cm, ninne, ಪುಣೆ ಯಲ್ಲಿ, ಬೆಂಗಳೂರಿನಲ್ಲಿ ಅಮೃತ ಸ್ವಾತಂತ್ರ್ಯ ಮಹೋತ್ಸವ,,,, ।। 75 ।।

[13/08, 12:50 PM] Gurulingswami. Holimatha. Vv. Cm: ವಿಶ್ವ ಅಂಗ ದಾನ ದಿನಾಚರಣೆ -

*ಅಂಗಾಂಗ ದಾನ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*


ಬೆಂಗಳೂರು, ಆಗಸ್ಟ್ 13 :

 ಅಂಗಾಂಗ ದಾನ ಮಾನವೀಯತೆಯ ಕೆಲಸ. ಅಂಗಾಂಗಗಳನ್ನು ದಾನಕ್ಕೆ ಸಂಕಲ್ಪ ಮಾಡುವ ಮುಖಾಂತರ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಜ್ಞಾನಿಗಳ , ವೈದ್ಯರ ಪರಿಶ್ರಮದಿಂದ  ನಮ್ಮ ಸಾವಿನ ನಂತರ ಅಂಗಾಂಗಗಳನ್ನು  ನೀಡುವ ಮೂಲಕ ಇತರರ ಜೀವವನ್ನು ಬದುಕಿಸಬಹುದಾಗಿದೆ. ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ  ಎಂಟು ಜೀವಗಳನ್ನು ಉಳಿಸಬಹುದು. ಚರ್ಮ ದಿಂದ ಹಿಡಿದು ಎಲ್ಲ ಅಂಗಗಳನ್ನು  ದಾನ ಮಾಡಬಹುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ.ಮಾನವ ಜನ್ಮ ಶ್ರೇಷ್ಠವಾದುದು. ಅಂಗಾಂಗ ದಾನದ ಮೂಲಕ ಈ ಶ್ರೇಷ್ಠ ಜೀವವನ್ನು ಉಳಿಸಿದಂತಾಗುತ್ತದೆ ಎಂದರು.

*18 ಅಂಗಾಂಗ ಮರುಪಡೆಯುವಿಕೆ ಕೇಂದ್ರ*

ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮಾನ್ಸ್ ನಲ್ಲಿ ಮೆದುಳು ದಾನ ಹಾಗೂ ಹುಬ್ಬಳ್ಳಿ ಕಿಮ್ಸ್ ನಲ್ಲಿ ಮೂತ್ರಪಿಂಡ ದಾನಗಳನ್ನು ಮಾಡಬಹುದಾಗಿದೆ. ಇದು ಸರ್ಕಾರದ  ದೊಡ್ಡಸಾಧನೆ. ಅಂಗಾಂಗ ದಾನ ಮಾನವೀಯತೆ ಕೆಲಸ ಎಂದರು.ಮಾರ್ಕೋನಳ್ಳಿಯ ಕೃಷ್ಣಪ್ಪ, ನವೀನಕುಮಾರ್ ಇವರು ಅತ್ಯಂತ ಬಡಕುಟುಂಬದವರಾಗಿದ್ದು,  ಇವರ ಕುಟುಂಬದವರು ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರೂ, ಅವರ ಅಂಗಾಂಗಗಳನ್ನು  ದಾನ ಮಾಡುವ ಮೂಲಕ ದೊಡ್ಡ ಗುಣವನ್ನು ಮೆರೆದಿದ್ದಾರೆ.ಇವರ ಉದಾತ್ತ ಗುಣವನ್ನು ಎಲ್ಲರಿಗೂ ಅನುಕರಣೀಯವಾದುದು ಎಂದರು.
[13/08, 5:23 PM] Gurulingswami. Holimatha. Vv. Cm: *ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯ ಬೆಳೆಯಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪುಣೆ, ಆಗಸ್ಟ್ 13: ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ  ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಪುಣೆಯಲ್ಲಿ ಬಂಟರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಭವನದ ನಾಲ್ಕನೇ ವಾರ್ಷಿಕೋತ್ಸವವ ಹಾಗೂ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಬಿ ಶೆಟ್ಟಿ ಅವರ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಇಲ್ಲಿ ಕನ್ನಡಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.  ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವ ರಾಜ್ಯ. ಅದೇ ರೀತಿ ಕನ್ನಡಿಗರ ಬಗ್ಗೆ ಗೌರವವಿರುವ ರಾಜ್ಯ.  ನಿಮ್ಮ ಸಂಬಂಧ ಕನ್ನಡದ ಸಂಸ್ಕೃತಿ, ಭಾವನೆ, ಬೆಳವಣಿಗೆಗೆ ನಿರಂತರವಾಗಿ ಇರಲಿ. ಎಲ್ಲಾ ಕ್ಷೇತ್ರದಲ್ಲಿ ಸಾಧನೆ  ಮಾಡುವ ಕೆಲಸವಾಗಲಿ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು. 

*ಅಮೃತ ಕಾಲಕ್ಕೆ ಭದ್ರಬುನಾದಿ*
ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಭಕ್ತಿಯನ್ನು ಪುನರುಜ್ಜೀವನಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ  1 ಕೋಟಿ 25 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇಡೀ ದೇಶದ ತುಂಬಾ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡುತ್ತಿದೆ. ಇದರ ಅವಶ್ಯಕತೆ ಇದೆ. ದೇಶದ ಏಕತೆ, ಅಖಂಡತೆ ಇದ್ದಾಗ ಮಾತ್ರ ದೇಶ ಕಟ್ಟಲು ಸಾಧ್ಯ. ದೇಶ ಮೊದಲು ಎನ್ನುವ ಭಾವ ಇದ್ದ ದೇಶಕ್ಕೆ ಸೋಲು ಎನ್ನುವುದು ಇರುವುದಿಲ್ಲ. ಭಾರತದ 130 ಕೋಟಿ ಜನ ಸಂಖ್ಯೆ ಎದ್ದು ನಿಂತರೇ ಇಡೀ ಜಗತ್ತೇ  ಅಲ್ಲಾಡಿಬಿಡುತ್ತದೆ.

*ಅಮೃತ ಘಳಿಗೆ*
ಭಾರತಕ್ಕೆ 2047 ಕ್ಕೆ 100 ವರ್ಷಗಳಾಗುತ್ತದೆ. ಈ 25 ವರ್ಷ ಗಳನ್ನು ಅಮೃತ ಕಾಲ ಎಂದು ಘೋಷಿಸಲಾಗಿದೆ. ಅಮೃತ ಘಳಿಗೆ ಎಂದರೆ ದೇವರ ಇಚ್ಛೆ, ಮನುಷ್ಯರ ಶ್ರಮ ಕೂಡುವ  ಘಳಿಗೆ. ಅಂಥ ಕಾಲ ಭಾರತದ ದೇಶಕ್ಕೆ ಬಂದಿದೆ. ನಾವು ಈ ಕಾಲದಲ್ಲಿರುವುದು ನಮ ಭಾಗ್ಯ. ಈ ವರ್ಷ ನಾವು ಅದಕ್ಕೆ ಹಾಕುವ ಭದ್ರ ಬುನಾದಿ 25 ವರ್ಷ  ಭಾರತವನ್ನು ಸಶಕ್ತ, ಸಂಪದ್ಭರಿತ ರಾಜ್ಯವನ್ನಾಗಿಸಿ, ನಂಬರ್ ಒನ್ ರಾಷ್ಟ್ರವಾಗಿಸಲಿದೆ. ಬಂಟರ ಸಮಾಜಕ್ಕೆ ದೇಶ ಭಕ್ತಿ ಕಲಿಸುವ ಅವಶ್ಯಕತೆ ಇಲ್ಲ. ನಿಮ್ಮ ನಾಯಕತ್ವವೂ ಬಹಳ ಮುಖ್ಯ. ದೇಶ, ದೇಶ ಭಕ್ತಿಯ ಬಗ್ಗೆ ನಾಯಕತ್ವ ವಹಿಸುಬೇಕು ಎಂದರು. 

*ಸರ್ಕಾರದ ನೆರವು*
 21ನೇ ಶತಮಾನ   ಜ್ಞಾನದ ಕಾಲ. ಮುಂದಿನ ಪೀಳಿಗೆ ಜ್ಞಾನ ಪಡೆಯಬೇಕು. ಜ್ಞಾನದಲ್ಲಿಯೂ ಬಂಟರು ಕಡಿಮೆ ಇಲ್ಲ. ಬಂಟರ ಸಮಾಜಕ್ಕೆ ಕೀರ್ತಿ, ಕಿರೀಟ ಸಿಗುತ್ತದೆ. ನಿಮ್ಮ ಸಂಘದ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಸಂಘಕ್ಕೆ ಅಗತ್ಯವಿರುವ ಸಹಾಯ ಸಹಕಾರವನ್ನು ನೀಡಲಾಗುವುದು. ಪಾಂಡರಾಪುರಕ್ಕೆ ಈ ವರ್ಷ 5 ಕೋಟಿ ರೂ.ಗಳನ್ನು ನೀಡಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ.  ಕನ್ನಡಿಗರು ಹೋಗುವ ಕಡೆಗಳಲ್ಲಿ ಸಹಾಯ ಹಸ್ತ ಚಾಚುತ್ತಿದ್ದೇವೆ ಎಂದರು.

*ತಾಯಿ ಋಣ ತೀರಿಸುವ ಬಂಟರು*
ಕರ್ನಾಟಕದ ಹೊರಗಿರುವ ಕನ್ನಡಿಗರ  ಪ್ರೀತಿ ವಿಶ್ವಾಸ ಹಾಗೂ ಅವರ ಬಗ್ಗೆ ನಮಗಿರುವ ಪ್ರೀತಿ ಅವರೊಂದಿಗೆ ನಾವಿದ್ದೇವೆ. ನೀವು ನಮ್ಮವರು, ನಮ್ಮೂರಿನವರು. ಮಣ್ಣು, ತಾಯಿಯ ಋಣ ಅತ್ಯಂತ ಮಹತ್ವದ್ದು. ನಮ್ಮ ಇಡೀ ಬದುಕು ತಾಯಿಯ ಗರ್ಭದಿಂದ ಭೂ ಗರ್ಭದವರೆಗೆ ಪಯಣ.  ಮಣ್ಣಿನ ಋಣವನ್ನು ಸದಾ ಮನಸ್ಸಿನಲ್ಲಿಟ್ಟು ಕೊಂಡು ಅದನ್ನು ತೀರಿಸುವ ಪ್ರಯತ್ನ ಮಾಡುವವರೇ ನಿಜವಾದ ಬಂಟರು ಎಂದರು.   

*ಬಂಟರದ್ದು ಎಂಟೆದೆ*
ಬಂಟರು ಎನ್ನುವ ಹೆಸರಿನಲ್ಲಿಯೇ ಶಕ್ತಿ ಇದೆ. ನೀವು ನಿಮ್ಮ ಊರಿನಲ್ಲಿ ಶಕ್ತಿ ಪ್ರದರ್ಶಿಸಿದ ದೊಡ್ಡ ಮಾತಲ್ಲ. ನೀವು ದೇಶದ ಉದ್ದಗಲಕ್ಕೆ   ಕಾಶ್ಮೀರದಿಂದ ಕನ್ಯಾಕುಮಾರಿ, ದಿಲ್ಲಿ ಎಲ್ಲೇ ಹೋದರೂ ಗೌರವವಿದೆ. ಬಂಟರಾಗಬೇಕಾದರೆ ಅವರಿಗೆ ಎಂಟೆದೆ ಇರಬೇಕು. ಅದು ನಿಮ್ಮ ರಕ್ತದ ಕಣ ಕಣದಲ್ಲಿದೆ.  ವ್ಯಾಪಾರ ವ್ಯವಹಾರದಲ್ಲಿ ಸಾಹಸಕ್ಕೆ ಕೈಹಾಕುವವರು ನೀವು. ವ್ಯಾಪಾರದ ಇಕೋ ಸಿಸ್ಟಮ್ ಸೃಷ್ಟಿಸುತ್ತೀರಿ. ಯಾರಿಗೆ ಸಾಧ್ಯವಿಲ್ಲ ಅದನ್ನು ಮಾಡಿ ತೋರಿಸಿರುವವರು ಬಂಟರು. 

ಎಂಟೆದೆ ಇದೆ ಎಂದು ಗರ್ವ ತೋರಿಸುವವರಲ್ಲ. ಶಕ್ತಿ ಶಾಲಿಗಳಾದಂತೆಯೇ ಪ್ರೀತಿ ವಿಶ್ವಾಸ ತೋರುವ ಜನ. ಪುಣೆಯಲ್ಲಿ ಕನ್ನಡಿಗರು ಬಹಳಷ್ಟು ಜನರಿದ್ದಾರೆ. ಕನ್ನಡದ ಗುರುತು ಬಂಟರ ಸಂಘದಿಂದ ಇದೆ. ಹೊರಗಿನ ರಾಜ್ಯ ಕ್ಕೆ ಬಂದು ನೆಲೆಸಿದಾಗ ನಮ್ಮ ಊರಿನ ಬಗ್ಗೆ ಇನ್ನೂ ಹೆಚ್ವಿನ ಅಭಿಮಾನ ಬೆಳೆಯುತ್ತದೆ. ದೂರವಾದಷ್ಟು, ಊರು ಮನಸ್ಸಿಗೆ ಹತ್ತಿರವಾಗುತ್ತದೆ ಎಂದರು.

*ಬಂಟರ ಸಂಘ ಬಾಳಬೇಕು,* *ಬೆಳೆಯಬೇಕು*
ವಿದ್ಯೆ, ತಂತ್ರಜ್ಞಾನ, ಸಂಸ್ಕೃತಿ ಕಲಿತಿದ್ದೇವೆ. ಅತ್ಯಂತ ಸುಸಂಸ್ಕೃತ ಊರು ಪುಣೆ. ಇಲ್ಲಿ ಬಂದು ಯಶಸ್ವಿಯಾಗಿರುವುದು ಶ್ಲಾಘನೀಯ. ಬೆಂಗಳೂರಿನಲ್ಲಿ ಇದಕ್ಕಿಂತ ಚೆನ್ನಾಗಿರುವ ಬಂಟರ ಸಂಘವನ್ನು ಕಟ್ಟಬೇಕು. ಎಲ್ಲಿಗೆ ಹೋದರೂ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೀರಿ. ಬಂಟರ ಸಂಘ ನೂರಾರು ವರ್ಷ ಸಂಘ ಬಾಳಬೇಕು, ಬೆಳೆಯಬೇಕು ಎಂದರು.
[13/08, 6:36 PM] Gurulingswami. Holimatha. Vv. Cm: *ಹರ್ ಘರ್ ತಿರಂಗಾ  ಅಭಿಯಾನ*: 
*ಭಾರತೀಯರು ಒಂದು ಎಂಬ ಸಂದೇಶ ಸಾರಬೇಕು*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಆಗಸ್ಟ್ 13; ಭಾರತೀಯರು ಒಂದು ಎಂಬ ಸಂದೇಶ ಸಾರುವುದು ಹರ್ ಘರ್ ತಿರಂಗಾ  ಅಭಿಯಾನದ ಉದ್ದೇಶ. ಎಲ್ಲರೂ ಒಂದಾಗಿ, ಜಾತಿ ಮತ ಪಂಥ ಎಂಬ ಬೇಧವಿಲ್ಲದೆ ಸ್ವಾತಂತ್ರೋತ್ಸವವನ್ನು  ಆಚರಿಸಬೇಕು   ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದರು. 

ಹರ್ ಘರ್ ತಿರಂಗಾ ಅಭಿಯಾನ ಇಂದಿನಿಂದ ಪ್ರಾರಂಭವಾಗುತ್ತಿದೆ.  ಹರ್ ಘರ್ ತಿರಂಗಾ ಮತ್ತು 75 ನೇ ಸ್ವಾತಂತ್ರೋತ್ಸವದ ಆಚರಣೆ ಈಗಾಗಲೇ ಪ್ರಾರಂಭವಾಗಿದೆ.ಪ್ರತಿ ಊರಿನಲ್ಲೂ ಕೂಡ ಜಿಲ್ಲೆಗಳಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಧ್ವಜವನ್ನು ಹಿಡಿದು  ಮೆರವಣಿಗೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ, ಉತ್ಸಾಹವಿದೆ. ಇಂದಿನಿಂದ15 ರವರೆಗೆ ಪ್ರತಿ ಮನೆಯಲ್ಲಿ ಧ್ವಜ ಹಾರಾಡಬೇಕು ಎನ್ನುವುದು ನಮ್ಮ ಆಶಯ.  ರಾಜ್ಯ ಸರ್ಕಾರ 1ಕೋಟಿ 8 ಲಕ್ಷ ಧ್ವಜಗಳನ್ನು ವಿತರಣೆ ಮಾಡಿದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿ 400 ರಿಂದ 500 ಧ್ವಜ ವಿತರಿಸಲಾಗಿದೆ.  ವಿವಿಧ ಸಂಘ ಸಂಸ್ಥೆಗಳೂ ಧ್ವಜ ವಿತರಣೆ ಮಾಡಿದ್ದು,  1 ಕೋಟಿ 20 ಲಕ್ಷ  ಧ್ವಜ ಕರ್ನಾಟಕದಲ್ಲಿ ವಿತರಣೆಯಾಗಿದೆ. ಪ್ರತಿಯೊಬ್ಬರ ಮನೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ  ಭಾರತೀಯರು ಒಂದು. ದೇಶಭಕ್ತರು ಭಾರತದ ಭವ್ಯ ಭವಿಷ್ಯಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದು ನಿರೂಪಿಸಬೇಕು ಎಂದರು. 

75 ವರ್ಷ ಆತ್ಮಾವಲೋಕನ ಮತ್ತು ಸಿಂಹಾವಲೋಕನ ಮಾಡಿಕೊಳ್ಳಲು ಮಹತ್ವದ ಘಟ್ಟ. ಇನ್ನು 25 ವರ್ಷವನ್ನು ಅಮೃತ ಕಾಲ ಎಂದು ಪ್ರಧಾನಮಂತ್ರಿಗಳು ಕರೆದಿದ್ದಾರೆ. ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ, ಸಂಪದ್ಭರಿತವಾಗಿಸಿ, ಭಾರತ್ ವಿಶ್ವಮಾನ್ಯವಾಗುವ ರೀತಿಯಲ್ಲಿ ಮಾಡುವ ಸಂಕಲ್ಪ ನಮ್ಮದು. ಅದೇ ರೀತಿ ಆಗಸ್ಟ್ 15 ರಂದು ಕೂಡ ವಿಜ್ರೃಂಭಣೆ 
ಯಿಂದ ಆಚರಣೆ ಮಾಡಲಾಗುವುದು  ಎಂದರು
[13/08, 6:49 PM] Gurulingswami. Holimatha. Vv. Cm: *ಹರ್ ಘರ್ ತಿರಂಗಾ  ಅಭಿಯಾನ*: 
*ಭಾರತೀಯರು ಒಂದು ಎಂಬ ಸಂದೇಶ ಸಾರಬೇಕು*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಆಗಸ್ಟ್ 13; ಭಾರತೀಯರು ಒಂದು ಎಂಬ ಸಂದೇಶ ಸಾರುವುದು ಹರ್ ಘರ್ ತಿರಂಗಾ  ಅಭಿಯಾನದ ಉದ್ದೇಶ. ಎಲ್ಲರೂ ಒಂದಾಗಿ, ಜಾತಿ ಮತ ಪಂಥ ಎಂಬ ಬೇಧವಿಲ್ಲದೆ ಸ್ವಾತಂತ್ರೋತ್ಸವವನ್ನು  ಆಚರಿಸಬೇಕು   ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದರು. 

ಹರ್ ಘರ್ ತಿರಂಗಾ ಅಭಿಯಾನ ಇಂದಿನಿಂದ ಪ್ರಾರಂಭವಾಗುತ್ತಿದೆ.  ಹರ್ ಘರ್ ತಿರಂಗಾ ಮತ್ತು 75 ನೇ ಸ್ವಾತಂತ್ರೋತ್ಸವದ ಆಚರಣೆ ಈಗಾಗಲೇ ಪ್ರಾರಂಭವಾಗಿದೆ.ಪ್ರತಿ ಊರಿನಲ್ಲೂ ಕೂಡ ಜಿಲ್ಲೆಗಳಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಧ್ವಜವನ್ನು ಹಿಡಿದು  ಮೆರವಣಿಗೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ, ಉತ್ಸಾಹವಿದೆ. ಇಂದಿನಿಂದ15 ರವರೆಗೆ ಪ್ರತಿ ಮನೆಯಲ್ಲಿ ಧ್ವಜ ಹಾರಾಡಬೇಕು ಎನ್ನುವುದು ನಮ್ಮ ಆಶಯ.  ರಾಜ್ಯ ಸರ್ಕಾರ 1ಕೋಟಿ 8 ಲಕ್ಷ ಧ್ವಜಗಳನ್ನು ವಿತರಣೆ ಮಾಡಿದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿ 400 ರಿಂದ 500 ಧ್ವಜ ವಿತರಿಸಲಾಗಿದೆ.  ವಿವಿಧ ಸಂಘ ಸಂಸ್ಥೆಗಳೂ ಧ್ವಜ ವಿತರಣೆ ಮಾಡಿದ್ದು,  1 ಕೋಟಿ 20 ಲಕ್ಷ  ಧ್ವಜ ಕರ್ನಾಟಕದಲ್ಲಿ ವಿತರಣೆಯಾಗಿದೆ. ಪ್ರತಿಯೊಬ್ಬರ ಮನೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ  ಭಾರತೀಯರು ಒಂದು. ದೇಶಭಕ್ತರು ಭಾರತದ ಭವ್ಯ ಭವಿಷ್ಯಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದು ನಿರೂಪಿಸಬೇಕು ಎಂದರು. 

75 ವರ್ಷ ಆತ್ಮಾವಲೋಕನ ಮತ್ತು ಸಿಂಹಾವಲೋಕನ ಮಾಡಿಕೊಳ್ಳಲು ಮಹತ್ವದ ಘಟ್ಟ. ಇನ್ನು 25 ವರ್ಷವನ್ನು ಅಮೃತ ಕಾಲ ಎಂದು ಪ್ರಧಾನಮಂತ್ರಿಗಳು ಕರೆದಿದ್ದಾರೆ. ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ, ಸಂಪದ್ಭರಿತವಾಗಿಸಿ, ಭಾರತ್ ವಿಶ್ವಮಾನ್ಯವಾಗುವ ರೀತಿಯಲ್ಲಿ ಮಾಡುವ ಸಂಕಲ್ಪ ನಮ್ಮದು. ಅದೇ ರೀತಿ ಆಗಸ್ಟ್ 15 ರಂದು ಕೂಡ ವಿಜ್ರೃಂಭಣೆ 
ಯಿಂದ ಆಚರಣೆ ಮಾಡಲಾಗುವುದು  ಎಂದರು
[13/08, 7:52 PM] Gurulingswami. Holimatha. Vv. Cm: *ಆಗಸ್ಟ್  28 ಕ್ಕೆ ದೊಡ್ಡಬಳ್ಳಾಪುರ ದಲ್ಲಿ ಜನೋತ್ಸವ* *ಸಿಎಂ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಆಗಸ್ಟ್ 13: ಆಗಸ್ಟ್ 28 ಕ್ಕೆ ದೊಡ್ಡಬಳ್ಳಾಪುರ ದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

 
ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದರು. 

ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ  ನಡೆಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು

ಜುಲೈ 28 ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು. 10 - 15 ದಿನಗಳಿಂದ ಈ ಭಾಗದ  ಜನರ ಒತ್ತಾಯ ಹೆಚ್ಚಾಗಿದೆ. ಬೇರೆ ಕಡೆ ಸಮಾವೇಶ ಮಾಡಲು ಜನ ಒಪ್ಪಲಿಲ್ಲ. ನಾವು ಸಾಕಷ್ಟು ತಯಾರಿ ನಡೆಸಿದ್ದು ದೊಡ್ಡಬಳ್ಳಾಪುರ ದಿಂದಲೇ  ಜನೋತ್ಸವ ಪ್ರಾರಂಭವಾಗಬೇಕು. ಮೊದಲ ಹೆಜ್ಜೆ ಇಟ್ಟಿದ್ದೇವೆ. ಇಲ್ಲಿಂದಲೇ ಜನೋತ್ಸವ ಆರಂಭ ಆಗಲಿ ಆಗಲಿ ಎಂದು ನಮಗಿಂತಲೂ ಹೆಚ್ಚಿನ ಧೃಢ ನಿರ್ಧಾರ ಅವರದಾಗಿದೆ. ಅವರ ಉತ್ಸಾಹ ನಿರ್ಣಯಕ್ಕೆ ತಲೆಬಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು. 


ಜನೋತ್ಸವದ ಬಗ್ಗೆ ಇಂದು ವರಿಷ್ಠ ರೊಂದಿಗೆ ಮಾತನಾಡಿ ತಿಳಿಸಲಾಗುವುದು ಎಂದರು.
[13/08, 8:01 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಹಾಗೂ ಅವರ ಪತ್ನಿ ಚನ್ನಮ್ಮ ದಂಪತಿಗಳನ್ನು ಇಂದು ಪುಣೆಯಲ್ಲಿ ಆಯೋಜಿಸಲಾಗಿದ್ದ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಇತರರು ಉಪಸ್ಥಿತರಿದ್ದರು.
[13/08, 10:50 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಅಖಿಲ ಭಾರತ ಬ್ರಾಹ್ಮಣ ಮಹಾಸಂಘ ಸ್ವತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪುಸ್ತಕದಲ್ಲಿ ತುಲಾಭಾರ ಮಾಡುವ ಮೂಲಕ ಬ್ರಾಹ್ಮಣ ಮಹಾಸಂಘ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ , ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ  ಮತ್ತು ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post