ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಹಾಗೂ ಇರಾನಿ ಟಾಟಾ ಸ್ಟೀಲ್​ ಸಂಸ್ಥೆಯ ನಿವೃತ್ತ ಮ್ಯಾನೇಜಿಂಗ್​ ಡೈರೆಕ್ಟರ್​ ಜಮ್ಶೆಡ್ ಜೆ ಇರಾನಿ ಅವರು ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ತಿಳಿಸಿದೆ.ಗಣ್ಯರು, ಸಾರ್ವಜನಿಕರು ಕಂಬನಿ ಮಿಡಿದಿ ದ್ದಾರೆ

ಟಾ ಸ್ಟೀಲ್​ ಕಂಪೆನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಿದ್ದ ಜಮ್ಶೆಡ್ ಜೆ ಇರಾನಿ​ 43 ವರ್ಷಗಳ ಕಾಲ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು.ಇರಾನಿಯವರು 2011ರಲ್ಲಿ ಟಾಟಾ ಸ್ಟೀಲ್​ ಮಂಡಳಿಯ ಮ್ಯಾನೇಜಿಂಗ್​ ಡೈರೆಕ್ಟರ್​ ಹುದ್ದೆಯಿಂದ ನಿವೃತ್ತರಾಗಿದ್ದರು. ಟಾಟಾ ಸ್ಟೀಲ್​ ಕಂಪೆನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ಜಮ್ಶೆಡ್​ ಇರಾನಿ 43 ವರ್ಷಗಳ ಕಾಲ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು. 


1936ರಲ್ಲಿ ಜೂನ್​ 2ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಇವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

Post a Comment

Previous Post Next Post