*||ಬಿಡದೆ ರಮಾಕಳತ್ರನ ದಾಸ ವರ್ಗಕೆ ನಮಿಪೆ ಅನವರತ||*
*ಶ್ರೀ ವಿಜಯ ವಿಠ್ಠಲನ ಅನುಗ್ರಹದಿಂದ ಜನಿಸಿದ ಒಬ್ಬ ಉತ್ತಮವಾದ ಸಾಂಶ ಜೀವ. ಶ್ರೀವಿಜಯಪ್ರಭುಗಳು ಮತ್ತು ಶ್ರೀಮತಿ ಅರಳಮ್ಮನವರ ಉದರದಲ್ಲಿ ಜನಿಸಿದ ಕೂಸು ಇಂದಿನ ಕಥಾ ನಾಯಕರು.*
ಶ್ರೀ ವಿಜಯಪ್ರಭುಗಳು ತಮ್ಮ ಕುಲದೈವವಾದ *ಶೇಷಾಚಲವಾಸನಾದ ಆ ಸ್ವಾಮಿಯ ಹೆಸರನ್ನೇ ತಮ್ಮ ಮಗನಿಗೆ ಶೇಷಗಿರಿ ದಾಸ ಅಂತ* ನಾಮಕರಣ ವನ್ನು ಮಾಡಿದರು.
ಸೂಕ್ತ ವಯಸ್ಸಿನಲ್ಲಿ ತಮ್ಮ ಮಗನಿಗೆ ಶ್ರೀ ಶೇಷಗಿರಿ ವಾಸನ ಸನ್ನಿಧಿಯಲ್ಲಿ ಉಪನಯನ ಮಾಡುತ್ತಾರೆ. ಮರುದಿನದಿಂದ ತಮ್ಮ ಮಗನಿಗೆ ತಾವೇ ಕುಳಿತು ಸ್ನಾನ, ಅಹ್ನಿಕ,ನಿತ್ಯ ಕರ್ಮಾನುಷ್ಟಾನ ಮತ್ತು ಆಯಾ ಸಮಯದಲ್ಲಿ ಚಿಂತಿಸುವ ಭಗವದ್ ರೂಪಗಳ ಚಿಂತನೆ ,ತ್ರಿಕಾಲ ಸಂಧ್ಯಾವಂದನೆ, ಬ್ರಹ್ಮಚಾರಿ ಕರ್ತವ್ಯ, ಮತ್ತು ಅನೇಕ ಶಾಸ್ತ್ರ ವಿಷಯಗಳ, ದೇವರ ಸ್ತೋತ್ರ ಮೊದಲಾದ ಬಗ್ಗೆ ಪಾಠ ಮಾಡುತ್ತಾ ಇದ್ದರು.
ಚೀಕಲಪರವಿಯಲ್ಲಿ ಕೆಲ ದಿನ ಅಲ್ಲಿ ಅವರಿಂದ ದೈನಂದಿನ ಕಾರ್ಯಗಳನ್ನು ಮಾಡಿಸುತ್ತಾ ಶ್ರೀ ಹರಿವಾಯು ಗುರುಗಳ ಕೃಪೆ ಗೆ ಪಾತ್ರರಾಗುವ ಹಾದಿಯನ್ನು ತಿಳಿಸಿಕೊಟ್ಟರು.
ತಮ್ಮ ಜೊತೆಗೆ ಅವರನ್ನು ತೀರ್ಥ ಯಾತ್ರೆಗೆ ಕರೆದುಕೊಂಡು ಹೋಗುತ್ತಾ ಆಯಾ ತೀರ್ಥಕ್ಷೇತ್ರಗಳ ಇತಿಹಾಸ,ತೀರ್ಥಸ್ನಾನದ ಮಹತ್ತ,ಮತ್ತು ಅಲ್ಲಿ ನೆಲೆಸಿರುವ ಭಗವಂತನ ರೂಪಗಳ ಬಗ್ಗೆ ತಿಳಿಸುತ್ತಾ ಸಮಸ್ತ ಜೀವರಲ್ಲಿ ಭಗವಂತನ ರೂಪವನ್ನು ಕಾಣುತ್ತಾ ಆನಂದದಿಂದ ಕಾಲ ಕಳೆಯಲು ತದನಂತರದಲ್ಲಿ ಅವರಿಗೆ ವಿವಾಹವನ್ನು ಮಾಡುತ್ತಾರೆ.
ಕೆಲ ಕಾಲದ ನಂತರ ಅವರಿಗೆ ಇದ್ದಕ್ಕಿದ್ದಂತೆ ದೇಹಾಲಸ್ಯವಾಗುತ್ತದೆ.ವ್ಯಾಧಿ ಮಿತಿ ಮೀರಿತು.
ಇದನ್ನು ಕಂಡ ಶ್ರೀಮತಿ ಅರಳಮ್ಮನವರು ಬಹು ವ್ಯಸನಗೊಂಡು ಚಿಂತಿತರಾಗಿ ಶ್ರೀ ವಿಜಯಪ್ರಭುಗಳ ಬಳಿಗೆ ಬಂದು
*"ನಮ್ಮ ಮಗ ಶೇಷಗಿರಿ ಇಷ್ಟು ದೇಹಾಲಸ್ಯದಿಂದ ಇದ್ದಾಗ ನೀವು ನಿಮ್ಮ ಪಾಡಿಗೆ ಇರುವದು ಸರಿಯೇ!! ಅವನ ಆರೋಗ್ಯ ದ ಬಗ್ಗೆ ಸ್ವಾಮಿಯ ಬಳಿ ಪ್ರಾರ್ಥನೆ ಮಾಡಿ"* ಅಂತ ಮೊರೆ ಇಡುತ್ತಾರೆ.
ತಕ್ಷಣ ಶ್ರೀ ವಿಜಯಪ್ರಭುಗಳು ಮಗನ ಬಳಿ ಬಂದು ನೋಡಿದಾಗ
*ಪ್ರಬಲ ಕರ್ಮ ಇವನಿಗೆ ಬೆನ್ನು ಹತ್ತಿದೆ.ಅದರ ನಿವಾರಣೆಗೆ ಶ್ರೀಹರಿಯ ಕರುಣ ಬೇಡುವದು ಬಿಟ್ಟು ಬೇರೆ ಯಾವ ಔಷಧ ಉಪಚಾರ ಗಳಿಂದ ಆಗದು ಅಂತ ಅವರಿಗೆ* ತಿಳಿಯುತ್ತದೆ.
ತಕ್ಷಣ ತಮ್ಮ ಮಗನ ಅಪಮೃತ್ಯು ಪರಿಹಾರಕ್ಕಾಗಿ *ಒಂದು ಸುಳಾದಿ ಯನ್ನು ರಚನೆಯನ್ನು ಮಾಡಿ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನಲ್ಲಿ ಪ್ರಾರ್ಥನೆ* ಮಾಡುತ್ತಾರೆ.
ಆ ಸುಳಾದಿ ಹೀಗಿದೆ.👇
*ಹಗರಣ ಮಾಡದಿರು ಹರಿಯೆ| ನಿನಗೆ ಕರವ ಮುಗಿದು ಬೇಡಿಕೊಂಬೆ| ಭಕ್ತ ಜನರ ಬಗೆಬಗೆಯಿಂದ ಬಂದ ಕ್ಲೇಶ ಕಳೆದು| ನಂಬಿಗೆ ಇತ್ತು ಪಾಲಿಸುವ ಗುಣವಾರಿಧಿ||*..
ಅಂತ ರಚನೆಯನ್ನು ಮಾಡಿ ಅದರಲ್ಲಿ ಹೇಳುತ್ತಾರೆ. ತಮ್ಮ ಮಗನ ಬಗ್ಗೆ. ಆ ಜೀವಿ ಎಂತಹದ್ದು ಅಂತ.
*ಉದ್ದವನ್ನ ಶಾಪದಿಂದ ಮುಕ್ತನಮಾಡಿ|* *ಉದ್ದರಿಸಿದೆ ತತ್ವವ ಉಪದೇಶಿಸಿ*|
*ಶುದ್ದ ವೈಷ್ಣವನಿವ*| *ನಿರ್ಮತ್ಸರದವ*| *ಮಧ್ವರಾಯರ ಪಾದ ಪದ್ಮವೆ ಪೊಂದಿದ ತದ್ದಾಸರ ದಾಸ ಭೃತ್ಯನೆನಿಪನಿವ||*
*ಶ್ರದ್ಧೆ ಯುಳ್ಳವನಿವ*| *ಸೌಮ್ಯಗುಣದವ ಸಿದ್ದಾಂತ*| *ಪ್ರಮೇಯಗಳ ಪದ್ದತಿ ಬಲ್ಲವ*|
*ಉದ್ದಂಡನಲ್ಲವೋ| ಕರ್ಮನಿಷ್ಟನಿವ*|
*ಕ್ಷುದ್ರ ನಾದರೆ ನಾ ನಿನಗೆ ಪ್ರಾರ್ಥಿಸುವನೆ*||
ಅಂತ ಕೇಳಿಕೊಂಡರು.
ಆದರು ಸಹ ಅವರ ಆರೋಗ್ಯ ಸುಧಾರಣೆ ಆಗಲಿಲ್ಲ
ತಕ್ಷಣ ಎರಡು ಉಗಾಭೋಗ ಗಳನ್ನು ರಚಿಸಿ ಆ ಶ್ರೀ ಹರಿಗೆ ಒಪ್ಪಿಸಿ ,
*ಸ್ವಾಮಿ!! ಸಣ್ಣವನು ಇವನು ವಿವಾಹವಾಗಿದೆ .ಇವನೊಬ್ಬನೇ ಮಗ.ನನ್ನವಳ ಕೊರಗು ಸೊಸೆಯ ದುಃಖ ನೋಡಲಾಗದು.ನನಗೆ ನೀನು ಕೊಟ್ಟ ತಿಳುವಳಿಕೆ ಎಲ್ಲಡಿಗಿತು ಏನೋ ನಿನ್ನ ಬಂಧ ಶಕುತಿಯನ್ನು ಮೀರಿದವರನ್ನು ನಾ ಕಂಡಿಲ್ಲ ಹರಿಯೇ ಇನ್ನೂ ಇವನಿಗೆ ಆಯುಷ್ಯ ಇಲ್ಲ. ಆದುದರಿಂದ ನನ್ನ ಆಯುಸ್ಸಿನಲ್ಲಿ ಎರಡು ವರ್ಷ ಇವನಿಗೆ ಧಾರೆ ಎರೆದಿದ್ದೇನೆ.*.
*ಉಳಿಸು ಇವನನ್ನು ಎಂದು ಆ ವಿಜಯವಿಠ್ಠಲನಲ್ಲಿ ಮೊರೆ ಇಟ್ಟರು.*
ಮರುದಿನದಿಂದಲೆ ಶೇಷಗಿರಿ ದಾಸರ ಆರೋಗ್ಯ ಸುಧಾರಣೆ ಆಯಿತು.
ಮುಂದೆ ಎರಡು ವರುಷದ ನಂತರ ಶ್ರಾವಣಮಾಸ ಬಂದಾಗ ತಮ್ಮ ಕುಟುಂಬದ ಜೊತೆಗೂಡಿ ಶ್ರೀರಂಗಪಟ್ಟಣ ಕ್ಕೆ ಪಯಣ ಬೆಳೆಸಿದರು.
ಶ್ರೀರಂಗಪಟ್ಟಣ ಹಿಂದೆ ಮೂರು ಮೈಲಿ ಕರಿಘಟ್ಟವೆಂಬ
ಶ್ರೀನಿವಾಸನ ಕ್ಷೇತ್ರದಲ್ಲಿ ವಾಸ ಮಾಡುತ್ತಾರೆ.
ನಂತರ ಕೆಲದಿನವಾದ ಮೇಲೆ *ಅಲ್ಲಿ ಇಂದ ಮುಂದೆ ಕಾವೇರಿ ನದಿ ತೀರದ ಹತ್ತಿರ ಇರುವ ಗೌತಮ ಋಷಿ ಗಳು ತಪಸ್ಸು ಮಾಡಿದ ಗೌತಮ ಕ್ಷೇತ್ರದಲ್ಲಿ ಉಳಿದುಕೊಳ್ಳುವರು.*
ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಶೇಷಗಿರಿದಾಸರ ದೇಹಾಲಸ್ಯವಾಗುತ್ತದೆ.
*ಮರುದಿನವೇ ಭಾದ್ರಪದ ಶುದ್ಧ ಬಿದಿಗೆ ಅಂದೇ ಶ್ರೀ ಶೇಷಗಿರಿ ದಾಸರು ಶ್ರೀ ನಾರಾಯಣ ಸ್ಮರಣೆ ಪೂರ್ವಕ ದೇಹವನ್ನು ತ್ಯಾಗ* ಮಾಡುತ್ತಾರೆ.
*ಮಗನ ಅಂತ್ಯಕ್ರಿಯೆ ಕಾರ್ಯಗಳನ್ನು ಶ್ರೀ ವಿಜಯದಾಸರು ನೆರೆವೇರಿಸಿ ಅಲ್ಲಿಂದ ಮುಂದೆ ಹೊರಡುತ್ತಾರೆ.*
*ತಮ್ಮ ಎದುರಿಗೆ ತಮ್ಮ ಮಕ್ಕಳಾದ ಶೇಷಗಿರಿ ದಾಸರು ದೇಹತ್ಯಾಗ ಮಾಡಿದ್ದನ್ನು ಕಂಡು ೧೨ ಪದಗಳಿಂದ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ.*
*ಶ್ರೀ ವಿಜಯದಾಸರ ಮಗನಾಗಿ ಹುಟ್ಟಿದ ಶ್ರೀಶೇಷಗಿರಿ ದಾಸರು ದಾಸರಿಂದ ಆಯುರ್ದಾನ ಪಡೆದ ಪುಣ್ಯಜೀವಿ ಹಾಗು ಅವರಿಂದ ಹೊಗಳಿಸಿಕೊಂಡವರು.*.
*ನಿಜವಾಗಿಯೂ ಬಹು ದೊಡ್ಡ ಸಾಧನಾ ಜೀವಿಯೇ ಇರಬೇಕು..*.
ಅಂತಹವರ ಸ್ಮರಣೆ ಮಾಡಿದರೆ ನಮ್ಮ ಜನ್ಮ ಕಿಂಚಿತ್ತು ಉದ್ದಾರವಾಗಬಹುದು.
🙏ಶ್ರೀಕೃಷ್ಣಾರ್ಪಣಮಸ್ತು🙏
*ವಿಧಿ ಸಂವತ್ಸರ ಭಾದ್ರಪದ ಶುಕ್ಲ ದ ಭಾನು| ಬಿದಿಗಿಯಲಿ* *ಪ್ರವರ ಗೌತುಮ ಸಂಗಮಾ*
*|ನಿಧಿಯಲಿ* *ವಿಜಯವಿಠ್ಠಲನಂಘ್ರಿಯುಗಳವನು|*
*ಹೃದಯದಲ್ಲಿ ಇಟ್ಟು ದೇಹವ ತ್ಯಾಗ ಮಾಡ್ದೆ*||
*ಧನ್ಯನೋ ಶೇಷಗಿರಿದಾಸ ನೀನೂ|*
*ಪುಣ್ಯವಂತನು ಅಹುದೊ ಮನೋ ವಾಚದಲಿ ನಿತ್ಯ|*
🙏ಶ್ರೀಕಪಿಲಾಯ ನಮಃ🙏
Post a Comment