KPCC ಮಾಹಿತಿ

[19/10, 5:27 PM] Kpcc official: *ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗೋಷ್ಠಿ ಮುಖ್ಯಾಂಶಗಳು:*

ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರಜಾಪ್ರಭುತ್ವ ಉಳಿಸಲು ಶ್ರಮಿಸಿದೆ. ಇದಕ್ಕೆ ಈಗ ಪಕ್ಷದ ಆಂತರಿಕ ಚುನಾವಣೆ ಸಾಕ್ಷಿ. ನಾವು ದೇಶ ಹಾಗೂ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡಿದ್ದೇವೆ.

24 ವರ್ಷಗಳ ನಂತರ ಪಕ್ಷದಲ್ಲಿ ಚುನಾವಣೆ ನಡೆದಿದೆ. ನಾನು ಈ ಸಂದರ್ಭದಲ್ಲಿ ಮೊದಲು ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಜನತೆ ಪರವಾಗಿ, ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಬಹಳ ಕಷ್ಟಕಾಲದಲ್ಲಿ ಅವರು ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿ, 10 ವರ್ಷಗಳ ಆಳ್ವಿಕೆಗೆ ಕಾರಣರಾಗಿದ್ದರು. ಆ ಮೂಲಕ ದೇಶಕ್ಕೆ ಶಕ್ತಿ ತುಂಬಿ ಬದಲಾವಣೆ ತಂದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದಾಗ ರಾಹುಲ್ ಗಾಂಧಿ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನ ತ್ಯಜಿಸಿದರು. ಆಗ ನಮ್ಮ ಕಾರ್ಯಕಾರಿ ಸಮಿತಿ ಸದಸ್ಯರು ಒತ್ತಾಯ ಮಾಡಿದಾಗ ಅವರಿಗೆ ಎಷ್ಟೇ ಸಮಸ್ಯೆ ಇದ್ದರೂ ಸೋನಿಯಾ ಗಾಂಧಿ ಅವರು ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಈಗ ಈ ಚುನಾವಣೆ ನಡೆಸಿದ್ದಾರೆ.

ಗಾಂಧಿ ಕುಟುಂಬವೇ ಪಕ್ಷದ ನೇತೃತ್ವ ವಹಿಸಬೇಕು ಎಂದು ನಾವು ಒತ್ತಾಯಿಸಿದರೂ ಅವರು ಗಾಂಧಿ ಕುಟುಂಬ ಹೊರತಾಗಿ ಬೇರೆಯವರು ನೇತೃತ್ವ ವಹಿಸಬೇಕು ಎಂದು ಸದಸ್ಯತ್ವ ಅಭಿಯಾನ ಹಾಗೂ ಚುನಾವಣೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ಮಾಡಲಾಗಿದೆ. ಇನ್ನು ರಾಜ್ಯದಿಂದ 503 ಮಂದಿ ಪ್ರತಿನಿಧಿಗಳು, ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಪಕ್ಷದ ಶಾಸಕರು ಬೇರೆ ಕಾರ್ಯಕರ್ತರಿಗೆ ಮತದಾನದ ಹಕ್ಕನ್ನು ನೀಡಿರುವ ದಾಖಲೆಗಳು ನಮ್ಮ ರಾಜ್ಯದಲ್ಲಿ ಇದೆ. ಸೋನಿಯಾ ಗಾಂಧಿ ಅವರು ಈ ಚುನಾವಣೆ ನಡೆಸಿದ್ದಾರೆ. ನಾನು ಹಾಗೂ ಸುರೇಶ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ನಿಮ್ಮ ಕುಟುಂಬದವರೇ ಅಧ್ಯಕ್ಷರಾಗಬೇಕು ಎಂದು ಕೇಳಿದಾಗ ಅವರು ನಗುತ್ತಾ, ನಾವು ಈಗಾಗಲೇ ನಿರ್ಧರಿಸಿಯಾಗಿದೆ. ನಿನ್ನೆಯಷ್ಟೇ ಶಶಿತರೂರ್ ಅವರು ಬಂದಿದ್ದರು, ಅವರು ಸ್ಪರ್ಧಿಸುತ್ತಿದ್ದಾರೆ. ನೀವು ನಿಲ್ಲುತ್ತೀರಾ ಎಂದು ತಮಾಷೆ ಮಾಡಿದರು. ನಾನು ಅದಕ್ಕೆ ಈಗಾಗಲೇ ಕೊಟ್ಟಿರುವ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದೆ. ಹೀಗೆ ಪಾರದರ್ಶಕವಾಗಿ ಅವರು ಯಾರ ಪರವೂ ಪ್ರಚಾರ ಮಾಡದೇ ಚುನಾವಣೆ ನಡೆಸಿದ್ದಾರೆ.

ನಿಜಲಿಂಗಪ್ಪನವರ ನಂತರ ದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರು ಆಯ್ಕೆಯಾಗಿರುವುದು ನಮ್ಮ ಪಾಲಿಗೆ ಭಾಗ್ಯ. ದೇಶಾದ್ಯಂತ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳು ಸಿಕ್ಕಿದ್ದು, ಶಶಿ ತರೂರ್ ಅವರಿಗೆ 1072 ಮತಗಳು ಸಿಕ್ಕಿವೆ. 472 ಮತಗಳು ಅಮಾನ್ಯವಾಗಿವೆ.

ರಾಜ್ಯದ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವುದರ ಜತೆಗೆ ಶಶಿತರೂರ್ ಅವರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಕಾರಣ, ಅವರು ಸ್ಪರ್ಧೆ ಮಾಡಿ, ಆರೋಗ್ಯಕರ ಚುನಾವಣೆ, ಪ್ರಜಾಪ್ರಭುತ್ವ ಮೌಲ್ಯ ರಕ್ಷಣೆಯಾಗಿದೆ.

ಖರ್ಗೆ ಅವರು ಸುಮಾರು 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಶಾಸಕರಿಂದ ಹಿಡಿದು ಮಂತ್ರಿಯಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾಗಿ, ಲೋಕಸಭೆಗೆ ಆಯ್ಕೆಯಾಗಿ, ಸಚಿವರಾಗಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿ ಶ್ರಮಿಸಿದರೆ ಯಾವ ಹಂತದವರೆಗೂ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಖರ್ಗೆ ಅವರೇ ಸಾಕ್ಷಿ.

ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವ ಮುನ್ನ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಈ ಪಕ್ಷದ ಆಂತರಿಕ ಪ್ರಜಾಪ್ರಭುತ್ವ. ದೇಶದಲ್ಲಿ ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಚುನಾವಣೆ ನಡೆಯಲು ಸಾಧ್ಯವಿಲ್ಲ. ರಾಜಕೀಯ ವಿರೋಧಿಗಳು ಸಾಕಷ್ಟು ಟೀಕೆ ಮಾಡಿದ್ದಾರೆ. ಬಿಜೆಪಿಯವರು ಗಾಂಧಿ ಕುಟುಂಬ ಎಂದು ಮಾತನಾಡುತ್ತಾರೆ. ಆದರೆ ಬಿಜೆಪಿಯವರು ಒಂದೇ ರಾಜ್ಯಕ್ಕೆ ಎಲ್ಲ ಸ್ಥಾನಗಳನ್ನು ನೀಡಿದ್ದಾರೆ. ಅವರು ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರು ನಮ್ಮ ಬಗ್ಗೆ ಆರೋಗ್ಯಕರ ಟೀಕೆ ಮಾಡುವುದನ್ನು ಬಿಟ್ಟು ಹಳದಿ ಕಣ್ಣಲ್ಲಿ ನೋಡಿಕೊಂಡು ಬರುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇವಲ ಕರ್ನಾಟಕ ರಾಜ್ಯದ ನಾಯಕರು ಎಂದು ಬಿಂಬಿಸುವುದಿಲ್ಲ. ಅವರು ರಾಷ್ಟ್ರೀಯ ನಾಯಕರು. ಅವರು ಅಧ್ಯಕ್ಷರಾಗಿರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಶಕ್ತಿ ಬರುತ್ತದೆ. ಜತೆಗೆ ರಾಷ್ಟ್ರಕ್ಕೆ ದೊಡ್ಡ ಸಂದೇಶ ರವಾನೆಯಾಗಿದೆ.

135 ವರ್ಷಗಳ ಇತಿಹಾಸವುಳ್ಳ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಹಾದಿಯನ್ನು ಎಲ್ಲರೂ ಗಮನಿಸಿದ್ದಾರೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಸಮಯದಲ್ಲೇ ಮತ ಚಲಾಯಿಸಿದ್ದಾರೆ. ದೇಶದ ಎಲ್ಲ ಪಕ್ಷದಲ್ಲಿ ಈ ವ್ಯವಸ್ಥೆ ಇರಬೇಕು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಲ್ಲರ ಪರವಾಗಿ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯಕ್ಕೆ ಉತ್ತಮ ಶಕ್ತಿ ದೊರೆಯಲಿದೆ.

*ಪ್ರಶ್ನೋತ್ತರ:*


ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗಿರುತ್ತಾರೆ ಎಂಬ ಬಿಜೆಪಿ ಟೀಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ಬಿಜೆಪಿಯಲ್ಲಿ ನಡ್ಡಾ ಅವರನ್ನು ಏನೆಂದು ಕರೆಯಬೇಕು. ಅವರು ಚುನಾವಣೆಯಲ್ಲಿ ಗೆದ್ದಿದ್ದರಾ? ಅಮಿತ್ ಶಾ ಯಾವ ರಾಜ್ಯದವರು? ಹೇಗೆ ಆಯ್ಕೆಯಾದರು? ಖರ್ಗೆ ಅವರಿಗೆ ಅವರದೇ ಆದ ಅನುಭವವಿದೆ. ನಾನು ಅಧ್ಯಕ್ಷನಾದ ನಂತರ ಎಲ್ಲ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಪಕ್ಷಬೇಧ ಮರೆತು ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿದರು. ಪಕ್ಷದ ಕಷ್ಟ ಕಾಲದಲ್ಲಿ ಗಾಂಧಿ ಕುಟುಂಬ ಅಧ್ಯಕ್ಷ ಸ್ಥಾನ ವಹಿಸಿಕೊಂಡು 20 ವರ್ಷಗಳ ಕಾಲ ನಿಭಾಯಿಸಿದೆ. ಅವರ ಅನುಭವಗಳನ್ನು ನಿರಾಕರಿಸಲು ಸಾಧ್ಯವೇ? ಕೆಲವು ಸಂದರ್ಭದಲ್ಲಿ ಸಲಹೆ ಪಡೆಯಬೇಕಾಗುತ್ತದೆ. ನಾನು ಕೂಡ ಕೆಲವು ಸಂದರ್ಭಗಳಲ್ಲಿ ಅಲ್ಲಂ ವೀರಭದ್ರಪ್ಪ, ದೇಶಪಾಂಡೆ, ವೀರಪ್ಪ ಮೋಯ್ಲಿ, ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರ ಅಭಿಪ್ರಾಯ ಪಡೆಯುತ್ತೇನೆ. ನೀವು ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿಯನ್ನು ಹೊರಹಾಕುತ್ತೀರಾ? ಅದೇ ರೀತಿ ಕಾಂಗ್ರೆಸ್ ಕುಟುಂಬದಲ್ಲೂ ನಾವು ಹಿರಿಯರ ಸಲಹೆ ಪಡೆದು ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು

ಖರ್ಗೆ ಅವರ ಆಯ್ಕೆ ಕರ್ನಾಟಕದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ, ‘ನಿಷ್ಠೆ, ಸಮಾಜ, ಹಿರಿತನ, ಪ್ರಜಾಪ್ರಭುತ್ವ ವ್ಯವಸ್ಥೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ರಾಜ್ಯಕ್ಕೆ ಸಿಕ್ಕಿರುವುದು ಶಕ್ತಿಯಲ್ಲವೇ? ಕೇವಲ ರಾಜ್ಯ ಅಥವಾ ದಕ್ಷಿಣ ಭಾರತಕ್ಕೆ ಮಾತ್ರವಲ್ಲ ಅಖಂಡ ಭಾರತಕ್ಕೆ ಖರ್ಗೆಯವರ ಆಯ್ಕೆಯಿಂದ ಶಕ್ತಿ ಬರುತ್ತದೆ’ ಎಂದರು.

ಖರ್ಗೆ ಅವರು ರಾಜ್ಯದಲ್ಲಿ ಮೂರನೇ ಶಕ್ತಿ ಕೇಂದ್ರ ಆಗುತ್ತಾರಾ ಎಂಬ ಪ್ರಶ್ನೆಗೆ, ‘ಮೂರನೇ ಶಕ್ತಿ ಕೇಂದ್ರ ಯಾಕೆ? ಎಐಸಿಸಿ ಅಧ್ಯಕ್ಷರು ಎಂದರೆ ಅದು ಒಂದೇ ಶಕ್ತಿ ಕೇಂದ್ರ’ ಎಂದರು.

ಖರ್ಗೆ ಅವರು ಅಧ್ಯಕ್ಷರಾದ ನಂತರ ಶಿವಕುಮಾರ್ ಶಕ್ತಿಶಾಲಿಯಾಗಿದ್ದಾರಾ ಎಂಬ ಪ್ರಶ್ನೆಗೆ, ‘ಡಿ.ಕೆ. ಶಿವಕುಮಾರ್ ಮಾತ್ರವಲ್ಲ ಪಕ್ಷದ ಎಲ್ಲ ಕಾರ್ಯಕರ್ತರೂ ಹೆಚ್ಚು ಶಕ್ತಿಶಾಲಿ ಆಗಿದ್ದಾರೆ' ಎಂದರು.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಖರ್ಗೆ ಅವರಿಗೆ ಹೆಚ್ಚಿನ ಶಕ್ತಿ ಇರಲಿದೆಯೇ ಎಂಬ ವಿಚಾರವಾಗಿ ಕೇಳಿದಾಗ, ‘ಅವರು ವಿರೋಧ ಪಕ್ಷದ ನಾಯಕರಾಗಿದ್ದ ಹಿನ್ನೆಲೆಯಲ್ಲಿ ಅವರು ಪಕ್ಷದ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದರು. ಈಗ ಉನ್ನತ ಸ್ಥಾನ ಪಡೆದಿದ್ದಾರೆ. ಹೀಗಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಈ ಹಿಂದೆಯೂ ಅವರ ಅಭಿಪ್ರಾಯಕ್ಕೆ ಅವಕಾಶ ಇತ್ತು. ಈಗಲೂ ಇದೆ’ ಎಂದರು.

ಬಿಜೆಪಿ ಎದುರಿಸುವ ಸವಾಲಿನ ಬಗ್ಗೆ ಕೇಳಿದಾಗ, ‘ಚುನಾವಣೆ ಬರುತ್ತಲೇ ಇರುತ್ತದೆ. ರಾಜಕಾರಣ ಎಂದ ಮೇಲೆ ಎಲ್ಲವನ್ನೂ ಎದುರಿಸಬೇಕು. ಆದರೆ ಬಿಜೆಪಿ ಅವರು ಪಾಲಿಕೆ ಚುನಾವಣೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಎದುರಿಸುತ್ತಿಲ್ಲ’ ಎಂದರು.

ರಾಯಚೂರಿನ ಭಾರತ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ಅವರು ಆಗಮಿಸುತ್ತಾರಾ ಎಂಬ ಪ್ರಶ್ನೆಗೆ, ‘ಭಾರತ ಜೋಡೋ ಯಾತ್ರೆಗಾಗಿ ಸೋನಿಯಾ ಗಾಂಧಿ ಅವರು ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಿ ಇಲ್ಲೇ ದಸರಾ ಹಬ್ಬ ಆಚರಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದು, ಇನ್ನು ಎರಡು ದಿನಗಳ ಕಾಲ ಹೆಜ್ಜೆ ಹಾಕಲಿದ್ದಾರೆ. ಅವರ ಜತೆಗೆ ಪ್ರಿಯಾಂಕ ಗಾಂಧಿ ಅವರು ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದರು.

2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಖರ್ಗೆ ಅವರಿಗಿದೆಯೇ ಎಂಬ ಪ್ರಶ್ನೆಗೆ, ‘ಕೇವಲ ನಮ್ಮ ರಾಜ್ಯ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಇದೆ. ಕರ್ನಾಟಕ ಕೂಡ ದೇಶದ ಭಾಗ’ ಎಂದರು.

ಕಾಂಗ್ರೆಸ್ ಸರ್ಕಾರದ ಅಕ್ರಮಗಳ ದಾಖಲೆಯನ್ನು ರಾಹುಲ್ ಗಾಂಧಿ ಅವರಿಗೆ ನೀಡುವ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಕೇಳಿದಾಗ, ‘ವಿದ್ಯುತ್ ಇಲಾಖೆ ನಡೆದಿದೆ ಎನ್ನಲಾಗಿರುವ ಅಕ್ರಮದ ಮಾಹಿತಿ ಸಾಕ್ಷಿಗಳನ್ನು ಸಿಬಿಐಗೆ ನೀಡಿ ಎಂದು ನಾನು ಈಗಾಗಲೇ ಘೋಷಿಸಿದ್ದೇನೆ’ ಎಂದು ಉತ್ತರಿಸಿದರು.
[20/10, 3:45 PM] Kpcc official: *ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹಾಗೂ ರಮೇಶ್ ಬಾಬು ಅವರ ಜಂಟಿ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:*

ರಮೇಶ್ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯು 9 ಸಹಕಾರಿ ಬ್ಯಾಂಕ್ ಗಳಲ್ಲಿ 578 ಕೋಟಿ ಸಾಲ ಮಾಡಿದ್ದು, ಈ ಸಾಲ ಮರು ಪಾವತಿ ಮಾಡಿರುವುದಿಲ್ಲ. ಅಪೆಕ್ಸ್ ಬ್ಯಾಂಕ್ ಈ ಕಾರ್ಖಾನೆಯನ್ನು NPA (ದಿವಾಳಿ ಸಂಸ್ಥೆ) ಎಂದು ಘೋಷಣೆ ಮಾಡುತ್ತದೆ. ನಂತರ ಈ ದಿವಾಳಿ ಕಂಪನಿ 2021-22 ಹಾಗೂ 2022-23ನೇ ಸಾಲಿನಲ್ಲಿ ವಾರ್ಷಿಕವಾಗಿ ಕ್ರಮವಾಗಿ 60 ಕೋಟಿ ಹಾಗೂ 72 ಕೋಟಿ ಕೋಟಿ ಲಾಭ ಮಾಡಿದೆ.

ಈ ಸಂಸ್ಥೆಗೆ 9 ಜನ ನಿರ್ದೇಶಕರಿದ್ದರೂ ಇವರನ್ನು ಉದ್ದೇಶಿತ ಸುಸ್ಥಿದಾರರು ಎಂದು ಅಪೆಕ್ಸ್ ಬ್ಯಾಂಕ್ ಘೋಷಿಸಿದೆ. ಈ ರೀತಿ ಉದ್ದೇಶಿತ ಸುಸ್ಥಿದಾರ ಎಂದು ಘೋಷಿಸಿದ ನಂತರ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆದರೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಕೃಪಾಕಟಾಕ್ಷದಿಂದ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿಲ್ಲ. ಅಮಿತ್ ಶಾ ಅವರು ನನಗೆ ಆತ್ಮೀಯರು ಅವರ ಕೃಪಾಕಟಾಕ್ಷ ನನ್ನ ಮೇಲಿದೆ ಎಂದು ರಮೇಶ್ ಜಾರಕಿಹೊಳಿ ಅವರೇ ತಿಳಿಸಿದ್ದಾರೆ. ಇನ್ನು ರಾಜ್ಯ ಸಹಕಾರ ಸಚಿವ ಸೋಮಶೇಖರ್ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಬಸವರಾಜ ಬೊಮ್ಮಾಯಿ ಅವರು 860 ಕೋಟಿಯ ಬಹುದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ.

578 ಕೋಟಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ, ಆದಾ ತೆರಿಗೆ ಇಲಾಖೆಗೆ 150 ಕೋಟಿ ಪಾವತಿ ಬಾಕಿ, ರೈತರ ಬಳಿ 50 ಕೋಟಿ ಬಾಕಿ ಹಾಗೂ ಗುತ್ತಿಗೆದಾರರ ಬಳಿ 50 ಕೋಟಿ, ಇತರೆ ಸಾಲ 60 ಕೋಟಿ ಬಾಕಿ ಉಳಿಸಿಕೊಂಡು ಮೋಸ ಮಾಡಿದ್ದಾರೆ. ಇಷ್ಟೆಲ್ಲಾ ಮೋಸ ಮಾಡಿದ್ದರೂ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಸುಮ್ಮನೆ ಇರುತ್ತಾರೆ. ಇವರು ಅಧ್ಯಕ್ಷರಾಗುವ ಮುನ್ನ 2019ರಲ್ಲಿ ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಈ ಸಂಸ್ಥೆಗೆ ನೊಟೀಸ್ ನೀಡಿ ಬಾಕಿ ಹಣ ವಾಪಸ್ ಮಾಡಬೇಕು ಇಲ್ಲದಿದ್ದರೆ ಕಾರ್ಖಾನೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ತಿಳಿಸುತ್ತಾರೆ.

ನಂತರ ರಮೇಶ್ ಜಾರಕಿಹೊಳಿ ಅವರು ಈ ನೊಟೀಸ್ ವಿರುದ್ಧ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿರುತ್ತಾರೆ. ಆಗ ಕೋರ್ಟ್ 28-11-2019ರಂದು ಒಂದು ನಿರ್ದೇಶನ ನೀಡಿ ಈ 578 ಕೋಟಿ ಸಾಲದಲ್ಲಿ ಶೇ.50ರಷ್ಟು ಸಾಲವನ್ನು ಆರು ವಾರಗಳಲ್ಲಿ ಮರಪಪಾವತಿ ಮಾಡಿ ನಂತರ ನ್ಯಾಯಾಲಯಕ್ಕೆ ಆಗಮಿಸುವಂತೆ ತಿಳಿಸುತ್ತದೆ. ನ್ಯಾಯಾಲಯ ಕೊಟ್ಟ ಆರು ವಾರಗಳು ಅಷ್ಟೇ ಅಲ್ಲ 3 ವರ್ಷ ಕಳೆದರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಮೂಲಕ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ. 

ನಂತರ 2-12-2021ರಂದು ಬೆಳ್ಳಿ ಪ್ರಕಾಶ್ ಅವರು ಶೋಕಾಸ್ ನೊಟೀಸ್ ನೀಡಿ ನ್ಯಾಯಾಲಯದ ಆದೇಶದಂತೆ ಅವರು ಸಾಲದ ಪ್ರಮಾಣದಲ್ಲಿ ಅರ್ಧದಷ್ಟು ಸಾಲ ಮರುಪಾವತಿ ಮಾಡಬೇಕಿತ್ತು, ಅದನ್ನು ವಸೂಲಿ ಮಾಡಲು ಸರ್ಫೇಸಿ ಆಕ್ಟ್ ಪ್ರಕಾರ ಆಸ್ತಿ ಮುಟ್ಟುಗೋಲು ಹಾಕುವಂತೆ ಆದೇಶ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಾರೆ. ಈ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

ರಮೇಶ್ ಜಾರಕಿಹೊಳಿ ಅವರು ಸಾಲ ಪಡೆದಿರುವ 9 ಬ್ಯಾಂಕ್ ಗಳ ಪೈಕಿ ಹರಿಹಂತ್ ಸಹಕಾರಿ ಬ್ಯಾಂಕ್ ಸಹ ಒಂದು. ಇದನ್ನು ನಡೆಸುತ್ತಿರುವವರು ರಮೇಶ್ ಜಾರಕಿಹೊಳಿ ಅವರ ಆತ್ಮೀಯರು ಹಾಗೂ ಬೇನಾಮಿ ಆಗಿರುವ ಅಭಿನಂದನ್ ಪಾಟೀಲ್. ಇವರು ಈ ಸಂಸ್ಥೆಗೆ 42 ಕೋಟಿ ಸಾಲ ನೀಡಿದ್ದು, ಸಾಲ ಮರುಪಾವತಿ ಆಗಿಲ್ಲ ಎಂದು NCLT ನ್ಯಾಯಾಧಿಕರಣಕ್ಕೆ ಅರ್ಜಿ ಹಾಕಿಸುತ್ತಾರೆ. ಇತರೆ 8 ಬ್ಯಾಂಕುಗಳಿಗೆ 530 ಕೋಟಿ ಸಾಲ ಮರುಪಾವತಿ ಮಾಡಬೇಕಿದ್ದರೂ ಈ ಬ್ಯಾಂಕುಗಳು ಇದನ್ನು NPA ಎಂದು ಘೋಷಿಸುತ್ತಾರೆ. ಈ ಬ್ಯಾಂಕುಗಳು NCLTಗೆ ಅರ್ಜಿ ಹಾಕುವುದಿಲ್ಲ. ಕೇವಲ ಅಭಿನಂದನ್ ಪಾಟೀಲ್ ಅವರಿಂದ ಮಾತ್ರ ಅರ್ಜಿ ಹಾಕಿಸುತ್ತಾರೆ. ನಂತರ ನ್ಯಾಯಾಧಿಕರಣ IRP ಮೂಲಕ ಪ್ರಕ್ರಿಯೆ ಆರಂಭಿಸುತ್ತದೆ. ಇದರ ಭಾಗವಾಗಿ 23-4-2022ರ ಒಳಗಾಗಿ ಯಾರಿಗಾದರೂ ಆಕ್ಷೇಪಣೆ ಇದ್ದರೆ ಸಲ್ಲಿಸಬೇಕು ಎಂದು ಪ್ರಕಟಣೆ ನೀಡುತ್ತದೆ. ಈ ಕಾರ್ಖಾನೆ ಇರುವುದು ಗೋಕಾಕ್ ತಾಲೂಕಿನಲ್ಲಾದರೂ ಈ ಆಕ್ಷೇಪಣೆ ಸಲ್ಲಿಸಲು ಬೆಂಗಳೂರಿನ ಜಯನಗರದಲ್ಲಿ ನಕಲಿ ವಿಳಾಸ ಕೊಟ್ಟಿರುತ್ತಾರೆ. ಈ ವಿಳಾಸಕ್ಕೆ ಎಷ್ಟು ಆಕ್ಷೇಪಣೆಗಳು ಬಂದಿದ್ದವೋ ತಿಳಿದಿಲ್ಲ. ಈ ಎಲ್ಲ ಪ್ರಕ್ರಿಯೆಗೆ ಮುಖ್ಯಸ್ಥರನ್ನಾಗಿ ಕೊಂಡಿ ಶೆಟ್ಟಿ ಕುಮಾರ್ ದುಶ್ಯಂತ್ ಅವರನ್ನು ನೇಮಿಸಲಾಗಿದ್ದು, ಇವರಿವರೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಾರೆ. 

ನಂತರ ಈ ಕಾರ್ಖಾನೆಯ ಒಟ್ಟಾರೆ ಆಸ್ತಿಯ ಮೌಲ್ಯ ಇರುವುದು 1000 ಕೋಟಿಯಷ್ಟು. ಆದರೆ ಇವರು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ಆಸ್ತಿ ಮೌಲ್ಯವನ್ನು ಕೇವಲ 59 ಕೋಟಿ ಎಂದು ಘೋಷಿಸುತ್ತಾರೆ. ನಂತರ NCLT ಮೂಲಕ ಈ ಹರಿಹಂತ್ ಬ್ಯಾಂಕಿಗೆ ಪಾವತಿ ಆಗಬೇಕಿರುವ 42 ಕೋಟಿ ಹೊರತು ಪಡಿಸಿ ಉಳಿದ ಮೊತ್ತವನ್ನು ಬ್ಯಾಂಕಿನವರೆ ಕೊಟ್ಟರೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ಪಾವತಿ ಹರಿಹಂತ್ ಸಹಕಾರಿ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಲು ಪ್ರಯತ್ನ ಮಾಡಲಾಗಿದೆ. ಈ ಕಾರ್ಖಾನೆ ಸಾವಿರಾರು ಕೋಟಿ ರೂ. ಮೌಲ್ಯದ್ದಾಗಿದ್ದು, ಜತೆಗೆ ಈಗಳೂ ಕಬ್ಬನ್ನು ಅರೆಯುತ್ತಿದ್ದು ವಾರ್ಷಿಕ 60 ಕೋಟಿಯಷ್ಟು ಲಾಭ ಮಾಡುತ್ತಿದೆ. ಇಂತಹ ಕಾರ್ಖಾನೆ ಆಸ್ತಿಯನ್ನು ಬೇನಾಮಿ ನಡೆಸುತ್ತಿರುವ ಸಹಕಾರಿ ಬ್ಯಾಂಕಿಗೆ ವರ್ಗಾವಣೆ ಮಾಡಿ ಉಳಿದ 8 ಬ್ಯಾಂಕುಗಳಿಗೆ ನೀಡಬೇಕಿರುವ ಸುಮಾರು 530 ಕೋಟಿ ಸಾಲ, ರೈತರ ಬಾಕಿ ಹಣ, ಗುತ್ತಿಗೆದಾರರ ಬಾಕಿ ಹಣ ಹಾಗೂ ಆದಾಯ ತೆರಿಗೆ ಬಾಕಿ ಹಣಕ್ಕೆ ಉಂಡೆನಾಮ ಹಾಕುವ ಷಡ್ಯಂತ್ರ ಇದಾಗಿದೆ.

ಕಾಂಗ್ರೆಸ್ ಪಕ್ಷದವತಿಯಿಂದ ಪತ್ರಿಕಾಗೋಷ್ಠಿ ಮಾಡಿ ವಿಚಾರ ಬಹಿರಂಗ ಮಾಡಿದ್ದೆ. ಜತೆಗೆ ಇಡಿಗೆ ದೂರು ನೀಡಿದ್ದು, ಅಪೆಕ್ಸ್ ಬ್ಯಾಂಕ್ ಗೂ ಪತ್ರ ಬರೆದಿದ್ದೆ. 

ಈಗ ನಾವು ಈ ವಿಚಾರದಲ್ಲಿ ಆಕ್ಷೇಪ ಎತ್ತಿ ಷಡ್ಯಂತ್ರವನ್ನು ಬಯಲು ಮಾಡಿದ ನಂತರ NCLT ಅವರು IRP ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದ್ದಾರೆ. ಒಂದು ವಾರದ ಹಿಂದೆ ಈ ಆದೇಶ ಹೊರಬಂದಿದೆ. ಅಲ್ಲದೇ ಇತರೆ 8 ಬ್ಯಾಂಕುಗಳು NCLTಗೆ ಆಕ್ಷೇಪಣಾ ಪತ್ರ ಬರೆದಿದ್ದು, ನಮಗೂ ಸಾಲ ಮರುಪಾವತಿ ಆಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಎಲ್ಲ ಪ್ರಕ್ರಿಯೆಗೆ ತಡೆ ಹಿಡಿಯಲಾಗಿದೆ. ಆ ಮೂಲಕ ನಮ್ಮ ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದೆ. 

ಬಿಜೆಪಿಯವರಿಗೆ ಮಾನ ಮಾರ್ಯಾದೆ ಇದ್ದರೆ ಸುಸ್ಥಿದಾರ ಎಂದು ರಮೇಶ್ ಜಾರಕಿಹೊಳಿ ಹಾಗೂ ಅವರ ಜತೆಗಿನ ಇತರೆ ನಿರ್ದೇಶಕರು ಘೋಷಣೆ ಆಗಿದ್ದರೂ ಅವರು ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಡ್ರಾ ಮಾಡುತ್ತಿದ್ದಾರೆ. ಇದು ಹೇಗೆ ಸಾಧ್ಯ? ಹೀಗಾಗಿ ಇವರನ್ನು ಉದ್ದೇಶಿತ ಸುಸ್ಥಿದಾರ ಎಂದು ಪರಿಗಣಿಸಬೇಕು. ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಇವರನ್ನು ಬಂಧಿಸಬೇಕು. ಮೆಹುಲ್ ಚೋಕ್ಸಿ, ನೀರವ್ ಮೋದಿ ಹಾಗೂ ಮಲ್ಯಾ ಅವರು ಕೂಡ ಇದೇ ರೀತಿ ಉದ್ದೇಶಿತ ಸುಸ್ಥಿದಾರರಾಗಿ ದೇಶ ಬಿಟ್ಟುಹೋಗಿದ್ದು, ಅದಕ್ಕೆ ಅವಕಾಶ ಮಾಡಿಕೊಟ್ಟಿರುವವರು ಇದೇ ಬಿಜೆಪಿಯವರು. ಇಷ್ಟಾದರೂ ಬಿಜೆಪಿಯವರು ಈ ವ್ಯಕ್ತಿಯನ್ನು ಮಂತ್ರಿಮಂಡಲಕ್ಕೆ ತೆಗೆದುಕೊಂಡು ಮಂತ್ರಿ ಮಾಡಲು ಹೊರಟಿದೆ. ಇಂತಹವರಿಗೆ ಯಾವುದೇ ಕಾರಣಕ್ಕೂ ಸಂವಿಧಾನಿಕ ಹುದ್ದೆ ನೀಡಬಾರದು.

ಸಾಮಾನ್ಯ ವ್ಯಕ್ತಿ ಬೇಕ್ ಖರೀದಿಗೆ ಮಾಡಿರುವ ಸಾಲದ ಕಂತು ಕಟ್ಟದಿದ್ದರೆ ಬೈಕ್ ಸಮೇತ ಹೊತ್ತುಕೊಂಡು ಹೋಗುತ್ತೀರಿ. ಆದರೆ 850 ಕೋಟಿ ಮೋಸ ಮಾಡಲು ಪ್ರಯತ್ನಿಸಿರುವ ವ್ಯಕ್ತಿ ಕಣ್ಣ ಮುಂದೆ ಇದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಈ ಹಗರಣದ ಹಿಂದೆ ಬಿಜೆಪಿ ನಾಯಕರು ಇದ್ದಾರೆ. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದಿದ್ದು, ಅದಕ್ಕೆ ಬಳುವಳಿಯಾಗಿ ಬಿಜೆಪಿ ಈ ರೀತಿ ಸಹಕಾರ ಮಾಡುತ್ತಿದೆ.

ಬೊಮ್ಮಾಯಿ ಅವರು ಸಂಕಲ್ಪ ಸಮಾವೇಶ ಮಾಡಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಾಯಿಗೆ ಬಂದಂತೆ ಟೀಕೆ ಮಾಡುತ್ತಾರೆ. ಇವರು ನಮಗೆ ಧಮ್ಮು ತಾಕತ್ತಿನ ಸವಾಲು ಹಾಕುತ್ತಾರೆ. ಬೊಮ್ಮಾಯಿ ಅವರೇ ನಿಮಗೆ ಧಮ್ಮು ತಾಕತ್ತು ಇದ್ದರೆ ಇವರ ಆಸ್ತಿ ಮುಟ್ಟುಗೋಲು ಹಾಕಿ, ಬಂಧಿಸಿ. ಇದನ್ನು ಯಾಕೆ ಮಾಡುತ್ತಿಲ್ಲ. ನಿಮ್ಮ ಆಡಳಿತದಲ್ಲಿ ಶ್ರೀಮಂತರಿಗೊಂದು ಬಡವರಿಗೊಂದು ನ್ಯಾಯವೇ? ಬಿಜೆಪಿಯವರಿಗೊಂದು ಕಾಂಗ್ರೆಸ್ ನವರಿಗೊಂದು ನ್ಯಾಯವೇ? ಈ ಬಗ್ಗೆ ಬೊಮ್ಮಾಯಿ ಅವರು ಮಾತನಾಡಬೇಕು. ನಿಮಗೆ ಎಷ್ಟು ಕಮಿಷನ್ ಬಂದಿದೆ?

ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪೇಸಿಎಂ ಅಭಿಯಾನ ಮಾದರಿಯಲ್ಲಿ ಬೆಳಗಾವಿ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಹಗರಣದ ವಿರುದ್ದ ಅಭಿಯಾನ ಮಾಡಲಾಗುವುದು.

*ಮಾಜಿ ಎಂಎಲ್ಸಿ ರಮೇಶ್ ಬಾಬು:* 

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ 850 ಕೋಟಿಯ ಹಗರಣವನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗಿದ್ದು, ಬೇನಾಮಿ ವರ್ಗಾವಣೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾನೂನು ತಂದಿದ್ದು. ಹರಿಹಂತ್ ಬ್ಯಾಂಕ್ ಮೂಲಕ ಸಾರ್ವಜನಿಕ ಹಣ ಲಪಟಾಯಿಸುವ ಪ್ರಯತ್ನದ ವಿರುದ್ಧ ತನಿಖೆ ಆಗಿ ಇದರಲ್ಲಿ ಭಾಗವಾಗಿರುವವರ ವಿರುದ್ಧ ಅಗತ್ಯ ಕ್ರಮ ವಹಿಸಬೇಕು. 

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ 250 ಎಕರೆ ಜಾಗವನ್ನು ಇಶಾ ಫೌಂಡೇಶನ್ ಗೆ ನೀಡುವುದರ ಜತೆಗೆ ಸುಮಾರು 100 ಕೋಟಿ ಹಣವನ್ನು ಮಣ್ಣಿನ ಸಂರಕ್ಷಣೆ ಅಭಿಯಾನ ಹೆಸರಲ್ಲಿ ಜಗ್ಗಿ ವಾಸುದೇವ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರ್ಕಾರ ನೀಡಿದೆ. ಇದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾದರಿಯ ಮತ್ತೊಂದು ರೀತಿಯ ಹಗರಣವಾಗಿದೆ. 

ಈ ದೇಶದಲ್ಲಿ ಸ್ವಯಂ ಘೋಷಿತ ದೇವಮಾನವರು ಸರ್ಕಾರ ಅಲ್ಲಾಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ರಾಜ್ಯದಲ್ಲಿ ಬಿಡದಿಯ ಬಳಿಯ ನಿತ್ಯಾನಂದ ಅವರ ಹಗರಣವನ್ನು ದೇಶವೇ ನೋಡಿದೆ. ಜಗ್ಗಿ ವಾಸುದೇವ್ ಅವರು ಸ್ವಯಂಘೋಷಿತ ದೇವಮಾನವರಾಗಿದ್ದು, ಇವರ ವಿರುದ್ಧ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳಲ್ಲಿ ಭೂ ಹಗರಣ, ಕಾವೇರಿ ಕಾಲಿಂಗ್ ಹೆಸರಿನಲ್ಲಿ ನಡೆದ ಹಗರಣಗಳು ವಿಚಾರಣೆ ನಡೆಯುತ್ತಿವೆ. ಇನ್ನು ಇವರು ಹಲವಾರು ಕೋಟಿ ತೆರಿಗೆ ವಂಚನೆ ಆರೋಪವಿದೆ.

ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ತಜ್ಞರಿದ್ದು ಇವರೆಲ್ಲರನ್ನು ಬಿಟ್ಟು ಮಣ್ಣು ಸಂರಕ್ಷಣೆ ಹೆಸರಲ್ಲಿ ರಾಜ್ಯ ಸರ್ಕಾರ ಸ್ವಾಮೀಜಿಗೆ ಶರಣಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಬೊಮ್ಮಾಯಿ ಅವರು ತಮ್ಮ ತಪ್ಪು ತಿದ್ದುಕೊಳ್ಳಬೇಕು. 

ಆಶ್ಚರ್ಯಕರ ವಿಚಾರ ಎಂದರೆ ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರಿಗೆ ಪತ್ರ ಬರೆದು ದೇಣಿಗೆ ನೀಡುವಂತೆ ಕೇಳುತ್ತಾರೆ. ಆ ಪತ್ರಕ್ಕೆ ಪೂರಕವಾಗಿ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ 100 ಕೋಟಿ ನೀಡುವುದಾಗಿ ತಿಳಿಸುತ್ತಾರೆ. ನೀವು ಪುಣ್ಯಕೋಟಿ ಯೋಜನೆ ಹೆಸರಲ್ಲಿ 100 ಕೋಟಿಯನ್ನು ಸರ್ಕಾರಿ ನೌಕರರಿಂದ ಸಂಗ್ರಹಿಸುತ್ತೀರಿ, ಮತ್ತೊಂದೆಡೆ ಸ್ವಯಂ ಘೋಷಿತ ಸ್ವಾಮೀಜಿಗೆ 100 ಕೋಟಿ ಹಣ ನೀಡುತ್ತೀರಿ. ಇಂದು ಕರ್ನಾಟಕ ಹೈಕೋರ್ಟ್ ಕೂಡ ಗೋಶಾಲೆ ವಿಚಾರವಾಗಿ ಸರ್ಕಾರವನ್ನು ಪ್ರಶ್ನಿಸಿದೆ. ಸರ್ಕಾರ ಗೋಶಾಲೆ ಹೆಸರಲ್ಲಿ ವಸೂಲಿಗೆ ಮುಂದಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಇವರಿಗೆ ನೀಡಬೇಕಾಗಿದ್ದ ತುಟ್ಟಿ ಭತ್ಯೆ 2-3 ಸಾವಿರ ಕೋಟಿ ನೀಡಿಲ್ಲ, ಶಾಲೆ ಕಾಲೇಜು ವಿಚಾರ ಬಗೆಹರಿಸಿಲ್ಲ. ಮಕ್ಕಳಿಗೆ ಸಮವಸ್ತ್ರ, ಶೂ ಸಾಕ್ಸ್ ನೀಡುತ್ತಿಲ್ಲ. ಅವರಿಗೆ ಅನುಕೂಲ ಮಾಡಲು ನಿಮ್ಮ ಬಳಿ ಹಣವಿಲ್ಲ. ಆದರೆ ಸ್ವಯಂಘೋಷಿತ ದೇವಮಾನವನಿಗೆ ಹಣ ನೀಡುತ್ತೀರಾ ಎಂದಾದರೆ ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ. ನಿಮ್ಮ 40% ಕಮಿಷನ್ ಮುಚ್ಚಿಟ್ಟುಕೊಳ್ಳಲು ಇಂತಹ ದೇವಮಾನವರು ಬೇಕಾ? ಇವರು ಭ್ರಷ್ಟಾಚಾರ ಹಣ ರಕ್ಷಿಸಲು ಜಾಗ ಹುಡುಕಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ಅವರೇ ನಿಮಗೆ ಸಾರ್ವಜನಿಕರ ಹಣವನ್ನು ಸಂರಕ್ಷಿಸುವ ಜವಾಬ್ದಾರಿ ಇದೆ. ಜನರ ಹಣವನ್ನು ಸಿಕ್ಕಸಿಕ್ಕವರಿಗೆ ನೀಡಲು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿಲ್ಲ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹಗರಣವಾಗಲಿ ಅಥವಾ ಜಗ್ಗಿ ವಾಸುದೇವ ಅವರಿಗೆ ಹಣ ನೀಡುವ ಧಂದೆಯನ್ನು ತಡೆಯಬೇಕು. ವಿವಿ ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಸರ್ಕಾರದ ಹಣವಿಲ್ಲ. ಆದರೆ ಜಗ್ಗಿವಾಸುದೇವ ಅವರಿಗೆ 100 ಕೋಟಿ ಹಣ ನೀಡುತ್ತಿರುವುದೇಕೆ?

ಕಾವೇರಿ ಕಾಲಿಂಗ್ ಅಭಿಯಾನ ವಿಚಾರವಾಗಿ ಜಗ್ಗಿ ವಾಸುದೇವ್ ಅವರ ವಿರುದ್ಧ ಹೈಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಇತ್ಯರ್ಥವಾಗುವ ಮುನ್ನ ಮುಖ್ಯಮಂತ್ರಿಗಳು 250 ಎಕರೆ ಜಮೀನು 100 ಕೋಟಿ ಹಣ ನೀಡಿದ್ದಾರೆ. ಈ ಹಿಂದೆಯೂ ಜಗ್ಗಿ ವಾಸುದೇವ್ ಅವರು ತಮ್ಮ ಫೌಂಡೇಶನ್ ಗೆ ದೇಣಿಗೆ ನೀಡಬೇಕು ಎಂದು ಪತ್ರ ಬರೆದಿದ್ದರೂ ಈ ಹಿಂದಿನ ಸರ್ಕಾರಗಳು ಅದನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಇಶಾ ಫೌಂಡೇಶನ್ ಜೆತೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಿ ಕೊಟ್ಟಿರುವ ಹಣ ಹಾಗೂ ಸರ್ಕಾರಿ ಜಮೀನು ಹಿಂಪಡೆಯಬೇಕು. ರಾಜ್ಯದ ತೆರಿಗೆದಾರರ ಹಣವನ್ನು ಸ್ವಯಂಘೋಷಿತ ದೇವಮಾನವರಿಗೆ ನೀಡುವುದು ಸರಿಯಲ್ಲ. ಒಂದು ವೇಳೆ ನಿಮ್ಮ ಪೇಸಿಎಂ ಯೋಜನೆ ಮೂಲಕ ಈ ಹಣ ನೀಡಿದ್ದರೆ ಅದನ್ನು ಬೊಮ್ಮಾಯಿ ಅವರು ಒಪ್ಪಿಕೊಳ್ಳಬೇಕು. ರಾಜ್ಯದ ಖಜಾನೆ ಧರ್ಮಛತ್ರವಲ್ಲ. ಹೀಗಾಗಿ ಈ ಹಣ ಹಾಗೂ ಜಾಗ ಹಿಂಪಡೆಯಬೇಕು.
[20/10, 6:01 PM] Kpcc official: ಮಾಧ್ಯಮ ಆಹ್ವಾನ,

 *ಮಾನ್ಯರೇ* ,

 ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೈಕೋರ್ಟ್ ಸರ್ಕಾರದ ಮುಖ್ಯ ಆಯುಕ್ತರನ್ನು ಕರೆಸಿ ಎಚ್ಚರಿಕೆ ನೀಡಿದರು ಸಹ ಸರ್ಕಾರದ ನಿರ್ಲಕ್ಷತನದ ಪರಿಣಾಮ ರಸ್ತೆ ಗುಂಡಿಗಳಿಂದ ವಾಹನಸವಾರರು ಸಾವಿಗಿಡಾಗುತ್ತಿರುವುದು ವಿಷಾದಕರ, ರಸ್ತೆ ಗುಂಡಿ ಮು ಚ್ಚುವಂತೆ ಆಗ್ರಹಿಸಿ ಬಿಜೆಪಿ ಸರ್ಕಾರದ ವಿರುದ್ಧ ನಾಳೆ ರೇಸ್‌ಕೋರ್ಸ್ ರಸ್ತೆಯ *ಕಾಂಗ್ರೆಸ್ ಭವನದ ಮಹಾತ್ಮಗಾಂಧಿ ಪ್ರತಿಮೆ ಯಿಂದ* *ಮುಖ್ಯಮಂತ್ರಿ ನಿವಾಸದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ* ಯನ್ನು ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದೆ.

ಈ ಪ್ರತಿಭಟನೆಯಲ್ಲಿ ಸನ್ಮಾನ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾದ *ಶ್ರೀ ರಾಮಲಿಂಗಾ ರೆಡ್ಡಿ* ರವರು, ನಗರದ ಸಂಸದರು, ಶಾಸಕರು, ಪಕ್ಷದ ಹಿರಿಯ ಮುಖಂಡರುಗಳು, ಮಾಜಿ ಮಹಾಪೌರರುಗಳು, ಮಾಜಿ ಬಿಬಿಎಂಪಿ ಸದಸ್ಯರುಗಳು, ಭಾಗವಹಿಸುತ್ತಿದ್ದಾರೆ. 


ಸ್ಥಳ : *ಮಹಾತ್ಮ ಗಾಂಧಿ ಪ್ರತಿಮೆ, ಕಾಂಗ್ರೆಸ್ ಭವನ, ರೇಸ್‌ಕೋರ್ಸ್ ರಸ್ತೆ,* ಬೆಂಗಳೂರು.

ದಿನಾಂಕ : *21-10-2022ರ ಶುಕ್ರವಾರ ಬೆಳಿಗ್ಗೆ 11.30 ಗಂಟೆಗೆ* 

ದಯಮಾಡಿ ತಮ್ಮ ಘನ ಮಾಧ್ಯಮ ವರದಿಗಾರರನ್ನು / ಛಾಯಾಗ್ರಾಹಕರನ್ನು ಕಳುಹಿಸಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ.

ಗೆ, 
ಮಾನ್ಯ ಸಂಪಾದಕರು / ಮುಖ್ಯ ವರದಿಗಾರರು.
[20/10, 7:06 PM] Kpcc official: ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ನಾಳೆ ಆಗಮಿಸಲಿರುವ ಹಿನ್ನೆಲೆಯಲ್ಲಿ ರಾಯಚೂರಿನ ಶಕ್ತಿನಗರದ ಅತಿಥಿಗೃಹದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.
[20/10, 8:38 PM] Kpcc official: Day 44: 21st October 2022

06:00 Padyatra Resumes from mantralayam Temple circle, AP
 https://maps.google.com/?q=15.940740,77.424332
 
Karnataka

10:00 Morning Break at Panchmukhi Arch
Gillesugur, Raichur. 
https://maps.google.com/?q=15.975128,77.375961

BRN

Lunch break at Gillesugur PU college
https://maps.google.com/?q=15.975864,77.378273

16:00 Padyatra Resumes from  Kerebudur Village.
https://maps.google.com/?q=15.992673,77.378906

19:00 Evening Break at  Valmiki circle, Yeragera Village. 
https://maps.google.com/?q=16.076624,77.414352

Night Halt near Ranganatha swami temple Yeragera Village
https://maps.google.com/?q=16.077267,77.415321

Post a Comment

Previous Post Next Post