ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದಿನ ಸ್ಪೋಟಕ ರಹಸ್ಯ ಬಯಲಾಗಿದೆ

ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಂತ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದಿನ ಸ್ಪೋಟಕ ರಹಸ್ಯ ಬಯಲಾಗಿದೆ. ಈ ಕೊಲೆಯ ಹಿಂದೆ ಸ್ಥಳೀಯ ನಿವಾಸಿಗಳಲ್ಲಿ ಭಯ ಮೂಡಿಸುವ ಉದ್ದೇಶ ಇತ್ತು ಎಂಬುದಾಗಿ ರಾಷ್ಟ್ರೀಯ ತನಿಖಾದಳದ ಎಫ್‌ಐಆರ್ ನಿಂದ ತಿಳಿದು ಬಂದಿದೆ.ಜುಲೈ.26ರಂದು ರಾತ್ರಿ ನಡೆದ ಪ್ರವೀಣ್ ಕೊಲೆ ಪ್ರಕರಣವನ್ನು ಎನ್‌ಐಎಗೆ ರಾಜ್ಯ ಸರ್ಕಾರ ಒಪ್ಪಿಸಿತ್ತು. ಈಗಾಗಲೇ ತನಿಖೆ ಕೂಡ ಆರಂಭಿಸಲಾಗಿದ್ದು, ಪ್ರಥಮ ವರ್ತಮಾನ ವರದಿ ( ಎಫ್‌ಐಆರ್ ) ದಾಖಲಿಸಿ ಕೊಂಡು ತನಿಖೆಯನ್ನು ಕೂಡ ನಡೆಸುತ್ತಿದೆ.

ದೇಶದ ಜನತೆಗೆ ಬಿಗ್ ಶಾಕ್ ರೆಡಿ: ಮುಂದಿನ ತಿಂಗಳು ಮತ್ತೆ ಜಿಎಸ್ಟಿ ಪರಿಷ್ಕರಣೆ | GST Council Meeting

ಹೀಗೆ ದಾಖಲಾಗಿರುವಂತ ಎಫ್‌ಐಆರ್ ನಲ್ಲಿ ಬೆಳ್ಳಾರೆ ಪರಿಸರದಲ್ಲಿ ಭಯ ಹುಟ್ಟು ಹಾಕುವ ಉದ್ದೇಶದಿಂದ ಈ ಕೊಲೆ ಮಾಡಿರುವ ಶಂಕೆಯನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಆರಂಭಿಕ ಆರೋಪಿಗಳಾದ ಝಾಕೀರ್ ಸವಣೂರು, ಮಹಮ್ಮದ್ ಶಫೀಕ್ ಬೆಳ್ಳಾರೆ, ಶೇಖ್ ಸದ್ದಾಂ ಹುಸೇನ್ ಬೆಳ್ಳಾರೆ ಮತ್ತು ಮಹಮ್ಮದ್ ಹ್ಯಾರಿಸ್ ಬೆಳ್ಳಾರೆ ಎಂಬುವರನ್ನು ಬಂಧಿಸಿದ ವಿಚಾರವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Post a Comment

Previous Post Next Post