ಜನವರಿ 18, 2023 | , | 9:19PM |
ತ್ರಿಪುರಾದಲ್ಲಿ ಒಂದೇ ಹಂತದಲ್ಲಿ ಫೆಬ್ರವರಿ 16 ರಂದು ವಿಧಾನಸಭೆ ಚುನಾವಣೆ; ಮೇಘಾಲಯ, ನಾಗಾಲ್ಯಾಂಡ್ ಫೆ.27ರಂದು ಚುನಾವಣೆ ನಡೆಯಲಿದೆ
@ECISVEEPಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರದ ಕಸ್ಬಾ ಪೇಠ್ ಮತ್ತು ಚಿಂಚ್‌ವಾಡ್, ಅರುಣಾಚಲ ಪ್ರದೇಶದ ಲುಮ್ಲಾ, ಜಾರ್ಖಂಡ್‌ನ ರಾಮಗಢ, ತಮಿಳುನಾಡಿನ ಈರೋಡ್ ಪೂರ್ವ ಮತ್ತು ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಉಪಚುನಾವಣೆ ಫೆಬ್ರವರಿ 27 ರಂದು ನಡೆಯಲಿದ್ದು, ಮಾರ್ಚ್ 2 ರಂದು ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶದ ದಿನ ಮತ ಎಣಿಕೆ ನಡೆಯಲಿದೆ. ಜನವರಿ 31ರಂದು ಅಧಿಸೂಚನೆ ಹೊರಡಿಸಲಾಗುವುದು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸದಸ್ಯ ಮೊಹಮ್ಮದ್ ಫೈಜಲ್ ಪಿಪಿ ಅನರ್ಹಗೊಂಡ ಕಾರಣ ಲಕ್ಷದ್ವೀಪ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಅಗತ್ಯವಾಗಿತ್ತು ಮತ್ತು ಮಮತಾ ದೇವಿ ಅನರ್ಹಗೊಂಡ ಕಾರಣ ರಾಮಗಢ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.
Post a Comment