*|ಪಿಬತ ಭಾಗವತಂ ರಸಮಾಲಯಂ||*Day16

[12/09, 9:07 PM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day16
ನಿನ್ನೆಯ ದಿನ ಚತುಃಶ್ಲೋಕಿ  ಭಾಗವತದ ಬಗ್ಗೆ ಕೇಳಿದ್ದೇವೆ.
ಇದರಲ್ಲಿ ಅನೇಕ ಪ್ರಮೇಯಗಳು ಇದ್ದಾವೆ.
ಅದರಲ್ಲಿ ಭಗವಂತ ಶ್ರೀ ಬ್ರಹ್ಮ ದೇವರಿಗೆ ಹೇಳಿದ್ದಾನೆ.
*ಸೃಷ್ಟಿ ಮೊದಲಿಗೆ,ನಂತರ ಪ್ರಳಯ ಕಾಲದಲ್ಲಿ ಉಳಿದು ಕೊಳ್ಳುವ ನಾನೊಬ್ಬನೇ.ಎಲ್ಲಾ ಕಾಲದಲ್ಲಿ ನಾನು ಶಾಶ್ವತ ವಾಗಿ ಇರುವವನು.ನನಗೆ ಯಾರಿಂದಲು ಪ್ರಯೋಜನವಾಗಲಿ ಬಾಧೆಆಗಲಿ ಇಲ್ಲ.ಎಲ್ಲವು ನನ್ನ ಅಧೀನ.*
ನಂತರ ಒಂದು ಪ್ರಮೇಯ ಕೊಡುತ್ತಾನೆ. 
*ಗಡಿಗೆ ಮಾಡುವಾಗ ಬಳಸುವ ಮಣ್ಣು ಗಡಿಗೆ ಒಳಗಡೆ ಇದೆ.ಮತ್ತು ಗಡಿಗೆ ಹೊರಗಡೆ ಸಹ ಇದೆ.ಅದರಂತೆ ನಾನು ಎಲ್ಲರ ಒಳಗಡೆ ಹೊರಗಡೆ ಸೇರಿಕೊಂಡಿದ್ದೇನೆ.ದಾರ ಅಥವಾ ನೂಲು ಹೇಗೆ ಬಟ್ಟೆಯ ಒಳಗಡೆ ಮತ್ತು ಹೊರಗಡೆ ಇದೆಯೋ ಅದರಂತೆ ನಾನು ಸಹ ಎಲ್ಲರ ಒಳಗಡೆ ಮತ್ತು ಹೊರಗಡೆ ಸೇರಿರುತ್ತೇನೆ.ಪ್ರತಿಯೊಂದು ಚೇತನಾಚೇತನ ಪ್ರಪಂಚದಲ್ಲಿ ಒಳಗೆ ಮತ್ತು ಹೊರಗಡೆ ಇದ್ದೀನಿ* ಅಂತ ಹೇಳುತ್ತಾ
ಮುಂದೆ ನಾಲ್ಕನೇ ಶ್ಲೋಕದಲ್ಲಿ ಪರಮಾತ್ಮನಿಂದ ಈ ಜಗತ್ತು ಹೊರತಾಗಿ ಅವನಿಲ್ಲದೇ ಇಲ್ಲ.ಎನ್ನುವ ಚಿಂತನೆ ಸದಾ ಮಾಡಬೇಕು.
ಇದೇ ಚತುಃಶ್ಲೋಕಿ ಭಾಗವತ ಅಥವಾ ಮೂಲ ಭಾಗವತದ ಸಾರಾಂಶ.ಹೆಚ್ಚಿನ ಮಾಹಿತಿಯನ್ನು ಬಲ್ಲವರಿಂದ ತಿಳಿಯಬಹುದು.
ನಂತರದಲ್ಲಿ ಶ್ರೀಬ್ರಹ್ಮ ದೇವರು ತಪಸ್ಸು ಮಾಡುವಾಗ ನಾರದರು ಬಂದು ಕೇಳುತ್ತಾರೆ. *ಯಾರಿಗೊಸ್ಕರ ಈ ತಪಸ್ಸು?* ಎಂದು ಕೇಳಲು ಅದಕ್ಕೆ ಶ್ರೀಬ್ರಹ್ಮ ದೇವರು 
*ನಾನು ಪರಮಾತ್ಮನ ಕುರಿತು ತಪಸ್ಸು ಮಾಡುತ್ತಾ ಇದ್ದೀನಿ.ಅದರಿಂದ ನನಗೆ ಆದ ಲಾಭವೇನು ಎಂದರೆ ನನ್ನ ಮನಸ್ಸು ಎಂದು ದುರ್ಮಾರ್ಗದ ಕಡೆ ಹೋಗಿಲ್ಲ. ನನ್ನ ಮನಸ್ಸು, ವಾಕ್,ಹಾಗು ದೇಹ ಸಹ ಶುದ್ದವಾಗಿದೆ.ಇದೆಲ್ಲಾ ಆ ಪರಮಾತ್ಮನ ಕುರಿತು ತಪಸ್ಸು ಮಾಡುತ್ತಾ ಇರುವುದರಿಂದ ಅಂತ ಹೇಳಿದ್ದಾರೆ.*
*ಈ ಶ್ರೀ ಮದ್ ಭಾಗವತ ವೇದಕ್ಕೆ ಸಮ. ಮೊದಲು ಯಾವುದೇ ಗ್ರಂಥವನ್ನು ಓದಲು ಆರಂಭಿಸಬೇಕಾದರೆ ಆ ಗ್ರಂಥ ಕರ್ತೃ ಋಷಿ  ದೇವತೆ ಎಲ್ಲವನ್ನು ಸ್ಮರಣೆ ಮಾಡಬೇಕು. ನಾವು ಗಾಯತ್ರಿ ಜಪ ಮಾಡುವಾಗ ಹೇಗೆ ಋಷಿ ದೇವತೆ ಎಲ್ಲವನ್ನು ಸ್ಮರಣೆ ಮಾಡುತ್ತೇವೆಯೋ ಹಾಗೆ ಈ ವೇಧಸಮಾನವಾದ ಶ್ರೀ ಭಾಗವತವನ್ನು ಹಾಗೆ ಸ್ಮರಣೆ ಮಾಡಬೇಕು.*
*ಈ ಭಾಗವತಕ್ಕೆ ಮೊದಲ ಋಷಿ ಶ್ರೀಮನ್ನಾರಾಯಣ . ಮೂಲ ಭಾಗವತ ಇದ್ದದ್ದು ನಾಲ್ಕು ಶ್ಲೋಕಗಳ  ಭಾಗವತ.*
*ಈ ಚತುಶ್ಲೋಕೀ ಭಾಗವತವನ್ನು ಶ್ರೀಮನ್ ನಾರಾಯಣದೇವರು ಬ್ರಹ್ಮ ದೇವರಿಗೆ ಉಪದೇಶ ಮಾಡಿದನು. ಆನಂತರ ಶ್ರೀಬ್ರಹ್ಮ ದೇವರು ಐವತ್ತು ಶ್ಲೋಕಗಳ ಶ್ರೀ ಮದ್ಭಾಗವತವನ್ನು ರಚಿಸಿ ಶ್ರೀನಾರದರಿಗೆ ಉಪದೇಶ ಮಾಡಿದರು. ಮುಂದೆ ಶ್ರೀನಾರದರು ಶ್ರೀವೇದವ್ಯಾಸ ದೇವರಿಗೆ ಈ ಐವತ್ತು ಶ್ಲೋಕಗಳ ಭಾಗವತವನ್ನು ಒಪ್ಪಿಸಿ ಇದನ್ನು ಇನ್ನು ವಿಸ್ತಾರ ಮಾಡಿ ಎಂದು ಭಿನ್ನವಿಸಿದರು.* ಮುಂದೆ *ಶ್ರೀವೇದವ್ಯಾಸರು 12 ಸ್ಕಂದ 18,000 ಗ್ರಂಥಾತ್ಮಕ ಶ್ಲೋಕಗಳನ್ನು ಮಾಡಿದರು.* *ಮುಂದೆ ಶ್ರೀವೇದವ್ಯಾಸ ದೇವರು ತಮ್ಮ ಮಗನಾದ ಶ್ರೀಶುಕಮುನಿಗಳಿಗೆ ಉಪದೇಶಿಸಿದರು.* *ಶ್ರೀಶುಕಮುನಿಗಳು ಮುಂದೆ ಪರೀಕ್ಷಿತ್ ರಾಜನಿಗೆ ಉಪದೇಶಿಸಿದರು.*
 *ಶ್ರೀಶುಕಮುನಿಗಳು ಪರೀಕ್ಷಿತ್ ರಾಜನಿಗೆ ಶ್ರೀ ಮದ್ ಭಾಗವತ ಉಪದೇಶದ ಸಂದರ್ಭದಲ್ಲಿ ಸೂತಪುರಾಣಿಕರು ಅಲ್ಲಿ ತಾವು ಕೂಡ ಭಾಗವತ ಶ್ರವಣ ಮಾಡಿದ್ದನ್ನು ಶೌನಕಾದಿಗಳಿಗೆ ಹೇಳಿದ್ದು ಈ  ಶ್ರೀ ಮದ್ ಭಾಗವತ ಇದು ಒಂದು ಪರಂಪರೆ.*

ಇನ್ನೊಂದು ಪರಂಪರೆಯಲ್ಲಿ *ಶ್ರೀಮನ್ನಾರಾಯಣದೇವರಿಂದ - ಶ್ರೀಶೇಷದೇವರಿಗೆ ಉಪದೇಶ - ಶ್ರೀಶೇಷದೇವರಿಂದ ಶ್ರೀಸನತ್ಕುಮಾರರಿಗೆ - ಶ್ರೀಸನತ್ಕುಮಾರರಿಂದ ಶ್ರೀಸಾ೦ಖ್ಯಾಯನರಿಗೆ, ಶ್ರೀಸಾಂಖ್ಯಾಯನರಿ೦ದ - ಶ್ರೀಪರಾಶರರಿಗೆ , ಶ್ರುಇಪರಾಶರರಿಂದ - ಮೈತ್ರೇಯರಿಗೆ, ಮೈತ್ರೆಯರಿಂದ ವಿದುರನಿಗೆ ಹೇಳಿದ್ದಾರೆ.*
ಶ್ರೀ ಮದ್ಭಾಗವತಕ್ಕೆ  "ಜಯ" ಎಂಬ ಹೆಸರಿದೆ.  
*ಶ್ರೀ ಮದ್ಭಾಗವತದ ನಾಯಕ "ಶ್ರೀ ಮನ್ ನಾರಾಯಣ ದೇವರು" ಅವನಿಗೆ ನಮಸ್ಕಾರ. ಆನಂತರ ಅವನ ಪತ್ನಿಯಾದ ಶ್ರೀಲಕ್ಷ್ಮಿದೇವಿಯರಿಗೆ ನಮಸ್ಕಾರ. ಅವಳು ಸಕಲ ವಾಗ್ಮಯ ಗಳಿಗೆ ಅಭಿಮಾನಿ ದೇವತೆಯು. ನಂತರ ನರೋತ್ತಮರಾದ ಶ್ರೀ ಮುಖ್ಯಪ್ರಾಣ ದೇವರಿಗೆ ನಮಸ್ಕಾರ. ಎಲ್ಲ ಜ್ಞಾನ ಕಾರ್ಯಗಳಿಗೆ ಮುಖ್ಯ ಪ್ರಾಣ ದೇವರು ಅಧ್ಯಕ್ಷರು. ಆನಂತರ ಸರಸ್ವತಿ ಭಾರತೀ ದೇವಿಯರಿಗೆ ನಮಸ್ಕಾರ. ಕಾರಣ ಇವರು ವಾಗ್ದೇವತೆಗಳು.* *ಶ್ರೀಶೇಷದೇವರಿಗೆ ನಮಸ್ಕಾರ ಕಾರಣ ಇವರು ಈ ಜ್ಞಾನ ಕಾರ್ಯಕ್ಕೆ ಉಪಾಧ್ಯಕ್ಷರು.*
*ಶ್ರೀ ಮದ್ ಭಾಗವತದ ಮೊದಲ ಅಕ್ಷರ "ಜ" ಕಾರಣ ಜನ್ಮಾಧ್ಯಸ್ಯ.. ಕೊನೆಯ ಅಕ್ಷರ "ಯ" ಕಾರಣ*
*ನಮಃ ಸನಾತನಯ ಆದ್ದರಿಂದ ಈ ಗ್ರಂಥಕ್ಕೆ "ಜಯ"  ಹೆಸರು.* 
ಇಲ್ಲಿಗೆ ಶ್ರೀ ಮದ್ ಭಾಗವತ ದಲ್ಲಿ ಬರುವ ಎರಡನೆಯ ಅಧ್ಯಾಯ ಮುಗಿದಿದೆ.
ನನ್ನ ಯೋಗ್ಯತೆ ಅನುಸಾರವಾಗಿ ತಿಳಿಸುವ ಪ್ರಯತ್ನ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ*

🙏ಶ್ರೀವಾಸುದೇವಾಯ ನಮಃ🙏
[12/09, 9:16 PM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post