KPCC, ಇಂದು

[12/08, 10:59 AM] Ravi Gowda. Kpcc. official: *ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ*

*ಬೆಂಗಳೂರು:*

ಸುಗಮ ಸಂಗೀತ ಲೋಕದ ಪ್ರಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

'ತಮ್ಮ ವಿಶಿಷ್ಟ ಕಂಠಸಿರಿಯಿಂದ ಕೇಳುಗರ ಮನಗೆದ್ದಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಗಿದೆ.

ನಾಡಿನ ಪ್ರಖ್ಯಾತ ಕವಿಗಳಾದ ಕುವೆಂಪು, ಬೇಂದ್ರೆ ಮತ್ತಿತರರ ಗೀತೆಗಳಿಗೆ ಸ್ವರವಾಗಿದ್ದವರು ಸುಬ್ಬಣ್ಣ. ಅವರ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು ಸೇರಿದಂತೆ ಎಲ್ಲರಿಗೂ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ' ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
[12/08, 6:42 PM] Ravi Gowda. Kpcc. official: *ಜಂಟಿ ಮಾಧ್ಯಮಗೋಷ್ಠಿಯ ಮುಖ್ಯಾಂಶಗಳು:*

*ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್:* 

ಈ ಐತಿಹಾಸಿಕ ನಡಿಗೆ ದೇಶಕ್ಕೆ ಕೊಡುಗೆಯಾಗಲಿದೆ. ಈಗಾಗಲೇ 62,394 ಮಂದಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ದಿನಕ್ಕೆ 10 ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ನೋಂದಣಿ ಮಾಡಿಕೊಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದೇವೆ. ಅವರಿಗೆ ಕಿಟ್, ರಾಷ್ಟ್ರಧ್ವಜ, ಟೀ ಶರ್ಟ್ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಆ.10ರವರೆಗೆ ನೋಂದಣಿ ಮಾಡಿಕೊಂಡಿದ್ದ 42 ಸಾವಿರ ಜನರ ಪೈಕಿ 32 ಸಾವಿರ ಜನ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಯುವ ಜನರಿಗೆ ಈ ವಿಚಾರ ಮುಟ್ಟಬೇಕು ಎಂಬುದು ನಮ್ಮ ಆಶಯವಾಗಿದ್ದು ನೋಂದಣಿ ಮಾಡಿಕೊಂಡವರ ಪೈಕಿ ಶೇ.75 ರಷ್ಟು ಮಂದಿ ಅವರೇ ಆಗಿದ್ದಾರೆ. 

ವಾಹನ ದಟ್ಟಣೆ ತಡೆಯಲು ಮೆಟ್ರೋ ರೈಲು ಟಿಕೆಟ್ ಖರೀದಿ ಮಾಡಲಾಗಿದೆ. ವಾಪಸ್ ಹೋಗುವ ಟಿಕೆಟ್ ಅನ್ನೂ ಖರೀದಿಸಲಾಗಿದೆ. ಟಿಕೆಟ್ ದರ ವಿನಾಯಿತಿ ನೀಡುವಂತೆ ಮೆಟ್ರೋ ರೈಲು ಆಡಳಿತ ಮಂಡಳಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. 

ನಮಗೆ ಇಲ್ಲಿ ರಾಜಕಾರಣ ಮುಖ್ಯವಲ್ಲ. ರಾಜಕೀಯ ಭಾಷಣ ಇರುವುದಿಲ್ಲ. ಯಾರನ್ನೂ ದೂಷಿಸುವುದಿಲ್ಲ. ದೇಶದ ಇತಿಹಾಸ ಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. 

ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ರಾಮಲಿಂಗಾರೆಡ್ಡಿ ಅವರ ತಂಡ 45-50 ಮಳಿಗೆ ಹಾಕಿ, ತಿಂಡಿ ನೀರು ವ್ಯವಸ್ಥೆ ಮಾಡಲಿದ್ದಾರೆ. ಸೇವಾದಳದ 1 ಸಾವಿರ ಸದಸ್ಯರನ್ನು ಒಂದೊಮ್ಮೆ ರಸ್ತೆಯಲ್ಲಿ ರಾಷ್ಟ್ರಧ್ವಜ ಬಿದ್ದಿದ್ದರೆ ಅದನ್ನು ಎತ್ತಿಕೊಳ್ಳಲು ನೇಮಿಸಲಾಗಿದೆ. ಎಲ್ಲ ರೈಲ್ವೇ ನಿಲ್ದಾಣ ಕೇಂದ್ರಗಳಲ್ಲಿ ಪಕ್ಷದ ಪ್ರತಿನಿಧಿಗಳು ಮಾರ್ಗದರ್ಶನ ನೀಡುವರು. ಎಲ್ಲರೂ ಬಿಳಿ ವಸ್ತ್ರ ಧರಿಸಿ, ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದೇವೆ. 

ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 1 ಕೋಟಿ ಮಂದಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಸರ್ಕಾರ ರಾಷ್ಟ್ರಧ್ವಜ ಖರೀದಿಗೆ ದರ ನಿಗದಿ ಮಾಡಿದೆ. ನಾನು ಅದನ್ನು ಪ್ರಶ್ನಿಸುವುದಿಲ್ಲ. ನಾವು ನೀಡುವ ರಾಷ್ಟ್ರಧ್ವಜಕ್ಕೆ ಹಣ ಪಡೆಯುವುದಿಲ್ಲ. ಇದು ದೇಶಕ್ಕೆ ಗೌರವ ನೀಡುವ ವಿಚಾರವಾಗಿದ್ದು, ಇದನ್ನು ವ್ಯಾಪಾರ ಮಾಡಬಾರದು ಎಂದು ನಿರ್ಧರಿಸಿದ್ದೇವೆ. ಇನ್ನು ಧಾರವಾಡದ ಖಾದಿ ಭಂಡಾರದಿಂದ ರಾಷ್ಟ್ರಧ್ವಜ ಖರೀದಿ ಮಾಡಲಾಗಿದೆ. 

ಪಕ್ಷದ ಅಧ್ಯಕ್ಷನಾಗಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ನಮ್ಮ ನಾಯಕರು ಕೂಡ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವನ್ನು ಭೇಟಿ ಮಾಡಬೇಕು. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ನಾವೆಲ್ಲರೂ ಪಕ್ಷಬೇಧ ಬಿಟ್ಟು ಕೆಲಸ ಮಾಡೋಣ. 

ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ರಾಜಕೀಯ ಪಕ್ಷದ ನಾಯಕರಿಗೂ ಬಹಿರಂಗ ಆಹ್ವಾನ ನೀಡುತ್ತೇನೆ. ಎಲ್ಲ ಕಲಾವಿದರಿಗೆ ಆಹ್ವಾನ ಕಳುಹಿಸಿದ್ದೇವೆ.

ಜನರನ್ನು ಕರೆತರಲು ನಾವು ಯಾರಿಗೂ ಟಾರ್ಗೆಟ್ ನೀಡಿಲ್ಲ. ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಸ್ವಇಚ್ಛೆಯಿಂದ ಬರುವವರು ಬರಬಹುದು. ಬೆಂಗಳೂರು ನಾಗರೀಕರು ಮೆಟ್ರೋ ಮಾರ್ಗವನ್ನೇ ಬಳಸಬೇಕು ಎಂದು ಮನವಿ ಮಾಡುತ್ತೇನೆ. ನಾವು ಕಾರ್ಯಕ್ರಮದ ಮಾರ್ಗವನ್ನು ಮೆಟ್ರೋ ಇಲಾಖೆಗೆ ನೀಡಿದ್ದು, ಎಷ್ಟು ಬಾರಿ ರೈಲು ಪ್ರಯಾಣ ಮಾಡಬೇಕು ಎಂಬುದನ್ನು ಅವರು ತೀರ್ಮಾನಿಸುತ್ತಾರೆ.

ಬಿಜೆಪಿಯವರು ಕಾರ್ಯಕ್ರಮ ಹೈಜಾಕ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. ಈಗಲಾದರೂ ಅವರು ಈ ದೇಶಕ್ಕೆ ಗೌರವ ತೋರಿಸಲಿ. ಕಾರ್ಯಕ್ರಮ ಹೈಜಾಕ್ ಮಾಡುತ್ತಾರೆ ಎಂದೆಲ್ಲ ನಾನು ಮಾತನಾಡುವುದಿಲ್ಲ. ಈ ವಿಚಾರದಲ್ಲಿ ಅವರ ಜತೆ ಸ್ಪರ್ಧೆ ಮಾಡಲು ಬಯಸುವುದಿಲ್ಲ. ಈ ದೇಶದಲ್ಲಿ ಶಾಂತಿ ನೆಲೆಸಿ, ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದಷ್ಟೇ ನಮ್ಮ ಗುರಿ’ ಎಂದು ತಿಳಿಸಿದರು.

*ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ:*

75ನೇ ಸ್ವಾತಂತ್ರ್ಯ ಮಹೋತ್ಸವದ ಐತಿಹಾಸಿಕ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಸೋಂಕು ತಗುಲಿಸದೇ ಪಕ್ಷಾತೀತವಾಗಿ ಕಾಂಗ್ರೆಸ್ ಆಯೋಜಿಸುತ್ತಿದೆ. ಈ ಕಾರ್ಯಕ್ರಮ ಪ್ರತಿಯೊಬ್ಬರ ಕಾರ್ಯಕ್ರಮ ಆಗಬೇಕು ಹಾಗೂ ಆಯಾ ಪ್ರದೇಶ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಆಯೋಜಿಸಬೇಕು ಎಂದು ಎಐಸಿಸಿ ನಾಯಕರು ಸೂಚಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಿವಕುಮಾರ್ ಅವರು ಈ ಕಾರ್ಯಕ್ರಮ ಮುಖ್ಯ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿ 11 ಉಪಸಮಿತಿ ಮಾಡಿ, ಒಂದೊಂದು ಜವಾಬ್ದಾರಿ ನೀಡಿದ್ದಾರೆ. ಸಾರಿಗೆ, ಆಹಾರ, ಮಾಧ್ಯಮ ಸೇರಿದಂತೆ ವಿವಿಧ ಉಪಸಮಿತಿ ರಚಿಸಲಾಗಿದೆ.

ಇಡೀ ರಾಜ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಮೂಲಕ ಈ ಕಾರ್ಯಕ್ರಮದ ರೂಪುರೇಷೆ ಹಾಗೂ ಭಾಗವಹಿಸುವವರ ವಿಚಾರವನ್ನು ತಲುಪಿಸಲಾಗಿದ್ದು, ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದು, ಜನರಿಂದ ಬಹಳ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಅಧ್ಯಕ್ಷರು ಆನ್ ಲನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದರು. ಇವತ್ತಿನವರೆಗೆ ಸುಮಾರು 62,394 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇದು 75ನೇ ಸ್ವಾಂತ್ತ್ರ್ಯೋತ್ಸವದಲ್ಲಿ ಭಾಗವಹಿಸಲು ಜನರಲ್ಲಿನ ಆಸಕ್ತಿಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು, ವಕೀಲರು, ವೈದ್ಯರು, ಬೇರೆ, ಬೇರೆ ಕ್ಷೇತ್ರ, ಸಮುದಾಯಗಳ ಜನ ನೋಂದಣಿ ಮಾಡಿಕೊಂಡಿದ್ದಾರೆ. 

ಪ್ರತಿ ಜಿಲ್ಲೆಯಿಂದ ಈ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಬೇಕು. ಬೇಂಗಳೂರಿನ ಹತ್ತಿರದ ಜಿಲ್ಲೆಗಳಿಂದ ಹೆಚ್ಚು ಜನ ಭಾಗವಹಿಸುವಂತೆ ಹಾಗೂ ದೂರದ ಜಿಲ್ಲೆಗಳ ಜನರಿಗೂ ಆಹ್ವಾನ ನೀಡಿದ್ದೇವೆ. ವಿಶೇಷ ಎಂದರೆ ನೋಂದಣಿ ಮಾಡಿಕೊಂಡಿರುವ ಬೆಂಗಳೂರಿನಲ್ಲಿರುವ ಪ್ರತಿ ವ್ಯಕ್ತಿಗಳಿಗೆ ಟಿಶರ್ಟ್, ಕ್ಯಾಪ್, ಹಾಗೂ ಕಿಟ್ ಕೊಟ್ಟಿದ್ದಾರೆ. ಇಂತಹ ಹಬ್ಬ ಯಾವತ್ತೂ ನಡೆದಿಲ್ಲ. ಇದರಲ್ಲಿ ಭಾಗವಹಿಸುತ್ತೇವೆ ಎಂದು ಜನ ಉತ್ಸುಕರಾಗಿದ್ದಾರೆ.

ನಮ್ಮ ಪ್ರಕಾರ 1.50 ರಿಂದ 2.00 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿಗೂ ರಾಷ್ಟ್ರಧ್ವಜ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕನಕಪುರ, ಹೊಸೂರು ಬೆಂಗಳೂರಿಗೆ ಪ್ರವೇಶ ಪಡೆಯುವ ಮಾರ್ಗ. ತುಮಕೂರು ರಸ್ತೆ ಮೂಲಕ 21 ಜಿಲ್ಲೆಗಳು ಬೆಂಗಳೂರು ಸಂಪರ್ಕ ಹೊಂದಿದೆ. ಸಿದ್ದಗಂಗಾ ಮಠದಲ್ಲಿ ಹಿಂದಿನ ರಾತ್ರಿ ಬಂದು ತಂಗುವ ಸಿದ್ಧತೆ ಮಾಡಲಾಗಿದೆ. ಅವರಿಗೆ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದವರೆಗೂ ಅವರು ತಮ್ಮ ವಾಹನ ತರಬಹುದು. ಅಲ್ಲಿಂದ ಮೆಟ್ರೋ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಆಗಮಿಸಬಹುದು. ಈಗಾಗಲೇ 50 ಸಾವಿರ ಮೆಟ್ರೋ ಟಿಕೆಟ್ ಖರೀದಿಸಿದ್ದೇವೆ. ಜಿಲ್ಲಾವಾರು ಜವಾಬ್ದಾರಿ ನೀಡಿ ಅವರಿಗೆ ರಾಷ್ಟ್ರಧ್ವಜ ಹಾಗೂ ಇತರೆ ಸಾಮಾಗ್ರಿ ನೀಡಲಾಗುವುದು.

ಕೋಲಾರ ಮಾರ್ಗವಾಗಿ ಬರುವವರಿಗೆ ಐಟಿಐ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿಕೊಡಲಾಗಿದ್ದು, ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಬೈಯ್ಯಪ್ಪನಹಳ್ಳಿಯಿಂದ ಮೆಟ್ರೋ ಮಾರ್ಗವಾಗಿ ಆಗಮಿಸುತ್ತಾರೆ. ಇನ್ನು ಮೈಸೂರು ರಸ್ತೆಯಲ್ಲಿ ಕೆಂಗೇರಿ ಪಕ್ಕದಲ್ಲಿ ಒಕ್ಕಲಿಗರ ಸಂಘದ ಬಳಿ ವಾಹನ ನಿಲುಗಡೆ, ಊಟದ ವ್ಯವಸ್ಥೆ ಅವಕಾಶ ನೀಡಿದ್ದೇವೆ. ಚಿಕ್ಕಬಳ್ಳಾಪುರ ಮಾರ್ಗವಾಗಿ ಬರುವವರು ಅರಮನೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾಮನಗರದಿಂದ ಬರುವವರಿಗೆ ನೈಸ್ ಜಂಕ್ಷನ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ರೈಲಿನಲ್ಲಿ ಬರುವವರಿಗೆ ಮಳವಳ್ಳಿ ಚಿಕ್ಕಣ್ಣ ಕಲ್ಯಾಣ ಮಂಟಪ, ಆಂಜನೇಯ ದೇವಾಸ್ಥಾನ, ಸತ್ಯನಾರಾಯಣ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿನ 28 ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಮುಖಂಡರು ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದು, ತಮ್ಮ ಕ್ಷೇತ್ರದಿಂದ ಜನರನ್ನು ಕರೆತರುವ ಜವಾಬ್ದಾರಿ ಹಂಚಲಾಗಿದೆ.

ಕಾಲೇಜು ಪ್ರಾಂಶುಪಾಲರು, ಭೋದಕ ವರ್ಗ, ಚಿತ್ರ ನಟರು, ಕಲಾವಿದರು, ಬೆಂಗಳೂರಿನ ಎಲ್ಲ ಕಾಲೇಜುಗಳಿಗೆ ಮನವಿ ಮಾಡಿದ್ದು ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಿದ್ದೇವೆ. 

ಮಾರ್ಗ: ಸಂಗೊಳ್ಳಿ ರಾಯಣ್ಣ ವೃತ್ತಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಿ ಕೆ.ಆರ್ ವೃತ್ತ, ಹಡ್ಸನ್ ಸರ್ಕಲ್, ಜೆಸಿ ರಸ್ತೆ, ಮಿನರ್ವ ವೃತ್ತ, ವಿವಿಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ತಲುಪುತ್ತೇವೆ. ನಂತರ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 

ಮಾರ್ಗದಲ್ಲಿ ಸ್ಥಬ್ಧ ಚಿತ್ರ ಮಾಡಲಾಗಿದ್ದು, ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ಬಿಂಬಿಸಬೇಕು. ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರ ಚಿತ್ರವನ್ನು ಪ್ರದರ್ಶಿಸಲಾಗುವುದು. ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಹಾಗೂ ಹೋರಾಟ ಹಾಗೂ ಬಲಿದಾನದ ಬಗ್ಗೆ ತಿಳಿಯಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರು, ಬೆಳಗಾವಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕಲಾ ತಂಡಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿವೆ. 

ಇದು ದೇಶದ ಇತಿಹಾಸದಲ್ಲಿ ಇದೊಂದು ಮಹತ್ವದ ಘಟ್ಟವಾಗಿದ್ದು, ಈ ಉತ್ಸವ ಎಲ್ಲರ ಉತ್ಸವವಾಗಿದೆ. ಈ ಪಾದಯಾತ್ರೆಯಲ್ಲಿ ಎಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜತೆಗೂಡಿ ಭಾಗವಹಿಸುವಂತೆ ಮನವಿ ಮಾಡಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಗೌರವ ಸಲ್ಲಿಸುವ ಆಲೋಚನೆ ಇದೆ. 

ಇಡೀ ರಾಜ್ಯದಲ್ಲಿ ಜಿಲ್ಲಾವಾರು ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಪಾದಯಾತ್ರೆ ಮಾರ್ಗ ಪೂರ್ತಿ ನಮ್ಮ ಸ್ವಯಂ ಸೇವಕರು, ಪ್ರತಿ ಕಿ.ಮೀಗೆ ಒಂದರಂತೆ 6 ಆಂಬುಲೆನ್ಸ್, ವೈದ್ಯರ ತಂಡ, ತಂಪು ಪಾನೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಎಲ್ಲರೀತಿಯ ಸಹಕಾರ ಸಿಗುವ ನಿರೀಕ್ಷೆ ಇದೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ ಮಾಜಿ ಸಚಿವರಾದ ಎಚ್ ಎಂ ರೇವಣ್ಣ, ಕೆ ಜೆ ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post