ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೊಲೀಸ್ ಪದಕಗಳನ್ನು ನೀಡಲಾಯಿತು

 ಆಗಸ್ಟ್ 14, 2022

,

1:40PM


1082 ಪೊಲೀಸ್ ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೊಲೀಸ್ ಪದಕಗಳನ್ನು ನೀಡಲಾಯಿತು

2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಟ್ಟು ಒಂದು ಸಾವಿರದ 82 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕಗಳನ್ನು ನೀಡಲಾಗಿದೆ. 347 ಸಿಬ್ಬಂದಿಗೆ ಶೌರ್ಯಕ್ಕಾಗಿ ಪೊಲೀಸ್ ಪದಕ, 87 ಮಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು 648 ಸಿಬ್ಬಂದಿಗೆ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕವನ್ನು ನೀಡಲಾಗಿದೆ.


109 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು 108 ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ ಶೌರ್ಯಕ್ಕಾಗಿ ಪೊಲೀಸ್ ಪದಕವನ್ನು ನೀಡಲಾಗಿದೆ.


ವಿಶೇಷ ಸೇವೆಗಾಗಿ ಏಳು ಸಿಬ್ಬಂದಿಗೆ ರಾಷ್ಟ್ರಪತಿಗಳ ಸುಧಾರಣಾ ಸೇವಾ ಪದಕ ಮತ್ತು 38 ಸಿಬ್ಬಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಸುಧಾರಣಾ ಸೇವಾ ಪದಕವನ್ನು ನೀಡಲಾಗಿದೆ.

Post a Comment

Previous Post Next Post