cm, ಇಂದು ಅಮೃತ ಸ್ವಾತಂತ್ರ್ಯ ಮಹೋತ್ಸವ ಗಳಲಿ

[15/08, 9:52 AM] Gurulingswami. Holimatha. Vv. Cm: 76 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಮುಖ್ಯಮಂತ್ರಿಗಳು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
[15/08, 11:17 AM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225 ನೇ ಜಯಂತಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್ ಎಮ್ ರೇವಣ್ಣ , ಮಾಜಿ ಶಾಸಕ ವಾಟಾಳ್ ನಾಗರಾಜ್ , ಮಾಜಿ ಮೇಯರ್ ಹುಚ್ಚಪ್ಪ , ಬಿಬಿಎಂಪಿ ಮುಖ್ಯ ಆಡಳಿತ ಅಧಿಕಾರಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.
[15/08, 11:55 AM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225 ನೇ ಜಯಂತಿ ಉತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಅವರು ರಾಯಣ್ಣ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್ ಎಮ್ ರೇವಣ್ಣ , ಮಾಜಿ ಶಾಸಕ ವಾಟಾಳ್ ನಾಗರಾಜ್ , ಮಾಜಿ ಮೇಯರ್ ಗಳಾದ ಹುಚ್ಚಪ್ಪ , ರಾಮಚಂದ್ರಪ್ಪ, ಬಿಬಿಎಂಪಿ ಮುಖ್ಯ ಆಡಳಿತ ಅಧಿಕಾರಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.
[15/08, 12:40 PM] Gurulingswami. Holimatha. Vv. Cm: *ಹರ್ ಘರ್ ತಿರಂಗಾ ಯಶಸ್ವಿಯಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

 *ಮುಂದಿನ ೨೫ ವರ್ಷಕ್ಕೆ ಮೋದಿ ಭದ್ರ ಬುನಾದಿ ಹಾಕಿದ್ದಾರೆ - ಸಿಎಂ ಬಸವರಾಜ ಬೊಮ್ಮಾಯಿ‌* 

ಬೆಂಗಳೂರು: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹರ ಘರ ತಿರಂಗಾ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225 ನೇ ಜಯಂತೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯ ಹರ್ ಘರ್ ತಿರಂಗಾ ಅತ್ಯಂತ ಯಶಸ್ವಿಯಾಗಿ, ಅದ್ಭುತವಾಗಿಯಾಗಿದೆ. ಮುಂದಿನ 25 ವರ್ಷಕ್ಕೆ ಭದ್ರ ಬುನಾದಿಯಾಗಿದೆ‌. ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

75 ವರ್ಷದ ಸ್ವತಂತ್ರ್ಯೋತ್ಸವವನ್ನು ಇಡೀ ದೇಶವೇ ಆಚರಣೆ ಮಾಡುತ್ತಿದೆ. ದೇಶದಲ್ಲಿ 40 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಕರ್ನಾಟಕದಲ್ಲಿ 1.25 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಎಲ್ಲರೂ ಸೇರಿ ಸಂಭ್ರಮಿಸಬೇಕು. ಇದರಲ್ಲಿ ಜಾತಿ, ಮತ, ಪಕ್ಷ, ಪಂಗಡ ಇಲ್ಲ. ನಾವೆಲ್ಲರೂ ಭಾರತೀಯರು. ಒಗ್ಗಟ್ಟಾಗಿ ಒಂದಾಗಿ ಮಾಡಬೇಕು. ಎಷ್ಟು ಜನ ಇದರಲ್ಲಿ ಪಾಲ್ಗೊಳ್ಳುತ್ತಾರೆ ಅಷ್ಟು ಒಳ್ಳೆಯದ್ದು. ನಾನು ಎಲ್ಲವನ್ನೂ ಸ್ವಾಗತ ಮಾಡುತ್ತೇನೆ.ದೇಶ ಒಂದಾಗಿ ಎದ್ದು ನಿಲ್ಲಬೇಕೆಂದು ಎಲ್ಲರೂ ಸಹಕಾರ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

*ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಒಂದೇ*

ಬಾವುಟದ ಬಗ್ಗೆ ಜಗಳ ಏನಿಲ್ಲ. ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಒಂದೇ. ಉಳಿದ ವೇಳೆ ಬೇರೆ. ಭಾರತದ ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
[15/08, 1:07 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ದೇಶದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮರ್ಥ ಭಾರತ - ಅಮೃತ ಭಾರತಿಗೆ ಕರುನಾಡ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ, ಮಾಜಿ ಸಿಎಂ ಸದಾನಂದ ಗೌಡ, ಸಚಿವರಾದ ಆರ್ ಅಶೋಕ,  ಡಾ. ಅಶ್ವಥ ನಾರಾಯಣ,   ಸಂಸದರಾದ ಪಿ ಸಿ ಮೋಹನ್, ಲೆಹರ ಸಿಂಗ್, ಶಾಸಕರಾದ ಸುರೇಶ ಕುಮಾರ, ಅರವಿಂದ ಲಿಂಬಾವಳಿ,  ಸತೀಶ ರೆಡ್ಡಿ, ಕೃಷ್ಣಪ್ಪ, ಉದಯ ಗರುಡಾಚಾರ್, ಎನ್ ರವಿಕುಮಾರ, ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಮಂಜುನಾಥ ಉಪಸ್ಥಿತರಿದ್ದರು.
[15/08, 1:16 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ದೇಶದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮರ್ಥ ಭಾರತ - ಅಮೃತ ಭಾರತಿಗೆ ಕರುನಾಡ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ, ಮಾಜಿ ಸಿಎಂ ಸದಾನಂದ ಗೌಡ, ಸಚಿವರಾದ ಆರ್ ಅಶೋಕ,  ಡಾ. ಅಶ್ವಥ ನಾರಾಯಣ,   ಸಂಸದರಾದ ಪಿ ಸಿ ಮೋಹನ್, ಲೆಹರ ಸಿಂಗ್, ಶಾಸಕರಾದ ಸುರೇಶ ಕುಮಾರ, ಅರವಿಂದ ಲಿಂಬಾವಳಿ,  ಸತೀಶ ರೆಡ್ಡಿ, ಕೃಷ್ಣಪ್ಪ, ಉದಯ ಗರುಡಾಚಾರ್, ಎನ್ ರವಿಕುಮಾರ, ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಮಂಜುನಾಥ ಉಪಸ್ಥಿತರಿದ್ದರು.
[15/08, 1:26 PM] Gurulingswami. Holimatha. Vv. Cm: *76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ                                                ನಾಡಿನ ಜನತೆಗೆ ಮಾನ್ಯ ಮುಖ್ಯಮಂತ್ರಿಯವರ ಸಂದೇಶ
ದಿನಾಂಕ 15-8-2022, ಬೆಳಿಗ್ಗೆ*
 9.00 ಗಂಟೆ ಸ್ಥಳ: ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನ, ಬೆಂಗಳೂರು.
ನಾಡ ಬಾಂಧವರೆ,
1. ನಿಮಗೆಲ್ಲರಿಗೂ 76ನೇ ಸ್ವಾತಂತ್ರ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು.
2. ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷಾಚರಣೆಯ ಈ ಸಂಭ್ರಮದಲ್ಲಿ ದೇಶವನ್ನು ಪರಕೀಯರ ದಾಸ್ಯದಿಂದ ಬಿಡುಗಡೆಗೊಳಿಸಲು ಹೋರಾಡಿದ ಮಹನೀಯರನ್ನು ನೆನೆಯುವುದು ನಮ್ಮ ಮೊದಲ ಕರ್ತವ್ಯವಾಗಿದೆ.
3. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ವಲ್ಲಭಬಾಯೀ ಪಟೇಲ್, ಭಗತ್ ಸಿಂಗ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರೂ ಮೊದಲಾದ ಮಹನೀಯರ ಹೋರಾಟ ಚರಿತ್ರಾರ್ಹವಾದುದು. ಕನ್ನಡ ನಾಡಿನಲ್ಲಿ ಕಿತ್ತೂರು ವೀರರಾಣಿ ಚೆನ್ನಮ್ಮ, ವೀರಸಂಗೊಳ್ಳಿ ರಾಯಣ್ಣ ಮೊದಲಾದವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಸಾಮ್ರಾಜ್ಯಶಾಹಿ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟ ಮೈ ನವಿರೇಳಿಸುತ್ತದೆ. ಇವರೆಲ್ಲರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯದ ಸವಿಯುಣ್ಣುವ ಜೊತೆಗೆ ದೇಶದ ಉನ್ನತಿಗಾಗಿ ನಮ್ಮ ಕರ್ತವ್ಯವನ್ನು ಅರಿತು ನಿರ್ವಹಿಸುವುದೇ ಆ ಮಹನೀಯರ ತ್ಯಾಗಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ.
4. ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ನಾವು ಅದೆಷ್ಟೋ ಮೈಲಿಗಲ್ಲುಗಳನ್ನು ದಾಟಿದ್ದೇವೆ. ನೂರಾರು ಸವಾಲುಗಳನ್ನು ಎದುರಿಸಿದ್ದೇವೆ. ಸಮಸ್ಯೆಗಳನ್ನು ಮೆಟ್ಟಿ ನಿಂತಿದ್ದೇವೆ. 
“ನೆಳಲು-ಬೆಳಕುಗಳ ರೆಕ್ಕೆಯ ಬಿಚ್ಚುತ
ಹಾರಾಡುವ ಧ್ವಜ ಒಂದೇ”
5. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಹೇಳುವಂತೆ ವಿವಿಧ ಭಾಷೆ, ಸಂಸ್ಕøತಿ, ಜೀವನಶೈಲಿಯಿದ್ದರೂ ಭಾರತೀಯತೆ ನಮ್ಮೆಲ್ಲರನ್ನೂ ಬೆಸೆಯುವ ಬಂಧವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ತಾಯಿ ಬೇರಾಗಿದೆ. 
6. ಈ ಏಕತೆಯನ್ನು ಸಾರಲು, ನಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಸ್ಪಂದಿಸಿ, ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನವು ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕಾಗಿ ನಾಡ ಬಾಂಧವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ರಮ ನಮ್ಮ ಅಮೃತ ಮಹೋತ್ಸವ ಸಂಭ್ರಮಕ್ಕೆ ಹೆಚ್ಚಿನ ಮೆರುಗು ನೀಡಿದೆ.
7. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಎದುರಾದ ಕ್ಲಿಷ್ಟ ಸಮಸ್ಯೆಗಳನ್ನು, ಸವಾಲುಗಳನ್ನು ಬಗೆಹರಿಸಿ, ದೇಶವನ್ನು ಮುನ್ನಡೆಸಿದ ಎಲ್ಲ ಮಹನೀಯರ ಸೇವೆ ಶ್ಲಾಘನೀಯ. ಜನಸೇವೆಯನ್ನೇ ಬದುಕಾಗಿಸಿಕೊಂಡು ಭಾರತವನ್ನು ವಿಶ್ವ ಗುರುವಿನ ಸ್ಥಾನಕ್ಕೇರಿಸಲು ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗೆ ಹೊಸ ದಿಕ್ಕು, ಹೊಸ ವೇಗ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಯೂ ಡಿಜಿಟಲ್ ಹಣಕಾಸು ವ್ಯವಹಾರವನ್ನು ತನ್ನದಾಗಿಸಿಕೊಂಡು ಉನ್ನತಿಯನ್ನು ಕಾಣುತ್ತಿದ್ದಾನೆ. ಮಂಗಳನ ಅಂಗಳದಲ್ಲಿಯೂ ಭಾರತ ತನ್ನ ಹೆಜ್ಜೆ ಮೂಡಿಸಿದೆ. ಕೋವಿಡ್ 19 ರಿಂದ ಇಡೀ ವಿಶ್ವವೇ ತತ್ತರಿಸಿದ ಸಂದರ್ಭದಲ್ಲಿ ಮೋದಿ ಜಿ ಅವರು ತಮ್ಮ ನಾಯಕತ್ವ ಹಾಗೂ ಕರ್ತೃತ್ವ ಶಕ್ತಿಯಿಂದ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದರು.
8. ಇದೀಗ ಕೋವಿಡ್ ಗ್ರಹಣ ಕಳೆದು ಮತ್ತೆ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ದಿನಗಳು ಬಂದಿವೆ. ರಾಜ್ಯದಲ್ಲಿಯೂ ನಿಕಟಪೂರ್ವ ಮುಖ್ಯಮಂತ್ರಿ ಸನ್ಮಾನ್ಯ 
ಶ್ರೀ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ 19 ಸೋಂಕಿನ ಸಮರ್ಥ ನಿಯಂತ್ರಣ ಹಾಗೂ ನಿರ್ವಹಣೆಯನ್ನು ಮಾಡುವ ಜೊತೆಗೆ, ಆರ್ಥಿಕತೆಯೂ ಹಳಿತಪ್ಪದಂತೆ ದಕ್ಷತೆಯಿಂದ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಕರ್ನಾಟಕದ ಅರ್ಥ ವ್ಯವಸ್ಥೆ ತ್ವರಿತವಾಗಿ ಚೇತರಿಸಿಕೊಂಡಿದೆ.
9. ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುವ ಗುರಿಯೊಂದಿಗೆ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ‘ನವ ಭಾರತಕ್ಕಾಗಿ ನವ ಕರ್ನಾಟಕ’ ನಿರ್ಮಾಣ ಮಾಡಲು ದೃಢ ಹೆಜ್ಜೆಗಳನ್ನಿಡುತ್ತಿದ್ದೇವೆ. ಪ್ರಧಾನ ಮಂತ್ರಿಯವರ ಕನಸಾದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕನಿಷ್ಠ 1 ಟ್ರಿಲಿಯನ್ ಡಾಲರುಗಳ ಕೊಡುಗೆಯನ್ನು ಕರ್ನಾಟಕ ರಾಜ್ಯ ನೀಡಬೇಕೆಂಬ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಪಣತೊಟ್ಟು ಶ್ರಮಿಸುತ್ತಿದ್ದೇವೆ.
10. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತ, ಅವರ ಬದುಕು ಸುಗಮಗೊಳಿಸುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ನಾಗರಿಕ ಸೇವೆಗಳ ಲಭ್ಯತೆಯನ್ನು ಸರಳ, ಸುಗಮಗೊಳಿಸಲು ಮುಂದಾಗಿದ್ದೇವೆ.
ಅಮೃತ ಮಹೋತ್ಸವ ವಿಶೇಷ ಯೋಜನೆಗಳು
11. ಕಳೆದ ವರ್ಷ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅರ್ಥಪೂರ್ಣ ಆಚರಣೆಯ ಉದ್ದೇಶದಿಂದ ಇದೇ ವೇದಿಕೆಯಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಯೋಜನೆಗಳು ನಿಗದಿತ ವೇಳಾಪಟ್ಟಿಯಂತೆ ಅನುಷ್ಠಾನಗೊಳ್ಳುತ್ತಿರುವುದು ಸಂತೋಷದ ಸಂಗತಿ. ಈ ಯೋಜನೆಗಳು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೆರವಾಗಲಿವೆ ಎಂಬ ವಿಶ್ವಾಸ ನನಗಿದೆ.
12. ಅಮೃತ ಶಾಲಾ ಸೌಲಭ್ಯದ ಯೋಜನೆ ಅಡಿಯಲ್ಲಿ 750 ಸರ್ಕಾರಿ ಶಾಲೆಗಳಿಗೆ ತಲಾ ರೂ. 10 ಲಕ್ಷದಂತೆ ಒಟ್ಟು 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೂಲಸೌಕರ್ಯಗಳಿಗಾಗಿ ಈಗಾಗಲೇ 74.68 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.  ಕಾಮಗಾರಿಗಳು ಪ್ರಗತಿಯಲ್ಲಿವೆ.
13. ಅಮೃತ ಆರೋಗ್ಯ ಮೂಲ ಸೌಲಭ್ಯದ ಯೋಜನೆ ಅಡಿಯಲ್ಲಿ 750  ಪ್ರಾಥಮಿಕ ಆರೋಗ್ಯ ಕೇಂದ್ರಗಳ (Pಊಅ) ಮೂಲಸೌಕರ್ಯಗಳ ವಿಸ್ತರಣೆ ಹಾಗೂ ಉನ್ನತೀಕರಣಕ್ಕಾಗಿ,  ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ ರೂ. 20 ಲಕ್ಷದಂತೆ ಒಟ್ಟು 150 ಕೋಟಿ ರೂ. ಅನುದಾನ ಒದಗಿಸಲಾಗಿದೆ. 
14. ಅಮೃತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ ಅಡಿಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 75,000 ಯುವಕ ಯುವತಿಯರಿಗೆ 2 ವರ್ಷದಲ್ಲಿ  ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ರೂ. 112 ಕೋಟಿ ಅನುದಾನ ಒದಗಿಸಲಾಗಿದ್ದು  ಈಗಾಗಲೇ 60,645 ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ.
15. ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಯೋಜನೆÉ ಅಡಿಯಲ್ಲಿ 750 ರೈತ ಉತ್ಪಾದಕ ಸಂಸ್ಥೆಗಳನ್ನು 3 ವರ್ಷದ ಅವಧಿಯಲ್ಲಿ ಸ್ಥಾಪಿಸಲು ತಲಾ ರೂ. 30 ಲಕ್ಷದಂತೆ ಒಟ್ಟು 225 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.  ಈಗಾಗಲೇ 324 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.  ಇವುಗಳಲ್ಲಿ, ಜಲಾನಯನ, ತೋಟಗಾರಿಕೆ, ರೇಷ್ಮೆ, ಕೈಮಗ್ಗ ಹಾಗೂ ಜವಳಿ, ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ರೈತ ಉತ್ಪಾದಕ ಸಂಸ್ಥೆಗಳಿವೆ.
16. ಅಮೃತ ಗ್ರಾಮ ಪಂಚಾಯತಿ ಯೋಜನೆÉ ಅಡಿಯಲ್ಲಿ, ವಿವಿಧ ಇಲಾಖೆಗಳ ಯೋಜನೆಗಳನ್ನು ಒಗ್ಗೂಡಿಸಿ, 750 ಗ್ರಾಮ ಪಂಚಾಯತಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಉದ್ದೇಶಿಸಿದ್ದು, ಇದುವರೆಗೂ 9000 ಕಾಮಗಾರಿಗಳಲ್ಲಿ 6499 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.  ಉಳಿದವು ಪ್ರಗತಿಯಲ್ಲಿವೆ.
17. ಅಮೃತ ನಿರ್ಮಲ ನಗರ ಯೋಜನೆÉ ಅಡಿಯಲ್ಲಿ, 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಉದ್ದೇಶಿಸಿದೆ.  ಇದಕ್ಕಾಗಿ ಪ್ರತಿ ಸ್ಥಳೀಯ ಸಂಸ್ಥೆಗೆ ರೂ. 1.00 ಕೋಟಿಯಂತೆ ಒಟ್ಟು 75 ಕೋಟಿ ರೂ.ಗಳ ಅನುದಾನ ಒದಗಿಸಿದೆ.  
18. ಅಮೃತ ಅಂಗನವಾಡಿ ಕೇಂದ್ರಗಳ ಯೋಜನೆ ಅಡಿಯಲ್ಲಿ, 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಿದೆ. ಇದಕ್ಕಾಗಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ ತಲಾ ರೂ. 1.00 ಲಕ್ಷದಂತೆ 7.5 ಕೋಟಿ ರೂ.ಗಳ ಅನುದಾನ ನೀಡಿದೆ. ಇದುವರೆಗೂ 392 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.  ಉಳಿದವು ಪ್ರಗತಿಯಲ್ಲಿವೆ.
19. ಅಮೃತ ಸ್ವಸಹಾಯ ಕಿರುಉದ್ದಿಮೆ ಯೋಜನೆ ಅಡಿಯಲ್ಲಿ, 7500 ಸ್ವಸಹಾಯ ಗುಂಪುಗಳಿಗೆ (Seಟಜಿ ಊeಟಠಿ ಉಡಿouಠಿs) ತಲಾ ರೂ. 1.00 ಲಕ್ಷದಂತೆ 75 ಕೋಟಿ ರೂ.ಗಳ ಬೀಜಧನ ಸೌಲಭ್ಯ ನೀಡಿ ಅವುಗಳನ್ನು ಕಿರು ಉದ್ದಿಮೆಗಳಾಗಿ (ಒiಛಿಡಿo ಇಟಿಣeಡಿಠಿಡಿises) ಪರಿವರ್ತಿಸಲು ಉದ್ದೇಶಿಸಿದೆ. ಇದುವರೆಗೂ 4362 ಸ್ವಸಹಾಯ ಗುಂಪುಗಳಿಗೆ  ಚೆಕ್ಕುಗಳನ್ನು ವಿತರಿಸಲಾಗಿದೆ.  ಉಳಿದ 3138 ಗುಂಪುಗಳಿಗೆ ಚೆಕ್ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. 
20. ಅಮೃತ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ, 750 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಉದ್ದೇಶಿಸಿದೆ.  ಈ ಉದ್ದೇಶಕ್ಕಾಗಿ 4,42,954 ವಸತಿ ರಹಿತರನ್ನು ಗುರುತಿಸಲಾಗಿದೆ. ವಸತಿ ಸೌಕರ್ಯ ನೀಡುವ ಉಳಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ.
21. ಅಮೃತ ಸ್ಟಾರ್ಟ್ ಅಪ್ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗ ಹಾಗೂ ಮಹಿಳಾ ಉದ್ದಿಮೆದಾರರ 100 ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವ ಗುರಿ ಇದ್ದು ಈಗಾಗಲೇ 108 ಸ್ಟಾರ್ಟ್ ಅಪ್ ಗಳನ್ನು ಆಯ್ಕೆ ಮಾಡಿದ್ದು 843.50 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
22. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ, 750 ಶಾಲಾಕಾಲೇಜುಗಳನ್ನು ಗುರುತಿಸಿ ಕೋವಿಡ್ ಮುಕ್ತ, ಅಪೌಷ್ಟಿಕತೆ ಮುಕ್ತ, ಬಡತನ ಮುಕ್ತ, ಸಾಕ್ಷರತಾ ಗಾಮ ಇತ್ಯಾದಿ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುವುದು. ಈ ಕಾರ್ಯದಲ್ಲಿ 52 ವಿಶ್ವವಿದ್ಯಾಲಯಗಳು, 450ಕ್ಕಿಂತ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಹಾಗೂ 50,000ಕ್ಕಿಂತ ಹೆಚ್ಚು ಓSS ಸ್ವಯಂಸೇವಕರು ತೊಡಗಿಸಿಕೊಂಡಿರುತ್ತಾರೆ.
23. ಅಮೃತ ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ, ಪ್ಯಾರಿಸ್ ಒಲಂಪಿಕ್ ಕ್ರೀಡಾ ಕೂಟಕ್ಕೆ ಆಯ್ದ  75 ಕ್ರೀಡಾಪಟುಗಳನ್ನು ರೂಪಿಸಲು ಉದ್ದೇಶಿದೆ. ಇದಕ್ಕಾಗಿ ತಲಾ ಒಬ್ಬ ಕ್ರೀಡಾಪಟುವಿಗೆ ರೂ. 5.00 ಲಕ್ಷಗಳ ಅನುದಾನ ನಿಗದಿಪಡಿಸಲಾಗಿದೆ.  ಈಗಾಗಲೇ 90 ಲಕ್ಷ ರೂ.ಗಳನ್ನು ಡಿ.ಬಿ.ಟಿ ಮೂಲಕ ಕ್ರೀಡಾಪಟುಗಳಿಗೆ ನೀಡಲಾಗಿದೆ. ಈ 5.00 ಲಕ್ಷ ರೂ.ಗಳ  ಅನುದಾನವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
24. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮೂಲಸೌಕರ್ಯಕ್ಕೆ 6000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ, 5000 ಕೋಟಿ ರೂ. ಮೊತ್ತದ ಕಾಮಗಾರಿಗಳು ಟೆಂಡರ್ ಕಾರ್ಯಾದೇಶ ನೀಡುವ ವಿವಿಧ ಹಂತದಲ್ಲಿ ಇವೆ.
25. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಅಡಿಯಲ್ಲಿ ರಾಜ್ಯದ ನಗರಗಳು ಹಾಗೂ ಪಟ್ಟಣಗಳಲ್ಲಿ ಮೂಲಸೌಕರ್ಯ ನೀಡಲು ಹಾಗೂ ಪೌರಸೇವೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಿದೆ. ಇವುಗಳಲ್ಲಿ, 2680 ಕೋಟಿ ರೂ. ಮೊತ್ತದ ಕಾಮಗಾರಿಗಳು ಟೆಂಡರ್ ಕಾರ್ಯಾದೇಶ ನೀಡುವ ವಿವಿಧ ಹಂತದಲ್ಲಿ ಇವೆ.
ಆಯವ್ಯಯ ಘೋಷಣೆ: ಸಕಾಲಿಕ ಅನುಷ್ಠಾನ
26. 2022-23ನೇ ಸಾಲಿನ ಆಯವ್ಯಯ ಅನುಮೋದನೆಯಾದ ದಿನದಿಂದಲೇ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡು, ಆಯವ್ಯಯ ಘೋಷಣೆಗಳು ನಿಗದಿತ ಕಾಲಾವಧಿಯಲ್ಲಿ ಜಾರಿಗೊಳಿಸಲು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಆಯವ್ಯಯದ 320 ಘೋಷಣೆಗಳ ಕುರಿತು  ಸರ್ಕಾರಿ ಆದೇಶ ಹೊರಡಿಸಲಾಗಿದ್ದು,  ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.
ಸ್ಪಂದನಾಶೀಲ ಸರ್ಕಾರ
27. ಅತಿವೃಷ್ಟಿ, ಪ್ರವಾಹ, ಭೂಕುಸಿತದಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಜನರ ರಕ್ಷಣೆ, ಪರಿಹಾರ ಕ್ರಮಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಎಸ್.ಡಿ.ಆರ್.ಎಫ್. ಮಾರ್ಗಸೂಚಿಗಿಂತ ಹೆಚ್ಚುವರಿಯಾಗಿ ಪರಿಹಾರ ವಿತರಿಸಿ, ಸಂತ್ರಸ್ತರ ನೆರವಿಗೆ ನಿಂತಿದ್ದೇವೆ. ಪರಿಹಾರ ಮೊತ್ತವನ್ನು ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ 6,800 ರೂ. ಗಳಿಂದ 13,600 ರೂ., ನೀರಾವರಿ ಬೆಳೆಗಳಿಗೆ 13,500 ರೂ. ಗಳಿಂದ 25,000 ರೂ. ಗಳು ಹಾಗೂ ಬಹುವಾರ್ಷಿಕ ಬೆಳೆಗಳಿಗೆ 18,000 ರೂ. ಗಳಿಂದ 28,000 ರೂ.ಗಳಿಗೆ ಹೆಚ್ಚಿಸಿ, ವಿತರಿಸಲಾಗಿದೆ.  
28. ನಷ್ಟದ ಮಾಹಿತಿ ಅಪ್‍ಲೋಡ್ ಆದ ಒಂದು ವಾರದೊಳಗೆ ಪರಿಹಾರ ವಿತರಿಸಿ, ರೈತರ ಸಂಕಷ್ಟಕ್ಕೆ ಹೆಗಲಾಗಿದ್ದೇವೆ. 18.58 ಲಕ್ಷ ರೈತರಿಗೆ 2452 ಕೋಟಿ ರೂ. ಗಳ ಬೆಳೆ ಹಾನಿ ಪರಿಹಾರ ವಿತರಿಸಲಾಗಿದ್ದು, ಹೆಚ್ಚುವರಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ 1160 ಕೋಟಿ ರೂ. ವೆಚ್ಚ ಮಾಡಿದೆ.
29. ಅತಿವೃಷ್ಟಿ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ, ಹಾನಿ ಅನುಭವಿಸಿದವರಿಗೂ ಕೇಂದ್ರ ಸರ್ಕಾರದ ಮಾನದಂಡಗಳಿಗಿಂತ ಹೆಚ್ಚಿನ ಪರಿಹಾರ ವಿತರಿಸಲಾಗುತ್ತಿದೆ. ಸಂಪೂರ್ಣ ಮನೆ ಹಾನಿ ಸಂಭವಿಸಿದವರಿಗೆ 5 ಲಕ್ಷ ರೂ., ತೀವ್ರ ಹಾನಿ ಸಂಭವಿಸಿದವರಿಗೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಗೆ 50,000 ರೂ. ಪರಿಹಾರ ವಿತರಿಸಲಾಗುತ್ತಿದೆ.
30. ಕಳೆದ ವರ್ಷ ಭಾರತ ಸರ್ಕಾರಕ್ಕೆ ಪ್ರವಾಹ ಪರಿಹಾರಕ್ಕಾಗಿ ಅತ್ಯಂತ ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಎನ್‍ಡಿಆರ್‍ಎಫ್ ನಿಂದ 994 ಕೋಟಿ ರೂ. ಬಿಡುಗಡೆಯಾಗಿದೆ.
31. 2022-23ನೇ ಸಾಲಿನಲ್ಲಿಯೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿರುವುದಲ್ಲದೆ, ಸಕಾಲದಲ್ಲಿ ಪರಿಹಾರ ವಿತರಣೆಯನ್ನು ಖಾತರಿ ಪಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿಯೂ ಸಾಕಷ್ಟು ಅನುದಾನ ಲಭ್ಯವಿರುವಂತೆ ಎಚ್ಚರ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 650 ಕೋಟಿ ರೂ. ಲಭ್ಯವಿದ್ದು, ಹೆಚ್ಚುವರಿಯಾಗಿ 255 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ.
32. ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತವಾಗಿ ನಡೆಸಲು ಅನುವಾಗುವಂತೆ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ 4 ಎನ್.ಡಿ.ಆರ್.ಎಫ್. ತಂಡಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 4 ಎಸ್.ಡಿ.ಆರ್.ಎಫ್. ತಂಡಗಳನ್ನು ನಿಯೋಜಿಸಲಾಗಿದೆ. 
ರೈತರ ಅಭ್ಯುದಯ
33. ಬೆಳೆ ಸಾಲ ವಿತರಣೆಯ ಗುರಿ ಹೆಚ್ಚಿಸಲಾಗಿದ್ದು, 3 ಲಕ್ಷ ಹೊಸ ರೈತರಿಗೆ ಸಾಲ ಸೌಲಭ್ಯ ವಿಸ್ತರಿಸುವ ಗುರಿ ಹೊಂದಿದ್ದೇವೆ. ಇದಲ್ಲದೆ ರೈತರ ಬೇಡಿಕೆಯನ್ನು ಪುರಸ್ಕರಿಸಿ, ಯಶಸ್ವಿನಿ ಯೋಜನೆಯನ್ನು ಮರುಜಾರಿ ಗೊಳಿಸಲು ಕ್ರಮ ಕೈಗೊಂಡಿದ್ದೇವೆ.
34. ಹೈನುಗಾರಿಕೆಗೆ ಉತ್ತೇಜನ ನೀಡಲು ದೇಶದಲ್ಲಿಯೇ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಜೊತೆಗೆ ಪಶು ಆರೋಗ್ಯ ಕಾಪಾಡಲು, ಮನೆ ಬಾಗಿಲಿಗೇ ಚಿಕಿತ್ಸಾ ಸೌಲಭ್ಯ ಒದಗಿಸಲು ಸಂಚಾರಿ ಪಶುಚಿಕಿತ್ಸಾಲಯಗಳನ್ನು ಲೋಕಾರ್ಪಣೆ ಮಾಡಲಾಗಿದೆ.
35. ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ ನೀಡಲು ಮತ್ಸ್ಯ ಸಿರಿ ಯೋಜನೆ ರೂಪಿಸಲಾಗಿದೆ. ಅಂತೆಯೇ ಒಳನಾಡು ಮೀನುಗಾರಿಕೆಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.
36. ರೈತರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ದೇಶದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ 10.03 ಲಕ್ಷ  ಮಕ್ಕಳಿಗೆ 439.95 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ನೇಕಾರರು, ಮೀನುಗಾರರು ಹಾಗೂ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮಕ್ಕಳಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ. 

ಆರೋಗ್ಯ ಸೇವೆ
37. ಕೋವಿಡ್ ನಿರ್ವಹಣೆಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ತರಲಾಗಿದೆ. ಇದರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕ್ಯಾನ್ಸರ್, ಹೃದ್ರೋಗ ಚಿಕಿತ್ಸೆಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆ ಮೂಲಕ ಜನರಿಗೆ ತಮ್ಮ ಊರಿನ ಸಮೀಪದಲ್ಲಿಯೇ ಅತ್ಯುತ್ತಮ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ದೊರಕಿಸುವ ಆಶಯ ನಮ್ಮ ಸರ್ಕಾರದ್ದಾಗಿದೆ.
38. ಇದರೊಂದಿಗೆ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಲ್ಲಿ 71 ಕೇಂದ್ರಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ ಎಂಬುದು ಗಮನಾರ್ಹ ಸಂಗತಿ. 
39. ಆರೋಗ್ಯವಂತ ಮಕ್ಕಳು ನಾಡಿನ ಆಸ್ತಿ. ಈ ಹಿನ್ನೆಲೆಯಲ್ಲಿ ಅಪೌಷ್ಟಿಕತೆ ನಿವಾರಣೆಗೆ ನಮ್ಮ ಸರ್ಕಾರ ಕೆಲವು ಮಹತ್ವಪೂರ್ಣ ಉಪಕ್ರಮಗಳನ್ನು ಕೈಗೊಂಡಿದೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ವಿಸ್ತರಿಸಲಾಗುತ್ತಿದೆ. ಇದಲ್ಲದೆ, ಪೌಷ್ಟಿಕತೆ ವೃದ್ಧಿಗೆ ರಾಜ್ಯದ 14 ಜಿಲ್ಲೆಗಳಲ್ಲಿ ಪಡಿತರದಲ್ಲಿ ಸಾರವರ್ಧಕ ಅಕ್ಕಿ (ಈoಡಿಣiಜಿieಜ ಖiಛಿe) ವಿತರಿಸಲಾಗುತ್ತಿದೆ.

ಶಿಕ್ಷಣವೇ ಶಕ್ತಿ
40. ನಾಡಿನ ಮಕ್ಕಳಿಗೆ ಉಜ್ವಲ ಭವಿಷ್ಯ ಕಲ್ಪಿಸಲು ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ. ಇದರನ್ವಯ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ, ಬಹುಶಿಸ್ತೀಯ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಾಲಾ ಪೂರ್ವ ಶಿಕ್ಷಣದ ಪಠ್ಯಕ್ರಮ ರೂಪಿಸಲು ಸಹ ಕ್ರಮ ಕೈಗೊಳ್ಳಲಾಗಿದೆ.
41. ಇದರೊಂದಿಗೆ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 1412 ಕೋಟಿ ರೂ. ವೆಚ್ಚದಲ್ಲಿ 8101 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. 
42. ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 5 ಸಾವಿರ ಶಿಕ್ಷಕರ ನೇಮಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗಲಿದೆ ಎನ್ನುವುದು ಗಮನಾರ್ಹ.
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು
43. ಆರೋಗ್ಯ, ಶಿಕ್ಷಣ ಹಾಗೂ ಪೌಷ್ಟಿಕತೆಯ ಅಂಶಗಳಲ್ಲಿ ಹಿಂದುಳಿದಿರುವ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳು ಎಂದು ಗುರುತಿಸಿ, ಈ ಕ್ಷೇತ್ರಗಳಲ್ಲಿ ಫಲಿತಾಂಶ ಆಧಾರಿತ ಪ್ರಯತ್ನಗಳನ್ನು ನಡೆಸಲು ಮುಂದಾಗಿದ್ದೇವೆ. ದೇಶದಲ್ಲಿಯೇ ಮೊದಲ ಬಾರಿ ನಮ್ಮ ರಾಜ್ಯದಲ್ಲಿ ಇಂತಹ ಪ್ರಯತ್ನ ನಡೆದಿದೆ.
44. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 2021-22ನೇ ಸಾಲಿನಲ್ಲಿ ನಿಗದಿ ಪಡಿಸಲಾದ ಸಂಪೂರ್ಣ ಅನುದಾನ ಬಿಡುಗಡೆ ಮಾಡಲಾಗಿದೆ. ಜೊತೆಗೆ, ಹಿಂದೆ ಭರವಸೆ ನೀಡಿರುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅನುದಾನ ದ್ವಿಗುಣಗೊಳಿಸಿ, 3000 ಕೋಟಿ ರೂ. ಒದಗಿಸಲಾಗಿದೆ.
ಜನಸಂಖ್ಯೆ- ಮಾನವ ಸಂಪನ್ಮೂಲ
45. ದಶಕದ ಹಿಂದೆ ‘ಜನಸಂಖ್ಯೆ ನಮ್ಮ ದೇಶಕ್ಕಂಟಿದ ಶಾಪ’ ಎಂಬ ನಕಾರಾತ್ಮಕ ಭಾವನೆ ವ್ಯಾಪಕವಾಗಿತ್ತು. ಆದರೆ ಸವಾಲುಗಳನ್ನೂ ಅವಕಾಶವಾಗಿ ಪರಿವರ್ತಿಸಬೇಕೆಂಬ ನಿಲುವಿನp ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶದ ಯುವಕರನ್ನೇ ರಾಷ್ಟ್ರ ನಿರ್ಮಾಣದ ಶಕ್ತಿಯಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಜನಸಂಖ್ಯೆ ಕೇವಲ ಅಂಕೆ-ಸಂಖ್ಯೆಯಲ್ಲ; ಮಾನವ ಸಂಪನ್ಮೂಲ ಎಂದು ಸಾಬೀತು ಪಡಿಸಿದರು.
46. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಮಹತ್ವದ ಹೆಜ್ಜೆಗಳನ್ನಿಟ್ಟಿದ್ದೇವೆ. ಟಾಟಾ ಟೆಕ್ನಾಲಜೀಸ್ ಸಹಯೋಗದೊಂದಿಗೆ 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಈ ಸಂಸ್ಥೆಗಳು ಇಂಡಸ್ಟ್ರಿ 4.0 ಕ್ಕೆ ಸಿದ್ಧ ಮಾನವ ಸಂಪನ್ಮೂಲ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. 
47. ಇದರೊಂದಿಗೆ ರಾಜ್ಯದ 6 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ) ಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. 
48. ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಹೆಸರಾಗಿರುವ ಕರ್ನಾಟಕದ ಹಿರಿಮೆ ಹೆಚ್ಚಿಸಲು ಈ ಉಪಕ್ರಮಗಳು ಮಹತ್ವ ಪೂರ್ಣ ಹೆಜ್ಜೆಗಳಾಗಿವೆ.
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ
49. ಯುವಕರಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಜೊತೆಗೆ, ಸ್ವಸಹಾಯ ಸಂಘಗಳ ಸ್ಥಾಪನೆಯ ಮೂಲಕ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿTV ತೊಡಗಿಸಿಕೊಂಡು, ಆರ್ಥಿಕ ಅಭಿವೃದ್ಧಿ ಹೊಂದಲು ನೆರವಾಗುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಸ್ವಸಹಾಯ ಸಂಘ ಸ್ಥಾಪಿಸಿ, ಅವರಿಗೆ ಬೀಜಧನ, ಸಾಲಸೌಲಭ್ಯ, ಮಾರುಕಟ್ಟೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 5 ಲಕ್ಷ ಯುವಕರಿಗೆ ಇದರಿಂದ ಅನುಕೂಲವಾಗಲಿದೆ.
50. ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಕಿರು ಉದ್ದಿಮೆ ಸ್ಥಾಪನೆಗೂ ನೆರವು ನೀಡಲಾಗುತ್ತಿದ್ದು, 3.9 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ಈ ಸ್ವಸಹಾಯ ಸಂಘಗಳಿಗೆ ನೆರವು ನೀಡಲು ಆಂಕರ್ ಬ್ಯಾಂಕ್‍ಗಳನ್ನು ಗುರುತಿಸಿ, ಸುಲಭವಾಗಿ ಸಾಲ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ.
ಸಮಸಮಾಜ ನಿರ್ಮಾಣಕ್ಕೆ 3 ಇ ಸೂತ್ರ
51. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಮಹಿಳೆಯರು, ಅಲ್ಪಸಂಖ್ಯಾತರು ಹೀಗೆ ಎಲ್ಲ ದುರ್ಬಲ ವರ್ಗಗಳ ಜನರು ಸ್ವಾಭಿಮಾನಿ, ಸ್ವಾವಲಂಬನೆಯ ಬದುಕು ನಡೆಸಲು ಪೂರಕ ವಾತಾವರಣ ನಿರ್ಮಾಣ ನಮ್ಮ ಆದ್ಯತೆಯಾಗಿದೆ. ಈ ಗುರಿ ಸಾಧನೆಗೆ ಶಿಕ್ಷಣ, ಉದ್ಯೋಗ, ಸಬಲೀಕರಣದ (ಇಜuಛಿಚಿಣioಟಿ, ಇmಠಿಟoಥಿmeಟಿಣ ಚಿಟಿಜ ಇmಠಿoತಿeಡಿmeಟಿಣ) 3 ಇ ಸೂತ್ರ ನಾವು ಕಂಡುಕೊಂಡ ಮಾರ್ಗ.
52. ಈ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ರಾಜ್ಯದ 5 ಶೈಕ್ಷಣಿಕ ಕೇಂದ್ರಗಳಲ್ಲಿ ಸಾವಿರ ಪ್ರವೇಶ ಸಾಮಥ್ರ್ಯದ ಪಂಡಿತ್ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯಗಳ ನಿರ್ಮಾಣ, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 100 ಅಂಬೇಡ್ಕರ್ ವಿದ್ಯಾರ್ಥಿ ನಿಲಯ, ಹಿಂದುಳಿದ ವರ್ಗಗಳಿಗೆ 50 ಕನಕದಾಸ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ವಿದ್ಯಾರ್ಥಿನಿಲಯಗಳಲ್ಲಿ ವ್ಯಕ್ತಿತ್ವ ವಿಕಸನ, ಸ್ಪೋಕನ್ ಇಂಗ್ಲಿಷ್ ಕೌಶಲ್ಯ, ಬಾಲಕಿಯರಿಗೆ ಆತ್ಮರಕ್ಷಣೆ ತರಬೇತಿ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಹಾಗೂ ಯಶಸ್ವಿ ಪ್ರಜೆಗಳಾಗಿ ಬದುಕಲು ಮಾರ್ಗದರ್ಶನ ನೀಡಲಾಗುತ್ತಿದೆ. 
53. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳ ವ್ಯಾಪ್ತಿಯ ವಿವಿಧ ನಿಗಮಗಳಿಗೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನದೊಂದಿಗೆ ಹೆಚ್ಚುವರಿಯಾಗಿ 857.50 ಕೋಟಿ ರೂ. ಒದಗಿಸಲಾಗಿದೆ.
54. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಮೀನು ಒದಗಿಸುವ ಭೂಚೇತನ ಯೋಜನೆಯ ಘಟಕ ವೆಚ್ಚÀ 20 ಲಕ್ಷ ರೂ. ಗಳಿಗೆ ಹೆಚ್ಚಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಕುಟುಂಬಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ತಿನ ಪ್ರಮಾಣ 75 ಯುನಿಟ್‍ಗಳಿಗೆ ಹೆಚ್ಚಳ, ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೀಡಲಾಗುತ್ತಿದ್ದ ನೆರವಿನ ಮೊತ್ತ ಒಂದು ಲಕ್ಷ ರೂ. ಗಳಿಗೆ ಹೆಚ್ಚಳ ಹಾಗೂ ವಸತಿ ಯೋಜನೆಗಳಡಿ ನೀಡುವ ಸಹಾಯಧನÀ 2 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡುವ ಮೂಲಕ ಅವರ ಬದುಕನ್ನು ಇನ್ನಷ್ಟು ಉತ್ತಮ ಪಡಿಸಲು ನೆರವಾಗಿದ್ದೇವೆ.
55. ರಾಜ್ಯದಲ್ಲಿರುವ ಶ್ರಮಿಕ ವರ್ಗದವರ ಉನ್ನತಿಗಾಗಿಯೂ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ಅನುಕೂಲಕ್ಕಾಗಿ ಸಂಚಾರಿ ಚಿಕಿತ್ಸಾಲಯಗಳನ್ನು ಒದಗಿಸಿರುವುದಲ್ಲದೆ, ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾರ್ಥಿ ವೇತನ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 2.97 ಲಕ್ಷ ಮಕ್ಕಳಿಗೆ 462.12 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ.
56. ಸರ್ಕಾರ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಬಿಸಿಯೂಟ ತಯಾರಕರ ಗೌರವಧನ ಹೆಚ್ಚಿಸಿ, ಅವರ ಕೊಡುಗೆಯನ್ನು ಗುರುತಿಸಿದ್ದೇವೆ.
57. ಇದರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಅಪಾಯಕಾರಿ ಸನ್ನಿವೇಶಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೂ ಮಾಸಿಕ 2 ಸಾವಿರ ರೂ. ಗಳ ಅಪಾಯ ಭತ್ಯೆ ನೀಡಲಾಗುತ್ತಿದೆ.
58. ರಾಜ್ಯದಲ್ಲಿ ಎಲ್ಲರಿಗೂ ವಸತಿ ಸೌಲಭ್ಯ ನೀಡುವ ಗುರಿ ತಲುಪಲು ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳಡಿ 1.03 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ರಾಜ್ಯದ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣದ ಹೊಸ ಗುರಿ ನಿಗದಿ ಪಡಿಸಲಾಗಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.  
ಉದ್ಯೋಗ ಸೃಜನೆ
59. ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಸೃಜಿಸುವ ಗುರಿಯೊಂದಿಗೆ ಬಂಡವಾಳ ಹೂಡಿಕೆ ಆಕರ್ಷಿಸಲು ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಕೋವಿಡ್ ಸಂದರ್ಭದಲ್ಲಿಯೂ ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈಗಲೂ ಈ ಮುಂಚೂಣಿಯನ್ನು ರಾಜ್ಯ ಕಾಯ್ದುಕೊಂಡಿದೆ. ನಾವೀನ್ಯತೆಯಲ್ಲಿ, ಸ್ಟಾರ್ಟಪ್‍ಗಳ ರ್ಯಾಂಕಿಂಗ್‍ನಲ್ಲಿಯೂ ರಾಜ್ಯ ಅಗ್ರ ಸ್ಥಾನದಲ್ಲಿರುವುದು, ಕರ್ನಾಟಕದ ಉದ್ಯಮ ಸ್ನೇಹಿ ವಾತಾವರಣಕ್ಕೆ ಹಿಡಿದ ಕೈಗನ್ನಡಿ.
60. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 40,577 ಕೋಟಿ ರೂ. ಹೂಡಿಕೆಯ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ 1.64 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
61. ಇದಲ್ಲದೆ, 1.31 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ ಮಾಡಲಾಗಿದ್ದು, ಹೈಡ್ರೋಜನ್ ನಿಂದ ವಿದ್ಯುತ್ ಉತ್ಪಾದನೆ, ಸೆಮಿ-ಕಂಡಕ್ಟರ್ ಚಿಪ್ ತಯಾರಿಕೆ ಹೀಗೆ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ರಾಜ್ಯ ನೆಲೆಯಾಗುತ್ತಿರುವುದು ಹೆಮ್ಮೆಯ ವಿಷಯ.
62. ಹೆಚ್ಚು ಉದ್ಯೋಗ ನೀಡುವ ಉದ್ಯಮಿಗಳಿಗೆ ವಿಶೇಷ ಪ್ರೋತ್ಸಾಹಕ ನೀಡುವ ಹಾಗೂ ಉದ್ಯಮಗಳಿಗೆ ಅಗತ್ಯ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲ ಒದಗಿಸುವ ಮೂಲಕ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲ ಸೃಜನೆ ಮಾಡಲು ನಮ್ಮ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ರೂಪಿಸಿ ಜಾರಿಗೆ ತರುತ್ತಿದೆ.
63. ಅಂತೆಯೇ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ರೂಪಿಸಲು, ಗ್ಯಾರೇಜಿನಿಂದ ಬೃಹತ್ ಸಂಸ್ಥೆಗಳ ವರೆಗೆ ಎಲ್ಲ ಹಂತದಲ್ಲಿಯೂ ನಡೆಯುವ ಸಂಶೋಧನೆಗಳ ಪ್ರಮಾಣೀಕರಣ ಮತ್ತಿತರ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಡೆಸಲು ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ರೂಪಿಸಲಾಗಿದೆ.
64. ರಾಜ್ಯದಲ್ಲಿ ಕೈಗಾರಿಕೆ, ವ್ಯಾಪಾರ, ರಫ್ತು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ವಿಮಾನ ನಿಲ್ದಾಣ, ರೈಲು ಹಾಗೂ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶಿವಮೊಗ್ಗ, ವಿಜಯಪುರ, ಹಾಸನ ವಿಮಾನ ನಿಲ್ದಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾರವಾರ ನೌಕಾಪಡೆಯ ರಕ್ಷಣಾ ವಿಮಾನ ನಿಲ್ದಾಣದಲ್ಲಿ ಸಿವಿಲ್ ಎನ್‍ಕ್ಲೇವ್ ಹಾಗೂ ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ ಹಾಗೂ ರನ್ ವೇ ವಿಸ್ತರಿಸಲು ಭೂಸ್ವಾಧೀನಕ್ಕೆ 50 ಕೋಟಿ ರೂ ಬಿಡುಗಡೆ ಮಾಡಲಾಗಿದೆ. 
65. ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಸೇರಿದಂತೆ 5 ನೂತನ ರೈಲು ಮಾರ್ಗ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
66. ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಉಪನಗರ ವರ್ತುಲ ರಸ್ತೆ ಯೋಜನೆಗೆ ಚಾಲನೆ ನೀಡಲಾಗಿದೆ. ಉಪನಗರ ರೈಲು ಯೋಜನೆಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರು ಮೆಟ್ರೋ ಯೋಜನೆಯ ಎರಡನೇ ಹಂತದ ಎಲ್ಲ ಮಾರ್ಗಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
67. ಗ್ರಾಮೀಣ ಪ್ರದೇಶಗಳಲ್ಲಿ “ಮನೆ ಮನೆಗೆ ಗಂಗೆ” ಎಂಬ ಹೆಸರಿನಲ್ಲಿ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ 52.78 ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 22.85 ಲಕ್ಷ ಮನೆಗಳಿಗೆ ನಳ ಸಂಪರ್ಕ ನೀಡಲಾಗಿದೆ. ರಾಜ್ಯದ ಎಲ್ಲ ಮನೆಗಳಿಗೆ ನಳ ಸಂಪರ್ಕ ಒದಗಿಸುವ ಗುರಿ ತಲುಪಲು ಆತ್ಯಾದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.
ಜನರಿಗೆ ಸೌಲಭ್ಯಗಳ ನೇರ ವಿತರಣೆ
68. ಜನ ಹಿತಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವುದಷ್ಟೇ ಅಲ್ಲ, ಈ ಕಾರ್ಯಕ್ರಮಗಳನ್ನು, ಸೌಲಭ್ಯಗಳನ್ನು ಅರ್ಹರಿಗೆ ನೇರವಾಗಿ ತಲುಪಿಸುವುದೂ ಕೂಡ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಅಭಿವೃದ್ಧಿಯ ಚಿತ್ರಣ ಕೇವಲ ಕಾಗದದ ಮೇಲಿನ ಅಂಕಿ-ಅಂಶಗಳಿಗೆ ಸೀಮಿತವಾಗದೆ, ಮನೆ ಮನೆಯಲ್ಲಿಯೂ ಅದರ ಫಲ ಬಿಂಬಿತವಾಗಬೇಕೆನ್ನುವುದು ನಮ್ಮ ಆಶಯ. ಇದಕ್ಕಾಗಿಯೇ ಗ್ರಾಮ ಒನ್, ಜನಸೇವಕ, ಮನೆ ಬಾಗಿಲಿಗೆ ಮಾಸಾಶನ, ವಿವಿಧ ದಾಖಲೆಗಳನ್ನು ಪಡೆಯುವ ವ್ಯವಸ್ಥೆಗಳ ಸರಳೀಕರಣ, ಸಾರಿಗೆ ಇಲಾಖೆಯಲ್ಲಿ ಆನ್‍ಲೈನ್ ನಲ್ಲಿ ಸೇವೆಗಳ ಲಭ್ಯತೆ ಹೀಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದೇವೆ. 
69. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಮೊತ್ತ ಹೆಚ್ಚಳ ಮಾಡುವ ಮೂಲಕ ದುರ್ಬಲರಿಗೆ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದೇವೆ.
70. ಕರ್ನಾಟಕ ಸೌಹಾರ್ದತೆ, ಸಾಮರಸ್ಯಕ್ಕೆ ಹೆಸರಾದ ರಾಜ್ಯ. ದೇಶದಲ್ಲಿಯೇ ಅತ್ಯುತ್ತಮ ಪೊಲೀಸ್ ವ್ಯವಸ್ಥೆ ಹೊಂದಿರುವ ನಮ್ಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗೆ ಪೊಲೀಸರು ಕಟಿಬದ್ಧರಾಗಿದ್ದಾರೆ. ಈ ಸಾಮರಸ್ಯ ಕದಡುವ ಪ್ರಯತ್ನಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿದ್ದೇವೆ. ವಿಚ್ಛಿದ್ರಕಾರಿ ಶಕ್ತಿಗಳು ತಲೆಯೆತ್ತಲು ಇಲ್ಲಿ ಅವಕಾಶವಿಲ್ಲ.
71. ನೆಲ, ಜಲ, ಭಾಷೆಯ ವಿಚಾರದಲ್ಲಿ ನಾಡಿನ ಹಿತರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. 

ಹೊಸ ಯೋಜನೆಗಳ ಘೋಷಣೆ
72. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕಾಗಿ ಹಾಗೂ ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.
73. ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ. 100 ರಷ್ಟು ಶೌಚಾಲಯಗಳ ನಿರ್ಮಾಣವನ್ನು 250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಆ ಮೂಲಕ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ-ಆರೋಗ್ಯಕರ ವಾತಾವರಣ ನಿರ್ಮಿಸಲಾಗುವುದು.
74. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ  ತಲಾ 50 ಸಾವಿರ ರೂ. ಗಳ ವರೆಗೆ ಸಾಲ-ಸಹಾಯಧನ (ಐoಚಿಟಿ ಛಿum subsiಜಥಿ) ಯೋಜನೆಯನ್ನು ಜಾರಿಗೊಳಿಸಲಾಗುವುದು.
75. ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು.
76. ಇದಲ್ಲದೆ ಭೂ ರಹಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಆದ್ಯತೆಯಾಗಿರಿಸಿಕೊಂಡು, ಅಗತ್ಯವನ್ನಾಧರಿಸಿ, ರಾಜ್ಯದಲ್ಲಿ ಹೊಸದಾಗಿ 4050 ಅಂಗನವಾಡಿ ತೆರೆಯಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಶಾಲಾ ಪೂರ್ವ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುವುದು. 8100 ಮಹಿಳೆಯರಿಗೂ ಇದರಿಂದ ಉದ್ಯೋಗಾವಕಾಶ ದೊರೆಯಲಿದೆ.
77. ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತ ಪಟ್ಟರೆ, ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು.
78. ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶದ ಮುನ್ನಡೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಲ್ಲಿ ನಿಂತು ನಾವು ನಡೆದು ಬಂದ ದಾರಿಯನ್ನು ಅವಲೋಕಿಸುವುದರೊಂದಿಗೆ, ಮುಂದೆ ನಾವೇನು ಮಾಡಬೇಕು ಎಂಬುದನ್ನು ನಿರ್ಧರಿಸಲೂ ಇದು ಸಕಾಲ.  
79. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅಂತಿಮ ಗುರಿ, ಜನ ಹಿತ ಸಾಧನೆ. ಪ್ರಧಾನಿಯವರ ಇಚಿse oಜಿ ಐiviಟಿg ನ ಆಶಯ, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವಂತಾಗಬೇಕು. ಈ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಜನರ ಭಾಗೀದಾರಿಕೆ ಬಹು ಮುಖ್ಯ. ಜನರು ನಾಡಿನ ಅಭಿವೃದ್ಧಿಯಲ್ಲಿ ಭಾಗೀದಾರರಾದಾಗಲೇ ಅಭಿವೃದ್ಧಿಗೆ ವೇಗ ದೊರೆಯುವುದು.          ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಸಹಯೋಗದೊಂದಿಗೆ ಮುನ್ನಡೆಯುವ ಆಶಯ ನಮ್ಮದು. 
80. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ‘ಮನ್-ಕಿ-ಬಾತ್’ ಕಾರ್ಯಕ್ರಮದಲ್ಲಿ ಘೋಷಿಸಿದಂತೆ ಇಂದಿನಿಂದ ಅಮೃತ ಪರ್ವದ ಪ್ರಾರಂಭ. ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕಾರ್ಯ ನಿರ್ವಹಿಸೋಣ.
“ಭಾರತಾಂಬೆಯ ಹಿರಿಯ ಹೆಣ್ಮಗಳೆ, ದಾರಿ ತೋರುವ ಹಿರಿಯ ಸೊಡರೆ ಬಾಳಮ್ಮ, ಬಾಳು”
81. ಕವಿ ಬಿ.ಎಂ. ಶ್ರೀಕಂಠಯ್ಯನವರ ಆಶಯದಂತೆ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ದೇಶದ ಮುಂಚೂಣಿಯ ರಾಜ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಸದೃಢ ಭಾರತಕ್ಕಾಗಿ ಸಮೃದ್ಧ ಕರ್ನಾಟಕವನ್ನು ಕಟ್ಟುವ ಅಮೃತ ಸಂಕಲ್ಪವನ್ನು ಮಾಡೋಣ. ಮುಂದಿನ 25 ವರ್ಷಗಳಲ್ಲಿ ಅದನ್ನು ಸಾಕಾರಗೊಳಿಸೋಣ ಎಂದು ಆಶಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಮಸ್ಕಾರ.
ಜೈ ಹಿಂದ್, ಜೈ ಕರ್ನಾಟಕ
[15/08, 1:28 PM] Gurulingswami. Holimatha. Vv. Cm: *ದೇಶಕ್ಕೆ  ನಿಮ್ಮ ಶ್ರಮ, ಶ್ರದ್ಧೆ, ಅಭಿಮಾನ ಮುಖ್ಯ*: 

*ನಾಡಿನ*ಜನತೆಗೆ ಮುಖ್ಯಮಂತ್ರಿ* *ಬಸವರಾಜ ಬೊಮ್ಮಾಯಿ ಕರೆ*
ಬೆಂಗಳೂರು, ಆಗಸ್ಟ್ 15: ದೇಶಕ್ಕೆ ಜನತೆಯ ಶ್ರಮ, ಶ್ರದ್ಧೆ, ಅಭಿಮಾನ,  ಬೆವರಿನ ಹನಿ ಮುಖ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. 

ಅವರು ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 76 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. 

ದೇಶ ಮೊದಲು ಎನ್ನುವ ಭಾವನೆ ಇರಬೇಕು. ದೇಶ ಸ್ವಾಭಿಮಾನ ಸಂಕೇತ.  ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
 
*ಸಿಂಹಾವಲೋಕನ, ಆತ್ಮಾವಲೋಕನದ  ಅವಶ್ಯಕತೆ ಇದೆ*
ಎಪ್ಪತ್ತೈದು ವರ್ಷಗಳಾದ ಹಿನ್ನೆಲೆಯಲ್ಲಿ   ಹಿಂದಿರುಗಿ ನೋಡಬೇಕು. ನಡೆದು ಬಂದ ಈ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ  ಕೊರತೆಗಳ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ  ಅವಶ್ಯಕತೆ ಇದೆ. ದೇಶಕ್ಕೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದೇಶಕ್ಕೆ ಚರಿತ್ರೆ ಇದೆ. ಚಾರಿತ್ಯ ಬೇಕಾಗಿದೆ.  ಆಚಾರರಿದ್ದಾರೆ, ಬೇಕಾಗಿರುವುದು ಆಚರಣೆ, ಒಳ್ಳೆಯ ಆಚರಣೆ ದೇಶಕ್ಕೆ ಸದ್ಚಾರಿತ್ಯ ಕೊಡುತ್ತಿದೆ. .  ಮುಂದಾಲೋಚನೆಯಲ್ಲಿ ಈ ದೇಶಕ್ಕೆ ಒಂದು ದೃಷ್ಟಿಕೋನ ಇದೆ ಎಂದರು. 

*ಅಮೃತ ಕಾಲಕ್ಕೆ ಸಶಕ್ತ ಭಾರತ*
 ನೈಸರ್ಗಿಕವಾಗಿ ಸಂಪತ್ಭರಿತವಾದ ದೇಶ, ಶ್ರಮಜೀವಿಗಳ ದೇಶ ನಮ್ಮದು.  ಸರಿಯಾದ ದಿಕ್ಸೂಚಿ, ಗುರಿ,  ಛಲ ಅತ್ಯಂತ ಅವಶ್ಯಕವಿದೆ. ಈ ಅಮೃತಕಾಲದಲ್ಲಿ ಮೋದಿಯವರ ನಾಯಕತ್ವ ಇದೆ. ಎಂಟು ವರ್ಷದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಸ್ವಚ್ಛ ಭಾರತದ ಮೂಲಕ ಸ್ವಚ್ಛತೆಯ ಸಾಧನೆ ಮೋದಿಯವರು ಮಾಡಿದ್ದಾರೆ. ನಲವತ್ತು ಕೋಟಿ ಜನರಿಗೆ ಖಾತೆಗಳನ್ನು  ತೆರೆದು ಡಿಜಿಟಲ್ ವ್ಯವಹಾರ ಪ್ರಾರಂಭಿಸಿದ್ದಾರೆ. ದೇಶದ ಆರ್ಥಿಕತೆ, ಜಿಡಿಪಿ ಹೆಚ್ಚಾಗಿದೆ. ವಿದೇಶಿ ವಿನಿಮಯ ಹೆಚ್ಚಾಗಿ ದೇಶದ ರಕ್ಷಣೆಯಲ್ಲಿ ಆತ್ಮನಿರ್ಭರ್ ಆಗಿದೆ. ರಕ್ಷಣೆಯ ಸಾಮರ್ಥ್ಯವನ್ನು ರಫ್ತು ಮಾಡುತ್ತಿದ್ದೇವೆ. ಸ್ಟಾರ್ಟ್ ಅಪ್, ಯೂನಿಕಾರ್ನ್ ಪ್ರಾರಂಭವಾಗಿದೆ. ಸಶಕ್ತ ಭಾರತ ಹೊರಹೊಮ್ಮಿದೆ. ಅಮೃತ ಭಾರತಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ ಎಂದರು. 

ಅವರ ಈ ಪ್ರಯತ್ನದಲ್ಲಿ ಕರ್ನಾಟಕವೂ ಭದ್ರ ಬುನಾದಿ ಹಾಕಲು ಎಲ್ಲರ ಪ್ರಯತ್ನವೂ ಬೇಕು. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ , ಸಬ್ ಕಾ ಪ್ರಯಾಸ್ ಎಂಬ ತತ್ವ ಆಧರಿಸಿ ಮುನ್ನಡೆಯಬೇಕು. ಕರ್ನಾಟಕ ವಿಶಿಷ್ಟ  ರಾಜ್ಯ.  ಕೃಷಿಯಲ್ಲಿ ಅತಿಹೆಚ್ಚು ಉತ್ಪಾದನೆ,   ಅತಿ ಹೆಚ್ಚು ಸ್ಟಾರ್ಟ್ ಅಪ್, ಯೂನಿಕಾರ್ನ್ ,ಡೆಕಾಕಾರ್ನ್ ಇಲ್ಲಿವೆ. ತಂತ್ರಜ್ಞಾನದಲ್ಲಿ ಕರ್ನಾಟಕ ನಂ.1 ಇದೆ. ನಮ್ಮ ರಾಜ್ಯದ ಒಟ್ಟು ತಲಾವಾರು ಆದಾಯ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.9 ರಷ್ಟು ಬೆಳೆಯುತ್ತಿದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದ ರಾಜ್ಯ ನಮ್ಮದು.  ನಮ್ಮ ಸರ್ಕಾರ ಕೋವಿಡ್ ನಲ್ಲಿ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಿರ್ವಹಿಸಿ ಮುನ್ನಡೆಯುತ್ತಿದ್ದೇವೆ. ವೈದ್ಯರು ಆಶಾ ಕಾರ್ಯಕರ್ತರು, ನರ್ಸುಗಳು, ಪೊಲೀಸ್,  ಸರ್ಕಾರಿ ನೌಕರರು ಕೋವಿಡ್ ಸಂದರ್ಭದಲ್ಲಿ   ಅವರ  ಶ್ಲಾಘನೀಯ ಕಾರ್ಯ ಮಾಡಿದ್ದಾರೆ.  ಒಂದು ಜನಾಂಗವನ್ನು ಉಳಿಸುವ ಕಾರ್ಯ ನಡೆದಿದೆ. ರಾಜ್ಯದಲ್ಲಿ  ಎಂಟು ಕೋಟಿ ಲಸಿಕೆ ನೀಡಲಾಗಿದೆ ಎಂದರು. 

*ಹಲವು ಕ್ಷೇತ್ರಗಳಲ್ಲಿ ರಾಜ್ಯ ನಂಬರ್ 1*

ಸರ್ಕಾರ ಕೋವಿಡ್ ನಿಂದಾದ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಿ ಸುಮಾರು ಹದಿನೈದು  ಸಾವಿರ ಕೋಟಿ ಅಧಿಕ ಆದಾಯವನ್ನು  ರಾಜ್ಯಕ್ಕೆ ತಂದಿದೆ.  ಅಮೃತ ಯೋಜನೆಗಳನ್ನು ಕಳೆದ ಬಾರಿ ಘೋಷಣೆ ಮಾಡಲಾಯಿತು. ಒಂದು ವರ್ಷದಲ್ಲಿ ಅವುಗಳನ್ನು ನಾವು ಮಾಡಿ ಪೂರೈಸಿದ್ದೇವೆ. ಅಮೃತ ಯೋಜನೆಯಡಿಯಲ್ಲಿ    750 ಗ್ರಾಮ ಪಂಚಾಯತಿ ಅಭಿವೃದ್ಧಿಗೆ  25 ಲಕ್ಷ ರೂ.ಶಾಲೆಗಳ ಅಭಿವೃದ್ಧಿ, ಎಪ್ಪತ್ತೈದು ಸಾವಿರ ಯುವಕರಿಗೆ  ಕೌಶಲ್ಯಾಭಿವೃದ್ಧಿ ಒದಗಿಸಲಾಗಿದೆ ಎಂದರು. 

ಅಮೃತ ಮಹೋತ್ಸವದ ನಮ್ಮ ಕೆಲಸ ಮುಂದಿನ ದಿನಗಳಿಗೆ ಸ್ಪೂರ್ತಿ. ಈ ವರ್ಷ  ಭರಸೆಯ ಬಜೆಟ್ ಮಂಡಿ ಸಲಾಗಿದೆ.  ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕದ   8101 ಶಾಲಾ ಕೊಠಡಿಗಳು ಈ  ವರ್ಷವೇ ಪೂರ್ಣಗೊಳ್ಳಲಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಿಹೆಚ್ ಸಿ ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.  ಪೌಷ್ಟಿಕ ಆಹಾರಕ್ಕೆ ಒತ್ತು ನೀಡಿದೆ.  ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಹಣಕಾಸು, ಮಾರುಕಟ್ಟೆ ಸೌಲಭ್ಯ,  4 ಲಕ್ಷ ಮಹಿಳೆಯರಿಗೆ ಉದ್ಯೋಗ  ನೀಡಿದ್ದೇವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಯುವಕರಿಗೆ ಸುಮಾರು 5 ಲಕ್ಷ ಕೈಗಳಿಗೆ ಕೆಲಸವನ್ನು 1.5 ಲಕ್ಷ , ಹತ್ತು ಲಕ್ಷ ರೂ.ಗಳ ಯೋಜನೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮೂಲಕ ಇವರಿಗೆ ಬೆಂಬಲ ನೀಡಿದರೆ ನಾಡಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಆರ್ಥಿಕತೆ ಎಂದರೆ ದುಡ್ಡಲ್ಲ, ಜನರ ದುಡಿಮೆ ಎಂದು ಅರಿತಿದ್ದೇವೆ.   ಹತ್ತು ಲಕ್ಷ ರೈತರ ಮಕ್ಕಳಿಗೆ 430 ಕೋಟಿ ರೂ. ರೈತ ವಿದ್ಯಾನಿಧಿ ಮೂಲಕ ವಿತರಿಸಲಾಗಿದೆ.  ಕಾರ್ಮಿಕರಿಗೆ, ದೀನದಲಿತರರಿಗೆ ಸ್ವಯಂ ಉದ್ಯೋಗ ಯೋಜನೆ, ಹಿಂದುಳಿದ ವರ್ಗದವರಿಗೆ ಕನಕದಾಸ ವಿದ್ಯಾರ್ಥಿನಿಲಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ'  ಸಾವಿರ ಕೊಠಡಿಗಳ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದರು. 

 ರೈತರಿಗೆ ಯಶಸ್ವಿನಿ, ಕ್ಷೀರಸಮೃದ್ಧಿ ಬ್ಯಾಂಕ್, ಮೂವತ್ತು ಲಕ್ಷ ರೈತರಿಗೆ ಸಾಲ. 3 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯ ಹೆದ್ದಾರಿ, ರೈಲ್ವೆ ಮಾರ್ಗ, ಬಂದರು,  ಮೂಲಸೌಲಭ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ. 

 ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕಣ್ಣು ತಪಾಸಣೆ ಮಾಡಿ ಕನ್ನಡಕ ನೀಡುವ  ಮೂಲಕ ಕಟ್ಟಕಡೆಯ ವ್ಯಕ್ತಿಗೂ ದೃಷ್ಟಿ ನೀಡುವ ಕೆಲಸ ಪ್ರಾರಂಭಗೊಂಡಿದೆ.  ಆಸಿಡ್ ದಾಳಿಗೆ ತುತ್ತಾದವರಿಗೆ ಮೂರರಿಂದ ಹತ್ತು ಸಾವಿರ ರೂ.ಗಳ ಹೆಚ್ಚಳ,  ಪೌರಕಾರ್ಮಿಕರ ಗೌರವಧನ  ಹೆಚ್ಚಿಸಿದೆ.   ಕಳೆದ ವರ್ಷ, ಅತಿ ವೃಷ್ಟಿ ಹಾಗೂ ಪ್ರವಾಹದಿಂದ , ಮನೆ ಕಳೆದುಕೊಂಡಿರುವವರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಿಗಿಂತ ಹೆಚ್ವಿನ ಪರಿಹಾರ ನೀಡಿದೆ  ಎಂದರು. 

 *ಅಭಿವೃದ್ಧಿಗೆ ಮೂರು 'ಇ' ಗಳು*

ನಾಡಿನ ಅಭಿವೃದ್ಧಿಗೆ 3 ಇ ಗಳು-  ಈಸ್ ಆಫ್ ಲಿವಿಂಗ್, ಈಸ್ ಆಫ್  ಡೂಯಿಂಗ್ ಬಿಸಿನೆಸ್, ಈಸ್ ಆಫ್ ಅಪ್ ಬ್ರಿಂಗಿಂಗ್  ಗಳನ್ನು ಆಧಾರಿಸಿದ್ದೇವೆ.  ಹಾಗೂ   ದೀನದಲಿತರನ್ನು ಸಶಕ್ತಗೊಳಿಸಲು 3 ಇಗಳು,-  ಶಿಕ್ಷಣ, ಉದ್ಯೋಗ , ಸಬಲೀಕರಣದ ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ.  

 ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದು, ಇದಕ್ಕೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಕೊಡುಗೆ ನೀಡುವ ವಿಶ್ವಾಸವಿದೆ. ನಮ್ಮಲ್ಲಿ ಸಂಕಲ್ಪ, ಛಲ. ದೂರದೃಷ್ಟಿ ಇದೆ.  ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಲಾಗುತ್ತಿದೆ. 6 ಇಂಜಿನಿಯರ್ ಕಾಲೇಜುಗಳನ್ನು ಐಐಟಿ ಮಾದರಿಯ ಕಾಲೇಜುಗಳನ್ನಾಗಿ ಮಾಡಲಾಗುತ್ತಿದೆ, 5 ಹೊಸ ಅಂತರರಾಷ್ಟ್ರೀಯ ಮಟ್ಟದ ನಗರಗಳನ್ನು ಕಟ್ಟುತ್ತಿದ್ದೇವೆ. ನೀರಾವರಿ ಯೋಜನೆಗಳನ್ನು ಸಮಯದಲ್ಲಿ ಪೂರ್ಣ ಮಾಡಿ, ರಾಜ್ಯದ ಪ್ರತಿಯೊಂದು ಹನಿ ನೀರನ್ನು ಸಮಪರ್ಕವಾಗಿ ಬಳಸಲು ಸಂಕಲ್ಪ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರಾವರಿಯಲ್ಲಿ ಕ್ಷಮತೆ ಕಾಯ್ದುಕೊಳ್ಳಲಾಗಿದೆ ಎಂದರು. 

*ಸುದೀರ್ಘ  ಅನುಭವದ ರಾಷ್ಟ್ರ*

ಒಬ್ಬ ವ್ಯಕ್ತಿಯ ಜೀವನದಲ್ಲಿ ಎಪ್ಪತ್ತೈದು ವರ್ಷವಾದರೆ ಅದು  ಹಿರಿಯ ವಯಸ್ಸು.  ದೇಶವೊಂದಕ್ಕೆ 75 ವರ್ಷಗಳಾದರೆ,  ಅದು  ಅನುಭವ ಇರುವ ಯೌವನದ ವಯಸ್ಸು.  75 ವರ್ಷದ ಅನುಭವ ,ಮುಂದಿನ ನಡೆಯ ಬೇಕಾಗಿರುವ ದಾರಿಯ ಕುರಿತು  ದಿಕ್ಸೂಚಿ ಹಾಕಿಕೊಳ್ಳಲು ಅಮೃತ ಕಾಲ. ದೇಹ ಮನಸ್ಸು ಎಲ್ಲಿ ಒಂದು ಕಡೆ ಇರುವುದೋ ಅದು ಅಮೃತ ಘಳಿಗೆ. ಈಗ ಅಮೃತ ಘಳಿಗೆ ಬಂದಿದೆ ಎಂದರು. 


 ಈ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಹಲವಾರು ಅನಾಮಧೇಯರು ಹೋರಾಟ, ಸತ್ಯಾಗ್ರಹಗಳನ್ನು ಮಾಡಿದ್ದಾರೆ.  ಹಲವು ಹೋರಾಟಗಾರರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಬ್ರಿಟೀಷರ ಗುಂಡಿಗೆ ಬಲಿಯಾಗಿದ್ದಾರೆ.  ಆಸ್ತಿ ಪಸ್ತಿ ಕಳೆದುಕೊಂಡಿದ್ದಾರೆ.   ರೈತರು ಕರ ನಿರಾಕರಣೆಯ ಚಳವಳಿ,  ಬಾರ್ದೋಲಿ,  ಇಂಡಿಗೋ ಸತ್ಯಾಗ್ರಹ, ದಕ್ಷಿಣ ಭಾರತದಲ್ಲಿ , ಡೆಕ್ಕನ್ ಸತ್ಯಾಗ್ರಹ,  ಹೀಗೆ ರೈತ ಚಳವಳಿಯು ಮುಂಚೂಣಿಯಲ್ಲಿದ್ದಾಗ ನಮ್ಮ ಸಿಪಾಯಿ ದಂಗೆಯೂ ಕೂಡ ಇದಕ್ಕೆ ಪೂರಕವಾಗಿತ್ತು. ತದನಂತರದ ಘಟನೆಗಳ    ಪರಿಣಾಮವಾಗಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ತಂಡದವರಿಂದ ಇಡೀ ಭಾರತ ಜಾಗೃತಗೊಂಡಿತ್ತು. ನಂತರ ಮೂಲ ತಾತ್ವಿಕ ನಿಲುವನ್ನು ' ಸ್ವತಂತ್ರ ನನ್ನ ಜನ್ಮ ಸಿದ್ದ ಹಕ್ಕು' ಎಂದ  ಬಾಲಗಂಗಾಧರ ತಿಲಕ್ ಅವರಿಂದ ವೀರ್ ಸರ್ವಾಕರ್, ತತ್ಯಾ ಟೋಪಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಅವರುಗಳು  ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು ಎಂದರು.
 
*ಕರ್ನಾಟಕದ ಕೊಡುಗೆ*
 ಇವೆಲ್ಲಕ್ಕೂ ಮುನ್ನ 1824 ರಲ್ಲಿ ಮೊದಲ ಸಿಪಾಯಿ ದಂಗೆ, ಕನ್ನಡ ನಾಡಿನ ವೀರ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಮೊದಲು ಸಡ್ಡು ಹೊಡೆದಿದ್ದು, ಬ್ರಿಟೀಷ್ ಕಮೀಷನರ್ ಥ್ಯಾಕರೆಯನ್ನು  ಯುದ್ಧದಲ್ಲಿ ಮಾರಣಹೋಮವನ್ನು ಮಾಡಿ, ಇಡೀ ದೇಶಕ್ಕೆ ನಮ್ಮ ಸಣ್ಣ ರಾಜ್ಯ ಬ್ರಿಟಿಷ್ ರನ್ನು ಸಹ ಸೋಲಿಸಬಹುದು ಎಂದು ತೋರಿಸಿಕೊಟ್ಟರು ಎಂದರು. 

*ದೇಶ ಕಟ್ಟಿದ ಎಲ್ಲರಿಗೂ ನಮನಗಳು*
 ದೇಶ ಕಟ್ಟಲು ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳು, ಆಹಾರ ಭದ್ರತೆ ನೀಡಿದ ರೈತರು,  ಗಡಿ ಕಾಯುವ  ಸೈನಿಕರು ದೇಶದ ಆಂತರಿಕ ಭದ್ರತೆ ಕಾಪಾಡುತ್ತಿರುವ ಪೊಲೀಸ್ ಪಡೆ,   ಶಿಕ್ಷಕರು , ವಿಜ್ಞಾನಿಗಳು, ಇಂಜಿನಿಯರ್ ಗಳು, ವೈದ್ಯರು , ಕೈಗಾರಿಕೆಗಳು, ಕೂಲಿ ಕಾರ್ಮಿಕರು, ದೀನ ದಲಿತರು ಸೇರಿದಂತೆ  ಈ ದೇಶವನ್ನು ಕಟ್ಟಲು ತಮ್ಮ ಕೊಡುಗೆ  ನೀಡಿರುವ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
[15/08, 1:36 PM] Gurulingswami. Holimatha. Vv. Cm: 76 ನೇ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯ ಮಂತ್ರಿಗಳಿಂದ ನೂತನ ಯೋಜನೆಗಳ ಘೋಷಣೆಗಳು

*ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ*: *ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಆಗಸ್ಟ್ 15: 
ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತ ಪಟ್ಟರೆ, ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 76 ನೇ  ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ನೆರೆವರಿಸಿ ಮಾತನಾಡಿದರು. 

*ಹೊಸ ಯೋಜನೆಗಳ ಘೋಷಣೆಗಳು*
1. ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕಾಗಿ ಹಾಗೂ ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು. 

2.ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ. ೧೦೦ ರಷ್ಟು ಶೌಚಾಲಯಗಳ ನಿರ್ಮಾಣವನ್ನು ೨೫೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಆ ಮೂಲಕ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ-ಆರೋಗ್ಯಕರ ವಾತಾವರಣ ನಿರ್ಮಿಸಲಾಗುವುದು.

3. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ  ತಲಾ ೫೦ ಸಾವಿರ ರೂ. ಗಳ ವರೆಗೆ ಸಾಲ-ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗುವುದು.

4. ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು.

5. ಇದಲ್ಲದೆ ಭೂ ರಹಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಆದ್ಯತೆಯಾಗಿರಿಸಿಕೊಂಡು, ಅಗತ್ಯವನ್ನಾಧರಿಸಿ, ರಾಜ್ಯದಲ್ಲಿ ಹೊಸದಾಗಿ ೪೦೫೦ ಅಂಗನವಾಡಿ ತೆರೆಯಲಾಗುವುದು. ಆ ಮೂಲಕ ೧೬ ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಶಾಲಾ ಪೂರ್ವ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುವುದು. ೮೧೦೦ ಮಹಿಳೆಯರಿಗೂ ಇದರಿಂದ ಉದ್ಯೋಗಾವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
[15/08, 2:05 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ದೇಶದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮರ್ಥ ಭಾರತ - ಅಮೃತ ಭಾರತಿಗೆ ಕರುನಾಡ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ, ಮಾಜಿ ಸಿಎಂ ಸದಾನಂದ ಗೌಡ, ಸಚಿವರಾದ ಆರ್ ಅಶೋಕ,  ಡಾ. ಅಶ್ವಥ ನಾರಾಯಣ,   ಸಂಸದರಾದ ಪಿ ಸಿ ಮೋಹನ್, ಲೆಹರ ಸಿಂಗ್, ಶಾಸಕರಾದ ಸುರೇಶ ಕುಮಾರ, ಅರವಿಂದ ಲಿಂಬಾವಳಿ,  ಸತೀಶ ರೆಡ್ಡಿ, ಕೃಷ್ಣಪ್ಪ, ಉದಯ ಗರುಡಾಚಾರ್, ಎನ್ ರವಿಕುಮಾರ, ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಮಂಜುನಾಥ ಉಪಸ್ಥಿತರಿದ್ದರು.
[15/08, 3:48 PM] Gurulingswami. Holimatha. Vv. Cm: *ಸೆಪ್ಟೆಂಬರ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಮಿಲಟರಿ ಶಾಲೆ ಪ್ರಾರಂಭ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಆಗಸ್ಟ್ 15 :

 ಸಂಗೊಳ್ಳಿ ರಾಯಣ್ಣ ಹೆಸರಿನ ಶಾಲೆ ಯನ್ನು ಮಿಲಟರಿ ಶಾಲೆಯಾಗಿ ಪರಿವರ್ತಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಮಿಲಟರಿ ಶಾಲೆ ಉದ್ಘಾಟನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225ನೇ ಜಯಂತೋತ್ಸವ  ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಈ ಶಾಲೆಯ ಪೀಠೋಪಕರಣ ಹಾಗೂ ಇತರ ಸೌಲಭ್ಯಗಳಿಗಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅದಕ್ಕೆ ಬೇಕಾದ 180 ಕೋಟಿ ರೂ.ಗಳನ್ನು ಹಿಂದಿದ್ದ ಮತ್ತು ಈಗಿನ ಸರ್ಕಾರ ವೆಚ್ಚ ಮಾಡಿದೆ. ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ನಂದಗಢದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದರು.

*ಕನ್ನಡಕ್ಕಾಗಿ ಹೋರಾಟ ಹಾಗೂ ರೈತ ಹೋರಾಟ ಸ್ಮರಣಾರ್ಥ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ :*

ಸ್ವಾತಂತ್ರ್ಯಾನಂತರದ ಹೋರಾಟಗಾರರನ್ನೂ ನಾವು ಮರೆಯಬಾರದು. ಕನ್ನಡ ನಾಡನ್ನು ಕಟ್ಟಲು, ಭಾಷೆ ಸಂಸ್ಕೃತಿಗಳನ್ನು ಉಳಿಸಲು ಹತ್ತು ಹಲವು ಹೋರಾಟಗಳಾಗಿವೆ. ಕರ್ನಾಟಕ ಏಕೀಕರಣ ಹೋರಾಟ,ಕರ್ನಾಟಕವನ್ನು ಒಗ್ಗೂಡಿಸಲು ಹೋರಾಟ, ಗಡಿಭಾಗಗಳಿಗೆ ಹೋರಾಟ , ಇವೆಲ್ಲವನ್ನೂ ನಾವು ಸ್ಮರಿಸಬೇಕಿದೆ.  ಕನ್ನಡಕ್ಕಾಗಿ  ಕನ್ನಡಿಗರ ಹೋರಾಟ ಮತ್ತು ರೈತರ ಹೋರಾಟದ ಸ್ಮರಣೆ  ಬೆಂಗಳೂರಿನ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಕನ್ನಡಪರ ಹಾಗೂ ರೈತಸಂಘಗಳ ಮಾರ್ಗದರ್ಶನ ಪಡೆಯಲಾಗುವುದು. ನವದೆಹಲಿಯಲ್ಲಿ ಸಂಗೊಳ್ಳಿರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

 
*ಬಾಡ ದಲ್ಲಿ ಕನಕ ಅರಮನೆ  :*
ಸ್ವಾತಂತ್ರ್ಯಹೋರಾಟದ ಸ್ಮಾರಕಗಳನ್ನು ಅಭಿವೃದ್ಧಿ ಮಾಡುವ ನಿರ್ಣಯವನ್ನು ಸರ್ಕಾರ ಮಾಡಿದೆ. ಕನಕದಾಸ ಕಾಗಿನೆಲೆ ಕ್ಷೇತ್ರದ ಅಭಿವೃದ್ಧಿಗೆ ನಾಯಕರಾದ ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ  40 ಕೋಟಿ ರೂ. ಒದಗಿಸಿದ್ದಾರೆ. ಕನಕದಾಸರು ಹುಟ್ಟಿದ ಬಾಡ ಕ್ಷೇತ್ರದಲ್ಲಿ ಸರ್ಕಾರ 25 ಕೋಟಿ ರೂ. ವೆಚ್ಚದಲ್ಲಿ ಕನಕನ ಅರಮನೆಯನ್ನು ನಿರ್ಮಿಸಿದೆ. ಇವೆಲ್ಲವೂ ನಾಡಿನ ಇತಿಹಾಸವನ್ನು ಮುಂದಿನ ಜನಾಂಗಕಕ್ಕೆ ತಿಳಿಹೇಳುವ ಪ್ರಯಾಸವಾಗಿದೆ. ಕನಕದಾಸರನ್ನು ಮೋಸದಿಂದ ಘಾಸಿಗೊಳಿಸಿದ ಸಂದರ್ಭದಲ್ಲಿ ‘ಆ ಸೋಲಿನಲ್ಲಿ ಹಲವಾರು ಗೆಲವುನ್ನು ಕಂಡೆ, ನನ್ನನ್ನು ನಾನು ಗೆದ್ದುಕೊಂಡೆ’ ಎಂದು ನುಡಿದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

*ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ :*

ಸಂಗೊಳ್ಳಿ ರಾಯಣ್ಣ ಸ್ವಾಮಿನಿಷ್ಠೆ, ಶೌರ್ಯಧೈರ್ಯಗಳಿಗೆ ಹೆಸರುವಾಸಿ. ಅವರ ಚರಿತ್ರೆಯಲ್ಲಿ ಎಂದೂ ಕೂಡ ಮುಂದಿಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟರಾಗಿದ್ದ ಅವರು ಬ್ರಿಟೀಷ್ ಸೈನ್ಯಕ್ಕೆ ಸಿಂಹಸ್ವಪ್ನವಾಗಿದ್ದರು. ಕಿತ್ತೂರು ರಾಣಿ ಚೆನ್ನಮ್ಮನನ್ನು ಬ್ರಿಟೀಷರು ಬೈಲಹೊಂಗಲದ ಜೈಲಿನಲ್ಲಿಟ್ಟ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ರಾಯಣ್ಣ ಮುಂದುವರೆಸಿದ್ದರು.  ಕಿತ್ತೂರು ರಾಣಿ ಚೆನ್ನಮ್ಮನಿಗೆ ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯ ಗಳಿಸಿಕೊಡುವನೆಂಬ  ಅದಮ್ಯ ವಿಶ್ವಾಸವಿತ್ತು. ಹೋರಾಟದಲ್ಲಿ ಸೆರೆಸಿಕ್ಕ ರಾಯಣ್ಣನನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ನಂದಗಢದಲ್ಲಿ ತನ್ನ ತಾಯಿಗೆ ‘ಒಬ್ಬ ರಾಯಣ್ಣನನ್ನು ಗಲ್ಲಿಗೇರಿಸಿದರೆ ಚಿಂತೆಯಿಲ್ಲ. ಕಿತ್ತೂರು ನಾಡಿನ ಮನೆಮನೆಯಲ್ಲಿಯೂ ಒಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ ‘ ಎಂದು ನುಡಿದಿದ್ದರು. ಇದು ಕನ್ನಡ ನಾಡಿನ ಕೆಚ್ಚದೆಯ ಇತಿಹಾಸ. ಈಸೂರು ಸತ್ಯಾಗ್ರ, ಅಂಕೋಲಾ ಉಪ್ಪಿನ ಸತ್ಯಾಗ್ರಹ, ಶಿವಪುರ ಸತ್ಯಾಗ್ರಹಗಳೆಲ್ಲವೂ ನಮಗೆ ಪ್ರೇರಣೆಯಾಗಿವೆ ಎಂದರು.

*ಭಾರತವನ್ನು ವಿಶ್ವಭಾರತವಾಗಿಸಲು ಸಂಕಲ್ಪ :*

ನಮ್ಮ ದೇಶ ಶ್ರೇಷ್ಠ ದೇಶ ಎನ್ನುವ ಕಲ್ಪನೆ ನಮ್ಮನ್ನು ದೇಶಕ್ಕಾಗಿ ಸಮರ್ಪಣೆ ಮಾಡಬೇಕಾಗಿದೆ. ದೇಶಕ್ಕಾಗಿ ನಾವೇನು ಮಾಡಬಲ್ಲೆವು ಎಂಬುದನ್ನು ಮುಂದಿನ 25 ವರ್ಷದ ಅಮೃತಕಾಲದಲ್ಲಿ ಸಾಧಿಸಬೇಕಿದೆ. ಯುವಜನತೆ ಜಾತಿಮತಬೇಧಗಳನ್ನು ಲೆಕ್ಕಿಸದೇ  ದೇಶಕ್ಕಾಗಿ ದುಡಿಯಬೇಕಿದೆ. ಭಾರತವನ್ನು ವಿಶ್ವಭಾರತವಾಗಿಸಲು ಎಲ್ಲರೂ ಸಮರ್ಪಣಾ ಭಾವದಿಂದ ಸಂಕಲ್ಪ ತೊಡಬೇಕಿದೆ. ಭವ್ಯ ಭಾರತ ಕಟ್ಟುವ ಮೂಲಕ ಸಂಗೊಳ್ಳಿ ರಾಯಣ್ಣನಂತಹ ಮಹಾನ್ ಚೇತನಗಳಿಗೆ ಗೌರವ ಸಮರ್ಪಿಸಬೇಕೆಂದು  ತಿಳಿಸಿದರು.
[15/08, 7:09 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಪಾಲರಾದ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ಅವರು ಏರ್ಪಡಿಸಿದ್ದ ಲಘು ಉಪಹಾರ ಔತಣ ಕೂಟ ದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ,  ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
[15/08, 8:19 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ – 2022ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ ಮತ್ತು ಇತರರು ಉಪಸ್ಥಿತರಿದ್ದರು.
[15/08, 8:29 PM] Gurulingswami. Holimatha. Vv. Cm: *ಆರ್.ಎಸ್.ಎಸ್ ಬಗ್ಗೆ ನನಗೆ ಅಭಿಮಾನವಿದೆ: ದೇಶ ಕಟ್ಟಲು ಪಣ ತೊಟ್ಟಿದ್ದೇನೆ* *ಬಸವರಾಜ ಬೊಮ್ಮಾಯಿ*

*ಆರ್.ಎಸ್.ಎಸ್ ವಿಚಾರ, ಆದರ್ಶ, ದೇಶಭಕ್ತಿಗೆ ತಲೆಬಾಗಿದ್ದೇನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*


ಬೆಂಗಳೂರು: ಆರ್.ಎಸ್.ಎಸ್ ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆಭಾಗಿದ್ದೇನೆ. ಅದರ ತತ್ವ ಆದರ್ಶಗಳ ಹಿನ್ನೆಲೆಯಲ್ಲಿ ದೇಶ ಕಟ್ಟಲು ಪಣವನ್ನು ತೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದುದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಮೃತ ಭಾರತಿಗೆ ಕರುನಾಡ ದ ಆರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಗ್ರ ಕನ್ನಡ ನಾಡಿನ ಜನತೆಗೆ 76 ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆರ್.ಎಸ್‌ಎಸ್ ಬಗ್ಗೆ ನನಗೆ ಅಭಿಮಾನವಿದೆ. ದೇಶದ ಅಭಿವೃದ್ಧಿಯ ಎಲ್ಲ ವಿಚಾರಗಳನ್ನಿಟ್ಟುಕೊಂಡು ನಾವೆಲ್ಲರೂ ಮುಂದೆ ಹೋಗೋಣ ಎಂದರು.

ಅಮೃತಕಾಲ ನಮ್ಮದು. ಭವಿಷ್ಯ ಮತ್ತು ದೇಶ ನಮ್ಮದು. ಈ ದೇಶವನ್ನು ವಿಶ್ವದಲ್ಲಿಯೇ ಅಗ್ರಮಾನ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕರೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. ಅವರ ವಿಚಾರಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ಕೊಡೋಣ. ಅದಕ್ಕಾಗಿ ಶಕ್ತಿಯನ್ನು ತುಂಬುತ್ತ ನಾವು ಮುಂದೆ ನಡೆಯೋಣ. ಯಶಸ್ಸು, ಸಾಧನೆ ನಮ್ಮದಾಗುತ್ತದೆ. ದೇಶದ ಭವಿಷ್ಯ ನಿರ್ಮಿಸೋಣ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಒಂದು ದೇಶ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿರುವ ನಾವೆಲ್ಲರೂ ಸುದೈವಿಗಳು. ಒಬ್ಬ ವ್ಯಕ್ತಿಗೆ 75 ದೊಡ್ಡದು, ಒಂದು ದೇಶಕ್ಕೆ ದೊಡ್ಡದಲ್ಲ. ಅನುಭವ, ಯುವಶಕ್ತಿಯಿರುವ ನಾಯಕ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ದೇಶ ಮುಂದುವರೆಯುತ್ತಿದೆ ಎಂದರು.

ಸ್ವತಂತ್ರ ಹೋರಾಟದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಯಾರಿಂದಲೂ ಸ್ವತಂತ್ರ ಹೋರಾಟದ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಸ್ವತಂತ್ರ ಹೋರಾಟದ ಇತಿಹಾಸ ಬರೆಯುವವರು ಬದಲಾವಣೆಯ ಪ್ರಯತ್ನವನ್ನು 75 ವರ್ಷದಿಂದ ಮಾಡಿದ್ದಾರೆ. ಸತ್ಯವನ್ನು ಪ್ರಕಟಿಸುವ, ಸತ್ಯವನ್ನು ಇವತ್ತಿನ ಜನಾಂಗ ಅರಿಯುವ ಕಾಲ ಬಂದಿದೆ. ಸ್ವಾತಂತ್ರ್ಯ ಸಾವಿರಾರು ಜನರ ತ್ಯಾಗ ಬಲಿದಾನದಿಂದ ಬಂದಿದೆ.  ಯೋಧರು, ರೈತರು, ಕೂಲಿಕಾರರು, ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು ಹೆಸರುಗಳು ಎಲ್ಲಿಯೂ ಬರುವುದಿಲ್ಲ. ಕರ್ನಾಟಕದಲ್ಲಿಯೇ ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ 25 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಹೆಸರು ಪ್ರಕಟವಾಗಿಲ್ಲ. 1947 ಕ್ಕಿಂತ ಮೊದಲು 150 ವರ್ಷದ ಹಿಂದೆ ಸ್ವತಂತ್ರ ಹೋರಾಟ ಆರಂಭವಾಗಿದೆ. ಬ್ರಿಟಿಷರ ವಿರುದ್ಧ ದಂಗೆ ಎದ್ದವರು ರೈತರು. ಗುಜರಾತ್ ನ ಬಾರ್ಡೋಲಿ ಸತ್ಯಾಗ್ರಹ, ಪಶ್ಚಿಮ ಬಂಗಾಳದ ಇಂಡಿಗೋ ಸತ್ಯಾಗ್ರಹ, ದಕ್ಷಿಣದ ಭಾರತದ ಡೆಖ್ಖನ್ ಸತ್ಯಾಗ್ರಹದಿಂದ ಬ್ರಿಟಿಷರಿಗೆ ನಡುಕ ಹುಟ್ಟಿತ್ತು ಎಂದರು. ಜಲಿಯನ್ ವಾಲಾಬಾಗ್ ನಲ್ಲಿ 4 ಸಾವಿರ ಜನರ ಸಾವನ್ನಪ್ಪಿದರು. ನಾರಾಯಣ ಡೋಣಿ ಹೆಸರು ನೀವು ಕೇಳಿಲ್ಲ. ಹುಬ್ಬಳ್ಳಿಯ 12 ವರ್ಷದ ಬಾಲಕ ವಂದೇ ಮಾತರಂ ಹೇಳಿರುವುದಕ್ಕೆ ಬ್ರಿಟಿಷರ ಗುಂಡಿಗೆ ಬಲಿಯಾದ. ಅಂಕೋಲಾದ ಉಪ್ಪಿನ ಸತ್ಯಾಗ್ರಹ, ಈಸೂರಿನ ಸತ್ಯಾಗ್ರಹದಲ್ಲಿ ಗೋಲಿಬಾರ ಮತ್ತು ಮರಣದಂಡನೆ ಆಯಿತು. ಅವರ ಹೆಸರು ಎಲ್ಲಿಯೂ ಬಂದಿಲ್ಲ. ಇತಿಹಾಸಕಾರರು ಅವರ ಹೆಸರುಗಳನ್ನು ಬರೆದಿಲ್ಲ. ಅಂತಹ ಅನಾಮಧೇಯ ತ್ಯಾಗ, ಪ್ರಾಣ ಕೊಟ್ಟ ನಮ್ಮ ಹೋರಾಟಗಾರರಿಗೆ ನಾವು ಈ 75 ನೇ ವರ್ಷದ ಮಹೋತ್ಸವವನ್ನು ಸಮರ್ಪಣೆ ಮಾಡಬೇಕಾಗಿದೆ ಎಂದರು.

ದೇಶ ಸ್ವತಂತ್ರ ಬಂದ ದಿನವೇ ವಿಭಜನೆ ಆಗಿದೆ. ಇದನ್ನು ತಡೆಯಬೇಕು ಎಂದು ವೀರ ಸಾವರ್ಕರ್ ಹಾಗೂ ಗಡಿನಾಡ ಗಾಂಧಿ ಅದ್ಬುಲ್ ಗಫರ್ ಖಾನ್ ಪ್ರಯತ್ನ ಮಾಡಿದರು. ಸಾವಿರಾರು ಜನರು ಆಹಾರವಿಲ್ಲದೇ ತುಳಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡರು.  ಇವತ್ತು ಭಾರತಕ್ಕೆ 10 ಲಕ್ಷ ಜನರು ನಿರಾಶ್ರಿತರಾಗಿ ಬಂದಿದ್ದಾರೆ. ಇದು ದುರಂತ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸ್ವಾತಂತ್ರ್ಯದ ಬಳಿಕ 33 ಕೋಟಿ ಜನಸಂಖ್ಯೆಯ ಜನರಿಗೆ ಆಹಾರ ಪೂರೈಕೆ ಮಾಡಲು ಸಾಧ್ಯ ಆಗಿರಲಿಲ್ಲ. ಇವತ್ತು 130 ಕೋಟಿ ಜನಸಂಖ್ಯೆಗೆ ಎಲ್ಲರಿಗೂ ಆಹಾರದ ಸುರಕ್ಷತೆ ಇದೆ. ಭೂಮಿಯನ್ನು ಉತ್ತಿ ಬಿತ್ತಿ ನಮ್ಮೆಲ್ಲರಿಗೂ ಆಹಾರವನ್ನು ನಮ್ಮ ಭಾರತ ದೇಶದ, ಕನ್ನಡ ನಾಡಿನ ರೈತ ಕೊಡುತ್ತಿದ್ದಾನೆ. ಭಾರತ ದೇಶವನ್ನು 75 ವರ್ಷ ಕಟ್ಟಿ ಸಲುಹಿದವನು ರೈತ. ಅವನಿಗೆ ನನ್ನ ಮೊದಲ ನಮನ. ಗಡಿಯಲ್ಲಿ ಹಲವಾರು ಯುದ್ಧಗಳು ಆಗಿವೆ.‌ ಭಾರತ ಎಂದಿಗೂ ಬಗ್ಗಲಿಲ್ಲ, ಜಗ್ಗಲಿಲ್ಲ. ಚೀನಾ ಯುದ್ಧದ ವೇಳೆ ಅವತ್ತಿನ ನಾಯಕರು ದಿಟ್ಟತನ ತೋರಿಸಲಿಲ್ಲ. ನಮ್ಮ ಸೈನಿಕರಿಗೆ ಧೈರ್ಯ ತುಂಬಿ ಸಕಾಲಕ್ಕೆ ಆಜ್ಞೆಯನ್ನು ಕಳುಹಿಸಿದ್ದರೆ, ಚೀನಾ ಯುದ್ಧದಲ್ಲಿ ನಮಗೆ ಹಿನ್ಮೆಡೆಯಾಗುತ್ತಿರಲಿಲ್ಲ. ಉಳಿದ ಎಲ್ಲ ಯುದ್ಧಗಳಲ್ಲಿ ತಮ್ಮ ಪ್ರಾಣವನ್ನು ಕೊಟ್ಟು ದೇಶವನ್ನು ಕಾಯ್ದ ಯೋಧರಿಗೆ ನನ್ನ ಎರಡನೇಯ ನಮನ ಸಲ್ಲಿಸುತ್ತೇನೆ ಎಂದರು.

ಈ ದೇಶವನ್ನು ರೈತರು, ಯೋಧರು, ಶಿಕ್ಷಕರು, ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್ಸ್,  ಕೂಲಿಕಾರ್ಮಿಕರು ತಮ್ಮ ಹೊಟ್ಟೆಯನ್ನು ಅರ್ಧಕ್ಕೆ ಕಟ್ಟಿಕೊಂಡು ದೇಶ ಕಟ್ಟುವುದರಲ್ಲಿ ಅವರೆಲ್ಲರ ಪಾಲಿದೆ. ಅವರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸಿ, ಅವರನ್ನು ನೆನೆಯುವ ದಿನ ಇವತ್ತು. ನಮ್ಮ ದೇಶ ಸಂಪತ್ಭರಿತವಾದ ದೇಶ. ಆದರೆ ಇವತ್ತು ನಮ್ಮ ದೇಶದ ಏಕತೆ, ಅಖಂಡತೆಯನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಸ್ವತಂತ್ರ ಯಾರು ತಂದರು ಎಂದು ಪೈಪೋಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಿಜವಾದ ಸ್ವತಂತ್ರ ತಂದವರು  ಅನಾಮಧೇಯ ಹೋರಾಟಗಾರರು. ಅವರಿಗೆ ನೇತೃತ್ವವನ್ನು ಕೊಟ್ಟವರು ಲೋಕಮಾನ್ಯ ತಿಲಕ್, ವೀರ ಸಾವರ್ಕರ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ ಸಿಂಗ್, ಚಂದ್ರಶೇಖರ ಆಜಾದ್, ಲಾಲಲಜಪತ್ ರಾಯ್, ತ್ಯಾತ್ಯಾ ಟೋಪಿ, ಅದರ ಪೂರ್ವದಲ್ಲಿ ನಮ್ಮ ಕನ್ನಡ ನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಇವರೆಲ್ಲರ ನೇತೃತ್ವದಲ್ಲಿ ಸ್ವತಂತ್ರ ಬಂದಿದೆ.

ಸ್ವತಂತ್ರ ಬಂದ ನಂತರ ಭಾರತವನ್ನು ಒಂದು ಮಾಡಿದ್ದು ಉಕ್ಕಿನ ಮನುಷ್ಯ ವಲ್ಲಬಾಯಿ ಪಟೇಲ್. ಕರ್ನಾಟಕದಲ್ಲಿ ನೂರಾರು ಜನರ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ. ಅವರೆಲ್ಲರ ಹೆಸರು, ಫೋಟೋಗಳನ್ನು ನಾವು ಹಾಕಿ ಅವರು ಮಾಡಿರುವ ಕೆಲಸಗಳ ಬಗ್ಗೆ ಪ್ರಕಟಣೆ ಮಾಡಿದ್ದೇವೆ. ಹಿಂದೆ ಯಾರು ಮಾಡಿರಲಿಲ್ಲ. ಅದರ ಬಗ್ಗೆ ಯಾರು ಒಳ್ಳೆಯ ಮಾತು ಆಡುವುದಿಲ್ಲ. ಅವರ ನಾಯಕರ ಫೋಟೋ ಇಲ್ಲ ಎಂದು ಹೇಳಿ, ಅವರು ಬಹಳ ದುಃಖ ಪಡುತ್ತಿದ್ದಾರೆ. ನೆಹರು ಅವರ ಬಗ್ಗೆ ನಮಗೆ ಗೌರವ ಇದೆ. 65 ವರ್ಷ ಅವರ ಹೆಸರಿನಲ್ಲಿಯೇ ದೇಶ ನಡೆಸಿದ್ದಿರಿ. ನಾವು ಅವರನ್ನು ಮರೆತಿಲ್ಲ. ಅವರು ಮಾಡಿರುವ ಕೆಲಸಗಳನ್ನು ಮರೆತಿಲ್ಲ. ನೆಹರು ಅವರದ್ದು ಪ್ರಕಟಣೆ ಮಾಡಿದ್ದೇವೆ. ಅವರಿಗೆಲ್ಲರಿಗೂ ಗೌರವ ಕೊಟ್ಟಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಸ್ವಾತಂತ್ರ್ಯದ ಮೊದಲ ಪ್ರಧಾನಮಂತ್ರಿಯಿಂದ ಇಲ್ಲಿಯವರೆಗೂ ಎಲ್ಲ ಪ್ರಧಾನಮಂತ್ರಿಗಳು ಮಾಡಿರುವ ಸಾಧನೆಯ ಮ್ಯೂಸಿಯಂ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಶಾಶ್ವತವಾದ ಸ್ಮರಣೆಯನ್ನು ಮಾಡುವಂತೆ ಮಾಡಿರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ನೀವು 65 ವರ್ಷದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಬಿಟ್ಟಿದ್ದಿರಿ. ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ಇವರು ಯಾರು ಪ್ರಧಾನಿ ಆಗುತ್ತಿರಲಿಲ್ಲ. ಜನಪ್ರತಿನಿಧಿ ಆಗುತ್ತಿರಲಿಲ್ಲ. ಅಂತಹ ಮಹಾನ್ ವ್ಯಕ್ತಿಗೆ ಪಾರ್ಲಿಮೆಂಟ್ ನಲ್ಲಿ ಜಾಗ ಕೊಡಲಿಲ್ಲ. ಅವರು ನಿಧನರಾದಾಗ ಅವರ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ.  ಅವರ ಸ್ಮಾರಕಗಳನ್ನು ಅಲ್ಲಲ್ಲಿ‌ ಬಿಟ್ಟಿದ್ದಿರಿ. ಇವತ್ತು ಕರ್ನಾಟಕದಲ್ಲಿ ಹತ್ತು ಸ್ಥಳಗಳಲ್ಲಿ ಅಂಬೇಡ್ಕರ್ ಬಂದು ಹೋಗಿದ್ದಾರೆ. ಅವುಗಳ ಅಭಿವೃದ್ಧಿಗೆ ನಮ್ಮ ಬಜೆಟ್ ನಲ್ಲಿ ನಾನು 25 ಕೋಟಿ ರೂ ‌ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

1947 ರಲ್ಲಿ ಹೇಗೆ ಸಂಭ್ರಮ ಹೇಗಿತ್ತೋ ಹಾಗೆ ಇವತ್ತು ಜನರು ಸಂಭ್ರಮ ಮಾಡುತ್ತಿದ್ದಾರೆ. ಸ್ವಾರ್ಥದ ರಾಜಕೀಯವನ್ನು ದೇಶ ಕಂಡಿದೆ. ಇವತ್ತು ಮಾತಿಗಿಂತ ನಮ್ಮ ಕೆಲಸಗಳು ಮಾತನಾಡಬೇಕು. ಆ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಕೆಲಸ ಕಾರ್ಯ ಮಾಡುತ್ತಿದೆ. ಇಂತಹ ದೇಶಭಕ್ತಿಯ ಪಕ್ಷದ ಮೇಲೆ‌ ದೇಶ ಕಾಯುವ, ಕಟ್ಟುವ ಗುರತರವಾದ ಜವಾಬ್ದಾರಿ ಇದೆ. ಸ್ವತಂತ್ರ ಹೋರಾಟದ ಲಾಭ ತೆಗೆದುಕೊಂಡವರು‌ ಬೇರೆ ಇದ್ದಾರೆ. ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ, ಲಾಲ ಬಹಾದ್ದೂರ ಶಾಸ್ತ್ರಿ, ಬಾಬಾ ಸಾಹೇಬ ಅಂಬೇಡ್ಕರ್, ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲಿದ್ದಾರೆ, ಯಾವ ಹುದ್ದೆಯಲ್ಲಿ ಇದ್ದಾರೆ ಎಂದು ನಾನು ಪ್ರಶ್ನೆ ಮಾಡುತ್ತೇನೆ. ಸ್ವತಂತ್ರ ಹೋರಾಟದ ಲಾಭ ಪಡೆದುಕೊಂಡವರು ಇವತ್ತು ಉತ್ತರ ಕೊಡಬೇಕು ಎಂದರು.

 ಭಾರತೀಯತೆ ನಮ್ಮ ಧರ್ಮ, ಭಾರತ ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅದನ್ನು ಇವತ್ತು ಪಾಲಿಸೋಣ. ಮುಂದಿನ 25 ಭವ್ಯ ಭಾರತ ಕಟ್ಟಲು ಕೈ ಜೋಡಿಸೋಣ ಎಂದು ಸಿಎಂ ಬಸವರಾಜ ಬೊಮಾಯಿ ಹೇಳಿದರು.
[15/08, 8:29 PM] Gurulingswami. Holimatha. Vv. Cm: *ನಿಜವಾದ ಸ್ವಾತಂತ್ರ್ಯ ತಂದವರು ಅನಾಮಧೇಯ ಹೋರಾಟಗಾರರು*
ಬೆಂಗಳೂರು, ಆಗಸ್ಟ್ 15: ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ತಂದವರು ಅನಾಮಧೇಯ ಹೋರಾಟಗಾರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು   75ನೇ ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ ಅಮೃತ ಭಾರತಿಗೆ ಕರುನಾಡ ಜಾತ್ರೆ  ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು.

ಹೋರಾಟದ  ನೇತೃತ್ವ ವಹಿಸಿದವರು ತಿಲಕ್,  ವೀರ ಸಾವರ್ಕರ್, ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ಚಂದ್ರಶೇಖರ್ ಆಜಾದ್, ತಾತ್ಯಾ ಟೋಪಿ, ಕಿತ್ತೂರು ಚನ್ನಮ್ಮ , ಸಂಗೊಳ್ಳಿ ರಾಯಣ್ಣ, ಝಾನ್ಸಿ ಬಾಯಿ ಲಕ್ಷ್ಮಿ ಬಾಯಿ,ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲ್  ಇವರೆಲ್ಲ ನೇತೃತ್ವದಲ್ಲಿ ಭಾರತವನ್ನು ಒಂದು ಮಾಡಿದೆ ಎಂದರು. 

*ಇತಿಹಾಸ ಬರೆಯುವವರು ಬದಲಾಯಿಸಲು ಪ್ರಯತ್ನಿಸಿದ್ದಾರೆ*
ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇಡೀ ಭಾರತ ಮುಂದುವರೆದಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ವನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಇತಿಹಾಸ ಬರೆಯುವವರು ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ.  ಸತ್ಯವನ್ನು ಹೇಳುವ ಹಾಗೂ ಇಂದಿನ ಜನಾಂಗ ಅದನ್ನು  ಅರಿಯುವ ಕಾಲಬಂದಿದೆ. ಸ್ವಾತಂತ್ರ್ಯ ನಮಗೆ ಸಾವಿರಾರು ಯುವಕರು, ರೈತರು ಕೂಲಿಕಾರ್ಮಿಕರು ತ್ಯಾಗ, ಬಲಿದಾನ ಮಾಡಿದ ಕಾರಣ ಬಂದಿತು. ಬೆಂಗಳೂರಿನಲ್ಲಿಯೇ 25 ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರ ಹೆಸರು  ಎಲ್ಲೂ ಪ್ರಕಟವಾಗೋಲ್ಲ.  47 ಕ್ಕಿಂತ 150 ವರ್ಷ ಮೊದಲು ಪ್ರಾರಂಭವಾದ ಹೋರಾಟ ಕರ ನಿರಾಕರಣೆ ಬಾರ್ಡೋಲಿ ಸತ್ಯಾಗ್ರಹ, ಇಂಡಿಗೋ, ಡೆಕ್ಕನ್ ಸತ್ಯಾಗ್ರಹ ಬ್ರಿಟಿಷ್ ಆಡಳಿತವನ್ನು ನಡುಗಿಸಿತು. ಚಂಪಾರನ್ ಸತ್ಯಾಗ್ರಹವನ್ನು ಎರಡು ದುಡಿಯುವ ವರ್ಗ ತಿರುಗಿಬಿದ್ದಾಗ ಬ್ರಿಟಿಷರು ಈ ದೇಶವನ್ನು ಆಳಲು ಸಾಧ್ಯವಿಲ್ಲ ಎಂದು ಮನಗಂಡರು. ಜಲಿಯನ್ ವಾಳ ಬಾಗ್ ನಲ್ಲಿ 400 ಜನ ಪ್ರಾಣ ತ್ಯಾಗ ಮಾಡಿದರು. ಅವರ ಹೆಸರು  ಎಲ್ಲಿಯೂ  ಬರುವುದಿಲ್ಲ ಎಂದರು. 

*ಸರಿಯಾದ ಇತಿಹಾಸ ಹೇಳುವ ಕಾಲ*
ಇತಿಹಾಸವನ್ನು ಬಲ್ಲವರು ಭವಿಷ್ಯ ಬರೆಯಲು ಸಾಧ್ಯ. ಸರಿಯಾದ ಇತಿಹಾಸ ಹೇಳುವ ಕಾಲವಿದು. ನಾರಾಯಣ್ ದೋಣಿ ಎಂಬ ಹುಬ್ಬಳ್ಳಿಯ  12 ವರ್ಷದ ಬಾಲಕ ವಂದೇ ಮಾತರಂ ಹೇಳಿದ್ದಕ್ಕೆ ಬ್ರಿಟಿಷ್ ರ ಗುಂಡಿಗೆ ಬಲಿಯಾದ. ಅಂಕೋಲದ ಉಪ್ಪಿನ ಸತ್ಯಾಗ್ರಹ, ಈಸೂರಿನ ಸತ್ಯಾಗ್ರಹಗಳಲ್ಕಿ ಗೋಲಿಬಾರ್ ಮರಣ ದಂಡನೆಯೂ ಆಯಿತು. ಅವರ ಹೆಸರುಗಳು ಇಲ್ಲ.  75 ವರ್ಷಗಳ ಅಮೃತ ಮಹೋತ್ಸವ ಸಾವಿರಾರು ಅನಾಮಧೇಯ, ತ್ಯಾಗ ಮಾಡಿದ  ಹೋರಾಟಗಾರರಿಗೆ ಸಮರ್ಪಣೆಯಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವೇ ವಿಭಜನೆ ಆಗಿದೆ.  ಇದಕ್ಕಿಂತ ದೊಡ್ಡ ದುರಂತವಿಲ್ಲ. ವಿಭಜನೆ  ತಡೆಯಲು ವೀರ ಸಾವರ್ಕರ್, ಗಡಿ ನಾಡ ಗಾಂಧಿ  ಅಬ್ದುಲ್ ಗಫಾರ್ ಖಾನ್ ಪ್ರಯತ್ನ ಪಟ್ಟರೂ ಸಫಲರಾಗಿಲ್ಲ.  ಸಾವಿರಾರು ಜನ ಆಸ್ತಿ ಪಾಸ್ತಿ, ತುಳಿತಕ್ಕೆ ಒಳಗಾದರು, ಆಹಾರವಿಲ್ಲದೆ ಪ್ರಾಣವನ್ನು ತೆತ್ತರು . 10.ಲಕ್ಷ ಜನ ಭಾರತಕ್ಕೆ ನಿರಾಶ್ರಿತರಾಗಿ ಬಂದರು. ಸ್ವಾತಂತ್ರ್ಯ ನಂತರದ ಪಯಣ ಹೀಗೆ ಪ್ರಾರಂಭವಾಗಿದ್ದು ದುರಂತ ಎಂದರು. 

ದೇಶವನ್ನು  75 ವರ್ಷಗಳ ಕಾಲ ಕಟ್ಟಿದ  ರೈತರು, ಗಡಿ ಕಾಯುವ ವೀರ ಯೋಧರು, ವಿಜ್ಞಾನಿಗಳು, ಶಿಕ್ಷಕರು, ಕೂಲಿಕಾರ್ಮಿಕರು, ದೀನದಲಿತರಿಗೆ    ನಮನಗಳನ್ನು ಮುಖ್ಯಮಂತ್ರಿಗಳು ಸಲ್ಲಿಸಿದರು. 
ನಮ್ಮ ದೇಶ ನಾಡು ಸಂಪದ್ಭರಿತ ವಾದುದು. ದೇಶದ ಅಖಂಡತೆ, ಏಕತೆ ಕಾಪಾಡುವುದು ದೊಡ್ಡ ಸವಾಲು. ಸ್ವಾತಂತ್ರ್ಯ ಯಾರು ತಂದರೆಂದು ಪೈಪೋಟಿ ಮಾಡುತ್ತಿದ್ದಾರೆ ಎಂದರು. 


*ಕರ್ನಾಟಕದ ಮಹನೀಯರನ್ನು ಸರ್ಕಾರ ಸ್ಮರಿಸಿದೆ*
ಕರ್ನಾಟಕದ. ಮೈಲಾರ. ಮಹದೇವಪ್ಪ, ಸಾಹುಕಾರ ಚೆನ್ನಯ್ಯ, ಚಂಗಲರಾಯರೆಡ್ಡಿ, ಇದ್ದಾರೆ. ಸರ್ಕಾರದ ಪ್ರಕಟಣೆಯಲ್ಲಿ ಹಿಂದೆದೂ ಬಾರದ ಕನ್ನಡ ನಾಡಿನ ಹೋರಾಟಗಾರರ ಚಿತ್ರಗಳನ್ನು ಹಾಕಿ ನಿನ್ನೆ ಪ್ರಕಟಣೆ ಮಾಡಲಾಯಿತು. ಅದರ ಬಗ್ಗೆ ಒಳ್ಳೆ ಮಾತುಗಳನ್ನು ಆಡಲಿಲ್ಲ. ಈವರೆಗೆ ಅವರ ಕಾರ್ಯಗಳನ್ನು ಗುರುತಿಸಿರಲ್ಲಿಲ್ಲ. ನಾವು ಅದನ್ನು ಮಾಡಿದರೆ, ಅವರ ನಾಯಕರ ಚಿತ್ರವಿಲ್ಲ ಎಂದು ದುಃಖ ಪಡುತ್ತಿದ್ದಾರೆ.  65 ವರ್ಷ ಅವರ ಹೆಸರಿನಲ್ಲಿಯೇ ದೇಶ ನಡೆಸಿದ್ದಾರೆ. ನಾವು ಅವರನ್ನು ಮರೆತಿಲ್ಲ. ಅವರ ಕೆಲಸಗಳನ್ನು ಮರೆತಿಲ್ಲ. ಅವರ ಬಗ್ಗೆ ಗೌರವ ಇದೆ. ಪ್ರಕಟಣೆಯಲ್ಲಿ ನೆಹರೂನ್ ಅವರ ಚಿತ್ರವೂ ಇದೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಎಲ್ಲಾ ಪ್ರಧಾನಿಗಳ ಸಾಧನೆಗಳನ್ನು,  ಉತ್ತಮ ಕಾರ್ಯಗಳನ್ನು  ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ನಮ್ಮ ಸಂಸ್ಕೃತಿ ಒಳ್ಳೆಯದನ್ನು ಸ್ಮರಿಸುವುದು. ಅದರೊಂದಿಗೆ 65 ವರ್ಷ ಬಿಟ್ಟಿರುವ ಹೆಸರುಗಳನ್ನು ಸ್ಮರಿಸುತ್ತಿದ್ದೇವೆ. ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ ಭವನದೊಳಗೆ ಜಾಗ ಕೊಡಲಿಲ್ಲ. ತೀರಿಕೊಂಡಾಗ ಸ್ಥಳ ನೀಡಲಿಲ್ಲ. ಸ್ಮಾರಕಗಳನ್ನು ಅಲ್ಲಲ್ಲೇ ಬಿಟ್ಟಿದ್ದಾರೆ.  ಕರ್ನಾಟಕದ ಲ್ಲಿ ಅಂಬೇಡ್ಕರ್ ಭೇಟಿ ನೀಡಿದ 10 ಸ್ಥಳಗಳ ಸ್ಮಾರಕಕ್ಕೆ 25 ಕೋಟಿ ರೂ ಬಜೆಟ್ ನಲ್ಲಿ ನೀಡಿದೆ. 
ಈ ದೇಶ ನಮ್ಮದೆಂಬ ಭಾವನೆಯಿಂದ ಅಭಿಮಾನದಿಂದ ಮುಂದೆ ಹೋಗಬೇಕಿದೆ. 

*ಅಮೃತ ಕಾಲಕ್ಕೆ ಭದ್ರ ಬುನಾದಿ*
ದೇಶದ ಪ್ರತಿಯೊಬ್ಬರ ಶಕ್ತಿಯನ್ನು, ಆತ್ಮವನ್ನು ಒಂದುಗೂಡಿಸಿರುವುದು ನಮ್ಮ ಪ್ರಧಾನಿಗಳು.  ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕಬೇಕು. ಹರ್ ಘರ್ ತಿರಂಗಾ ಕರೆ ನೀಡಿ 40 ಕೋಟಿ ಧ್ವಜ ಹಾರಿದೆ. 46 ರ ಸಂಭ್ರಮ ಮರುಕಳಿಸಿದೆ. ತ್ರಿವರ್ಣ ಧ್ವಜ, ದೇಶಭಕ್ತಿ ಹಾಗೂ ಪ್ರಧಾನಿಗಳ ಶಕ್ತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
[15/08, 9:26 PM] Gurulingswami. Holimatha. Vv. Cm: *ತಪ್ಪಿತಸ್ಥರು ಯಾರೇ ಇದ್ದರೂ ಕಠಿಣ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು: ಶಿವಮೊಗ್ಗದಲ್ಲಿ ಚಾಕು ಇರಿತ ಘಟನೆ ನಡೆಯಬಾರದಿತ್ತು. ಯಾರೇ  ತಪ್ಪು ಮಾಡಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲು ನಾನು ಆದೇಶ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು‌ ಹೇಳಿದರು.

ಇಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ -2022 ರ ಸಾಂಸ್ಕೃತಿಕ  ಕಾರ್ಯಕ್ರಮ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಿವಮೊಗ್ಗದಲ್ಲಿ ನಮ್ಮ ಅಧಿಕಾರಿಗಳು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಸ್ಥಳೀಯ ನಾಯಕರು ಸಹಕಾರ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೋರ್ಸ್  ಕಳುಹಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

Post a Comment

Previous Post Next Post