[28/08, 8:47 AM] Pandit Venkatesh. Astrologer. Kannada: ಆಧ್ಯಾತ್ಮಿಕ ಶಬ್ದಗಳ ಅರ್ಥ ವಿವರಣೆಸೌಮ್ಯ ಗ್ರಹಗಳ ಫಲಾಫಲ
ತ್ರಿಗುಣಗಳು: ಹಿ೦ದೂ ಸ೦ಕೃತಿಯಲ್ಲಿ ಬರುವ ಮೊದಲ ಶಬ್ದ ತ್ರಿಗುಣ, ನಿರ್ಗುಣ ಇತ್ಯಾದಿ. ಎ.ಎಲ್.ಬಾಶಮ್ ಮೊದಲಾದ ಇತಿಹಾಸಜ್ಞರು ಹೇಳುವ೦ತೆ ಹಿ೦ದೂ ಸ೦ಸ್ಕ್ರತಿ ಕ್ರಿ.ಪೂ. 3ಕ್ಕೂ ಹೆಚ್ಚು ಸಹಸ್ರ ವರುಷಗಳಲ್ಲಿ ಸಿ೦ಧೂ ನದಿಯ ತೀರದಲ್ಲಿ ಬೆಳೆದು ಬ೦ದ ಸ೦ಕೃತಿ. ವೇದ ಈ ಒಟ್ಟಾರೆ ಕಾಲದಲ್ಲಿ ಬಹುಜನರ ಅಥವ ಸಮಾಜದ ಅನುಭದ ಸಾರ. ಎಲ್ಲ ವಸ್ತು ಅಥವ ಪ್ರಕೃತಿ ತ್ರಿಗುಣಗಳಿ೦ದಾಗಿದೆ ಎ೦ಬುದು ಇವರ ನ೦ಬಿಕೆ.
ತ್ರಿಗುಣಗಳು:
1. ಸತ್ವ
2. ರಜೋ
3. ತಮೋ ಗುಣಗಳು.
ಇದನ್ನು ಅವರು ಯಾವರೀತಿ ಕಲ್ಪಿಸಿ ಕೊ೦ಡರು ಎ೦ದು ನಾವು ಚಿ೦ತಿಸಿದರೆ
1. ಸತ್ವಗುಣ: ಧಾರ್ಮಿಕತೆ,( ಮಾನವಧರ್ಮ) ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ( ಅರಿಷಡ್ವರ್ಗಗಳು) ರಹಿತವಾಗಿರುವುದು, ಶುದ್ಧತೆ, ಸಮತೋಲನ.
2. ರಜೋಗುಣ: ತು೦ಬಾಚಟುವಟಿಕೆ, ಶುದ್ಧತೆ, ಮೇಲೆ ಹೇಳಿದ ಅರಿಷಡ್ವರ್ಗ ಗಳಿ೦ದೊಡಗೂಡಿ ಇರುವುದು. ಸಮತೋಲನ.
3. ತಮೋಗುಣ : ಆಲಸ್ಯ, ಕತ್ತಲು, ಮೂರ್ಖತನ, ಜಡತ್ವ. ( ಅರಿಷಡ್ವರ್ಗ ಸಹಿತವಾಗಿರುವುದು)
ಇದನ್ನೇ ಆಧ್ಯಾತ್ಮಿಕ ಔನ್ನತ್ಯ ಸಾಧನೆಗಾಗಿ ಚಿ೦ತಿಸುವಾಗ ಸತ್ಯ, ಅಹಿ೦ಸೆ, ಅಪರಿಗ್ರಹ ,ಪಾಲನೆ ಸತ್ವಗುಣ ಎದರು. ಸತ್ಯ ಎ೦ದರೆ ಸತ್ಯವನ್ನೇ ನುಡಿಯುವುದು, ಅದರ೦ತೆ ನಡೆಯುವುದು, ಅದರ೦ತೆ ಚಿ೦ತಿಸುವುದು( ಕಾಯಾ, ವಾಚಾ, ಮನಸಾ) ಅದೇರೀತಿ ಅಹಿ೦ಸೆ ( ಕಾಯಾ, ವಾಚಾ, ಮನಸಾ ಪಾಲಿಸುವುದು, ಕೊಲೆ ಒ೦ದೇ ಹಿ೦ಸೆ ಅಲ್ಲ.) ಅಪರಿಗ್ರಹ ಎ೦ದರೆ ಬೇರೆಯವರ ವಸ್ತು ವನ್ನು ಕಾಯಾ, ವಾಚಾ, ಮನಸಾ ಬಯಸದೇ ಇರುವುದು. ಅ೦ದಾಗ ನಮಗೆ ಜೀವಿಸಲು ಬೇಕಾಗುವಷ್ಟೇ ವಸ್ತು ವನ್ನು ( ಹೊಟ್ಟೆ, ಬಟ್ಟೆ, ಸೂರಿನ ವಿಚಾರದಲ್ಲಿ) ಉಪಯೋಗಿಸುವುದು.
ಇದನ್ನು ವಿವರಿಸಲು ಅವರು ಚತುರ್ವಿಧ ಪುರುಷಾರ್ಥ ವನ್ನು ರೂಪಿಸಿದರು. ಅ೦ದರೆ ಧರ್ಮ, ಅರ್ಥ, ಕಾಮ, ಮೋಕ್ಷ. ಅ೦ದರೆ ಮಾನವನು ತನ್ನ ಜೀವನದಲ್ಲಿ ಪಾಲಿಸಬೇಕಾದ 4 ಕರ್ತವ್ಯಗಳು. ಮತ್ತು ಅದನ್ನು ನಿರ್ವಹಿಸೇಕಾದ ಮಾರ್ಗ, ಅಥವ ಅನುಸರಿಸಬೇಕಾದ ನಿಯಮ.
ಧರ್ಮ: ಇಲ್ಲಿ ಧರ್ಮ ಅ೦ದರೆ ಮನುಷ್ಯ ಧರ್ಮ. ಅದಕ್ಕೇ ಮನು ಮಹರ್ಷಿ ಹೇಳುತ್ತಾರೆ, “ ಅಹಿ೦ಸಾ ಸತ್ಯಮಸ್ತೇಯಂ ಶೌಚ ಮಿ೦ದ್ರಿಯ ನಿಗ್ರಹಂ| ಏತಂ ಸಾಮಾಸಿಕಂ ಧರ್ಮ ಚಾತುರ್ವರ್ಣ್ಯೇ ಬ್ರವೀನ್ಮನುಃ|| ಅ೦ದರೆ ಸತ್ಯ, ಅಹಿ೦ಸೆ, ಅಪರಿಗ್ರಹ( ಇದನ್ನು ಆಸ್ತೇಯ ಎ೦ದೂ ಅನ್ನುತ್ತಾರೆ. ಅ೦ದರೆ ಬೇರೆಯವರ ವಸ್ತುವಿಗೆ ಆಸೆಪಡದಿರುವುದು) ವನ್ನು ಸಾಧ್ಯವಿದ್ದಷ್ಟು ಪಾಲಿಸುವುದು. ಶುಚಿತ್ವ ( ಕಾಯಾ, ವಾಚಾ, ಮನಸಾ ) ಮತ್ತು ಇ೦ದ್ರಿಯ ನಿಗ್ರಹ ( ಸ೦ಯಮ) ಪಾಲಿಸುವುದು ಧರ್ಮ. ಇದು ಎಲ್ಲ ವರ್ಣದವರಿಗೂ ಅನ್ವಯ. ಇಲ್ಲಿ ಧರ್ಮಕ್ಕೂ, ಸತ್ವಗುಣಕ್ಕೂ ಇರುವ ವ್ಯತ್ಯಾಸ ವೆ೦ದರೆ, ಸತ್ವಗುಣ ಸಾಧ್ಯಾಸಾಧ್ಯತೆಯ ಬಗ್ಗೆ ಚಿ೦ತಿಸದೇ ದೇವರ ಮೇಲೆ ಭಾರಹಾಕಿ ಪಾಲಿಸು ಅನ್ನುತ್ತದೆ. ಧರ್ಮ ನಿನ್ನಿ೦ದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಾಮಾಣಿಕ ವಾಗಿ ಪಾಲಿಸು ಅನ್ನುತ್ತದೆ.
ಸತ್ಯವನ್ನೂ ಕೂಡ ಮೂರು ವಿಧವಾಗಿ ವಿ೦ಗಡಿಸಿದ್ದಾರೆ.
1. ವ್ಯಾವಹಾರಿಕ ಸತ್ಯ( ಕಾಲಾನುಕಾಲಕ್ಕೆ ಬದಲಾಗ ಬಹುದಾದದ್ದು, ಆಯಾ ಕಾಲದಲ್ಲಿ ಎಲ್ಲರೂ ಸತ್ಯ ಎ೦ದು ನ೦ಬಿರುವ೦ಥದ್ದು)
2. ಪ್ರಾತಿಭಾಷಿಕ( ಅನುಭವಕ್ಕೆ ಸಿಗುವ, ಇ೦ದು ನಾವು ವೈಜ್ಞಾನಿಕ ಎ೦ದು ತಿಳಿಯುವ) ಸತ್ಯ,
3. ಪಾರಮಾರ್ಥಿಕ( ಆಧ್ಯಾತ್ಮಿಕ ಉನ್ನತಿ ಸಾಧಿಸಿದಾಗ ಮಾತ್ರ ಗೋಚರಿಸುವ ಅಥವ ಸಾಮಾನ್ಯ ಇ೦ದ್ರಿಯಗಳಿಗೆ ನಿಲುಕದ) ಸತ್ಯ.
ಅರ್ಥ: ಅರ್ಥ ಅ೦ದರೆ ಸಾಮಾನ್ಯ ವಾಗಿ ಸ೦ಪತ್ತು ಎ೦ದು ವ್ಯಾಖ್ಯಾನಿಸುತ್ತೇವೆ. ಸ೦ಪತ್ತು ಎಲ್ಲರಿಗೂ ಬೇಕು. ಇದಿಲ್ಲದೇ ಜೀವನ ಅಸಾಧ್ಯ. ಇದು ರಜೋಗುಣ ದ್ಯೋತಕ. ಅ೦ದರೆ ಮನುಷ್ಯ ಸದಾ ಚಟುವಟಿಕೆ ಇ೦ದ ಇರಬೇಕು. ತನ್ನಋಣಗಳನ್ನು (ಮಾತೃ ಋಣ, ಪಿತೃಋಣ, ದೇವ ಋಣ, ಇವನ್ನುಋಣ ತ್ರಯಗಳೆ೦ದರು) ಅರಿತು ಅದನ್ನು ನಿಭಾಯಿಸಬೇಕು. ಆದರೆ ಇದು ವ್ಯಾಹಹಾರಿಕ ಸತ್ಯಕ್ಕೆ ಅನುಗುಣವಾಗಿರಬೇಕು, ಧರ್ಮದ ಚೌಕಟ್ಟಿನೊಳಗೆ ಇರಬೇಕು. ಅರಿಷಡ್ವರ್ಗಕ್ಕೆ ಒಳಗಾದರೂ ಸಮತೋಲನ, ಸ೦ಯಮ ಇರಬೇಕು. ಅ೦ದರೆ ತನ್ನ ತ೦ದೆ, ತಾಯಿಯರನ್ನು, ಸ೦ಸಾರವನ್ನೂ ಸಲಹುವಷ್ಟು ಸ೦ಪತ್ತು ಸ೦ಗ್ರಹಿಸಲು ಶ್ರಮಿಸಬೇಕು. ಆದರೆ ಇದು ಧರ್ಮ, ಮತ್ತು ವ್ಯಾವಹಾರಿಕ ಸತ್ಯಕ್ಕೆ ಅನುಗುಣವಾಗಿರಬೇಕು. ಅತಿಯಾದ ಭೋಗಾಪೇಕ್ಷೆಯಿ೦ದ ಧರ್ಮವನ್ನು, ಸತ್ಯವನ್ನೂ ಮೀರಬಾರದು.
ಕಾಮ: ಐಹಿಕ ಸುಖ, ಭೋಗಗಳನ್ನು ಇಚ್ಛಿಸುವುದು ಕಾಮ. ಮನುಷ್ಯನಿಗೆ ಇವು ಸಹಜ ಮತ್ತು ಅವಶ್ಯಕ. ಆದ್ದರಿ೦ದ ಇದು ತಮೋಗುಣ ದ್ಯೋತಕ. ಯಾಕ೦ದರೆ ಭೋಗದ ವಿಚಾರ ಬ೦ದಾಗ ಕ್ರಿಯಾಶಕ್ತಿ ಕು೦ಠಿತ ಗೊಳ್ಳುತ್ತದೆ, ವಿವೇಚನೆ ಮಾಯವಾಗುತ್ತದೆ. ಅರಿಷಡ್ವರ್ಗಗಳು ವಿಜ್ರ೦ಭಿಸುತ್ತವೆ. ಆದರೆ ಇದನ್ನು ಧರ್ಮ, ಮತ್ತು ವ್ಯಾವಹಾರಿಕ ಸತ್ಯ ದ೦ತೆ, ಸ೦ಯಮದಿ೦ದ ಇಚ್ಛಿಸಿದಾಗ ಅದು ಪುರುಷಾರ್ಥ ವೆನಿಸಿ ಕೊಳ್ಳುತ್ತದೆ. ಯಾಕ೦ದರೆ ಕುಲವೃದ್ಧಿಗೆ, ಜೀವಿಸಲು, ಸಕಲ ಸೌಕರ್ಯಗಳು ಬೇಕು, ಆದರೆ ಅದನ್ನು ಧರ್ಮದ ನಿಯಮದ೦ತೆ ವ್ಯಾವಹಾರಿಕ ಸತ್ಯಕ್ಕೊಳಪಟ್ಟು ಆಸೆ ಪಟ್ಟಾಗ ( ಕಾಮಿಸಿದರೆ) ಅದು ತಪ್ಪಲ್ಲ ಎನ್ನುತ್ತಾರೆ. ಅ೦ದರೆ ನನ್ನ ಕುಟು೦ಬದಲ್ಲಿ 10 ಜನರಿದ್ದರೆ ನಾನು ದೊಡ್ಡ ಮನೆಗೆ ಆಸೆಪಟ್ಟರೆ ಅದು ತಪ್ಪಲ್ಲ. ಅಥವ ನನ್ನ ಮನೆಗೆ ಅತಿಥಿ ಅಭ್ಯಾಗತರು ಬರುವ ಸಾಧ್ಯತೆ ಹೆಚ್ಚು, ಆದ್ದರಿ೦ದ ನನಗೆ ದೊಡ್ಡ ಮನೆ ಬೇಕು ಎ೦ದು ಆಸೆ ಪಟ್ಟು ಅದನ್ನು ಧರ್ಮ ಮಾರ್ಗದಿ೦ದ ಸ೦ಪಾದಿಸಿದರೆ ಆಗ ಅದು ಧರ್ಮಾರ್ಥಕಾಮಗಳನ್ನು ಸರಿಯಾದ ರೀತಿ ಪೂರೈಸಿಕೊ೦ಡ೦ತೆ ಎನ್ನುತ್ತಾರೆ.
ಮೋಕ್ಷ: ಮೋಕ್ಷ ಅ೦ದರೆ ಸಾಮಾನ್ಯವಾಗಿ ಮುಕ್ತಿ ಎನ್ನುವ ಅರ್ಥದಲ್ಲಿ ಚಿ೦ತಿಸುತ್ತಾರೆ. ಆದರೆ ಸಾ೦ಖ್ಯ ದರ್ಶನ ಹೇಳುವ೦ತೆ ಎಲ್ಲ ಜೀವಿಗಳು ಮಹತ್ ತತ್ವದಲ್ಲಿ ಒ೦ದಾಗಿ ಚಿರ೦ತನ ಆನ೦ದ ಹೊ೦ದುವುದನ್ನೇ ಗುರಿಯಾಗಿ ಹೊ೦ದಿರುತ್ತವೆ. ಎಲ್ಲರೂ ಬೇರೆ ಕಡೆ ಎಷ್ಟೇ ಸುಖವಾಗಿದ್ದರೂ ತಮ್ಮ ಮನೆಗೆ ಹೋಗಲು ಇಚ್ಛಿಸುತ್ತಾರೆ. ಅದು ಸಹಜ ಆ೦ತರಿಕ ತುಡಿತ. ಅ೦ದರೆ ಇದೇ ಎಲ್ಲ ಜೀವಿಗಳ ಅ೦ತಿಮ ಗುರಿ. ಆದರೆ ನೀವು ಧರ್ಮ, ಅರ್ಥ, ಕಾಮಗಳನ್ನು ಸಾತ್ವಿಕವಾಗಿ ಆಚರಿಸಿದಾಗ ಮಾತ್ರ ಇದು ಸಾಧ್ಯ. ಆದ್ದರಿ೦ದ ಪುರು ಷಾರ್ಥಗಳಲ್ಲಿ ಇದನ್ನು ಕೊನಯೆದಾಗಿ ಇಟ್ಟರು. ಅರ್ಥ, ಕಾಮಗಳನ್ನು ಧರ್ಮದ೦ತೆ ಆಚರಿಸಿ ಮುಕ್ತಿಗಾಗಿ ಪ್ರಯತ್ನಿಸುವುದೇ ಮಾನವನ ಕೊನೆಯ ಗುರಿಯಾಗಬೇಕೆ೦ದು ( ಕರ್ತವ್ಯ ವಾಗಬೇಕೆ೦ದು ) ಹೇಳಿದರು. ಆದ್ದರಿ೦ದ ಇದೂ ಕೂಡ ಸತ್ವಗುಣವನ್ನೇ ಪ್ರತಿಪಾದಿಸುತ್ತದೆ.
ಇನ್ನು ಆಧ್ಯಾತ್ಮದಲ್ಲಿ ಬರುವ ಚಾತುರ್ವರ್ಣಗಳಬಗ್ಗೆ ಚಿ೦ತಿಸೋಣ.
1. ಬ್ರಾಹ್ಮಣ
2. ಕ್ಷತ್ರಿಯ
3. ವೈಶ್ಯ
4. ಶೂದ್ರ.
ಇವನ್ನು ಚಾತುರ್ವರ್ಣ ಎ೦ದರು. ಕೃಷ್ಣ ಗೀತೆಯಲ್ಲಿ “ಚಾತುರ್ವರ್ಣಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ” ಎ೦ದರು. ಅ೦ದರೆ ಚಾತುರ್ವರ್ಣವನ್ನು ಅವರ ಗುಣ ಮತ್ತು ಕರ್ಮ( ಕೆಲಸ) ದ೦ತೆ ನಾನೇ ಸೃಷ್ಟಿಸಿದ್ದೇನೆ. ಹಾಗಾದರೆ ಬ್ರಾಹ್ಮಣ ಯಾರು?
ಬ್ರಾಹ್ಮಣ: ಬ್ರಾಹ್ಮಣ ಎ೦ದರೆ ಪವಿತ್ರವಾದ ಜ್ಞಾನ ಹೊ೦ದಿದವನು ಎ೦ದು ಅರ್ಥ. ಹಿ೦ದುಗಳು ವೇದಗಳನ್ನು ಪವಿತ್ರವಾದವೆ೦ದು ಪರಿಗಣಿಸಿದ್ದರಿ೦ದ ವೇದ ಓದಿದವನನ್ನು, ಅದರ೦ತೆ ಆಚರಣೆ ಉಳ್ಳವನನ್ನು ಬ್ರಾಹ್ಮಣ ಎ೦ದರು. ಆದ್ದರಿ೦ದ ಸತ್ವಗುಣ ಪ್ರಧಾನವಾಗಿರುವ, ಜ್ಞಾನಿಯನ್ನು ಬ್ರಾಹ್ಮಣ ಎ೦ದು ಪರಿಗಣಿಸ ಬೇಕಾಗುತ್ತದೆ. ಯಾಕ೦ದರೆ ಈ ವಿ೦ಗಡಣೆ ಗುಣ ಮತ್ತು ಕರ್ಮಕ್ಕೆ ಅನುಗುಣವಾದದ್ದು. ಇಲ್ಲಿ ನಾವು ಸಮಾಜ ಬೆಳೆದ೦ತೆ ಎಲ್ಲರೂ ಎಲ್ಲ ಕರ್ಮಗಳನ್ನೂ( ಜೀವನಕ್ಕೆ ಅವಶ್ಯವಿರುವ ) ಮಾಡುವುದು ಅಸಾಧ್ಯವಾದಾಗ ಸಾಮಾಜಿಕ ಕರ್ಮಗಳನ್ನು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಹ೦ಚಲಾಯಿತು ಎ೦ಬುದನ್ನು ನೆನಪಿಡ ಬೇಕು.
ಕ್ಷತ್ರಿಯ: ದೈಹಿಕ ವಾಗಿ ಬಲಾಡ್ಯ ನಾದವ ಕ್ಷತ್ರಿಯ. ಆದ್ದರಿ೦ದ ಅವನಿಗೆ ರಕ್ಷಣೆಯ ಹೊಣೆ ವಹಿಸಲಾಯಿತು. ಅವನು ಸಾತ್ವಿಕ ನಾಗಿದ್ದರೆ ಆ ಕಾರ್ಯ ನಿರ್ವಹಿಸಲಾರ. ಆದ್ದರಿ೦ದ ಅವನು ರಜೋಗುಣ ಪ್ರಧಾನವಾಗಿ ಜೀವಿಸಲು ಅನುಮತಿಸಲಾಯಿತು. ಆದರೆ ಜ್ಞಾನ ಸ೦ಪಾದನೆಗೂ ಅವನಿಗೆ ಅನುಮತಿ ಇತ್ತು. ಸಾಮಾಜದ ರಕ್ಷಣೆಯೇ ಅವನ ಕರ್ತವ್ಯ ವಾಯಿತು. ಆದರೆ ಅವನಿಗೆ ವಯಸ್ಸಾದಾಗ ಸಾತ್ವಿಕವಾಗಿ ಜೀವಿಸಿ ಮೋಕ್ಷ ಪಡೆಯಲು ಉಪದೇಶಿಸಲಾಯಿತು.( ನಾಲ್ಕು ಆಶ್ರಮಗಳನ್ನು ವಿಧಿಸಲಾಯಿತು)
ವೈಶ್ಯ: ವ್ಯಾಪಾರಿ ಎ೦ದು ಅರ್ಥಿಸಲಾಗುತ್ತದೆ. ಸಮಾಜ ಬೆಳೆದ೦ತೆ ಎಲ್ಲರೂ ಎಲ್ಲವನ್ನೂ ಹೊ೦ದಲು, ಅವನ್ನು ಅವರೇ ಬೆಳೆಯಲು ಸ೦ಗ್ರಹಿಸಲು ಸಾಧ್ಯವಿಲ್ಲದೇ ಹೋದಾಗ, ಅವರವರು ಬೆಳೆದ, ಹೊ೦ದಿದ ವಸ್ತುಗಳ ವಿನಿಮಯ ಅತ್ಯಾವಶ್ಯಕ ವಾಯಿತು. ಈ ವಿನಿಮಯ ದ ಹೊಣೆಗಾರಿಕೆ ವೈಶ್ಯರದಾಯಿತು. ಇವರು ಸತ್ವ, ರಜೋಗುಣಾತ್ಮಕರಾಗಿ ಜ್ಞಾನಾರ್ಜನೆ ಮಾಡಲು, ಆಚರಿಸಲು, ಜೀವಿಸಲು ಅನುಮತಿಸಲಾಯಿತು. ಇವರಿಗೂ ನಾಲ್ಕು ಆಶ್ರಮಗಳನ್ನು ವಿಧಿಸಲಾಗಿದೆ)
ಶೂದ್ರ: ಬೆಳೆಯನ್ನು ಬೆಳೆಯಲು, ಹೆಚ್ಚಿನ ಶ್ರಮದ ಕಾರ್ಯ ನಿರ್ವಹಿಸಲು, ದೈಹಿಕ ಸಾಮರ್ಥ್ಯ ಹೊ೦ದಿದ ಜನರ ಅವಶ್ಯಕತೆ ಉ೦ಟಾದಾಗ ನೈಸರ್ಗಿಕವಾಗಿ ಆ ಸಾಮರ್ಥ್ಯ ಹೊ೦ದಿದ ಜನರಿಗೆ ಈ ಕಾರ್ಯ ವಹಿಸಲಾಯಿತು. ಆಹಾರ ಧಾನ್ಯ, ಮಾ೦ಸ ಗಳ ಸ೦ಗ್ರಹಣೆ, ಅವುಗಳ ಬೆಳೆಯುವಿಕೆ ಇವರ ಕರ್ತವ್ಯ ವಾದಾಗ ಇವರು ಸತ್ವಗುಣ, ಅಥವ ರಜೋಗುಣ ಪ್ರಧಾನರಾದರೆ ಅಸಾಧ್ಯ ವಾದ್ದರಿ೦ದ, ಅಥವ ಸಮಯಾವಕಾಶ ಇಲ್ಲದಾದಾಗ, ಇವರಿಗೆ ತಮೋಗುಣ ಪ್ರಧಾನವಾಗಿ ಜೀವಿಸಲು ಅನುಮತಿಸಲಾಯಿತು. ಆದರೆ ಧರ್ಮ ಇವರಿಗೂ ಅನ್ವಯಿತುತ್ತದೆ. ಇವರಿಗೆ ( ನಾಲ್ಕು ಆಶ್ರಮಗಳನ್ನು ವಿಧಿಸಲಾಗಿಲ್ಲ)
ನಾಲ್ಕು ಆಶ್ರಮಗಳು:
1. ಬ್ರಹ್ಮಚರ್ಯ (ವಿದ್ಯಾರ್ಥಿಯಾಗಿರುವಾಗ ಪಾಲಿಸಬೇಕಾದ ಧರ್ಮ)
2. ಗ್ರಹಸ್ಥ ( ಸ೦ಸಾರಿಯಾಗಿ ಪುರುಷಾರ್ಥ ಪಾಲಿಸುವುದು)
3. ವಾನಪ್ರಸ್ಥ ( ವಯಸ್ಸಾದಾಗ ಸ೦ಸಾರದಿ೦ದ ವಿಮುಖನಾಗಿ ಸಮಾಜದಿ೦ದ ದೂರ ವಾಸಿಸುವುದು)
4. ಸನ್ಯಾಸ. ( ಸನ್ಯಾಸ ಧರ್ಮ ಸ್ವೀಕರಿಸಿ ಮುಕ್ತಿಗಾಗಿ ಶ್ರಮಿಸುವುದು)
ಈ ಸಾಮಾಜಿಕ ಶ್ರಮ ವಿ೦ಗಡನೆ ತಾತ್ವಿಕವಾಗಿ ಶ್ರೇಷ್ಠ ಎನಿಸಿದರೂ ವ್ಯಾವಹಾರಿಕವಾಗಿ ಹಲವಾರು ನ್ಯೂನತೆ ಹೊ೦ದಿದೆ. ಯಾಕ೦ದರೆ ರಾಜಸಿಕ ವಾಗಿ ಜೀವಿಸಲು ಅನುಮತಿಸಿದಾಗ ಸ೦ಪತ್ತಿನ ಶೇಖರಣೆ, ಭೋಗ ಜೀವನ, ಅಧಿಕಾರ ಮದಕ್ಕೆ ಕಾರಣವಾ ಗುವುದು ಸಹಜ. ಅದೇ ಮು೦ದೆ ನಾವು ನೋಡುವ ಜಾತಿ ಪದ್ಧತಿಗೂ, ಸಾಮಾಜಿಕ ಪಿಡುಗಾಗಿದ್ದೂ ಇತಿಹಾಸ.
ಇಲ್ಲಿ ನಾವು ನೆನಪಿಡಬೇಕಾದದ್ದು ರಾಶಿಗಳ ಗುಣ ಧರ್ಮದ ವಿಚಾರ ಬ೦ದಾಗ ತ್ರಿಗುಣಗಳು, ಚತುರ್ವಿಧ ಪುರುಷಾರ್ಥಗಳು, ಚಾತುರ್ವರ್ಣಗಳು ಒಟ್ಟಾರೆಯಾಗಿ ಬೀರುವ ಪರಿಣಾಮವನ್ನು ಊಹಿಸಿ ನಿರ್ಣಯಿಸಬೇಕಾಗುತ್ತದೆ.
[28/08, 8:52 AM] Pandit Venkatesh. Astrologer. Kannada:
ಸೌಮ್ಯ ಗ್ರಹಗಳ ಫಲಾಫಲ
ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಒಂಬತ್ತು ಗ್ರಹಗಳು ತತ್ ಸಂಬಂಧಿತವಾದ ಯೋಗಗಳು ಸದಾ ಚಿಂತನೆಗೆ, ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡುತ್ತವೆ. ಹೀಗೆ ಉಲ್ಲೇಖಿಸಲ್ಪಟ್ಟ ಗ್ರಹಗಳಲ್ಲಿ ಕೆಲವು ಪಾಪ ಗ್ರಹಗಳಾಗಿದ್ದರೆ ಮತ್ತೆ ಕೆಲವು ಸೌಮ್ಯ ಸ್ವಭಾವದವು. ಚಂದ್ರ, ಗುರು, ಶುಕ್ರ, ಬುಧ ಗ್ರಹಗಳು ಸೌಮ್ಯ ಗ್ರಹಗಳ ಸಾಲಿಗೆ ಸೇರುತ್ತವೆ. ಇನ್ನುಳಿದಂತೆ ರವಿ, ಕುಜ, ಶನಿ, ರಾಹು ಹಾಗೂ ಕೇತು ಗ್ರಹಗಳನ್ನು ಪಾಪ ಗ್ರಹಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಸೌಮ್ಯಗ್ರಹಗಳ ದೃಷ್ಟಿಯಿಂದ ಉತ್ತಮ ಫಲಗಳು ಲಭಿಸುತ್ತವೆ. ಉದಾಹರಣೆಗೆ ಮಂಗಳ-ಚಂದ್ರ ಯುತಿಯಿಂದ ಲಕ್ಷ್ಮಿಯೋಗವು, ಗುರು-ಚಂದ್ರ ಯುತಿಯಿಂದ ಗಜಕೇಸರಿ ಯೋಗವು, ರವಿ-ಬುಧ ಯುತಿಯಿಂದ ಬುಧಾದಿತ್ಯ ಯೋಗವು ಉಂಟಾಗುತ್ತದೆ. ಈ ಯೋಗಗಳಿದ್ದರೆ ಜೀವನ ಪರ್ಯಂತ ಶುಭ ಫಲ ಉಂಟಾಗುತ್ತದೆ.
ಗುರುವಿನೊಡನೆ ರಾಹು, ಕೇತು:
ಗುರು ಸಂಪತ್ತು ಹಾಗೂ ಜ್ಞಾನಕಾರಕನಾಗಿದ್ದಾನೆ. ಗುರು ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಇರುತ್ತಾನೆ. ಪುರಾಣ ಕಥಾನಕಗಳ ಪ್ರಕಾರ ಬೃಹಸ್ಪತಿ ಎಂದೇ ಕರೆಯಿಸಿಕೊಳ್ಳುವ ಗುರು ಅಂಗೀರಸನ ಪುತ್ರ. ಜಾತಕನ ಜನ್ಮರಾಶಿಯಿಂದ ಗುರು 2, 5,7, 9 ಹಾಗೂ 11ರಲ್ಲಿ ಇದ್ದರೆ ಗುರು ಬಲ ಇರುತ್ತದೆ. ಧನಸ್ಸು ಮತ್ತು ಮೀನ ರಾಶಿ ಗುರುವಿನ ಸ್ವಕ್ಷೇತ್ರವಾಗಿದೆ. ಕಟಕ ಉಚ್ಛಸ್ಥಾನವಾಗಿದ್ದರೆ, ಮಕರ ನೀಚಸ್ಥಾನವಾಗಿದೆ.
ಗುರು ಗ್ರಹದ ಕಾರಣ ಶೈಕ್ಷಣಿಕ ಪ್ರಗತಿ, ವ್ಯಾವಹಾರಿಕ ಸಂಪತ್ತು, ಆರೋಗ್ಯ ಭಾಗ್ಯ ಉಂಟಾಗುತ್ತದೆ. ಗುರು ನೀಚನಾಗಿದ್ದರೆ ಮೇಲಿನ ಕ್ಷೇತ್ರಗಳಲ್ಲಿ ತೊಂದರೆ ಉಂಟಾಗುತ್ತದೆ. ಗುರುವಿನೊಡನೆ ರಾಹು ಅಥವಾ ಕೇತು ಇದ್ದರೆ ವಿಪರೀತ ತೊಂದರೆಗಳು ಉಂಟಾಗುತ್ತವೆ.
ರಾಹು ಮತ್ತು ಕೇತು ನಕಾರಾತ್ಮಕ ಗುಣಗಳ ಗ್ರಹವಾಗಿರುವುದರಿಂದ ಗುರು-ರಾಹು ಅಥವಾ ಗುರು-ಕೇತು ಯುತಿಯು ಚಾಂಡಾಲ ಯೋಗವನ್ನು ಉಂಟು ಮಾಡುತ್ತದೆ. ಅದರಿಂದ ಅಶುಭ ಫಲಗಳು ಉಂಟಾಗುತ್ತವೆ.
ಗುರುವಿನೊಡನೆ ಕೇತು ಯುತಿ ಇದ್ದರೆ ಜಾತಕನು ದೇವತಾ ಉಪಾಸಕನಾಗಿರುತ್ತಾನೆ. ಆದರೆ ಯಾವಾಗಲೂ ಸಂದೇಹ ದೃಷ್ಟಿ ಉಳ್ಳವನಾಗಿರುತ್ತಾನೆ. ಜಾತಕದಲ್ಲಿ ಗುರು ಹಾಗೂ ಕೇತು ಲಗ್ನದಿಂದ ಒಂಬತ್ತನೇ ಸ್ಥಾನದಲ್ಲಿ ಇದ್ದರೆ ಆಧ್ಯಾತ್ಮಿಕದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾನೆ. ರಾಹು, ಗುರು ಧನುಸ್ಸು ರಾಶಿಯಲ್ಲಿದ್ದರೆ ಗುರು ಚಾಂಡಾಲ ಯೋಗ ಉಂಟಾಗುತ್ತದೆ. ಗುರು ಮಹಾದೆಶೆಯಲ್ಲಿ ರಾಹು ಅಥವಾ ಕೇತುಗಳ ಅಂತರ್ದಶೆ ಬಂದಾಗ ಅನಿಷ್ಟ ಫಲಗಳು ಉಂಟಾಗುತ್ತವೆ. ಕೈ - ಕಾಲಿಗೆ ಸಂಬಂಧ ಪಟ್ಟ ತೊಂದರೆಗಳು ಬರಬಹುದು. ಲಗ್ನದಿಂದ ಐದನೇ ಮನೆಯಲ್ಲಿ ಗುರು ರಾಹು ಇದ್ದರೆ ಸಂತಾನ ಭಾಗ್ಯ ಉಂಟಾಗುತ್ತದೆ. ಲಗ್ನದಿಂದ ಏಳನೇ ಮನೆಯಲ್ಲಿ ಗುರು ಕೇತು ಇದ್ದರೆ ವಿವಾಹ ತಡ ಆಗಬಹುದು. ವಿವಾಹದ ಸಂದರ್ಭದಲ್ಲಿ ರಾಹು ಅಥವಾ ಕೇತು ಶಾಂತಿ, ಜಪ ಹೋಮಗಳನ್ನು ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ.
Post a Comment