[09/08, 12:04 PM] Ravi Gowda. Kpcc. official: https://fb.watch/eNKnRdPuRB/
[09/08, 3:10 PM] Ravi Gowda. Kpcc. official: ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಕೆ ಜೆ ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.
[09/08, 3:38 PM] Ravi Gowda. Kpcc. official: *ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*
*ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:*
ಇಂದು ದೇಶದಾದ್ಯಂತ ಕ್ವಿಟ್ ಇಂಡಿಯಾ ಚಳುವಳಿ ದಿನ ಆಚರಣೆ ಮಾಡುತ್ತಿದ್ದೇವೆ. 1942, ಆ.8ರಂದು ಮುಂಬೈ ಅಧಿವೇಶನದಲ್ಲಿ ಗಾಂಧೀಜಿ ಅವರು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ನಿರ್ಣಯ ಕೈಗೊಳ್ಳುತ್ತಾರೆ. ಅಂದು ಸಂಜೆ ಅವರು ಭಾಷಣ ಮಾಡುತ್ತಾ ‘ಮಾಡು ಇಲ್ಲವೇ ಮಡಿ’ ಎಂಬ ಸಂದೇಶವನ್ನು ಭಾರತೀಯರಿಗೆ ರವಾನಿಸುತ್ತಾರೆ.
ಅದಕ್ಕೆ 1942, ಆ.9ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಘಟ್ಟ. ಅಂದು ಬ್ರಿಟೀಷರು ಗಾಂಧೀಜಿ, ಸೇರಿದಂತೆ ನಾಯಕರು ಹಾಗೂ 1 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುತ್ತಾರೆ. ಈ ಚಳುವಳಿಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬ್ರಿಟೀಷರು 200 ವರ್ಷಗಳ ಕಾಲ ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಾರೆ. ಆರ್ ಎಸ್ಎಸ್ ಹಾಗೂ ಬಿಜೆಪಿಯವರು ಕೂಡ ಅವರ ಗುಲಾಮರಾಗಿದ್ದರು.
ಆರ್ ಎಸ್ಎಸ್ 1925ರಲ್ಲಿ ಸ್ಥಾಪನೆಯಾಯಿತು. ಆ ಕಾಲದಲ್ಲಿ ತೀವ್ರವಾದ ಹೋರಾಟ ನಡೆಯುತ್ತಿತ್ತು. 1930ರಲ್ಲಿ ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ, ನಂತರ ಕ್ವಿಟ್ ಇಂಡಿಯಾ ಹೋರಾಟ ನಡೆಯಿತು. ಲಕ್ಷಾಂತರ ಮಂದಿ ಸೆರೆವಾಸ ಅನುಭವಿಸಿದರು. ಈ ಹೋರಾಟದ ಸಂದರ್ಭದಲ್ಲಿ ಆರ್ ಎಸ್ಎಸ್ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಬಂದ ಮೇಲೆ ಜನಸಂಘ ರಾಜಕೀಯ ಪಕ್ಷವಾಯಿತು. ಅದು ಆರ್ ಎಸ್ಎಸ್ ರಾಜಕೀಯ ಮುಖವಾಣಿಯಾಗಿತ್ತು.
ನಮ್ಮ ರಾಷ್ಟ್ರಧ್ವಜವನ್ನು ಹರ್ ಘರ್ ತಿರಂಗಾ ಎಂದು ಮಾಡುತ್ತಿದ್ದಾರೆ. ಇದೇ ಗೋಲ್ವಾಕರ್, ಸಾರ್ವರ್ಕರ್ ಅವರು ಈ ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದರು. ಸುಮಾರು 52 ವರ್ಷಗಳ ಕಾಲ ನಾಗ್ಪುರದ ಕಚೇರಿಯಲ್ಲಿ ತ್ರಿವರ್ಣ ಧ್ವಜ ಆಚರಿಸಿರಲಿಲ್ಲ.
ನಾವು ಮೊದಲಿನಿಂದಲೂ ಆರ್ ಎಸ್ಎಸ್ ವಿರೋಧಿಸುತ್ತಿದ್ದೇವೆ. ಅದು ಮೇಲ್ಜಾತಿಯವರ ಸಂಸ್ಥೆ. ಅವರು ಚತುರ್ವರ್ಣ ಹಾಗೂ ಶ್ರೇಣಿಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಕೊಂಡು ಮೇಲ್ವರ್ಗದವರಿಗೆ ಅಧಿಕಾರ ಇರಬೇಕು ಎಂದು ನಂಬಿದ್ದಾರೆ. ಈ ವ್ಯವಸ್ಥೆ ಬಂದರೆ ಅಸಮಾನತೆ, ಶೋಷಣೆ ಹಾಗೂ ಗುಲಾಮಗಿರಿಗೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿ ಆರ್ ಎಸ್ಎಸ್, ಸಂಘ ಪರಿವಾರದವರು ಭಜರಂಗದಳದವರು ನಂಬಿಕೆ ಇಟ್ಟಿದ್ದಾರೆ.
ನಮ್ಮ ಸಮಾಜದಲ್ಲಿ ಅಸಮಾನತೆ ಇದ್ದರೆ ಅದಕ್ಕೆ ಈ ಶ್ರೇಣಿಕೃತ ವ್ಯವಸ್ಥೆ ಕಾರಣ. ಸಾವಿರಾರು ವರ್ಷಗಳ ಕಾಲ ಲಕ್ಷಾಂತರ ಕೆಳವರ್ಗದವರು ಹಾಗೂ ಮಹಿಳೆಯರಿಗೆ ಶಿಕ್ಷಣ ಸಿಗಲಿಲ್ಲ. ಬಸವಣ್ಣನವರು ಬರುವವರೆಗೂ ಯಾರಿಗೂ ಅವಕಾಶ ಸಿಕ್ಕಿರಲಿಲ್ಲ. ಇಂತಹ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟುಕೊಂಡಿದ್ದವರು ಆರ್ ಎಸ್ಎಸ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ವಿರೋಧಿಸುವವರು ಹೇಗೆ ದೇಶಭಕ್ತಿ ತೋರಲು ಸಾಧ್ಯ. ಇವುಗಳು ನಮ್ಮ ಹೆಮ್ಮೆ. ಇದಕ್ಕೆ ಅದರದೇ ಆದ ಪಾವಿತ್ರ್ಯತೆ ಇದೆ. ಇದನ್ನು ಸಾರ್ವಕರ್, ಗೋಲ್ವಾಕರ್ ವಿರೋಧಿಸಿದ್ದರು. ಈಗ ನಾಟಕವಾಡುತ್ತಿದ್ದಾರೆ.
1885ರಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ನಾವು ಸ್ವಾತಂತ್ರ್ಯದ ಗಾಳಿ ಪಡೆಯುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ಹೊರತು ಬೇರೆಯವರಲ್ಲ. ಇದು ಇತಿಹಾಸ. ಗೋಪಾಲಕೃಷ್ಣ ಗೋಖಲೆ ಅವರು ಗಾಂಧಿಜಿ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಕರೆದರು. 1915ರಲ್ಲಿ ಅವರು ಭಾರತಕ್ಕೆ ಬಂದು ನಾಯಕತ್ವ ವಹಿಸಿಕೊಂಡರು. ನೆಹರೂ, ಸುಭಾಷ್ ಚಂದ್ರ ಬೋಸ್, ಸರೋಜಿನಿ ನಾಯ್ಡು, ಸರ್ದಾರ್ ಪಟೇಲ್ ಸೇರಿದಂತೆ ಅನೇಕ ನಾಯಕರು ತ್ಯಾಗ ಬಲಿದಾನ ಮಾಡಿದರು.
ಸಾರ್ವಕರ್ ಜೈಲಿಗೆ ಹೋಗಿದ್ದಾಗ ಬ್ರಿಟೀಷರ ವಿರುದ್ಧ ನಿಲ್ಲುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟರು. ಅಂತಹವರನ್ನು ಬಿಜೆಪಿಯವರು ಹಾಡಿ ಹೊಗಳಿ ವೀರ ಸಾರ್ವಕರ್ ಎನ್ನು ಕರೆಯುತ್ತಾರೆ. ಹೆಗಡೆವಾರ್, ಗೋಲ್ವಾಕರ್ ಸೇರಿದಂತೆ ಯಾರಾದರೂ ಸೆರೆವಾಸ ಅನುಭವಿಸಿ, ಪ್ರಾಣ ತ್ಯಾಗ ಮಾಡಿದ್ದಾರಾ? ಇವರು ನಮಗೆ ರಾಷ್ಟ್ರಭಕ್ತಿ, ದೇಶಭಕ್ತಿ ಬಗ್ಗೆ ಹೇಳಿಕೊಡುತ್ತಾರೆ.
ದೇಶಭಕ್ತಿ ಇಟ್ಟುಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದವರು ಕಾಂಗ್ರೆಸ್ ನವರೆ ಹೊರತು, ಆರ್ ಎಸ್ಎಸ್ ಅಲ್ಲ. ಇವರಿಗೆ ಯಾವ ನೈತಿಕತೆ ಇದೆ? ಇವರದ್ದು ಕೇವಲ ನಾಟಕ. ಮೋದಿ ದೊಡ್ಡ ನಾಟಕಕಾರ. ನಾವು ಇಂದು ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕು. ಅವರಿಗೆ ಪ್ರಜಾಪ್ರಭುತ್ವ ನಂಬಿಕೆ ಇಲ್ಲ, ಸಂವಿಧಾನ, ರಾಷ್ಟ್ರಧ್ವಜದ ಮೇಲೆ ನಂಬಿಕೆ ಇಲ್ಲ. ಇವರು ದೇಶ ಆಳುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ಹೋರಾಟಕ್ಕೆ ಸಜ್ಜಾಗಬೇಕು. ಜನರ ಬಳಿ ಹೋಗಿ ಅವರ ಸುಳ್ಳನ್ನು ಬಯಲು ಮಾಡಿ ಸತ್ಯಾಂಶ ಹೇಳಬೇಕು. ಅವರು ಸುಳ್ಳನ್ನು ನೂರು ಬಾರಿ ಹೇಳುವಾಗ ನಾವು ಸತ್ಯವನ್ನು ನಾಲ್ಕೈದು ಬಾರಿಯಾದರೂ ಹೇಳಬೇಕು.
ಸ್ವಾತಂತ್ರ್ಯ ತಂದುಕೊಟ್ಟವರನ್ನು ಸ್ಮರಿಸಬೇಕು. ಅವರು ನೆಹರೂ ಅವರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅವರು 11 ವರ್ಷ ಸೆರೆವಾಸ ಅನುಭವಿಸಿದ್ದರು. ಆರ್ ಎಸ್ಎಸ್ ನವರು ಹೋಗಿದ್ದರಾ? ಹೀಗಾಗಿ ನಾವೆಲ್ಲರೂ ಈ ದಿನವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಯೋಧರ ಸ್ಮರಿಸುತ್ತಿದ್ದೇವೆ. ಈ ಕೋಮುವಾದಿ ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ತೆಗೆಯಲು ಶಪಥ ಮಾಡಬೇಕು.
ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳುತ್ತಿದ್ದು, ಇಡೀ ದೇಶದಲ್ಲಿ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆ.15ರಂದು ನಡೆಯಲಿದ್ದು, ಕನಿಷ್ಟ 1 ಲಕ್ಷ ಜನ ಭಾಗವಹಿಸಲು ತೀರ್ಮಾನಿಸಲಾಗಿದೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಬೇಕು. ಸಂಗೋಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪಾದಯಾತ್ರೆ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲೂ ಪಾದಯಾತ್ರೆ ಆರಂಭವಾಗಿದ್ದು, ಹಲವು ಕಡೆಗಳಲ್ಲಿ ಭಾಗವಹಿಸಿದ್ದೇವೆ. ಕೆಲವು ಕಡೆಗಳಲ್ಲಿ ಮಳೆ ಇರುವ ಕಾರಣ ಈ ಪಾದಯಾತ್ರೆ ಸಮಯವನ್ನು ಆ.30ರವರೆಗೂ ವಿಸ್ತರಿಸಲಾಗಿದೆ.
*ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:*
ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇಂದು ಮಹತ್ವವಾದ ದಿನ. ರಾಷ್ಟ್ರಪಿತ ಗಾಂಧೀಜಿ ಅವರು ಬ್ರಿಟೀಷರಿಗೆ ಭಾರತ ಬಿಟ್ಟು ತೊಲಗಿ ಎಂದು ಕರೆಕೊಟ್ಟ ದಿನ. ಇದನ್ನು ನಾವು ಆಗಸ್ಟ್ ಕ್ರಾಂತಿ ದಿವಸ ಎಂದು ಕರೆಯುತ್ತೇವೆ.
ಬಾಂಬೆಯ ಮೈದಾನದಲ್ಲಿ ಆಗಸ್ಟ್ 8, 1942ರಂದು ಈ ಹೋರಾಟಕ್ಕೆ ಕರೆ ನೀಡಿ 9ರಿಂದ ಎಲ್ಲ ವರ್ಗದ ಜನ ರಾಷ್ಟ್ರದಾದ್ಯಂತ ಹೋರಾಟ ಮಾಡುತ್ತಾರೆ. 900ಕ್ಕೂ ಹೆಚ್ಚು ಜನ ಪ್ರಾಣತ್ಯಾಗ ಮಾಡಿ ಸಾವಿರಾರು ಜನ ಗಾಯಗೊಂಡಿದ್ದರು.
ಈಗ ದೇಶದಲ್ಲಿ ನಕಲಿ ದೇಶಭಕ್ತರು ಕಾಂಗ್ರೆಸ್ ನಾಯಕರಿಗೆ ದೇಶಭಕ್ತಿ ಹೇಳಿಕೊಡಲು ಬರುತ್ತಿದ್ದಾರೆ. ಈ ಕ್ವಿಟ್ ಇಂಡಿಯಾ ಹೋರಾಟದಲ್ಲಿ ಹಿಂದೂ ಮಹಾಸಭಾ, ಆರ್ ಎಸ್ಎಸ್ ಅಥವಾ ಸಂಘಪರಿವಾರದವರು ಈ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಹೆಗಡೆವಾರ್, ಸಾರ್ವಕರ್ ಅವರು ಈ ಹೋರಾಟದ ವಿರುದ್ಧ ಇದ್ದರು. ಶಾಮಪ್ರಸಾದ್ ಮುಖರ್ಜಿ ಅವರು ಬ್ರಿಟೀಷರಿಗೆ ಪತ್ರ ಬರೆದು, ಈ ಹೋರಾಟ ತಡೆಯಲು ನಾವು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದರು. ಇಂತಹವರನ್ನು ಬಿಜೆಪಿ ಅವರು ಆರಾಧಿಸುತ್ತಾರೆ.
ಹೀಗೆ ಪ್ರತಿ ಹೆಜ್ಜೆಯಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆ. ಈ ಪವಿತ್ರವಾದ ಪಕ್ಷದ ಸದಸ್ಯರು ನೀವಾಗಿದ್ದೀರಿ.
ನರೇಂದ್ರ ಮೋದಿ ಹಾಗೂ ಅವರ ಭಕ್ತರು 2014ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುತ್ತಾರೆ. ಆದರೆ ಇಂದು ಹರ್ ಘರ್ ತಿರಂಗಾ ಎಂದು ಹೇಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 57 ವರ್ಷಗಳ ಕಾಲ ಆರ್ ಎಸ್ಎಸ್ ನಾಯಕರು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತ್ರಿವರ್ಣ ಧ್ವಜದ ಡಿಪಿ ಬದಲಿಸಲು ಹೇಳಿದ್ದಾರೆ. ಆದರೆ ಆರ್ ಎಸ್ಎಸ್ ಕೇಸರಿ ಧ್ವಜವನ್ನೇ ಹಾಕಿದೆ.
ಬಿಜೆಪಿಯವರು ಈ ದೇಶ ಬಿಟ್ಟು ಹೋಗುವುದು ಉತ್ತಮ. ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಈ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದ್ದಾರೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಪಾದಯಾತ್ರೆ ಹಾಗೂ ಆ.15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು.
[09/08, 3:38 PM] Ravi Gowda. Kpcc. official: *ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
80 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಂದೇಶದೊಂದಿಗೆ ಈ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು. ಇಂದು ನಾವೆಲ್ಲರೂ ಗಾಂಧೀಜಿ ಅವರ ಅನುಯಾಯಿಗಳಾಗಿ, ಬಿಜೆಪಿಯವರಿಗೆ ಅಧಿಕಾರ ಬಿಟ್ಟು ತೊಲಗಿ ಎಂಬ ಸಂದೇಶ ನೀಡಬೇಕಿದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ. ಆದರೆ ಇಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ರೀತಿ ಅದರ ಮುಖ್ಯಸ್ಥರಿಗೆ ಕಿರುಕುಳ ನೀಡುತ್ತಿದೆ ಎಂದು ನಾವೆಲ್ಲರೂ ನೋಡುತ್ತಿದ್ದೇವೆ. ಇದು ಅಘೋಷಿತ ತುರ್ತುಪರಿಸ್ಥಿತಿಗೆ ಸಾಕ್ಷಿ.
ನಮ್ಮ ನಾಯಕರು ನಮಗೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ, ಸಂವಿಧಾನ ತಂದುಕೊಟ್ಟಿದ್ದು, ಇದನ್ನು ಬದಲಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ, ನೆಹರೂ, ಸರ್ದಾರ್ ಪಟೇಲ್, ಅಜಾದ್ ಸೇರಿದಂತೆ ಹಲವು ನಾಯಕರ ಅಹಿಂಸಾ ಚಳುವಳಿಯನ್ನು ವಿಶ್ವದ ಎಲ್ಲ ನಾಯಕರು ಮೆಚ್ಚಿದ್ದಾರೆ. ಇದು ನಮ್ಮ ಪಕ್ಷದ ಸಂಸ್ಕೃತಿ.
ಪಾದಯಾತ್ರೆಗಳು ಕಾಂಗ್ರೆಸ್ ಕಾರ್ಯಕ್ರಮ. ನಾವೆಲ್ಲರೂ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಅನುಯಾಯಿಗಳು. ಲಕ್ಷಾಂತರ ಕಾಂಗ್ರೆಸಿಗರು ಸೆರೆವಾಸ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು. ಆದರೆ ಈ ತ್ರಿವರ್ಣ ಧ್ವಜವನ್ನು ಬಿಜೆಪಿಯವರು ಅಪಶಕುನ ಎಂದು ಕರೆದಿದ್ದರು.
ಉದಯಪುರದಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ. ಅದರ ಭಾಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನಿಸಿದೆವು. ಅನೇಕ ಜಿಲ್ಲೆಗಳಲ್ಲಿ 200 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಈ ಕಾಲಾವಧಿಯನ್ನು ಆಗಸ್ಟ್ 30ರವರೆಗೆ ವಿಸ್ತರಿಸಲಾಗಿದೆ.
ಆ.15 ರಂದು ರಾಜ್ಯ ರಾಜಧಾನಿಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆ ಮಾಡಲು ಸೂಚಿಸಿದರು. ಅದರ ಭಾಗವಾಗಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದೇವೆ. ಅಂದು ಮಧ್ಯಾಹ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಈ ಪಾದಯಾತ್ರೆ ನಡೆಯಲಿದೆ. ಸಂಚಾರಕ್ಕೆ ಅನುಕೂಲವಾಗುವಂತೆ ಈ ಮಾರ್ಗ ಆಯ್ಕೆ ಮಾಡಲಾಗಿದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಕೇವಲ ನೇತೃತ್ವ ವಹಿಸಿದೆ.
ನಮ್ಮ ಶಾಸಕಾಂಗ ಪಕ್ಷದ ನಾಯಕರ ಹುಟ್ಟು ಹಬ್ಬ ಹಾಗೂ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುವ ಅವಕಾಶ ನಮಗೆ ಸಿಕ್ಕಿದೆ. ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಎಲ್ಲರೂ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗೂಡಿ ಪಾಲ್ಗೊಳ್ಳಬೇಕು. ಸ್ವಾತಂತ್ರ್ಯದ ನಂತರ ಇದೊಂದು ದೊಡ್ಡ ಪಾದಯಾತ್ರೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸುವುದಾಗಿ ಹೇಳಿದ್ದು, ಯಾರೂ ಭಾಗವಹಿಸಲಿದ್ದಾರೆ ಎಂದು ಶೀಘ್ರದಲ್ಲೇ ಪ್ರಕಟಿಸುತ್ತಾರೆ.
ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನಾವು ಇರುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಅಮೃತಮಹೋತ್ಸವದಲ್ಲಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ಅದನ್ನು ನಾವು ಬಳಸಿಕೊಳ್ಳಬೇಕು.
ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಬದುಕಿಲ್ಲ. ಮುಂದಿನ ಬಾರಿ ಸರ್ಕಾರ ಬದಲಾಗಲಿದೆ ಎಂದು ಅವರದೇ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಈ ಅಕಾಶವನ್ನು ನಾವು ಬಳಸಿಕೊಂಡು ನಮ್ಮ ನಾಯಕರ ಮಾರ್ಗದರ್ಶನದಲ್ಲಿ ನಡೆದು ಶ್ರಮಿಸಬೇಕು. ಮನೆ ಮನೆಗೂ ತಲುಪಿ ಕಾಂಗ್ರೆಸ್ ಆಚಾರ ವಿಚಾರ ಪ್ರಚಾರ ಮಾಡಬೇಕು. ನಮ್ಮ ಸರ್ಕಾರದ ಕೊಡುಗೆ ತಿಳಿಸಬೇಕು.
ಕಾಂಗ್ರೆಸ್ ಸರ್ಕಾರ ಹಲವು ತಲೆಮಾರುಗಳ ಜನರಿಗೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ದೊಡ್ಡ ಉದ್ದಿಮೆಗಳು, ಕೈಗಾರಿಕೆಗಳು, ಪಿಎಸ್ ಯುಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಿ ಕಾಂಗ್ರೆಸ್ ಹಲವು ತಲೆಮಾರುಗಳಿಗೆ ನೆರವಾಗಿದ್ದಾರೆ. ಇದಕ್ಕೆ ನಾವೆಲ್ಲರೂ ಋಣ ತೀರಿಸಬೇಕು.
ದೇಶದಲ್ಲಿ ಬದಲಾವಣೆ ತರಬೇಕಾಗಿದ್ದು, ರಾಜ್ಯದಲ್ಲಿ ಬದಲಾವಣೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಆಮೂಲಕ ನಮ್ಮ ನಾಯಕರಿಗೆ ಶಕ್ತಿ ತುಂಬಬೇಕು.
ಬಿಜೆಪಿಯವರು ರಾಷ್ಟ್ರಧ್ವಜವನ್ನು ಇಂದು ಮಾರಾಟಕ್ಕೆ ಇಟ್ಟಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ನಾವು 1.5 ಲಕ್ಷ ರಾಷ್ಟ್ರಧ್ವಜ, ಟೋಪಿ, ಟಿ ಶರ್ಟ್ ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಮುಖ್ಯಮಂತ್ರಿಗಳು ಉಚಿತವಾಗಿ ನೀಡಬೇಕು. ಈ ರಾಷ್ಟ್ರಧ್ವಜ ವ್ಯಾಪಾರದ ವಸ್ತುವಲ್ಲ. ಇದು ದೇಶದ ಸ್ವಾಭಿಮಾನ, ಐಕ್ಯತೆ ಸಂಕೇತ. ಇದನ್ನು ಮಾರಾಟ ಮಾಡಿ ರಾಷ್ಟ್ರಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುತ್ತಿದ್ದಾರೆ.
ನೆರೆ ಸಮಯದಲ್ಲಿ ಗಈ ಕಾರ್ಯಕ್ರಮ ಮಾಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನೆರೆ ವಿಚಾರದಲ್ಲಿ ನಮ್ಮ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದು, ಮಂತ್ರಿಗಳು ಹೋಗಿರದ ಕಡೆಗಳಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಚುರುಕು ಮುಟ್ಟಿಸಿ, ಜನರಿಗೆ ನೆರವಾಗುವಂತೆ ತಿಳಿಸಿದ್ದೇವೆ’ ಎಂದರು.
Post a Comment