[10/12, 10:52 AM] Cm Ps: ಬೆಂಗಳೂರು, ಡಿಸೆಂಬರ್ 10: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ವಿಧಾನಸೌಧದಲ್ಲಿ ಮಾಜಿ* *ಮುಖ್ಯಮಂತ್ರಿಗಳಾದ* *ದಿವಂಗತ ಎಸ್.ನಿಜಲಿಂಗಪ್ಪ* ಅವರ ಜನ್ಮದಿನದ ಅಂಗವಾಗಿ ಅವರ *ಪ್ರತಿಮೆಗೆ ಮಾಲಾರ್ಪಣೆ* *ಮಾಡಿ ಪುಷ್ಪ* *ನಮನ ಸಲ್ಲಿಸಿ* ನಂತರ *ಮಾಧ್ಯಮದವರಿಗೆ* ಪ್ರತಿಕ್ರಿಯೆ ನೀಡಿದರು.
[10/12, 10:56 AM] Cm Ps: ಬೆಂಗಳೂರು, ಡಿಸೆಂಬರ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತಿತರಿದ್ದರು.
[10/12, 12:27 PM] Cm Ps: *ಎಸ್.ನಿಜಲಿಂಗಪ್ಪ ಜನಪರ ಆಡಳಿತಕ್ಕೆ ನಾಂದಿ ಹಾಡಿದವರು*: *ಸಿಎಂ.ಬೊಮ್ಮಯಿ*
ಬೆಂಗಳೂರು, ಡಿಸೆಂಬರ್ 10: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನವರು ಆಡಳಿತದ ಭದ್ರ ಬುನಾದಿಯನ್ನು ಹಾಕಿ ಜನಪರವಾದ ಆಡಳಿತ ಮಾಡಲು ನಾಂದಿ ಹಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸ್.ನಿಜಲಿಂಗಪ್ಪ ಅವರು ಕನ್ನಡ ನಾಡಿನ ಪುತ್ರ. ಇಡೀ ನಾಡಿಗೆ ತನ್ನ ಜೀವವನ್ನು ಮೀಸಲಿಟ್ಟು ಕನ್ನಡ, ಕನ್ನಡ ಭಾಷೆಗೆ ಮಾಡಿರುವ ಕೆಲಸ ಕರ್ನಾಟಕವಾಗಲು ಕಾರಣೀಭೂತವಾಗಿದೆ. ತತ್ವ, ಆದರ್ಶ ಮೌಲ್ಯಾಧಾರಿತ ರಾಜಕಾರಣ, ಕರ್ನಾಟಕದಲ್ಲಿ ಮಾಡಿದರು. ಭಾರತದಲ್ಲಿ ಅವರ ಖ್ಯಾತಿ, ಪ್ರಭಾವ ಇತ್ತು. ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎ.ಐ.ಸಿ.ಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿದಲ್ಲಿ ಸುಧಾರಣೆಗೆ ಮಹತ್ವ ನೀಡಿ, ಆಡಳಿತ ಸುಧಾರಣೆಯನ್ನು ಪ್ರಜಾಪ್ರಭುತ್ವ ಆಗತಾನೆ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನಪರವಾದ, ಜನರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ನೀಡಿದ್ದಾರೆ ಎಂದರು.
*ಪ್ರಾಮಾಣಿಕ ರಾಜಕಾರಣಿ*
ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ನಾಟಕದ ಸೇವೆಯನ್ನು ಮಾಡಿದವರು. ನೀರಾವರಿಗೆ ಬಹಳಷ್ಟು ಒತ್ತು ನೀಡಿದವರು. ಇಂದು ನಾವು ಕಾಣುತ್ತಿರುವ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳು ಅವರ ಕಲ್ಪನೆ ಹಾಗೂ ಕ್ರಿಯಾಯೋಜನೆಗಳು. ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಮನಸ್ಸು ಮಾಡಿದ್ದರೆ, ಭಾರತದ ರಾಷ್ಟಪತಿಗಳಾಗಬಹುದಿತ್ತು.
ಆದರೆ ಅವರು ಅದನ್ನು ಒಪ್ಪಲಿಲ್ಲ. ಎಂದಿಗೂ ಅಧಿಕಾರದ ಹಿಂದೆ ಹೋಗಲಿಲ್ಲ. ಅಧಿಕಾರ ಅವರ ಹಿಂದೆ ಬಂದಿತ್ತು. ಎಸ್.ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಿದ್ದಾಗ ಬೆಂಗಳೂರಿಗೆ ಬನ್ನಿ ಎಂದಾಗಲೂ ಅವರು ಒಪ್ಪಲಿಲ್ಲ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಅವರು ನಮ್ಮೆಲ್ಲರಿಗೂ ಆದರ್ಶ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತಿತರಿದ್ದರು.
[10/12, 12:28 PM] Cm Ps: *ಗಡಿ ವಿವಾದ*ಕೇಂದ್ರ ಗೃಹ* *ಸಚಿವರ ಅಧ್ಯಕ್ಷತೆ ಯಲ್ಲಿ ಸಭೆ* *ಸಿಎಂ ಬೊಮ್ಮಾಯಿ*
ಬೆಂಗಳೂರು, ಡಿಸೆಂಬರ್ 10: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್ 14 ಅಥವಾ 15 ರಂದು ಸಭೆ ನಡೆಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸೋಮವಾರದಂದು ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದೆ. ನಾನೂ ಕೂಡ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ಹೇಳಿ ಕಳಿಸಿದಾಗ ಬರಬೇಕಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದ ವಿಚಾರ, ನಿಲುವು, ವಾಸ್ತವಾಂಶವನ್ನು ಈಗಾಗಲೇ ತಿಳಿಸಲಾಗಿದೆ. ಹಲವಾರು ವಿವರಗಳನ್ನು ಸಹ ನೀಡಲಾಗಿದೆ. ಭೇಟಿಯಾದ ಸಂದರ್ಭದಲ್ಲಿ ಕರ್ನಾಟಕದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗುವುದು ಎಂದರು.
*ಸರ್ವ ಪಕ್ಷದ ಸಭೆ*
ಸರ್ವ ಪಕ್ಷದ ಸಭೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಸಭೆ ನಿಗದಿಯಾದ ಕೂಡಲೇ ತಿಳಿಸಲಾಗುವುದು ಎಂದು ತಿಳಿಸಿದರು.
[10/12, 12:38 PM] Cm Ps: ಬೆಂಗಳೂರು, ಡಿಸೆಂಬರ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಗೇರಿ ಹೋಬಳಿಯ ಕುಂಬಳಗೋಡು ಗ್ರಾಮದಲ್ಲಿ ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಯೋಜಕತ್ವದಲ್ಲಿ ಆಯೋಜಿಸಿರುವ “ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ”ದ ಉದ್ಘಾಟನೆ ನೆರವೇರಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಸಚಿವ ಎಸ್.ಟಿ. ಸೋಮಶೇಖರ್, ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್, ಜಂಟಿ ಕಾರ್ಯದರ್ಶಿ ಕರ್ಮ ಜಿಹ್ಪಾಂ ಭೂಟಿಯಾ ಮೊದಲಾದವರು ಉಪಸ್ಥಿತರಿದ್ದರು.
[10/12, 2:20 PM] Cm Ps: *ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಡಿಸೆಂಬರ್ 10 :
ರುಡ್ ಸೆಟ್ ನಂತಹ ಉತ್ತಮ ತರಬೇತಿ ಕೇಂದ್ರದಿಂದ ಕರ್ನಾಟಕದ ಮಕ್ಕಳು ಲಾಭವನ್ನು ಪಡೆದು, ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಯೋಜಕತ್ವದಲ್ಲಿ ಆಯೋಜಿಸಿರುವ “ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ”ದ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪ್ರಧಾನ ಮಂತ್ರಿಗಳು ಕೌಶಲ್ಯ ಭಾರತದಡಿ ಶೇ 44 ರಷ್ಟಿರುವ ಯುವಕರಿಗೆ ಕೌಶಲ್ಯ ತರಬೇತಿ ಯನ್ನು ನೀಡಿ, ಎಲ್ಲಾ ಉದ್ಯೋಗಕ್ಕೆ ಅರ್ಹತೆ ಗಳಿಸಿಕೊಳ್ಳಲು ನೆರವು ಒದಗಿಸುತ್ತಿದ್ದಾರೆ. ಸಣ್ಣ ಕೆಲಸದಿಂದ ಹಿಡಿದು ಆರ್.ಅಂಡ್ ಡಿ ವರೆಗೆ ಕೌಶಲ್ಯ ಅಗತ್ಯ. ಕರ್ನಾಟಕ ಕೌಶಲ್ಯ ಹಾಗೂ ಮಾನವ ಬಂಡವಾಳದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಇದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿ, ಕರ್ನಾಟಕ ವನ್ನು ಕಟ್ಟಲು ಬಳಕೆ ಮಾಡುತ್ತೇವೆ.. ಇದರ ಮೂಲಕ ನವ ಕರ್ನಾಟಕದಿಂದ ನವಭಾರತ ನಿರ್ಮಿಸೋಣ ಎಂದರು.
*ಗ್ರಾಮೀಣ ಆರ್ಥಿಕತೆಗೆ ಒತ್ತು*
ರಾಜ್ಯ ಸರ್ಕಾರ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮದ 2 ಯುವಜನ ಸಂಘಗಳಿಗೆ 5 ಲಕ್ಷ ವರೆಗಿನ ಪ್ರಾಜೆಕ್ಟ್ ನೀಡಿ, 1 ಲಕ್ಷ ರೂ.ರಾಜ್ಯ ಸರ್ಕಾರದಿಂದ ಅನುದಾನ ನೀಡಿ, ತರಬೇತಿ ನೀಡಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡಲಾಗುವುದು. ಈ ಯೋಜನೆಯಡಿ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 5 ಲಕ್ಷ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತದೆ. ಗ್ರಾಮೀಣ ಕುಶಲಕರ್ಮಿಗಳಿಗೆ 50 ಸಾವಿರ ರೂ. ಗಳ ಸಹಾಯಧನ ಒದಗಿಸಲಾಗುತ್ತಿದೆ. ದುಡಿಯುವ ವರ್ಗದ ಜನರಿಗೆ ಬೆಂಬಲ ಒದಗಿಸುವುದು ನಮ್ಮ ಆಶಯ ಎಂದರು.
*ಉದ್ಯೋಗದಾತರಾಗುವ ಸ್ವಯಂಉದ್ಯೋಗಿಗಳು:*
ದೇಶ ಕಟ್ಟಲು ಅಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗವನ್ನು ನೀಡಬೇಕು. ತಳಹಂತದ ದುಡಿಯುವ ವರ್ಗ ರಾಜ್ಯದ ಆರ್ಥಿಕತೆಯನ್ನು ಬೆಳೆಸುತ್ತಾರೆ. ಗ್ರಾಮೀಣ ಭಾಗದ ಯುವಕರಿಗೆ ಬುದ್ಧಿಶಕ್ತಿಯಿದ್ದರೂ ವಿವಿಧ ರಂಗಗಳಲ್ಲಿ ಅವರಿಗೆ ತರಬೇತಿ ನೀಡಿದರೆ ,ಅದ್ಭುತ ಕೆಲಸಗಳನ್ನು ಮಾಡಲು ಶಕ್ತರಾಗಿರುತ್ತಾರೆ. ರುಡ್ ಸೆಟ್ ನ ಕಾರ್ಯಕ್ರಮದಡಿ ಯುವಕರಿಗೆ ತರಬೇತಿ ನೀಡುವ ಸಂಸ್ಥೆಗಳಲ್ಲಿ ಸುಮಾರು 45 ಲಕ್ಷ ಜನರಿಗೆ ತರಬೇತಿಯನ್ನು ನೀಡಲಾಗಿದ್ದು, ಅದರಲ್ಲಿ 30 ಲಕ್ಷ ಜನ ಈಗಾಗಲೇ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ತರಬೇತಿ ಸಂಸ್ಥೆಯೊಂದು ಈ ರೀತಿಯ ಯಶಸ್ಸನ್ನು ಪಡೆದಿರುವುದು ಅಭಿನಂದನೀಯ. ದೇಶ ಕಟ್ಟಲು ಕೌಶಲ್ಯಭರಿತ ಉದ್ಯೋಗಿಗಳು ಬೇಕು. 10 ನೇ ತರಗತಿ, ಪಿಯುಸಿಗಳ ನಂತರ ಇಂತಹ ಕೌಶಲ್ಯ ತರಬೇತಿ ದೊರೆತರೆ, ಈಗ ಸ್ವಯಂಉದ್ಯೋಗ ಮಾಡುವವರು ನಂತರ ಉದ್ಯೋಗದಾತರಾಗುತ್ತಾರೆ ಎಂದರು.
*ಗ್ರಾಮೀಣ ಆರ್ಥಿಕತೆ :*
ಗ್ರಾಮೀಣ ಆರ್ಥಿಕತೆಗೆ ರಾಜ್ಯ ಸರ್ಕಾರ ಒತ್ತು ನೀಡಿದೆ. ದುಡಿಯುವ ಜನ ದೇಶವನ್ನು ಕಟ್ಟುತ್ತಾರೆ. ದುಡಿಮೆಯೇ ದೊಡ್ದಪ್ಪ ಎನ್ನುವುದು ಕಾಲವಿದು. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿರುವ ಧರ್ಮಸ್ಥಳದ ಸಂಸ್ಥೆ ಸಾವಿರಾರು ಸಂಘಗಳನ್ನು ಕಟ್ಟಿ ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡಿದೆ. ಸ್ತ್ರೀ ಶಕ್ತಿ ಸಂಘಕ್ಕೆ ಹಣಕಾಸಿನ ನೆರವು ನೀಡಿ ದೊಡ್ಡ ಕ್ರಾಂತಿಯನ್ನು ಮಾಡುತ್ತಿದ್ದಾರೆ. ವಿವೇಕಾನಂದ ಹಾಗೂ ಸ್ತ್ರೀ ಶಕ್ತಿ ಯೋಜನೆಗೆ ನಿಮ್ಮ ಆಶೀರ್ವಾದ ಹಾಗೂ ಪ್ರೋತ್ಸಾಹ ಇರಲಿ. ನಿಮ್ಮ ಸಂಸ್ಥೆಗಳ ಸಹಯೋಗದಲ್ಲಿ ಈ ಕೆಲಸವನ್ನು ಮಾಡಲು ಸಹಕಾರ ಕೋರಿದರು. ರುಡ್ ಸೆಟ್ ಒಂದು ಉತ್ತಮ ತರಬೇತಿ ಕೇಂದ್ರವಾಗಿದೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಜನ ಬಂದು ಕರ್ನಾಟಕದ ಸಂಸ್ಕೃತಿ, ಜನ ಹಾಗೂ ಕೌಶಲ್ಯದ ಪರಿಚಯವಾಗುತ್ತದೆ. ದೇಶದಲ್ಲಿ ಅವರು ರಾಜ್ಯದ ರಾಯಭಾರಿಗಳಾಗುತ್ತಾರೆ. ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಕ್ಕಾಗಿ ಡಾ: ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸುತ್ತೇನೆ ಎಂದರು
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಸಚಿವ ಎಸ್.ಟಿ. ಸೋಮಶೇಖರ್, ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್, ಜಂಟಿ ಕಾರ್ಯದರ್ಶಿ ಕರ್ಮ ಜಿಹ್ಪಾಂ ಭೂಟಿಯಾ ಮೊದಲಾದವರು ಉಪಸ್ಥಿತರಿದ್ದರು.
[10/12, 3:00 PM] Cm Ps: ಮೈಸೂರು, ಡಿಸೆಂಬರ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ), ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ, ಮೈಸೂರು ಇವರ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ “ರಜತ ಮಹೋತ್ಸವ - ಬೆಳ್ಳಿಬೆಳಗು” ಉದ್ಘಾಟಿಸಿದರು.
ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು
[10/12, 5:02 PM] Cm Ps: ಮೈಸೂರು, ಡಿಸೆಂಬರ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಆಯೋಜಿಸಿದ್ದ “ಅನ್ಲೀಶ್ ಇಂಡಿಯಾ - 2022 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ದಂಪತಿಗಳು, ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ ಮತ್ತಿತರರು ಉಪಸ್ಥಿತರಿದ್ದರು.
[10/12, 5:47 PM] Cm Ps: ಮೈಸೂರು, ಡಿಸೆಂಬರ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹುರೂಪಿ ರಂಗಾಯಣ, ಮೈಸೂರು ಇವರ ವತಿಯಿಂದ ರಂಗಾಯಣದ ವನರಂಗದಲ್ಲಿ ಆಯೋಜಿಸಿರುವ“ಬಹುರೂಪಿ ರಾಷ್ಟ್ರೀಯ ರಂಗೋತ್ಸವ” ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಚಿತ್ರನಟ ರಮೇಶ್ ಅರವಿಂದ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿ.ಇ.ಒ ಉಪಸ್ಥಿತರಿದ್ದರು.
[10/12, 6:23 PM] Cm Ps: *ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗಿ*
*ಬಸವಣ್ಣನ ತತ್ವ ಸಿದ್ದಾಂತ ಪಾಲಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಮೈಸೂರು, ಡಿಸೆಂಬರ್ 10: ಬಸವಣ್ಣ ಯಾವುದೇ ಸಮುದಾಯಕ್ಕೆ ಸೇರಿದವರಲ್ಲ. ಅವರೊಂದು ವಿಚಾರ, ಅವರು ಬಯಸಿದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಭಿಪ್ರಾಯ ಪಟ್ಟರು.
ಅವರು ಇಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ), ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ, ಮೈಸೂರು ಇವರ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ “ರಜತ ಮಹೋತ್ಸವ - ಬೆಳ್ಳಿಬೆಳಗು”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರಿನ ವಿವಿಧ ವೀರಶೈವ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಬಸವ ಜಯಂತಿ ಆಚರಣೆ ಮಾಡಿದ ಸ್ವಾಮೀಜಿಯ ನಿರ್ಣಯ ಎಲ್ಲರಿಗೂ ಮಾದರಿಯಾಗಿದೆ. ಬಸವಣ್ಣನ ವಿಚಾರ ನಂಬಿದ ಭಕ್ತಾದಿಗಳು ಈಗಲೂ ವಿಚಾರ ಮಾಡಬೇಕು ಎಂದರು.
*ಸಮ ಸಮಾಜದ ನಿರ್ಮಾಣ*
ಬಸವಣ್ಣ 900 ವರ್ಷಗಳ ಹಿಂದೆ ಮಾಡಿದ ಹೋರಾಟ ಈಗಲೂ ಪ್ರಸ್ತುತ ಇವೆ. ಲಿಂಗ ಭೇದ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ್ದಾರೆ. ಅದರ ಬಗ್ಗೆ ನಾವು ಎಷ್ಟು ಪ್ರತಿಪಾದನೆ ಮಾಡಿದ್ದೇವೆ ಎಂದು ಆಲೋಚಿಸಬೇಕಿದೆ.
ಯಾವುದೇ ಮೂಡನಂಬಿಕೆ, ಲಿಂಗ ಭೇದ ಇಲ್ಲದಿದ್ದರೆ ಸಮಾಜ ಬೇರೆ ಇರುತ್ತಿತ್ತು. ಬಸವಣ್ಣ ನಿರ್ಮಾಣ ಮಾಡಿದ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಬೇಕು . ಆ ನಿಟ್ಟಿನಲ್ಲಿ ನಡೆದರೆ ಸಮಾನತೆಯ ಸಮಾಜ ನಿರ್ಮಾಣ ಆಗುತ್ತದೆ. ಆರ್ಥಿಕ, ಸಾಮಾಜಿಕ ಅಸಮಾನತೆ ಹೋಗಲಾಡಿಸಲುಂಶ್ರಮಿಸಬೇಕಿದೆ ಎಂದರು.
*ಆರ್ಥಿಕ ಅಭಿವೃದ್ಧಿ ಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು*
ಆರ್ಥಿಕ ಅಭಿವೃದ್ಧಿ ಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು. ಬಸವಣ್ಣನ ಕಾಯಕ ಸಮಾಜ ನಿರ್ಮಾಣ ಮಾಡಬೇಕು. ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಿದರು. ಅದರ ಜೊತೆಗೆ ದಾಸೋಹ ಪದ್ದತಿಯನ್ನು ತಂದರು. ಕನ್ನಡ ಭಾಷೆಗೆ ಬಸವಾದಿ ಶರಣರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕದ ಮೂಲ ಸಾಹಿತ್ಯದ ನಂತರ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ದೊಡ್ಡ ಕೊಡುಗೆ ಕೊಟ್ಡಿದೆ.
ಮಹಿಳೆಯರ ಸಮಾನತೆ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಅಕ್ಕ ಮಹಾದೇವಿ ಶ್ರೇಷ್ಠ ಉದಾಹರಣೆ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಇವರೆಲ್ಲ ನಮಗೆ ಪ್ರೇರಣೆ.
ಲಿಂಗಪೂಜೆ ಅದ್ಭುತ ಕಲ್ಪನೆ ಇಷ್ಟು ವಿಚಾರ ಇರುವ ಪರಂಪರೆಯನ್ನು ಈ ಆಧುನಿಕ ಕಾಲದಲ್ಲಿ ಎಲ್ಲರೂ ಚಿಂತನೆ ಮಾಡಬೇಕಿದೆ.ಎಲ್ಲರನ್ನು ನಮ್ಮವರು ಎಂದು ತಿಳಿದು ಜೀವನ ಮಾಡಿದರೆ ಎಲ್ಲವೂ ಸರಳ.
ಸಂಗ್ರಹ ಮಾಡದಿದ್ದರೆ ಎಲ್ಲವೂ ಸಾಧ್ಯವಿದೆ. ಜನ ಸಾಮಾನ್ಯರ ಅನುಕೂಲಕ್ಕೆ ಕೆಲಸ ಮಾಡಿದ ಮೈಸೂರು ಮಹಾರಾಜರನ್ನು ಈ ಕಾರಣಕ್ಕಾಗಿಯೇ ನೆನೆಸುತ್ತೇವೆ ಎಂದರು.
ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ, ಮತ್ತಿತರರು ಉಪಸ್ಥಿತರಿದ್ದರು.
[10/12, 7:17 PM] Cm Ps: *ರಂಗಾಯಣದಲ್ಲಿ ಭಾರತೀಯತೆ ಬಿಂಬಿಸುವ ಪ್ರಯೋಗಳಾಗಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಮೈಸೂರು, ಡಿಸೆಂಬರ್ 10 :
ನಮ್ಮ ಸಂಸ್ಕೃತಿಯ ಜೊತೆಗೆ ಭಾರತೀಯತೆಯನ್ನು ಬಿಂಬಿಸುವಂತಹ ಪ್ರಯೋಗಗಳು ರಂಗಾಯಣದಲ್ಲಿ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು *ಬಹುರೂಪಿ ರಂಗಾಯಣ,* *ಮೈಸೂರು* ಇವರ ವತಿಯಿಂದ *ರಂಗಾಯಣದ* ವನರಂಗದಲ್ಲಿ ಆಯೋಜಿಸಿರುವ“ *ಬಹುರೂಪಿ* *ರಾಷ್ಟ್ರೀಯ ರಂಗೋತ್ಸವ”* ಉದ್ಘಾಟಿಸಿ ಮಾತನಾಡಿದರು.
ಬಹುರೂಪಿ ರಂಗೋತ್ಸವದಲ್ಲಿ ನಮ್ಮ ಸಂಸ್ಕೃತಿ ಪರಂಪರೆ, ಇತಿಹಾಸವುಳ್ಳ ಭಾರತೀಯತೆಯ ಆತ್ಮವನ್ನು ಬಿಂಬಿಸುವ ಪ್ರಯತ್ನ ಮಾಡಬೇಕು. ಇಂತಹ ಹೊಸ ಪ್ರಯತ್ನಗಳಿಂದ ರಂಗಾಯಣಕ್ಕೆ ಹೊಸ ಆಯಾಮ ದೊರೆಯಲಿದೆ. ರಂಗಾಯಣದ ಹೊಸ ವಿಚಾರಗಳು ಹಾಗೂ ವಿಭಿನ್ನ ಪ್ರಯತ್ನಗಳು ಜನರ ಬದುಕಿನಲ್ಲಿ ಬದಲಾವಣೆಗೆ ನಾಂದಿಯಾಗಲಿ. ರಂಗಾಯಣಕ್ಕೆ ಜಾಗ ಹಾಗೂ ಹೆಚ್ಚಿನ ಅನುದಾನದ ಬಗ್ಗೆಯೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
*ನಾಟಕಗಳು ಪರಿಣಾಮಕಾರಿ ಮಾಧ್ಯಮ:*
ಹೊಸ ಜನಾಂಗಕ್ಕೆ ಹೊಸ ವಿಚಾರಗಳನ್ನೊಳಗೊಂಡ ಹಾಗೂ ಎಲ್ಲರನ್ನೂ ಒಳಗೊಳ್ಳುವ ರಂಗಾಯಣ ಆಗಬೇಕು. ವೈಚಾರಿಕೆಯಲ್ಲಿ ಸತ್ಯ ಹಾಗೂ ಬದುಕಿಗೆ ಹತ್ತಿರವಾದ ವಿಚಾರಗಳನ್ನು ರಂಗಾಯಣ ಮುಂದಕ್ಕೆ ತರಬೇಕು. ಶಬ್ದಗಳಲ್ಲಿ ಹೇಳಲಾಗದ್ದನ್ನು ಹಾವ ಭಾವಗಳ ಮೂಲಕ ಜನರಿಗೆ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸುವ ಮಾಧ್ಯಮವೇ ನಾಟಕಗಳು ಎಂದರು.
*ಅಭಿನಯ ನೈಜ್ಯವಾಗಿರಬೇಕು :*
ನಟ ರಮೇಶ್ ಅರವಿಂದ ಅವರು ತಮ್ಮ ಪಾತ್ರಗಳನ್ನು ಸರಳವಾಗಿ ನಿರ್ವಹಿಸುತ್ತಾರೆ. ಅವರು ತಮ್ಮ ಮುಗ್ಧತೆಯನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ. ನೈಜವಾಗಿ ಅಭಿನಯ ಮಾಡುವುದು ಬಹಳ ಕಷ್ಟ. ನಮ್ಮ ಬದುಕಿನಲ್ಲಿಯೇ ಕೆಲವು ನಿರ್ಬಂಧಗಳನ್ನು ಹಾಕಿಕೊಂಡಿರುತ್ತೇವೆ. ಚಿಕ್ಕವರಿದ್ದಾಗ ಇರುವ ಮುಗ್ದತೆ, ದೊಡ್ಡವರಾದ ಮೇಲೆ ಇರುವುದಿಲ್ಲ. ನಮ್ಮಲ್ಲಿ ಕೃತಕತೆ ಬಂದಾಗ ನೈಜತೆ ಮಾಯವಾಗುತ್ತದೆ. ಆತ್ಮಸಾಕ್ಷಿಯಿಂದ ಬದುಕುವುದು ಬಹಳ ಕಷ್ಟ. ಕೆಲವೇ ಸಾಧಕರಿಗೆ ಇದು ಸಾಧ್ಯವಾಗುತ್ತದೆ ಎಂದರು.
*ನಾಟಕಗಳಲ್ಲಿ ಸ್ಪಷ್ಡತೆ ಇರಬೇಕು :*
ಮನಸ್ಸು ಶುದ್ದ ಇದ್ದರೆ ಅದು ಮುಖದಲ್ಲಿ ಅಭಿವ್ಯಕ್ತವಾಗುತ್ತದೆ. ರಂಗಾಯಣದಲ್ಲಿ ಮಾನವೀಯತೆಯ ಮೇಲೆ ಪ್ರಯೋಗಗಳಾಗಬೇಕು. ಸಮಾಜದಲ್ಲಿರುವ ಲೋಪದೋಷಗಳನ್ನು, ಅಂಕುಡೊಂಕುಗಳನ್ನು ಸರಿಪಡಿಸುವ ಹಾಗೂ ವಾಸ್ತವಾಂಶದ ವಿಷಯ ವಸ್ತುಗಳಿರುವ ನಾಟಕಗಳು ಬರಬೇಕು. ನಾಟಕಗಳಲ್ಲಿ ನಿಷ್ಟುರತೆ ಹಾಗೂ ಸ್ಪಷ್ಡತೆ ಇರಬೇಕು. ನಮ್ಮಲ್ಲಿರುವುದು ನಮ್ಮ ನಾಗರಿಕತೆಯನ್ನು ಮತ್ತು ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪರಂಪರಾಗತ ಮೈಸೂರು ಇಂದು ಆಧುನಿಕ ಮೈಸೂರಾಗಿ ಅಭಿವೃದ್ಧಿ ಹೊಂದಿದೆ . ಮೈಸೂರಿಗೆ ತನ್ನದೇ ಆದ ಸ್ಥಾನ ಇದೆಯೊ ಅದೇ ರೀತಿ ಮೈಸೂರು ರಂಗಾಯಣಕ್ಕೂ ವಿಶೇಷ ಸ್ಥಾನ ಇದೆ. ಇಂತಹ ಸಂಸ್ಥೆಗಳಲ್ಲಿ ವೈಚಾರಿಕ ಸಂಘರ್ಷಗಳು ನಡೆಯುತ್ತಿವೆ. ಎಲ್ಲಿ ವೈಚಾರಿಕ ಸಂಘರ್ಷ ಇರುವುದಿಲ್ಲವೊ ಅಲ್ಲಿ ಹೊಸ ವಿಚಾರಗಳು ಹಾಗೂ ಜೀವಂತಿಕೆ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಚಲನಚಿತ್ರ ನಟ ರಮೇಶ್ ಅರವಿಂದ, ಸಂಸದ ಪ್ರತಾಪ ಸಿಂಹ ಮತ್ತಿತರು ಉಪಸ್ಥಿತರಿದ್ದರು.
[10/12, 8:30 PM] Cm Ps: *ಭವಿಷ್ಯವನ್ನು ಉತ್ತಮಗೊಳಿಸುವ ಹಸಿವಿರಲಿ: ಮುಖ್ಯಮಂತ್ರಿ ಬೊಮ್ಮಾಯಿ ಕರೆ*
ಮೈಸೂರು, ಡಿಸೆಂಬರ್ 10:
ಭವಿಷ್ಯವನ್ನು ಉತ್ತಮಗೊಳಿಸುವ ಹಸಿವಿರಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ಇನ್ಫೋಸಿಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಅನ್ ಲೀಶ್ ಇಂಡಿಯಾ 2022 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಪರ್ಕ ಕ್ರಾಂತಿಯಿಂದಾಗಿ ಸ್ಥಳೀಯವಾದುದು ಜಾಗತಿಕ, ಜಾಗತಿಕವಾದುದು ಸ್ಥಳೀಯವಾಗಿದೆ. ವಿಶ್ವದ ಭವಿಷ್ಯದ ಪ್ರಜೆಗಳು ಇವೆರಡರ ಭಾಗವಾಗಿ ಬದುಕಬೇಕಿದೆ ಎಂದರು. ನಮ್ಮ ವ್ಯಕ್ತಿತ್ವದ ಬೆಳವಣಿಗೆಗಾಗಿ ಹಸಿವನ್ನು ಉಳಿಸಿಕೊಳ್ಳಬೇಕು ಎಂದರು.
*ಪ್ರತಿ ಆವಿಷ್ಕಾರವೂ ಪರಿಸರವನ್ನು ರಕ್ಷಿಸಲಿ*
ಮಾನವ ಪ್ರಕೃತಿಗೆ ಸೇರಿದವನು. ಈ ಸುಂದರ ಪರಿಸರ ಬಿಟ್ಟುಹೋಗಿರುವ ನಮ್ಮ ಹಿರಿಯರಿಗೆ ನಾವು ಕೃತಜ್ಞರಾಗಿರಬೇಕು ಪ್ರಕೃತಿಯ ಹಾನಿ ಅತ್ಯಂತ ವೇಗವಾಗಿ ಆಗುತ್ತಿದೆ. 20 ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಪ್ರಮಾಣದಲ್ಲಿ ಹಾನಿ ಮುಂದುವರೆದರೆ. ಈ ವಿಶ್ವದಲ್ಲಿ ಬದುಕುವುದು ದುಸ್ತರವಾಗಲಿದೆ. ವಿಜ್ಞಾನ, ತಂತ್ರಜ್ಞಾನ ಯಾವುದೂ ನಮ್ಮನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ನಮಗೆ ದೊರಕಿರುವ ಸುಂದರ ಪ್ರಕೃತಿಯನ್ನು ಮುಂದಿನ ಜನಾಂಗಕ್ಕೂ ಬಿಟ್ಟು ಹೋಗಬೇಕೆಂಬ ಚಿಂತನೆ ಇರಬೇಕು. ಇಲ್ಲದಿದ್ದರೆ ನಾವು ಭವಿಷ್ಯದಿಂದಲೇ ಕದ್ದಂತಾಗುವುದು. ಪ್ರತಿ ಆವಿಷ್ಕಾರವೂ ಪರಿಸರ ಹಾಗೂ ಪ್ರಕೃತಿಯನ್ನು ರಕ್ಷಿಸುವ ಪ್ರಯತ್ನ ಮಾಡಬೇಕು ಎಂದರು.
*ನಮ್ಮ ಕ್ರಿಯೆ ಮತ್ತೊಬ್ಬರಿಗೆ ಸಂತೋಷ ನೀಡಬೇಕು*
ಇತರರು ನಿಮ್ಮ ಕ್ರಿಯೆಗಳಿಂದ ಸಂತೋಷಪಟ್ಟರೆ ಅದು ಉತ್ತಮ ಬದುಕು. ತೃಪ್ತಿ, ಸಂತಸ ಎನ್ನುವುದು ಶಾಶ್ವತ ಅಂಶಗಳಲ್ಲ. ಕೆಲವು ಘಳಿಗೆ ಗಳನ್ನು ಸಂತೋಷದಿಂದ ಕಳೆಯಬಹುದು.ಆದರೆ ನಾವು ಏನು ಬಿಟ್ಟುಹೋಗುತ್ತೇವೆ ಎನ್ನುವುದು ಮುಖ್ಯ ಎಂದರು.
*ಪರಮಹಂಸದಂತೆ ಎತ್ತರಕ್ಕೆ ಏರಿ*
ಭೂಮಿ ಎನ್ನುವುದು ಬಹಳ ಬೆಲೆ ಬಾಳುವ ವಸ್ತುವಾಗಿದೆ. ನಮಗೆ ಯಾವುದೂ ಸೇರುವುದಿಲ್ಲ ಎಂದು ಅರಿತಾಗಲೇ ಅಮೃತ ಘಳಿಗೆಯಾಗುತ್ತದೆ. ಸರಸ್ವತಿ ದೇವಿಯ ಪರಮಹಂಸ ಪಕ್ಷಿಯಂತೆ ಅತ್ಯಂತ ಎತ್ತರಕ್ಕೆ ಏರಬೇಕು. ಆ ಎತ್ತರಕ್ಕೆ ಜ್ಞಾನ ಮಾತ್ರ ಕೊಂಡೊಯ್ಯಬಹುದು. ಈ ಜ್ಞಾನದಿಂದ ವಿಶ್ವವನ್ನು ಉತ್ತಮಗೊಳಿಸಿ ಎಂದರು.
ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ದಂಪತಿಗಳು, ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ ಮತ್ತಿತರರು ಉಪಸ್ಥಿತರಿದ್ದರು.
[10/12, 8:47 PM] Cm Ps: *ಶಿರಾಡಿ ಘಾಟ್ ರಸ್ತೆ: ಈ ವಾರದಲ್ಲಿ ಸಮಗ್ರ ಪರಿಹಾರ *ಸಿಎಂ ಬೊಮ್ಮಾಯಿ*
ಮಂಗಳೂರು, ಡಿಸೆಂಬರ್ 10: ಶಿರಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಈ ವಾರದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಸಮಗ್ರ ಪರಿಹಾರ ಒದಗಿಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಾ: ಪ್ರಭಾಕರ್ ಕಲ್ಲಡ್ಕ ಅವರ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಡಾಂಬರೀಕರಣ, ವೈಟ್ ಟಾಪಿಂಗ್ ಹಾಗೂ ಸುರಂಗ ಮಾಡುವ ಬಗ್ಗೆ ಸಮಗ್ರವಾಗಿ ಈ ವಾರದಲ್ಲಿ ಚರ್ಚಿಸಿ ಪರಿಹಾರ ಒದಗಿಸಿಕೊಡಲಾಗುವುದು ಎಂದರು.
*ಗಡಿ ವಿವಾದ* *ಕರ್ನಾಟಕದ ಹಿತರಕ್ಷಣೆಗೆ ಬದ್ಧ*
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮಹಾರಾಷ್ಟ್ರಕ್ಕೆ ರಾಜ್ಯದ ಬಸ್ಸುಗಳು ಓಡಾಡುತ್ತಿವೆ. ಇನ್ನಷ್ಟು ಕ್ರಮ ವಹಿಸಲು ಮಹಾರಾಷ್ಟ್ರ ಸರ್ಕಾರ ಕ್ಕೆ ಸೂಚನೆ ನೀಡಲಾಗಿದೆ. ಡಿ.14 ರಂದು ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಸಿಎಂಗಳು ಭಾಗವಹಿಸಲಿದ್ದೇವೆ ಎಂದರು. ಸೋಮವಾರದಂದು ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಕರ್ನಾಟಕದ ಹಿತರಕ್ಷಣೆ ಹಾಗೂ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತರಕ್ಷಣೆಯನ್ನೂ ಮಾಡುತ್ತೇವೆ ಎಂದರು.
*ಅವಕಾಶವಿಲ್ಲ*
ಚಳಿಗಾಲದ ಅಧಿವೇಶನದಲ್ಲಿ ಎಂ.ಇ. ಎಸ್. ಸಮಾವೇಶ ಮಾಡಲು ಪ್ರತಿ ಬಾರಿ ಪ್ರಯತ್ನಿಸುತ್ತಾರೆ. ಆದರೆ ಅವಕಾಶ ಕೊಟ್ಟಿಲ್ಲ ಎಂದರು.
*ಭಯೋತ್ಪಾದನೆ ನಿಗ್ರಹಕ್ಕೆ ನಿರಂತರ ಕ್ರಮ*
ರಾಜ್ಯ ದಲ್ಲಿ 15 ಸ್ಲೀಪರ್ ಸೆಲ್ ಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ. ನಿರಂತರವಾಗಿ ಮಾಡುವ ಕೆಲಸ ಇದಾಗಿದೆ. ಅವರ ಸಂಪರ್ಕ, ಹಣಕಾಸಿನ ವ್ಯವಸ್ಥೆ ಬಗ್ಗೆ ಕಾಲಕಾಲಕ್ಕೆ ನಿಗಾ ವಹಿಸಿದೆ. ನಮ್ಮ ಸಂಸ್ಥೆ ಗಳು ಹಾಗೂ ಎನ್.ಐ.ಎ ಒಟ್ಟಿಗೆ ಕೆಲಸ ಮಾಡುತ್ತಿದೆ ಎಂದರು.
[10/12, 9:41 PM] Cm Ps: *ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಕಲಾ ಕೌಶಲ್ಯಕ್ಕೆ ಬೆರಗಾದ ಮುಖ್ಯಮಂತ್ರಿಗಳು*
ಮಂಗಳೂರು, ಡಿ.10(ಕ.ವಾ):- ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ನ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಡಿ.10ರ ಶನಿವಾರ ಉದ್ಘಾಟಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಕೌಶಲ್ಯವನ್ನು ಕಂಡು ಬೆರಗಾದರು.
ಕಂದಾಯ ಸಚಿವರಾದ ಆರ್. ಅಶೋಕ್, ಕನ್ನಡ, ಸಂಸ್ಕೃತಿ ಮತ್ತು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಚಿವರಾದ ಮುನಿರತ್ನ, ಶಾಸಕರಾದ ರಾಜೇಶ್ ನಾಯ್ಕ್, ಶ್ರೀ ರಾಮ ವಿದ್ಯಾಕೇಂದ್ರದ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
Post a Comment