ರಾಷ್ಟ್ರಭಕ್ತಿ ಜಾಗೃತಿ ಮಾತ್ರ ದೇಶವನ್ನು ಉಳಿಸಬಲ್ಲದು: ಸಿ.ಟಿ.ರವಿ

09-08-2022
ಗೆ, 
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ರಾಷ್ಟ್ರಭಕ್ತಿ ಜಾಗೃತಿ ಮಾತ್ರ ದೇಶವನ್ನು ಉಳಿಸಬಲ್ಲದು: ಸಿ.ಟಿ.ರವಿ
ಬೆಂಗಳೂರು: ರಾಷ್ಟ್ರಭಕ್ತಿಯ ಜಾಗೃತಿ ಮಾತ್ರ ದೇಶವನ್ನು ಉಳಿಸಬಲ್ಲದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಇಂದು ತಿಳಿಸಿದರು.
ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ಸರ್ಕಲ್ ಬಳಿ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ದೇಶಾದ್ಯಂತ ಸ್ವಾತಂತ್ರ್ಯದ ಅಮೃತೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ಇದು ನಾಡಿನ ಜನರೆಲ್ಲರ ಹಬ್ಬ. ಕೇವಲ ಸರಕಾರದ ಉತ್ಸವವಲ್ಲ. ನಾಡಿನ ಎಲ್ಲ ಜನರೂ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಭಕ್ತಿಯ ಜೊತೆಗೆ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕಿದೆ ಎಂದು ನುಡಿದರು.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು 13ರಿಂದ 15ರವರೆಗೆ ಮನೆಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಮತ್ತು ಆ ಮೂಲಕ ದೇಶದ ಎಲ್ಲ ಜನರು ಒಂದಾಗಿ ದೇಶಭಕ್ತಿ ಮೆರೆಯಲು ಕೋರಿದ್ದಾರೆ ಎಂದರು.
ಲಕ್ಷಾಂತರ ಜನರ ಬಲಿದಾನ, ಸಮರ್ಪಣೆಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಇದನ್ನು ನಿರಂತರ ಜಾಗರೂಕತೆಯಿಂದ ಮಾತ್ರ ಉಳಿಸಿಕೊಳ್ಳಲು ಸಾಧ್ಯವಿದೆ. ಇವತ್ತು ಭಾರತವನ್ನು ಜಾತಿ, ಭಾಷೆ, ಪ್ರಾದೇಶಿಕತೆ, ರಾಜಕಾರಣ ಸೇರಿ ಹಲವು ರೀತಿಯಲ್ಲಿ ಒಡೆಯುವ ಪ್ರಯತ್ನ ನಡೆಯುತ್ತಿದೆ. ನಾವೆಲ್ಲರೂ ತಾಯಿ ಭಾರತಿಯ ಸೇವೆಗಾಗಿ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.
ವಿಶ್ವಗುರು ಭಾರತವಾಗಿ ಜಗತ್ತಿಗೆ ಮಾರ್ಗದರ್ಶನ ಮಾಡುವುದು ಅಮೃತಕಾಲ. ಸ್ವಾವಲಂಬಿ ಭಾರತವಾಗಿ ಎದ್ದುನಿಲ್ಲುವುದು ಅಮೃತಕಾಲ. ಸ್ವಾಭಿಮಾನಿ, ಬಡತನ ಮುಕ್ತ, ಜಾತೀಯತೆ ಮುಕ್ತ, ಅಸ್ಪøಶ್ಯತೆ ಮುಕ್ತ ಭಾರತವನ್ನು ನೋಡುವುದು ಅಮೃತಕಾಲ. ಆ ಅಮೃತಕಾಲಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು. ರಾಷ್ಟ್ರಭಾವದ ಜಾಗೃತಿಗಾಗಿ ಬ್ಯಾಟರಾಯನಪುರದ ಬಿಜೆಪಿ ಘಟಕವು ಇವತ್ತು ಈ ಪಾದಯಾತ್ರೆ ಆಯೋಜಿಸಿದೆ ಎಂದು ತಿಳಿಸಿದರು.
ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಮಾಜಿ ಮುಖ್ಯಮಂತ್ರಿ 75ನೇ ವರ್ಷಾಚರಣೆಯನ್ನು ಈಚೆಗೆ ಮಾಡಿಕೊಂಡರು. ಅವರಿಗೆ ನಮ್ಮ ದೇಶದ ಧ್ವಜದಲ್ಲಿ ಯಾವ ಬಣ್ಣ ಇದೆ ಎಂಬುದೇ ಗೊತ್ತಿಲ್ಲ. ಇಂಥ ಮರೆವು ದುರದೃಷ್ಟಕರ. ಇವರು ನಕ್ಸಲ್ ಬೆಂಬಲಿಗರು ಎಂದು ನಾವೂ ಹೇಳಬಹುದು. ಅವರು ಅಧಿಕಾರದಲ್ಲಿದ್ದಾಗ ನಕ್ಸಲರಿಗೆ ಬೆಂಬಲ ಕೊಡುತ್ತಿದ್ದರೆಂದು ನಾವೂ ಹೇಳಬಹುದು. ನಕ್ಸಲರು ಸಂವಿಧಾನ ಒಪ್ಪುವರೇ? ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯೇ? ಅಪ್ಪಿತಪ್ಪಿ ಅಧಿಕಾರ ಸಿಕ್ಕಿದ್ದರಿಂದ ಪ್ರಜಾಪ್ರಭುತ್ವವಾದಿಯಾಗಿ ಸಿದ್ದರಾಮಯ್ಯ ಉಳಿದುಕೊಂಡಿದ್ದಾರೆ ಎಂದು ಅವರು ಆರೆಸ್ಸೆಸ್ ಕೇಂದ್ರಗಳಲ್ಲಿ ಬಾವುಟ ಹಾರಿಸುವುದಿಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ರಾಷ್ಟ್ರಧ್ವಜದಲ್ಲಿ ಬಣ್ಣ ಏನಿದೆ ಎಂದು ಗೊತ್ತಿರದಷ್ಟು ಅವರು ಅಮಾಯಕರೇ? ಮರೆತು ಹೋಗಿದೆಯೇ? ದೇಶದ ರಾಷ್ಟ್ರಧ್ವಜದ ಬಣ್ಣದ ವಿಚಾರದಲ್ಲಿ ತಪ್ಪು ಮಾಹಿತಿ ಕೊಟ್ಟಿರುವ ಸಿದ್ದರಾಮಯ್ಯ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಆರೆಸ್ಸೆಸ್ ರಾಷ್ಟ್ರಭಕ್ತಿಯ ಒಂದು ಸಂಘಟನೆ. ಸಿದ್ದರಾಮಯ್ಯ ಅವರಂಥ ಮಜಾವಾದಿಗೆ ಆರೆಸ್ಸೆಸ್ ಅರ್ಥ ಆಗಲು ಸಾಧ್ಯವೇ ಇಲ್ಲ. ಆರೆಸ್ಸೆಸ್ಸಿಗೆ ಬರುವವರು ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡುತ್ತಾರೆ. ಮಜಾವಾದಿ ಆಗಿರುವುದಿಲ್ಲ. ಮೇಲ್ವರ್ಗ, ಕೆಳವರ್ಗ ಎಂದು ಒಡೆದು ಆಳುವ ನೀತಿಯನ್ನು ಬ್ರಿಟಿಷರು ಕಲಿಸಿದ್ದು, ಅದನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಲು ಬಯಸಿದ್ದಾರಾ? ಅಥವಾ ಒಡೆದು ಆಳುವುದು ಕಾಂಗ್ರೆಸ್ ನೀತಿಯೇ ಎಂದು ಪ್ರಶ್ನಿಸಿದರು.
ಭಾಷೆ ಹೆಸರಿನಲ್ಲಿ ಒಡೆದಿದ್ದರು. ಈಗ ಜಾತಿ ಹೆಸರಿನಲ್ಲಿ ಒಡೆಯುವ ಸಂಚು ಇವರದೇ? ಎಂದು ಕೇಳಿದ ಅವರು, ಆರೆಸ್ಸೆಸ್ ಜಾತಿಯ ವಿಚಾರದಲ್ಲಿ ನಂಬಿಕೆ ಇಟ್ಟಿರುವ ಸಂಘಟನೆ ಅಲ್ಲ. ರಾಷ್ಟ್ರಭಕ್ತಿಯ ಮೇಲೆ ನಂಬಿಕೆ ಹೊಂದಿದೆ. ಸೇವೆಯನ್ನೇ ವೃತವನ್ನಾಗಿ ಸ್ವೀಕರಿಸಿದ ಸಂಘಟನೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಸಣ್ಣ ಸಮುದಾಯಕ್ಕೆ ಸೇರಿದವರು. ಅವರಿಗೆ ಇರುವ ಯೋಗ್ಯತೆ ಮತ್ತು ಸಾಮಥ್ರ್ಯವನ್ನು ಪರಿಗಣಿಸಿಯೇ ದೇಶದ ಪ್ರಧಾನಿಯಾಗಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಲಕ್ಷಾಂತರ ಜನ ಕಾರ್ಯಕರ್ತರು ತಮ್ಮೆಲ್ಲ ಸಾಮಥ್ರ್ಯವನ್ನು ಧಾರೆ ಎರೆದರು. ಇದು ಮಜಾವಾದಿಗಳಿಗೆ ಅರ್ಥವಾಗಲು ಸಾಧ್ಯವಿಲ್ಲ ಎಂದರು.
ಇವೆಲ್ಲ ಓಲೈಕೆ ರಾಜಕಾರಣ ಮಾಡುವವರಿಗೆ, ಭಯೋತ್ಪಾದಕರನ್ನೂ ಬೆಂಬಲಿಸುವ ಮತೀಯವಾದಿಗಳಿಗೆ ಅರ್ಥ ಆಗಲಾರದು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.


                                           
 (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post