ಹರಿಹರ,ಜಗಳೂರಿನಲ್ಲಿ ಇಂದು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆ

[23/11, 12:09 PM] Cm Ps: *ಬಿಜೆಪಿಯಲ್ಲಿ ಭಿನ್ನಮತವಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಚಿತ್ರದುರ್ಗ, ನವೆಂಬರ್ 23: ಬಿಜೆಪಿಯಲ್ಲಿ ಭಿನ್ನಮತವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಮುರುಘಾ ಮಠದ ಆವರಣದ ಹೆಲಿಪ್ಯಾಡ್ ನಲ್ಲಿ ಬಂದಿಳಿದು  ಕಾರ್ಯಕ್ರಮಕ್ಕೆ ತೆರಳುವ  ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. 

 ಜಿಲ್ಲಾ ಉಸ್ತುವಾರಿ ಸಚಿವರು ಮಂಡಿ ಶಸ್ತ್ರಚಿಕಿತ್ಸೆ ಪಡೆದು  ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ  ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.


ಪ್ರತಿ ಮನೆಗೆ 10 ಸಾವಿರ ಲೀಟರ್   ಉಚಿತವಾಗಿ  ನೀರು ಕೊಡುವ ಬಗ್ಗೆ ಸರ್ಕಾರ ಆಲೋಚನೆ ಮಾಡಿಲ್ಲ ಎಂದು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದರು. 

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು  ಜೆಡಿಎಸ್ ಗೆ ಬಹುಮತ ಬಂದರೆ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಅವರ ಪಕ್ಷದ  ನಿರ್ಣಯ ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು.

*ಶ್ರೀಘ್ರ ಕ್ರಮ*
ಮುರುಘಾ ಮಠದ ಪ್ರಕರಣದ ಬಗ್ಗೆ ಡಿಸಿ ಅವರು ಸರ್ಕಾರಕ್ಕೆ  ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ವರದಿ ಕಾನೂನು ಇಲಾಖೆಯಲ್ಲಿದ್ದು,  ಅತಿ ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುರುಘಾ ಶ್ರೀ ಅವರ ವಿರುದ್ಧ ಪಿತೂರಿ ನಡೆದಿದೆ ಎಂದು ಪ್ರಕರಣ ದಾಖಲಾಗಿ, ಮಾಜಿ ಶಾಸಕರ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನ್ಯಾಯಾಲಯದಲ್ಲಿದೆ ಪೊಲೀಸ್ ತನಿಖೆ ಮಾಡುತ್ತಿದ್ದಾರೆ ಎಂದರು.
[23/11, 12:31 PM] Cm Ps: *ಚಿತ್ರದುರ್ಗ,* ನವೆಂಬರ್ 23: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ* *ಬೊಮ್ಮಾಯಿ* ಅವರು *ಸರಸ್ವತಿ ಕಾನೂನು* *ಕಾಲೇಜು ಚಿತ್ರದುರ್ಗ* ಇವರ ವತಿಯಿಂದ ಆಯೋಜಿಸಿರುವ ಕಾಲೇಜಿನ “ *ಕಾನೂನು ಸೌಧ”* *ನೂತನ ಕಟ್ಟಡವನ್ನು ಉದ್ಘಾಟಿಸಿ* ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಶಾಸಕರಾದ ಎಂ. ಚಂದ್ರಪ್ಪ, ರಘುಮೂರ್ತಿ ಹಾಗೂ ಮತ್ತಿತರರು ಹಾಜರಿದ್ದರು
[23/11, 12:35 PM] Cm Ps: *ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ*

*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* 

ಚಿತ್ರದುರ್ಗ (ಕರ್ನಾಟಕ ವಾರ್ತೆ).ನ.23: ಸರ್ವೋಚ್ಚ, ಉಚ್ಛ ಹಾಗೂ ಕೆಳ ಹಂತದ ನ್ಯಾಯಾಲಯ ಹಾಗೂ ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ. ಕಾನೂನಿನ ನೆರವಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಒದಗಿಸಬಹದು ಎಂಬುದರ ಚಿಂತನೆ ನಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಬುಧವಾರ ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಸುವರ್ಣ ಸಮಾರಂಭ ಹಾಗೂ ಕಾನೂನು ಸೌಧ ಉದ್ಘಾಟಿಸಿ ಮಾತನಾಡಿದರು. 

ಶಾಸಕಾಂಗ ಹಾಗೂ ನ್ಯಾಯಾಂಗ ಒಂದನ್ನೊಂದು ಅವಲಂಬಿಸಿವೆ. ಎರಡೂ ಜೊತೆ ಜೊತೆಯಾಗಿ ಸಾಗಬೇಕು. ಶಾಸಕಾಂಗದಿಂದ ಕಾನೂನು ರೂಪಿಸುವಾಗ ಹತ್ತು ಹಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ರೂಪಿಸುವ ಕಾನೂನು ಸಂವಿಧಾನ ಬದ್ದಬಾಗಿರಬೇಕು, ಸಮಾನತೆ ಸ್ವರೂಪ ಹೊಂದಿರಬೇಕು,  ಕಾನೂನುಗಳು ಗೊಂದಲ ಮಯವಾಗಿರಬಾರದು. ಸ್ಪಷ್ಟ ಉದ್ದೇಶದಿಂದ ಕಾನೂನು ರೂಪಿಸಬೇಕು ಎಂದರು. 

ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು. ವಕೀಲರು ಮಾನವೀಯತೆ ಮರೆಯಬಾರದು. ಪ್ರಾಕೃತಿಕ ನ್ಯಾಯ ಹಾಗೂ ಮಾನವ ರಚಿತ ಕಾನೂನುಗಳು ಭಿನ್ನವಾಗಿವೆ. ಪ್ರಾಕೃತಿಕ ನ್ಯಾಯ
ಸತ್ಯ, ಧರ್ಮ, ಪರೋಪಕಾರದಿಂದ ಲಭಿಸುವ ಪುಣ್ಯ ಪ್ರಾಪ್ತಿಯ ಬಗ್ಗೆ ತಿಳಿಸುತ್ತದೆ. ಆದರೆ ಮಾನವ ನಿರ್ಮಿತ ಕಾನೂನು ಶಿಕ್ಷಾರ್ಹ ನೀತಿ ಹೊಂದಿದೆ. ಕಾನೂನು ಮೀರಿದರೆ ದಂಡ ವಿಧಿಸಲಾಗುತ್ತದೆ. ಭಾರತಕ್ಕೆ ಭವ್ಯ ಚರಿತ್ರೆ ಇದೆ. ಆದರೆ ಇಂದು ಉತ್ತಮ ಚಾರಿತ್ಯ ಹೊಂದಿರುವ ಜನರು ಬೇಕಾಗಿದೆ. ಭಾರತದಲ್ಲಿ ನೀತಿಗಳ ಬೋದಿಸುವ ಆಚಾರ್ಯರಿದ್ದಾರೆ. ಆದರೆ ನೀತಿಗಳ ಆಚರಣೆಯಾಗಬೇಕು ಎಂದರು. 

ರಾಜಕಾರಣಿಗಳು ಪ್ರತಿನಿತ್ಯ ರಾಜಕಾರಣ ಮಾಡಬಾರದು. ಅಧಿಕಾರ ಲಭಿಸುವ 60 ತಿಂಗಳಲ್ಲಿ 59 ತಿಂಗಳ ಅಭಿವೃದ್ಧಿ ಮಾಡಿ 1 ತಿಂಗಳು ರಾಜಕಾರಣ ಮಾಡಬೇಕು. ಜವಬ್ದಾರಿಯುತ ರಾಜಕೀಯ ಪಕ್ಷಗಳ ಇದನ್ನು ಅರಿಯಬೇಕು. ರಾಜಕಾರಣಿ ಮುಂದಿನ ಚುನಾವಣೆ ನೋಡಿತ್ತಾನೆ. ಮುತ್ಸದ್ಧಿ ದೃಷ್ಟಿ ಮುಂದಿನ ಜನಾಂಗದ ಮೇಲೆ ಇರುತ್ತದೆ. ಮುಂದಿನ ಜನಾಂಗಕ್ಕೆ ಮೌಲ್ಯಗಳನ್ನು ತಿಳಿಸಬೇಕು ಎಂದರು. 

ಸರಸ್ವತಿ ವಿದ್ಯಾಸ್ಥಂಸ್ಥೆ ಮಧ್ಯ ಕರ್ನಾಟಕದಲ್ಲಿ ಜನರಿಗೆ ಕಾನೂನು ನೆರವು ಲಭಿಸುವ ನಿಟ್ಟಿನಲ್ಲಿ ಉತ್ತಮ ವಕೀಲರನ್ನು ರೂಪಿಸಿದೆ.ಸ್ವಾತಂತ್ರ್ಯ ಹಾಗೂ ರಾಜ್ಯ ಏಕೀಕರಣದಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಬ್ಯಾರಿಷ್ಟರ್ ಪದವಿ ಪಡೆದ ಮಹನೀಯರು ಸ್ವಾತಂತ್ರ್ಯ ಸಮಯದಲ್ಲಿ ಕಾನೂನು ರೂಪಿಸುವ ಸ್ಥಾನದಲ್ಲಿದ್ದರು. ಕಾಲಕ್ರಮೇಣ ಈ ಸಂಖ್ಯೆ ಇಳಿಮುಖವಾಗಿದೆ. ಇಂದು ಶೇ.25ಕ್ಕಿಂತ ಕಡಿಮೆ ವಕೀಲರು ರಾಜಕಾರಣದಲ್ಲಿದ್ದಾರೆ ಎಂದರು.

ಸರಸ್ವತಿ ಕಾನೂನು ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ರೂ.2 ಕೋಟಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಕಾನೂನು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಹಾಸ್ಟೆಲ್ ಸ್ಥಾಪಿನೆ.‌ಕಾನೂನು ಕಾಲೇಜುಗಳ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ವಿಚಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವಾರಾಜ, ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಹಾಗೂ ಶಾಸಕ ಎ.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ,ವಿಧಾನ ಪರಿಷತ್ ಶಾಸಕ ರವಿಕುಮಾರ್, ಕೆ.ಎಸ್.ನವೀನ್, ನಗರ ಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಹುಬ್ಬಳ್ಳಿ ಕಾನೂನು ವಿ.ವಿ.ಉಪಕುಲಪತಿ ಡಾ.ಸಿ.ಬಸವರಾಜು
ಸರಸ್ವತಿ ಕಾನೂನು ಕಾಲೇಜು ಮುಖ್ಯಸ್ಥ ಹೆಚ್.ಹನುಮಂತಪ್ಪ, ಜಿ.ಪಂ.ಸಿಇಓ ಎಂ.ಎಸ್.ದಿವಾಕರ್,  ಅಪರಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶರಾಮ್ ಉಪಸ್ಥಿತಿರಿದ್ದರು.
[23/11, 1:28 PM] Cm Ps: ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಇಂದು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಬಿ.ಶ್ರೀರಾಮುಲು, ಸಂಸದರಾದ ಜಿ.ಎಂ.‌ಸಿದ್ದೇಶ್ವರ್, ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.‌ನವೀನ್ ಹಾಗೂ ಮತ್ತಿತರರು ಹಾಜರಿದ್ದರು.‌
[23/11, 4:20 PM] Cm Ps: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಇಂದು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಸಂಸದರಾದ ಜಿ.ಎಂ.‌ಸಿದ್ದೇಶ್ವರ್, ಶಾಸಕರಾದ  ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್‌ ನವೀನ್ ಹಾಗೂ ಮತ್ತಿತರರು ಹಾಜರಿದ್ದರು.‌

Post a Comment

Previous Post Next Post