[15/08, 11:08 AM] Ravi Gowda. Kpcc. official: ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಧ್ವಜಾರೋಹಣ ನೆರವೇರಿಸಿದರು. ವಿಧಾಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಧ್ರುವನಾರಾಯಣ್, ಗೋವಾ, ಪುದುಚೇರಿ, ತಮಿಳುನಾಡು ರಾಜ್ಯ ಕಾಂಗ್ರಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಹಿರಿಯ ಮುಖಂಡ ಎಸ್ ಆರ್ ಪಾಟೀಲ್, ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಮತ್ತಿತರರು ಭಾಗವಹಿಸಿದ್ದರು.
[15/08, 1:01 PM] Ravi Gowda. Kpcc. official: *ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ನಾವೆಲ್ಲರೂ ಪವಿತ್ರವಾದ ಸಂದರ್ಭದಲ್ಲಿ ಸೇರಿದ್ದು, ಎಲ್ಲರಿಗೂ 75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಿಂದ ನಾವೆಲ್ಲರೂ ನಮ್ಮ ಹಿರಿಯರ ತ್ಯಾಗ ಬಲಿದಾನ ಸ್ಮರಿಸಿ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಮಾಡಲು ಸೇರಿದ್ದೇವೆ. ನಾವು ಬಹಳ ಅದೃಷ್ಟವಂತರು. ಸ್ವಾತಂತ್ರ್ಯ ಬಂದಾಗ ನಾವು ಹುಟ್ಟಿರಲಿಲ್ಲ. ಆದರೆ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಿಹಿ ಅನುಭವಿಸುತ್ತಿದ್ದೇವೆ.
ದೇಶಕ್ಕೆ ನಾವೆಲ್ಲರೂ ವಿಶಿಷ್ಟವಾದ ತಾಯಿಯ ಸ್ಥಾನ ನೀಡಿದ್ದೇವೆ. ಭಾರತಾಂಬೆ ಎಂದು ಹೇಳುವ ಮೂಲಕ ಭಾರತ ದೇಶವನ್ನು ತಾಯಿ ಎಂದು ಪೂಜಿಸುತ್ತಿದ್ದೇವೆ.
ಇಂದು ಭಾರತ ಮಾತೆ ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆಗೊಂಡ ಸುದಿನ. ಈ ಅಮೃತ ಗಳಿಗೆಗೆ ಈಗ 75 ವರ್ಷ ವರ್ಷ ತುಂಬಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಮ್ಮದೇ ಆದ ಸಂವಿಧಾನವನ್ನು ನಾವು ಹೊಂದಿದ್ದೇವೆ.
ನಮ್ಮ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣ ಧೈರ್ಯ, ತ್ಯಾಗದ ಸಂಕೇತವಾದರೆ, ಬಿಳಿ ಬಣ್ಣ ನಂಬಿಕೆ ಹಾಗೂ ಶಾಂತಿಯ ಸಂದೇಶ ಸಾರುತ್ತದೆ. ಹಸಿರು ಬಣ್ಣ ಸಮೃದ್ಧಿಯ ಸಂಕೇತವಾಗಿದೆ. ಈ ತ್ರಿವರ್ಣ ಧ್ವಜ ನಮ್ಮ ಹೆಮ್ಮೆ.
ಈ ತ್ರಿವರ್ಣ ಧ್ವಜವನ್ನು ಕೆಂಪುಕೋಟೆಯಿಂದ ಹಳ್ಳಿ ಹಳ್ಳಿಯಲ್ಲಿ ಹಾರಿಸಿ ಆಚರಣೆ ಮಾಡುತ್ತಿದ್ದೇವೆ.
ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಅಳವಡಿಸಿಕೊಂಡು ಈ ಸ್ವಾತಂತ್ರ್ಯ ಕಾಪಾಡಿಕೊಳ್ಳ ಬೇಕಾಗಿರುವುದು ನಮ್ಮ ಕರ್ತವ್ಯ. 1790ರ ದಶಕದಲ್ಲಿ ಶಿವಮೊಗ್ಗದ ಚನ್ನಾಗಿರಿಯ ಧೋಂಡಿಯಾ ವಾಘ್ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ. ಹೈದರ್ ಅಲಿ ಮತ್ತು ಟಿಪ್ಪು ಕೂಡ ಬ್ರಿಟೀಷರ ವಿರುದ್ಧ ಹೋರಾಡಿ ಆಂಗ್ಲೋ ಮೈಸೂರು ಯುದ್ಧ ಮಾಡಿದ್ದರು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ.
1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, 1830ರ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು.
1841 ರಲ್ಲಿ ಬಾದಾಮಿ ಬಂಡಾಯದಲ್ಲಿ ನರಸಿಂಗ ದತ್ತಾತ್ರೇಯ ಪೆಟ್ಕರ್
1957-58 ರಲ್ಲಿ ಸುರಪುರ ವೆಂಕಟಪ್ಪ ನಾಯಕ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದರು.
ಹೀಗೆ ದೇಶದೆಲ್ಲೆಡೆ ಒಂದೊಂದೇ ಬಂಡಾಯ ಧ್ವನಿ ಏಳುತ್ತಿದ್ದ ಸಮಯದಲ್ಲಿ 1885 ರಲ್ಲಿ ಕಾಂಗ್ರೆಸ್ ರಚನೆ ಆಯಿತು.
ಆರಂಭದ ದಿನಗಳಲ್ಲಿ ದಾದಾಬಾಯಿ ನವರೋಜಿ, ಸುರೇಂದ್ರನಾಥ್ ಬ್ಯಾನರ್ಜಿ, ಎ ಓ ಹ್ಯೂಮ್ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ದೇಶದಾದ್ಯಂತ ಸಂಘಟಿಸಲು ಆರಂಭಿಸಿತು.
20ನೇ ಶತಮಾನದಲ್ಲಿ ಬಾಲ ಗಂಗಾಧರ ತಿಲಕ, ಲಾಲಾ ಲಜಪತ ರಾಯ್, ಬಿಪಿನ್ ಚಂದ್ರ ಪಾಲ್ ಸ್ವದೇಶಿ ಚಳುವಳಿ ಆರಂಭಿಸಿದರು.
ತಿಲಕರು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬ ಆಗ್ರಹ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿತ್ತು.
ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ವಿರುದ್ಧ ಸತ್ಯಾಗ್ರಹದ ಹೋರಾಟ ಮಾಡಿದ್ದ ಗಾಂಧೀಜಿ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಲಾಯಿತು.
ನಂತರ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನೇತೃತ್ವ ವಹಿಸಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ಕೊಟ್ಟರು.
ಗಾಂಧೀಜಿ ಅವರು ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಗಾಂಧೀಜಿ ಅವರ ಜತೆಗೆ ಜವಾಹರ್ ಲಾಲ್ ನೆಹರು, ಸರ್ದಾರ್ ಪಟೇಲ್, ಸರೋಜಿನಿ ನಾಯ್ಡು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮೌಲಾನ ಅಬ್ದುಲ್ ಕಲಾಂ ಅಜಾದ್, ಚಂದ್ರಶೇಖರ್ ಅಜಾದ್ ಸೇರಿದಂತೆ ಹಲವು ಹೋರಾಟಗಾರರು ದೇಶದೆಲ್ಲೆಡೆ ಹೋರಾಟ ನಡೆಸಿದರು.
ಗಾಂಧೀಜಿ ಅವರ ನಾಯಕತ್ವ, ಕಾಂಗ್ರೆಸ್ ನೇತೃತ್ವದಲ್ಲಿ ದೇಶದೆಲ್ಲೆಡೆ ಅಹಿಂಸಾ ಚಳುವಳಿ ಆರಂಭವಾಯಿತು.
ಬ್ರಿಟೀಷರ ಗುಂಡು, ಲಾಠಿ ಹಾಗೂ ಬೂಟಿನ ಏಟು ತಿಂದರು. ಸೆರೆವಾಸ ಅನುಭವಿಸಿದರು. ಆದರೂ ಇವರ ಹೋರಾಟದ ಕಿಚ್ಚು ಆರಿಸಲು ಬ್ರಿಟೀಷರಿಂದ ಸಾಧ್ಯವಾಗಲಿಲ್ಲ.
ಅಂತಿಮವಾಗಿ 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು.
ಸ್ವಾತಂತ್ರ್ಯ ಪಡೆಯಲು ಈ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ನಾವೆಲ್ಲರೂ ಇವರ ಹೋರಾಟ ಗೌರವಿಸಿ ಸ್ಮರಿಸೋಣ.
ಕಾಂಗ್ರೆಸ್ ಸಾಮಾಜಿಕ ನ್ಯಾಯ ದೊರಕಿಸಲು, ಶೋಷಿತರಿಗೆ ಸಿಗಬೇಕಾದ ಹಕ್ಕು ಕೊಡಿಸಲು ಸರ್ವರಿಗೂ ಸಮ ಹಕ್ಕು ನೀಡಿ ಕೋಮು ಸಾಮರಸ್ಯದ ಭಾರತ ಕಾಂಗ್ರೆಸ್ ನ ಕನಸಾಗಿದೆ.
ಸಂವಿಧಾನದ ಅಡಿಯಲ್ಲಿ ಎಲ್ಲಾ ಜಾತಿ, ಧರ್ಮಗಳಿಗೂ ಅವಕಾಶ ಇರಬೇಕು ಎಂದು ನೆಹರೂ ಅವರು ಶ್ರಮಿಸಿದರು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ನೆಹರೂ ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆ ಆಧಾರದ ಮೇಲೆ ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿ ಚರ್ಚಿಸಿ ರಚಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಇನ್ನು ರಾಜ್ಯದಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ, ಕಾರ್ನಾಡ್ ಸದಾಶಿವ ರಾವ್, ನಿಟ್ಟೂರು ಶ್ರೀನಿವಾಸರಾವ್, ಕೊಡಗಿನ ಅಪ್ಪಯ್ಯ ಗೌಡರು, ಗೋಪಾಲ ಕೃಷ್ಣ ಗೋಖಲೆ, ಎನ್.ಎಸ್ ಹರ್ಡಿಕರ್ ಸೇರಿದಂತೆ ಹಲವು ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ.
ನಮ್ಮ ನಾಯಕರು ಈ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ ನೀಡಿದ್ದಾರೆ.
ನಮ್ಮ ನಾಯಕರು ಕಂಡಿದ್ದ ಸಾಮಾಜಿಕ ಸಾಮರಸ್ಯ ತೊಡೆದು ಹಾಕಲು ಆಡಳಿತಾರೂಢ ಪಕ್ಷ ಹಾಗೂ ಅವರ ಪ್ರಾಯೋಜಿತ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರತಿಯೊಬ್ಬ ಕಾಂಗ್ರೆಸಿಗ ಸ್ವಾತಂತ್ರ್ಯದ ರಕ್ಷಣೆಯ ಸಂಕಲ್ಪ ಮಾಡಬೇಕು. ನಮ್ಮ ನಾಯಕರು ಹೋರಾಟ ಮಾಡಿ ತಂದಿರುವ ಸ್ವಾತಂತ್ರ್ಯ ರಕ್ಷಣೆ ಮಾಡಬೇಕು.
ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕಿ ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯ ಕಾಪಾಡಬೇಕು.
ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಎತ್ತಿ ಹಿಡಿದು, ಯುವ ಪೀಳಿಗೆಗೆ ತಿಳಿಸೋಣ.
ದೇಶದಲ್ಲಿ ಸ್ತ್ರೀಯರ ಅಸಮಾನತೆ, ಶೋಷಣೆ, ಜಾತಿ ಅಸಮಾನತೆ, ನಿರುದ್ಯೋಗ, ಆರ್ಥಿಕ ಸಮಸ್ಯೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು, ಇವುಗಳಿಗೆ ಪರಿಹಾರ ತಂದು, ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿ ಸಾಮಾಜಿಕ ಪ್ರಗತಿ ಸಾಧಿಸಬೇಕು.
ಇಂದು ನಾವೆಲ್ಲ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ಕರೆಗೆ ಓಗೊಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ.
ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಬೇಕಿದೆ.
ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಹೀಗಾಗಿ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ, ಧರ್ಮ ವ್ಯತ್ಯಾಸ ಮರೆತು ಹೆಜ್ಜೆ ಹಾಕೋಣ.
ಈ ಕಾರ್ಯಕ್ರಮ ಸಮಯದಲ್ಲಿ ರಾಷ್ಟ್ರಧ್ವಜ ಕೆಳಗೆ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಗೌರವ ಸಲ್ಲಿಸಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಬೇಕು ಎಂದು ಸೇವಾದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ.
[15/08, 4:39 PM] Ravi Gowda. Kpcc. official: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದವರೆಗೆ ಸೋಮವಾರ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ, ಧ್ರುವನಾರಾಯಣ, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಯು ಟಿ ಖಾದರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ರಾಜ್ಯಾಧ್ಯಕ್ಷ ನಲಪಾಡ್ ಮತ್ತಿತರರು ಭಾಗವಹಿಸಿದರು.
[15/08, 7:57 PM] Ravi Gowda. Kpcc. official: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಸಮಾರೋಪ ಸಮಾರಂಭಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ, ಧ್ರುವನಾರಾಯಣ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ದಿನೇಶ್ ಗುಂಡೂರಾವ್, ಉಮಾಶ್ರೀ ಮತ್ತಿತರ ಮುಖಂಡರು
ತ್ರಿವರ್ಣ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು.
ಡಿ ಕೆ ಶಿವಕುಮಾರ್ ಅವರು ತಮ್ಮ ಭಾಷಣಕ್ಕೆ ಮೊದಲು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಅತ್ತಿತ್ತ ಹಾರಾಡಿಸಿದರು.
[15/08, 9:21 PM] Ravi Gowda. Kpcc. official: *ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ನಮ್ಮ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅನಾರೋಗ್ಯದ ಕಾರಣ ವಿದೇಶಕ್ಕೆ ತೆರಳಿದ್ದರು. ಅವರು 18 ರಂದು ರಾಜ್ಯಕ್ಕೆ ಭೇಟಿ ನಿರ್ಧಾರ ಮಾಡಿದ್ದರು. ಆದರೆ ಈ ಸ್ವಾತಂತ್ರ ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಜೊತೆ ತಾವು ಹೆಜ್ಜೆ ಹಾಕಬೇಕು ಎಂದು ಇಂದು ಬೆಂಗಳೂರಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ನಮ್ಮ ಮತ್ತೊಬ್ಬ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಕೆ. ಪಾಟೀಲ್ ಅವರ ಜನ್ಮದಿನ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಈ ಸ್ವಾತಂತ್ರ ನಡಿಗೆ ಕಾರ್ಯಕ್ರಮಕ್ಕೆ ಶ್ರಮಿಸಿದ ಸಾವಿರಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷಬೇಧ ಮರೆತು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನ ಹೆಜ್ಜೆ ಹಾಕಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಮೆಟ್ರೋ ನಿಲ್ದಾಣ ಬಳಿ ಹೋದಾಗ, ಸಾವಿರಾರು ವಿದ್ಯಾರ್ಥಿಗಳು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದನ್ನು ನೋಡಿ ನನಗೆ ಬಹಳ ಆನಂದವಾಯಿತು.
ಯುವ ಪೀಳಿಗೆ ಈ ರಾಷ್ಟ್ರಧ್ವಜ ಹಿಡಿದು ಈ ಸ್ವಾತಂತ್ರ್ಯ ತಂದು ಕೊಟ್ಟಿರುವ ನಮ್ಮ ನಾಯಕರಿಗೆ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಎಲ್ಲಾ ವಿದ್ಯಾರ್ಥಿಗಳು, ಯುವಕರಿಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ.
ಇದೊಂದು ಐತಿಹಾಸಿಕ ಕಾರ್ಯಕ್ರಮ. ಇದು ಡಿ.ಕೆ. ಶಿವಕುಮಾರ್ ಕಾರ್ಯಕ್ರಮವಲ್ಲ. ಸೋನಿಯಾ ಗಾಂಧಿಯವರ ಮುಖಂಡತ್ವದಲ್ಲಿ 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಉದಯಪುರದಲ್ಲಿ ಸೇರಿ ಈ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದೆವು. ಆಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಈ ಕಾರ್ಯಕ್ರಮ ಮಾಡಲು ತೀರ್ಮಾನ ಕೈಗೊಂಡೆವು.
ಜೊತೆಗೆ ಈ ದೇಶವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೆಜ್ಜೆ ಹಾಕಬೇಕು ಎಂದು ಭಾರತ ಜೋಡೋ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು. ಇದರ ಜೊತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಎಲ್ಲಾ ಜಿಲ್ಲೆಗಳಲ್ಲಿ 75 km ಪಾದಯಾತ್ರೆ ಮಾಡಬೇಕು ಎಂದು ತಿಳಿಸಿದರು. ನಂತರ ಸ್ವಾತಂತ್ರ್ಯ ದಿನದಂದು ತಿರಂಗ ಯಾತ್ರೆ ಮಾಡಬೇಕು ಎಂದು ಸೂಚಿಸಿದರು.
ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ಈ ಪಾದಯಾತ್ರೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ನೂರಹದಿನೇಳು ಕ್ಷೇತ್ರಗಳಲ್ಲಿ 60 ರಿಂದ 225 ಕಿಲೋಮೀಟರ್ ವರೆಗೂ ಪಾದಯಾತ್ರೆ ಮಾಡಿದ್ದಾರೆ. ಇವರೆಲ್ಲರಿಗೂ ನಾನು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ, ಇದೇ ಕಾಂಗ್ರೆಸ್ ಪಕ್ಷದ ಇತಿಹಾಸ. ಆಗಸ್ಟ್ 30ರವರೆಗೂ ನಿಮಗೆ ಕಾಲಾವಕಾಶವಿದ್ದು, ನಾಯಕರಾಗ ಬಯಸುವವರು ಜನರ ಬಳಿ ಹೋಗಿ ಜನರ ಹೃದಯ ಗೆದ್ದು, ಅವರ ವಿಶ್ವಾಸ ಸಂಪಾದಿಸಬೇಕು.
ಗಾಂಧೀಜಿಯವರು ಒಂದು ಮಾತು ಹೇಳಿದ್ದಾರೆ. ನೀನು ನಿನ್ನನ್ನು ನಿಯಂತ್ರಿಸಬೇಕಾದರೆ ನಿನ್ನ ಮೆದುಳನ್ನು ಪ್ರಯೋಗಿಸು, ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯವನ್ನು ಪ್ರಯೋಗಿಸು ಎಂದು. ಅದರಂತೆ ನೀವು ಜನರ ಮಧ್ಯೆ ಹೋಗಿ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವರ ಭಾವನೆಗೆ ಸ್ಪಂದಿಸಿ ಕೆಲಸ ಮಾಡುವ ಅವಕಾಶ ನಿಮಗಿದೆ, ಅದನ್ನು ಬಳಸಿಕೊಳ್ಳಿ.
ನಾವು ಕೊಟ್ಟ ಕರೆಗೆ ಆನ್ಲೈನ್ ನಲ್ಲಿ ಒಂದು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ನೊಂದಣಿ ಮಾಡಿಕೊಂಡರು. ಇದು ಭಾರತದಲ್ಲಿ ಒಂದು ದೊಡ್ಡ ಚರಿತ್ರೆ ಸೃಷ್ಟಿಸಿದೆ. ಇಂದು ಲಕ್ಷಾಂತರ ಜನ ಹೆಜ್ಜೆ ಹಾಕಿದ್ದು, ಲೆಕ್ಕ ಹಾಕಲು ಸಾಧ್ಯವಿಲ್ಲ. 30 ಡ್ರೋನ್ ಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರ ಹೆಜ್ಜೆಯನ್ನು ಸೆರೆಹಿಡಿದಿವೆ.
ಯಾರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿರಲಿಲ್ಲವೋ ಅವರು ನಿಮ್ಮ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ, ಈ ಸವಿ ನೆನಪಿಗಾಗಿ ನಿಮಗೆ ಪ್ರಮಾಣ ಪತ್ರವನ್ನು ನೀಡಲು ಪ್ರಯತ್ನಿಸುತ್ತೇನೆ.
ನೀವಿಂದು ಚರಿತ್ರೆ ಸೃಷ್ಟಿಸಿದ್ದು, ದೇಶಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ, ಶಕ್ತಿ ತುಂಬಿದ್ದೀರಿ. ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ರಾಷ್ಟ್ರಗೀತೆ ತಂದುಕೊಟ್ಟ ನಮ್ಮ ಪೂರ್ವಜರುಗಳಿಗೆ ಗೌರವ ಸಲ್ಲಿಸಿದ್ದೀರಿ. ಇದು ನಿಮ್ಮ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದಾಗಲಿದೆ.
ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದೇ ರೀತಿ ನೀವು ನಿಮ್ಮ ಹುಟ್ಟು ಸಾವಿನ ಮಧ್ಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿರುವುದು ಒಂದು ಸಾಧನೆ.
ಈ ಕಾರ್ಯಕ್ರಮ ಯಶಸ್ಸು ಸಾಧಿಸಲು ನಾನು ಹಲವು ಸಮಿತಿ ರಚಿಸಿದ್ದೆ. ಪರಮೇಶ್ವರವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಿತಿ, ರಾಮಲಿಂಗ ರೆಡ್ಡಿ ಹಾಗೂ ಡಿಕೆ ಸುರೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆ ಜವಾಬ್ದಾರಿ ನೀಡಲಾಗಿತ್ತು, ಸಾರಿಗೆ ವ್ಯವಸ್ಥೆಗೆ ರೇವಣ್ಣ ಅವರು, ಆಹಾರ ಜವಾಬ್ದಾರಿಯನ್ನು ದಿನೇಶ್ ಗುಂಡೂರಾವ್ ಅವರು, ಅಣ್ಣ ಸಂಗ್ರಹಣೆಗೆ ಕೆ ಜೆ ಚಾರ್ಜ್ ಅವರು, ಪ್ರಚಾರದ ಜವಾಬ್ದಾರಿಯನ್ನು ಎಂಬಿ ಪಾಟೀಲ್ ಅವರು, ಸಂಸ್ಕೃತಿಕ ಕಾರ್ಯಕ್ರಮ ಜವಾಬ್ದಾರಿಯನ್ನು ಬಿ ಎಲ್ ಶಂಕರ್ ಅವರ ತಂಡ ವಹಿಸಿಕೊಂಡಿತ್ತು. ಶ್ರೀನಿವಾಸ್ ಹಾಗೂ ನಲಪಾಡ್ ಅವರ ತಂಡ ಮಾಡಿದ ಸಹಕಾರವನ್ನು ನಾನು ಮರೆಯಲು ಸಾಧ್ಯವಿಲ್ಲ. ಇವರೆಲ್ಲರಿಗೂ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.
ಇವರ ಜೊತೆಗೆ ಮನೆ ಮನೆಗೆ ಹೋಗಿ ಪಾಂಪ್ಲೆಟ್ ಹಂಚಿ ಪ್ರಚಾರ ಮಾಡಿದ ಕೀರ್ತಿ ಅವರ ಎನ್ ಎಸ್ ಯು ಐ ತಂಡ, ಮಹಿಳಾ ಕಾಂಗ್ರೆಸ್, ಕಾರ್ಮಿಕ ಹಾಗೂ ಅಲ್ಪಸಂಖ್ಯಾತ ಹಾಗೂ ರೈತ ಘಟಕಗಳು ಮಾಡಿದ ಸಹಾಯಕ್ಕೆ ಧನ್ಯವಾದಗಳು. ಇನ್ನು ನಮ್ಮ ಸೇವಾದಳದ ತಂಡಕ್ಕೆ ಪಾದಯಾತ್ರೆ ಮಾರ್ಗದಲ್ಲಿ ಆಕಸ್ಮಿಕವಾಗಿ ಬಿದ್ದಿರುವ ರಾಷ್ಟ್ರ ಧ್ವಜಗಳನ್ನು ಗೌರವಪೂರ್ಣವಾಗಿ ಎತ್ತಿಕೊಂಡು ಅದಕ್ಕೆ ಅಪಮಾನ ಆಗದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ನೀಡಿದೆ. ಅವರ ಕೆಲಸ ಮಾಡಿದ್ದು ಅವರಿಗೆ ಶುಭ ಕೋರುತ್ತೇನೆ. ಮಾಧ್ಯಮಗಳ ಸಹಕಾರ, ಪ್ರಿಯಾಂಕ ಖರ್ಗೆ ಅವರ ನೇತೃತ್ವದ ಸಂವಹನ ವಿಭಾಗದ ಪರಿಶ್ರಮ ಎಲ್ಲವೂ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ.
ಈ ದೇಶ ಕವಲು ದಾರಿಯಲ್ಲಿ ಹೊರಟಿದೆ. ಜನ ಬಹಳ ನೋವಿನಿಂದ ನರಳುತ್ತಿದ್ದಾರೆ. ಜನ ಆತಂಕದಲ್ಲಿದ್ದಾರೆ. ಅವರ ಆದಾಯ ಡಬಲ್ ಆಗಿಲ್ಲ. ಬೆಲೆ ಏರಿಕೆ ಪಾತಾಳಕ್ಕೆ ಕುಸಿತಿದೆ. ಕೆಲವರು ದೇಶದ ಚರಿತ್ರೆಯನ್ನು ಬದಲಿಸಲು ಹೊರಟಿದ್ದಾರೆ. ದೇಶದ ಇತಿಹಾಸವನ್ನು ಯಾರು ಬದಲಿಸಲು ಸಾಧ್ಯವಿಲ್ಲ.
ನಿನ್ನೆ ಸರ್ಕಾರ ನೀಡಿದ ಜಾಹೀರಾತಿನಲ್ಲಿ ನೆಹರೂ ಅವರ ಹೆಸರನ್ನೇ ಕೈಬಿಟ್ಟು, ಇತಿಹಾಸದಿಂದ ಅವರ ಹೆಸರು ತೆಗೆದುಹಾಕುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿಗಳಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ನೆಹರೂ ಅವರ ಹೆಸರು ಸ್ಮರಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ನೆಹರು ಕುಟುಂಬ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ದೇಶಕ್ಕಾಗಿ ತಮ್ಮ ಆಸ್ತಿಗಳನ್ನು ತ್ಯಾಗ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ಕೂಡ ಜೈಲುವಾಸ ಅನುಭವಿಸಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಕೂಡ ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಇಂತಹ ಕುಟುಂಬದ ಬಗ್ಗೆ ಟೀಕೆ ಟಿಪ್ಪಣಿ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ಅವರು ದೇಶಕ್ಕಾಗಿ 33 ಗುಂಡುಗಳಿಂದ ಪ್ರಾಣತ್ಯಾಗ ಮಾಡಿದರು. ಮತ್ತು ರಾಜೀವ್ ಗಾಂಧಿ ಅವರು ಬಾಂಬ್ ಸ್ಫೋಟದಿಂದ ದೇಶಕ್ಕೆ ಪ್ರಾಣಬಿಟ್ಟರು. ಇಂತಹ ತ್ಯಾಗದ ಕುಟುಂಬವನ್ನು ಅವಹೇಳನ ಮಾಡುತ್ತಿರುವ ಕೆಲಸ ಈ ದೇಶದಲ್ಲಿ ನಡೆಯುತ್ತಿದೆ. ಇದನ್ನು ಕೊನೆಗೊಳಿಸಬೇಕು. ಇದು ಕೇವಲ ನಿಮ್ಮಿಂದ ಮಾತ್ರ ಸಾಧ್ಯ.
ನಾನು ಬೇರೆ ರಾಜಕಾರಣ ಮಾತನಾಡುವುದಿಲ್ಲ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಬೇಕು. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುತ್ತೇವೆ ನಿಮ್ಮ ಸೇವೆ ಮಾಡುತ್ತೇವೆ. ನೀವು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ.
ತ್ರಿವರ್ಣ ಧ್ವಜ, ಸಂವಿಧಾನ, ಸಮಾನತೆ, ಯುವಕರ ಭವಿಷ್ಯ, ಮಹಿಳೆಯರ ರಕ್ಷಣೆ, ಎಲ್ಲ ಜಾತಿ ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
[15/08, 9:26 PM] Ravi Gowda. Kpcc. official: *ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*
*ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ:*
ಇಂದು ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿದ್ದು, ಸಹಾತ್ಮಾ ಗಾಂಧಿ, ಪಂಡಿತ್ ನೆಹರೂ, ಸರ್ದಾರ್ ಪಟೇಲರು, ಮೌಲಾನ ಅಬ್ದುಲ್ ಕಲಾಂ, ಅಂಬೇಡ್ಕರ್ ಸೇರಿದಂತೆ ಲಕ್ಷಾಂತರ ಮಂದಿ ಯಾಕೆ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.
ನೆಹರೂ ಅವರು ಕಾಂಗ್ರೆಸ್ ಅದ್ಯಕ್ಷರಾಗಿದ್ದಾಗ ಈ ತಿರಂಗಾವನ್ನು ದೇಶದ ಸ್ವಾತಂತ್ರ್ಯದ ಸಂಕೇತವಾಗಿ ಏಕೆ ಹಾರಿಸಲಾಯಿತು? ಈ ಹೋರಾಟಗಾರರು ಜೈಲು ಅನುಭವಿಸಿದ್ದು ಯಾಕೆ? ಭಗತ್ ಸಿಂಗ್ ಅವರು ದೇಶಕ್ಕಾಗಿ ಗಲ್ಲಿಗೇರಿದ್ದು ಯಾಕೆ? ಸುಭಾಷ್ ಚಂದ್ರ ಬೋಸ್ ಅವರು ಭಾರತ್ ಹಿಂದ್ ಅಜಾದಿ ಸೇನೆ ಕಟ್ಟಿದ್ದು ಯಾಕೆ? ಲಕ್ಷಾಂತರ ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಯಾಕೆ? ಬ್ರಿಟೀಷರ ಸಂಕೋಲೆಯಿಂದ ದೇಶವನ್ನು ಬಿಡಿಸಿ ಗುಲಾಮಗಿರಿಯಿಂದ ಹೊರಬರಲು ಈ ಹೋರಾಟ ಮಾಡಿದರು. ಇದು ಸಮಾನತೆ, ರೈತರು, ಬಡವರ ರಕ್ಷಣೆಗೆ ಮಾಡಿದ ಹೋರಾಟವಾಗಿತ್ತು.
ನಮ್ಮ ದೇಶ ತನ್ನದೇ ಆದ ಅಧಿಕಾರ, ಸರ್ಕಾರ ರಚಿಸಿ ಸ್ವಾವಲಂಬನೆಯಾಗಿ ಬದುಕುವ ಸಲುವಾಗಿ, ಸ್ವಾಭಿಮಾನಕ್ಕಾಗಿ ಮಾಡಿದ ಹೋರಾಟ. 75 ವರ್ಷಗಳಲ್ಲಿ ಈ ದೇಶ ಬಹಳಷ್ಟು ಬದಲಾಗಿದೆ. ಇಂದು ದೇಶ ವಿಶ್ವದಲ್ಲೇ ಅತ್ಯಂತ ಯುವ ದೇಶವಾಗಿದೆ. ಕೃಷಿ ಉತ್ಪಾದನೆ, ಉದ್ಯೋಗ, ವಿಜ್ಞಾನ ಕ್ಷೇತ್ರಗಳಲ್ಲಿ ಭಾರತ ಮೇಲ್ಪಕ್ತಿಯಲ್ಲಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸ್ವಾತಂತ್ರ್ಯದ ಹೋರಾಟ ಪೂರ್ಣಗೊಂಡಿದೆಯೇ ಎಂದು ಯುವ ಪೀಳಿಗೆಗೆ ಕೇಳಬಯಸುತ್ತೇನೆ. ಪ್ರಜಾತಂತ್ರ ವ್ಯವಸ್ಥೆ ಮೇಲೆ ನಡೆಯುತ್ತಿರುವ ನಿರಂತರ ದಾಳಿ, ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಎಲ್ಲ ಸ್ತಂತ್ರ್ಯ ಹೋರಾಟಗಾರರು ನಮಗೆ ಕೊಟ್ಟ ಸಂವಿಧಾನದ ಮೇಲೂ ದಾಳಿಯಾಗುತ್ತಿದೆ. ಇಂದು ದೇಶದಲ್ಲಿ ವೈಜ್ಞಾನಿಕ ಚಿಂತನೆ ಮೇಲೆ ದಾಳಿ ಆಗುತ್ತಿದೆ. ಈ ದೇಶವನ್ನು ಕೇವಲ ಸಂವಿಧಾನದ ಮೂಲಕ ಮುನ್ನಡೆಸಲಾಗುತ್ತದೆಯೇ ಹೊರತು, ಬೇರೆ ವಿಚಾರಗಳಿಂದ ಅಲ್ಲ. ಈ ದೇಶ ಪ್ರೀತಿ ವಿಶ್ವಾಸದಿಂದ ನಡೆಯುತ್ತದೆಯೇ ಹೊರತು ದಬ್ಬಾಳಿಕೆಯಿಂದ ಅಲ್ಲ. ಈ ದೇಶ ದಲಿದರ ಮೇಲೆ ದಬ್ಬಾಳಿಕೆ ಮಾಡಿ, ಯುವಕರ ಉದ್ಯೋಗ ಕಿತ್ತುಕೊಂಡು, ಮಹಿಳೆಯರ ಗೌರವ ಕಸಿದು ಮುನ್ನಡೆಸಲು ಸಾಧ್ಯವಿಲ್ಲ. ಎಲ್ಲರನ್ನು ಒಟ್ಟಾಗಿ ತೊಗೆದುಕೊಂಡು ಹೋಗುವ ಮೂಲಕ ಮುಂದೆ ಸಾಗುತ್ತದೆ. ಅಲ್ಪಸಂಖ್ಯಾತರನ್ನು ಕೆಳದರ್ಜೆಯವರಂತೆ ಕಂಡು, ಬಡವರ ಜೀವನ ಕಸಿದು ಈ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ.
ಈ ದೇಶದಲ್ಲಿ ಉಡುಗೆ, ವೇಷ ಭೂಷಣ, ವರ್ಣ, ಭಾಷೆ, ಪ್ರದೇಶ, ಧರ್ಮದ ಆಧಾರದ ಮೇಲೆ ಭೇದ ಭಾವ ಮಾಡಲು ಸಾಧ್ಯವಿಲ್ಲ. ಆದರೆ ಇಂದು ಈ ಭೇದ ಭಾವ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರೀತಿಯಿಂದ ಹೋರಾಡಬೇಕು. ಹೀಗಾಗಿ ನಾವೆಲ್ಲರೂ ಹೊಸ ಸ್ವಾತಂತ್ರ್ಯ ಹೋರಾಟ ಮಾಡಬೇಕು. ಈ ಸ್ವಾತಂತ್ರ್ಯದಲ್ಲಿ ಯಾರೂ ಹಸಿವಿನಿಂದ ಮಲಗಬಾರದು, ಯುವಕರ ಕೈಯಲ್ಲಿ ಉದ್ಯೋಗ, ರೈತರು ನೆಮ್ಮದಿ ಬದುಕು, ದಲಿತರು ಆದಿವಾಸಿಗಳು ಎಲ್ಲರ ಹಿತಕಾಯುವ ದೇಶ ನಿರ್ಮಾಣವಾಗುವ ಸ್ವಾತಂತ್ರ್ಯದ ಹೋರಾಟದ ಮಾಡಬೇಕು.
ಈ ವಿಶೇಷ ಗಳಿಗೆಯಲ್ಲಿ ನಾವೆಲ್ಲರೂ ದೇಶದ ಸಂವಿಧಾನ, ಬಡವರು, ಯುವಕರು, ರೈತರು, ಶೋಷಿತರ ಪರವಾಗಿ ಹೋರಾಟ ಮಾಡುವ ಪಣ ತೊಡಬೇಕು.
*ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:*
ಇಂದು ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವ ಮಹತ್ತರ ದಿನ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವೀರ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಾರಿಯುದ್ದಕ್ಕೂ ಬೇರೆ ಪಕ್ಷದ ಕಾರ್ಯಕರ್ತರು, ಕನ್ನಡ ಪರ ಸಂಘಟನೆಗಳು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಸುರ್ಜೆವಾಲ ಅವರು ಸ್ವತಂತ್ರ ಭಾರತದ ಆಶಯಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ಸಂವಿಧಾನ ಇರಲಿಲ್ಲ. 542 ರಾಜಸನೆತನಗಳಿದ್ದ ಈ ಭಾಗದಲ್ಲಿ ಭಾರತೀಯರಿಗೆ ಸ್ವತಂತ್ರ್ಯ ರಾಷ್ಟ್ರ ನೀಡಬೇಕು ಎಂದು ಮಹಾತ್ಮ ಗಾಂಧಿ ಅವರ ಹೋರಾಟದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ.
ನಾವುಗಳು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ನಮ್ಮ ಪೂರ್ವಜರು ತ್ಯಾಗ ಬಲಿದಾನದಿಂದ ಈ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ದೆಹಲಿಯಲ್ಲಿ ಕೂತಿರುವ ವಿಶ್ವಗುರು ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಸಂವಿಧಾನ ಬುಡಮೇಲು ಮಾಡುವ, ಪ್ರಜಾಪ್ರಭುತ್ವ ಧ್ವಂಸ ಮಾಡುವ ಹಾಗೂ ತ್ರಿವರ್ಣ ಧ್ವಜಕ್ಕೆ ಅಗೌರವ ಸೂಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸಬೇಕಿದೆ. ಸ್ವತಂತ್ರ ಪೂರ್ವದಲ್ಲಿ ಸಂವಿಧಾನ ಇಲ್ಲದಿದ್ದಾಗ ಶೋಷಿತರನ್ನು ಪ್ರಾಣಿಗಿಂತ ಕೀಳಾಗಿ ಕಾಣುತ್ತಿದ್ದರು. ಹೀಗಾಗಿ ನೆಹರೂ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ತಂದು, ಮನುಷ್ಯರನ್ನು ಮನುಷ್ಯರಾಗಿ ಕಾಣುವಂತಹ ಸಮಾನತೆಯ ಭಾರತವನ್ನು ನಾವು ಕಾಪಾಡಬೇಕಿದೆ.
ಈ ದೇಶದಲ್ಲಿ ಸಂವಿಧಾನದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇರುವಷ್ಟು ಅವಕಾಶ ಹಕ್ಕು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಇದೆ. ನಾವು ಕೇವಲ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡಿ ಮನೆಗೆ ಹೋಗಬಾರದು. ನಮ್ಮ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಕಾಂಗ್ರೆಸ್ ಕಾರ್ಯಕರ್ತರು ಪವಿತ್ರ ಪಕ್ಷದ ಕಾರ್ಯಕರ್ತರಾಗಿದ್ದೀರಿ. ಹೀಗಾಗಿ ಅದರ ಘನತೆ, ಗೌರವ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡುವವರು ದೇಶದ್ರೋಹಿಗಳು ಎಂದು ಎಲ್ಲರೂ ಒಕ್ಕೋರಲಿನಿಂದ ಹೇಳಬೇಕು. ಸಂವಿಧಾನ ಬುಡಮೇಲು ಮಾಡುವವರು ದೇಶಪ್ರೇಮಿಗಳಲ್ಲ, ಪ್ರಜಾಪ್ರಭುತ್ವ ನಾಶ ಮಾಡುವ ಸರ್ವಾಧಿಕಾರಿ ಮನಸ್ಥಿತಿಯನ್ನು ವಿರೋಧಿಸಬೇಕಿದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗಳಿಗೆ ನೀಡಿ ಮುಂದೆ ಸಾಗುವಂತೆ ಮಾಡಬೇಕು.
ಕಳೆದ 75 ವರ್ಷಗಳಲ್ಲಿ ಅಭಿವೃದ್ಧಿ ಮಾಡಿ ಇಡೀ ದೇಶಕ್ಕೆ ಬೆಂಗಳೂರು ಮಾದರಿಯಾಗಿದೆಯೇ ಹೊರತು ಗುಜರಾತ್ ಮಾದರಿ ಅಲ್ಲ. ಈ ಹಿರಿಮೆ ಉಳಿಸಿಕೊಳ್ಳಬೇಕಾದರೆ, 40% ಕಮಿಷನ್ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ನೆಹರೂ ಅವರಿಗೆ ಅಪಮಾನ ಮಾಡುವ ಪಕ್ಷ ಬಿಜೆಪಿ. ಹೀಗಾಗಿ ನೀವೆಲ್ಲರೂ ಒಗ್ಗಟ್ಟಿನಿಂದ ಬಂದಿದ್ದು, ತ್ರಿವರ್ಣ ಧ್ವಜಕ್ಕೆ, ಸಂವಿಧಾನಕ್ಕೆ ಗೌರವ ನೀಡದವರನ್ನು ಮನೆಗೆ ಕಳುಹಿಸಬೇಕು. ಸಂವಿಧಾನ ಹೆಸರಲ್ಲಿ ಪ್ರತಿಜ್ಞೆ ಮಾಡಿ, ಸಂವಿಧಾನಕ್ಕೆ ಅಪಮಾನ ಮಾಡುವ ಬಿಜೆಪಿಯ ಡೋಂಗಿ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕು ಎಂದು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ.
Post a Comment