

ಶ್ರೀ ಬ್ರಹ್ಮ ಗಾಯತ್ರಿ ಮಂತ್ರ

ಓಂ ಚತುರ್ಮುಖಾಯ ವಿದ್ಮಹೇ,
ಹಂಸಾರೂಢಾಯ ಧೀಮಹೀ
ತನ್ನೋ ಬ್ರಹ್ಮ ಪ್ರಚೋದಯಾತ್

ಶ್ರೀ ದುರ್ಗಾ ಗಾಯತ್ರಿ ಮಂತ್ರ

ಓಂ ಕಾತ್ಯಾಯನಾಯ ವಿದ್ಮಹೇ,
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್

ಶ್ರೀ ವಾಸವಿ ಗಾಯತ್ರಿ ಮಂತ್ರ

ಓಂ ಕುಸುಮ ಪುತ್ರೀಚ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹಿ
ತನ್ನೋ ವಾಸವಿ ಪ್ರಚೋದಯಾತ್

ಶ್ರೀ ಹಯಗ್ರೀವ ಗಾಯತ್ರಿ ಮಂತ್ರ

ಓಂ ವಾಣಿಸ್ವರಾಯ ವಿದ್ಮಹೇ,
ಹಯಗ್ರೀವಾಯ ಧೀಮಹೀ
ತನ್ನೋ ಹಯಗ್ರೀವ ಪ್ರಚೋದಯಾತ್

ಶ್ರೀ ಕೃಷ್ಣ ಗಾಯತ್ರಿ ಮಂತ್ರಗಳು

ಓಂ ದಾಮೋದರಾಯ ವಿದ್ಮಹೇ,
ರುಕ್ಮಿಣಿ ವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಓಂ ಗೋವಿಂದಾಯ ವಿದ್ಮಹೇ,
ಗೋಪಿವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್

ಶ್ರೀ ನರಸಿಂಹ ಗಾಯತ್ರಿ ಮಂತ್ರ

ಓಂ ನರಸಿಂಹಾಯ ವಿದ್ಮಹೇ,
ವಜ್ರನಖಾಯ ಧೀಮಹೀ
ತನ್ನೋ ನರಸಿಂಹ ಪ್ರಚೋದಯಾತ್

ನಾರಾಯಣ ಗಾಯತ್ರಿ ಮಂತ್ರ

ಓಂ ನಾರಾಯಣಾಯ ವಿದ್ಮಹೇ,
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್

ಶ್ರೀ ಪೃಥ್ವಿ ಗಾಯತ್ರಿ ಮಂತ್ರ

ಓಂ ಪೃಥ್ವಿದೇವಾಯ ವಿದ್ಮಹೇ,
ಸಹಸ್ರ ಮೂರ್ತಯೇಚ ಧೀಮಹೀ
ತನ್ನೋ ಪೃಥ್ವಿ ಪ್ರಚೋದಯಾತ್

ಶ್ರೀ ರಾಮ ಗಾಯತ್ರಿ ಮಂತ್ರ

ಓಂ ದಶರಥಾಯ ವಿದ್ಮಹೇ,
ಸೀತಾವಲ್ಲಭಾಯ ಧೀಮಹೀ
ತನ್ನೋ ರಾಮ ಪ್ರಚೋದಯಾತ್

ಶ್ರೀ ಆಂಜನೇಯ ಗಾಯತ್ರಿ ಮಂತ್ರ

ಓಂ ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮಾನ್ ಪ್ರಚೋದಯಾತ್

ಶ್ರೀ ಇಂದ್ರ ಗಾಯತ್ರಿ ಮಂತ್ರ

ಓಂ ದೇವರಾಜಾಯ ವಿದ್ಮಹೇ
ವಜ್ರ ಹಸ್ತಾಯ ಧೀಮಹಿ
ತನ್ನೋ ಇಂದ್ರ ಪ್ರಚೋದಯಾತ್

ಶ್ರೀ ಬ್ರಹ್ಮ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ
ಚತುರ್ಮುಖಾಯ ಧೀಮಹಿ
ತನ್ನೋ ಬ್ರಹ್ಮ ಪ್ರಚೋದಯಾತ್

ಶ್ರೀ ಸರಸ್ವತಿ ಗಾಯತ್ರಿ ಮಂತ್ರ

ಓಂ ವಾಗ್ದೇವಿಯೈಚ ವಿದ್ಮಹೇ,
ವಿರಿಂಜಿ ಪತ್ನಿಯೈಚ ಧೀಮಹೀ
ತನ್ನೋ ವಾಣಿ ಪ್ರಚೋದಯಾತ್

ಶ್ರೀ ಸೀತಾ ಗಾಯತ್ರಿ ಮಂತ್ರ

ಓಂ ಜಾನಕಿನಂದಿನ್ಯೆ ವಿದ್ಮಹೇ,
ಭೂಮಿಜಾಯೈ ಧೀಮಹೀ
ತನ್ನೋ ಸೀತಾ ಪ್ರಚೋದಯಾತ್

ಶ್ರೀ ಶಿರಿಡಿಸಾಯಿ ಗಾಯತ್ರಿ ಮಂತ್ರ

ಓಂ ಶಿರಡಿವಾಸಾಯ ವಿದ್ಮಹೇ,
ಸಚ್ಚಿತಾನಂತಾಯ ಧೀಮಹೀ
ತನ್ನೋ ಸಾಯಿ ಪ್ರಚೋದಯಾತ್

ಶ್ರೀ ಶಿವ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ,
ಮಹಾದೇವಾಯ ಧೀಮಹೀ
ತನ್ನೋ ರುದ್ರ ಪ್ರಚೋದಯಾತ್

ಶ್ರೀ ಸುಬ್ರಮಣ್ಯ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ,
ಮಹಾಸೇನಾಯ ಧೀಮಹೀ
ತನ್ನೋ ಶನ್ಮುಗ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ವಲ್ಲಿನಾಥಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ಸಿಕಿವಾಹನಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ಶಕ್ತಿಹಸ್ತಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್

ಶ್ರೀ ಸುದರ್ಶನ ಗಾಯತ್ರಿ ಮಂತ್ರ

ಓಂ ಸುದರ್ಶನಾಯ ವಿದ್ಮಹೇ,
ಮಹಾಜ್ವಾಲಾಯ ಧೀಮಹೀ
ತನ್ನೋ ಚಕ್ರ ಪ್ರಚೋದಯಾತ್

ಶ್ರೀ ತುಲಸಿ ಗಾಯತ್ರಿ ಮಂತ್ರ

ಓಂ ತುಲಸೀ ದೇವ್ಯಾಯೈಚ ವಿದ್ಮಹೇ,
ವಿಷ್ಣುಪ್ರಿಯಾಯೈಚ ಧೀಮಹೀ
ತನ್ನೋ ಬೃಂದ ಪ್ರಚೋದಯಾತ್

ಶ್ರೀ ವರುಣ ಗಾಯತ್ರಿ ಮಂತ್ರ

ಓಂ ಜಲಬಿಂಬಾಯ ವಿದ್ಮಹೇ,
ನೀಲಪುರುಷಾಯ ಧೀಮಹೀ
ತನ್ನೋ ವರುಣ ಪ್ರಚೋದಯಾತ್

ಶ್ರೀ ವೆಂಕಟೇಶ್ವರ ಗಾಯತ್ರಿ ಮಂತ್ರ

ಓಂ ನಿರಂಜನಾಯ ವಿದ್ಮಹೇ,
ನಿರಾಭಾಸಾಯ ಧೀಮಹೀ
ತನ್ನೋ ಶ್ರೀನಿವಾಸ ಪ್ರಚೋದಯಾತ್

ಶ್ರೀ ಯಮ ಗಾಯತ್ರಿ ಮಂತ್ರ

ಓಂ ಸೂರ್ಯಪುತ್ರಾಯ ವಿದ್ಮಹೇ,
ಮಹಾಕಾಲಾಯ ಧೀಮಹೀ
ತನ್ನೋ ಯಮ ಪ್ರಚೋದಯಾತ್

ಶ್ರೀ ದತ್ತಾತ್ರೇಯ ಗಾಯತ್ರಿ ಮಂತ್ರಗಳು

ಓಂ ದತ್ತಾತ್ರೇಯ ವಿದ್ಮಹೇ
ಅತ್ರಿ ಪುತ್ರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದಿಗಂಬರಾಯ ವಿದ್ಮಹೇ
ಯೋಗೀಶ್ವರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದತ್ತಾತ್ರೇಯ ವಿದ್ಮಹೇ
ದಿಗಂಬರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದತ್ತಾತ್ರೇಯ ವಿದ್ಮಹೇ
ಅವಧೂತಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್

ಶ್ರೀ ಕುಬೇರ ಗಾಯತ್ರಿ ಮಂತ್ರ

ಓಂ ಯಕ್ಷರಾಜಾಯ ವಿದ್ಮಹೇ
ವೈಶ್ರಾವನಾಯ ಧೀಮಹಿ
ತನ್ನೋ ಕುಬೇರ ಪ್ರಚೋದಯಾತ್

ಶ್ರೀ ತುಳಸಿ ಗಾಯತ್ರಿ ಮಂತ್ರ

ಓಂ ತುಳಸಿಯಾಯ ವಿದ್ಮಹೇ
ತ್ರಿಪುರಾರ್ಯಾಯ ಧೀಮಹಿ
ತನ್ನೋ ತುಳಸಿ ಪ್ರಚೋದಯಾತ್

ಶ್ರೀ ನವಗ್ರಹ ಗಾಯತ್ರಿ ಮಂತ್ರಗಳು

ಶ್ರೀ  ಸೂರ್ಯ ಗಾಯತ್ರಿ ಮಂತ್ರ
ಓಂ ಭಾಸ್ಕರಾಯ ವಿದ್ಮಹೇ
ದಿವಾಕರಾಯ ಧೀಮಹಿ
ತನ್ನೋ ಸೂರ್ಯ ಪ್ರಚೋದಯಾತ್

ಶ್ರೀ  ಚಂದ್ರ ಗಾಯತ್ರಿ ಮಂತ್ರ

ಓಂ ಕೃಷ್ಣ ಪುತ್ರಾಯ ವಿದ್ಮಹೇ
ಅಮೃತದ್ವಾಯ ಧೀಮಹಿ
ತನ್ನೋ ಚಂದ್ರ ಪ್ರಚೋದಯಾತ್

ಶ್ರೀ ಅಂಗಾರಕ ಗಾಯತ್ರಿ ಮಂತ್ರ

ಓಂ ಅಂಗಾರಕಾಯ ವಿದ್ಮಹೇ
ಶಕ್ತಿ ಹಸ್ತಾಯ ಧೀಮಹಿ
ತನ್ನೋ ಕುಜ ಪ್ರಚೋದಯಾತ್

ಶ್ರೀ ಬುಧ ಗಾಯತ್ರಿ ಮಂತ್ರ

ಓಂ ಗಜಧ್ವಜಾಯ ವಿದ್ಮಹೇ
ಸುಖ ಹಸ್ತಾಯ ಧೀಮಹಿ
ತನ್ನೋ ಬುಧ ಪ್ರಚೋದಯಾತ್

ಶ್ರೀ ಗುರು ಗಾಯತ್ರಿ ಮಂತ್ರ

ಓಂ ಸುರಾಚಾರ್ಯಾಯ ವಿದ್ಮಹೇ
ದೇವ ಪೂಜ್ಯಾಯ ಧೀಮಹಿ
ತನ್ನೋ ಗುರು ಪ್ರಚೋದಯಾತ್

ಶ್ರೀ ಶುಕ್ರ ಗಾಯತ್ರಿ ಮಂತ್ರ

ಓಂ ಅಶ್ವಧ್ವಜಾಯ ವಿದ್ಮಹೇ
ದೈತ್ಯಾಚಾರ್ಯಾಯ ಧೀಮಹಿ
ತನ್ನೋ ಶುಕ್ರ ಪ್ರಚೋದಯಾತ್

ಶ್ರೀ ಶನಿ ಗಾಯತ್ರಿ ಮಂತ್ರ

ಓಂ ಕಾಕಧ್ವಜಾಯ ವಿದ್ಮಹೇ
ಖಡ್ಗ ಹಸ್ತಾಯ ಧೀಮಹಿ
ತನ್ನೋ ಶನಿ ಪ್ರಚೋದಯಾತ್
***
[28/07, 1:16 PM] Pandit Venkatesh. Astrologer. Kannada: ಆಷಾಢ ; ಶ್ರಾವಣ ಮಾಸಗಳಲ್ಲಿ ಲಕ್ಷ್ಮೀಪೂಜಾ ವ್ರತ ಆಚರಣೆ ಸಂಕ್ಷಿಪ್ತವಾಗಿ
( ಶ್ರೀ ಸೂಕ್ತ ಮತ್ತು ಅಷ್ಟೋತ್ತರವನ್ನು ಕೊಡಲಾಗಿದೆ )

ಚಾತುರ್ಮಾಸ ದ ಈ ಕಾಲ "ಲಕ್ಷ್ಮೀ ಪೂಜೆ" ಗೆ ಸಕಾಲ ಈ ಪೂಜೆಯನ್ನು ( ವ್ರತವನ್ನು) ಶುಕ್ರವಾರ ಅಥವ 
ಹುಣ್ಣಿಮೆ ; ಅಮಾವಾಸ್ಯೆ ಮಂಗಳವಾರ ಮಾಡುತ್ತಾರೆ.
ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಯಾವುದೇ ಶುಕ್ರವಾರ
ಲಕ್ಷ್ಮೀ ದೇವಿಗೆ ಪೂಜೆ ಮಾಡಬಹುದು..

ವಿಧಾನ--:
ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ
ಸಾಮಗ್ರಿಗಳು:
ರಂಗೋಲಿ , ಮಣೆ / ಮಂಟಪ
ಲಕ್ಷ್ಮೀ ವಿಗ್ರಹ ಅಥವಾ ಕಲಶ (ದೇವರ ಪಟ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ, 
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ - ಹಾಲು,
ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ - ಹಣ್ಣು ಕಾಯಿ ಫಲವಸ್ತು 
(ಪಾಯಸ,ಹುಗ್ಗಿ, ಅನ್ನ, ಕೋಸಂಬರಿ, ನೀರಲ್ಲಿ ನೆನೆ ಹಾಕಿದ ಕಡಲೆ ), ಇತ್ಯಾದಿ #*ಯೋಗ್ಯತಾನುಸಾರ*
ಕರ್ಪೂರ,
ಮಂಗಳಾರತಿ ಬತ್ತಿ
ಆರತಿ ತಟ್ಟೆ, 
ಹೂಬತ್ತಿ,
ಇತ್ಯಾದಿ ಇವುಗಳೊಂದಿಗೆ
ಇನ್ನು ಹಲವಾರು ವಸ್ತುಗಳ ಬಳಕೆ
ಮಾಡಬಹುದು (ಮುಖ್ಯವಾಗಿ ಅಲಂಕಾರ
ಮಾಡುವುದಕ್ಕೆ ಮನೆಯಲ್ಲಿನ ಹೂ ಮತ್ತು ಪತ್ರೆ ಅತ್ಯಂತ ಶ್ರೇಷ್ಟ.)
ಅವರವರ ಯೋಗ್ಯತೆ ಗೆ ಅನುಸಾರ
ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ
ಅವಲಂಭಿಸಿದೆ.

ನಿಯಮಗಳು

1 ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.

2)ವ್ರತ ಮಾಡುವವರು ಪೂಜೆ
ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ
ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ
ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ
ಸ್ಥಾಪಿಸಬೇಕು.
3)ಬಾವಿಯಿಂದ ಒಂದು ಕಲಶದಲ್ಲಿ 
ನೀರು ಹಾಕಿ, ಜೊತೆಗೆ ಅರಿಶಿನ ಕುಂಕುಮ,
ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ 
ಹಾಕಿ,ಕಳಶದ ಬಾಯಿಗೆ ಮಾವಿನ
ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ
ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ
ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ
ಜೋಡಿಸಬಹುದು) ಈ ಕಳಶವನ್ನು ಅಕ್ಕಿ ಹರಡಿರುವ
ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ
ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ
ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ
ಅಲಂಕಾರ ಮಾಡಬಹುದು. ಈ ಕಲಶಕ್ಕೆ
ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ,
ಕಲಶವನ್ನು ಪೂಜೆ ಮಾಡಬೇಕು.
4)ಪೂಜಾ ವಿಧಾನ
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು.
ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ
ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ
ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ
ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ
ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ
ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬಹುದು

ವರ್ತಮಾನೇ ವ್ಯಾವಹಾರಿಕೇ ಶುಭ ಕೃತ್ ನಾಮ 
ಸಂವತ್ಸರೇ, ದಕ್ಷಿಣಾಯನೇ ,...
ಗ್ರೀಷ್ಮ ಋತೌ , ಆಷಾಢ ಮಾಸೇ ,ಶುಕ್ಲ (ಕೃಷ್ಣ)ಪಕ್ಷೇ , ...
.....ತಿಥಿಯಾಂ ,ಶುಕ್ರ(ಭೃಗು )ವಾಸರ ಯುಕ್ತಾಯಾಂ , ಶುಭ
ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ ಶ್ರೀ ....ಮಹಾಲಕ್ಷ್ಮೀ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ ಕರಿಷ್ಯೇ.

ಧ್ಯಾನ 
||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕ
ಪೂಜಿತೆ|
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ"...||
(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)
1.ಆವಾಹನೆ - (ಅಂದರೆ ಆಹ್ವಾನ. ದೇವರನ್ನು ನಿಮ್ಮ
ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು.)ಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ
ಹಾಕುವುದು.ಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಅರ್ಘ್ಯಂ ಸಮರ್ಪಯಾಮಿ(ಹರಿವಾಣದಲ್ಲಿ ನೀರು ಬಿಡುವುದು)

5.ಆಚಮನ - ಕುಡಿಯುವುದಕ್ಕೆ
ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಆಚಮನಂ ಸಮರ್ಪಯಾಮಿ

6.ಸ್ನಾನ - ಶುದ್ಧೋದಕ (ನೀರು)
ಮತ್ತು ಪಂಚಾಮೃತದಿಂದ ಸ್ನಾನ
ಮಹಾಲಕ್ಷ್ಮೀಯೇ ನಮಃ ಸ್ನಾನಂ ಸಮರ್ಪಯಾಮಿ

7.ವಸ್ತ್ರ - ಧರಿಸಲು ಉಡುಪು ಕೊಡುವುದು .
ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ
( ಜನಿವಾರ), ಆಭರಣವನ್ನು (ಬಳೆ-
ಬಿಚ್ಚೋಲೆ )ಸಮರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ವಸ್ತ್ರಂ ಸಮರ್ಪಯಾಮಿ

8.ಹರಿದ್ರ, ಕುಂಕುಮ,
ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ ,
ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ.ಹರಿದ್ರ, ಕುಂಕುಮ,
ಗಂಧ, ಅಕ್ಷತಾಂ - ಸಮರ್ಪಯಾಮಿ
[28/07, 1:16 PM] Pandit Venkatesh. Astrologer. Kannada: 9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ
ಅಲಂಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ಪುಷ್ಪಂ ಸಮರ್ಪಯಾಮಿ

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ
ದೇವರನ್ನು ಸ್ಮರಣೆ ಮಾಡುವುದು.(ಪೋಟೋದಲ್ಲಿ ಕೊಟ್ಟಿದೆ.) ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ
11.ಧೂಪ - ಪರಿಮಳಯುಕ್ತವಾದ
ಧೂಪವನ್ನು ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ಧೂಪಂ ಸಮರ್ಪಯಾಮಿ

12.ದೀಪ - ದೀಪ
ಸಮರ್ಪಣೆ ಮಾಡುವುದು.
ಮಹಾಲಕ್ಷ್ಮೀಯೇ ನಮಃ ದೀಪಂ ಸಮರ್ಪಯಾಮಿ
13.ನೈವೇದ್ಯ, ತಾಂಬೂಲ -
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು.ಮಹಾಲಕ್ಷ್ಮೀಯೇ ನಮಃ ನೈವೇದ್ಯಂ ಸಮರ್ಪಯಾಮಿ

14. ನೀರಾಜನ - ಕರ್ಪುರದಿಂದ ಮಂಗಳಾರತಿ
ಮಾಡುವುದು.ಮಹಾಲಕ್ಷ್ಮೀಯೇ ನಮಃ ನೀರಾಜನಂ ಸಮರ್ಪಯಾಮಿ

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ
ಸಾಷ್ಟಾಂಗ ನಮಸ್ಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ನಮಸ್ಕಾರಂ ಸಮರ್ಪಯಾಮಿ

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ
ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
ಮಾಡುವುದು.
||ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ |
ಶರಣ್ಯೇ ತ್ರಯಂಬಕೆ ಗೌರಿ ನಾರಾಯಣೀ ನಮೋಸ್ತುತೆ||............. ಮಹಾಲಕ್ಷ್ಮೀಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ
ಪೂಜೆಯ
ನಂತರ ದೇವರು ಅನುಗ್ರಹಿಸಿರುವ ಅರಿಶಿನ,
ಕುಂಕುಮ, ನೈವೇದ್ಯವನ್ನು ಪ್ರಸಾದ
ರೂಪವಾಗಿ ಸ್ವೀಕಾರ
ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ.

ಶ್ರೀ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)

*ಶ್ರೀ ಸೂಕ್ತ ಮತ್ತು ವಿಶೇಷತೆಗಳು.*

"ಶ್ರೀ ಸೂಕ್ತ".

ಹರಿಃ ಓಂ ಹಿರ’ಣ್ಯವರ್ಣಾಂ ಹರಿ’ಣೀಂ ಸುವರ್ಣ’ರಜತಸ್ರ’ಜಾಮ್ | ಚಂದ್ರಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ 

ತಾಂ ಮ ಆವ’ಹ ಜಾತ’ವೇದೋ ಲಕ್ಷ್ಮೀಮನ’ಪಗಾಮಿನೀ”ಮ್ |
ಯಸ್ಯಾಂ ಹಿರ’ಣ್ಯಂ ವಿಂದೇಯಂ ಗಾಮಶ್ವಂ ಪುರು’ಷಾನಹಮ್ ||

ಅಶ್ವಪೂರ್ವಾಂ ರ’ಥಮಧ್ಯಾಂ ಹಸ್ತಿನಾ”ದ-ಪ್ರಬೋಧಿ’ನೀಮ್ |
ಶ್ರಿಯಂ’ ದೇವೀಮುಪ’ಹ್ವಯೇ ಶ್ರೀರ್ಮಾ ದೇವೀರ್ಜು’ಷತಾಮ್ ||

ಕಾಂ ಸೋ”ಸ್ಮಿತಾಂ ಹಿರ’ಣ್ಯಪ್ರಾಕಾರಾ’ಮಾರ್ದ್ರಾಂ ಜ್ವಲಂ’ತೀಂ ತೃಪ್ತಾಂ ತರ್ಪಯಂ’ತೀಮ್ |
ಪದ್ಮೇ ಸ್ಥಿತಾಂ ಪದ್ಮವ’ರ್ಣಾಂ ತಾಮಿಹೋಪ’ಹ್ವಯೇ ಶ್ರಿಯಮ್ ||

ಚಂದ್ರಾಂ ಪ್ರ’ಭಾಸಾಂ ಯಶಸಾ ಜ್ವಲಂ’ತೀಂ ಶ್ರಿಯಂ’ ಲೋಕೇ ದೇವಜು’ಷ್ಟಾಮುದಾರಾಮ್ |
ತಾಂ ಪದ್ಮಿನೀ’ಮೀಂ ಶರ’ಣಮಹಂ ಪ್ರಪ’ದ್ಯೇ‌உಲಕ್ಷ್ಮೀರ್ಮೇ’ ನಶ್ಯತಾಂತ್ವಾಂ ವೃ’ಣೊಮಿ ||

ಆದಿತ್ಯವ’ರ್ಣೇ ತಪಸೋ‌உಧಿ’ಜಾತೋ ವನಸ್ಪತಿಸ್ತವ’ ವೃಕ್ಷೋ‌உಥ ಬಿಲ್ವಃ |
ತಸ್ಯ ಫಲಾ’ನಿ ತಪಸಾನು’ದಂತು ಮಾಯಾಂತ’ರಾಯಾಶ್ಚ’ ಬಾಹ್ಯಾ ಅ’ಲಕ್ಷ್ಮೀಃ ||

ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿ’ನಾ ಸಹ |
ಪ್ರಾದುರ್ಭೂತೋ‌உಸ್ಮಿ’ ರಾಷ್ಟ್ರೇ‌உಸ್ಮಿನ್ ಕೀರ್ತಿಮೃ’ದ್ಧಿಂ ದದಾದು’ ಮೇ ||

ಕ್ಷುತ್ಪಿ’ಪಾಸಾಮ’ಲಾಂ ಜ್ಯೇಷ್ಠಾಮ’ಲಕ್ಷೀಂ ನಾ’ಶಯಾಮ್ಯಹಮ್ |
ಅಭೂ’ತಿಮಸ’ಮೃದ್ಧಿಂ ಚ ಸರ್ವಾಂ ನಿರ್ಣು’ದ ಮೇ ಗೃಹಾತ್ ||
[28/07, 1:16 PM] Pandit Venkatesh. Astrologer. Kannada: ಗಂಧದ್ವಾರಾಂ ದು’ರಾಧರ್ಷಾಂ ನಿತ್ಯಪು’ಷ್ಟಾಂ ಕರೀಷಿಣೀ”ಮ್ |
ಈಶ್ವರೀಮ್’ ಸರ್ವ’ಭೂತಾನಾಂ ತಾಮಿಹೋಪ’ಹ್ವಯೇ ಶ್ರಿಯಮ್ ||

ಮನ’ಸಃ ಕಾಮಮಾಕೂತಿಂ ವಾಚಃ ಸತ್ಯಮ’ಶೀಮಹಿ |
ಪಶೂನಾಂ ರೂಪಮನ್ಯ’ಸ್ಯ ಮಯಿ ಶ್ರೀಃ ಶ್ರ’ಯತಾಂ ಯಶಃ’ ||

ಕರ್ದಮೇ’ನ ಪ್ರ’ಜಾಭೂತಾ ಮಯಿ ಸಂಭ’ವ ಕರ್ದಮ |
ಶ್ರಿಯಂ’ ವಾಸಯ’ ಮೇ ಕುಲೇ ಮಾತರಂ’ ಪದ್ಮಮಾಲಿ’ನೀಮ್ ||

ಆಪಃ’ ಸೃಜಂತು’ ಸ್ನಿಗ್ದಾನಿ ಚಿಕ್ಲೀತ ವ’ಸ ಮೇ ಗೃಹೇ |
ನಿ ಚ’ ದೇವೀಂ ಮಾತರಂ ಶ್ರಿಯಂ’ ವಾಸಯ’ ಮೇ ಕುಲೇ ||

ಆರ್ದ್ರಾಂ ಪುಷ್ಕರಿ’ಣೀಂ ಪುಷ್ಟಿಂ ಸುವರ್ಣಾಮ್ ಹೇ’ಮಮಾಲಿನೀಮ್ |
ಸೂರ್ಯಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ ||

ಆರ್ದ್ರಾಂ ಯಃ ಕರಿ’ಣೀಂ ಯಷ್ಟಿಂ ಪಿಂಗಲಾಮ್ ಪ’ದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ ||

ತಾಂ ಮ ಆವ’ಹ ಜಾತ’ವೇದೋ ಲಕ್ಷೀಮನ’ಪಗಾಮಿನೀ”ಮ್ |
ಯಸ್ಯಾಂ ಹಿರ’ಣ್ಯಂ ಪ್ರಭೂ’ತಂ ಗಾವೋ’ ದಾಸ್ಯೋ‌உಶ್ವಾ”ನ್, ವಿಂದೇಯಂ ಪುರು’ಷಾನಹಮ್ ||

ಯಃ ಶುಚಿಃ ಪ್ರದಯತೋ ಭೂ ತ್ವಾ ಜುಹುಯಾದಾಜ್ಯಮನ್ವಹಮ್
ಸೂಕ್ತಂ ಪಂಚದಶರ್ಚಂಚ ಶ್ರೀಕಾಮಃ ಸತತಂ ಜಪೇತ್

ಪದ್ಮಾನನೇ ಪದ್ಮನಿ ಪದ್ಮಪತ್ರೆ ಪದ್ಮಾದಲಾಯತಾಕ್ಷಿ 
ವಿಶ್ವಪ್ರಿಯೇ ವಿಷ್ಣುಮನೋನುಕೂಲೇ ತ್ವತ್ಪಾದಪದ್ಮಂಮಯಿ ಸನ್ನಿಧಸ್ತ್ವ ||
.
ಪದ್ಮಾನನೇ ಪದ್ಮ ಊರೂ ಪದ್ಮಾಕ್ಷೀ ಪದ್ಮ ಸಂಭವೇ 
ತನ್ಮೆ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಮ್ ||
ಅಶ್ವದಾಯೀ ಗೋದಾಯೀ ಧನದಾಯೀ ಮಹಾಧನೇ
ಧನಂ ಮೇ ಜುಷತಾಂ ದೇವಿ ಸರ್ವಕಾಮಾಂಶ್ಚ ದೇಹಿ ಮೇ ೩
ಪುತ್ರ ಪೌತ್ರ ಧನಂ ಧಾನ್ಯಂ ಹಸ್ತ್ಯಶ್ವಾದಿಗವೇರಥಮ್
ಪ್ರಜಾನಾಂ ಭವಸಿ ಮಾತಾ ಆಯುಷ್ಮಂತಂ ಕರೋತು ಮೇ ||
ಧನಮಗ್ನಿರ್ಧನಂ ವಾಯುರ್ಧನಮ್ ಸೂರ್ಯೋಧನಂ ವಸುಃ
ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನುತೇ 

ವೈನತೇಯಃ ಸೋಮಂ ಪಿಬ ಸೋ ಮಂ ಪಿಬತು ವೃತ್ತಹಾ
ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತುಸೋಮಿನಃ ||

ನ ಕ್ರೋಧೋ ನ ಚ ಮಾತ್ಸಯಂ ನ ಲೋಭೋ ನಾ ಶುಭೋ ಮತಿಃ
ಭವಂತಿ ಕೃತಪುಣ್ಯಾನಾಂ ಭಕ್ತನಾಂ ಶ್ರೀಸೂಕ್ತಮ್ ಜಪೆತ್||

ಸರಸಿಜನಿಲಯೇ ಸರೋಜಹಸ್ತೇ ಧವಲತಾರಾಂ ಶುಕಗಂಧಮಾಲ್ಯ ಶೋಭೇ

ಭಗವತಿ ಹರಿವಲ್ಲಭೇ ಮನೋಜ್ಞೆ ತ್ರಿಭುವನ ಭೂತರಿ ಪ್ರಸೀದಮಹ್ಯಮ್ |

ವಿಷ್ಣುಪತ್ನೀಂ ಕ್ಷಮಾಂ ದೇವಿಂ ಮಾಧವೀಂ ಮಾಧವ ಪ್ರಿಯಾಂ||

ಲಕ್ಷ್ಮೀಂ ಪ್ರಿಯ ಸಖೀಂ ದೇವಿಂ ನಮಾಮ್ಯಚ್ಯುತವಲ್ಲಭಾಮ್ |
ಮಹಾ ಲಕ್ಷ್ಮೀ ಚ’ ವಿದ್ಮಹೇ’ ವಿಷ್ಣುಪತ್ನೀ ಚ’ ಧೀಮಹಿ | ತನ್ನೋ’ ಲಕ್ಷ್ಮೀಃ ಪ್ರಚೋದಯಾ”ತ್ ||

ಆನಂದಃ ಕರ್ದಮಷ್ಚೈವ ಚಿಕ್ಲೀತ ಇತಿ ವಿಶ್ರಿತಾಃ|
ಋಷಯಃ ಶ್ರಿಯಃ ಪುತ್ರಾಶ್ಚ ಶ್ರೀರ್ದೇವೀ ದೇವತಾಃ ||

ಶ್ರೀ-ರ್ವರ್ಚ’ಸ್ವ-ಮಾಯು’ಷ್ಯ-ಮಾರೋ”ಗ್ಯಮಾವೀ’ಧಾಛ್ಚೊ ಭಮಾನಂ ಮಹೀಯತೇ” | 
ಧನಂ ಧಾನ್ಯಂ ಪಶುಂ ಬಹುಪು’ತ್ರಲಾಭಂ ಶತಸಂ”ವತ್ಸರಂ ದೀರ್ಘಮಾಯುಃ’ ||

ಋಣ ರೋಗಾರಿ ದಾರಿದ್ರ್ಯ ಪಾಪಕ್ಷುದಪಮೃತ್ಯವ: |
ಭಯಶೋಕ ಮನಸ್ತಾಪಾ ನಶ್ಯಂತು ಮಮ ಸರ್ವದಾ|| 

||💐🍁ಶ್ರೀ ಸೂಕ್ತಮ್ 🍁💐
""""""""""""""""""""'"""""""""""""""""""

ಈ ಸೂಕ್ತವನ್ನು ಪ್ರತಿದಿವಸ ಬೆಳಗ್ಗೆ ಮತ್ತು ಸಾಯಂಕಾಲ 5.30 ರಿಂದ 6.30 ರ ಒಳಗೆ ಓದಿ
ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಮಾಡಿದರೆ ಆ ಮನೆಯಲ್ಲಿ ಯತೇಚ್ಛವಾದ ಧನಕನಕ ವಸ್ತು ವಾಹನಗಳು ಅಭಿವೃದ್ಧಿಯಾಗಿ, ವಂಶದ ಏಳಿಗೆಯಾಗುತ್ತದೆ.
ಶ್ರೀ ಸೂಕ್ತ ಓದಿ ಶ್ರೀ ಲಕ್ಷ್ಮೀನಾರಾಯಣರ ಪೂಜೆ ಮಾಡಿದರೆ, ಆ ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿ ಇರುತ್ತಾರೆ.
ಮನಸ್ತಾಪ ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ..

ಯಾರ ಮನೆಯಲ್ಲಿಪುರುಷ ಸೂಕ್ತ ಮತ್ತು ಶ್ರೀ ಸೂಕ್ತ ದಿಂದ ಸಾಲಿಗ್ರಾಮ ದೇವರಿಗೆ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಎಲ್ಲರಿಗೂ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..

ಯಾರ ಮನೆಯಲ್ಲಿ ಪ್ರತಿದಿವಸ ಶ್ರೀಸೂಕ್ತ ಓದಿ ,ಮನೆಗೆ ಬರುವ ಹೆಂಗಸರಿಗೆ ಅರಿಸಿನ ಕುಂಕುಮ ಕೊಡುತ್ತಾರೋ ಆ ಮನೆಯಲ್ಲಿ ಎಂದೂ ದಾರಿದ್ರ್ಯ, ವೈಧವ್ಯ ಬರುವುದಿಲ್ಲ.., ಸಮಸ್ತ ಸ್ತ್ರೀ ಶಾಪ ನಿವಾರಣೆಯಾಗುತ್ತದೆ .. ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುತ್ತವೆ.

ಯಾರ ಮನೆಯಲ್ಲಿ ಶ್ರೀ ಸೂಕ್ತ ಹೇಳುತ್ತಾ ದೇವರ ವಿಗ್ರಹಗಳಿಗೆ ಅಥವಾ ಸಾಲಿಗ್ರಾಮ ದೇವರಿಗೆ ಗಂಧೋದಕದಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಯಾವುದೇ ತರಹದ ರೋಗಭಾದೆ ಇರುವುದಿಲ್ಲ ..
ಸರ್ವ ರೋಗಗಳು ನಿವಾರಣೆಯಾಗಿ ಆರೋಗ್ಯವಂತರಾಗಿ ಬಾಳುತ್ತಾರೆ..
ಸಮಸ್ತ ಮಾಟ ಮಂತ್ರ ದೋಷಗಳು ನಿವಾರಣೆಯಾಗುತ್ತದೆ.
ಸಾಲದ ಭಾದೆ ನಿವಾರಣೆಯಾಗುತ್ತದೆ ..ಹಣಕಾಸಿನ ತೊಂದರೆ ಇರುವುದಿಲ್ಲ ..
ಶ್ರೀದೇವಿಯು ಹಂಗಿನಿಂದ ಮುಕ್ತಗೊಳಿಸುವುದರೊಂದಿಗೆ, ಅನಾರೋಗ್ಯ, ಶತ್ರು ಪೀಡೆ, ಬಡತನ, ಹಸಿವು, ಕೆಡುಕು, ಅಪಮೃತ್ಯುಗಳನ್ನೂ, ಭೀತಿ, ದು:ಖ, ಮನಸ್ತಾಪಗಳನ್ನೂ ಸದಾ ನಾಶಗೊಳಿಸುತ್ತಾಳೆ.
ಶ್ರೀ ಸೂಕ್ತ ದ ಫಲ ಅಪಾರ

ಸೂಚನೆ : ವೈದಿಕರಿಂದ ಅಥವಾ ತಿಳಿದವರಿಂದ; ಗುರುಗಳಿಂದ ಇದನ್ನು ಉಪದೇಶ ಪಡೆದುಕೊಂಡು ಪಾರಾಯಣ ಮಾಡುವುದು ಕ್ಷೇಮ.

Post a Comment

Previous Post Next Post