ದೇಶದಲ್ಲಿ ಬೇಳೆಕಾಳು ಮತ್ತು ಈರುಳ್ಳಿ ಸಾಕಷ್ಟು ದಾಸ್ತಾನು ಇದೆ: ಸರ್ಕಾರ

ಅಕ್ಟೋಬರ್ 20, 2022
7:50PM

ದೇಶದಲ್ಲಿ ಬೇಳೆಕಾಳು ಮತ್ತು ಈರುಳ್ಳಿ ಸಾಕಷ್ಟು ದಾಸ್ತಾನು ಇದೆ: ಸರ್ಕಾರ

ಪ್ರಾತಿನಿಧಿಕ ಚಿತ್ರ
ಪ್ರಸಕ್ತ ಹಬ್ಬ ಹರಿದಿನಗಳಲ್ಲಿ ಬೇಳೆಕಾಳು ಮತ್ತು ಈರುಳ್ಳಿ ಬೆಲೆ ಏರಿಕೆಯಾಗುವುದಿಲ್ಲ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ದೇಶದಲ್ಲಿ ಬೇಳೆಕಾಳುಗಳು ಮತ್ತು ಈರುಳ್ಳಿ ಸಾಕಷ್ಟು ದಾಸ್ತಾನು ಇದೆ ಎಂದು ಹೇಳಿದರು. ಅಗತ್ಯ ವಸ್ತುಗಳ ಬೆಲೆ ಪರಿಸ್ಥಿತಿ, ಉತ್ಪಾದನೆ, ಆಮದು, ರಫ್ತು ಮತ್ತು ಲಭ್ಯತೆಯ ಮೇಲೆ ಕೇಂದ್ರವು ತೀವ್ರ ನಿಗಾ ಇರಿಸುತ್ತಿದೆ ಎಂದು ಅವರು ಹೇಳಿದರು.

43 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಬೇಳೆಕಾಳುಗಳು ಮತ್ತು 2.5 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಬಫರ್ ಸ್ಟಾಕ್‌ನಲ್ಲಿದೆ ಎಂದು ಅವರು ನಮಗೆ ಮಾಹಿತಿ ನೀಡಿದರು. ಬೆಲೆ ಏರಿಕೆಯನ್ನು ತಡೆಯಲು ರಾಷ್ಟ್ರೀಯ ಈರುಳ್ಳಿ ಬಫರ್ ಸ್ಟಾಕ್‌ನಿಂದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 54 ಸಾವಿರ ಟನ್ ಈರುಳ್ಳಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ವಿವಿಧ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಿಯಾಯಿತಿ ದರದಲ್ಲಿ ಬೇಳೆಕಾಳುಗಳನ್ನು ನೀಡುತ್ತಿದೆ ಎಂದು ಕಾರ್ಯದರ್ಶಿ ಹೇಳಿದರು. ಕೇಂದ್ರವು ಆಮದು ಮಾಡಿಕೊಂಡ ಒಂದು ಲಕ್ಷ ಮೆಟ್ರಿಕ್ ಟನ್ ಟರ್ ಮತ್ತು 50 ಸಾವಿರ ಟನ್ ಆಮದು ಮಾಡಿಕೊಂಡ ಉದ್ದಿನಬೇಳೆ ಖರೀದಿಯನ್ನು ಆರಂಭಿಸಿದೆ ಎಂದರು.

Post a Comment

Previous Post Next Post