ಜಿಟಿ ಜಿಟಿ ಮಳೆ, ಮಳೆ,,,, ಕುಸಿತ, ಹಾನಿ, ಪರಿಹಾರ ಸೇರಿದಂತೆ ಇತರೆ ಪ್ರಮುಖ ಸುದ್ದಿಗಳ ಬಗ್ಗೆ

[12/07, 9:25 PM] Nagendra New: *ಜಿಲ್ಲೆಯಲ್ಲಿ ಮಂಗಳವಾರ ಇಡೀ ದಿನ  ನಿರಂತರ ಜಿಟಿ ಜಿಟಿ ಮಳೆ*

ಕಲಬುರಗಿ....

ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಕಳೆದ ಏಳು ದಿನದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು, ಮಂಗಳವಾರ ಜಿಟಿ ಜಿಟಿಯಾಗಿ ನಿರಂತರವಾಗಿ ಸುರಿದಿದೆ. ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ತಿಂಗಳ ಹಿಂದೆ ಮಳೆಯೇ ಆಗಿರಲಿಲ್ಲ. ಆದರೆ, ಈ ತಿಂಗಳಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿದೆ. 

ಕೃಷಿ ಚಟುವಟಿಕೆಗಳೂ ಬಿರುಸುಗೊಂಡಿವೆ. ಯಾವಾಗ ಮಳೆ ಬಿಡುವು ನೀಡುವುದೊ ಆಗ ಕೆಲಸ ಕಾರ್ಯ ವೇಗ ಪಡೆಯಲಿವೆ ಎಂದು ಹೇಳುತ್ತಿದ್ದಾರೆ ರೈತರು. ಜೂನ್‌ನಿಂದ ಜು.12ರವರೆಗೆ ಒಟ್ಟು ಜಿಲ್ಲೆಯಲ್ಲಿ 154 ಮಿಮೀ ಮಳೆಯಾಗಬೇಕಿತ್ತು. ಆದರೆ, 175 ಮಿಮೀ ಮಳೆಯಾಗಿದೆ. 14 ಮಿಮೀ ವಾಡಿಕೆಗಿಂತ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಹವಾಮಾನ ಇಲಾಖೆ ಯಲ್ಲೋ, ಅರೆಂಜ್ ಅಲರ್ಟ್ ಘೋಷಿಸಿದ್ದರಿಂದ ಜಿಲ್ಲಾಡಳಿತವೂ ಶಾಲೆ, ಕಾಲೇಜುಗಳಿಗೆ ರಜೆ ನೀಡಿತ್ತು. ಆದರೆ, ಮಂಗಳವಾರ ಯಾವುದೇ ರಜೆ ನೀಡದಿದ್ದರಿಂದ ಯಥಾವತ್ತಾಗಿ ತರಗತಿಗಳು ನಡೆದವು. ಆದರೆ, ರಜೆ ನೀಡಿದ್ದ ದಿನ ಮಳೆ ಕಡಿಮೆ ಸುರಿದರೆ ರಜೆ ನೀಡದ ದಿನವೇ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯಿತು.

ನಗರದಲ್ಲಿ ಮಂಗಳವಾರ ನಿರಂತರಾಗಿ ಮಳೆ ಸುರಿಯುತ್ತಿರುವುದರಿಂದ ಜನರು ಮಳೆಯಲ್ಲೇ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಂತಾಯಿತು. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು, ಕಚೇರಿಗಳಿಗೆ ನೌಕರರು ಮಳೆಯಲ್ಲೇ ತೆರಳುತ್ತಿರುವ ದೃಶ್ಯಗಳು ಕಂಡುಬಂದವು.
[12/07, 9:25 PM] Nagendra New: ಹಾವೇರಿ-
** ಬೇಡ್ತಿ-ವರದಾ ನದಿ ಜೋಡಣೆ : ಸಾಧಕ ಬಾಧಕಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಾಲಾಗುವುದು :: ಸಚಿವ ಶಿವರಾಮ ಹೆಬ್ಬಾರ

 ಬೇಡ್ತಿ-ವರದಾ ನದಿ ಜೋಡಣೆಯ ಕುರಿತು ಸಾಧಕ ಬಾಧಕಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಾಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ ಶಿವರಾಮ ಹೆಬ್ಬಾರ ತಿಳಿಸಿದರು.
 ಜಿ.ಪಂ ಸಭಾಂಗಣದಲ್ಲಿ ಜರುಗಿದ ಮಳೆ ಹಾನಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಾಗೂ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಅವರು ಬೇಡ್ತಿ-ವರದಾ ನದಿ ಜೋಡಣೆ ವಿಷಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇವೆ ಎಂದರು.
 ಪಶ್ಚಿಮ ಘಟ್ಟ ಉಳಿಸಿ ಎಂಬ ಹೋರಾಟ ಹಾಗೂ ನೀರಿಲ್ಲದ ಜಿಲ್ಲೆಗಳಿಗೆ ನೀರು ಕೊಡುವ ಹೋರಾಟಗಳೂ ಆರಂಭವಾಗಿವೆ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ವಿಶೇಷವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
 ನಾನು ತಜ್ಞನಲ್ಲ ಈ ಯೋಜನೆಯನ್ನು ಹೇಗೆ ಜಾರಿಗೆ ಮಾಡಬೇಕೆನ್ನುವುದನ್ನು ನಾನು ವಿವರಿಸಲು ಸಾಧ್ಯವಿಲ್ಲ. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಕಿಮೀ ಗಂಟಲೇ ಸುರಂಗ ಮಾರ್ಗವನ್ನು ತಗೆದು ನೀರನ್ನು ಹರಿಸಲಾಗುತ್ತಿದೆ. ಈ ಯೋಜನೆ ಕೇವಲ ೨೨ ಕಿಮೀ ಈ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದಂತೆ ರೂಪಿಸಬಹುದಾಗಿದೆ ಎಂದು ಇಲ್ಲಿನ ಹೋರಾಟಗಾರರ ಅನಿಸಿಕೆ ಹೀಗಿದ್ದರೂ ಅದಕ್ಕೆ ವಿರೋಧವೇಕೆ ಎಂಬ ಮಾತಿಗೆ ಮೇಲಿನಂತೆ ಸಚಿವ ಹೆಬ್ಬಾರ ಪ್ರತಿಕ್ರೀಯಿಸಿದರು. 
 ಪಶ್ಚಿಮ ಘಟ್ಟ ತೊಪ್ಪಲವನ್ನು ಉಳಿಸಿಕೊಳ್ಳಬೇಕೆಂಬ ಆಂದೋಲನ ನಡೆಯುತ್ತಿರುವ ಸಂದರ್ಭದಲ್ಲಿ ಸಹಜವಾಗಿ ಇದಕ್ಕೆ ಹಾನಿಯಾಗುತ್ತಿದೆ ಎಂಬ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆ ವಿರೋಧ ಮಾಡುತ್ತಿರುವಂತ ಸಭೆಯಲ್ಲಿ ಶೇ.೯೦ ರಷ್ಟು ಜನತೆ ನನ್ನ ಕ್ಷೇತ್ರದವರು ಹೀಗಾಗಿ ನಾನು ಆ ಸಭೆಯಲ್ಲಿ ಅನಿವಾರ್ಯವಾಗಿ ಭಾಗಿಯಾಗಿದ್ದೆ. ಬನವಾಸಿ ಬಳಿಯಲ್ಲಿ ವರದಾ ನದಿ ಹಾಗೂ ಬೇಡ್ತಿ ನದಿ ಜೋಡಣೆಯ ಸ್ಥಳ ಬರುತ್ತಿರುವುದು ನನ್ನ ಕ್ಷೇತ್ರದಲ್ಲಿ. ಅಲ್ಲಿ ನಡೆದ ಸಭೆಯಲ್ಲಿ ನಾನು ಹಾಜರಾಗಬೇಕಾಗಿದ್ದು ಅನಿವಾರ್ಯವಾಗಿತ್ತು.
 ಸೋಂದಾ ಮಠದ ಶ್ರೀಗಳು ಹಾಗೂ ಪರಿಸರ ಪ್ರೇಮಿಗಳು ಪಶ್ಚಿಮ ಘಟ್ಟ ಪರಿಸರ ನಾಶವಾಗುತ್ತದೆ ಎಂಬ ವ್ಥಜ್ಞಾನಿಕ ವರದಿಯನ್ನು ತಂದಿದ್ದರು. ಇತ್ತ ಈ ಭಾಗದಕ್ಕೆ ನೀರು ಕೊಡಬೇಕೆಂದು ಅನೇಕ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಟಗಳು ಆರಂಭವಾಗಿರುವುದನ್ನು ಪತ್ರಿಕೆಗಳ ವರದಿಗಳ ಮೂಲಕ ತಿಳಿದುಕೊಂಡಿರುವೆ. ಎರಡೂ ಕಡೆಯ ಸ್ವಾಮೀಜಿಗಳಿಗೆ ಸ್ವಾರ್ಥವಿಲ್ಲ. ಎಲ್ಲವೂ ಸಾಮಾಜಿಕ ಕಳಕಳಿಯ ಹೋರಾಟಗಳಾಗಿವೆ ಎಂದರು.
>> ಬಾಕ್ಸ್-೧
 ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಆಗಬೇಕಾಗಿರುವುದು ನಾನು ಆಯ್ಕೆ ಆಗಿರುವ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಯೋಜನೆಯಿಂದ ನೀರು ಹರಿಯಬೇಕಾಗಿರುವುದು ನಾನು ಉಸ್ತುವಾರಿ ಆಗಿರುವ ಜಿಲ್ಲೆಯಲ್ಲಿ ಹೀಗಾಗಿ ನಾನು ದ್ವಂದ್ವದಲ್ಲಿರುವೆ. ಈ ಯೋಜನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತಗೆದುಕೊಳ್ಳಲಾಗುವುದು.
** ಅರಬೈಲ ಶಿವರಾಮ ಹೆಬ್ಬಾರ. ಕಾರ್ಮಿಕ ಸಚಿವ
 ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ ಇತರರಿದ್ದರು. 
೦-೦-೦-೦-೦-೦
[12/07, 9:25 PM] Nagendra New: ಮಳೆಯಿಂದ ಮನೆ ಹಾನಿ: ಮುಖ್ಯಮಂತ್ರಿಯವರಿಂದ ಪರಿಹಾರದ ಚೆಕ್ ವಿತರಣೆ
ಮಡಿಕೇರಿ: ಕಳೆದ 12 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮಲ್ಲಿಕಾರ್ಜುನ ನಗರದಲ್ಲಿ ಮನೆಯೊಂದು ಹಾನಿಯಾಗಿರುವುದನ್ನು ಮುಖ್ಯಮಂತ್ರಿ ಅವರು ಮಂಗಳವಾರ ವೀಕ್ಷಿಸಿದರು.
ಕಳೆದ 12 ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಗೆ ಮನೆ ಕಳೆದುಕೊಂಡ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಗೋಪಾಲ ಅವರ ಮನೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವೀಕ್ಷಿಸಿದರು. ಬಳಿಕ ಗೋಪಾಲ ಕುಟುಂಬದವರಿಗೆ  95,100 ಮತ್ತು 10 ಸಾವಿರ ಒಟ್ಟು 1.05 ಲಕ್ಷ ರೂ.ಗಳ ಚೆಕ್ ವಿತರಿಸಿದರು. 
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕರ್ತೋಜಿಯಲ್ಲಿ ಮಣ್ಣು ಕುಸಿಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಸಂಬಂಧಪಟ್ಟ ಎಂಜಿನಿಯರ್ ಜೊತೆ ಚರ್ಚಿಸಿ ತಾಂತ್ರಿಕವಾಗಿ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೂಡಲೇ ಕೈಗೊಳ್ಳುವಂತೆ   ನಿರ್ದೇಶನ ನೀಡಿದರು. 
ಅಹವಾಲು ಆಲಿಕೆ: ಬಳಿಕ ಕೊಯನಾಡು ಮಹಾಗಣಪತಿ ದೇವಾಲಯ ಬಳಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು. 
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಕಂದಾಯ ಸಚಿವ ಆರ್.ಅಶೋಕ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತಿತರರು ಇದ್ದರು.
[12/07, 9:25 PM] Nagendra New: ಕೊಡಗು ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ: ಬಸವರಾಜ ಬೊಮ್ಮಾಯಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಹಾನಿ ಆಗಿದ್ದು, ಈ ಸಂಬಂಧ ವಿಸ್ತೃತ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಳೆ ಹಾನಿ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು. 
ಕಳೆದ 12 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಕೊಡಗು ಜಿಲ್ಲೆಯ ರಸ್ತೆ, ಸೇತುವೆ, ವಿದ್ಯುತ್ ಕಂಬಗಳು, ವಾಸದ ಮನೆಗಳು ಹೀಗೆ ಸಾಕಷ್ಟು ಹಾನಿಯಾಗಿದ್ದು, ಈ ಸಂಬಂಧ ಹಣ ಬಿಡುಗಡೆ ಮಾಡಲಾಗುವುದು ಎಂದರು.
ವಿದ್ಯುತ್ ಕಂಬ, ಪರಿವರ್ತಕ ಹಾನಿ ಸಂಬಂಧಿಸಿದಂತೆ 24 ಗಂಟೆಯೊಳಗೆ ಸರಿಪಡಿಸುವ ಕಾರ್ಯ ಆಗಬೇಕು ಎಂದು ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದರು. 
ಕೊಡಗು ಜಿಲ್ಲೆಯಲ್ಲಿ ಸ್ವಲ್ಪ ಮಳೆಯಾದರೂ ಸಹ ಹೆಚ್ಚಿನ ಸಮಸ್ಯೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮನೆ ನಿರ್ಮಾಣ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಬೇಕೆಂದು ಮುಖ್ಯಮಂತ್ರಿ  ಸೂಚಿಸಿದರು.  
ಪ್ರತ್ಯೇಕ ಮರಳು ನೀತಿ: ಕೊಡಗು ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಮಗ್ರ ಅಧ್ಯಯನ ಮಾಡಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.  
ಯಾರು ಯಾವ ಕೆಲಸ ಮಾಡಬೇಕು ಎಂಬುದನ್ನು ನಿರ್ವಹಿಸುವುದು ಅತೀ ಮುಖ್ಯ. ಅನಾಹುತ ಆದ ನಂತರ ಕ್ರಮವಹಿಸುವುದಲ್ಲ. ಅನಾಹುತ ಸಂಭವಿಸುವುದಕ್ಕೂ ಮೊದಲು ಕ್ರಮವಹಿಸುವುದು ಅತಿ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ಮಾಡಿದರು.
ಖಾತರಿಪಡಿಸಿಕೊಳ್ಳಿ: ಕಂದಾಯ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಮನೆಗಳ ಹಾನಿ ಸಂಬಂಧ ಪರಿಹಾರ ನೀಡಿದರಷ್ಟೇ ಸಾಲದು. ಮನೆ ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಸೂಚಿಸಿದರು.
ಮನೆಗಳ ನಿರ್ಮಾಣ ಸಂಬಂಧ ಹೆಚ್ಚಿನ ಗಮನಹರಿಸಬೇಕು. ಎಲ್ಲೆಲ್ಲಿ ಸಮಸ್ಯೆಗಳಿವೆ. ಅಲ್ಲಿ ತಕ್ಷಣವೇ ಸ್ಪಂದಿಸುವಂತಾಗಬೇಕು. ಸಮರೋಪಾದಿಯಲ್ಲಿ ಕೆಲಸ ಆಗಬೇಕು. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು  ಅವರು ಹೇಳಿದರು.
ಕನಿಷ್ಟ 400 ಕೋಟಿ ನೀಡಿ: ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರು, 2019 ಮತ್ತು 2020 ರಲ್ಲಿ ಪ್ರಾಕೃತಿಕ ವಿಕೋಪದಿಂದ ಕೊಡಗು ಜಿಲ್ಲೆ ತತ್ತರಿಸಿತ್ತು. ಆ ಸಂದರ್ಭದಲ್ಲಿ 500 ಕೋಟಿ ರೂ. ಬಿಡುಗಡೆ ಸಂಬಂಧ ವಿಶೇಷ ಪ್ಯಾಕೇಜ್‍ನ್ನು ಪ್ರಕಟಿಸಲಾಗಿತ್ತು. ಸದ್ಯ 400 ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಸದ್ಯ ಈಗ ಎಲ್ಲೆಲ್ಲಿ ಹಾನಿಯಾಗಿದೆ ಅದಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.  
ಮನೆ ಹಾನಿಗೆ ಸಂಬಂಧಿಸಿದಂತೆ ಪ್ರಥಮ ಹಂತದಲ್ಲಿ ಪರಿಹಾರ ವಿತರಿಸಲಾಗಿದೆ. ಈಗಾಗಲೇ ಸಂಪೂರ್ಣ ಹಾನಿಯಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಕಾಲ ಮಿತಿಯಲ್ಲಿ ಪರಿಹಾರದ ಹಣ ತಲುಪಬೇಕು ಎಂದರು.
2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಹಸ್ತಾಂತರಿಸಲಾಗಿರುವ ಮನೆಗಳ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆಯೇ ಎಂದು ಮುಖ್ಯಮಂತ್ರಿ ಅವರು ಮಾಹಿತಿ ಪಡೆದರು. 
ಈ ಸಂದರ್ಭ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಈಗಾಗಲೇ ಹಸ್ತಾಂತರಿಸಲಾಗಿರುವ ಮನೆಗಳ ಬಡಾವಣೆಯಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರು ಸಮಸ್ಯೆ ಇದೆ ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕಳೆದ 15 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ರಸ್ತೆ, ಸೇತುವೆಗಳು ಹಾನಿಯಾಗಿದ್ದು, ಇದನ್ನು ಸರಿಪಡಿಸಬೇಕು ಎಂದರು. 
ಕಳೆದ ವರ್ಷದ ಮಳೆ ಸಂದರ್ಭದಲ್ಲಿ ಮರದ ದಿಮ್ಮಿಗಳು ಭೂಮಿಯೊಳಗೆ ಹೂತುಹೋದವು, ಕೆಲವು ಮರದ ದಿಮ್ಮಿಗಳು ಸೇತುವೆಗೆ ಬಂದು ಹಾನಿಯಾಯಿತು. ಈ ಮರಗಳನ್ನು ತೆಗೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡಲಿಲ್ಲ. ಇದರಿಂದ ಸಂಕಷ್ಟ ಅನುಭವಿಸುವಂತಾಯಿತು ಎಂದು ಶಾಸಕರು ದೂರಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಮಳೆಗೆ ಕೊಚ್ಚಿ ಹೋದ ಮರಗಳನ್ನು ಸಂಬಂಧಪಟ್ಟವರಿಗೆ ನೀಡಿ, ಇಲ್ಲದಿದ್ದಲ್ಲಿ ಅರಣ್ಯ ಇಲಾಖೆಯಲ್ಲಿ ದಾಸ್ತಾನು ಮಾಡಿ ಸಂಬಂಧಪಟ್ಟವರು ಕ್ಲೈಮು ಮಾಡುತ್ತಾರೆ. ಎಲ್ಲೆಲ್ಲಿ ಮರ ಬಿದ್ದಿದೆ ಅವುಗಳನ್ನು ಕೂಡಲೇ ತೆರವುಗೊಳಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ಕಲ್ಪಿಸಲು ಸೂಚನೆ: ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮಾತನಾಡಿ, ಯಾವ ಯಾವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಂತಹ ಗ್ರಾಮಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.   
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಂಬಂಧ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳು, ಕಳೆದ ವಾರ ಸುರಿದ ಧಾರಾಕಾರ ಮಳೆಗೆ ರಸ್ತೆ, ಸೇತುವೆ, ಮನೆ, ವಿದ್ಯುತ್ ಕಂಬಗಳು ಮತ್ತು ಪರಿವರ್ತಗಳ ಹಾನಿ ಹಾಗೂ ಪರಿಹಾರ ಕೇಂದ್ರಗಳ ಸ್ಥಾಪನೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು. 
ಕೇಂದ್ರದೊಂದಿಗೆ ಚರ್ಚೆ: ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ ಸೀಮೆಎಣ್ಣೆ ಒದಗಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ  ತಿಳಿಸಿದರು.  
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಜಗದೀಶ, ಜಿ.ಪಂ,ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ವಿವಿಧ ಇಲಾಖೆಯ ಕಾರ್ಯದರ್ಶಿಗಳು, ಅಧಿಕಾರಿಗಳು  ಇದ್ದರು.
[12/07, 9:25 PM] Nagendra New: ಹಾವೇರಿ-
** ಜಿಲ್ಲೆಗೆ ೧,೫೦೦ ಕೋಟಿರೂ ವಿಶೇಷ ಅನುದಾನ : ಸೆಪ್ಟೆಂಬರ್ ೧ ರಂದು ಕಾಮಗಾರಿಗೆ ಭೂಮಿ ಪೂಜೆ :: ಸಚಿವ ಅರಬೈಲ್ ಶಿವರಾಮ ಹೆಬ್ಬಾರ್

 ಜಿಲ್ಲೆಗೆ ೧,೫೦೦ ಕೋಟಿರೂ ವಿಶೇಷ ಅನುದಾನ ಮಂಜೂರು ಮಾಡಲಾಗಿದೆ. ಸೆಪ್ಟೆಂಬರ್ ೧ ರೊಳಗಾಗಿ ಎಲ್ಲ ಕ್ರಿಯಾ ಯೋಜನೆಗಳನ್ನು ತಯಾರಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಭೂಮಿ ಪೂಜೆಗೆ ಸಿದ್ಧಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಸೂಚನೆ ನೀಡಿದರು.
 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆಹಾನಿ ಕುರಿತು ಮಂಗಳವಾರ ಸಭೆ ನಡೆಸಿದ ಅವರು, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಲೋಕೋಪಯೋಗಿ ಇಲಾಖೆ, ಕ್ರೀಡಾ ಇಲಾಖೆ, ಮುಜರಾಯಿ ಇಲಾಖೆ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗೆ ಅನುದಾನ ಒದಗಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಬೇಕು. ಈ ಅವಧಿಯೊಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಈ ಕುರಿತಂತೆ ಬೇಜವಾಬ್ದಾರಿ ವಹಿಸುವ ಅಧಿಕಾರಿಗಳಿಗೆ ಜಿಲ್ಲೆಯಿಂದ ಟೀಕೆಟ್ ನೀಡಲಾಗುವುದು. ನಾನು ಕೆಲಸ ಮಾಡಲು ಆಗುವುದಿಲ್ಲ ಎಂದು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ಖಡಕ್ಕಾಗಿ ಸೂಚಿಸಿದರು.
 ತ್ವರಿತ ಕಾಮಗಾರಿಗಾಗಿ ಜಿಲ್ಲಾ ಮಟ್ಟದ ಪ್ಯಾಕೇಜ್ ವ್ಯವಸ್ಥೆಯನ್ನು ಬದಲಾಯಿಸಿ ತಾಲೂಕುವಾರು ಪ್ಯಾಕೇಜ್ ಮಾಡಲಾಗಿದೆ. ತುರ್ತಾಗಿ ಕಾಮಗಾರಿಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.
>> ಸಾಹಿತ್ಯ ಸಮ್ಮೇಳನ
 ಮಳೆಹಾನಿ ಕುರಿತಂತೆ ಸತತ ಒಂದು ತಿಂಗಳು ವಿಶ್ರಾಂತಿ ರಹಿತ ಕೆಲಸಮಾಡಿ. ನಂತರ ನವಂಬರ್ ತಿಂಗಳಲ್ಲಿ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗಲಿದೆ. ಮೊದಲ ಬಾರಿಗೆ ಹಾವೇರಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಅಧಿಕಾರಿಗಳು ಸಿದ್ಧತೆಮಾಡಿಕೊಳ್ಳಬೇಕಾಗಿದೆ. ಸರ್ಕಾರ ವಿಶೇಷವಾಗಿ ೨೦ ಕೋಟಿರೂ ಅನುದಾನ ಒದಗಿಸಿದೆ. ಈ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡಲು ಅಧಿಕಾರಿಗಳು ತಮ್ಮ ಅನುಭವ, ಹಿರಿತನವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
೦-೦-೦-೦-೦
[12/07, 9:25 PM] Nagendra New: ಕೊಟ್ಟಿಗೆ ಗೋಡೆ ಕುಸಿತ: ಎರಡು  ಕುರುಗಳು ಸಾವು
ಕುಶಾಲನಗರ: ಭಾರೀ ಮಳೆಗೆ ಕೊಟ್ಟಿಗೆ ಗೋಡೆ ಕುಸಿದು ಎರಡು ಕರುಗಳು ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ                              ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಾದಪ್ಪ ಎಂಬವರಿಗೆ ಸೇರಿದ       ಕೊಟ್ಟಿಗೆಯ ಗೋಡೆ ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಎರಡು ಕರುಗಳು    ಸಾವನ್ನಪ್ಪಿದರೆ,   ಕೊಟ್ಟಿಗೆಯಲ್ಲಿದ್ದ    ಒಂದು ಹಸುವಿಗೆ ಗಾಯವಾಗಿದೆ.
ಸ್ಧಳಕ್ಕೆ ಶಿರಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗೀರಥಿ, ಸದಸ್ಯರಾದ ಸರಿತಾ, ಶ್ರೀಕಾಂತ್,   ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್,    ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ.ರವಿ, ಶಿರಂಗಾಲ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿ, ಪರಿಹಾರವನ್ನು  ನೀಡುವ ಭರವಸೆ ನೀಡಿದ್ದಾರೆ.
[12/07, 9:26 PM] Nagendra New: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವರ್ಷಾಂತ್ಯಕ್ಕೆ ಶೇ.೯೦ ರಷ್ಟು ಪೂರ್ಣ : ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ
ಚಿತ್ರದುರ್ಗ, ಜು.೧೨
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಬಹಳಷ್ಟು ವಿಳಂಬವಾಗುತ್ತಿತ್ತು. ಸದ್ಯ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿದ್ದು ವರ್ಷಾಂತ್ಯಕ್ಕೆ ಶೇ.೯೦ ರಷ್ಟು ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.
 ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಈಗಾಗಲೇ ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗಿದೆ. ಇದಕ್ಕಾಗಿ ಹಣಕಾಸು ಇಲಾಖೆಯು ಒಪ್ಪಿಗೆ ನೀಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ೯೬೦೦ ಕೋಟಿ ರೂಪಾಯಿಗಳು ಲಭ್ಯವಾಗಲಿದೆ ಎಂದು ಹೇಳಿದರು.
 ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ೨೨೨೩ ಎಕರೆಯನ್ನು ಭೂಸ್ವಾಧಿನ ಮಾಡಲು ೯೧ ಅಧಿಸೂಚನೆ ಹೊರಡಿಸಲಾಗಿದೆ. ಕಂದಾಯ, ಲೋಕೋಪಯೋಗಿ, ಅರಣ್ಯ, ತೋಟಗಾರಿಕೆ ಇಲಾಖೆಗಳ ಜಂಟಿ ಸರ್ವೇ ಸಂದರ್ಭದಲ್ಲಿ ಕಾಮಗಾರಿ ವ್ಯಾಪ್ತಿಯಿಂದ ಹೊರಗಡೆ ಇರುವ ೪೨೧ ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದರು. 
 ಒಟ್ಟು ೧೬೧೭ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಭೂಸ್ವಾಧೀನಕ್ಕಾಗಿ ರೂ.೨೫ ಕೋಟಿಯನ್ನು ೩೭೭ ರೈತರಿಗೆ ಪಾವತಿಸಲಾಗಿದೆ. ಇನ್ನೂ ಬಾಕಿ ಉಳಿದ ಭೂ ಸ್ವಾಧೀನಕ್ಕೆ ರೂ. ೭೫ ಕೋಟಿ ಅನುದಾನವನ್ನು ಆದಷ್ಟು ಶೀಘ್ರದಲ್ಲಿ ಮಂಜೂರು ಮಾಡಲು ಕ್ರಮಹಿಸಲಾಗುವುದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗಿದೆ. ಕೆಲವು ಎಂಟು ಜನ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡುತ್ತಿಲ್ಲ. ತರೀಕೆರೆ ತಾಲ್ಲೂಕಿನ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
[12/07, 9:26 PM] Nagendra New: ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ : ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ 
ಚಿತ್ರದುರ್ಗ, ಜು.೧೨
ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ತುರ್ತಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಭೂಮಾಲೀಕರಿಗೆ ಪರಿಹಾರ ಧನ ವಿತರಿಸಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು. 
 ನಗರದ ಭದ್ರಾ ಮೇಲ್ದಂಡೆ ಯೋಜನೆ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಒಂದು ವೇಳೆ ಭೂ ಮಾಲೀಕರು ಕೌಟುಂಬಿಕ ಹಾಗೂ ಇನ್ನಿತರ ಕಾರಣಗಳಿಂದ ಪರಿಹಾರ ಧನ ಪಡೆಯದೇ ಇದ್ದಲ್ಲಿ, ಪರಿಹಾರ ಮೊತ್ತವನ್ನು ನಿಯಾಮನುಸಾರ ನ್ಯಾಯಲಯಕ್ಕೆ ಠೇವಣಿ ಮಾಡಿ ಜಮೀನನ್ನು ನಿಗಮದ ವಶಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 
 ಭೂ ಸ್ವಾಧಿನ ಪ್ರಕ್ರಿಯೆ ವಿಳಂಬವಾದಲ್ಲಿ ಸಂಬಂಧಪಟ್ಟ ಭೂಸ್ವಾಧೀನಾಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಪರಿಹಾರ ಧನ ಪಡೆದ ಭೂ ಮಾಲೀಕರು ಕಾಮಗಾರಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರ. ಪೊಲೀಸ್ ಭದ್ರತೆ ಪಡೆದು ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 
 ಭದ್ರಾ ಮೇಲ್ದಂಡೆ ಯೋಜನೆಯ ವಿವಿಧ ಪ್ಯಾಕೇಜ್‌ವಾರು ಪ್ರಗತಿ ಪರಿಶೀಲಿಸಿದ ಸಚಿವರು, ಕುಂಠಿತ ಯೋಜನೆಗಳ ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಪ್ರಗತಿ ಚುರುಕುಗೊಳಿಸಲು ಸೂಚಿಸಿದರು. ಕಾಮಗಾರಿಗಳನ್ನು ನಿರ್ವಹಿಸುವ ಸಮಯದಲ್ಲಿ ಎದುರಾಗುವ ಭೂಸ್ವಾಧೀನ, ಅರಣ್ಯ ಭೂಮಿ, ವಿದ್ಯುತ್‌ಚ್ಛಕ್ತಿ ಲೈನ್, ರೈಲ್ವೆ ಮತ್ತು ಹೆದ್ದಾರಿ ಕ್ರಾಸಿಂಗ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕ್ರೋಡಿಕರಿಸಿ, ನನ್ನ ಗಮನಕ್ಕೆ ತಂದರೆ ಸಂಬಂಧಿಸಿದ ಇಲಾಖೆಯವರ ಜೊತೆ ಸಭೆ ಜರುಗಿಸಿ ಪರಿಹಾರ ಒದಗಿಸುವುದಾಗಿ ತಿಳಿಸಿದರು. 
 ೨೦೨೨-೨೩ನೇ ಸಾಲಿನ ಅಯವ್ಯಯ ಭಾಷಣದಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ೦.೦೦ಕಿ.ಮೀ.ನಿಂದ ೬೦.೦೦ ಕಿ.ಮೀ.ವರೆಗೆ ಪೂರ್ಣಗೊಳಿಸಿ, ಹೊಳಲ್ಕೆರೆ ಫೀಡರ್ ಕೆನಾಲ್ ಮೂಲಕ ಹೊಳಲ್ಕೆರೆ ತಾಲ್ಲೂಕಿನ ೨೮ ಕೆರೆಗಳಿಗೆ ನೀರು ತುಂಬಿಸಲು, ತರೀಕೆರೆ ಏತ ನೀರಾವರಿ ಯೋಜನೆಯ ಮುಖಾಂತರ ತರೀಕೆರೆ ತಾಲ್ಲೂಕಿನ ೨೦,೧೫೦ ಹೆಕ್ಟೇರ್ ಜಮೀನುಗಳಿಗೆ ಹನಿ ನೀರಾವರಿ ಮೂಲಕ ನೀರಾವರಿ ಕ್ಷೇತ್ರ ಸೃಷ್ಟಿಸುವ ಘೋಷಣೆ ಮಾಡಲಾಗಿದೆ. ಆಯವ್ಯಯದ ಘೋಷಣೆಯಂತೆ ನಿಗದಿಪಡಿಸಿದ ಗುರಿ ಸಾಧಿಸಲು ಪ್ರಯತ್ನಿಸುವಂತೆ ಹೇಳಿದರು. 
 ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಬ್ಬಿನಹೊಳಲು, ಕಾಟಿಗನರ, ಚಿನ್ನಾಪುರ ಮತ್ತು ಸೊಲ್ಲಾಪುರ ಗ್ರಾಮಗಳ ಭೂ ಮಾಲೀಕರು ಭೂಸ್ವಾಧೀನ ಕಾಯ್ದೆಯ ಪ್ರಕಾರ ಪರಿಹಾರ ಧನ ನೀಡಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ಕಾಮಗಾರಿ ನಿರ್ವಹಿಸಲು ಅನುಮತಿ ನೀಡದೆ ಭೂ ಮಾಲೀಕರರು ಅಡ್ಡಿಯನ್ನುಂಟು ಮಾಡುತ್ತಿರುವ ಕುರಿತು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಯೋಜನೆಯ ಕಾಮಗಾರಿಗಳ ೮೦೦ ಕೋಟಿ ರೂ. ಮೊತ್ತದ ಬಿಲ್ಲುಗಳು ಬಾಕಿ ಇದೆ. ಕಾಮಗಾರಿಗಳು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಲು ಹಣ ಬಿಡುಗಡೆಗೊಳಿಸವಂತೆ ಯೋಜನೆಯ ಮುಖ್ಯ ಇಂಜಿನೀಯರ್ ಎಂ.ರವಿ ಸಚಿವರಿಗೆ ಮನವಿ ಮಾಡಿದರು.
 ಸಭೆಯಲ್ಲಿ ಅಧೀಕ್ಷಕ ಇಂಜಿನೀಯರ್ ಎಫ್.ಹೆಚ್.ಲಮಾಣಿ ಮತ್ತು ಶಿವಪ್ರಕಾಶ್ ಸೇರಿದಂತೆ ಯೋಜನೆಯ ಕಾರ್ಯಪಾಲಕ ಅಭಿಯಂತರರು ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಹಾಜರಿದ್ದರು.
[12/07, 9:26 PM] Nagendra New: ವಾರದೊಳಗೆ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಲು ಸೂಚನೆ ; ಟಿ.ಎಸ್. ನಾಗಾಭರಣ
ಮೈಸೂರು: ಒಂದು ವಾರದೊಳಗೆ ಎಲ್ಲಾ ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಕಗಳನ್ನು ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ  ತಿಳಿಸಿದರು.
ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಕನ್ನಡ ಅನುಷ್ಟಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ರಾರಾಜಿಸುತ್ತಿರುವ ಆಂಗ್ಲ ಫಲಕಗಳನ್ನು ತೆರವು ಮಾಡುವಂತೆ ಪ್ರಾಧಿಕಾರಕ್ಕೆ ಹೆಚ್ಚಿನ ದೂರುಗಳು ಬಂದಿದೆ. ಈ ಹಿನ್ನೆಲೆ ವಾರದೊಳಗೆ ಎಲ್ಲಾ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವು ಮಾಡುವಂತೆ ಸೂಚಿಸಿದರು.
ಈಗಾಗಲೇ ಜಿಲ್ಲಾ ಜಾಗೃತಿ ಸಮಿತಿ 174 ಆಂಗ್ಲಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸುವಂತೆ ವರದಿ ನೀಡಿದೆ. ಆದರೆ ಅಧಿಕಾರಿಗಳು ಈವರೆಗೂ ಯಾಕೇ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದರೆ ತೊಂದರೆ ಇಲ್ಲ. ಏಕ ಭಾಷೆಯಲ್ಲಿರುವ ನಾಮಫಲಕಗಳನ್ನು ತೆರವು ಮಾಡಲೇಬೇಕು. ಮೈಸೂರಿನಲ್ಲಿ ಕನ್ನಡ ಭವನ ನಿರ್ಮಾಣದ ಅವಶ್ಯವಿದೆ ಎಂದು ಜಿಲಾ ಜಾಗೃತಿ ಸಮಿತಿ ಸದಸ್ಯರು ಗಮನಕ್ಕೆ ತಂದರು. ಮುಡಾದಿಂದ ನಿವೇಶನ ಪಡೆಯಲು ಚರ್ಚಿಸುವುದು, ಭವನ ನಿರ್ಮಾಣಕ್ಕೆ ಅನುದಾನಕ್ಕೆ  ಪ್ರಯತ್ನಿಸುವ ಬಗ್ಗೆ ಚರ್ಚಿಸಲಾಯಿತು.
 ಜನಸಾಮಾನ್ಯರಿಗೆ ಸರ್ಕಾರದ ವೆಬ್‌ಸ್ಯೆಟ್ ಗಳಲ್ಲಿ ಎಲ್ಲಾ ವಿಷಯ ತಿಳಿಯಬೇಕು ಎಂಬ ಕಾರಣಕ್ಕಾಗಿ ಕರ್ನಾಟಕದ ಎಲ್ಲಾ ವೆಬ್‌ಸೈಟ್ ಗಳು ಕನ್ನಡದಲ್ಲಿ ಒಂದೇ ಮಾದರಿಯಲ್ಲಿ ಇರಬೇಕು ಎಂದು ತಿಳಿಸಿದರು. ಇಲಾಖೆಗಳಿಂದ ನೀಡುವ ಜಾಹೀರಾತುಗಳು ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು ಎಂದು ಹೇಳಿದರು. ಚಾಮುಂಡಿಬೆಟ್ಟದಲ್ಲಿ ಎಲ್ಲಾ ಪ್ರಚಾರ ಪದಕಗಳು ಕನ್ನಡದಲ್ಲಿಯೇ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರ ಸರ್ಕಾರದ ಹೊಸ ರಾಷ್ಟಿçÃಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗಲ್ಲ.  ರಾಷ್ಟಿçÃಯ ನೀತಿಯಿಂದ ಕನ್ನಡದ ಬೆಳವಣಿಗೆಗೆ ಹತ್ತು ಹಲವು ಆಯಾಮಗಳು ಸಿಗಲಿದೆ. ಕನ್ನಡದ ಬೆಳವಣಿಗೆಗೆ ರಾಷ್ಟಿçÃಯ ಶಿಕ್ಷಣ ನೀತಿ ಪೂರಕ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಬಹುತೇಕ ಬಳಕೆಯಾಗುತ್ತಿದೆ. ಬಳಕೆಯಾಗದೇ ಇರುವ ಇಲಾಖೆಗಳಿಗೆ ಬಳಕೆ ಮಾಡುವಂತೆ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದರು.
ಭವಿಷ್ಯದ ಕನ್ನಡದ ಬೆಳವಣಿಗೆಗೆ ತಂತ್ರಾAಶದ ಅಗತ್ಯತೆಯಿದೆ. ಈ ಮುಖಾಂತರವೇ ಮಕ್ಕಳಿಗೆ ಮೊಬೈಲ್ ಗಳ ಮುಖಾಂತರ ಕನ್ನಡ ಕಲಿಸುವ ಕೆಲಸ ಮಾಡಲಾಗುತ್ತದೆ.  ಕನ್ನಡ ಪ್ರಾಧಿಕಾರದ ಹೊಸ ಆಪ್ ನಲ್ಲಿ 4 ಲಕ್ಷ ಪದಗಳಿವೆ. ಐವತ್ತೆಂಟು ಡಿಕ್ಷನರಿಗಳನ್ನು ಒಳಗೊಂಡಿರುವ ಆಪ್. ಇದನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಿದರೆ ಕನ್ನಡ ಆಡಳಿತಾತ್ಮಕವಾಗಿ ಬಳಕೆ ಸುಲಭ. ವ್ಯಾಪಾರಿಗಳ ಕೂಡಾ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು.  ಕನ್ನಡದಲ್ಲೇ ವ್ಯವಹಾರ-ವಹಿವಾಟು ಹೆಚ್ಚಿಸಲು ಕ್ರಮ ವಹಿಸಿದ್ದೇವೆ ಎಂದು  ತಿಳಿಸಿದರು. ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್, ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥ್ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸುದರ್ಶನ್ ಅವರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
[12/07, 9:26 PM] Nagendra New: *ಜಿಲ್ಲೆಯಲ್ಲಿ ಮಂಗಳವಾರ ಇಡೀ ದಿನ  ನಿರಂತರ ಜಿಟಿ ಜಿಟಿ ಮಳೆ*

ಕಲಬುರಗಿ....

ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಕಳೆದ ಏಳು ದಿನದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು, ಮಂಗಳವಾರ ಜಿಟಿ ಜಿಟಿಯಾಗಿ ನಿರಂತರವಾಗಿ ಸುರಿದಿದೆ. ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ತಿಂಗಳ ಹಿಂದೆ ಮಳೆಯೇ ಆಗಿರಲಿಲ್ಲ. ಆದರೆ, ಈ ತಿಂಗಳಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿದೆ. 

ಕೃಷಿ ಚಟುವಟಿಕೆಗಳೂ ಬಿರುಸುಗೊಂಡಿವೆ. ಯಾವಾಗ ಮಳೆ ಬಿಡುವು ನೀಡುವುದೊ ಆಗ ಕೆಲಸ ಕಾರ್ಯ ವೇಗ ಪಡೆಯಲಿವೆ ಎಂದು ಹೇಳುತ್ತಿದ್ದಾರೆ ರೈತರು. ಜೂನ್‌ನಿಂದ ಜು.12ರವರೆಗೆ ಒಟ್ಟು ಜಿಲ್ಲೆಯಲ್ಲಿ 154 ಮಿಮೀ ಮಳೆಯಾಗಬೇಕಿತ್ತು. ಆದರೆ, 175 ಮಿಮೀ ಮಳೆಯಾಗಿದೆ. 14 ಮಿಮೀ ವಾಡಿಕೆಗಿಂತ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಹವಾಮಾನ ಇಲಾಖೆ ಯಲ್ಲೋ, ಅರೆಂಜ್ ಅಲರ್ಟ್ ಘೋಷಿಸಿದ್ದರಿಂದ ಜಿಲ್ಲಾಡಳಿತವೂ ಶಾಲೆ, ಕಾಲೇಜುಗಳಿಗೆ ರಜೆ ನೀಡಿತ್ತು. ಆದರೆ, ಮಂಗಳವಾರ ಯಾವುದೇ ರಜೆ ನೀಡದಿದ್ದರಿಂದ ಯಥಾವತ್ತಾಗಿ ತರಗತಿಗಳು ನಡೆದವು. ಆದರೆ, ರಜೆ ನೀಡಿದ್ದ ದಿನ ಮಳೆ ಕಡಿಮೆ ಸುರಿದರೆ ರಜೆ ನೀಡದ ದಿನವೇ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯಿತು.

ನಗರದಲ್ಲಿ ಮಂಗಳವಾರ ನಿರಂತರಾಗಿ ಮಳೆ ಸುರಿಯುತ್ತಿರುವುದರಿಂದ ಜನರು ಮಳೆಯಲ್ಲೇ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಂತಾಯಿತು. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು, ಕಚೇರಿಗಳಿಗೆ ನೌಕರರು ಮಳೆಯಲ್ಲೇ ತೆರಳುತ್ತಿರುವ ದೃಶ್ಯಗಳು ಕಂಡುಬಂದವು.
[12/07, 9:26 PM] Nagendra New: ಹಾವೇರಿ-
** ಬೇಡ್ತಿ-ವರದಾ ನದಿ ಜೋಡಣೆ : ಸಾಧಕ ಬಾಧಕಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಾಲಾಗುವುದು :: ಸಚಿವ ಶಿವರಾಮ ಹೆಬ್ಬಾರ

 ಬೇಡ್ತಿ-ವರದಾ ನದಿ ಜೋಡಣೆಯ ಕುರಿತು ಸಾಧಕ ಬಾಧಕಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಾಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ ಶಿವರಾಮ ಹೆಬ್ಬಾರ ತಿಳಿಸಿದರು.
 ಜಿ.ಪಂ ಸಭಾಂಗಣದಲ್ಲಿ ಜರುಗಿದ ಮಳೆ ಹಾನಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಾಗೂ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಅವರು ಬೇಡ್ತಿ-ವರದಾ ನದಿ ಜೋಡಣೆ ವಿಷಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇವೆ ಎಂದರು.
 ಪಶ್ಚಿಮ ಘಟ್ಟ ಉಳಿಸಿ ಎಂಬ ಹೋರಾಟ ಹಾಗೂ ನೀರಿಲ್ಲದ ಜಿಲ್ಲೆಗಳಿಗೆ ನೀರು ಕೊಡುವ ಹೋರಾಟಗಳೂ ಆರಂಭವಾಗಿವೆ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ವಿಶೇಷವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
 ನಾನು ತಜ್ಞನಲ್ಲ ಈ ಯೋಜನೆಯನ್ನು ಹೇಗೆ ಜಾರಿಗೆ ಮಾಡಬೇಕೆನ್ನುವುದನ್ನು ನಾನು ವಿವರಿಸಲು ಸಾಧ್ಯವಿಲ್ಲ. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಕಿಮೀ ಗಂಟಲೇ ಸುರಂಗ ಮಾರ್ಗವನ್ನು ತಗೆದು ನೀರನ್ನು ಹರಿಸಲಾಗುತ್ತಿದೆ. ಈ ಯೋಜನೆ ಕೇವಲ ೨೨ ಕಿಮೀ ಈ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದಂತೆ ರೂಪಿಸಬಹುದಾಗಿದೆ ಎಂದು ಇಲ್ಲಿನ ಹೋರಾಟಗಾರರ ಅನಿಸಿಕೆ ಹೀಗಿದ್ದರೂ ಅದಕ್ಕೆ ವಿರೋಧವೇಕೆ ಎಂಬ ಮಾತಿಗೆ ಮೇಲಿನಂತೆ ಸಚಿವ ಹೆಬ್ಬಾರ ಪ್ರತಿಕ್ರೀಯಿಸಿದರು. 
 ಪಶ್ಚಿಮ ಘಟ್ಟ ತೊಪ್ಪಲವನ್ನು ಉಳಿಸಿಕೊಳ್ಳಬೇಕೆಂಬ ಆಂದೋಲನ ನಡೆಯುತ್ತಿರುವ ಸಂದರ್ಭದಲ್ಲಿ ಸಹಜವಾಗಿ ಇದಕ್ಕೆ ಹಾನಿಯಾಗುತ್ತಿದೆ ಎಂಬ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆ ವಿರೋಧ ಮಾಡುತ್ತಿರುವಂತ ಸಭೆಯಲ್ಲಿ ಶೇ.೯೦ ರಷ್ಟು ಜನತೆ ನನ್ನ ಕ್ಷೇತ್ರದವರು ಹೀಗಾಗಿ ನಾನು ಆ ಸಭೆಯಲ್ಲಿ ಅನಿವಾರ್ಯವಾಗಿ ಭಾಗಿಯಾಗಿದ್ದೆ. ಬನವಾಸಿ ಬಳಿಯಲ್ಲಿ ವರದಾ ನದಿ ಹಾಗೂ ಬೇಡ್ತಿ ನದಿ ಜೋಡಣೆಯ ಸ್ಥಳ ಬರುತ್ತಿರುವುದು ನನ್ನ ಕ್ಷೇತ್ರದಲ್ಲಿ. ಅಲ್ಲಿ ನಡೆದ ಸಭೆಯಲ್ಲಿ ನಾನು ಹಾಜರಾಗಬೇಕಾಗಿದ್ದು ಅನಿವಾರ್ಯವಾಗಿತ್ತು.
 ಸೋಂದಾ ಮಠದ ಶ್ರೀಗಳು ಹಾಗೂ ಪರಿಸರ ಪ್ರೇಮಿಗಳು ಪಶ್ಚಿಮ ಘಟ್ಟ ಪರಿಸರ ನಾಶವಾಗುತ್ತದೆ ಎಂಬ ವ್ಥಜ್ಞಾನಿಕ ವರದಿಯನ್ನು ತಂದಿದ್ದರು. ಇತ್ತ ಈ ಭಾಗದಕ್ಕೆ ನೀರು ಕೊಡಬೇಕೆಂದು ಅನೇಕ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಟಗಳು ಆರಂಭವಾಗಿರುವುದನ್ನು ಪತ್ರಿಕೆಗಳ ವರದಿಗಳ ಮೂಲಕ ತಿಳಿದುಕೊಂಡಿರುವೆ. ಎರಡೂ ಕಡೆಯ ಸ್ವಾಮೀಜಿಗಳಿಗೆ ಸ್ವಾರ್ಥವಿಲ್ಲ. ಎಲ್ಲವೂ ಸಾಮಾಜಿಕ ಕಳಕಳಿಯ ಹೋರಾಟಗಳಾಗಿವೆ ಎಂದರು.
>> ಬಾಕ್ಸ್-೧
 ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಆಗಬೇಕಾಗಿರುವುದು ನಾನು ಆಯ್ಕೆ ಆಗಿರುವ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಯೋಜನೆಯಿಂದ ನೀರು ಹರಿಯಬೇಕಾಗಿರುವುದು ನಾನು ಉಸ್ತುವಾರಿ ಆಗಿರುವ ಜಿಲ್ಲೆಯಲ್ಲಿ ಹೀಗಾಗಿ ನಾನು ದ್ವಂದ್ವದಲ್ಲಿರುವೆ. ಈ ಯೋಜನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತಗೆದುಕೊಳ್ಳಲಾಗುವುದು.
** ಅರಬೈಲ ಶಿವರಾಮ ಹೆಬ್ಬಾರ. ಕಾರ್ಮಿಕ ಸಚಿವ
 ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ ಇತರರಿದ್ದರು. 
೦-೦-೦-೦-೦-೦
[12/07, 9:28 PM] Nagendra New: ಕೊಡಗು: ಬಿಡುವು ನೀಡಿದ ಮಳೆ-12ದಿನಗಳ ಬಳಿಕ ಇಣುಕಿದ ಸೂರ್ಯ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಮಂಗಳವಾರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದು, ಜನ ಹಾಗೂ ಜಾನುವಾರುಗಳು ಬಿಸಿಲು ಕಾಣುವಂತಾಗಿದೆ.
ಮಂಗಳವಾರ ಬೆಳಗಿನಿಂದ ಜಿಲ್ಲೆಯಲ್ಲಿ ಬಿಸಿಲು- ಮಳೆಯ ಕಣ್ಣಾಮುಚ್ಚಾಲೆ ಆರಂಭವಾಗಿದ್ದು, ಕಳೆದ‌ 10 ದಿನಗಳಿಂದ ಬಿಸಿಲು ಕಾಣದಿದ್ದ ಕೊಡಗಿನಲ್ಲಿ ಮಂಗಳವಾರ ಮೋಡದ ನಡುವೆ ಸೂರ್ಯ ಇಣುಕಿದ್ದಾನೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 72.68 ಮಿ.ಮೀ, ವೀರಾಜಪೇಟೆ ತಾಲೂಕಿನಲ್ಲಿ 45.85 ಮಿ.ಮೀ, ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 99.57 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಮಳೆ 72.70 ಮಿ.ಮೀ. ಮಳೆಯಾಗಿದೆ.
ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ ತಾಲ್ಲೂಕಿನಲ್ಲಿ 2046.16 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 1502.15 ಮಿ.ಮೀ.) ವೀರಾಜಪೇಟೆ ತಾಲೂಕಿನಲ್ಲಿ 1106.32 ಮಿ.ಮೀ. (878.31 ಮಿ.ಮೀ.)ಹಾಗೂ  ಸೋಮವಾರಪೇಟೆ ತಾಲೂಕಿನಲ್ಲಿ 1110.81 ಮಿ.ಮೀ. (ಕಳೆದ ವರ್ಷ ಇದೇ ಅವಧಿಯಲ್ಲಿ 676.85) ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ‌ 1421.09 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1019.10 ಮಿ.ಮೀ ಮಳೆಯಾಗಿತ್ತು. 
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 74.20, ನಾಪೋಕ್ಲು 59, ಸಂಪಾಜೆ 64.50, ಭಾಗಮಂಡಲ 93, ವೀರಾಜಪೇಟೆ ಕಸಬಾ 54.40, ಹುದಿಕೇರಿ 74.80, ಶ್ರೀಮಂಗಲ 96.40, ಪೊನ್ನಂಪೇಟೆ 21, ಅಮ್ಮತ್ತಿ 8.50, ಬಾಳೆಲೆ 20, ಸೋಮವಾರಪೇಟೆ ಕಸಬಾ 116.40 ಶನಿವಾರಸಂತೆ 68, ಶಾಂತಳ್ಳಿ 227, ಕೊಡ್ಲಿಪೇಟೆ 58.80, ಕುಶಾಲನಗರ 53, ಸುಂಟಿಕೊಪ್ಪ 74.20 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಮಂಗಳವಾರ ನೀರಿನ ಮಟ್ಡವನ್ನು 2853.59 ಅಡಿಗಳಿಗೆ ಕಾಯ್ದಿರಿಸಿಕೊಂಡು ಜಲಾಶಯದಿಂದ ನದಿಗೆ 18,645 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2845.36 ಅಡಿಗಳಾಗಿದ್ದರೆ, ಜಲಾಶಯಕ್ಕೆ 3564 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಆದರೆ ಈ ವರ್ಷ ಪ್ರಸಕ್ತ 18,251 ಕ್ಯುಸೆಕ್ ನೀರು ಹರಿದು ಬರುತ್ತಿದೆ.
[12/07, 9:28 PM] Nagendra New: ಹುಬ್ಬಳ್ಳಿ: ನರಗುಂದ- ನವಲಗುಂದ 42 ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ಜು. 21 ರಂದು ನವಲಗುಂದ ಪಟ್ಟಣದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ-ನವಲಗುಂದ ರೈತರ ಮೇಲೆ 42 ವರ್ಷಗಳ ಹಿಂದೆ ಅಮಾನುಷ ದೌರ್ಜನ್ಯ ನಡೆದಿತ್ತು. ಇದರ ವಿರುದ್ಧ ರೈತರು ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದೆ. ಈ ಹೋರಾಟದಲ್ಲಿ 153 ರೈತರು ಪೋಲಿಸರ ಗುಂಡೆಟ್ಟಿಗೆ ಬಲಿಯಾಗಿದ್ದರು. ಅಲ್ಲದೇ ಇತ್ತಿಚೆಗೆ ದೇಶದಲ್ಲಿ 10 ಲಕ್ಷ ಹಾಗೂ ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ರೈತರು ಹಲವಾರು ಕಾರಣದಿಂದ ಸಾವನ್ನಪ್ಪಿದ್ದಾರೆ. ಸರ್ಕಾರಗಳು ರೈತರ ಮಾರಣ ಹೋಮ ಮಾಡುತ್ತಲೇ ಇದೆ.‌ ಈ ಹಿನ್ನೆಲೆಯಲ್ಲಿ  ಎಲ್ಲ ರೈತರನ್ನು ಒಗ್ಗೂಡಿಸುವುದು ಜೊತೆಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಇನ್ನು ಸಮಾವೇಶದಲ್ಲಿ ರೈತ ವಿರೋಧಿ 3 ಕೃಷಿ ಕಾಯಿದೆಯನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯುವುದು, ಅತಿವೃಷ್ಟಿ, ಅನಾವೃಷ್ಟಿಗೆ ಒಳಗಾದ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವುದು, ರೈತರ ಸಾಲಮನ್ನಾ ಮಾಡುವುದು, ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡುವುದು, ಮಹದಾಯಿ ಕಳಸಾ ಬಂಡೂರಿ ಯೋಜನೆಯನ್ನು ಜಾರಿ ಕುರಿತು, ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿ ಮಾಡವುದು, ಬಗರ್ ಹುಕ್ಕುಂ ಸಾಗುವಳಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸೇರಿದಂತೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು.  ಅಲ್ಲದೇ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು ಎಂದು ತಿಳಿಸಿದರು. 

 ಮಲ್ಲಿಕಾರ್ಜುನ ವಾಲಿ, ಶಂಕರಣ್ಣ ಅಂಬಲಿ, ಮಧುಸೂದನ್ ತಿವಾರಿ, ಶಿವಾನಂದ ಹೊಡೆಹಗಲಗಿ, ಶಂಕರಗೌಡ ಪಾಟೀಲ್ ಇದ್ದರು.
[12/07, 9:28 PM] Nagendra New: ಮಡಿಕೇರಿ ನಗರದಲ್ಲಿ ಕುಸಿದ ಮನೆ: ಮುಖ್ಯಮಂತ್ರಿಯವರಿಂದ ಪರಿಶೀಲನೆ
ಮಡಿಕೇರಿ: ಕಳೆದ 12 ದಿನಗಳಿಂದ ಧಾರಾಕಾರವಾಗಿ‌ ಸುರಿದ ಮಳೆಗೆ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ಮನೆಯೊಂದು ಕುಸಿದಿದೆ.
ಮಲ್ಲಿಕಾರ್ಜುನ ನಗರದ ಗೋಪಾಲ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಕೊಡಗಿನ ಮಳೆಹಾನಿ ಪರಿಶೀಲನೆಗಾಗಿ ಆಗಮಿಸಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮನೆಯನ್ನು ವೀಕ್ಷಿಸಿದರು.
ಬಳಿಕ ಗೋಪಾಲ ಕುಟುಂಬದವರಿಗೆ  95,100 ರೂ.ಗಳ  ಚೆಕ್ ವಿತರಿಸಿದರು. 
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತಿತರರು ಇದ್ದರು.
[12/07, 9:28 PM] Nagendra New: ಕಾಂಗ್ರೆಸ್'ಗೆ ಪ್ರತಿಪಕ್ಷವಾಗಿ ವರ್ತಿಸುವುದೇ ಗೊತ್ತಿಲ್ಲ: ಸಚಿವ ನಾಗೇಶ್
ಮಡಿಕೇರಿ: ದೀರ್ಘ ಕಾಲ‌ ಅಧಿಕಾರದಲ್ಲಿದ್ದ ಕಾಂಗ್ರೆಸ್'ಗೆ ಪ್ರತಿಪಕ್ಷವಾಗಿ ಹೇಗೆ ವರ್ತಿಸಬೇಕೆಂದೇ ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಎಂದು ಕಿವಿಮಾತು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ದಿನಗಳ ಹಿಂದೆಯಷ್ಟೇ ಕೊಡಗಿಗೆ  ಬಂದು ಮಳೆಗಾಲದಲ್ಲಿ ಕೈಗೊಳ್ಳಬೇಕಾದ  ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದೆ. ಇದರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಕಳೆದ ವಾರವಷ್ಟೇ ಬಂದು ಪರಿಶೀಲನೆ ನಡೆಸಿದ್ದರು. ಹೀಗಿರುವಾಗ ಸರ್ಕಾರ ಕೊಡಗನ್ನು‌‌‌ ಮರೆತಿದೆ ಎನ್ನುವ ಕಾಂಗ್ರೆಸ್ ಆರೋಪದಲ್ಲಿ ಯಾವುದಶ ಹುರುಳಿಲ್ಲ. ಇದು ಕೇವಲ ರಾಜಕೀಯ ಪ್ರೇರಿತ ಹೇಳಿಕೆ ಎಂದು ಟೀಕಿಸಿದರು.
ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಗ್ರಾಮ ಪಂಚಾಯತಿ ಮಟ್ಟದಿಂದ  ಜಿಲ್ಲಾ ಪಂಚಾಯಿತಿವರೆಗೂ ಕಾರ್ಯಪಡೆ ರಚಿಸಲಾಗಿದೆ. 2018ರ ದುರಂತದ ಮಾದರಿಯಲ್ಲೇ ಪರಿಹಾರ ಕಾರ್ಯಾಚರಣೆ ನಡೆಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲಾಗಿದೆ ಎಂದರು.
ಕೆಲವರು ಒತ್ತಡ ಹಾಕಿ‌ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಆದರೆ ಕೆಲಸ ಆಗಲಿಲ್ಲ ಎಂದಾಗ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುತ್ತಾರೆ.. ಹಾಗಾಗಿ ಕೆಲವರು ನನ್ನ ವಿರುದ್ಧ ಕೆಲವರು ಪ್ರಧಾನಿಗೆ ಪತ್ರ ಬರೆದಿರಬಹುದು ಎಂದು ಅವರು ನುಡಿದರು.
57 ಮನೆಗಳಿಗೆ ಹಾನಿ: ಕೊಯನಾಡು ಬಳಿ ಚೆಕ್ ಡ್ಯಾಂನಲ್ಲಿ ಮರಗಳು ಸಿಲುಕಿ ಮನೆಗಳಿಗೆ ನೀರು ನುಗ್ಗಿದೆ. ಕೂಡಲೇ ಮರಗಳನ್ನು ತೆರವುಗೊಳಿಸಲಾಗಿದೆ‌. ಮಳೆಯಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ  55 ಮನೆಗಳು ಭಾಗಶಃ , ಎರಡು ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು,  3 ಸೇತುವೆ, ತಲಾ ಒಂದು ಶಾಲೆ ಮತ್ತು ದೇಗುಲಕ್ಕೆ ಹಾನಿಯಾಗಿದೆ ಎಂದು ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪದಿಂದ 2018ರಲ್ಲಿ ಮನೆ ಕಳೆದುಕೊಂಡ ಕೆಲವು ಸಂತ್ರಸ್ತರಿಗೆ ಇನ್ನೂ ಮನೆ ದೊರಕದಿರುವ ಬಗ್ಗೆ ಕೇಳಲಾದ  ಪ್ರಶ್ನೆಗೆ ಉತ್ತರಿಸಿದ ಸಚಿವರು,  ಇನ್ ನೋಡಿ ವತಿಯಿಂದ ನಿರ್ಮಿಸಲಾಗುತ್ತಿರುವ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕವಾಗದೆ ಅಪೂರ್ಣಗೊಂಡಿದ್ದು,ವಿದ್ಯುತ್ ಸಂಪರ್ಕ ಕಲ್ಪಿಸಿದ ಕೂಡಲೇ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು ಎಂದರು.
ಅರಣ್ಯ ಇಲಾಖೆ ನೇರ ಹೊಣೆ:ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಮರಗಳಿಂದ ಹಾನಿ ಉಂಟಾಗಿರುವುದಕ್ಕೆ ಅರಣ್ಯ ಇಲಾಖೆಯ‌ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರೆ, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ‌ರವಿ ಕುಶಾಲಪ್ಪ ಮಾತನಾಡಿ, 2018 ರಲ್ಲಿ ಬಿದ್ದ ಮರಗಳನ್ನು ಅಂದಿನ ಸರ್ಕಾರ ತೆರವುಗೊಳಿಸದಿದ್ದುದೇ ಸೇತುವೆಗೆ ಹಾನಿಯಾಗಲು ಕಾರಣ ಎಂದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್‌ ದೇವಯ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.
[12/07, 9:28 PM] Nagendra New: *ಬಸವ ಸಾಗರ ಜಲಾಶಯ ವೀಕ್ಷಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್.*

*ಜಿಲ್ಲೆಯಲ್ಲಿ  ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧ ; ಜಿಲ್ಲಾಧಿಕಾರಿ*

ಯಾದಗಿರಿ: 
 ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ  ಎದುರಾದರೆ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.

ಮಂಗಳವಾರ ಬಸವ ಸಾಗರ ಜಲಾಶಯ ( ನಾರಾಯಣ ಪುರ ಡ್ಯಾಂ) ಗೆ ಭೇಟಿ ಜಲಾಶಯ ವೀಕ್ಷಿಸಿ ಅವರು ಮಾತನಾಡಿದರು. 
ಈಗಾಗಲೇ ಅಧಿಕಾರಿಗಳಿಗೆ ಪ್ರವಾಹ ಸಂಬಂಧ  ಎಚ್ಚೆತ್ತುಕೊಳ್ಳುವಂತೆ  ಸೂಚಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ ಎಂದರು.

ಹಿಂದೆ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ಬಾಧಿತವಾಗಿದ್ದ ಗ್ರಾಮಗಳ ಜನ, ಜಾನುವಾರು ಮುಂತಾದವರನ್ನು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ವಸತಿ ಕೇಂದ್ರಗಳಂತಹ ವ್ಯವಸ್ಥೆ ಕಲ್ಪಿಸುವ ಕುರಿತು ಸಿದ್ಧತೆಗಳನ್ನು   ಮಾಡಿಕೊಳ್ಳುವಂತೆ,  ನದಿ ಪಾತ್ರದಲ್ಲಿನ ಗ್ರಾಮಗಳ ಸುರಕ್ಷತೆ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. 

ಮೇಲಿನಗಡ್ಡಿ ಗ್ರಾಮದ ಸುಮಾರು 20 ಕುಟುಂಬದವರು ನದಿ ತೀರದಲ್ಲಿ ವಾಸವಾಗಿದ್ದು, ನದಿಗೆ ಹರಿಸುವ ನೀರಿನ ಪ್ರಮಾಣ ಹೆಚ್ಚಾದಾಗ, ನೀರಿನ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ತೀರ ಬಿಟ್ಟು ಗ್ರಾಮಕ್ಕೆ ಸ್ಥಳಾಂತರವಾಗಲು ಜನರಿಗೆ  ಜಿಲ್ಲಾಧಿಕಾರಿ ಮನವರಿಕೆ ಮಾಡಿದರು.

ಗ್ರಾಮದ ಜನರು ತಮಗೆ ಪಿಂಚಣಿ ಬಂದಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಇವರಿಗೆ ಅಹವಾಲು ಸಲ್ಲಿಸಿದರು. ಸ್ಪಂದಿಸಿದ ಜಿಲ್ಲಾಧಿಕಾರಿ 
ಮನವಿ ಸಲ್ಲಿಸಿದ 72 ಗಂಟೆಗಳಲ್ಲಿಯೇ ಪಿಂಚಣಿ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸಿ  ತಕ್ಷಣವೇ ಫಲಾನುಭವಿಗಳಿಗೆ ಸೇವೆ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ   ಹುಣಸಗಿ ತಹಶೀಲ್ದಾರ ಜಗದೀಶ್ ಚೌದ್ರಿ ,  ಡ್ಯಾಮ್ ನ ಇಂಜಿನಿಯರಗಳು  ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
[12/07, 9:28 PM] Nagendra New: ಜೇವರ್ಗಿ ತಾಲೂಕಿನ ಹರನೂರ ಗ್ರಾಮದಲ್ಲಿ ಅವಘಡ : 
ಕುಸಿದ ಬಿದ್ದ ಶಾಲಾ ಮೇಲ್ಚಾವಣಿ 

ಕಲಬುರಗಿ....

ಜಿಲ್ಲೆಯ  ಜೇವರ್ಗಿ ತಾಲೂಕಿನ ಹರನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮೇಲ್ಚಾವಣಿ ಏಕಾಏಕಿ ಕುಸಿದ ಬಿದ್ದ ಅವಘಡ ನಡೆದಿದೆ. 

ಅದೃಷ್ಟವಶಾತ್ ಮೇಲ್ಚಾವಣಿ ಕುಸಿದ ವೇಳೆ ಕೋಣೆಯಲ್ಲಿ ಯಾರು ಇರಲಿಲ್ಲ, ಹಾಗಾಗಿ
ಮಕ್ಕಳು ಮತ್ತು ಶಿಕ್ಷಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

70 ವರ್ಷದಷ್ಟು ಹಳೆಯದಾದ ಕಟ್ಟಡವಾಗಿದ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು.  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮೇಲ್ಚಾವಣಿ ಸಂಪೂರ್ಣವಾಗಿ ನೆಂದು ಕುಸಿದು ಬಿದಿದೆ. 

ಈ ಕುರಿತು ಜೇವರ್ಗಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.
[12/07, 9:28 PM] Nagendra New: ಬಾಕಿ ಇರುವ ಮನೆಗಳ ಹಸ್ತಾಂತರಕ್ಕೆ ಒಂದೂವರೆ ತಿಂಗಳ ಗಡುವು: ಬಸವರಾಜ ಬೊಮ್ಮಾಯಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ವಿತರಿಸಲು ಬಾಕಿ ಇರುವ ಮನೆಗಳನ್ನು  ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಹಸ್ತಾಂತರ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮಳೆಯಿಂದ ಉಂಟಾದ ಹಾನಿಯ ಬಗ್ಗೆ  ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ  ಸುದ್ದಿಗಾರರೊಂದಿಗೆ ಅವರು  ಮಾತನಾಡಿದರು.
2018-19  ರಲ್ಲಿ ನಿರ್ಮಿಸಬೇಕಿದ್ದ ಮನೆಗಳ ಪೈಕಿ 835 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದರಲ್ಲಿ  ಕೆಲವು ಮಾನೆಗಳು ಮಾತ್ರ ಬಾಕಿ ಇದ್ದು, ಬಹುತೇಕ ಎಲ್ಲಾ ಮನೆಗಳಲ್ಲಿಯೂ ಜನ ವಾಸಿಸುತ್ತಿದ್ದಾರೆ.ಇನ್ಫೋಸಿಸ್ ವತಿಯಿಂದ ನಿರ್ಮಿಸುತ್ತಿರುವ 195  ಮನೆಗಳನ್ನು ಕೂಡಾ  ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗುವುದೆಂದು ಅವರು ಹೇಳಿದರು.
ಸಂಬಂಧಿಕರ ಮನೆಗಳಲ್ಲಿರುವವರಿಗೂ ನೆರವು: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಅಪಾಯದಲ್ಲಿದ್ದ ಕೆಲವು ಮನೆಗಳವರನ್ನು ಸ್ಥಳಾಂತರಿಸಲಾಗಿದ್ದು, ಕೆಲವರು ಗಂಜಿ ಕೇಂದ್ರದಲ್ಲಿದ್ದರೆ, ಮತ್ತೆ ಕೆಲವರು  ಸಂಬಂಧಿಕರ ಮನೆಗಳಲ್ಲಿದ್ದಾರೆ.   ಸಂಬಂಧಿಕರ ಮನೆಗಳಲ್ಲಿರುವವರಿಗೂ  ಕೂಡಾ ಅಕ್ಕಿ, ಎಣ್ಣೆ,  ಬೇಳೆ, ವಿತರಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಗಂಜಿ ಕೇಂದ್ರದಿಂದ ಮನೆಗೆ ತೆರಳುವ ಸಂದರ್ಭದಲ್ಲಿಯೂ ಅವರಿಗೆ ಪಡಿತರವನ್ನು ಕೊಟ್ಟು ಕಳುಹಿಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ರಸ್ತೆ ಅಭಿವೃದ್ಧಿಗೆ ಕ್ರಮ: ಮಳೆಯಿಂದ ಹಾನಿಗೊಳಗಾದ  ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ತಕ್ಷಣ ದುರಸ್ತಿ ಮಾಡುವುದರೊಂದಿಗೆ ಎರಡನೇ ಹಂತದಲ್ಲಿ ಹಾಳಾಗಿರುವ ರಸ್ತೆಗಳನ್ನು ಪುನರ್ ನಿರ್ಮಿಸಲಾಗುವುದು ಎಂದು ಬೊಮ್ಮಾಯಿ ನುಡಿದರು.
ವಿದ್ಯುತ್ ಸಂಪರ್ಕ: ಹಾನಿಯಾಗಿರುವ ವಿದ್ಯುತ್ ಕಂಬಗಳ ಪಟ್ಟಿ ಮಾಡಿ, ಟ್ರಾನ್ಸ್'ಫಾರ್ಮರ್ ಹಾಗೂ ಕಂಬಗಳನ್ನು ಪುನರ್ ಸ್ಥಾಪಿಸಲು ವ್ಯವಸ್ಥೆ ಮಾಡಿ ವಿದ್ಯುತ್ ಸಂಪರ್ಕ  ನೀಡುವುದು ಇಲ್ಲಿನ ಸೆಸ್ಕ್ ಅಧಿಕಾರಿಗಳ ಜವಾಬ್ದಾರಿ. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಖುದ್ದಾಗಿ ಮೇಲ್ವಿಚಾರಣೆ ಮಾಡುವಂತೆ ಸೂಚಿಲಾಗಿದೆ ಎಂದ ಅವರು,  ಎನ್.ಡಿ.ಆರ್.ಎಫ್.ನವರು ಕೂಡಾ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಈ ಕೆಲಸದ ಮೇಲ್ವಿಚಾರಣೆ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಟಾಸ್ಕ್ ಫೋರ್ಸ್: ಗ್ರಾಮೀಣ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಕೂಡಲೇ ಅಧಿಕಾರಿಗಳು ಎಚ್ಚೆತ್ತು  ಕೆಲಸ ಮಾಡಬೇಕು.  ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದ್ದು, ಅಗತ್ಯ ಬಿದ್ದರೆ ಇನ್ನಷ್ಟು ಅನುದಾನವನ್ನು ಒದಗಿಸಲಾಗುವುದು ಎಂದರು.
ಹೂಳು ತೆಗೆಯಲು ಕ್ರಮ: ಕೊಡಗು ಜಿಲ್ಲೆಯ ನಾಲ್ಕು ತಹಶೀಲ್ದಾರರ ಖಾತೆಗಳಲ್ಲಿ ತಲಾ 25 ಲಕ್ಷ ರೂ.ಗಳು ಲಭ್ಯವಿದೆ.  ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂ.ಗಳನ್ನು ಈಗಾಗಲೇ  ಒದಗಿಸಲಾಗಿದೆ.  ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ  ಹೂಳು ತುಂಬಿದ್ದು,. ಅದರ ಜೊತೆಗೆ ನೀರಿನ ಹರಿವಿನಿಂದ ನೀರು ಹೊರಗೆ ಹರಿಯುತ್ತಿದೆ. ಇದನ್ನು ತಪ್ಪಿಸಲು  ಹಾರಂಗಿ ಜಲಾಶಯದ ಹಿಂದಿನ ಪ್ರದೇಶದ ಹೂಳೆತ್ತಲು ಈಗಾಗಲೇ 40 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, ಕೆಲಸ ಕೂಡಲೇ ಪ್ರಾರಂಭವಾಗುತ್ತದೆ. ಹೂಳು, ಮಣ್ಣು ತೆಗೆಯುವುದು ಹಾಗೂ ಗೋಡೆ ನಿರ್ಮಾಣ ಕಾರ್ಯವನ್ನು ಇದು ಒಳಗೊಂಡಿದೆ.  ಕಾವೇರಿ ನದಿಯಲ್ಲಿನ ಹೂಳು ತೆಗೆಯಲು   ಕಾವೇರಿ ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ. ನೀರು ನಿಲ್ಲದಂತೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ‌. ಮರದ ದಿಮ್ಮಿಗಳನ್ನು ಕೂಡಲೇ  ತೆರವು ಮಾಡುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಕಳೆದ ಬಾರಿಯ ದಿಮ್ಮಿಗಳು ಹಾಗೆಯೇ ಉಳಿದುಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು, ನದಿ ಪಾತ್ರದಲ್ಲಿ ಯಾವುದೇ ಮರದ ದಿಮ್ಮಿಗಳು ಇರಬಾರದು ಎಂದು ಸೂಚಿಸಲಾಗಿದೆ ಎಂದರು.
ನಿರೀಕ್ಷೆಗಿಂತ ಅಧಿಕ ಮಳೆ: ಜುಲೈ ತಿಂಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸಣ್ಣ ಪ್ರಮಾಣದ ಭೂಕುಸಿತವಾಗಿ ಸಂಚಾರ ಕಡಿತಗೊಂಡಿದೆ. ಮನೆಗಳು ಹಾನಿಗೊಳಗಾಗಿವೆ. ನದಿ ಪಾತ್ರಗಳು ಉಕ್ಕಿ ಹರಿದು ಪಕ್ಕದಲ್ಲಿರುವ ಜಮೀನುಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಹಾನಿಗೊಳಗಾಗಿದ್ದು, ಸೇತುವೆಗಳು ಮಣ್ಣು ಮತ್ತು ಮರದ ದಿಮ್ಮಿಗಳಿಂದ ತುಂಬಿವೆ. ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.  ಇವೆಲ್ಲವನ್ನೂ ಇಂದು ಪರಿಶೀಲಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ನುಡಿದರು.
ಈ ಬಾರಿಯ ಮುಂಗಾರಿನಲ್ಲಿ  ಹತ್ತು ದಿನಗಳೊಳಗೆ  ಶೇ.114ರಷ್ಟು ಮಳೆಯಾಗಿದ್ದು, ಇದುವರೆಗೂ ಸಂಪೂರ್ಣವಾಗಿ ಎರಡು ಮನೆಗಳು ಹಾನಿಗೊಳಗಾಗಿದ್ದು,  15 ತೀವ್ರಗತಿಯಲ್ಲಿ ಹಾನಿಯಾಗಿವೆ. 63 ಮನೆಗಳು ಭಾಗಶಃ ಹಾನಿಗೊಳಗಾಗಿದೆ ಎಂದು ಮಾಹಿತಿ ನೀಡಿದ ಮುಖ್ಯಮಂತ್ರಿಗಳು ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ ತಲಾ 5 ಲಕ್ಷ ರೂ.ಗಳು, ತೀವ್ರ  ಹಾನಿಯಾದ ಮನೆಗಳಿಗೆ ತಲಾ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ  ಮನೆಗಳಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಕೂಡಲೇ ನೀಡಲು ಸೂಚಿಸಲಾಗಿದೆ. ಬಿದ್ದು ಹೋಗಿರುವ ಮನೆಗಳವರಿಗೆ ತುರ್ತು ವ್ಯವಸ್ಥೆಗಾಗಿ ಈಗಾಗಲೇ 10 ಸಾವಿರ ರೂ.ಗಳನ್ನು ನೀಡಲಾಗಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ್, ಇಂಧನ ಸಚಿವ ಸುನಿಲ್ ಕುಮಾರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್,  ಶಾಸಕರಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಮತ್ತಿತರರು ಇದ್ದರು.
[12/07, 9:28 PM] Nagendra New: ಕೊಡಗಿನ ಗಡಿಯಲ್ಲಿ ಸೆಸ್ಮಿಕ್ ಅಧ್ಯಯಕ್ಕೆ ಕ್ರಮ: ಬೊಮ್ಮಾಯಿ
ಮಡಿಕೇರಿ: ಕೊಡಗು ಜಿಲ್ಲೆಯ ಸೆಸ್ಮಿಕ್ ವಲಯದಲ್ಲಿ  ಪದೇ ಪದೇ ಭೂ ಕುಸಿತ ಹಾಗೂ ಭೂ ಕಂಪದ ಸೂಚನೆಗಳು ಬರುತ್ತಿದ್ದು, .  ಸೆಸ್ಮಿಕ್ ಅಧ್ಯಯನ ಮಾಡಲು ರಾಷ್ಟ್ರದ  ಪ್ರಮುಖ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರ ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆ, ನ್ಯಾಷನಲ್ ಇನ್ಸ್ಟಿಟ್ಯೂಟ್  ಆಫ್ ಮಟೀರಿಯಲ್ ಹಾಗೂ  ಜಿಯೋಲಾಜಿಕಲ್  ಸರ್ವೆ ಆಫ್ ಇಂಡಿಯಾ, ಬೆಂಗಳೂರು ಹಾಗೂ ಮೈಸೂರು ವಿವಿಗಳ ಜಿಯೋಲಾಜಿಕಲ್ ವಿಭಾಗದವರು ಈ ಬಗ್ಗೆ ಅಧ್ಯಯನ ಕೈಗೊಳ್ಳಲಿದ್ದಾರೆ.  ಅದರ ಆಧಾರದ  ಮೇಲೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.
ಸೆಸ್ಮಿಕ್ ವಲಯ ಮುಂದುವರೆಯುವಲ್ಲಿ  ಜನವಸತಿ ಆಗದಂತೆ ಕ್ರಮ ವಹಿಸಲಾಗುವುದು.  ಕೆಲವು ಕಡೆ ಮನೆಗಳಿಗೆ ರೆಟ್ರೋ ಫಿಟ್ಟಿಂಗ್ ಮಾಡಿ ರಕ್ಷಣೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ಭೂಕುಸಿತವಾಗಿರುವ ಸ್ಥಳಗಳ ಬಗ್ಗೆ ಅಮೃತಾ ವಿಶ್ವವಿದ್ಯಾಲಯದವರು   ಅಧ್ಯಯನ ಕೈಗೊಂಡು ಪ್ರಾಥಮಿಕ ವರದಿ  ಸಲ್ಲಿಸಿದ್ದಾರೆ.  ಭೂಕುಸಿತವನ್ನು ತಡೆಗಟ್ಟಲು ಹಲವಾರು ತಂತ್ರಜ್ಞಾನವಿದೆ.  ರಿವಿಟ್ಟಿಂಗ್, ರೀಟೈನಿಂಗ್ ಗೋಡೆ ಕಟ್ಟುವಂತಹ ತಂತ್ರಜ್ಞಾನವಿದೆ. ಯಾವುದನ್ನು ಬಳಸಬೇಕೆಂದು ಸಲಹೆ ಮಾಡುತ್ತಾರೋ ಅದನ್ನು ಕೂಡಲೇ ಪ್ರಾರಂಭಿಸಿ ಮುಂದಿನ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
[12/07, 9:28 PM] Nagendra New: ತುಮಕೂರು::;ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು  ವಾಸಿಸುವ ಪ್ರದೇಶಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಸೇರಿದಂತೆ ನರೇಗಾ ಯೋಜನೆಯಡಿ ಅಗತ್ಯವಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಅಲ್ಲದೇ ಕೇಂದ್ರ ಯೋಜನೆಗಳ ಕುರಿತು  ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು ಎಂದು ಸಚಿವ ಎ ನಾರಾಯಣ ಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು 

ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ  ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪರಶೀಲನಾಸಭೆಯಲ್ಲಿ ಮಾತನಾಡುತ್ತಿದ್ದ ಅವರು
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಕೃಷಿ ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ಬಗ್ಗೆ  ಕಾರ್ಯಕ್ರಮಗಳನ್ನು ರೂಪಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಫಸಲ್ ಬಿಮಾ ಯೋಜನೆಯಡಿ ಪ್ರಚಾರ ಮಾಡುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ರೈತರಿಗೆ ಪರಿಚಯಿಸಬೇಕೆಂದರು

ಕೌಶಲ್ಯ ತರಬೇತಿಯನ್ನು ನೀಡಿದರಷ್ಟೇ  ಸಾಲದು   . ಬದಲಿಗೆ ,ಅವರಿಗೆ ಉದ್ಯೋಗವನ್ನು ನೀಡುವ ಮೂಲಕ ಸರ್ಕಾರದ ಕೌಶಲ್ಯ ತರಬೇತಿ ನೀಡುವ ಆಶಯವನ್ನು ಅರಿಯಬೇಕೆಂದರು. ಎಲ್ಲಾ ಇಲಾಖೆಗಳಲ್ಲಿ ನೀಡಬಹುದಾದ ಕೌಶಲ್ಯ ತರಬೇತಿಯನ್ನು ಒಂದೆಡೆ ನೀಡುವಂತಹ ಕೆಲಸವಾಗಬೇಕು.ವಿದ್ಯಾರ್ಥಿಗಳಿಗೆ ಬೇಕಾದ ಸ್ಕಿಲ್, ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ವಿವಿಧ ಇಲಾಖೆಗಳು ಸಮನ್ವಯತೆಯಿಂದ  ಒಂದೆಡೆ ಅಗತ್ಯ ತರಬೇತಿ ನೀಡಬೇಕೆಂದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ನಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ , ರೋಗ ಮತ್ತು ಕೀಟ ನಿಯಂತ್ರಣ, ನೀರು ಸಂಗ್ರಹಣ ಘಟಕ , ಪ್ಯಾಕ್ ಹೌಸ್ , ಸುರಕ್ಷಿತ ಬೇಸಾಯ, ಹಾಗೂ ಸಂಸ್ಕರಣ ಘಟಕ, ಶೈತ್ಯಗಾರ  ಹಣ್ಣು ಮಾಗಿಸುವ ಘಟಕಗಳಿಗೆ ಸಹಾಯಧನ ಒದಗಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕ ರಘು ಸಭೆಗೆ ಮಾಹಿತಿ ನೀಡಿದರು.
 ಪಿ ಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆ ಮಹತ್ವದಾಗಿದ್ದು, ಅವರು ಸಾಲ ತೀರಿಸಿದ ನಂತರ ಮತ್ತೆ ಸಾಲವನ್ನು ಒದಗಿಸಿ ಅವರು ಬದುಕನ್ನು ಕಟ್ಟಿಕೊಡಬೇಕೆಂದರಲ್ಲದೇ ಪಿಎಂ ಮುದ್ರ ಯೋಜನೆಯಡಿ ಅಗತ್ಯ ನೇರವನ್ನು ನೀಡಬೇಕೆಂದರು.
 ಮುಖ್ಯಮಂತ್ರಿಗಳ ನಗರ ವಸತಿ ಯೋಜನೆಗೆ ಕಾಯ್ದಿರಿಸಲಾಗಿರುವ ಜಮೀನುಗಳಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಹರಿಗೆ ಹಂಚಿಕೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
[12/07, 9:28 PM] Nagendra New: ಎಣ್ಣೆಕಾಳು ಬೆಳೆಯಲು ಉತ್ತೇಜನ ನೀಡಿ : ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೂಚನೆ
ಚಿತ್ರದುರ್ಗ, ಜು.೧೨
ಪ್ರಸ್ತುತ ದಿನಗಳಲ್ಲಿ ಎಣ್ಣೆಕಾಳು ಬೆಳೆಗಳು ರೈತರಿಗೆ ಲಾಭದಾಯಕವಾಗಿದ್ದು, ಉತ್ತಮ ಬೇಡಿಕೆಯೂ ಇದೆ. ಹಾಗಾಗಿ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 
 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಉಳಿದ ಆಹಾರ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ. ಎಣ್ಣೆಕಾಳು ಬೆಳೆಯುವುದರಲ್ಲಿ ನಾವು ಹಿಂದುಳಿದಿದ್ದೇವೆ. ಮುಸುಕಿನ ಜೋಳಕ್ಕಿಂತ ಸೋಯಾಬಿನ್ ಬೆಳೆ ಬಹಳ ಉತ್ತಮವಾಗಿದೆ. ಹಾಗಾಗಿ ರೈತರು ಸೋಯಾಬಿನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ಹೇಳಿದರು.
 ಜುಲೈ ೦೧ ರಿಂದ ೧೧ ರವರೆಗೆ ಜಿಲ್ಲೆಯಲ್ಲಿ ೩೫.೧ ಮಿ.ಮೀ. ಮಳೆಯಾಗಿದ್ದು, ಶೇ.೧೨೫ ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.೪೨ ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಈಚೆಗೆ ಸುರಿದ ಮಳೆಯಿಂದಾಗಿ ೨ ವಾಸದ ಮನೆಗಳು ಪೂರ್ಣಗೊಳಗಾಗಿವೆ. ೪ ಜಾನುವಾರು ಪ್ರಾಣಹಾನಿಯಾಗಿದ್ದು, ಈಗಾಗಲೇ ಪರಿಹಾರ ನೀಡಲಾಗಿದೆ ಎಂದರು.
 ಗೊಬ್ಬರ, ಬಿತ್ತನೆ ಬೀಜದ ಸಮಸ್ಯೆ ಇಲ್ಲ : ಜಿಲ್ಲೆಯಲ್ಲಿ ಗೊಬ್ಬರ ಹಾಗೂ ಬಿತ್ತನೆ ಬೀಜದ ಯಾವುದೇ ಸಮಸ್ಯೆ ಇಲ್ಲ. ೧೦,೬೪೬ ಮೆಟ್ರಿಕ್ ಟನ್ ಗೊಬ್ಬರ ದಾಸ್ತನು ಇದೆ. ೨೮೮೮ ಟನ್ ಯೂರಿಯಾ, ೧೧೩೪ ಡಿಎಪಿ, ೫೬೧ ಎಂಒಪಿ, ೬೧೬೩ ಕಾಂಪ್ಲೆಕ್ಸ್ ಗೊಬ್ಬರ ಸೇರಿದಂತೆ ಒಟ್ಟು ೧೦,೬೪೧ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಇದರ ಜೊತೆಗೆ ಸಮರ್ಪಕವಾಗಿ ಬಿತ್ತನೆ ಬೀಜ ಪೂರೈಸಲಾಗಿದ್ದು, ೩೦,೭೮೨ ಬಿತ್ತನೆ ಬೀಜ ದಾಸ್ತಾನು ಇದೆ.
 ಮೊಳಕಾಲ್ಮುರು ಹಾಗೂ ಚಳ್ಳಕೆರೆಯಲ್ಲಿ ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗುತ್ತಿದ್ದು, ೧೨,೫೫೦ ಕ್ವಿಂಟಾಲ್ ಶೇಂಗಾಬೀಜ ದಾಸ್ತಾನು ಇದ್ದು, ರೈತರ ಅಗತ್ಯಕ್ಕನುಗುಣವಾಗಿ ವಿತರಿಸಲು ಕೃಷಿ ಇಲಾಖೆ ಸಿದ್ಧವಿದೆ ಎಂದು ಸಚಿವರು ತಿಳಿಸಿದರು. 
 ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿಲ್ಲಿ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ರೂ. ೪೪೧ ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಧಾರ್ ಜೋಡಣೆಯಾಗದೇ ಇರುವುರಿಂದ ೧೫೦೦ ರೈತರಿಗೆ ಬೆಳೆ ವಿಮೆ ನೀಡುವುದು ಬಾಕಿ ಇದೆ. ಇನ್ನೂ ೧೦ ದಿನಗಳಲ್ಲಿ ಎಲ್ಲ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದರು. 
 ವಿ.ವಿ.ಸಾಗರದಲ್ಲಿ ೧೨೦.೪೫ ಅಡಿ ನೀರು : ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ ೧೨೦.೪೨ ಅಡಿ ನೀರು ಇದೆ. ಕಳೆದ ೧೦ ದಿನಗಳಲ್ಲಿ ಜಿಲ್ಲೆಯ ಯಾವುದೇ ಕೆರೆ-ಕಟ್ಟೆಗಳಿಗೆ ಹಾನಿಯಾಗಿರುವುದಿಲ್ಲ. ಕೃಷಿ ಹಾಗೂ ತೋಟಗಾರಿಕೆಯ ಬೆಳೆಹಾನಿ ಆಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ ಸಚಿವರಿಗೆ ಮಾಹಿತಿ ನೀಡಿದರು. 
 ಜೆಜೆಎಂ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚನೆ : ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯಡಿಯ (ಜೆಜೆಎಂ) ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಹಂತಪ್ಪಗೆ ಸೂಚನೆ ನೀಡಿದರು.  ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಬೇಕು ಎಂದು ತಾಕೀತು ಮಾಡಿದರು. 
 ಜೆಜೆಎಂನಡಿಯಲ್ಲಿ ಮೊದಲ ಬ್ಯಾಚ್‌ನಲ್ಲಿ ೨೯ ಕಾಮಗಾರಿಗಳಲ್ಲಿ ೨೩ ಕಾಮಗಾರಿ ಪೂರ್ಣಗೊಂಡಿವೆ. ಬ್ಯಾಚ್ ೨ ಮತ್ತು ೩ಕ್ಕೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಬ್ಯಾಚ್-೪ರಲ್ಲಿ ೭೨ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಡಿಪಿಎಆರ್ ಅನುಮೋದನೆಯಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಹಂತಪ್ಪ ಸಭೆಗೆ ಮಾಹಿತಿ ನೀಡಿದರು. 
 ವಿಧಾನಸಭಾ ಕ್ಷೇತ್ರವಾರು ೨೦ ಕೊಠಡಿ ಮಂಜೂರು : ಜಿಲ್ಲೆಯಲ್ಲಿ ಈಚೆಗೆ ಮಳೆಯಿಂದಾಗಿ ೩೧೦ ಶಾಲೆಗಳ ೬೨೪ ಕೊಠಡಿಗಳು ಶಿಥಿಲಗೊಂಡಿದ್ದವು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರವು ವಿಧಾನಸಭಾ ಕ್ಷೇತ್ರವಾರು ತಲಾ  ೨೦ ಕೊಠಡಿಗಳು ಮಂಜೂರು ಮಾಡಿವೆ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ತಿಳಿಸಿದರು.
 ಸರ್ಕಾರಿ ಪ್ರೌಢಶಾಲೆಗೆ ೯ ಕೊಠಡಿಗಳು, ಹಿರಿಯ ಪ್ರಾಥಮಿಕ ಶಾಲೆಗಳಿಗೆ ೮ ಕೊಠಡಿಗಳು, ಕಿರಿಯ ಪ್ರಾಥಮಿಕ ಶಾಲೆಗಳಿಗೆ ೩ ಕೊಠಡಿಗಳು ಸೇರಿದಂತೆ ವಿಧಾನ ಸಭಾ ಕ್ಷೇತ್ರವಾರು ೨೦ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. 
 ಸಭೆಯಲ್ಲಿ ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಎಸ್ಪಿ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಕೃಷಿ ಇಲಾಖೆ ಜಂಟಿನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
[12/07, 9:29 PM] Nagendra New: ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಯಾವುದೇ ಕ್ಷಣದಲ್ಲಿ ಬಿಡುಗಡೆ 

ಕೊಪ್ಪಳ: ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ಜಲಾಶಯ ಭಾಗಶಃ ಭರ್ತಿಯಾಗಿದೆ. ಜಲಾಶಯ ದಿಂದ ನದಿಗೆ ನೀರು ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆಗೊಳಿಸಲು ಟಿಬಿ ಡ್ಯಾಂ ಬೋರ್ಡ್ ನಿಂದ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸುಮಾರು 5000 ರಿಂದ 01 ಲಕ್ಷ ಕ್ಯೂಸೆಕ್ ವರೆಗೂ ನೀರು ಬಿಡುಗಡೆಯ ಸಂಭವ ಇದೆ ಎಂದು ಎಚ್ಚರಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಜಲಾಶಯಕ್ಕೆ 90 ಸಾವಿರಕ್ಕೂ ಅಧಿಕ ಕ್ಯೂಸಕ್ ನೀರು ಹರಿದು ಬರುತ್ತಿದ್ದು, ಜಲಾಶಯ 95 ಟಿಎಂಸಿ ಭರ್ತಿಯಾಗಿದೆ.
[12/07, 9:31 PM] Nagendra New: ಆಲಮಟ್ಟಿ ಜಲಾಶಯದಿಂದ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಯಾವುದೇ ಕ್ಷಣದಲ್ಲಿ ಬಿಡುಗಡೆ 

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು,  ಕೃಷ್ಣಾ ಹಾಗೂ ಅದರ ಉಪನದಿಗಳ ಒಳಹರಿವು ಹೆಚ್ಚಳವಾಗಿದ್ದು, ಆಲಮಟ್ಟಿ  ಜಲಾಶಯದಿಂದ ನದಿಗೆ ನೀರು ಯಾವುದೇ ಕ್ಷಣದಲ್ಲಿ 1 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸಲಾಗುವುದು ಜಲಾಯನ ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ ಮುಂಜಾನೆ 1 ಲಕ್ಷ ಕ್ಯೂಸೆಕ್ಸ್ ಅಧಿಕ ನೀರಿನ ಒಳಹರವಿದ್ದು, ಸದ್ಯ 75  ಸಾವಿರ ಕ್ಯೂಸೆಕ್  ನೀರು ಜಲಾಶಯದಿಂದ ಹೊರಗಡೆ ಬಿಡುಗಡೆ ಮಾಡಲಾಗಿದೆ. ಯಾವುದೇ ಕ್ಷಣದಲ್ಲಿ ನೀರಿನ ಹೊರ ಹರಿವು 1 ಲಕ್ಷ ಕ್ಯೂಸೆಕ್ಸ್ ಸಂಭವಿದೆ  ಎಂದು ಎಚ್ಚರಿಕೆಯಲ್ಲಿ ತಿಳಿಸಿದೆ. 
ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದ್ದು, ಕೃಷ್ಣಾ ನದಿಯ ನೀರಿನ ಒಳ ಹರಿವು ಇನ್ನೂ ಹೆಚ್ಚಾಗುವ ಸಂಭವವಿದೆ.
[12/07, 9:31 PM] Nagendra New: ಒಂದು ವರ್ಷ ಅಧಿಕಾರ ಪೂರೈಸಿದ ನಿಗಮ, ಮಂಡಳಿ ಗಳ ಅಧ್ಯಕ್ಷರ ರಾಜೀನಾಮೆ ಗೆ ಸೂಚಿನೆ: ಸಿಎಂ ಬಸವರಾಜ ಬೊಮ್ಮಾಯಿ          ಮೈಸೂರು: ಒಂದು ವರ್ಷ ಅಧಿಕಾರ ಪೂರೈಸಿದ ನಿಗಮ, ಮಂಡಳಿ ಗಳ ಅಧ್ಯಕ್ಷ ರ ರಾಜೀನಾಮೆ ಗೆ ಸೂಚನೆ ನೀಡಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಂಗಳವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಕೋರ್ ಕಮಿಟಿ ತೀರ್ಮಾನ ದಂತೆ ಒಂದು ವರ್ಷ ಅಧಿಕಾರ ಪೂರೈಸಿದ ನಿಗಮ ಮಂಡಳಿ ಗಳ ಅಧ್ಯಕ್ಷ ರನ್ನು ತೆಗೆದು, ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಹಾಗಾಗಿ ಒಂದು ವರ್ಷ ಅಧಿಕಾರ ಪೂರೈಸಿದ ಅಧ್ಯಕ್ಷ ರ ಹೆಸರನ್ನು ಪಟ್ಟಿ ಮಾಡಲಾಗಿದೆ. ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದರು. ರಾಜ್ಯದ ಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಜಿಲ್ಲೆ ಗಳಲ್ಲಿ ಪ್ರವಾಹ ಪರಿಸ್ಥಿತಿ ಯಿಂದಾಗಿ ಅಪಾರ ಪ್ರಮಾಣದ ನಷ್ಟ ವುಂಟಾಗಿದೆ.ಕೊಡಗಿನಲ್ಲಿ ಭೂಕಂಪ, ಭೂಕುಸಿತ ವಾಗಿದೆ.ಎಲ್ಲೆಲ್ಲಿ ಏನೆಲ್ಲಾ ನಷ್ಟವಾಗಿದೆ ಎಂಬುದರ ಕುರಿತು ಇಂದು ಸಂಜೆಯೊಳಗೆ ವರದಿ ಸಿಗಲಿ ದೆ. ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೇಳಲಾಗುತ್ತದೆ ಎಂದು ತಿಳಿಸಿದರು. ಮಳೆ ಪರಿಹಾರ ಕ್ರಮ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿಧಿಯಲ್ಲಿ ಸದ್ಯ 739 ಕೋಟಿ ರೂ ಇದೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಹಣದ ಕೊರತೆ ಯಿಲ್ಲ, ಸರ್ಕಾರ ಸಂಕಷ್ಟ ದಲ್ಲಿರುವ ಜನರ ನೆರವಿಗೆ ನಿಲ್ಲಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಗಳು ಪ್ರವಾಹ, ಮಳೆ ಹಾನಿ ಪರಿಸ್ಥಿತಿ ಯನ್ನು ನೋಡಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಪಕ್ಷದವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದರು
[12/07, 9:31 PM] Nagendra New: ಹುಬ್ಬಳ್ಳಿ: ಪ್ರಸ್ತುತವಾಗಿ ದೇಶದಲ್ಲಿ ಕಾಂಗ್ರೆಸ್ ಕ್ಷೀಣಿಸುತ್ತದೆ. ಇತ್ತೀಚೆಗೆ ತೆಲಂಗಾಣ ಪ್ರವಾಸಕ್ಕೆ ಹೋದಾಗ ಅಲ್ಲಿ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತಿದ್ದಾರೆ.‌ ಸಂಪೂರ್ಣವಾಗಿ ಕಾಂಗ್ರೆಸ್ ಅಸ್ತಿತ್ವವ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸಿಎಂ ಸ್ಥಾನಕ್ಕೆ‌ ಕಿತ್ತಾಡುತ್ತಿದ್ದಾರೆ ೨೦೨೩ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಕನಸು ಯಾವತ್ತು ಸತ್ಯವಾಗುವುದಿಲ್ಲ  ಎಂದು ವ್ಯಂಗ್ಯವಾಡಿದರು.

ಮುಂಬರು ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದು  ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ನಾಯಕರು ಸಿಎಂ ಸ್ಥಾನ ಪಡೆಯಲು ಏನೇ ಪ್ರಯತ್ನ‌ ಮಾಡಿದರು ಆಗುವುದಿಲ್ಲ. ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು.  

ಕಾಂಗ್ರೆಸ್ ೬೦-೭೦ ವರ್ಷ ದೇಶದಲ್ಲಿ ಆಡಳಿತ ನಡೆಸಿದ್ದರು. ನಿರುದ್ಯೋಗ ವುತ್ತು. ಸಿದ್ದರಾಮಯ್ಯ ಕೆಲವು ವರ್ಷದ ಹಿಂದೆ ಕಾಂಗ್ರೆಸ್ ಸೇರಿದ್ದಾರೆ. ಅವರು ಕಾಂಗ್ರೆಸ್ ನಲ್ಲಿ ಬಹಳ ವರ್ಷದಿಂದ ಇದ್ದರೆ ಈ ಮಾತು ಹೇಳುತ್ತಿರಲಿಲ್ಲ. ಜನ ಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಹೆಚ್ಚಾಗುತ್ತದೆ. ಪ್ರಧಾನಿ ಮೋದಿಯವರು ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಮೂಲಕ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಾದ ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಇದ್ದಾಗ ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ ಅವಲೊಕ ಮಾಡಬೇಕು. ಅದನ್ನು ಬಿಟ್ಟು ವಿರೋಧ ಪಕ್ಷದ ನಾಯಕನಾಗಿದ್ದೇನೆ ಎಂದು ಟೀಕೆ ಮಾಡುವುದು ಸರಿಯಲ್ಲ ಎಂದರು.

ಸಿದ್ದರಾಮೋತ್ಸವ ಮಾಡುತ್ತಿರುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಅವರ ಪಕ್ಷದಲ್ಲಿ ಬಹಳ ಅಸಮಾಧಾನ ವ್ಯಕ್ತವಾಗುತ್ತಿದೆ.‌ ಸಿದ್ದರಾಮಯ್ಯ ಆಧಾರ ರಹಿತ ಟೀಕೆ ನಿಲ್ಲಿಸಬೇಕು ಎಂದು ಹರಿಹಾದರು.
[12/07, 9:31 PM] Nagendra New: 9 ಜನ ಬಾಂಗ್ಲಾ ಪ್ರಜೆಗಳು ಪೊಲೀಸ್ ವಶಕ್ಕೆ :ವಿಚಾರಣೆ ನಡೆಸುತ್ತಿರುವ ಪೊಲೀಸರು 
ರಾಮನಗರ : ಸುಳ್ಳು ಹೇಳಿಕೊಂಡು ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿದ್ದ 9 ಜನ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ರಾಮನಗರದಲ್ಲಿ ನಡೆದಿದೆ.
ಕಳೆದ 12 ದಿನಗಳಿಂದ 9 ಬಾಂಗ್ಲಾ ಪ್ರಜೆಗಳು ಇಲ್ಲಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು.
ಪಶ್ಚಿಮ ಬಂಗಾಳದ ನಿವಾಸಿಗಳು ಎಂದು ಸುಳ್ಳು ಮಾಹಿತಿ ನೀಡಿ ಕೆಲಸಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ.
9 ಜನರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರು 9 ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

Post a Comment

Previous Post Next Post