[06/10, 7:13 AM] vijayavitthala blr: *ಸಕಲರಿಗು ಹರಿದಿನದ ನಮಸ್ಕಾರ🙏 ಗಳು
*||ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ*|
*ಸುಲಭ ದೇವರ ದೇವ ವಿಜಯವಿಠ್ಠಲ*||
ಶ್ರೀನಿವಾಸ ಕಲ್ಯಾಣದ ವಿಸ್ತಾರವಾದ ವಿವರಣೆ|
*✍ದಶಮಿ ಶುಕ್ರವಾರ ಸಾಯಂಕಾಲ.*
ಆಕಾಶರಾಜನು ಸಮಸ್ತ ಚತುರಂಗ ಬಲವನ್ನು ಮುಂದಿಟ್ಟುಕೊಂಡು ಮಗನಾದ ವಸುಧಾನನನ್ನು ಮುಂದೆ ಮಾಡಿಕೊಂಡು ತನ್ನ ಸಹೋದರ ತೋಂಡಮಾನ ಮಿತ್ರರು ಬಂಧು ಗಳ ಪರಿವಾರ ದೊಂದಿಗೆ ಪುರೋಹಿತ ಸಹಿತವಾಗಿ ಅಲಂಕೃತವಾದ ಐರಾವತವನ್ನು ಮುಂದೆ ಇಟ್ಟುಕೊಂಡು ಹೊರಟಿದ್ದಾನೆ.
*ದೇವೇಂದ್ರ ನ ಆ ಐರಾವತವು ರತ್ನ ಕಂಬಳಿ ಇಂದ ಅಲಂಕೃತ ವಾಗಿ,ಘಂಟೆಗಳ ಮಾಲೆಯಿಂದ ಸಿಂಗರಿಸಿದ,ಮೇಘದಂತೆ ಗಂಭೀರ ಘರ್ಜನೆ ಮಾಡುವ,ಕಿವಿಗೆ ಚಾಮರವನ್ನು ಕಟ್ಟಿದ ನಾಲ್ಕು ದಂತಗಳಿರುವ ಐರಾವತ ವನ್ನು ಮುಂದೆ ಮಾಡಿಕೊಂಡು* ವಿಶ್ವಕರ್ಮನಿಂದ ನಿರ್ಮಿತವಾದ ಶ್ರೀನಿವಾಸದೇವರ ಬಿಡಾರಕ್ಕೆ ಬಂದನು.
*ಹತ್ತು ಸಾವಿರ ಕಂಬಗಳಿಂದ ದೇದಿಪ್ಯಮಾನವಾಗಿ ಅವನ ಬಿಡಾರ ಕಂಗೊಳಿಸುತ್ತಾ ಇತ್ತು.ಆ ಮಹಾಸಭೆಯಲ್ಲಿ ಬ್ರಹ್ಮಾದಿ ಸಕಲ ದೇವತೆಗಳು ವಿಶ್ವಾಮಿತ್ರ, ಭಾರದ್ವಾಜ, ವಸಿಷ್ಠ, ಗೌತಮ,ಭೃಗು* *ಅತ್ರಿ,ಪುಲಸ್ಯ,ವಾಲ್ಮೀಕಿ* ಮುಂತಾದ ಮಹರ್ಷಿಗಳು
*ವೈಖಾಸನರು,ದೂರ್ವಾಸರು,ಮಾರ್ಕಂಡೇಯ,ಗಾಲವ,ದಧೀಚಿ,ಚ್ಯವನ, ಸನಕ, ಸನಂದನರು,ಮೊದಲಾದ ಭಗವಂತನ ಭಕ್ತರು ಜಟಾ ಕಿರೀಟ ಧರಿಸಿ ಕೃಷ್ಣಾಜಿನ ವಸ್ತ್ರ ಧಾರಿಗಳಾಗಿ ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದರು.*
*ಅವರ ಮಧ್ಯಭಾಗದಲ್ಲಿ ಶ್ರೀನಿವಾಸದೇವರು ರತ್ನ ಗಂಬಳಿಯ ಮೇಲೆ ಕುಳಿತಿದ್ದಾನೆ.*.ಆತನ ಸಮೀಪದಲ್ಲಿ ಶ್ರೀಬ್ರಹ್ಮ ದೇವನು ಕರ ಜೋಡಿಸಿ ಕುಳಿತಿದ್ದನು.
*ಆಕಾಶರಾಜನು ವರನಾದ ಶ್ರೀನಿವಾಸದೇವರನ್ನು ಕರೆದುಕೊಂಡು ಹೋಗಲು ಕುಲಪುರೋಹಿತರಾದ ಬೃಹಸ್ಪತಿ ಯನ್ನು ಮುಂದೆ ಮಾಡಿಕೊಂಡು ಆ ಸಭೆಗೆ ಬಂದನು.*
ಬಂದಂತಹ ಆಕಾಶರಾಜನ ಕಂಡು ತಟ್ಟನೆ ಆಸನದಿಂದ *ದೇವದೇವನು ಎದ್ದು ಸ್ವಾಗತಿಸಿ ಆಲಂಗಿಸಿಗೊಂಡು* *"ವಯೋವೃದ್ದರಾದ ನೀವು ನನ್ನ ಕರೆದೊಯ್ಯುವ ಬದಲು ನಿಮ್ಮ ಮಗನನ್ನು ಕಳುಹಿಸಿದರೆ ಸಾಕಾಗಿತ್ತು ಎಂದನು..*.
ತಕ್ಷಣ ಆಕಾಶರಾಜನು ಪುರೋಹಿತ ರ ಅಪ್ಪಣೆ ಕೇಳಿದಾಗ ಬೃಹಸ್ಪತಾಚಾರ್ಯರು
*"ಅಮ್ಮ! ಧರಣಿದೇವಿ ವಸಿಷ್ಠ ರ ಪತ್ನಿಯಾದ ಅರುಂಧತಿ ಯನ್ನು ಮುಂದೆ ಇಟ್ಟುಕೊಂಡು ಶ್ರೀನಿವಾಸದೇವ ನಿಗೆ ಪೂಜೆಯನ್ನು ಮಾಡುವವಳಾಗು ಎನ್ನಲು*
ಅದರಂತೆ ಧರಣಿದೇವಿಯು ಮಾಡಲು ಸಕಲರು ಭಗವಂತನಿಗೆ ಪೂಜೆ ಮಾಡುವ ಭಾಗ್ಯ ಸಿಕ್ಕ ಧರಣಿ ದೇವಿಯನ್ನು ಹೊಗಳಿದರು.
*ನಂತರ ಶ್ರೀನಿವಾಸದೇವರು ಆನೆಯ ಮೇಲೆ ಕುಳಿತಾಗ*
*ಸಪತ್ನಿ ಸಮೇತರಾಗಿ ಬ್ರಹ್ಮಾದಿ ದೇವತೆಗಳು,ಸಕಲ ಋಷಿ ಮುನಿಗಳು* *೪೯ಮರುತ್ತುಗಳು,ಅಷ್ಟ*
*ವಸುಗಳು,ಏಕಾದಶ ರುದ್ರ ರು ,ದ್ವಾದಶಾದಿತ್ಯರು ಇವರುಗಳಿಂದ ಕೂಡಿದವನಾಗಿ ಆಕಾಶರಾಜನು ನಿರ್ಮಿಸಿದ ಕಲ್ಯಾಣಮಂಟಪಕ್ಕೆ ಬಂದನು.*
ನಂತರ ಅಲ್ಲಿ ನಿರ್ಮಾಣ ಮಾಡಿಸಿದ್ದ ನವರತ್ನ ಮಯ ಸಿಂಹಾಸನದಲ್ಲಿ ಭಗವಂತ ಆಸೀನನಾದನು.ಅವನ ಸುತ್ತಲೂ ಬ್ರಹ್ಮಾದಿ ದೇವತೆಗಳು ಆಸೀನರಾದರು.
*ಪತ್ನಿ ಸಮೇತವಾಗಿ ಆಕಾಶರಾಜ ಸಂಕಲ್ಪ ವನ್ನು ಮಾಡಿ ಸ್ವಾಮಿ ಪುಷ್ಕರಣಿ ಜಲವನ್ನು ಧಾರಾಕಾರವಾಗಿ ಭಗವಂತನ ಪಾದಗಳಿಗೆ ಹಾಕುತ್ತಾ ಇರಲು,ಪುರೋಹಿತರು ಸಹಸ್ರ ಶೀರ್ಷಾ ಪುರುಷ ಎಂದು ಮಂತ್ರ ಪಠಣ ಮಾಡುತ್ತಾ ಇರಲು.ಆ ಪಾದೋದಕವನ್ನು ಆಕಾಶರಾಜನು ತನ್ನ ಶಿರದಲ್ಲಿ ಧರಿಸಿದನು.ನಂತರ ತನ್ನ ಪತ್ನಿ ಪುತ್ರ ಹಾಗು ಸಕಲ ಬಂಧುಗಳು,ತನ್ನ ಅರಮನೆಯಲ್ಲಿ ಎಲ್ಲಾ ಕಡೆ ಪ್ರೋಕ್ಷಣೆ ಮಾಡಿ ಕೃತಾರ್ಥನಾದನು.*
ನಂತರ ಅನೇಕ ಉಡುಗೊರೆಗಳನ್ನು ಶ್ರೀನಿವಾಸದೇವ ನಿಗೆ ಅರ್ಪಿಸಿದ. ಇದಾದ ಮೇಲೆ ಪದ್ಮಾವತಿ ದೇವಿಯು ಅಲಂಕೃತ ಳಾಗಿ ವೇದಿಕೆ ಮೇಲೆ ಬಂದಾಗ ಜೀರಿಗೆ ಬೆಲ್ಲವನ್ನು ಕೈಗೆ ಕೊಟ್ಟು ಅಕ್ಕಿ ಯ ರಾಶಿಯ ಮೇಲೆ ನಿಲ್ಲಿಸಿದರು.
*ನಂತರ ಪಶ್ಚಿಮ ಅಭಿಮುಖವಾಗಿ ಇದ್ದ ಶ್ರೀನಿವಾಸ ಪೂರ್ವಾಭಿಮುಖವಾಗಿ, ಪದ್ಮಾವತಿ ಯನ್ನು ಪಶ್ಚಿಮ ಅಭಿಮುಖವಾಗಿ ನಿಲ್ಲಿಸಿ ದರ್ಭೆಇಂದ ವಧುವಿನ ಹಣೆಯನ್ನು ಒರೆಸಿ ಆಚೆ ಬಿಸಾಡಿ ಅನಿಷ್ಟ ಪರಿಹಾರ ಕ್ರಿಯೆಯನ್ನು ಮಾಡಿದ.*.
ನಂತರ ಮಂಗಳವಾದ್ಯಗಳು ಮೊಳಗಿದವು.ಮಂಗಳಾಷ್ಟಕ ಮುಗಿದ ಮೇಲೆ *ಅಂತಃಪಟವನ್ನು ವಸಿಷ್ಠ ರು ಸೆಳೆದರು.ಆಗ ಶ್ರೀನಿವಾಸ ಪದ್ಮಾವತಿಯರು ಪರಸ್ಪರ ವಾಗಿ ಜೀರಿಗೆ ಬೆಲ್ಲ,ಅಕ್ಷತೆ ಕಾಳುಗಳನ್ನು ಎರಚಿಕೊಂಡರು.*
ನಂತರ ಪುರೋಹಿತರು ಮಹೂರ್ತ ನಿರೀಕ್ಷಣೆ ಮಾಡಿ *ಮಂಗಳಾಷ್ಟಕವನ್ನು ಪಠಣ ಮಾಡಿ ಸುಮಹೂರ್ತೆ ಸಾವಧಾನ| ಸುಲಗ್ನಾ ಸಾವಧಾನ||* ಎಂದು ಹೇಳುತ್ತಾ ಗಂಟೆ ಯನ್ನು ಬಾರಿಸಿದರು.
*ಬೃಹಸ್ಪತಿ ಯು ವಧುವಿನ ಪ್ರವರವನ್ನು ಹೇಳಿದ ಹಾಗೆ ಆಕಾಶರಾಜನು ಹೇಳುವನು.*.
*"ಅತ್ರಿ ಗೊತ್ರದಲ್ಲಿ ಜನಿಸಿರುವ,ಸುವೀರರಾಜನ ಮರಿಮಗಳಾದ, ಸುಧರ್ಮರಾಜನ ಮೊಮ್ಮಗಳಾದ,ಆಕಾಶರಾಜನ ಮಗಳಾದ ಕಮಲದಂತೆ ಕಣ್ಣು ಉಳ್ಳವಳಾದ ಪದ್ಮಾವತಿ ಎಂಬ ಸಾಲಂಕೃತ ಅಲಂಕಾರ ಗೊಂಡ ಕನ್ಯೆ ಯನ್ನು ನಿನಗೆ ಕನ್ಯಾದಾನವಾಗಿ ನೀಡುತ್ತಾ ಇರುವೆನು ಸ್ವೀಕರಿಸು ಎಂದು ಹೇಳಿದನು".*.
ನಂತರ ವಧೂ ವರರ ಮಧ್ಯದಲ್ಲಿ ರತ್ನ ಮಯ ಶಾಲನ್ನು ಅಡ್ಡಹಿಡಿದರು.
*ಗಂಡಿನ ಕಡೆಯ ಪುರೋಹಿತ ರಾದ ವಸಿಷ್ಠ ರು ವರನ ಪ್ರವರವನ್ನು ಉಚ್ಚಾರಣೆ ಮಾಡಿದರು.*
*ಅದರಂತೆ ಶ್ರೀನಿವಾಸ ಹೇಳುವನು.*
*"ಯಯಾತಿ ಮಹಾರಾಜನ ಮರಿ ಮಗನಾದ,ಶೂರಸೇನ ರಾಜನ ಮೊಮ್ಮಗ ನಾದ,ವಸುದೇವನ ಪುತ್ರನು ಆದ,ವಸಿಷ್ಠ ಗೋತ್ರದವನಾದ ಶ್ರೀನಿವಾಸ ನೆಂಬ ನಾಮಧೇಯವುಳ್ಳ ನಾನು ನಿನ್ನ ಇಂದ ಕನ್ಯಾದಾನವಾಗಿ ಕೊಡಲ್ಪಡುತ್ತಿರುವ ಈ ಕನ್ಯೆಯನ್ನು ಸ್ವೀಕಾರ ಮಾಡುತ್ತಾ ಇದ್ದೇನೆ."*
ನಂತರ ಆಕಾಶರಾಜನು ಸುಗಂಧ,ವಸ್ತ್ರ, ಲೇಪನಾದಿಗಳಿಂದ ಶ್ರೀನಿವಾಸ ನನೆ ಪೂಜಿಸಿ ವಾಸುದೇವನ ಕರ ಕಮಲದಲ್ಲಿ ಕಂಕಣವನ್ನು ಕಟ್ಟಿದನು.
*ಬೃಹಸ್ಪತಿ ಆಚಾರ್ಯರು ಪದ್ಮಾವತಿ ಕರಾಂಬುಜದಲ್ಲಿ ಕಂಕಣ ಬಂಧನ ಮಾಡಿದರು.*
ಆ ನಂತರದಲ್ಲಿ ದೇವದೇವನಾದ ಶ್ರೀನಿವಾಸ ನಿಂದ ಪೂಜೆ ಮಾಡಲ್ಪಟ್ಟ ಮಾಂಗಲ್ಯಸೂತ್ರಕ್ಕೆ ರಾಜನು ತಮ್ಮ ಮನೆಯದಾದ ಕರಿಮಣಿಗಳನ್ನು ಸೇರಿಸಿ,ಅದನ್ನು ಪೂಜಿಸಿದರು..
*ಅರುಂಧತಿ ವಸಿಷ್ಠ ಮೊದಲಾದವರು ಆ ಮಾಂಗಲ್ಯ ವನ್ನು ಮುಟ್ಟಿ ಪವಿತ್ರವಾದ ಆ ಮಂಗಳ ಸೂತ್ರವನ್ನು ಶ್ರೀನಿವಾಸನು* *"ಮಾಂಗಲ್ಯಂ ತಂತುನಾನೇನ*|
*ಜಗಜ್ಜೀವನ ಹೇತುನಾ*|
*ಕಂಠೇ ಬಧ್ನಾಮಿ ಸುಭಗೆ* *ಚಿರಂಜೀವ ಮಯಾ ಸಹ"*|
*"ಜಗತ್ತಿನ ಜೀವನಕ್ಕೆ ಕಾರಣವಾಗಿರುವ ಈ ಮಂಗಳಸೂತ್ರವನ್ನು ಎಲೈ ಪದ್ಮಾವತಿ ನಿನ್ನ ಕೊರಳಲ್ಲಿ ಕಟ್ಟುತ್ತೇನೆ.ನೀನು ನನ್ನ ಸಹಧರ್ಮಿಣಿಯಾಗಿ ನನ್ನ ಜೊತೆಯಲ್ಲಿ ಚಿರಕಾಲ ಬಾಳು"* ಎಂಬ
*ಈ ಮಂತ್ರವನ್ನು ಹೇಳಿ ಶ್ರೀನಿವಾಸನು ಪದ್ಮಾವತಿ ಕೊರಳಲ್ಲಿ ಮಂಗಳಸೂತ್ರವನ್ನು ಕಟ್ಟಿದನು.*
ಆ ಬಳಿಕ ವಿವಾಹಕ್ಕೆ ಸಂಭಂದಿಸಿದ ಎಲ್ಲಾ ಸಕಲ ಕಾರ್ಯಕಲಾಪಗಳನ್ನು ಪುರೋಹಿತರು ಪೂರ್ಣಗೊಳಿಸಿದರು.
*ಬೆಟ್ಟದೊಡೆಯನ ಈ ವಿಶಿಷ್ಟ ಕತೆಯನ್ನು|*
*ಬಹಳ ನಿಷ್ಠೆ ಯಲಿ ಕೇಳಿದರೆ| ಎಷ್ಟು ಪೇಳಲಿ ಫಲವ*|
*ಕಷ್ಟ ದೂರಾಗುವದು|,ಕಟ್ಟುವದು ಕಲ್ಯಾಣ ,|ದುಷ್ಟ ಗ್ರಹ ಗಳ ಬಾಧೆ ಬಿಟ್ಟು ಓಡುವದು|*
*ಕಷ್ಟದಲಿ ಪುತ್ರಕಾಮೇಷ್ಟಿ ಯಾಗ ಮಾಡಿದ ಫಲವು|,ಇಷ್ಟರಿಂದಲೆ ಕೊಡುವ ಇಷ್ಟದಾಯಕ ಹರಿಯು*||
*ಕೊಟ್ಟು ಸಲಹುವ ಮತ್ತೆ ತುಷ್ಟನಾಗುತ| ಕರೆದ ಅಭೀಷ್ಟವನು ಕೊಡುವ| ಎಲ್ಲಾ ಕೊಟ್ಟು ಬಿಡುವನು ಮುಕ್ತಿ ಕಟ್ಟ ಕಡೆಗೆ.*||
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಮಂಗಳಂ ಮಂಗಳಂ|*
*ಒದಗಿ ಮಹೂರ್ತಕ್ಕೆ ಬಂದವಗೆ|*
*ಸದಯ ಹೃದಯನಾಗಿರುವವಗೆ*|
*ಮುದದಿಂದಲಿ ಶ್ರೀ ಪದುಮಾವತಿಯಳ ಮದುವೆ*|
*ಮಾಡಿಕೊಂಡ ಮದುಮಗಗೆ|ಮಂಗಳಂ||*
🙏ಶ್ರೀನಿವಾಸಾಯ ನಮಃ🙏
✍️ಅ.ವಿಜಯವಿಠ್ಠಲ
[06/10, 7:16 AM] vijayavitthala blr: *ಸಕಲರಿಗು ಹರಿದಿನದ ನಮಸ್ಕಾರ🙏 ಗಳು

Post a Comment