KPCC ಕಾರ್ಯ ಕ್ರಮ, ಕಿಡಿನುಡಿ

[05/12, 10:57 PM] Kpcc official: ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಬಿಜೆಪಿ ಸರ್ಕಾರ ಕೋಮುವಾದದಿಂದ ಜನರನ್ನು ಮರಳು ಮಾಡುತ್ತೇವೆ ಎಂದು ಭ್ರಮಿಸಿಕೊಂಡು ಕಾಲ ತಳ್ಳಿತ್ತು.

ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿ ಮಾಡುತ್ತೇವೆಂದು ಗುದ್ದಲಿ ಹಿಡಿದು ಹೊರಟರೆ ನಂಬಲು ಜನ ಮೂರ್ಖರಲ್ಲ.

ಬಿಜೆಪಿಗೆ ಈಗ ಜನಾಕ್ರೋಶದ ದರ್ಶನ ಶುರುವಾಗಿದೆ, ಮುಂದೆ ಜನಾಕ್ರೋಶದ ಸ್ಪೋಟ ಎದುರಿಸಲಿದೆ.
[06/12, 11:59 AM] Kpcc official: ಗುಜರಾತಿನಲ್ಲಿ ಸಂಪೂರ್ಣ ಮದ್ಯ ನಿಷೇಧವಿದೆ (ಕಾಗದದ ಮೇಲೆ ಮಾತ್ರ!)
ಆದರೆ
ಚುನಾವಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ತನ್ನದೇ ಕಾರಿನಲ್ಲಿ ಮದ್ಯ ತುಂಬಿಕೊಂಡು ರಾಜಾರೋಷವಾಗಿ ಮತದಾರರಿಗೆ ಹಂಚಲು ತೆರಳಿದ್ದಾನೆ.

ಮದ್ಯ ನಿಷೇಧವಿದ್ದರೂ ಆತನಿಗೆ ಮದ್ಯ ಸಿಕ್ಕಿದ್ದು ಹೇಗೆ? ಚುನಾವಣೆಗಾಗಿ ವಿಶೇಷ ಮದ್ಯ ವ್ಯವಸ್ಥೆ ಮಾಡಿದ್ದಾರೆಯೇ ಮೋದಿಜಿ?
[06/12, 11:59 AM] Kpcc official: ಈಗಾಗಲೇ ಬಿಜೆಪಿಯ ಅನೇಕರು ಜಾನಾಕ್ರೋಶದ ದರ್ಶನ ಪಡೆದಿದ್ದಾರೆ, ಈಗ ಶಾಸಕ ರಾಮಣ್ಣ ಲಮಾಣಿ ಸರದಿ.

ಭ್ರಷ್ಟ ಹಾಗೂ ನಿಷ್ಕ್ರಿಯ @BJP4Karnataka ಸರ್ಕಾರದಿಂದಾಗಿ ಬಿಜೆಪಿಗರಿಗೆ ಜನ ಓಡಾಡಲು ಬಿಡದಂತ ಸ್ಥಿತಿ ಸದ್ಯದಲ್ಲೇ ಬರಲಿದೆ.

@BSBommai ಅವರೇ, ನಿಮ್ಮ ದುರಾಡಳಿತಕ್ಕೆ ಜನರ ಈ ಆಕ್ರೋಶವೇ ಕನ್ನಡಿಯಾಗಿದೆ, ಒಮ್ಮೆ ಮುಖ ನೋಡಿಕೊಳ್ಳಿ.
[06/12, 2:55 PM] Kpcc official: *ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರ ಜಂಟಿ ಪಟ್ರಿಕಾಗೋಷ್ಠಿ ಮುಖ್ಯಾಂಶಗಳು*

*ಎಂ. ಲಕ್ಷ್ಮಣ್:*

ಬಿಜೆಪಿ ಸೇರಲು ಮುಂದಾಗಿರುವ ರೌಡಿ ಶೀಟರ್ ಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕಳೆದ ವಾರ ಹೇಳಿದ್ದೆವು. ಅದರಂತೆ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ.

2018ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆಗಳ 6620 ರೌಡಿಗಳಿದ್ದಾರೆ. ಇನ್ನು ಆಕ್ಟಿವ್ ರೌಡಿ ಸಂಖ್ಯೆ ಬೆಂಗಳೂರಿನಲ್ಲಿ 1 ಸಾವಿರ ರಾಜ್ಯದಲ್ಲಿ 8 ಸಾವಿರ ಇದೆ.

ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯನರು ಪಟ್ಟಿ ಮಾಡಿದ್ದಾರೆ

36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ 9 ಇತರರು. ವಿಲ್ಸನ್ ಗಾರ್ಡನ್ ನಾಗ ಹಾಗೂ 6 ಇತರರು, ನಾಗಮಂಗಲದ ಫೈಟರ್ ರವಿ ಹಾಗೂ 5 ಇತರರು, ಬೆತ್ತನಗೆರೆ ಶಂಕರ ಹಾಗೂ 8 ಇತರರು, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ), ಈತ ಹಾಲಿ ಶಾಸಕರು, ಇನ್ನು ಪ್ರತಾಪ್ ಸಿಂಹ, ಇವರನ್ನು ಸುಮಲತಾ ಅವರು ಪೇಟೆ ರೌಡಿ ಎಂದು ಕರೆದಿದ್ದಾರೆ. ಕೊನೆಯದಾಗಿ ಕಿರಣ್ ಗೌಡ, ಈತ ಯುವ ದಸರಾಗೆ ಅಧ್ಯಕ್ಷರಾಗಿದ್ದು, ಪ್ರತಾಪ್ ಸಿಂಹ ಅವರ ಹಿಂಬಾಲಕ. ಮುಂದಿನ ಹಂತದಲ್ಲಿ ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ.

ಬಿಜೆಪಿ ಸ್ನೇಹಿತರ ಬಳಿ ಈ ಬಗ್ಗೆ ಚರ್ಚೆ ಮಾಡಿದಾಗ, ನಮಗೆ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಕಡೆಯಿಂದ ನಿರ್ದೇಶನವಿದೆ. ಈ ವಿಚಾರವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಯೇಗ ಮಾಡಿದ್ದಾರೆ. ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಹಗಿದ್ದಾವೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಹಾಗೂ ಅಶೋಕ್ ಅವರು ಹೇಳಿದ್ದು, ಇದು ಕೇವಲ ಗಮನ ತಣ್ಣಗೆ ಮಾಡುವ ಪ್ರಯತ್ನ. ಸಿ.ಟಿ ರವಿ ಹತಾಶರಾಗಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೌಡಿಗಳ ಪೈಕಿ 10 ಮಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್, 26 ಜನರಿಗೆ ಬಿಬಿಎಂಪಿ ಚುನಾವಣೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ರೌಡಿಗಳಿಂದ ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿ ರೌಡಿ ಮೋರ್ಚಾದ ಘೋಷವಾಕ್ಯವಾಗಿದೆ.

ಇವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಕಟೀಲ್ ಅವರು ಹೇಳಿರುವುದು ಸುಳ್ಳು. ರೌಡಿಶೀಟರ್ ಗಳೆಲ್ಲಾ ರೌಡಿಗಳಲ್ಲ ಎಂದು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರೌಡಿ ಎಂದರೆ ಕೊಲೆಗಡುಕರು, ರೇಪಾ ಮಾಡಲು ಸಂಚು ರೂಪಿಸುವವರು, ಡಕಾಯತಿ, ಹಫ್ತಾ ವಸೂಲಿ, ಬೆದರಿಸುವವರಾಗಿದ್ದಾರೆ. ಬಿಜೆಪಿ ಸೇರುವ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಹೊರತೆಗೆಯಲು ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ಮೌಕಿಕ ಆದೇಶ ನೀಡಲಾಗಿದೆ.

ಸಿ.ಟಿ ರವಿ ಅವರು ನನ್ನ ಮೇಲೂ ರೌಡಿ ಶೀಟರ್ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಸಿ.ಟಿ ರವಿ ಅವರ ಮೇಲೆ 8 ಜೂನ್ 2012ರಲ್ಲಿ ಐಟಿ ರೈಡ್ ಆಗಿತ್ತು. ಆರ್ ಟಿಐ ಕಾರ್ಯಕರ್ತ ಎ.ಸಿ ಕುಮಾರ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿ, 2004ರಲ್ಲಿ ಚುನಾವಣಾ ಆಯೋಗಕ್ಕೆ ರವಿ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಟ್ಟು ಆಸ್ತಿ 10.1 ಲಕ್ಷ ಹಾಗೂ 1.2 ಲಕ್ಷ ವಾರ್ಷಿಕ ಆದಾಯ ಎಂದು ನಮೂದಿಸಲಾಗಿತ್ತು. ಆದರೆ 2012ರ ಅಫಿಡವಿಟ್ ನಲ್ಲಿ ಇವರ ಆದಾಯ 50 ಕೋಟಿ ಘೋಷಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಗ ಐಟಿ ದಾಳಿ ಆಗಿತ್ತು. ಈಗ ನಮ್ಮ ಪ್ರಕಾರ ಸಿ.ಟಿ ರವಿ ಅವರು ಬೇನಾಮಿ ಹೇಸರಲ್ಲಿ 3 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಇವರು ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುತ್ತಾರೆಶಿವಕುಮಾರ್ ಅವರು ಉದ್ಯಮಿಗಳು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರು ತಮ್ಮ ಆದಾಯ ಎಲ್ಲವನ್ನು ಐಟಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುವ ಸೈತಾನ್ ರವಿ ಅವರೇ, ನಿಮ್ಮ ಆದಾಯದ ಮೂಲವೇನು? 

ಇವರು ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಎಂದು ಕರೆಯತ್ತಿದ್ದೀರಿ. ಇದಕ್ಕೆ ಕಾಂಗ್ರೆಸ್ ಪಕ್ಷದವರು ಬೇಸರ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಎಲ್ಲ ವರ್ಗದ ಜನ ಇಷ್ಟಪಡುವ ವ್ಯಕ್ತಿ. ನೀವು ಯಾವುದೇ ಹಂತಕ್ಕೆ ಬೇಕಾದರೂ ಇಳಿದು ಮಾತನಾಡಿ. ನೀವು ರಾಜ್ಯದಲ್ಲಿ ಕೋಮು ಬೆಂಕಿ ಹಚ್ಚುವುದರಲ್ಲಿ ಮೊದಲಿಗರು. ಬೊಮ್ಮಾಯಿ ಅವರು ಕಳೆದ 16 ತಿಂಗಳಿಂದ 9 ಖಾತೆ ಖಾಲಿ ಇದ್ದು, ಇದನ್ನು ನಿಮ್ಮ ಬಳಿ ಇಟ್ಟುಕೊಂಡು ಲೂಟಿ ಮಾಡುತ್ತಿದ್ದೀರಿ ನಿಮಗೆ ನಾಚಿಕೆ ಆಗಬೇಕು.

ಇನ್ನು ಇಂದು ಪತ್ರಿಕೆಗಳಲ್ಲಿ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಎಂದು ಜಾಹೀರಾತು ನೀಡಿದ್ದಾರೆ. ಇದರಲ್ಲಿ ಎಸ್ ಸಿಪಿ ಹಾಗೂ ಟಿಎಸ್ ಪಿ ಯೋಜನೆಗೆ 29 ಸಾವಿರ ಕೋಟಿ ನೀಡಿರುವುದಾಗಿ ಜಾಹೀರಾತಿನಲ್ಲಿ ಹೇಳಿದ್ದೀರಿ.

2018ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆಗಿನ ರಾಜ್ಯದ ಬಜೆಟ್ ಮೊತ್ತ 2.07 ಲಕ್ಷ ಕೋಟಿ ಆಗಿತ್ತು. ಆಗ ಪರಿಶಿಷ್ಟರ ಕಲ್ಯಾಣಕ್ಕಾಗಿ ಈ ಕಾಯ್ದೆ ಪ್ರಕಾರ 33 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈಗ 2022ರಲ್ಲಿ ನಿಮ್ಮ ಬಜೆಟ್ ಮೊತ್ತ 2.72 ಲಕ್ಷ ಕೋಟಿ, ನೀವು ಪರಿಶಿಷ್ಟರಿಗೆ ನೀಡಿರುವ ಅನುದಾನ 29 ಸಾವಿರ ಕೋಟಿ. ಆಮೂಲಕ ರಾಜ್ಯ ಸರ್ಕಾರ 12 ಸಾವಿರ ಕೋಟಿ ಅನುದಾನ ಕಡಿಮೆ ಮಾಡಿದ್ದೀರಿ. ನಿಮಗೆ ಯೋಗ್ಯತೆ, ಧಮ್ಮು ತಾಕತ್ತು ಇದ್ದರೆ ಈ ಅನುದಾನದಲ್ಲಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ಹೇಳಬೇಕು. ಈ ಆರ್ಥಿಕ ವರ್ಷದಲ್ಲಿ 9 ತಿಂಗಳು ಕಳೆದಿದ್ದು ಕೇವಲ 3 ತಿಗಳು ಬಾಕಿ ಇದೆ.

ರಾಜ್ಯ ಸರ್ಕಾರ ಎಸ್ ಸಿಎಸ್ ಪಿಗೆ 20,843 ಕೋಟಿ, ಖರ್ಚು ಮಾಡಿರುವುದು 3102 ಕೋಟಿ. ಅಂದರೆ ಶೇ.15ರಷ್ಟು ಖರ್ಚು ಮಾಡಿದ್ದಾರೆ. ಎಸ್ ಟಿಪಿಗೆ 8322 ಕೋಟಿ ಖರ್ಚಾಗಿರುವುದು 1500 ಕೋಟಿ ಮಾತ್ರ. ಅಂದರೆ ಶೇ.14.5ರಷ್ಟು ಮಾತ್ರ. ಇನ್ನು ಇಲಾಖೆವಾರು ನೋಡುವುದಾದರೆ ಉನ್ನತ ಶಿಕ್ಷಣ ಇಲಾಖೆಗೆ ನೀಡಿದ್ದು 282 ಕೋಟಿ ಆದರೆ ಖರ್ಚು ಮಾಡಿರುವುದು 6.34 ಕೋಟಿ ಮಾತ್ರ. ಅದರೆ ಶೇ. 2.21ರಷ್ಟು ಮಾತ್ರ. ಇನ್ನು ಕೌಶಲ್ಯಭಿವೃದ್ಧಿ ಇಲಾಖೆಗೆ ನೀಡಿದ್ದು 147 ಕೋಟಿ, ಖರ್ಚು ಮಾಡಿದ್ದು 6.53 ಕೋಟಿ. ಆಮೂಲಕ ಖರ್ಚಾಗಿದ್ದು ಶೇ.4.65 ಮಾತ್ರ. ಪ್ರಾಥಮಿಕ ಹಾಗೂ ಮಧ್ಯಮ ಶಿಕ್ಷಣ ಇಲಾಖೆಗೆ ನೀಡಿದ್ದು 984 ಕೋಟಿ, ಖರ್ಚು ಮಾಡಿದ್ದು 159 ಕೋಟಿ. ಆಮೂಲಕ ಖರ್ಚಾಗಿದ್ದು ಶೇ.16 ಮಾತ್ರ. ಈ ವರ್ಷ ಸರ್ಕಾರ ಘೋಷಿಸಿರುವ 29 ಸಾವಿರ ಕೋಟಿ ಅನುದಾನದಲ್ಲಿ ಇದುವರೆಗೂ ಶೇ.70 ರಷ್ಟು (21 ಸಾವಿರ ಕೋಟಿ) ಖರ್ಚಾಗಬೇಕಿತ್ತು. ಆದರೆ ಇದುವರೆಗೂ ಖರ್ಚಾಗಿರುವುದು ಕೇವಲ ಶೇ.15ರಷ್ಟು (4302 ಕೋಟಿ) ಮಾತ್ರ ಖರ್ಚು ಮಾಡಿದ್ದೀರಿ. ನಿಮ್ಮ ಸಾಧನೆ ಏನು?

ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದರೆ ಅವರ ಅಭಿವೃದ್ಧಿ ಆಗುತ್ತದೆಯೇ? 2 ತಿಂಗಳ ಹಿಂದೆ 11 ಸಾವಿರ ಪೌರ ಕಾರ್ಮಿಕರ ಹುದ್ದೆ ಶಾಶ್ವತ ಮಾಡುವುದಾಗಿ ಆದೇಶ ನೀಡಿದ್ದಿರಿ ಈಗ ಅದು ಏನಾಯ್ತು? ಈಗ ಅವರು 30ರಂದು ಮತ್ತೆ ಪ್ರತಿಭಟನೆ ಮಾಡುತ್ತಿದ್ದಾರೆ. ನೀವು ಕೇವಲ ಪ್ರಚಾರಕ್ಕೆ ಘೋಷಣೆಗಳನ್ನು ಮಾಡುತ್ತೀರಿ. ಚುನಾವಣೆಗೆ ನಿಮ್ಮ ಬಿಜೆಪಿ ಪಡೆಯೇ ರಾಜ್ಯಕ್ಕೆ ಬರುತ್ತದೆಯಂತೆ. ಬರಲಿ, ನಾವು ನಿಮ್ಮ ಬಂಡವಾಳವನ್ನು ಮನೆ ಮನೆಗೂ ತಿಳಿಸುತ್ತೇವೆ.


*ರಮೇಶ್ ಬಾಬು:*

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪಧವಿಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ 14 ಪರಿಷತ್ ಸದಸ್ಯರು, ಆಗಿನ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿಸಿಕೊಂಡು ಸತತವಾಗಿ 2 ದಿನಗಳ ಕಾಲ 7 ಗಂಟೆ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಸಭೆ ಮಾಡಿದ್ದರು. ಆ ಮೂಲಕ ಪ್ರಾಥಮಿಕ, ಪ್ರೌಢ, ಪಿಯು ಉಪನ್ಯಾಸಕರು, ಪದವಿ ಕಾಲೇಜು ಸಮಸ್ಯೆ, ಖಾಸಗಿ ಶಾಲೆಗಳ ಅನುದಾನ, ವೇತನ, ನೇಮಕಾತಿ, ಅಥಿತಿ ಉಪನ್ಯಾಸಕರ ಸಮಸ್ಯೆ ಸೇರಿದಂತೆ 36 ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದರು. ಈ ಸಭೆಯನ್ನು ಪಕ್ಷಾತೀತವಾಗಿ ಎಲ್ಲ ಪರಿಷತ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಬದ್ಧತೆ ಇಲ್ಲವಾಗಿದೆ. ನಿತ್ಯ ಯೂಟರ್ನ್ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ. ಸಚಿವ ಬಿ.ಸಿ ನಾಗೇಶ ಅವರು ತಮ್ಮ ಹಿಡನ್ ಅಜೆಂಡಾಕ್ಕಾಗಿ ರಾಜ್ಯ ಶಿಕ್ಷಣ ವ್ಯವಸ್ಥೆಯನ್ನು ಮಾಲೀನ್ಯ ಮಾಡಬಾರದು. 

ಶಿಕ್ಷಣ ಹಕ್ಕು (ಆರ್ ಟಿಇ) ಮೂಲಕ ರಾಜ್ಯದಲ್ಲಿ ಪ್ರತಿ ವರ್ಷ 2 ಲಕ್ಷ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಆರ್ ಟಿಇ ಮೂಲಕ ರಾಜ್ಯದಲ್ಲಿ ಕೇವಲ 1600 ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದಾರೆ. ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇವರು ಬಂಡವಾಳಶಾಹಿ ಹಾಗೂ ಖಾಸಗಿಯವ ಪರವಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಶಿಕ್ಷಕರು, ವರ್ಗಾವಣೆ, ಸಮವಸ್ತ್ರ, ವಿದ್ಯಾರ್ಥಿ ವೇತನ, ಬಿಸಿಯೂಟ ಸೇರಿದಂತೆ ಯಾವುದೇ ವಿಚಾರದಲ್ಲಿ ಸರ್ಕಾರದ ಗುರಿ ಮುಟ್ಟಿಲ್ಲ. ರಾಜ್ಯದಲ್ಲಿ 1-10 ನೇ ತರಗತಿ ವರೆಗಿನ ಎಲ್ಲ ಶಾಲೆಗಳಲ್ಲಿ 1 ಕೋಟಿ ಮಕ್ಕಳು ಓದುತ್ತಿದ್ದಾರೆ. 13 ಲಕ್ಷ ಮಕ್ಕಳು ಪಿಯುಸಿ ಓದುತ್ತಿದ್ದರೆ. ಆದರೆ ಈಗ ನಮ್ಮ ಶೈಕ್ಷಣಿಕ ವೇಳಾಪಟ್ಟಿ ಸಮರ್ಪಕವಾಗಿಲ್ಲ. ಶೈಕ್ಷಣಿಕ ವರ್ಷ ಜೂನ್ ತಿಂಗಳಲ್ಲಿ ಆರಂಭವಾಗುತ್ತದೆಯಾದರೂ ಶಿಕ್ಷಣ ಸಚಿವರು ನವೆಂಬರ್ ತಿಂಗಳಲ್ಲಿ 1ನೇ ತರಗತಿ ಸೇರುವ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ಮಾಡುತ್ತಾರೆ. ಪೋಷಕರಿಂದ ವಿರೋಧ ವ್ಯಕ್ತವಾದ ನಂತರ ಆದೇಶ ಹಿಂಪೆಡಿದು, ಇದನ್ನು ಮುಂದಿನ ವರ್ಷಕ್ಕೆ ಅನ್ವಯ ಎಂದು ತಿಳಿಸಿದ್ದಾರೆ.

ನಾಗೇಶ್ ಅವರು 2021ರ ಆಗಸ್ಟ್ ನಲ್ಲಿ ಶಿಕ್ಷಣ ಸಚಿವರಾಗಿದ್ದು, ಅವತ್ತಿನಿಂದ ಇವತ್ತಿನವರೆಗೂ ಮಧ್ಯಾಹ್ನ ಬಿಸಿಯೂಟ, ಉಚಿತ ಸಾಕ್ಸ್ ಹಾಗೂ ಶೂ, ಸೈಕಲ್ ವಿತರಣೆ, 1200 ಕೋಟಿ ವೆಚ್ಚದಲ್ಲಿ ವಿವೇಕಾನಂದರ ಹೆಸರಲ್ಲಿ 7 ಸಾವಿರ ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಎಲ್ಲ ವಿಚಾರದಲ್ಲೂ ಯೂಟರ್ನ್ ಮಾಡಿದೆ. ಕಾರಣ ರಾಜ್ಯ ಸರ್ಕಾರ ದಿವಾಳಿ ಹಂಚಿನಲ್ಲಿದೆ. ಪ್ರಾಥಮಿಕ ಶಾಲೆ, ಪಿಯುಸಿ ಅತಿಥಿ ಶಿಕ್ಷಕರಿಗೆ ವೇತನ ನೀಡಲು ಹಣವಿಲ್ಲ. ಶಾಲಾ ಕಾಲೇಜುಗಳ ರಿಪೇರಿಗಾಗಿ ವಾರ್ಷಿಕವಾಗಿ 600 ಕೋಟಿ ನೀಡುತ್ತಾರೆ. ಈ ಹಣ ಎಲ್ಲಿ ಹೋಗುತ್ತಿದೆ ಎಂದು ಯಾವುದೇ ಮಾಹಿತಿ ಇಲ್ಲ. 16 ಸಾವಿರ ಶಾಲೆ ಉನ್ನತೀಕರಣ ಮಾಡುವುದಾಗಿ ಹೇಳಿದ್ದರು. ಈ ಬಗ್ಗೆ ಜಾಹೀರಾತು ನೀಡಿದ್ದರು. ನಂತರ ಈ ಬಗ್ಗೆ ಯಾವುದೇ ಪ್ರಗತಿ ಇಲ್ಲ. ಅವರು ತಮ್ಮ ಸಂಘಪರಿವಾರದ ಅಜೆಂಡಾದಂತೆ  ಪಠ್ಯ ಪುಸ್ತಕ ಪರಿಷ್ಕರಣೆ, ಕೇಸರಿ ಬಣ್ಣ ಬಳಿಯುವುದಾಗಿ, 1 ಜೊತೆ ಸಾಕ್ಸ್ ನೀಡುವುದು ಸೇರಿದಂತೆ ಗೊಂದಲ ಸೃಷ್ಟಿಸುವ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಉತ್ತಮ ಶಿಕ್ಷಣ ನೀಡುವ ವಾತಾವರಣವನ್ನು ಸೃಷ್ಟಿ ಮಾಡಲೇ ಇಲ್ಲ. ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ವೈಫಲ್ಯ ಇರುವ ಶಿಕ್ಷಣ ಸಚಿವರು ಎಂದೂ ಕಂಡಿರಲಿಲ್ಲ. ನಿಮ್ಮ ಅಜೆಂಡಾ ಪಕ್ಕಕ್ಕಿಟ್ಟು ಮಕ್ಕಳ ಹಿಸಾಸಕ್ತಿಯಿಂದ ಅವರ ಖಾತೆ ಬದಲಾವಣೆ ಮಾಡಿ ಅಥವಾ ಸಂಪುಟದಿಂದ ಕೈಬಿಡಿ. ಅವರ ತೆವಲಿಗೆ ಮಕ್ಕಳ ಭವಿಷ್ಯದ ಜತೆ ಆಟವಾಡುವುದು ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ. ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ವ್ಯವಸ್ಥೆ ಮಾಡಿರುವುದಾಗಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮಾಹಿತಿ ನೀಡಿತ್ತಾರೆ. ಆದರೆ ಮಕ್ಕಳ ಪೋಷಕರಿಂದ 100 ರೂ ಶುಲ್ಕ ವಸೂಲಿಗೆ ಮುಂದಾಗುತ್ತಾರೆ. ನಂತರ ಇದನ್ನು ಹಿಂಪಡೆದರು. ನಾಗೇಶ್ ಅವರು ಸಚಿವರಾದ ನಂತರ ಇಂತಹ ಅನೇಕ ಯೂಟರ್ನ್ ನಿರ್ಧಾರ ಮಾಡಿದ್ದಾರೆ. ಸಚಿವ ನಾಗೇಶ್ ಅವರು ಮಾಡುತ್ತಿರುವ ಗೊಂದಲ ಹಾಗೂ ತಪ್ಪಿನಿಂದ ಶಿಕ್ಷಣ ಕ್ಷೇತ್ರ ಮುಂದಿನ ಹತ್ತಾರು ವರ್ಷ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಸಚಿವರ ಬದಲಾವಣೆ ಮಾಡಿ, ಶಿಕ್ಷಕರ ಪದೋನ್ನತಿ, ವರ್ಗಾವಣೆ ನೀತಿ ಬದಲಾವಣೆ ಮಾಡಬೇಕು. ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಬೇಕು. ಅನುಭವ ಇರುವ ಪರಿಪಕ್ವ ಸಚಿವರನ್ನು ನೇಮಿಸಬೇಕು ಎಂದು ಒಥ್ತಾಯಿಸುತ್ತೇವೆ.

*ಪ್ರಶ್ನೋತ್ತರ*

ಮೈಸೂರಿನಲ್ಲಿ ಬೆತ್ತನಗೆರೆ ಶಂಕರ್ ಸೇರ್ಪಡೆ ಆಗಿ ಆರು ತಿಂಗಳಾಗಿದೆ ಎಂದು ಕೇಳಿದ ಪ್ರಶ್ನೆಗೆ, ‘ಹೆಸರು ಬದಲಾಯಿಸಿಕೊಂಡು ವೇಷ ಬದಲಿಸಿಕೊಂಡು ಪಕ್ಷ ಸೇರ್ಪಡೆಯಾದರೆ ಪೊಲೀಸರಿಗೆ ಗೊತ್ತಾಗಿಲ್ಲ. ಇನ್ನು ನಮಗೆ ಹೇಗೆ ಗೊತ್ತಾಗುತ್ತದೆ. ಇನ್ನು ಪ್ರತಾಪ್ ಸಿಂಹ ಅವರಿಗೆ ಗೊತ್ತಿದ್ದರೂ ಕುಂಡಲಿ ನೋಡಿಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವೇ ಎಂದು ಹೇಳುತ್ತಾರೆ. ಆರ್ ಎಸ್ಎಸ್ ನಿರ್ದೇಶನದ ಮೇರೆಗೆ ರೌಡಿಗಳನ್ನು ಪಕ್ಷಕ್ಕೇ ಸೇರಿಸಿಕೊಳ್ಳುತ್ತಿದ್ದಾರೆ’  ಎಂದು ಹೇಳಿದರು. 

ಸಿಟಿ ರವಿ ಅವರದು 3000 ಕೋಟಿ ಎಂದು ಹೇಳಿದ ಬಗ್ಗೆ ಯಾವುದಾದರೂ ದಾಖಲೆ ಇದೆಯಾ ಎಂದು ಕೇಳಿದಾಗ, ‘ಅವರು ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ದಾಖಲೆ ಕಲೆಹಾಕುತ್ತಿದ್ದೇವೆ. ನಮ್ಮ ಬಳಿ 800 ಕೋಟಿಯಷ್ಟು ಬೇನಾಮಿ ಆಸ್ತಿ ದಾಖಲೆ ಇವೆ. ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಅವರು ಕ್ರಿಮಿನಲ್ ವ್ಯಕ್ತಿಯಾಗಿದ್ದಾರೆ. ಇವರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಬೈಯದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಶ್ರೀರಾಮುಲು ಅವರ ಕುರಿತು ದಾಖಲೆ ಕಲೆಹಾಕುತ್ತಿದ್ದೇವೆ.

*ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಸಂಯೋಜಕರಾದ ಜಿ.ಸಿ ರಾಜು ಹಾಗೂ ಕಾನೂನು ವಿಭಾಗದ ಉಪಾಧ್ಯಕ್ಷರಾದ ದಿವಾಕರ್ ಅವರು ಉಪಸ್ಥಿತರಿದ್ದರು*
[06/12, 8:31 PM] Kpcc official: ಬಿಜೆಪಿಯ ಜನಸ್ಪಂದನ ಯಾತ್ರೆಯ ರಹಸ್ಯವನ್ನು ಯತ್ನಾಳರು ಹೇಳಿದ್ದಾರೆ ಅಲ್ಲವೇ @BSBommai ಅವರೇ.

@BJP4Karnataka ₹500 ಸಂಬಳ ಕೊಟ್ಟು ಜನ ಸೇರಿಸುವ ಸಂಗತಿ ಬಟಾಬಯಲು!

ಈಗ ಹಣ ಕೊಟ್ಟರೂ ಜನ ಬರಲು ಒಪ್ಪದ ಕಾರಣಕ್ಕೆ ಬಿಜೆಪಿ ಕಾರ್ಯಕ್ರಮಗಳಲ್ಲಿ ಖಾಲಿ ಕುರ್ಚಿಗಳು ರಾರಾಜಿಸುತ್ತವೆ!
ಆ ಮಟ್ಟಿಗೆ ಜನಾಕ್ರೋಶ ಎದುರಿಸುತ್ತಿದೆ ಬಿಜೆಪಿ.
[06/12, 8:31 PM] Kpcc official: ಸರ್ಕಾರಿ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ @ikseshwarappa ಅವರ ಪುತ್ರನ ಫೋಟೋ!

ಇದು ಕುಟುಂಬ ರಾಜಕೀಯ ಹಾಗೂ ಶಿಷ್ಟಾಚಾರ ಉಲ್ಲಂಘನೆಯ ಪರಿಧಿಯೊಳಗೆ ಬರುವುದಿಲ್ಲವೇ @BJP4Karnataka?
ಸ್ವತಃ ಬಿಜೆಪಿ ಶಾಸಕರೇ ಪ್ರಶ್ನಿಸುತ್ತಿದ್ದಾರೆ, ಉತ್ತರಿಸುವಿರಾ?

ಶಾಸಕರಿಗಿಂತ ಮೇಲೆ ಫೋಟೋ ಹಾಕಲು ಈಶ್ವರಪ್ಪನವರ ಪುತ್ರ ಎಂಬುದೇ ಅರ್ಹತೆಯೇ?
#BJPvsBJP
[06/12, 8:31 PM] Kpcc official: ಸರ್ಕಾರ ಗೋಹತ್ಯೆ ನಿಷೇಧ ತಂದಿದ್ದರ ಹಿಂದಿನ ಉದ್ದೇಶ
ಗೋಹತ್ಯೆಯನ್ನು ನಾವೇ ಮಾಡುತ್ತೇವೆ, ನೀವು ಮಾಡಬೇಡಿ ಎಂಬುದೇ @BJP4Karnataka?

ಅನುಪಯುಕ್ತ ಗೋವುಗಳು ಹಾದಿಬೀದಿಯಲ್ಲಿ ನರಳಿ ಸಾಯುತ್ತಿದ್ದರೂ ಸರ್ಕಾರ ಗೋಶಾಲೆಗಳನ್ನು ಆರಂಭಿಸಿಲ್ಲ.

ಬಿಜೆಪಿ ಸರ್ಕಾರವೇ ಗೋವುಗಳ ಹತ್ಯೆ ಮಾಡುತ್ತಿದೆ, ಇದಕ್ಕೆ ಯಾರನ್ನು ಶಿಕ್ಷಿಸಬೇಕು @BSBommai ಅವರೇ?
[06/12, 11:54 PM] Kpcc official: ಬಿಜೆಪಿ ರೌಡಿ ಮೋರ್ಚಾದ ಲಿಸ್ಟ್ ಬೆಳೆಯುತ್ತಲೇ ಇದೆ, ಒಂಟೆ ರೋಹಿತ್, ಮಾರ್ಕೆಟ್ ವೇಡಿ ಎಂಬ ರೌಡಿ ಶೀಟರ್‌ಗಳೊಂದಿಗೆ ಸಚಿವ @drashwathcn ಅವರ ಗೆಳೆತನ ಜಗಜ್ಜಾಹೀರಾಗಿದೆ.

ಮಾರ್ಕೆಟ್ ವೇಡಿ ಈಗಾಗಲೇ ಬಿಜೆಪಿ ಸೇರಿಯೂ ಆಗಿದೆ.

ಹೀಗಿದ್ದೂ ರೌಡಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವ ಬಿಜೆಪಿಗರ ನಾಲಿಗೆಯನ್ನು ಯಾವುದರಿಂದ ತಯಾರಿಸಲಾಗಿದೆ!!
[06/12, 11:54 PM] Kpcc official: ದೊಣ್ಣೆ ಹಿಡಿದು ಜನರನ್ನು ಬೆದರಿಸುತ್ತಿದ್ದ RSS ಈಗ ಲಾಂಗು ಮಚ್ಚು ಹಿಡಿದು ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆಯೇ?
ರೌಡಿ ಮೋರ್ಚಾ ತೆರೆಯುವಂತೆ ಬಿಜೆಪಿಗೆ RSS ಅದೇಶಿಸಿದೆಯೇ?

ಈ ಕಾರಣಕ್ಕಾಗಿಯೇ ಬಿಜೆಪಿಯ ವೈಟ್ ಕಾಲರ್ ರೌಡಿಗಳು ಲಜ್ಜೆ ಬಿಟ್ಟು ಅಸಲಿ ರೌಡಿಗಳನ್ನು ಸಮರ್ಥನೆ ಮಾಡುತ್ತಿದ್ದಾರೆಯೇ?

ಬಿಜೆಪಿಗರಿಗೂ ರೌಡಿಗಳಿಗೂ ಏನು ಈ ಅನುಬಂಧ?
[06/12, 11:54 PM] Kpcc official: ಸದ್ದಿಲ್ಲದೆ ರೌಡಿ ಶೀಟರ್ ಮಾರ್ಕೆಟ್ ವೇಡಿ ಬಿಜೆಪಿ ಸೇರಿ ರೌಡಿ ರಾಜಕಾರಣ ಶುರುಮಾಡಿಯಾಗಿದೆ.

ತಮ್ಮ ದುಷ್ಟ ಆಡಳಿತದಿಂದಾಗಿ ಮತದಾರರನ್ನು ಓಲೈಸಿ ಮತ ಪಡೆಯಲು ಅಸಾಧ್ಯ ಎಂದು ಅರಿತ @BJP4Karnataka ರೌಡಿ ಮೋರ್ಚಾ ಕಟ್ಟಿಕೊಂಡು ಬೆದರಿಸಿ ಮತ ಪಡೆಯಲು ಸಿದ್ಧಗೊಳ್ಳುತ್ತಿದೆ.

ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ.
[07/12, 1:35 PM] Kpcc official: *ಕಾಂಗ್ರೆಸ್ ನಿಂದ ಜ.8ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’*

*ಬೆಂಗಳೂರು:*

‘ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ವನ್ನು ಕಾಂಗ್ರೆಸ್ ಪಕ್ಷ ಜ.8ರಂದು ಚಿತ್ರದುರ್ಗದಲ್ಲಿ ನಡೆಸಲು ತೀರ್ಮಾನಿಸಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರಾದ ಕೆ.ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಹೆಚ್. ಆಂಜನೇಯ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾವೇಶದ ಕುರಿತು ಮಾಹಿತಿ ನೀಡಿದ ಪರಮೇಶ್ವರ್ ಅವರು ಹೇಳಿದ್ದಿಷ್ಟು;

‘ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯದ ನಂತರ ಸಮಾಜದಲ್ಲಿ ಶೋಷಿತ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಅಂದಿನಿಂದ ಇಲ್ಲಿಯವರೆಗೂ ಈ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಲೇ ಬಂದಿವೆ. ಕಾಂಗ್ರೆಸ್ ಪಕ್ಷ ಕೂಡ ಅವರ ಕ್ಷೇಮಾಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಅನೇಕ ಕಾನೂನು ತರುವ ಮೂಲಕ ಭಾರತದಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅವುಗಳನ್ನು ಜಾರಿಗೆ ತರಲು ಎಲ್ಲ ಪ್ರಯತ್ನ ಮಾಡಿದೆ.

ಕರ್ನಾಟಕದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ, ಬಡತನ ರೇಖೆಯಿಂದ ಹೊರಗೆ ಮುಖ್ಯವಾಹಿನಿಗೆ ತರಲು ಕಾನೂನಾತ್ಮಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇಂದು ಬೇರೆ ಬೇರೆ ಪಕ್ಷಗಳು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿವೆ. ಯಾವ ಪಕ್ಷಗಳು ಅವರ ಯೋಗಕ್ಷೇಮಕ್ಕೆ ಪ್ರಯತ್ನಿಸಲಿಲ್ಲ. ಪಕ್ಷದ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಪೋಟೋಗಳನ್ನು ಹಾಕಿಕೊಳ್ಳದವರು ಇಂದು ದಲಿತರ ಮನೆಗಳಲ್ಲಿ ಮಲಗಲು, ಬೇರೆ ಹೊಟೇಲ್ ನಿಂದ ಊಟ ತಂರಿಸಿ ತಿಂದು ಬರುತ್ತಿದ್ದಾರೆ. 

ಈ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳು ನಮ್ಮ ಜನರಿಗೆ ನಿಮ್ಮ ಜತೆ ಇದ್ದೇವೆ. ನಿಮ್ಮ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಮರುಭರವಸೆ ನೀಡಲು ಸಮಾವೇಶ ಮಾಡಲು ನಾವೆಲ್ಲ ಪೂರ್ವಭಾವಿ ಸಭೆ ಮಾಡಿ ನಿರ್ಧರಿಸಿದ್ದೇವೆ.

ಪೂರ್ವಭಾವಿ ಸಭೆಯಲ್ಲಿ ಎಲ್ಲ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ನಾಯಕರು ಸೇರಿ ಈ ಸಮಾವೇಶವನ್ನು ಮಾಡಿ ಎಲ್ಲ ಸಮುದಾಯಗಳು ಒಟ್ಟಾಗಿ ಸೇರಬೇಕು ನಿರ್ಧರಿಸಿದ್ದೇವೆ. ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪರಿಶಿಷ್ಟ ಪಂಗಡದಲ್ಲಿ 52 ಸಮುದಾಯಗಳಿದ್ದು, ಈ ಎಲ್ಲ ಸಮುದಾಯಗಳನ್ನು ಒಂದು ವೇದಿಕೆ ಮೇಲೆ ತರಬೇಕು. ಎಲ್ಲರಿಗೂ ಸಮಸ್ಯೆ ಒಂದೇ ಆಗಿದ್ದು, ನಮ್ಮಲ್ಲಿ ವ್ಯತ್ಯಾಸ ಇರಬಾರದು. ನಮ್ಮನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಎರಡೂ ಸಮುದಾಯ ಸೇರಿ 24.1% ಜನರಿದ್ದು, ಸುಮಾರು 1.5 ಕೋಟಿ ಜನ ಇದ್ದಾರೆ.

ಈ ಸಮಾವೇಶವನ್ನು ಚಿತ್ರದುರ್ಗದಲ್ಲಿ ಜ.8ರಂದು ಭಾನುವಾರ ಸಮಾವೇಶ ಮಾಡಲು ತೀರ್ಮಾನಿಸಲಾಗುವುದು. ಬೆಂಗಳೂರಿನಲ್ಲಿ ಮಾಡಿದರೆ ಉತ್ತರ ಕರ್ನಾಟಕದ ಜನರಿಗೆ ದೂರವಾಗುತ್ತದೆ. ಹೀಗಾಗಿ ಎಲ್ಲರಿಗೂ ಅನುಕೂಲವಾಗುವಂತೆ ಮಧ್ಯ ಕರ್ನಾಟಕ ಭಾಗದಲ್ಲಿರುವ ಚಿತ್ರದುರ್ಗದಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಲಿದ್ದು, ಅವರ ಜತೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಲ್ಲಿ ಯಾರಾದರೂ ಒಬ್ಬರು ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಕಾರ್ಯಕ್ರಮದಲ್ಲಿ ಈ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಆ ಮೂಲಕ ಜನಸಮುದಾಯಕ್ಕೆ ಅರಿವು ಮೂಡಿಸಲಾಗುವುದು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಎಂಬುದು ಭಿಕ್ಷೆಯಲ್ಲ. ಅದು ಈ ಸಮುದಾಯದ ಹಕ್ಕು. ಮೀಸಲಾತಿ ವಿಚಾರವಾಗಿ ಯಾರು ಏನುಬೇಕಾದರೂ ಮಾತನಾಡಬಹುದು. ಆದರೆ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರು, ಶೋಷಿತರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಂಬೇಡ್ಕರ್ ಅವರು 10 ವರ್ಷಗಳ ಮೀಸಲಾತಿ ನೀಡಿದ್ದರು. ಅವರು 10 ವರ್ಷಗಳಲ್ಲಿ ಈ ಮೀಸಲಾತಿಯಿಂದ ಈ ಸಮುದಾಯದವರು ಬದಲಾವಣೆ ಕಂಡು ಬೇರೆಯವರಂತೆ ಸಮಾಜದಲ್ಲಿ ಮೇಲೆ ಬರಬಹುದು ಎಂದು ಭಾವಿಸಿದ್ದರು. ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಗಳು ಮೀಸಲಾತಿ ಮುಂದುವರಿಸಿಕೊಂಡು ಹೋಗುತ್ತಿವೆ. ಇತ್ತೀಚೆಗೆ ಅನೇಕ ಟೀಕೆ ಟಿಪ್ಪಣಿ ಬರುತ್ತಿವೆ. ಎಲ್ಲಿಯವರೆಗೆ ಅಸ್ಪೃಷ್ಯತೆ ಇರುತ್ತದೆ, ಈ ಸಮುದಾಯದ ಏಳಿಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ನಾವು ಆಗ್ರಹಿಸುತ್ತೇವೆ. 

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ 24.1% ಅನುದಾನ ಮೀಸಲಿಡಲು ನಿರ್ಧರಿಸಲಾಯಿತು. ಇದು ಕೇವಲ ಮಾತಾಗಿ ಉಳಿಯದೇ ಕಾನೂನು ತರಲಾಯಿತು. ಈ ಕಾನೂನಿನಲ್ಲಿ ಈ ಅನುದಾನ ಬಳಕೆ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಆ ವರ್ಷ ಖರ್ಚಾಗದ ಮೊತ್ತವನ್ನು ಮುಂದಿನ ವರ್ಷಕ್ಕೆ ಮುಂದುವರಿಸಲಾಗುವುದು ಎಂದು ತಿಳಿಸಲಾಗಿತ್ತು.

ಸಿದ್ದರಾಮಯ್ಯ ಅವರ ಸರ್ಕಾರದ ಕೊನೆಯ ಬಜೆಟ್ ನಲ್ಲಿ 30 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಎಸ್ ಸಿಎಸ್ ಪಿ- ಟಿಎಸ್ ಪಿ ಮೂಲಕ ನಮೀಡಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ಕಾನೂನು ಗಾಳಿಗೆ ತೂರಿದೆ. ಕಳೆದ ಬಜೆಟ್ ಮೊತ್ತ 2.63 ಲಕ್ಷ ಕೋಟಿ ಆಗಿದ್ದು, 24% ಎಂದರೆ 42 ಸಾವಿರ ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ನೀಡಬೇಕಿತ್ತು. ಆದರೆ ಕೇವಲ 29 ಸಾವಿರ ಕೋಟಿ ನೀಡಿದೆ. ನೀಡಿರುವ ಕಡಿಮೆ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ.

ಈಗ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ವಿಚಾರವಾಗಿ ಪ್ರಯಾರ ಪಡೆಯುತ್ತಿದೆ. ಪರಿಶಿಷ್ಟ ಜಾತಿಯವರಿಗೆ 15% ರಿಂದ 17% ಹಾಗೂ ಪರಿಶಿಷ್ಟ ಪಂಗಡದವರಿಗೆ 3%ರಿಂದ 7% ಮೀಸಲಾತಿ ಹೆಚ್ಚಳ ನಾವು ಮಾಡಿದ್ದೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಮೂಲತಃ ಇದಕ್ಕೆ ಅಡಿಗಲ್ಲು ಹಾಕಿದ್ದು ಕಾಂಗ್ರೆಸ್ ಪಕ್ಷ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಎಸ್ ಟಿ ಸಮುದಾಯದ ಸ್ವಾಮೀಜಿ ಹಾಗೂ ಶಾಸಕರು ಹೋರಾಟ ಆರಂಭಿಸಿದಾಗ, ನಮ್ಮ ಸರ್ಕಾರ ಭರವಸೆ ನೀಡಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ವರದಿ ಅಷ್ಠಾನ ಮಾಡುವ ಸಮಯಕ್ಕೆ ಸರ್ಕಾರ ಬಿದ್ದು ಹೋಯಿತು. ಅಂದು ನಮ್ಮ ಸರ್ಕಾರ ಮುಂದುವರಿದಿದ್ದರೆ ನಾವೇ ಇದನ್ನು ಜಾರಿ ಮಾಡುತ್ತಿದ್ದೆವು. 

ಈಗ ನಮ್ಮ ಒತ್ತಾಯ ಈ ಮೀಸಲಾತಿಯನ್ನು ಕಾನೂನೂ ಚೌಕಟ್ಟಿನಲ್ಲಿ ತರಬೇಕು. ಸಂವಿಧಾನದ 9ನೇ ಷೆಡ್ಯೂಲ್ ನಲ್ಲಿ ಸೇರಿಸಬೇಕು. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡದಿದ್ದರೆ ಇದು ಅನುಷ್ಠಾನ ಆಗುವುದಿಲ್ಲ. ಕೇವಲ ಹೇಳಿಕೆಗೆ ಇದು ಸೀಮಿತವಾಗುತ್ತದೆ. 

ಇನ್ನು ವಸತಿ ನಿರ್ಮಾಣ, ವಿದ್ಯಾರ್ಥಿ ವೇತನ ವಿಚಾರ ಚರ್ಚೆ ಆಗಬೇಕಿದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಇದರಿಂದ ಹಾಸ್ಟೆಲ್ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮೀಸಲಾತಿ ಹೆಚ್ಚಳದಲ್ಲಿ ಪ್ರಚಾರ ಪಡೆಯುತ್ತಿರುವ ಸರ್ಕಾರ ಈ ಸಮಸ್ಯೆಗಳನ್ನು ಯಾಕೆ ಬಗೆಹರಿಸುತ್ತಿಲ್ಲ. ಕೆಐಡಿಬಿಯಲ್ಲಿ ಮೀಸಲಾತಿ, ಗುತ್ತಿಗೆಯಲ್ಲಿ ಮೀಸಲಾತಿ ನೀಡಬೇಕು ಎಂದು ನಾವು ಕಾನೂನು ಮಾಡಿದ್ದೆವು. ಈಗ ಅದನ್ನು ಪಾಲಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ.

ನಮ್ಮ ಎಲ್ಲ ಸಮುದಾಯ ಐಕ್ಯತೆಯಿಂದ ಒಂದು ವೇದಿಕೆಗೆ ಬಂದು ಸಮಸ್ಯೆ ಬಗೆಹರಿಸಬೇಕು. ಕಾಂಗ್ರೆಸ್ ಪಕ್ಷ ನಿಮ್ಮ ಜತೆ ಇದ್ದೇವೆ ಎಂದು ಭರವಸೆ ನೀಡಬೇಕು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ದಲಿತರ ಮನೆಯಲ್ಲಿ ಮಲಗುವ ನಾಟಕ ಮಾಡುತ್ತಿದ್ದಾರೆ. ಈ ನಾಟಕ ನಂಬಬಾರದು ಎಂದು ನಾವು ಕರೆ ನೀಡಬೇಕಿದೆ. 

ಸಮಾವೇಶದ ಸಿದ್ಧತೆಯನ್ನು ಐಕ್ಯತಾ ಸಮಾವೇಶ ಎಂದು ಕರೆಯುತ್ತಿದ್ದೇವೆ. ಕಾರಣ ನಮ್ಮಲ್ಲಿ ಬೇರೆ ಬೇರೆ ಜಾತಿ ಸಮುದಾಯಗಳಿದ್ದು, ಎಲ್ಲ ಸಮುದಾಯಗಳು ಒಂದಾಗಬೇಕು ಎಂದು ಈ ಹೆಸರಿಟ್ಟಿದ್ದೇವೆ. ಈ ಸಮಾವೇಶದ ತಯಾರಿಗೆ ವಿವಿಧ ಸಮಿತಿ ರಚಿಸುತ್ತೇವೆ. ಕಾಂಗ್ರೆಸ್ ಪಕ್ಷದ ಮೂಲಕ ನಮ್ಮ ಐಕ್ಯತೆ ಪ್ರದರ್ಶನವಾಗಬೇಕು ಎಂದು ಈ ಸಮಾವೇಶ ಮಾಡಲಾಗುತ್ತಿದೆ.


*ಕೆ.ಎಚ್. ಮುನಿಯಪ್ಪ:*

ನಾವು ಪರಿಶಿಷ್ಟ ಜಾತಿಯಲ್ಲಿ 101, ಪಂಗಡದಲ್ಲಿ 52 ಸಮುದಾಯಗಳಿದ್ದು, ನಮ್ಮನ್ನು ಒಡೆದು ಆಳುವ ವ್ಯವಸ್ಥೆಯನ್ನು ಬಿಜೆಪಿ ರೂಪಿಸುತ್ತಿದೆ. ಹೀಗಾಗಿ ನಾವು ಒಂದಾಗಬೇಕು. ಗಾಂಧೀಜಿ ಅವರ ಸಿದ್ಧಾಂತ, ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನತೆ ನೀಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇದನ್ನು ಎಲ್ಲ ಸಮುದಾಯಗಳಿಗೆ ಅರಿವು ಮೂಡಿಸಬೇಕು. 

ಇಂದಿರಾ ಗಾಂಧಿ ಅವರ ಕಾಲದಲ್ಲಿ ನಡೆದ ಕ್ರಾಂತಿಕಾರಕ ಬದಲಾವಣೆಯನ್ನು ಮತ್ತೆ ತರುವ ಮೂಲಕ ದೇಶದಲ್ಲಿ 1.5 ಕೋಟಿ ಜನರನ್ನು ತಲುಪಬೇಕಿದೆ. ಐಕ್ಯತಾ ಸಮಾವೇಶ ಮೂಲಕ ಎಲ್ಲ ಸಮುದಾಯದವರಿಗೆ ಮನವರಿಕೆ ಮಾಡಬೇಕು. ಎಲ್ಲರೂ ಕಾಂಗ್ರೆಸ್ ಬೆಂಬಲಿಸುವಂತೆ ಮಾಡಬೇಕು.


*ಸತೀಶ್ ಜಾರಕಿಹೋಳಿ:*

ಚಿತ್ರದುರ್ಗದಲ್ಲಿ ಜ.8ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ನಾವು ಎಲ್ಲ ಸಮುದಾಯ ಒಂದಾಗಬೇಕು ಹಾಗೂ ಒಂದು ವೇದಿಕೆಯಲ್ಲಿ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು ಎಂದು ತೀರ್ಮಾನಿಸಲಾಗಿದೆ. ಈ ಸಮಾವೇಶಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಐತಿಹಾಸಿಕ ಸಮಾವೇಶ ಜಾಗಕ್ಕೆ ಹೋಗಿ ನಾವು ಪರಿಶೀಲನೆ ಮಾಡುತ್ತೇವೆ.

ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ವರ್ಗಕ್ಕೆ ಸಿಕ್ಕಿದ್ದ ಯೋಜನೆ ಮತ್ತೆ ಜಾರಿ ಆಗಬೇಕು ಎಂದು ಈ ವೇದಿಕೆ ಮೂಲಕ ಆಗ್ರಹಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಇರಬೇಕು, ಒಂದೇ ಪಕ್ಷದ ಜತೆ ಇರಬೇಕು ಎಂಬ ಸಂದೇಶ ನೀಡಲು ಸಮಾವೇಶ ಮಾಡುತ್ತಿದ್ದೇವೆ.


*ಪ್ರಶ್ನೋತ್ತರ*

ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಈಗ ದಲಿತರ ಓಲೈಕೆಗೆ ಪಕ್ಷ ಪ್ರಯತ್ನಿಸುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ‘ನಾವೇ ದಲಿತರಾಗಿದ್ದೇವೆ. ನಾವು ಯಾರನ್ನೂ ಓಲೈಸುವ ಅಗತ್ಯವಿಲ್ಲ. ದಲಿತರ ಮೇಲಿನ ದೌರ್ಜನ್ಯ, ಹತ್ಯೆಗಳಾಗಿದ್ದು, ಇವರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವಾಗಿ ನಮ್ಮ ಅಜೆಂಡಾ ದಲಿತರ ರಕ್ಷಣೆಯಾಗಿವೆ. ಅವರ ರಕ್ಷಣೆಗೆ ಕಾನೂನು ತಂದಿರುವುದು ಕಾಂಗ್ರೆಸ್ ಪಕ್ಷ. ಅದನ್ನು ಅನುಷ್ಠಾನ ಮಾಡುವುದು ಸರ್ಕಾರದ ಕೆಲಸ. ನಮ್ಮ ಸರ್ಕಾರದ ಇದ್ದಾಗ ದೌರ್ಜನ್ಯ ಆದಾಗ ನಾವು ಧ್ವನಿ ಎತ್ತಿದ್ದೇವೆ. ನಾವು ಇಂತಹ ಪ್ರಕರಣದಲ್ಲಿ ಹೇಳಿಕೆ ನೀಡಿ ಸುಮ್ಮನೆ ಕೂತಿಲ್ಲ. ಸಂತ್ರಸ್ತರ ಮನೆಗೆ ಹೋಗಿ ಅವರ ಸಾಂತ್ವಾನ ಹೇಳಿದ್ದೇವೆ’ ಎಂದು ತಿಳಿಸಿದರು.

ಐಕ್ಯತಾ ಸಮಾವೇಶದಲ್ಲಿ ದಲಿತರ ರಾಜಕೀಯ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತೀರಾ ಎಂಬ ಪ್ರಶ್ನೆಗೆ, ‘ಮೀಸಲಾತಿ ನಮ್ಮ ಹಕ್ಕು. ರಾಜಕೀಯದಲ್ಲಿ ನಾವು ಅದನ್ನು ಆಗ್ರಹಿಸುತ್ತೇವೆ. ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ನಾವು ಪಕ್ಷದಲ್ಲಿ ಕೋರುತ್ತೇವೆ’ ಎಂದು ತಿಳಿಸಿದರು.

ದಲಿತರಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ಲವೆ ಎಂಬ ಪ್ರಶ್ನೆಗೆ, ‘ನಾವೆಲ್ಲರೂ ಅರ್ಹರಿದ್ದು, ಸಮಯ ಬಂದಾಗ ನಾವು ಅದನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾವು ಕಾಂಗ್ರೆಸ್ ಪಕ್ಷದ ನಿಯಮಗಳಿಗೆ ಬದ್ಧರಾಗಿದ್ದು, ಕಾಂಗ್ರೆಸ್ ನಮಗೆ ರಕ್ಷಣೆ ನೀಡಿದೆ. ಸಮಾಜದ ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಶ್ರಮಿಸಿದೆ. ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್ ಗೆ ಬಿಡೋಣ. ಇಲ್ಲಿ ವೈಯಕ್ತಿಕ ಪ್ರಶ್ನೆ ಉದ್ಭವಿಸುವುದಿಲ್ಲ. ನಮ್ಮ ಪ್ರಶ್ನೆ ನಮ್ಮ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಬಡವರಿಗೆ ಅಧಿಕಾರ ಕೊಟ್ಟು ಅವರನ್ನು ಸಧೃಡಗೊಳಿಸಲು  ನಾವು ಕಾಂಗ್ರೆಸ್ ಪಕ್ಷ ನಮ್ಮ ಜನರಿಗೆ ನೀಡುವ ಮರುಭರವಸೆ ಇದಾಗಿದೆ. ಇದನ್ನು ಗಮನಿಸಿದ ನಂತರ ಹೈಕಮಾಂಡ್.’ ಎಂದು ತಿಳಿಸಿದರು. 

ಗಡಿ ವಿವಾದದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತ್ತರಿಸಿದ ಸತೀಶ್ ಜಾರಕಿಹೋಳಿ ಅವರು, ‘ಇದು ಆಗಬಾರದಿತ್ತು. ಈ ಬಗ್ಗೆ ಎರಡು ಸರ್ಕಾರಗಳು ಚರ್ಚೆ ಮಾಡಬೇಕು. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಎರಡು ಸರ್ಕಾರಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಮಹಾರಾಷ್ಟ್ರ ಮಂತ್ರಿಗಳು ರಾಜ್ಯದ ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಹಠತೊಟ್ಟಿರುವ ಬಗ್ಗೆ ಕೇಳಿದಾಗ, ‘ಅವರು ನಮ್ಮ ಜಿಲ್ಲೆಗೆ ಬರಬಹುದು. ಆದರೆ ಇಲ್ಲಿಗೆ ಬಂದು ಸಭೆ ಮಾಡಿ ಜನರ ಭಾವನೆ ಕೆರಳಿಸುವಂತಿಲ್ಲ. ಅದು ತಪ್ಪಾಗುತ್ತದೆ. ಅವರು ಬಂದು ಸರ್ಕಾರದ ಜತೆ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿ’ ಎಂದರು.

ಕಾಂಗ್ರೆಸ್ ಕಾಲದಲ್ಲಿ ಗಡಿ ವಿಚಾರವಾಗಿ ರಕ್ತಪಾತ ಆಗಿತ್ತು ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, ’40 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಹಿಂದೆ ಮರಾಠಿ ಮಾತನಾಡಿದರೆ ಹಲ್ಲೆ ಮಾಡುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಈ ರೀತಿ ಪರಿಸ್ಥಿತಿ ಸುಧಾರಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ. ಮರಾಠಿಗರು ಹಾಗೂ ಕನ್ನಡಿಗರ ಮನಸ್ಥಿತಿ ಸುಧಾರಿಸಿದ್ದು, ಕೇವಲ ರಾಜಕೀಯ ಮನಸ್ಥಿತಿ ಮಾತ್ರ ಸುಧಾರಿಸಬೇಕಿದೆ’ ಎಂದು ತಿಳಿಸಿದರು.
[07/12, 8:16 PM] Kpcc official: ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ನಡೆಸದ ಇಲಾಖೆಗಳಿಲ್ಲ!

ಬಡವರ ಬದುಕಿಗೆ ಆಸರೆಯಾಗಿದ್ದ ಅನ್ನಭಾಗ್ಯವನ್ನು ಕನ್ನಭಾಗ್ಯವಾಗಿ ಪರಿವರ್ತಿಸಿದ್ದೇ @BJP4Karnataka ಸಾಧನೆ.

ರಾಜ್ಯಾದ್ಯಂತ ಅಕ್ಕಿ ಕಳ್ಳತನ ವ್ಯಾಪಕವಾಗಿದ್ದರೂ ನಿಯಂತ್ರಿಸುವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ,

ಕಳ್ಳರ ಸರ್ಕಾರದಲ್ಲಿ ಕಳ್ಳರದ್ದೇ ಸಾಮ್ರಾಜ್ಯ!
[07/12, 8:16 PM] Kpcc official: ಅಭಿವೃದ್ಧಿಯ ಗುಜರಾತ್ ಮಾಡೆಲ್ ಪೊಳ್ಳು ಎಂದು ಜಗತ್ತಿಗೆ ತಿಳಿದಮೇಲೆ ರಾಜಕಾರಣದ ಗುಜರಾತ್ ಮಾಡೆಲ್ ಜಪ ಮಾಡುತ್ತಿದೆ ಬಿಜೆಪಿ.

ಯತ್ನಾಳ್ ಹೇಳಿದ ಗುಜರಾತ್ ಮಾಡೆಲ್ ಎಂದರೆ ಸಿಎಂ ಬದಲಾವಣೆಯೇ @BJP4Karnataka?

ಇಲ್ಲಿನ ಶಾಸಕರ ರಿಪೋರ್ಟ್ ಕಾರ್ಡ್‌ನಲ್ಲಿ ಶೂನ್ಯ ಸಾಧನೆ ಕಂಡಿದ್ದಕ್ಕಾಗಿಯೇ ಹೊಸದಾಗಿ ರೌಡಿಗಳಿಗೆ ಮಣೆ ಹಾಕುತ್ತಿರುವುದೇ?
[08/12, 9:32 AM] Kpcc official: ‘ಮಹಿಳಾ ಕಾಂಗ್ರೆಸ್ ನಡಿಗೆ-ಮತದಾರರ ಬಳಿಗೆ’
  'ನಾ ನಾಯಕಿ', 'ನಾರೀಶಕ್ತಿ'
    ಮತ್ತು 'ಮತದಾರರ ಪಟ್ಟಿ ಪರಿಶೀಲನೆ'
          ತರಬೇತಿ ಕಾರ್ಯಕ್ರಮ.

 ಬೆಂಗಳೂರು ಉತ್ತರ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಜಿಲ್ಲೆ, ಬ್ಲಾಕ್, ವಾರ್ಡ್ ಮತ್ತು ಪಂಚಾಯ್ತಿ ಅಧ್ಯಕ್ಷರಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮ.

  ದಿನಾಂಕ: 8-12-2022
  ಸಮಯ: ಬೆಳಗ್ಗೆ 11 ಗಂಟೆ
 ಸ್ಥಳ: ಸ್ಕೌಟ್ಸ್ ಮತ್ತು ಗೈಡ್ಸ್ ಆಡಿಟೋರಿಯಂ, ಬೆಂಗಳೂರು.(ಮಹಾರಾಣಿ ಕಾಲೇಜಿನ ಪಕ್ಕದಲ್ಲಿ)


ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ:

ಶ್ರೀ ರಾಮಲಿಂಗಾರೆಡ್ಡಿ ರವರು, ಗೌರವಾನ್ವಿತ ಕಾರ್ಯಾಧ್ಯಕ್ಷರು ಕೆಪಿಸಿಸಿ, ಮತ್ತು ಮಹಿಳಾ ಕಾಂಗ್ರೆಸ್ ಉಸ್ತುವಾರಿಗಳು.

ಶ್ರೀ ದಿನೇಶ್ ಗುಂಡೂರಾವ್ ರವರು ಗೌರವಾನ್ವಿತ ಮಾಜಿ ಕೆಪಿಸಿಸಿ ಅಧ್ಯಕ್ಷರು, ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಮಿಳುನಾಡು ಮತ್ತು ಗೋವಾ ಉಸ್ತುವಾರಿಗಳು.

ಶ್ರೀಮತಿ. ವಿಜಯಧರಣಿರವರು, ಮಾನ್ಯ ಶಾಸಕರು, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್.  

ಶ್ರೀ ಅಭಿಷೇಕ್ ದತ್ತ್ ರವರು, ಗೌರವಾನ್ವಿತ ಎಐಸಿಸಿ ಕಾರ್ಯದರ್ಶಿ ಮತ್ತು ಬೆಂಗಳೂರು ಕರ್ನಾಟಕ ಉಸ್ತುವಾರಿಗಳು.

ಶ್ರೀಮತಿ ಸೌಮ್ಯ ರೆಡ್ಡಿ ರವರು, ಮಾನ್ಯ ಶಾಸಕರು ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು.
[08/12, 1:01 PM] Kpcc official: ನಾಲ್ಕು ವರ್ಷದಿಂದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಅನುದಾನ ಬಿಡುಗಡೆಗೆ ಸರ್ಕಾರದ ಬಳಿ ಹಣವಿಲ್ಲ!

ಬೇಕಿರುವ ಅನುದಾನ ₹2,634,96 ಕೋಟಿ, ರಾಜೀವ್ ಗಾಂಧಿ ವಸತಿ ನಿಗಮದ ಬಳಿ ಇರುವುದು ಕೇವಲ ₹2 ಕೋಟಿ.

@BSBommai ಅವರೇ, ಇದೇನಾ ನಿಮ್ಮ ಡಬಲ್ ಇಂಜಿನ್ ಸಾಧನೆ?
ನಿಗಮಕ್ಕೆ ಅನುದಾನ ನೀಡಿ ನಿಮ್ಮ ದಮ್ಮು ತಾಕತ್ತನ್ನು ಪ್ರದರ್ಶಿಸಿ.
[08/12, 1:01 PM] Kpcc official: ಜಗತ್ತು ಅಲ್ಲೋಲ ಕಲ್ಲೋಲವಾಗಿದ್ದ ಕಾಲದಲ್ಲೂ ದೇಶದ ಅರ್ಥ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದ ಮನಮೋಹನ್ ಸಿಂಗ್‌ರವರನ್ನು ನಿಂದಿಸಿದ್ದವರು ಇಂದಿನ ಹಣದುಬ್ಬರದ ಬಗ್ಗೆ ಮಾತಾಡುತ್ತಿಲ್ಲವೇಕೆ?

ಗಟಾರ್ ಗ್ಯಾಸ್ ತಜ್ಞರಿಂದ ಹಣದುಬ್ಬರ ನಿಯಂತ್ರಣ ಸಾಧ್ಯವಿಲ್ಲವೇ @BJP4Karnataka?

ಇಎಂಐ ಏರಿಕೆಯಿಂದ ಜನರ ಬದುಕು ನರಕಕ್ಕಿಂತಲೂ ಕಡೆಯಾಗಲಿದೆ.
[08/12, 3:35 PM] Kpcc official: ಗೃಹ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿದೆ, ಗೃಹ ಇಲಾಖೆಯ ಮೇಲೆ ಗೃಹಸಚಿವರಿಗೆ ಹಿಡಿತವಿಲ್ಲ ಎಂಬುದು ಹಲವು ವಿಷಯಗಳಲ್ಲಿ ಸಾಬೀತಾಗಿದೆ.

ದಲಿತರಿಗೆ ಮೂತ್ರ ಕುಡಿಸಿ ವಿಕೃತಿ ಮೆರೆದ ಪೊಲೀಸರು ಈಗ ವಕೀಲರ ಮೇಲೂ ದೌರ್ಜನ್ಯ ಎಸಗುತ್ತಿದ್ದಾರೆ.

ತಮ್ಮ ಇಲಾಖೆಯನ್ನು ನಿರ್ವಹಿಸಲಾಗದ
@JnanendraAraga ಅವರು ತಮ್ಮ ಸ್ವಗೃಹ ಸೇರುವುದು ಒಳಿತು!
[08/12, 5:10 PM] Kpcc official: ಚಿಲುಮೆಯ ಕೈಚಳಕದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 1.30 ಲಕ್ಷ ನಕಲಿ ಮತದಾರರ ಹೆಸರು ಸೇರಿಸಿ, 90 ಸಾವಿರ ಅಸಲಿ ಮತದಾರರ ಹೆಸರು ತೆಗೆಸಲಾಗಿದೆ.

ಜನಾಕ್ರೋಶ ಎದುರಿಸುತ್ತಿದ್ದರೂ ಇಂತಹ ಅಕ್ರಮಗಳನ್ನು ನಡೆಸಿಯೇ ಗೆದ್ದುಬಿಟ್ಟೆವು ಎಂದು ಬೀಗುತ್ತದೆ ಬಿಜೆಪಿ.

ಈ ಅಕ್ರಮವನ್ನು ಉನ್ನತ ತನಿಖೆಗೆ ವಹಿಸದ ಹೊರತು ಜನತೆಗೆ ನ್ಯಾಯ ಸಿಗುವುದಿಲ್ಲ.
[08/12, 5:10 PM] Kpcc official: ನೋಟ್ ಬ್ಯಾನ್ ಎಂಬ ಮಹಾ ಹಗರಣವನ್ನು ಸುಧಾರಣಾ ಕ್ರಮ ಎಂದು ಬಿಂಬಿಸಿತ್ತು ಬಿಜೆಪಿ.

ದೇಶದ ಜನರನ್ನು ನರಕಕ್ಕೆ ತಳ್ಳಿದ ಈ ಕ್ರಮದಿಂದ ಆದ ಪ್ರಯೋಜನವೇನು ಎಂಬುದನ್ನು ಬಿಜೆಪಿ ಇದುವರೆಗೂ ಬಾಯಿ ಬಿಡುತ್ತಿಲ್ಲ.

ಇಂಥದ್ದೊಂದು ದುರಂತಮಯ ನಿರ್ದಾರದ ದಾಖಲೆಗಳನ್ನು ಕೇಳುತ್ತಿದೆ ಸುಪ್ರೀಂ ಕೋರ್ಟ್, ದಾಖಲೆ ಕೊಡುವ ಧೈರ್ಯ ಕೇಂದ್ರ ಸರ್ಕಾರಕ್ಕಿದೆಯೇ?
[08/12, 5:24 PM] Kpcc official: '@BJP4Karnataka ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ.

ಬಿಜೆಪಿಯ ದುರಾಡಳಿತವನ್ನು
ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ.
[09/12, 12:49 PM] Kpcc official: ಬಿಜೆಪಿ ರೌಡಿಗಳಿಗೆ ಮಣೆ ಹಾಕುತ್ತಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ.
ಇದಕ್ಕೆ ಬೆಂಗಳೂರಿನ ಶೂಟೌಟ್ ಘಟನೆಯೇ ಸಾಕ್ಷಿ.

ಬಿಜೆಪಿಯಲ್ಲಿ ಸ್ಥಾನ ಪಡೆದುಕೊಳ್ಳಲು ರೌಡಿಗಳು ತಮ್ಮ ಕ್ರೈಮ್ ಸ್ಕೊರ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ,

ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಮ್ ಸ್ಕೊರ್ ಮುಖ್ಯ ಅಲ್ಲವೇ!
[09/12, 2:57 PM] Kpcc official: ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
[09/12, 3:06 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
[09/12, 3:23 PM] Kpcc official: ತಮಿಳುನಾಡು ಕಾಂಗ್ರೆಸ್ ಶಾಸಕಿ ವಿಜಯಧರಿಣಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದರು.
[09/12, 3:44 PM] Kpcc official: ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದರು.
[09/12, 4:57 PM] Kpcc official: ಸುಲಿಗೆ ಸರ್ಕಾರ ಆಡಳಿತದಲ್ಲಿ ಇರುವಾಗ ಭ್ರಷ್ಟ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದಾಗಿದೆ.

ವಿಧಾನಸೌಧದಿಂದ ಹಿಡಿದು ಹಾದಿ ಬೀದಿಯಲ್ಲೂ ಲಂಚಾವತಾರ ಸರಾಗವಾಗಿ ಸಾಗಿದೆ.

ಲಂಚ ಪಡೆಯುವ ವೇಳೆ ಮಾಧ್ಯಮಗಳನ್ನು ಕಂಡು ಓಡುತ್ತಿರುವ ಈ RTO ಅಧಿಕಾರಿ @BJP4Karnataka ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾನೆ!
[09/12, 4:57 PM] Kpcc official: ವಿಧಾನಸೌಧ ವ್ಯಾಪಾರಸೌಧವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ.
ವಿಧಾನಸೌಧದ ಆವರಣದಲ್ಲೇ ಸರ್ಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ.

@BSBommai ಅವರೇ, ವಿಧಾನಸೌಧದಲ್ಲೇ ರಾಜಾರೋಷವಾಗಿ ಹುದ್ದೆ ಮಾರಾಟ ನಡೆಯುತ್ತಿದ್ದರೂ ತಮ್ಮ 'ಪ್ರಾಮಾಣಿಕ ಸರ್ಕಾರ'ದ ಕಣ್ಣಿಗೆ ಬಿದ್ದಿಲ್ಲವೇ?

ಅಥವಾ ಮಾರಾಟದ ಏಜೆಂಟರನ್ನು ನೀವೇ ಸಾಕಿಕೊಂಡಿದ್ದೀರಾ?
[09/12, 4:57 PM] Kpcc official: ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಮ್ಯಾನೇಜರ್ ಹುದ್ದೆಗೆ 65 ಲಕ್ಷ!

@BJP4Karnataka ಸರ್ಕಾರ ಪ್ರಮಾಣಿಕವಾಗಿದ್ದರೆ ವಿಧಾನಸೌಧದ ಆವರಣದಲ್ಲೇ ಭ್ರಷ್ಟರಿಗೆ ಹುದ್ದೆ ಮಾರಾಟ ಮಾಡುವ ಧೈರ್ಯ ಬರಲು ಹೇಗೆ ಸಾಧ್ಯ.

ಕೌಶಲ್ಯಾಭಿವೃದ್ಧಿ ಸಚಿವರಾದ @drashwathcn ಅವರು ಕ್ಯಾಶಲ್ಲೇ ಅಭಿವೃದ್ಧಿಯಾಗಲು ಈ ಪಟಾಲಂನ್ನು ಮುಂದೆ ಬಿಟ್ಟಿದ್ದಾರೆಯೇ?
[09/12, 5:32 PM] Kpcc official: *ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ನೀಡಿದ ಪ್ರತಿಕ್ರಿಯೆ*

ಕೋರ್ಟ್ ಅನುಮತಿ ಮೇರೆಗೆ ನಾನು ಶಾರ್ಜಾ ಪ್ರವಾಸ ಕೈಗೊಂಡು, ಮರಳಿದ್ದೇನೆ. ಅಲ್ಲಿ ಭಾರತೀಯ ಸಂಘದವರು 51ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಭಾರತೀಯರು ಹಾಗೂ ಕನ್ನಡ ಸಂಘಟನೆ ಸದಸ್ಯರು ರಾಜ್ಯದ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. 

ಆ ದೇಶದಲ್ಲಿ ನಮ್ಮವರು ಅಲ್ಪಸಂಖ್ಯಾತರು. ಅವರು ಅಲ್ಲಿ ಬದುಕಿ, ಸಂಪಾದಿಸಿ ಇಲ್ಲಿಗೆ ಹಣ ಕಳುಸುತ್ತಿದ್ದಾರೆ. ಇಲ್ಲಿ ಉದ್ಯೋಗ ಸೃಷ್ಟಿಸಬೇಕಿದ್ದ ಸಮೂಹ ಬಹಳ ಆತಂಕದಿಂದ ಹೊರದೇಶಗಳಿಗೆ ವಲಸೆ ಹೋಗುತ್ತಿವೆ. ಇಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ಕಿರುಕುಳದಿಂದ ನೊಂದು ಅಲ್ಲಿಗೆ ಸ್ಥಳಾಂ lತರ ಆಗುತ್ತಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ಅಲ್ಲಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ವಿಶೇಷ ಸಚಿವಾಲಯ ಸ್ಥಾಪಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಬಹಳ ಉತ್ತಮ ನೆರವು ನೀಡಿದೆ.

ಅಲ್ಲಿರುವ ಕನ್ನಡಿಗರ ಬೇಸರವೇನೆಂದರೆ, ಕೋವಿಡ್ ಸಮಯದಲ್ಲಿ ಅವರು ತವರಿಗೆ ಹಿಂದಿರುಗಲು ಯತ್ನಿಸಿದಾಗ ಅವರನ್ನು ಇಲ್ಲಿಗೆ ಬರಬೇಡಿ ಎಂದು ಹೇಳುವ ಮೂಲಕ ಅವರ ಮನಸ್ಸು ನೋಯಿಸಿದ್ದಾರೆ. ಅವರು ತಮ್ಮ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಅವರ ಬೇಡಿಕೆಗಳನ್ನು ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ವಿಶ್ವದ ಯಾವುದೇ ಭಾಗದಲ್ಲಿ ಇರುವ ಕನ್ನಡಿಗರ ರಕ್ಷಣೆಗೆ, ಅವರ ಜತೆ ಸಂಪರ್ಕ ಸಾಧಿಸಲು ಪ್ರತ್ಯೇಕ ಇಲಾಖೆ ಮಾಡಲಾಗುವುದು ಎಂದು ಅವರಿಗೆ ಮಾತು ನೀಡಿ ಬಂದಿದ್ದೇನೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೈಗೊಳ್ಳಲಾಗಿದ್ದ ಕ್ರಮವನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ ಪ್ರತ್ಯೇಕ ಇಲಾಖೆ ಮಾಡಲಾಗುವುದು ಎಂದು ಅವರಿಗೆ ಹೇಳಿದ್ದೇನೆ. ರಾಜ್ಯದ ಒಂದೊಂದು ತಾಲೂಕಿನಿಂದಲೇ ಸಾವಿರಾರು ಜನ ತೆರಳಿ ಅಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೂ ಅನೇಕರು ಅಲ್ಲಿ ದುಡಿಯುತ್ತಿದ್ದಾರೆ. ಅವರು ತಮ್ಮ ತಾಯ್ನಾಡಿನ ಸೇವೆ ಸಲ್ಲಿಸಲು ಉತ್ಸುಕರಾಗಿದ್ದು, ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ.

ಅನಿವಾಸಿ ಕನ್ನಡಿಗರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆಗೆ, ‘ಸರ್ಕಾರ ಅವರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರಕ್ಕೆ ಇದುವರೆಗೂ ಒರ್ವ ಪ್ರತಿನಿಧಿಯನ್ನು ನೇಮಿಸಲು ಸಾಧ್ಯವಾಗಿಲ್ಲ. ಕೇರಳ ಈ ವಿಚಾರದಲ್ಲಿ ಬಹಳ ಕಾಳಜಿ ವಹಿಸಿದೆ. ಅನಿವಾಸಿ ಕನ್ನಡಿಗರು ಅಲ್ಲಿ ಕೆಲಸ ಮಾಡಿ ದೇಶಕ್ಕೆ ಸಂಪತ್ತು ತಂದುಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಕೆಲವರು ಇಲ್ಲಿನ ಅನೇಕರಿಗೆ ಉದ್ಯೋಗ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಭೇಟಿ ಮಾಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಹಾಗೂ ವಿಶ್ವನಾಥ್ ಇಬ್ಬರೂ ಶ್ರೀನಿವಾಸ್ ಪ್ರಸಾದ್ ಅವರ ಕೈಕೆಳಗೆ ಯೂತ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದೇವೆ. ಆಗಿನಿಂದಲೂ ನಾವು ಹಲವು ಸರ್ಕಾರಗಳಲ್ಲಿ ಸಚಿವರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರಿಗೆ ಸಾಕಷ್ಟು ಅನುಭವ, ಆಲೋಚನೆಗಳಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದ ಹಿತಕ್ಕಾಗಿ ಏನೆಲ್ಲಾ ಅಗತ್ಯವಿದೆ ಎಂದು ಚರ್ಚೆ ಮಾಡಿದ್ದೇವೆ. ಆತ್ಮೀಯತೆ ಮೇರೆಗೆ ನನ್ನನ್ನು ಭೇಟಿ ಮಾಡಿದ್ದಾರೆ. ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ವಿಶ್ವನಾಥ್ ಅವರು ಶಿಕ್ಷಣ ಸಚಿವರಾಗಿದ್ದಾಗ ಮೊದಲು ಹೈದರಾಬಾದ್ ಕರ್ನಾಟಕ ಭಾಗದ ಶಾಲೆಗಳಲ್ಲಿ ಜಾರಿಗೆ ತಂದಿದ್ದರು. ರಾಜ್ಯದ ಹಿತಕ್ಕಾಗಿ ಚರ್ಚೆ ಮಾಡಿದ್ದೇವೆ. ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ’ ಎಂದು ತಿಳಿಸಿದರು.

ಬಿಜೆಪಿಯವರು ಅವರನ್ನು ಬಿಟ್ಟುಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರ ಪಕ್ಷದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಪಕ್ಷದ ವಿಚಾರದ ಬಗ್ಗೆ ಮಾತ್ರ ಗಮನಹರಿಸುತ್ತೇನೆ’ ಎಂದು ತಿಳಿಸಿದರು.

ವಿಶ್ವನಾಥ್ ಅವರು ತಮ್ಮ ಆಪ್ತರೊಂದಿಗೆ ಮತ್ತೆ ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಿಮ್ಮ ಊಹಾಪೋಹಗಳು ನಮಗೆ ಬೇಡ. ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ಮಸ್ಕಿ, ಹೊಸಕೋಟೆಯಲ್ಲಿ ಪಕ್ಷ ಬಿಟ್ಟು ಹೋದವರ ಜಾಗಕ್ಕೆ ಬೇರೆಯವರು ಬಂದಿದ್ದಾರೆ. ಹೀಗೆ ಒಬ್ಬರು ಖಾಲಿಯಾದರೆ ಆ ಸ್ಥಾನಕ್ಕೆ ಬೇರೆಯವರು ಬರುತ್ತಾರೆ. ವಿ.ಎಸ್ ಪಾಟೀಲ್, ಯು.ಬಿ ಬಣಕಾರ್ ಅವರು ಪಕ್ಷಕ್ಕೆ ಸೇರಿದ್ದಾರೆ. ಜೆಡಿಎಸ್ ನಿಂದ ಸೋತವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ. ಏನೂಬೇಕಾದರೂ ಸಾಧ್ಯವಾಗಬಹುದು’ ಎಂದು ತಿಳಿಸಿದರು.

ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವುದು ಪಕ್ಷಕ್ಕೆ ಹಿನ್ನಡೆಯಾಗುವುದೇ ಎಂಬ ಪ್ರಶ್ನೆಗೆ, ‘ಆ ರೀತಿ ಆಗುವುದಿಲ್ಲ. ಎಲ್ಲರೂ ಮತದಾರರ ಪಟ್ಟಿ ಪರಿಶೀಲಿಸುತ್ತಿದ್ದಾರೆ. ನಾವು ಈ ವಿಚಾರವಾಗಿ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ’ ಎಂದರು.

ಬಂಡವಾಳ ಹೂಡಿಕೆ ವಿಚಾರ ಪ್ರಸ್ತಾಪಿಸಿದಾಗ, ‘ಅನಿವಾಸಿ ಕನ್ನಡಿಗರಿಗೆ ಉತ್ತಮ ಆಡಳಿತದ ಭರವಸೆ ನೀಡಿದ್ದು, ಅವರು ಸಂಪಾದನೆ ಹಣವನ್ನು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದೇನೆ. ಸರ್ಕಾರದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮಂಗಳೂರು, ಉಡುಪಿ ಭಾಗದಲ್ಲಿ ಎಷ್ಟು ಹೂಡಿಕೆಯಾಗಿದೆ ಎಂಬ ಪಟ್ಟಿಯನ್ನು ಸಚಿವ ನಿರಾಣಿ ಅವರು ನೀಡಲಿ ಎಂದು ಬೊಮ್ಮಾಯಿ ಅವರು ಸೂಚಿಸಲಿ’ ಎಂದು ತಿಳಿಸಿದರು.

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದೇ ಎಂಬ ಪ್ರಶ್ನೆಗೆ, ‘ನಾವು ಗುಜರಾತಿನಲ್ಲಿ ಹೆಚ್ಚಿನ ಕ್ಷೇತ್ರಗಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಲ್ಲಿಯೂ ಆಪರೇಶನ್ ಕಮಲ ಮಾಡಿ ಚುನಾವಣೆ ಮಾಡಿದ್ದರು. ಹಿಮಾಚಲ ಪ್ರದೇಶ ಚುನಾವಣೆಯು ಭ್ರಷ್ಟಾಚಾರ ಹೆಚ್ಚು ದಿನ ನಡೆಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಮ್ಮ ನಾಯಕರೆಲ್ಲರೂ ಅಲ್ಲಿ ಉತ್ತಮ ಪ್ರಚಾರ ಮಾಡಿದ್ದಾರೆ. ಅಲ್ಲಿನ ಮತದಾರರು ಒಬ್ಬೊಬ್ಬರಿಗೆ ಒಂದೊಂದು ಬಾರಿ ಅವಕಾಶ ನೀಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿಯೂ ಅದು ಮರುಕಳಿಸಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ತಿಳಿಸಿದರು.

ಹಿಮಾಚಲ ಪ್ರದೇಶದಲ್ಲಿ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ, ‘ಅವರು ಪ್ರಯತ್ನಿಸಲಿ, ಅವರಿಗೆ ಶುಭಕೋರುತ್ತೇನೆ’ ಎಂದರು. 

ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ತಿಂಗಳಿಗೆ 2 ಬಾರಿ ಇಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಪ್ರಶ್ನೆಗೆ, ‘ಅವರು ದಿನ ನಿತ್ಯ ಇಲ್ಲೇ ಪ್ರಚಾರ ಮಾಡಲಿ. ಕೇವಲ 2 ದಿನ ಯಾಕೆ. ಅವರು ತಾರಾ ಪ್ರಚಾರಕರಾಗಿದ್ದು, ಇಲ್ಲೇ ವಾಸ್ತವ್ಯ ಹೂಡಲಿ. ಅವರು ಪ್ರಧಾನಮಂತ್ರಿಗಳಾಗಿದ್ದು, ಅವರ ಸ್ಥಾನಕ್ಕೆ ನೀಡಬೇಕಾದ ಗೌರವ ನೀಡೋಣ. ಕಳೆದ ಬಾರಿ 10% ಸರ್ಕಾರ ಎಂದು ಹೇಳಿದ್ದರು, ಈಗ ಅವರ ಸರ್ಕಾರ 40% ಆಗಿದೆ’ ಎಂದು ಹೇಳಿದರು.

ಗುಬ್ಬಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ನಿಲ್ಲುವ ಹೇಳಿಕೆ ಬಗ್ಗೆ ಕೇಳಿದಾಗ, ‘ಪಕ್ಷಕ್ಕೆ ಅನುಕೂಲ ಆಗುವ ರೀತಿ ನಾವು ಟಿಕೆಟ್ ನೀಡುತ್ತೇವೆ. ಯಾರು ಯಾವ ಬಂಡಾಯ ಬೇಕಾದರೂ ಏಳಲಿ. ನಾವು ಪ್ರತಿಯೊಬ್ಬರ ಅರ್ಹತೆ ಮೇಲೆ ನಿರ್ಧರಿಸುತ್ತೇವೆ’ ಎಂದರು.

ಉದಯಪುರ ನಿರ್ಣಯದಂತೆ ಈ ಬಾರಿ ಹೊಸಬರಿಗೆ ಆದ್ಯತೆ ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ಖರ್ಗೆ ಅವರು ಕೂಡ ಹೊಸಬರಿಗೆ ಆದ್ಯತೆ ನೀಡುವ ವಿಚಾರ ಹೊಂದಿದ್ದು, ಅವರು ಆರಂಭದ ದಿನಗಳಲ್ಲೇ ಈ ನಿರ್ಣಯದ ಬಗ್ಗೆ ದೇಶದ ಜನರಿಗೆ ತಿಳಿಸಿದ್ದಾರೆ’ ಎಂದರು.

ಹಿರಿಯರು ಹಾಗೂ ಕುಟುಂಬ ರಾಜಕಾರಣದಲ್ಲಿ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ, ‘ನಮ್ಮ ರಾಜಕೀಯ ತಂತ್ರಗಳನ್ನು ಒಂದೇ ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರು ಕಷ್ಟಪಡುತ್ತಿದ್ದು, ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ದಿನದಲ್ಲಿ ಕೇವಲ 24 ಗಂಟೆ ಮಾತ್ರ ಇದೆ. ಇನ್ನು ಹೆಚ್ಚಾಗಿದ್ದರೆ ಇನ್ನು ಹೆಚ್ಚಾಗಿ ದುಡಿಯಬಹುದಾಗಿತ್ತು. ನಮ್ಮ ಮುಂದಿರುವ ಸವಾಲಿನ ಬಗ್ಗೆ ಅವರಿಗೂ ಗೊತ್ತಿದೆ. ಎಲ್ಲವೂ ಸುಲಭವಾಗಿ ಸಿಗುವುದಿಲ್ಲ. ಬಿಜೆಪಿ ಅವರದು ಡಬಲ್ ಇಂಜಿನ್ ಸರ್ಕಾರ, ಅವರು ಸಾವಿಧಾನಿಕ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು, ರೌಡಿಗಳು ಹೀಗೆ ಅನೇಕರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜವಾಬ್ದಾರಿ ಕಂಡು ಪರಮೇಶ್ವರ್ ಅವರು ಅನುಕಂಪದಿಂದ ಈ ರೀತಿ ಹೇಳಿದ್ದಾರೆ. ಇಲ್ಲಿ ನಾವು ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು. ನಾವು ಒಬ್ಬರೆ ಹೋಗುವುದಾದರೆ ವೇಗವಾಗಿ ಹೋಗಬಹುದು, ನಾವು ದೂರದವರೆಗೂ ಹೋಗಬೇಕಾದರೆ ನಾವು ಎಲ್ಲರ ಜತೆಗೂಡಿ ಸಾಗಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ’ ಎಂದರು.

ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ, ‘ಚಿಕ್ಕಮಗಳೂರಿನಲ್ಲಿ ಹೋಗಿ ಎಲ್ಲರ ಜತೆ ಮಾತನಾಡಿದ್ದೇನೆ. ಪಕ್ಷ ಇದ್ದರಷ್ಟೇ ಅಧಿಕಾರ ಅನುಭವಿಸಬಹುದು. ಪಕ್ಷ ಅಧಿಕಾರಕ್ಕೆ ಬಂದರೆ ನಾವು ಅಧಿಕಾರ ಅನುಭವಿಸಬಹುದು. 350ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಅಧಿಕಾರ ಇದೆ. 75 ಪರಿಷತ್ ಸ್ಥಾನ, 16 ರಾಜ್ಯಸಭಾ ಸ್ಥಾನಗಳಿದ್ದು, ಅರ್ಹತೆಗೆ ತಕ್ಕಂತೆ ಎಲ್ಲರಿಗೂ ನಾವು ಅಧಿಕಾರ ನೀಡುತ್ತೇವೆ. ನಮ್ಮ ಪಕ್ಷದಲ್ಲಿ ಶಾಸಕರಾಗಬೇಕು ಎಂದು ಬಹಳ ಹುರುಪಿನಿಂದ 1350 ಜನ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ದಟ್ಟವಾಗಿದೆ’ ಎಂದರು.

ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಲ್ಲ, ಪಕ್ಷ ಬಿಟ್ಟು ಹೋಗಿರುವವರೇ ಮತ್ತೆ ಬರುತ್ತಾರಾ ಎಂಬ ಪ್ರಶ್ನೆಗೆ, 'ಹಲವು ಕ್ಷೇತ್ರಗಳಲ್ಲಿ ಅಚ್ಚರಿ ಕಾದಿವೆ. ಕೇವಲ ವಲಸಿಗರ ಬಗ್ಗೆ ಯಾಕೆ ಆಲೋಚಿಸುತ್ತೀರಿ? ಪಾಟೀಲ್, ಯು.ಬಿ ಬಣಕಾರ್, ಮಧುಬಂಗಾರಪ್ಪ, ಶರತ್ ಬಚ್ಚೇಗೌಡ ಅವರು ವಲಸಿಗರೇ?’ ಎಂದು ಕೇಳಿದರು.

ಚಿತ್ರದುರ್ಗದಲ್ಲಿ ದಲಿತರ ಸಮಾವೇಶ ನಡೆಯುತ್ತಿದ್ದು, ದಲಿತ ಸಿಎಂ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಯಾಕೆ ಆಗಬಾರದು? ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ನಾನು ಬೇರೆಯವರಂತೆ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುತ್ತೇನೆ, ದಲಿತರನ್ನು ಮಾಡುತ್ತೇನೆ ಎಂದು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಆಗುವ ಅವಕಾಶವಿದೆ. ಅವರಿಗೆ ಅರ್ಹತೆ ಹಾಗೂ ಹಿರಿತನ ಎರಡೂ ಇದೆ. ಅವರು ಪಕ್ಷಕ್ಕೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮ ಮನೆ ಆಸ್ತಿ ಅಲ್ಲ. ಇದು ಎಲ್ಲ ವರ್ಗದವರಿಗೂ ಸೇರಿರುವ ಪಕ್ಷ. ಇದೇ ನಮ್ಮ ಪಕ್ಷದ ಶಕ್ತಿ. ವೀರಪ್ಪ ಮೋಯ್ಲಿ, ಧರಂ ಸಿಂಗ್, ಬಂಗಾರಪ್ಪನವರ ಸಮಾಜ ಎಷ್ಟು ಸಂಖ್ಯೆಯಲ್ಲಿತ್ತು? ಹಿಂದುಳಿದ ವರ್ಗದ ಸಮುದಾಯದವರು ಮುಖ್ಯಮಂತ್ರಿಗಳಾಗಿಲ್ಲವೇ? ಗುಂಡೂರಾವ್ ಅವರು ಆಗಿಲ್ಲವೇ? ನಮ್ಮಲ್ಲಿ ಅನೇಕ ಸಮರ್ಥರಿದ್ದಾರೆ. ರಂಗನಾಥ್ ಅವರಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆ ಅವರು, ಪರಮೇಶ್ವರ್ ಅವರು ನಮ್ಮ ಪಕ್ಷವನ್ನು ಕಷ್ಟದ ಸಮಯದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಅವರು ದಲಿತರು ಎಂಬುದಕ್ಕಿಂತ ಅವರು ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಂದು ಈ ಸ್ಥಾನ ಕೊಟ್ಟಿದೆ. 371ಜೆ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಿದ್ದು ಖರ್ಗೆ ಅವರ ಸಾಧನೆಗೆ ಸಾಕ್ಷಿ. ಇದು ಕೇವಲ ದಲಿತರಿಗೆ ಮಾತ್ರವಲ್ಲ, ಎಲ್ಲ ವರ್ಗದವರಿಗೂ ನೆರವಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಬೇರೆ ಪಕ್ಷಗಳಲ್ಲಿ ಇಂತಹ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
[09/12, 5:59 PM] Kpcc official: ಬಡ ಮಕ್ಕಳು ಶಿಕ್ಷಣದಿಂದ ದೂರವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ.
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸುಲಿಗೆ ಎಗ್ಗಿಲ್ಲದೆ ಸಾಗಿದೆ.

ಬಿಬಿಎಂಪಿ ಕಾಲೇಜಿನಲ್ಲಿ ಸುಲಿಗೆ ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬರಲಿಲ್ಲವೇ?

@BBMPCOMM ಅವರೇ, ಇಂತಹ ಬೇಕಾಬಿಟ್ಟಿ ಸುಲಿಗೆಯನ್ನು ನಿಯಂತ್ರಿಸಲು ಕ್ರಮವಹಿಸಿ.
[10/12, 1:51 PM] Kpcc official: ಕಲ್ಬುರ್ಗಿಯಲ್ಲಿ ಶನಿವಾರ ನಡೆದ ಬೃಹತ್ ಮೆರವಣಿಗೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಧ್ರುವನಾರಾಯಣ್, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ ಮತ್ತಿತರರು ಭಾಗವಹಿಸಿದ್ದರು.
[10/12, 6:43 PM] Kpcc official: ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿವೆ, ಅಪೌಷ್ಟಿಕತೆಯಿಂದ ಗರ್ಭಿಣಿಯರ, ಮಕ್ಕಳ ಮರಣ ಪ್ರಮಾಣ ಹೆಚ್ಚಿದೆ.

ನಿರ್ದಯಿ ಸರ್ಕಾರಕ್ಕೆ ಪೌಷ್ಟಿಕ ಆಹಾರ ನೀಡಲೂ ಸಹ ಸಾಧ್ಯವಿಲ್ಲವೇ?

ಸ್ವತಃ ಸಮಾಜ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಅಂಗನವಾಡಿಗಳಿಗೆ ಹಾಲಿನ ಪುಡಿ ನೀಡಲು ಅನುದಾನವಿಲ್ಲ ಎಂದರೆ ಏನರ್ಥ @BSBommai ಅವರೇ?
[10/12, 6:43 PM] Kpcc official: ಅಡಿಕೆ ದರ ಕೇವಲ ಎರಡೇ ತಿಂಗಳಲ್ಲಿ 15 ಸಾವಿರದಷ್ಟು ಕುಸಿತ ಕಂಡಿದೆ. ವಿದೇಶದಿಂದ 17 ಲಕ್ಷ ಟನ್ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದ್ದೇ ಇದಕ್ಕೆ ಕಾರಣ.

ರಾಜ್ಯದ ರೈತರ ಹಿತ ಬಲಿಕೊಡುವ ಕೇಂದ್ರದ ಆಮದು ನಿರ್ಧಾರದಿಂದ  ಈಗಾಗಲೇ ಎಲೆ ಚುಕ್ಕಿ ರೋಗದಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರ ಮೇಲೆ ಈಗ ಬೆಲೆ ಕುಸಿತದ ಬರೆ ಬಿದ್ದಿದೆ.
1/2
[10/12, 6:43 PM] Kpcc official: ವಿದೇಶಿ ಅಡಕೆಯ ಆಮದಿನಿಂದ ರಾಜ್ಯದ ರೈತರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದಿದ್ದರು ಗೃಹ ಸಚಿವರು, ಅಡಿಕೆ ಕಾರ್ಯಪಡೆ ಅಧ್ಯಕ್ಷರೂ ಆದ ಸನ್ಮಾನ್ಯ @JnanendraAraga ಅವರು.

ರಾಜ್ಯದ ಗೃಹ ಇಲಾಖೆಯ ಬಗ್ಗೆ ಆಸಕ್ತಿಯಿಲ್ಲದೆ ಕೇವಲ ನಿಮ್ಮ ಕ್ಷೇತ್ರದಲ್ಲೇ ಓಡಾಡಿಕೊಂಡಿರುವ ತಾವು ನಿಮ್ಮ ಭಾಗದ ರೈತರ ಹಿತಾಸಕ್ತಿಯನ್ನಾದರೂ ಕಾಪಾಡಿ.
[10/12, 7:48 PM] Kpcc official: ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಾತುಗಳು...
[10/12, 7:48 PM] Kpcc official: *ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*

*ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:*

ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುವಾಗ ಸೋನಿಯಾ ಗಾಂಧಿ ಅವರು ಸಂಸತ್ತಿಗೆ ಆಗಮಿಸಬೇಕು, ನಿಮ್ಮನ್ನು ಕೇಂದ್ರದ ಮಂತ್ರಿ ಮಾಡಲಾಗುವುದು ಎಂಬ ಭರವಸೆ ನೀಡಿದರು. ನಾನು ಈಗಷ್ಟೇ ಶಾಸಕನಾಗಿದ್ದು, ಮತ್ತೆ ಚುನಾವಣೆ ಎದುರಿಸಲು ಬಯಸುವುದಿಲ್ಲ ಎಂದು ಹೇಳಿದೆ. ಆಗ ಅವರು ನಿಮ್ಮ ಮೇಲೆ ವಿಶ್ವಾಸವಿದೆ, ಹೀಗಾಗಿ ಸ್ಪರ್ಧಿಸಬೇಕು ಎಂದರು. ಆಗ ಕಾಂಗ್ರೆಸ್ ಸರ್ಕಾರ ಬಂದಾಗ ಹೈದರಾಬಾದ್ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡುವುದಾದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದೆ. ಆಗ ಅವರು ಇದು ಸಾಧ್ಯವೇ ಎಂದು ಕೇಳಿದರು. ಹಿಂದಿನ ಗೃಹ ಸಚಿವರಾದ ಅಡ್ವಾಣಿ ಅವರು ತಿರಸ್ಕರಿಸಿದ್ದು, ನಾವು ಈ ಬಗ್ಗೆ ಆಶ್ವಾಸನೆ ನೀಡುವುದು ಸರಿಯಲ್ಲ ಎಂದು ಕೆಲವರು ಅವರಿಗೆ ಸಲಹೆ ನೀಡಿದ್ದರು. ಆಗ ನಾನು ಅವರನ್ನು ಭೇಟಿ ಮಾಡಿ ಬಿಜೆಪಿಯವರು ತಿರಸ್ಕರಿಸಿದ ಮಾತ್ರಕ್ಕೆ ಅದು ಅಂತಿಮವಲ್ಲ. ನಾವು ಅದಕ್ಕೆ ಪುನರ್ಜೀವ ನೀಡಬಹುದು ಎಂದು ಹೇಳಿದೆ. ಆಗ ಅವರು ಇದೇ ಮೈದಾನದಲ್ಲಿ ನೀವು ಖರ್ಗೆ ಅವರನ್ನು ಆರಿಸಿದರೆ ಈ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡಿಯೇ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಹೀಗಾಗಿ ನಾನು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದೆ. 

ಕೊಟ್ಟ ಮಾತು ಉಳಿಸಲು ಸತತ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಇರಲಿಲ್ಲ. ಕೇವಲ 208 ಸ್ಥಾನಗಳು ಮಾತ್ರ ಇದ್ದವು. ಆದರೆ ಆ ತಿದ್ದುಪಡಿಗೆ 381 ಸಂಸದರ ಬೆಂಬಲ ಅಗತ್ಯವಿತ್ತು. ನಮ್ಮ ಮೈತ್ರಿ ಪಕ್ಷಗಳ ಮುಖಂಡರಿಗೆ ಕರೆ ಮಾಡಿ ಹೇಳಿ, ನಾನು ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದೆ. ನಂತರ ಸೋನಿಯಾ ಗಾಂಧಿ ಅವರು ಕೆಲವರಿಗೆ ದೂರವಾಣಿ ಕರೆ ಮೂಲಕ ಸಹಕಾರ ನೀಡುವಂತೆ ಕೇಳಿದರು. ಉಳಿದಂತೆ ನಾನು ಎಲ್ಲ ಪಕ್ಷಗಳ ಮುಖಂಡರು, ಸಂಸದರ ನಿವಾಸ, ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿ ಸಂಖ್ಯಾಬಲವನ್ನು ಕ್ರೋಢೀಕರಿಸಿದೆ. ನಂತರ 2013ರಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಂಡೆ. ನಂತರ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದ ಕಾರಣ ಹೆಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉಪಸಮಿತಿ ರಚನೆ ಮಾಡಲಾಯಿತು. ದೇಶದ ಇತಿಹಾಸದಲ್ಲಿ ಯಾರೂ ಇಷ್ಟು ವೇಗವಾಗಿ ಸಂವಿಧಾನ ತಿದ್ದುಪಡಿ ಮಾಡಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ. 

ಇದನ್ನು ಸಾಧ್ಯವಾಗುವಂತೆ ಮಾಡಲು ನನಗೆ ಶಕ್ತಿ ನೀಡಿದ್ದು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ. ಇದರಿಂದ ಸಾವಿರಾರು ಜನರಿಗೆ ಸರ್ಕಾರಿ ಹುದ್ದೆ, ವಿದ್ಯಾರ್ಥಿಗಳಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಸಿಗುತ್ತಿದೆ. ನಮ್ಮ ಸರ್ಕಾರ ಇದ್ದಾಗ 1500 ಕೋಟಿಯನ್ನು ಈ ಭಾಗಕ್ಕೆ ನೀಡುವುದಾಗಿ ಹೇಳಿದ್ದೆವು. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ 150 ಕೋಟಿ ರು. ನೀಡಲಿಲ್ಲ, ಬದಲಿಗೆ ಅಲ್ಲಿನ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದರು. ಇದು ಉತ್ತರ ಕರ್ನಾಟಕದ ಭಾಗವೇ,  ಬೊಮ್ಮಾಯಿ ಅವರು ಮಾತೆತ್ತಿದರೆ ನಾವು ಉತ್ತರ ಕರ್ನಾಟಕದವರು ಎಂದು ಹೇಳುತ್ತಾರೆ. ಹಾಗಾದರೆ ನಾವು ಉತ್ತರ ಕರ್ನಾಟಕದ ಭಾಗವಲ್ಲವೇ? ಕರ್ನಾಟಕದ ಹಿಂದುಳಿದ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹಣ ನೀಡದಿದ್ದರೆ ಅದು ಯಾರ ತಪ್ಪು? 

ಭ್ರಮೆಗಳಿಂದ ಹೊಟ್ಟೆ ತುಂಬುವುದಿಲ್ಲ. ಜನರಿಗೆ ದುಡಿಯಲು ಕೆಲಸ ಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಹುದ್ದೆಗಳಿವೆಯಾದರೂ ಯಾಕೆ ತುಂಬುತ್ತಿಲ್ಲ. ಜನ ಕೂಡ ಇವರನ್ನು ಯಾಕೆ ಪ್ರಶ್ನಿಸುತ್ತಿಲ್ಲ? 50 ಸಾವಿರ ಜನರಿಗೆ ಉದ್ಯೋಗ ನೀಡಬಹುದು. ನಮ್ಮ ಸರ್ಕಾರ ಬರುತ್ತದೆ. ಇದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಕೇವಲ ಹೈದರಾಬಾದ್ ಕರ್ನಾಟಕ ಮಾತ್ರವಲ್ಲ ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬುತ್ತದೆ. ಇದನ್ನು ಮಾಡದಿದ್ದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. 

ನಾನು ಗುಜರಾತ್ ಗೆ ಹೋಗಿದ್ದಾಗ ಮೋದಿ ಅವರು 70 ಸಾವಿರ ಜನರಿಗೆ ಸರ್ಟಿಫಿಕೇಟ್ ಹಂಚುವ ಫೋಟೋ ಟಿವಿಯಲ್ಲಿ ನೋಡಿದೆ. ಸರ್ಕಾರಿ ಹುದ್ದೆಗಳನ್ನು ತುಂಬಿ ಅದರ ನೇಮಕಾತಿ ಪತ್ರವನ್ನು ಪ್ರಧಾನಿಗಳು ಕೊಟ್ಟು ಪ್ರಚಾರ ಪಡೆದರು. ಅದೇ ರೀತಿ ಗುಜರಾತಿನಲ್ಲೂ ಮಾಡಿದ್ದಾರೆ. ದೇಶಾದ್ಯಂತ 30 ಲಕ್ಷ ಸರ್ಕಾರಿ, ಅರೆ ಸರ್ಕಾರಿ, ಸೇನೆ, ಪೊಲೀಸ್, ಬ್ಯಾಂಕ್ ಗಳಲ್ಲಿನ ಹುದ್ದೆಗಳು ಖಾಲಿ ಇವೆ. ಇದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿ ಪಡೆದಿರುವ ಮಾಹಿತಿ. ರಾಜ್ಯದಲ್ಲೂ ಅದೇ ರೀತಿ ಇದೆ. 70 ಸಾವಿರ ನೇಮಕಾತಿ ಪತ್ರ ನೀಡುವ ಫೋಟೋ ಪ್ರಚಾರ ಪಡೆಯುವವರು 30 ಲಕ್ಷ ಖಾಲಿ ಹುದ್ದೆ ಇರುವುದನ್ನು ತೋರುವುದಿಲ್ಲ. ಈ ಹುದ್ದೆ ತುಂಬಿದರೆ 30 ಲಕ್ಷ ಕುಟುಂಬದಲ್ಲಿ 2 ಕೋಟಿ ಜನರ ಜೀವನಕ್ಕೆ ಆಸರೆಯಾಗಲಿದೆ. ಇದನ್ನು ಬಿಜೆಪಿ ಮಾಡುತ್ತಿಲ್ಲ.

ಅವರು ಹೇಳಿದ ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಹೋದವೋ ಗೊತ್ತಿಲ್ಲ. ಸುಳ್ಳು ಭರವಸೆ ನೀಡಿದರು. ಯಾವುದೂ ಸಾಧ್ಯವಾಗಿಲ್ಲ. ಆದರೆ ನಾವು ನೀಡುತ್ತಿರುವ ಭರವಸೆ ಈಡೇರಿಸುತ್ತೇವೆ.

ನಾವು ಈ ಭಾಗಕ್ಕೆ 10 ಅಂಶಗಳ ಕಾರ್ಯಕ್ರಮ ಮಾಡಿದ್ದೇವೆ. ಮೊದಲ ವರ್ಷ ಈ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ, ನಂತರ ಪ್ರತಿ ವರ್ಷ ಈ ಅನುದಾನದ ಮೊತ್ತ ಏರಿಕೆಯಾಗಲಿದೆ.

ಈ ಭಾಗದ ಜನರಿಗಾಗಿ ನೂತನ ಕೈಗಾರಿಕೆ ನೀತಿ ಮಾಡುತ್ತೇವೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 1 ಲಕ್ಷ ಹುದ್ದೆಗಳನ್ನು ಸೃಷ್ಟಿಸಿ 7 ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ.

ಕೃಷ್ಣ ಜಲಭಾಗ್ಯ, ಗೋದಾವರಿ ಭಾಗದ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು. 

ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಮ್ಮ ಭರವಸೆ ಈಡೇರಿಸಲು ಸಮಿತಿ ಮಾಡಿ ಅನುಷ್ಠಾನಕ್ಕೆ ತರುತ್ತೇವೆ.

ಕೇಂದ್ರಕ್ಕೆ ಮನವಿ ಮಾಡಿ ಐಐಟಿ, ಏಮ್ಸ್ ಸಂಸ್ಥೆಗಳು ಕಲ್ಯಾಣ ಕರ್ನಾಟಕಕ್ಕೆ ನೀಡುವಂತೆ ಕೋರುತ್ತೇವೆ.

ಪ್ರತಿ ಜಿಲ್ಲೆಗಳಲ್ಲಿ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಹಿಳೆಯರಿಗೆ ಪದವಿ ಕಾಲೇಜುಗಳ ಸ್ಥಾಪನೆ ಮಾಡುತ್ತೇವೆ.

ಎಲ್ಲಾ ಕುಟುಂಬಗಳಿಗೆ 5 ವರ್ಷಗಳಲ್ಲಿ ಮನೆಗಳ ನಿರ್ಮಾಣ ಮಾಡುತ್ತೇವೆ.

ಪ್ರತಿ ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡಲಾಗುವುದು.

ನಾವು ನೀಡುವ ವಚನ ಅನುಷ್ಠಾನಕ್ಕೆ ತರಲು ಶ್ರಮಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರ ಆರಿಸಬೇಕು. ಅಧಿಕಾರ ಇದ್ದರೆ ನಾವು ಕೊಟ್ಟ ಭರವಸೆ ಜಾರಿಗೆ ತರಬಹುದು. ನೀವು ಅಧಿಕಾರ ನೀಡದಿದ್ದರೆ ರಸ್ತೆ, ಕಟ್ಟಡಗಳ ಸ್ಥಿತಿ ಏನಾಗಿದೆ ಎಂದು ನೀವೇ ನೋಡಿ. ನೀವು ನಮಗೆ ಶಕ್ತಿ ನೀಡುತ್ತೀರಿ ಎಂಬ ಭರವಸೆ ನನಗಿದೆ. ಕೆಲವರ ತಲೆಯಲ್ಲಿ ಬಿಜೆಪಿ ಬಗ್ಗೆ ಯಾಕೆ ಆಸಕ್ತಿ ಇದೆಯೋ ಗೊತ್ತಿಲ್ಲ. ಅವರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ಬಂಡವಾಳ, ಕೈಗಾರಿಕೆ ತಂದಿಲ್ಲದಿದ್ದರೂ ಮೋದಿಯವರ ಹೆಸರು ಜಪಿಸುತ್ತಿದ್ದಾರೆ. ಹೀಗಾಗಿ ವೇದಿಕೆ ಮೇಲಿರುವ ಎಲ್ಲ ಮುಖಂಡರು ಬಿಜೆಪಿ, ಮೋದಿ, ಶಾ ಅವರು ಹೇಗೆ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುವಂತೆ ನೀವು ಜನರ ಬಳಿ ಹೋಗಿ ಪ್ರಚಾರ ಮಾಡಬೇಕು. ನಾವು ಒಂದಾಗಿ ಕೆಲಸ ಮಾಡದಿದ್ದರೆ ನಮ್ಮನ್ನು ನಂಬಿದ ಜನರಿಗೆ ಮೋಸ ಮಾಡಿದಂತಾಗುತ್ತದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರಿಗೆ ಯಾವ ಅಧಿಕಾರ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರು ಸಿಎಂ ಆಗುತ್ತಾರೆ, ಮಂತ್ರಿ ಆಗುತ್ತಾರೆ ಎಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಈಗ ನಾವು ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ದಯಮಾಡಿ ಎಲ್ಲರೂ ಒಂದಾಗಬೇಕು. ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್ ಹಾಗೂ ಎಂ.ಬಿ ಪಾಟೀಲ್ ಅವರು ಹೇಳಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾವು ಹಿಮಾಚಲ ಪ್ರದೇಶದಲ್ಲಿ 10 ಅಂಶಗಳ ಕಾರ್ಯಕ್ರಮ ನೀಡಿದ್ದೆವು. ಅದಕ್ಕಾಗಿ ನಾವು ಅಲ್ಲಿ ಗೆಲುವು ಸಾಧಿಸಿದ್ದೇವೆ. ನಾಳೆ ಅಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣವಚನ ನಡೆಯಲಿದೆ. ಇದು ರಾಜ್ಯದಲ್ಲೂ ಆಗಬೇಕು. ನನಗೆ ಕಾಂಗ್ರೆಸ್ ಪಕ್ಷ ಬೇಕು. ಕಾಂಗ್ರೆಸ್ ಸರ್ಕಾರ ಬೇಕು. ನೀವು ಯಾರೇ ಆದರೂ ನಾನು ಬೇಡ ಎನ್ನುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಮನವಿ ಮಾಡುತ್ತೇನೆ.

*ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:*

ಈ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 11 ವರ್ಷಗಳ ಕಾಲ ಹಾಕಿ ಆಟವಾಡಿದ್ದಾರೆ. ಆದರೆ ಇಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಇದೇ ಮೈದಾನದಲ್ಲಿ ನಿಮ್ಮ ಮುಂದೆ ಬಂದಿದ್ದಾರೆ. ಖರ್ಗೆ ಅವರ ಪರಿಶ್ರಮ, ಕಾರ್ಯವೈಖರಿ, ದಲಿತರು, ಶೋಷಿತರು, ಅಲ್ಪಸಂಖ್ಯಾತರು, ಜನಸಾಮಾನ್ಯರ ಬಗ್ಗೆ ಅವರಿಗೆ ಇರುವ ಕಾಳಜಿಯಿಂದ ಕಲಬುರ್ಗಿಯ ಕಾರ್ಮಿಕನ ಮಗ ಇಂದು ದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ದೇಶದ ಕಾಂಗ್ರೆಸ್ ಪಕ್ಷದ ನೀತಿಯನ್ನು ಕಲ್ಯಾಣ ಕರ್ನಾಟಕದ ಪುತ್ರ ನಿರ್ಧರಿಸುತ್ತಾರೆ.

40 % ಸರ್ಕಾರ ಈ ಭಾಗದ ಯುವ ಜನರ ಭವಿಷ್ಯವನ್ನು ಮಾರಾಟಕ್ಕಿಟ್ಟಿದೆ. ಇದನ್ನು ಬದಲಿಸಬೇಕಾದರೆ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಹೊಸ ದಿಕ್ಕು ನೀಡಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡಲಾಗುವುದು ಎಂಬ ವಿಚಾರವನ್ನು ಇಂದು ಖರ್ಗೆ ಅವರು ನಿಮ್ಮ ಮುಂದೆ ಇಡಲಿದ್ದಾರೆ. 

*ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್:*

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೊಂದು ಐತಿಹಾಸಿಕ ದಿನ. ನಾನು ಸಾಕಷ್ಟು ಸಮಾರಂಭ ನೋಡಿದ್ದೇನೆ. ಆದರೆ ಇಂದು ಎಂತಹ ಗಳಿಗೆ ಎಂದರೆ ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪೈಗಂಬರ್ ಅವರು ದಿವ್ಯ ವಾಣಿ ಕೇಳಿದ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭಿಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ ಗಳಿಗೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯಿಂದ ರಾಜ್ಯದಲ್ಲಿ 2023ರಲ್ಲಿ ಮತ್ತು 2024ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.

ನಾವು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆವು. ನಾನು ಸದಾ ಸಾಧನೆಗಳ ಬಗ್ಗೆ ಮಾತನಾಡುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. 

ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದಲ್ಲಿ ಹುಟ್ಟಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಇತಿಹಾಸ ಮರೆಯುವವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ನಮ್ಮ ಜೀವನ ಸಾರ್ಥಕವಾಗಬೇಕಾದರೆ ನಾವು ಎಷ್ಟು ಸುಖವಾಗಿ ಇರುತ್ತೇವೆ ಎಂಬುದಕ್ಕಿಂತ ನಮ್ಮಿಂದ ಎಷ್ಟು ಜನ ನೆಮ್ಮದಿಯಿಂದ ಇದ್ದಾರೆ ಎಂಬುದು ಮುಖ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ಕಲ್ಯಾಣ ಕರ್ನಾಟಕದಲ್ಲಿ ಇಎಸ್ಐ ಆಸ್ಪತ್ರೆ, ಬುದ್ಧ ವಿಹಾರ್ ಎಲ್ಲವೂ ನಿಮ್ಮ ಕಣ್ಣಿಗೆ ಕಾಣುತ್ತದೆ. ನಾನು ಹಾಗೂ ಖರ್ಗೆ ಅವರು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೆವು. ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ ಚಿಂತನೆ ನಡೆಸಿದಾಗ, ಈ ಯೋಜನೆಯನ್ನು ಕಲ್ಯಾಣ ಕರ್ನಾಟಕದ ಭಾಗದಿಂದ ಆರಂಭಿಸಬೇಕು ಎಂದು ಆಗ್ರಹಿಸಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಆಗಿದ್ದ ಅನ್ಯಾಯಕ್ಕೆ ನ್ಯಾಯ ಒದಗಿಸಿದರು. 

50 ವರ್ಷಗಳ ರಾಜಕೀಯ ಜೀವನದಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಹಿಡಿದು ಇಷ್ಟು ದೊಡ್ಡ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಗಾಂಧಿಜೀ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಬಾಬು ಜಗಜೀವನ್ ರಾಮ್ ಅವರು ಏರಿದ್ದ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮ ಮನೆಮಗ ಖರ್ಗೆ ಅವರು ಕೂತಿದ್ದಾರೆ. 

ಶಾಸಕರು, ಸಂಸದರು, ಮುಖ್ಯಮಂತ್ರಿಗಳನ್ನು ಸೃಷ್ಟಿ ಮಾಡುವ ಶಕ್ತಿಯಾಗಿ ಖರ್ಗೆ ಅವರನ್ನು ನೀವು ಬೆಳೆಸಿದ್ದೀರಿ. ಅವರ ಶಕ್ತಿಗಾಗಿ ಯಾರೆಲ್ಲಾ ಹಗಲಿರುಳು ಶ್ರಮಿಸಿದ್ದೀರಿ, ನಿಮಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ. ಇದರ ಹಿಂದೆ ತ್ಯಾಗ ಬಲಿದಾನ ಇದೆ. ದೇವರು ನಮಗೆ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ದೇವರು ನಮಗೆ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಖರ್ಗೆ ಅವರಿಗೆ ಸಿಕ್ಕ ಅವಕಾಶದಲ್ಲಿ ರಾಜ್ಯಕ್ಕೆ ಶಕ್ತಿಯನ್ನು ನೀಡಿದ್ದಾರೆ. ಅಡ್ವಾಣಿ, ವಾಜಪೇಯಿ ಅವರು ಮಾಡಲಾಗದನ್ನು ಖರ್ಗೆ ಅವರು ಮಾಡಿದ್ದಾರೆ.

ನಮಗೆ ಬಸವಣ್ಣ, ಕನಕದಾಸರು, ಕುವೆಂಪು, ಸಂತ ಶಿಶುನಾಳ ಶರೀಫರ ಕರ್ನಾಟಕ ಬೇಕು. ಆದರೆ ಬಿಜೆಪಿ ಸೃಷ್ಟಿಸಿರುವ ಭ್ರಷ್ಟಾಚಾರ, 40% ಕರ್ನಾಟಕ ಬೇಡ. ಇದಕ್ಕಾಗಿ ನಮ್ಮ ಎಲ್ಲ ನಾಯಕರು ಖರ್ಗೆ ಅವರ ಮುಖಂಡತ್ವದಲ್ಲಿ ಶ್ರಮಿಸಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ನಂತರ 371ಜೆ ಅಡಿಯಲ್ಲಿ ಎಲ್ಲ ಸಂವಿಧಾನಿಕ ನಿರ್ಣಯ ಜಾರಿಗೆ ತಂದು ಈ ಭಾಗದ ಯುವಕರ ಜೀವನ ಹಸಿರು ಮಾಡುತ್ತೇವೆ. ಈ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಕೇವಲ 2 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಿಸಲು ಈ ಭಾಗದ ಎಲ್ಲ ಜನರಿಗೆ ಆರ್ಥಿಕ ನೀತಿ, ಭೂಮಿ ಹಂಚಿಕೆ, ತೆರಿಗೆ ವಿನಾಯಿತಿ, ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಕೈಗಾರಿಕ ನೀತಿ ರೂಪಿಸಲಾಗುವುದು. ಖರ್ಗೆ ಅವರ ಆದೇಶದಂತೆ ಈ ಭಾಗದಲ್ಲಿ ಖಾಸಗಿ ವಲಯದ 1 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡುತ್ತೇವೆ.

ಈ ಐತಿಹಾಸಿಕ ಕಾರ್ಯಕ್ರಮ ಮಾಡಿದ ಎಲ್ಲ ಕಾರ್ಯಕರ್ತರು ಮುಖಂಡರಿಗೆ ತುಂಬು ಹೃದಯದ ಅಭಿನಂದನೆ.

*ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:*

ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರು ಹಾಗೂ ರಾಜ್ಯದ ಜನತೆ ಬಹಳ ಭವ್ಯ ಸ್ವಾಗತ ನೀಡಿದ್ದೀರಿ. ಅವರನ್ನು ಅಭಿಮಾನ ಪ್ರೀತಿಯಿಂದ ಬರಮಾಡಿಕೊಂಡಿದ್ದೀರಿ. ನಿಮ್ಮ ಉತ್ಸಾಹ ನೋಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಬರಲಿದೆ ಎಂದು ಭಾವಿಸಿದ್ದೇನೆ. ಅವರಿಗೆ ದೊಡ್ಡ ಪ್ರಮಾಣದ ಅಭಿನಂದನೆ ಸಲ್ಲಿಸಿದ್ದೀರಿ. ನಾವೆಲ್ಲರೂ ನಿಮ್ಮ ಸಂತೋಷದಲ್ಲಿ ನಾವು ಭಾಗಿಯಾಗಿ ಖರ್ಗೆ ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆ ಹೇಳಲು ಆಗಮಿಸಿದ್ದೇವೆ.

ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಬಯಸಿದವರಲ್ಲ. ಆ ಅಧ್ಯಕ್ಷ ಸ್ಥಾನ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಮಹತ್ತರವಾದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವರ ನೇತೃತ್ವದಲ್ಲಿ ಮತ್ತೆ ನವಚೈತನ್ಯ ಪಡೆದು ಮತ್ತೆ ಪ್ರಜ್ವಲಿಸಿ ಅಧಿಕಾರ ಹಿಡಿಯಲಿದೆ ಎಂದು ನಂಬಿದ್ದೇನೆ. ಖರ್ಗೆ ಅವರಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಸಂಪೂರ್ಣ ಸಹಕಾರವಿದೆ. ಇವರು 50 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಬೇರು ಮಟ್ಟದಿಂದ ಎಐಸಿಸಿ ಅದ್ಯಕ್ಷ ಸ್ಥಾನದವರೆಗೂ ಬೆಳೆದಿದ್ದಾರೆ. 

ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಗತವೈಭವ ಕಾಣಲಿದೆ ಎಂಬ ವಿಶ್ವಾಸವಿದೆ. ಕರ್ನಾಟಕದಲ್ಲಿ 2023 ಏಪ್ರಿಲ್ ನಲ್ಲಿ ಚುನಾವಣೆ ನಡೆಯಲಿದೆ. ನಿಮ್ಮೆಲ್ಲರ ಉತ್ಸಾಹ ನೋಡಿದಾಗ ರಾಜ್ಯದ ಜನರ ನಾಡಿ ಮಿಡಿತ ನೋಡಿದಾಗ, ಈ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದು ಬಿಜೆಪಿ ಸರ್ಕಾರ ಕಿತ್ತೊಗೆದು ಜನಪರ ಸರ್ಕಾರವನ್ನು ಸ್ಥಾಪಿಸಿದಾಗ ಅದೇ ಖರ್ಗೆ ಅವರಿಗೆ ನೀಡುವ ನಿಜವಾದ ಅಭಿಮಾನ. ಇದಕ್ಕೆ ನೀವೆಲ್ಲರೂ ಸಜ್ಜಾಗಬೇಕು. ಕಲ್ಯಾಣ ಕರ್ನಾಟಕದಲ್ಲಿ 41 ವಿಧಾನಸಭಾ ಸ್ಥಾನಗಳಿದ್ದು, ಕಳೆದ ಬಾರಿ 21 ಸ್ಥಾನ ಗೆದ್ದಿದ್ದೆವು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 35 ಸ್ಥಾನ ಗೆಲ್ಲಬೇಕು. ಅದಕ್ಕೆ ನೀವು ಕಾರಣಕರ್ತರಾಗಬೇಕು ಎಂದು ಮನವಿ ಮಾಡುತ್ತೇನೆ.

ಬಿಜೆಪಿ ಸರ್ಕಾರ ಅನೈತಿಕವಾಗಿ ರಚನೆಯಾಗಿರುವ ಸರ್ಕಾರ, ಜನಾದೇಶದಿಂದ ರಚನೆಯಾಗಿರುವ ಸರ್ಕಾರ ಅಲ್ಲ. ಶಾಸಕರನ್ನು ಹಣದಲ್ಲಿ ಖರೀದಿಸಿದ ಸರ್ಕಾರ. ಅನೈತಕಿತ ಸರ್ಕಾರದಲ್ಲಿ ಅನೈತಿಕತೆ ಮುಂದುವರಿದಿದೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ಸರ್ಕಾರದಲ್ಲಿ ಗುತ್ತಿಗೆದಾರರ ಸಂಘ 40% ಸರ್ಕಾರ ಎಂದು ಕರೆದಿರಲಿಲ್ಲ. ಬೊಮ್ಮಾಯಿ ಅವರ ಸರ್ಕಾರ ಲಂಚದ ಕೂಪವಾಗಿದೆ. ವಿಧಾನಸೌಧದ ಗೋಡೆಗಳು ಲಂಚ ಎಂದು ಪಿಸುಗುಡುತ್ತಿವೆ. ಯಾವುದೋ ಯೋಜನೆ ಕ್ಲಿಯರ್ ಆಗಬೇಕಾದರೆ ಕನಿಷ್ಠ 40% ಕಮಿಷನ್ ನೀಡಬೇಕು. ವರ್ಗಾವಣೆಯಲ್ಲಿ ಕಮಿಷನ್, ಪೋಸ್ಟಿಂಗ್, ಪ್ರಮೋಷನ್ ಗಳಲ್ಲಿ ಕಮಿಷನ್ ನೀಡಬೇಕು. ಇಂದು ಅಧಿಕಾರಿಗಳು ವಿಧಿಇಲ್ಲದೆ ಹಣ ನೀಡಿ ಪೋಸ್ಟಿಂಗ್ ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದೆ. ಇತ್ತೀಚೆಗೆ ಪೊಲೀಸ್ ಇಸ್ ಪೆಕ್ಟರ್ 70-80 ಲಕ್ಷ ನೀಡಿ ಕೆ.ಆರ್ ಪುರಂ ಗೆ ಪೋಸ್ಟಿಂಗ್ ಮಾಡಿಸಿಕೊಂಡಿದ್ದ. ಇದನ್ನು ರಾಜ್ಯದ ಮಂತ್ರಿ ಪೊಲೀಸರ ಜತೆ ಮಾತಾಡಿದ್ದರು. ಇಂತಹ ಭ್ರಷ್ಟ ಸರ್ಕಾರ ಇರಬೇಕಾ? ದಯಮಾಡಿ ಈ ಸರ್ಕಾರ ಕಿತ್ತೊಗೆದರೆ ರಾಜ್ಯ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯುತ್ತದೆ. ಭ್ರಷ್ಟಾಚಾರ ತೊಲಗಲಿದೆ. 

ಖರ್ಗೆ ಅವರ ಹೋರಾಟದಿಂದ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತಂದು ಆರ್ಟಿಕಲ್ 371 ಜೆ ಜಾರಿ ಮಾಡಲಾಯಿತು. ಇದಕ್ಕಾಗಿ ಖರ್ಗೆ ಅವರು, ಧರಂ ಸಿಂಗ್, ವೈದ್ಯನಾಥ್ ಪಾಟೀಲ್ ಹೋರಾಟ ಮಾಡಿದರು. ಖರ್ಗೆ ಅವರು ನಿರಂತರವಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ 371ಜೆ ಜಾರಿಗೆ ಕಾರಣಕರ್ತರಾದರು. ಬಿಜೆಪಿ ಅವರು ಕೇವಲ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರು. ಆದರೆ ಯಾವುದೇ ಕಲ್ಯಾಣ ಮಾಡಲಿಲ್ಲ. 

ಬೊಮ್ಮಾಯಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. 371ಜೆ ಆದನಂತರ ನಮ್ಮ ಸರ್ಕಾರ ಅಧಿಕಾರದಲ್ಲಿತ್ತು, ನಾನು ಸಿಎಂ ಆಗಿದ್ದೆ. ಹೆಚ್.ಕೆ ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಅವರ ಅದ್ಯಕ್ಷತೆಯಲ್ಲಿ ಸಮಿತಿ ಮಾಡಿ, 371 ಜೆ ಜಾರಿ ಬಗ್ಗೆ ವರದಿ ನೀಡುವಂತೆ ಕೇಳಿದೆ. ನಂತರ ಈ ವರದಿ ಸಂಪೂರ್ಣವಾಗಿ ಒಪ್ಪಿಕೊಂಡು ಜಾರಿಗೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ವಾಜಪೇಯಿ ಅವರ ಸರ್ಕಾರವಿತ್ತು. ಅಡ್ವಾಣಿ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು. ಆಗ ಅವ್ರಿಗೆ ಪತ್ರ ಬರೆದು 371ಜೆ ಜಾರಿಗೆ ಮನವಿ ಮಾಡಿದ್ದರು. ಆದರೆ ಇದು ಸಾಧ್ಯವಿಲ್ಲ ಎಂದು ಬಿಜೆಪಿ ಮಹಾನಾಯಕ ಹೇಳಿದ್ದರು.

371ಜೆ ಜಾರಿ ನಂತರ ಹೈದರಾಬಾದ್ ಕರ್ನಾಟಕದಲ್ಲಿ ಮೀಸಲಾತಿ ನೀಡಿ ಸರ್ಕಾರಿ ನೇಮಕಾತಿ ಮಾಡಲಾಯಿತು. ಈ ಭಾಗದ ಯುವಕರು ಇಂಜಿನಿಯರ್, ಡಾಕ್ಟರ್, ಉಪನ್ಯಾಸರಕು, ಕೆಎಎಸ್ ಅಧಿಕಾರಿಗಳಾಗಲು 371ಜೆ ಕಾರಣ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಭಾಗದ ಜನರಿಗೆ 36 ಸಾವಿರ ಹುದ್ದೆ ನೀಡಿದೆವು. ಬಿಜೆಪಿಯ ಜನವಿರೋಧಿ ಸರ್ಕಾರ ಇವತ್ತಿನವರೆಗೂ ಒಂದೇಒಂದು ಹುದ್ದೆ ತುಂಬಲಿಲ್ಲ. ನಿಮ್ಮ ಜನ ಡಾಕ್ಟರ್, ಇಂಜಿನಿಯರ್, ಶಿಕ್ಷಕರು, ಉಪನ್ಯಾಸಕರು, ತಹಶೀಲ್ದಾರ್, ಆಯುಕ್ತರಾಗಬಾರದೆ? ಇದು ಸಾಧ್ಯವಾಗಬೇಕಾದರೆ ಬಿಜೆಪಿ ತೊಲಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಬಾಕಿ ಇರುವ ಉದ್ಯೋಗ ತುಂಬಿ ಪ್ರತಿ ವರ್ಷ 5 ಸಾವಿರ ಕೋಟಿಯನ್ನು ಈ ಭಾಗದ ಅಭಿವೃದ್ಧಿಗೆ ನೀಡಲಾಗುವುದು. ಇಂದು ಶಾಸಕರನ್ನು ಕೆಕೆಆರ್ಡಿಬಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾವು ಕ್ಯಾಬಿನೆಟ್ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಇದಕ್ಕೆ ನೀಡಿದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಬೊಮ್ಮಾಯಿ ಅವರು 2 ಸಾವಿರ ಕೋಟಿ, 3 ಸಾವಿರ ಕೋಟಿ ನೀಡುವುದಾಗಿ ಹೇಳುತ್ತಾರೆ ಎಲ್ಲಿದೆ ಅವರು ಹೇಳಿದ ಅನುದಾನ? 

ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವುದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದಾಗಿದೆ. ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡುತ್ತೇನೆ.

*ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ:*   

ಖರ್ಗೆ ಅವರು 50 ವರ್ಷಗಳ ರಾಜಕೀಯ ಪಯಣದಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಸಾಗಿದೆ. ಅವರಿಗೆ ಈ ಸ್ಥಾನ ಸಿಕ್ಕಿರುವುದು ಸಂತೋಷದ ವಿಚಾರ. ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದು, ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇಂದು ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ನಮ್ಮ ಮುಂದಿರುವ ಸವಾಲು ಎಂದರೆ ಅವರ ನೇತೃತ್ವದಲ್ಲಿ 2023ರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಿಮ್ಮೆಲ್ಲರ ಆಶೀರ್ವಾದ ಖರ್ಗೆ ಅವರು ಹಾಗೂ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದು ಭಾವಿಸಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಪಕ್ಷಕ್ಕೆ ಶಕ್ತಿ ತುಂಬೋಣ.

*ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್:*

ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಿಸಿ 9 ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರುರಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. 2 ಬಾರಿ ಲೋಕಸಭೆ ಹಾಗೂ ಹಾಲಿ ರಾಜ್ಯಸಭೆ ಸದಸ್ಯರಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. 

ಆರ್ಟಿಕಲ್ 371ಜೆ ವಿಚಾರದಲ್ಲಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ, ಉಪಪ್ರಧಾನಿಯಾಗಿದ್ದ ಲಾಲಕೃಷ್ಣ ಅಡ್ವಾಣಿ ಅವರು ಈ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಯಾವುದನ್ನು ಅಸಾಧ್ಯ ಎಂದು ಹೇಳಿದ್ದರೋ ಅದನ್ನು ಸಾಧ್ಯ ಮಾಡಿದವರು ಮಲ್ಲಿಕಾರ್ಜುನ ಖರ್ಗೆ. ಈ ಭಾಗದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ತಂದುಕೊಟ್ಟವರು ಖರ್ಗೆ ಅವರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಬೇಕಾದನ್ನು ನೀಡುವ ಕಲ್ಪವೃಕ್ಷ, ಕಾಮಧೇನು ಎಂದು ಪೂಜೆ ಮಾಡುತ್ತೇವೆ. ಅದೇ ರೀತಿ ಖರ್ಗೆ ವರು ಸಹ ಕಲ್ಪವೃಕ್ಷದಂತೆ. ಸಚಿವರಾಗಿ ಹಲವು ಜನಪರ ಯೋಜನೆ ಮಾಡಿದ್ದಾರೆ. ಲೋಕಸಭೆ ಸದಸ್ಯರಾಗಿ ಕಾರ್ಮಿಕರ ಸಚಿವರಾಗಿ ಕಾರ್ಮಿಕರ ತೊಂದರೆ ಅರಿತು ಪರಿಹಾರ ನೀಡುವ ಪ್ರಯತ್ನ ಮಾಡಿದ್ದಾರೆ. ಎಲ್ಲ ರೀತಿಯ ಸೌಲಭ್ಯ ನೀಡಲು ಕಾರ್ಮಿಕ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ತಂದರು. 

ಕಲಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಿ, ಕಾರ್ಮಿಕರ ಮಕ್ಕಳು ಮೆಡಿಕಲ್ ಓದಲು ಈ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಆರಂಭಿಸಿದರು. ಅವರ ಜೀವನ ಉದ್ದಕ್ಕೂ ನಿಷ್ಠೆ, ಬದ್ಧತೆ, ಸಾಮಾಜಿಕ ನ್ಯಾಯ, ಬುದ್ಧ, ಬಸವ, ಅಂಬೇಡ್ಕರ್ ಅವರು ತತ್ವದ ಮೇಲೆ ನಂಬಿಕೆ ಇಟ್ಟಿರುವ ನಾಯಕ ಖರ್ಗೆ ಅವರು. ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುತ್ತೇವೆ. 2024ರಲ್ಲಿ ಅವರ ಅಧ್ಯಕ್ಷತೆಯಲ್ಲಿ ಲೋಕಸಭೆ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ಬರಲಿದೆ. 

*ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:*

ಕರ್ನಾಟದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತಹ ಇತಿಹಾಸವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಸೃಷ್ಟಿಸಿದ್ದಾರೆ. ಈ ಇತಿಹಾಸ ಎಲ್ಲ ಕಾಂಗ್ರೆಸಿಗರಿಗೂ ಸಿಗುವ ಅವಕಾಶವಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನ ಎಂದರೆ ಸಾಮಾನ್ಯ ಹುದ್ದೆ ಅಲ್ಲ. ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲರು, ಸುಭಾಷ್ ಚಂದ್ರ ಬೋಸ್, ಪಂಡಿತ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ವಹಿಸಿಕೊಂಡಿದ್ದ ಜವಾಬ್ದಾರಿಯನ್ನು ಖರ್ಗೆ ಅವರು ವಹಿಸಿಕೊಂಡಿದ್ದಾರೆ.

ಈ ಸಮಾವೇಶಕ್ಕೆ ಕಲ್ಯಾಣ ಕ್ರಾಂತಿ ಎಂದು ಹೆಸರಿಟ್ಟಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದಲ್ಲಿ ಈಗಾಗಲೇ ಸಾಕಷ್ಟು ಕ್ರಾಂತಿಗಳನ್ನು ಮಾಡಿದ್ದಾರೆ. ಸಂವಿಧಾನದಲ್ಲಿ 371ಜೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕ್ರಾಂತಿ ಮಾಡಿ ತೋರಿಸಿದ್ದಾರೆ. ನಿಮ್ಮ ಆಶೀರ್ವಾದದಿಂದ ಈಗ ಖರ್ಗೆ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಕಾಂಗ್ರೆಸ್ ನಾಯಕರು ಖರ್ಗೆ ಅವರತ್ತ ತಿರುಗಿ ನೋಡುತ್ತಿದ್ದಾರೆ. 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರ ಹೋರಾಟ ಸೋಲಿಲ್ಲದ ಸರದಾರನ ಹೋರಾಟವಾಗಿದೆ. ಈ ಸರದಾರನ ಹೋರಾಟ ದೆಹಲಿಯ ಸುಳ್ಳಿನ ಸರ್ಕಾರದ ವಿರುದ್ಧದ ಹೋರಾಟವಾಗಿದೆ. ಅದಕ್ಕೆ ನಾವು ನೀವೆಲ್ಲ ಅವರ ಹೋರಾಟದಲ್ಲಿ ಕೈಜೋಡಿಸಬೇಕು. ಈ ಹೋರಾಟ ಸಾಮಾನ್ಯ ಹೋರಾಟವಲ್ಲ. ಖರ್ಗೆ ಅವರ ಮೇಲೆ ಸಾಕಷ್ಟು ದೊಡ್ಡ ಜವಾಬ್ದಾರಿ ಇದೆ. 

ದೇಶದ ಪ್ರಧಾನಿಗಳಾದ ಮೋದಿ ಅವರು ಗುಜರಾತ್ ಗೆದ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿವೆ. ರಾಜ್ಯದಲ್ಲಿ ಬಂಗಾರಪ್ಪನವರು ಸಿಎಂ ಆಗಿದ್ದಾಗ ಅವರು ಚುನಾವಣೆ ಪ್ರಚಾರಕ್ಕೆ ಹೋಗಿರಲಿಲ್ಲ. ಆದರೆ ಪ್ರಧಾನಿಗಳು ಕೆಲಸ ಮಾಡದ ಕಾರಣ 28 ದಿನಗಳ ಕಾಲ ಗುಜರಾತ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಖರ್ಗೆ ಅವರು ಈ ಪ್ರಾಂಥ್ಯದಲ್ಲಿ ಮಾಡಿರುವ ಅಭಿವೃದ್ಧಿ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಅಪಾರ. ಇಎಸ್ಐ ಆಸ್ಪತ್ರೆ, ರೈಲ್ವೆ ವ್ಯವಸ್ಥೆ ಖರ್ಗೆ ಅವರ ಸಾಧನೆಗೆ ಸಾಕ್ಷಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ನಾವೆಲ್ಲರೂ ಅವರ ಕೈ ಬಲಪಡಿಸಬೇಕಿದೆ.

Post a Comment

Previous Post Next Post