ಬಿ.ಎಮ್. ಎಸ್.ನಲ್ಲಿ ಎಲ್ಲಾ ಕ್ಷೇತ್ರದಲ್ಲಿ ವಿಶೇಷವಾಗಿ ಫ್ಯಾಕ್ಟರಿ ಅನುಭವವಿದ್ದ ಒಬ್ಬರೇ ಹಿರಿಯರಾಗಿದ್ದ R ಶೇಷಾದ್ರಿ ಇಂದು ಬೆಳಿಗ್ಗೆ ನಿಧನ

*ಓಂ ಶಾಂತಿ,ಹೃದಯಾಂತರಾಳದ ನಮನ .🙏🙏 ನಮ್ಮ ಸಂಘಟನೆಯ ಎಲ್ಲಾ ಜವಾಬ್ದಾರಿ ನಿರ್ವಹಣೆ ಮಾಡಿದ ಮಾನ್ಯ ಶ್ರೀ ಆರ್.ಶೇಷಾದ್ರಿಯವರು ಇಂದು ಬೆಳಿಗ್ಗೆ ತಮ್ಮ 86 ನೇ ವಯಸ್ಸಿನಲ್ಲಿ  ಹೃದಯಾಘಾತದಿಂದ  ವೈಕುಂಠವಾಶಿಗಳಾದರೆಂದು ತಿಳಿಸಲು ವಿಷಾದವೆನಿಸುತ್ತದೆ. ಭಾರತೀಯ ಮಜ್ದೂರ ಸಂಘದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ದೇಶದ ಅಭಿವೃದ್ಧಿ ಹಾಗೂ  ಕಾರ್ಮಿಕರ ಏಳಿಗೆಗಾಗಿ ಜೀವನ ಪೂರ್ತಿ ಶ್ರಮಿಸಿದವರು ಬಿ.ಎಮ್. ಎಸ್.ನಲ್ಲಿ ಎಲ್ಲಾ ಕ್ಷೇತ್ರದಲ್ಲಿ ವಿಶೇಷವಾಗಿ ಫ್ಯಾಕ್ಟರಿ ಅನುಭವವಿದ್ದ ಒಬ್ಬರೇ ಹಿರಿಯರಾಗಿದ್ದರು .ರಾಜ್ಯದ ಎಲ್ಲಾ ಸಂಘಟನೆಗಳಿಗೆ ಮಾರ್ಗದರ್ಶನ ನೀಡಿ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ .ಅವರನ್ನು ಸುಗರ್ ಫ್ಯಾಕ್ಟ್ರಿ ನೌಕರಿಯಿಂದ ತೆಗೆದರೂ ತಮ್ಮ ಕರ್ತವ್ಯ ಬಿಡಲಿಲ್ಲ .ಅಂತಹ ನಿಸ್ವಾರ್ಥ ಹಿರಿಯರನ್ನು ಕಳೆದುಕೊಂಡ ನಮ್ಮ ಮಜ್ದೂರ ಸಂಘಕ್ಕೆ ಹಾಗೂ ಒಟ್ಟಾರೆ ಕಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ, ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ಹಾಗೂ ನಂಬಿದ ಕಾರ್ಮಿಕ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಅಂತ ಆ ಭಗವಂತನಲ್ಲಿ ಪ್ರಾರ್ಥಿಸೋಣ.*🙏🙏🌹🌹.

Post a Comment

Previous Post Next Post