ಪದ್ಮ ಪುರಸ್ಕೃತ ರ ಪರಸ್ಪರ ಸನ್ಮಾನ

ಅಂಕೋಲಾ: ನಿಸ್ವಾರ್ಥ ಶೈಕ್ಷಣಿಕ ಸೇವೆಗಾಗಿ ಭಾರತ ಸರ್ಕಾರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಹರೇಕಳ ಹಾಜಬ್ಬ ಅವರು ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ವೃಕ್ಷಮಾತೆ ಪದ್ಮಶ್ರೀ  ತುಳಸಿ ಗೌಡ ಅವರ ಮನೆಗೆ ಭೇಟಿ ನೀಡಿದರು.
ತಮ್ಮ ಮನೆಗೆ ಆಗಮಿಸಿ ಹಾಜಬ್ಬ ಅವರನ್ನು ತುಳಸಜ್ಜಿ ಕುಟುಂಬ ಆತ್ಮೀಯವಾಗಿ ಸ್ವಾಗತಿಸಿದರು. 
ಅತ್ಯಂತ ಸರಳ ವ್ಯಕ್ತಿತ್ವದ ಹಾಜಬ್ಬ ಅವರು ತುಳಸಿ ಗೌಡ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು. 
ತುಳಸಜ್ಜಿಯ ಕುಟುಂಬ, ಮತ್ತು ಅಗಸೂರು ಗ್ರಾಮ ಪಂಚಾಯಿತಿ ವತಿಯಿಂದ ಹಾಜಬ್ಬ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಈ ಸಂದರ್ಭದಲ್ಲಿ ಪದ್ಮಶ್ರೀ ಹಾಜಬ್ಬ ಅವರು ಮಾತನಾಡಿ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಸಾವಿರಾರು ಗಿಡಗಳನ್ನು ನೆಟ್ಟು ಪೃಕೃತಿಯ ಮಡಿಲನ್ನು ಹಸಿರು ಮಾಡಿದ ತುಳಸಜ್ಜಿಯ ಮನೆಗೆ ಭೇಟಿ ನೀಡಿರುವುದು ಸಂತಸ ತಂದಿದೆ ಎಂದರು. 
ತುಳಸಜ್ಜಿ ಕೆಲಸ ಮಾಡಿದ ನರ್ಸ
ರಿಗೆ ಹಾಜಬ್ಬ ಭೇಟಿ ನೀಡಿದರು.
ಹೊಸದಿಗಂತ ಮಂಗಳೂರು ವರದಿಗಾರ ಬಾಳೇಕುಡಿ, ಹಾಜಬ್ಬ ಶಾಲೆಯ ಶಿಕ್ಷಕ ಸುಶೀಮಾ,ಅಕ್ಷತಾ, ಸುಭಾಶ್ಚಂದ್ರ ಶೆಟ್ಟಿ, ಗೌತಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Post a Comment

Previous Post Next Post