ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಶ್ರೀ ಡಿ ಕೆ ಶಿವಕುಮಾರ್ ಹಾಗೂ ಶ್ರೀ ಸಿದ್ದರಾಮಯ್ಯನವರ
*ಜಂಟಿ ಪತ್ರಿಕಾ ಹೇಳಿಕೆ*
ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಇಂದು "ಯುವ ಸಂಭಾಷಣೆ" ಹೆಸರಲ್ಲಿ ಬೆಂಗಳೂರಿನ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ. ಅವರ ಸಂವಾದ ಕಾರ್ಯಕ್ರಮಕ್ಕೂ ಯುವಕರು ನಿರುತ್ಸಾಹ ತೋರಿಸಿದ್ದರ ಪರಿಣಾಮ, ಕಾಲೇಜು ವಿದ್ಯಾರ್ಥಿಗಳನ್ನು ಕೂರಿಸಿ ಪೂರ್ವಯೋಜಿತ ರಂಗ ಪ್ರದರ್ಶನದ ವ್ಯರ್ಥ ಪ್ರಯತ್ನ ನಡೆಸಿರುತ್ತಾರೆ.
"ಚರ್ಚೆ ವಿತ್ ಕಾಮನ್ ಮ್ಯಾನ್ CM" ಹೆಸರಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಕಾಲೇಜಿನಲ್ಲಿ ಚುನಾವಣೆ ಬೇಡ ವಿದ್ಯಾಭಾಸದ ಸಮಯದಲ್ಲಿ ವಿದ್ಯೆ ಕಡೆ ಗಮನ ಕೊಡಿ ಎಂದು ಕಿವಿ ಮಾತು ಹೇಳಿದ್ದಾರೆ. ನಾವೂ ಸಹ ಮುಖ್ಯಮಂತ್ರಿಗೆ ಅದೇ ವಿಚಾರ ತಿಳಿ ಹೇಳಲು ಪ್ರಯ್ನತ್ನಿಸುತ್ತೇವೆ. ಮಾನ್ಯ ಬೊಮ್ಮಯವರೇ ನೀವು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ, ನಿಮ್ಮ ಪಕ್ಷದ ರಾಜಕೀಯ ದಾಳವಾದ ಕೋಮು ರಾಜಕಾರಣ ಕೈ ಬಿಟ್ಟು ರಾಜ್ಯದಲ್ಲಿ ಸುಸ್ಥಿರ ಹಾಗೂ ಸಂವಿಧಾನಬದ್ಧ ಆಡಳಿತ ನೀಡುವ ಕಡೆ ಗಮನ ಹರಿಸಿ, ನಿಮ್ಮ ಪಕ್ಷದ ಶಾಸಕರ, ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ "ವಿರೋಧ ಪಕ್ಷವರ ಕಾಲದಲ್ಲಿ ಆಗಿಲ್ಲವೇ" ಎಂದು ರಾಜಕೀಯ ಮಾಡುವ ಬದಲು, ನಿಮ್ಮ ಅಧಿಕಾರ ಉಪಯೋಗಿಸಿ ತನಿಖೆ ನಡೆಸಿ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಜವಾಬ್ದಾರಿತನ ಪ್ರದರ್ಶಿಸಿ ಎಂದು ತಿಳಿ ಹೇಳಲು ಬಯಸುತ್ತೇವೆ.
ಈ ಬಿಜೆಪಿ ಸರ್ಕಾರ ಯುವಕರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ.
ಈ ಹಿನ್ನಲೆಯಲ್ಲಿ ಈ ರಾಜ್ಯದ ಯುವ ಸಮುದಾಯದ ಪರವಾಗಿ ನೈಜ ಹಾಗೂ ವಾಸ್ತವಿಕವಾದ ಪಂಚ ಪ್ರಶ್ನೆಗಳನ್ನು ಮುಖ್ಯಮಂತ್ರಿಗಳಿಗೆ ಕೇಳಿತ್ತಿದ್ದೇವೆ.
1) ನಿಮ್ಮ ಸರ್ಕಾರ ಬಂದ ನಂತರ ಯುವಕರಿಗೆ ಉದ್ಯೋಗ ಒದಗಿಸಲು ನಡೆಸಿರುವ PSI, KPSC, PWD, TET, JE ಸೇರಿದಂತೆ ಎಲ್ಲಾ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಾಕ ಭ್ರಷ್ಟಾಚಾರ ಆಗಿರುವುದೇಕೆ? ತಪ್ಪು ಮಾಡಿದವರನ್ನು ನಿಮ್ಮಿಂದ ಈವರೆಗೂ ಶಿಕ್ಷೆಗೆ ಗುರಿಪಡಿಸಲಾಗಿಲ್ಲ ಏಕೆ?
2) ಕಳೆದ ಮೂರು ವರ್ಷಗಳಲ್ಲಿ ನಿಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸ್ಕಾಲರ್ ಶಿಪ್/ವಿದ್ಯಾರ್ಥಿ ವೇತನ ನೀಡಿಲ್ಲ ಏಕೆ?
3) ಕಳೆದ ಮೂರು ವರ್ಷಗಳಿಂದ ನಿಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿಲ್ಲ ಏಕೆ?
4) ರಾಜ್ಯದ ಯುವಕರು ನಿರಂತರವಾಗಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ, ಇದಕ್ಕೆ ಪರಿಹಾರವಾಗಿ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಗೆ ನಿಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.5 ಲಕ್ಷ ಉದ್ಯೋಗಗಳನ್ನು ತುಂಬುವ ಕೆಲಸವನ್ನು ಈವರೆಗೂ ಮಾಡಿಲ್ಲವೇಕೆ?
5) ಯುವ ಸಮುದಾಯದ ಶಿಕ್ಷಣಕ್ಕೆ ಮಾರಕವಾಗುವಂತೆ ಪದವಿ ಹಾಗೂ ಉನ್ನತ ಶಿಕ್ಷಣದ ಕಲಿಕಾ ಶುಲ್ಕಗಳನ್ನು ನಿಮ್ಮ ಸರ್ಕಾರ ಏರಿಸಿರುವುದೇಕೆ?
ಈ ಪಂಚ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಜವಾಬ್ದಾರಿಯುವಾತವಾಗಿ, ಈ ನಾಡಿನ ಯುವ ಸಮುದಾಯಕ್ಕೆ ಉತ್ತರದಾಯಿಯಾಗಬೇಕು ಎಂದು ಈ ಮೂಲಕ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ.
ದಿನಾಂಕ : 18 ಜನವರಿ 2023
ಸ್ಥಳ : ಗದಗ
Post a Comment