ಇಂದು, cm,

[12/08, 1:59 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತೀಯ ದಂಡ ಸಂಹಿತೆ, ದಂಡ ಪ್ರಕ್ರಿಯ ಸಂಹಿತೆ, ಸಾಕ್ಷ ಅಧಿನಿಯಮ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಜೆ ಸಿ ಮಾಧುಸ್ವಾಮಿ, ಅರಗ ಜ್ಞಾನೇಂದ್ರ , ಸುನಿಲ್ ಕುಮಾರ್, ಡಾ. ನಾರಾಯಣಗೌಡ ಮತ್ತು ಇತರರು ಉಪಸ್ಥಿತರಿದ್ದರು.
[12/08, 3:02 PM] Gurulingswami. Holimatha. Vv. Cm: ಅಣ್ಣಿಗೇರಿ ನೇಮಕಾತಿ ಆದೇಶ ತಡೆ ಹಿಡಿಯಲಾಗಿದೆ. ಅದಕ್ಕೆ ಸಂಬಂಧಿಸಿದ ಆದೇಶ ಪ್ರತಿ ಇದು..👆
[12/08, 3:36 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
[12/08, 5:03 PM] Gurulingswami. Holimatha. Vv. Cm: *ಸುಗಮ ಸಂಗೀತ ಕ್ಷೇತ್ರಕ್ಕೆ ಶಿವಮೊಗ್ಗ ಸುಬ್ಬಣ್ಣ ಅವರ ಕೊಡುಗೆ ಅಪಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಆಗಸ್ಟ್ 12 :ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು  ಇಂದು   ಖ್ಯಾತ ಗಾಯಕ  ಶಿವಮೊಗ್ಗ ಸುಬ್ಬಣ್ಣ ಅವರ  ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದರು. 

ಶಿವಮೊಗ್ಗ ಸುಬ್ಬಣ್ಣ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಹಾಗೂ ಹಿರಿಯ ಕಲಾವಿದರು.   ಶಿವಮೊಗ್ಗ ಸುಬ್ಬಣ್ಣ ಅವರ ನಿಧನ ದು:ಖ ತಂದಿದೆ. ಅವರ ಸಾಧನೆ ಬಹಳ ದೊಡ್ಡದು. ವಿಶೇಷವಾಗಿ  ಕನ್ನಡದ ಎಲ್ಲಾ ಕವಿಗಳ ಹಾಡುಗಳನ್ನು ಹಾಡಿ, ಅವು ಪ್ರಸಿದ್ಧವಾಗಲು ಕಾರಣೀಭೂತರಾಗಿದ್ದಾರೆ. ಆ ಹಾಡುಗಳಿಗೆ ಜೀವಕಳೆಯನ್ನು ತುಂಬಿದ್ದಾರೆ. ಅವರು ಸದಾ ಲವಲವಿಕೆಯಿಂದ ಇದ್ದವರು. ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ನನ್ನೊಂದಿಗೆ ವಿಶೇಷ ಪ್ರೀತಿಯ ಸಂಬಂಧ ಹೊಂದಿದ್ದರು. ಶಿಶುನಾಳ ಶರೀಫರ ಹಾಡುಗಳನ್ನು ಹಾಡುವ ಮೂಲಕ ನನ್ನ ಮತ್ತು ಸುಬ್ಬಣ್ಣ ಅವರ ಬಾಂಧವ್ಯ ಗಟ್ಟಿಯಾಗಿತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. 

*ಸುಬ್ಬಣ್ಣ ಅವರ ಪರಂಪರೆ ಮುಂದುವರೆಯಬೇಕು*
 ಅವರ ಅಗಲಿಕೆ  ಕರ್ನಾಟಕದ  ಕಲಾಲೋಕಕ್ಕೆ ತುಂಬಲಾರದ ನಷ್ಟ. ಅವರ  ಅನಿರೀಕ್ಷಿತ ಸಾವಿನಿಂದ  ಆಘಾತವಾಗಿದೆ. ಸುಬ್ಬಣ್ಣ ಅವರು ಸಂಗೀತದ ದೊಡ್ಡ ಪರಂಪರೆಯನ್ನು  ಬಿಟ್ಟು ಹೋಗಿದ್ದಾರೆ. ಎಂಥ ಕಷ್ಟಕರವಾದ ಸಂಗೀತವನ್ನೂ ಸರಳ, ಸುಲಭವಾಗಿ ಹಾಡುವ ಕಲೆ ಕರ್ನಾಟಕದ ಎಲ್ಲಾ ಕಲಾವಿದರಿಗೆ ತೋರಿಸಿಕೊಟ್ಟಿದ್ದಾರೆ. ನವ ಕಲಾವಿದರಿಗೆ ಬಿಟ್ಟುಕೊಟ್ಟು ಹೋಗಿರುವ ಪರಂಪರೆ ಮುಂದುವರೆಯಬೇಕು ಎನ್ನುವುದು ನಮ್ಮ ಆಸೆ. ಇದನ್ನು ಮುಂದುವರೆಸಲು ಅವರ ಸ್ಮಾರಕಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದೇನೆ. ಶಿವಮೊಗ್ಗ ಸುಬ್ಬಣ್ಣ ಅವರ ಹಾಡುಗಾರಿಕೆ, ಸಂಗೀತದಲ್ಲಿ ನಿರಂತರವಾಗಿ ಜೀವಿಸುತ್ತಾರೆ. ಅದು ನಮ್ಮ ಕರ್ನಾಟಕದ ನವ ಪೀಳಿಗೆಗೆ ದೊಡ್ಡ ಪ್ರೇರಣಾ ಶಕ್ತಿಯಾಗಿ ಅವರು  ಉಳಿಯಲಿದ್ದಾರೆ. ದು:ಖ ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ದೇವರು ನೀಡಲಿ ಎಂದು ಮುಖ್ಯಮಂತ್ರಿಗಳು  ತಿಳಿಸಿದರು.
[12/08, 5:03 PM] Gurulingswami. Holimatha. Vv. Cm: ಕಾನೂನು ಸಂಹಿತೆಗಳ ಕನ್ನಡ ಆವೃತ್ತಿ ಬಿಡುಗಡೆ-

*ಸರಳ ಭಾಷೆಯಲ್ಲಿ ಕಾನೂನು ಆರ್ಥಮಾಡಿಸಲು ಕನ್ನಡ ಆವೃತ್ತಿ ಸಹಕಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಆಗಸ್ಟ್ 12 :

 ಭಾರತದ ಪ್ರಮುಖ ಕಾನೂನು ಸಂಹಿತೆಗಳ ಕನ್ನಡ ಆವೃತ್ತಿಗಳು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಕಾನೂನು ಅರ್ಥಮಾಡಿಸಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು  ಇಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಾಭಾಷಾ  (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದ  ವತಿಯಿಂದ ಆಯೋಜಿಸಿರುವ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ  ಮತ್ತು ಭಾರತ ಸಾಕ್ಷ್ಯ ಅಧಿನಿಯಮಗಳ ದ್ವಿ-ಭಾಷಾ ಕನ್ನಡ ಆವೃತ್ತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯ. ಇದುವರೆಗೂ ಪಾಲಿಸಿಕೊಂಡಿರುವ ಐಪಿಸಿ, ಸಿಆರ್‍ಪಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ  ಬಹುತೇಕ ಕಾನೂನುಗಳು ಆಂಗ್ಲಭಾಷೆಯಲ್ಲಿದೆ. ಈ ಬಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆಗಳನ್ನು ಕನ್ನಡ ಭಾಷೆಯಲ್ಲಿ ತರ್ಜುಮೆ ಮಾಡಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಇದರಿಂದ ಜನಸಾಮಾನ್ಯರಿಗೆ , ಗ್ರಾಮೀಣ ಪ್ರದೇಶದ ಜನರೂ ಈ ಕಾನೂನುಗಳನ್ನು ಅರ್ಥಮಾಡಿಕೊಂಡು, ಅವಶ್ಯಕತೆಯಿದ್ದಾಗ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

*ರಿಯಾಯತಿ ದರದಲ್ಲಿ ಕನ್ನಡ ಆವೃತ್ತಿಗಳು ಮಾರಾಟ :*
ಹಲವು ಪ್ರಮುಖ ಕಾನೂನುಗಳ ಜೊತೆಗೆ ಕೃಷ್ಣಾ  ಜಲವಿವಾದ, ಕಾವೇರಿ ಜಲವಿವಾದ ಸೇರಿದಂತೆ ಪ್ರಮುಖ ಅಂತರರಾಜ್ಯ ನ್ಯಾಯಮಂಡಳಿಯ ತೀರ್ಪುಗಳು, ವರದಿಗಳು ಸಹ ಕನ್ನಡದಲ್ಲಿ ಲಭ್ಯವಿದೆ. ಇವುಗಳು ಸರ್ಕಾರದ ಗ್ರಂಥಾಲಯಗಳಲ್ಲಿ ಜನರ ಬಳಕೆಗೆ ಲಭ್ಯವಾಗಬೇಕು. ಪ್ರತಿಯೊಂದು ತಾಲ್ಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗಳಲ್ಲಿಯೂ ಗೃಹ ಇಲಾಖೆ ಒದಗಿಸಬೇಕು. ಇವುಗಳನ್ನು ವೆಬ್‍ಸೈಟ್‍ಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆಗೊಳಿಸಬೇಕು. ಈ ಸಂಹಿತೆಗಳ ಕನ್ನಡ ಆವೃತ್ತಿಗಳನ್ನು ರಿಯಾಯತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
[12/08, 7:10 PM] Gurulingswami. Holimatha. Vv. Cm: ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ

ಸಿಎಂ ಆಗು ಬಸವರಾಜ ಬೊಮ್ಮಾಯಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ

ರೈತರ ಪರವಾಗಿ, ಯುವ ಸಮೂಹದ ಪರವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ

ಅವರೊಬ್ಬ ಕಾಮನ್ ಮ್ಯಾನ್ ಸಿಎಂ  ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ

100% ಬೊಮ್ಮಾಯಿ ನೇತೃತ್ವದಲ್ಲೆ ಮುಂದಿನ ಚುನಾವಣೆ ಎದುರಿಸುತ್ತೇವೆ
 ಚುನಾವಣೆ ಎದುರಿಸಲಿದ್ದೇವೆ

೧೫೦ ಕ್ಷೇತ್ರಗಳಲ್ಲಿ ಗೆದ್ದು ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದೇವೆ

ಕಾಂಗ್ರೆಸ್ ಗೊಂದಲ ಹುಟ್ಟು ಹಾಕುತ್ತಿದೆ

ಸಿಎಂ ಬದಲಾವಣೆ ಎನ್ನುವುದು ಕಾಂಗ್ರೆಸ್ ಷಡ್ಯಂತ್ರ

ಸಿದ್ದರಾಮಯ್ಯ ಡಿಕೆಶಿ ನಡುವೆ ಒಡಕಿದೆ

ಅದನ್ನು ಮುಚ್ಚಿ ಹಾಕಲು ಸಿಎಂ ಬದಲಾವಣೆ ವಿಚಾರ ಹುಟ್ಟು ಹಾಕಿದ್ದಾರೆ

ಕಾಂಗ್ರೆಸ್ ನಾಯಕರೇ ಇಲ್ಲದ ಪಕ್ಷ

ಸಿಎಂ ಬದಲಾವಣೆ ವಿಚಾರದಲ್ಲಿ  ಯಾವುದೇ ಸತ್ಯ ಇಲ್ಲ

Post a Comment

Previous Post Next Post