ಮಂಜೇಶ್ವರದ ವರ್ಕಾಡಿ ಸುಂಕದಕಟ್ಟೆಯಲ್ಲಿ ಧರೆಗುರುಳಿದ ಕಟ್ಟಡ

ಮಂಜೇಶ್ವರದ ವರ್ಕಾಡಿ ಸುಂಕದಕಟ್ಟೆಯಲ್ಲಿ ಧರೆಗುರುಳಿದ ಕಟ್ಟಡ 

ಕಾಸರಗೋಡು: ಮಂಜೇಶ್ವರ ಸಮೀಪದ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಬಿರುಸಿನ ಮಳೆಗೆ ಕಟ್ಟಡವೊಂದು ನೋಡು ನೋಡುತ್ತಿದ್ದಂತೆ ಧರಾಶಾಹಿಯಾದ ಘಟನೆ ಭಾನುವಾರ ನಡೆದಿದೆ. 
ಈ ಕಟ್ಟಡದಲ್ಲಿ ಬಿರುಕು ಕಂಡು ಬಂದು ಕೆಲವು ದಿನಗಳಾಗಿದ್ದು , ಅದರಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿಹೋಗಿದ್ದು , ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 
ಬಿಜೆಪಿ ಸಮಿತಿ, ಧರ್ಮಸ್ಥಳ ಸಂಘ, ಒಡಿಯೂರು ಸಂಘ ಮುಂತಾದ ಕಚೇರಿಗಳು ಸಹಿತ ಇನ್ನಿತರ ಹಲವು ಮಳೆಗೆಗಳು ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದವು. ಆದರೆ ಈ ಹಿಂದೆಯೇ ಎಲ್ಲಾ ಕಚೇರಿ, ಮಳಿಗೆಗಳನ್ನು ತೆರವುಗೊಳಿಸಿ ಯಾವುದೇ ದುರಂತಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಬೇಕರಿ ಜಂಕ್ಷನ್ ನ ಸುರೇಂದ್ರ ನಲ್ಲೆಂಗಿ ಎಂಬವರಿಗೆ ಸೇರಿದ ಕಟ್ಟಡ ಇದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

Previous Post Next Post