*||ಪಿಬತ ಭಾಗವತಂ ರಸಮಾಲಯಂ|*
day 1... ನಿನ್ನೆ
*ಶ್ರೀ ಹರಿ ವಾಯು ಗುರುಗಳ ಹಾಗು ಸಮಸ್ತ ಹರಿದಾಸರ ಚರಣಾರವಿಂದಗಳಲ್ಲಿ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿ ನಮಸ್ಕರಿಸಿ,ಶ್ರೀ ಮದ್ಭಾಗವತವನ್ನು ತಿಳಿಸುವ ದೊಡ್ಡ ಕಾರ್ಯವನ್ನು ಮಾಡುವಪುಟ್ಟ ಪ್ರಯತ್ನವು.*
*ಶ್ರೀ ಹರಿ ವಾಯು ಗುರುಗಳು ಇದನ್ನು ನಿರ್ವಿಘ್ನವಾಗಿ ನೆರವೇರಿಸಲು ಅವರಲ್ಲಿ ಪ್ರಾರ್ಥನೆ.
*✍️ಪ್ರೋಷ್ಟಪದಿಯ ಇನ್ನೊಂದು ಹೆಸರು ಭಾದ್ರಪದಮಾಸ..*.
*ಈ ಭಾದ್ರಪದ ಮಾಸದಲ್ಲಿಯೇ ಪರೀಕ್ಷಿತರಾಜನು ಭಾಗವತ ಕೇಳಿದ್ದರಿಂದಲೇ ಇದಕ್ಕೆ ಪ್ರೋಷ್ಟಪದಿ ಭಾಗವತ ಅಂತ ಕರೆಯಲಾಗಿದೆ.*
*ಶ್ರೀ ಮದ್ಭಾಗವತ ಎಂದರೆ ಶ್ರೀಹರಿಯ ಮಹಿಮೆಯನ್ನು ತಿಳಿಸುವ ಚರಿತ್ರೆ.*
*ಭಾದ್ರಪದ ಮಾಸವನ್ನು ಪ್ರೋಷ್ಠಪದ ಮಾಸ ಅನ್ನುತ್ತಾರೆ.*
*ಭಾದ್ರಪದ ಮಾಸದಲ್ಲಿ ಶ್ರೀಶುಕಮುನಿಗಳು ಪರಿಕ್ಷಿತ್ ಮಹಾರಾಜರಿಗೆ ಭಾಗವತ ಪುರಾಣವನ್ನು ಭೋಧಿಸಿದರು ಎನ್ನಲಾಗುತ್ತದೆ.*
*ಆದ್ದರಿಂದ ಈ ಮಾಸದಲ್ಲಿ ಶ್ರೀ ಮದ್ಭಾಗವತ ಪ್ರವಚನಗಳಿಗೆ ವಿಶೇಷ ಮಹತ್ವ ಇದೆ.*
ಈ ಶ್ರೀ ಮದ್ಭಾಗವತ ಪುರಾಣವನ್ನು *ಕಲಿಯುಗದ ಪ್ರಾರಂಭದಲ್ಲಿ ಶ್ರೀ ವೇದವ್ಯಾಸ ದೇವರ ಪುತ್ರ ರಾದ ರುದ್ರಾಂಶರಾದ ಶ್ರೀ ಶುಕಮುನಿಗಳು ಗಂಗಾತೀರದಲ್ಲಿ ಹೇಳಲು ಪ್ರಾರಂಭ ಮಾಡಿದ್ದಾರೆ.*.
*ಸಮಸ್ತ ಹರಿ ಭಕ್ತರು,ಸಕಲ ಋಷಿಸಮೂಹ ಅಲ್ಲಿ ನೆರೆದಿದೆ.ಆಗ ಇಂದ್ರಾದಿ ದೇವತೆಗಳು ಸಹ ಅಲ್ಲಿಗೆ ಬಂದಿದ್ದಾರೆ.ಬಂದವರು ಶ್ರೀಶುಕಮುನಿಗಳಿಗೆ ನಮಸ್ಕರಿಸಿ,*
*"ನೀವು ಭಾಗವತವನ್ನು ಪರೀಕ್ಷಿತ ಮಹಾರಾಜ ನಿಗೆ ಯಾಕೆ ಹೇಳುತ್ತಾ ಇದ್ದೀರಿ.!!ಯಾಕೆಂದರೆ ಇವನಿಗೆ ಶಾಪ ಬಂದಿದೆ.ಸತ್ತ ಹಾವನ್ನು ಶಮೀಕ ಋಷಿಗಳ ಕೊರಳಿಗೆ ಹಾಕಿದ್ದ ಕಾರಣದಿಂದ ಅವರ ಪುತ್ರನಿಂದ ಶಾಪ ಇದೆ. ಹೇಗೊ ಅವನಿಗೆ ಏಳು ದಿನದಲ್ಲಿ ಮೃತ್ಯು ಬರುತ್ತದೆ..*
*ಅದಕ್ಕೆ ನಾವು ಈ ಅಮೃತ ಕಲಶವನ್ನು ತಂದಿದ್ದೇವೆ.ಇದನ್ನು ಕುಡಿದು ಅವನು ಅಜರಾಮರನಾಗಲಿ..*.
*ನೀವು ಇದನ್ನು ಸ್ವೀಕರಿಸಿ ನಮಗೆ ನಿಮ್ಮ ಹತ್ತಿರ ಇರುವ ಭಾಗವತಾಮೃತವನ್ನು ಕೊಡಿ. ಪರಿಕ್ಷೀತ ಮಹರಾಜ ಈ ಅಮೃತವನ್ನು ಪಾನ ಮಾಡಲಿ.ಈ ಭಾಗವತಾಮೃತವನ್ನು ನಮಗೆ ಕೊಡಿ. ನಾವು ಪಾನ ಮಾಡುತ್ತೇವೆ.ಈ ರೀತಿಯಲ್ಲಿ ವಿನಿಮಯವನ್ನು ಮಾಡಿಕೊಳ್ಳೋಣ ಎಂದು* ಹೇಳುತ್ತಾರೆ.
ಅವಾಗ್ಗೆ ಶ್ರೀಶುಕಮುನಿಗಳು ಹೇಳುತ್ತಾರೆ.
*"ಈ ಭಾಗವತ ಎಲ್ಲಿ?? ನೀವು ತಂದಿರತಕ್ಕಂತಹ ಅಮೃತ ಎಲ್ಲಿ?? ಯಾವುದಾದರು ವಸ್ತು ವಿನಿಮಯ ಮಾಡಿಕೊಳ್ಳುವ ಹಾಗಿದ್ದರೆ ಎರಡು ವಸ್ತುಗಳ ಸಮಾನ ವಾಗಿರಬೇಕು.*
*ಈ ಶ್ರೀಮದ್ಭಾಗವತಕ್ಕು ಅಮೃತಕ್ಕು ಹೋಲಿಕೆ ಇದೆಯೇ??ಇದನ್ನು ಕುಡಿದರೆ ಮುಪ್ಪು ಬಾರದೆ ಇರಬಹುದು.ಆದರೆ ಈ ಭಾಗವತ ಮುಕ್ತಿ ಲೋಕವನ್ನು ತಂದು ಕೊಡುವಂತಹುದು..*.
*ಪರೀಕ್ಷಿತ ಮಹರಾಜ ತಾನು ಮಾಡಿದ ಪಾಪ ಪರಿಹಾರಕ್ಕಾಗಿ ಇದನ್ನು ಶ್ರವಣ ಮಾಡುತ್ತಾ ಇದ್ದಾನೆ.ಅವನು ಮೃತ್ಯುವಿಗೆ ಹೆದರಿಲ್ಲ.ಅದು ಇಂದಲ್ಲ ನಾಳೆ ಬರುವಂತವುದು..*.
*ನಿಮಗೆ ಇದರಲ್ಲಿ ಭಕ್ತಿ ಇಲ್ಲ. ಮುಕ್ತಿ ಲೋಕವನ್ನು ತಂದು ಕೊಡುವಂತಹ ಈ ಭಾಗವತವನ್ನು ಹಣ, ಮುಂತಾದ ದ್ರವ್ಯಗಳಿಂದ ಕೊಂಡು ಕೊಳ್ಳುವ ವಸ್ತು ಅಲ್ಲ.ನೀವಿನ್ನು ಹೋಗಬಹುದು ಅಂತ ಹೇಳುತ್ತಾರೆ.*
ಅವಾಗ ಇಂದ್ರಾದಿ ದೇವತೆಗಳು ಅವರಲ್ಲಿ ಕ್ಷಮೆ ಯಾಚಿಸಿ ಏಳುದಿನಗಳ ಕಾಲ ಭಾಗವತ ಶ್ರವಣವನ್ನು ಮಾಡುತ್ತಾರೆ.
*ಏಳುದಿನವಾದ ಮೇಲೆ ಪರಿಕ್ಷೀತರಾಜನಿಗೆ ತಕ್ಷಕ ಸರ್ಪ ಕಚ್ಚಿ ಗರುಡವಾಹನ ನಾದ ಶ್ರೀ ಲಕ್ಷ್ಮೀ ನಾರಾಯಣನ ಪಾದವನ್ನು ಸೇರಿದ್ದಾನೆ..*
*ಈ ಭಾಗ್ಯ ಅಮೃತ ಕುಡಿದರೆ ಬರುತಿತ್ತೋ??*
*ಈ ಭಾಗವತ ಕಾಲಾಂತರದಲ್ಲಿ ಮುಕ್ತಿ ಯನ್ನು ಕೊಡುವಂತಹುದು..*.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಆಗದೆನೆಗೆ ಅಬುಜನಾಭ|* *ಭಾಗವತವ ಕೇಳೆ ನಾನು|*
*ಹ್ಯಾಂಗ ನಾ ನಿನ್ನ ದಾಸ ನಾಗುವೆನು|*
*ಭವ ನೀಗುವೆನು||*
🙏ಶ್ರೀ ಕಪಿಲಾಯನಮಃ🙏
Post a Comment