[02/01, 3:51 PM] +91 83103 04771: 2-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ಶಿವಾಜಿನಗರದಲ್ಲಿ ಬಿಜೆಪಿ ಗೆದ್ದು ರಾಜ್ಯದಲ್ಲಿ 130ಕ್ಕೂ ಹೆಚ್ಚು ಸೀಟು ಪಡೆಯುವುದು ಖಚಿತ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಸಂಘಟನೆ, ಕಾರ್ಯಕರ್ತರ ಶ್ರಮದಿಂದ ಶಿವಾಜಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸೀಟು ಪಡೆಯುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನ ಶಿವಾಜಿನಗರದಲ್ಲಿ ಇಂದು ಬಿಜೆಪಿ ಬೂತ್ ವಿಜಯ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷವು ಬೂತ್ ಮಟ್ಟದ ವಿಜಯ ಸಾಧನೆಗೆ ಈ ಅಭಿಯಾನ ಆರಂಭಿಸಿದೆ. ಶಿವಾಜಿನಗರದಲ್ಲಿ ಬಿಜೆಪಿ ಜೈ ಆದಾಗ ಭಾರತ್ ಮಾತಾಕಿ ಜೈ ಆಗುತ್ತದೆ. ಶಿವಾಜಿನಗರದಲ್ಲಿ ನಾವು ಈ ಹಿಂದೆ ಗೆದ್ದಿದ್ದೆವು. ಅದನ್ನು ಪಕ್ಷದ ಕಾರ್ಯಕರ್ತರು ಮತ್ತೆ ಸಾಧಿಸಿ ತೋರಿಸಬೇಕು. ಸಂಘಟಿತ ಪ್ರಯತ್ನದಿಂದ ಇಲ್ಲಿ ಗೆಲುವು ಸಾಧನೆ ನೂರಕ್ಕೆ ನೂರು ಗ್ಯಾರಂಟಿ. ನಾನು ಈ ಕ್ಷೇತ್ರದ ವಿಜಯಕ್ಕಾಗಿ ಬಂದಿದ್ದೇನೆ ಎಂದು ತಿಳಿಸಿದರು.
ಮೆಟ್ರೋ 2 ನೇ ಹಂತ 2024ಕ್ಕೆ ಪೂರ್ಣವಾಗಲಿದೆ. ಮೂರನೇ ಹಂತಕ್ಕೆ ರೂ. 26 ಸಾವಿರ ಕೋಟಿ ಯೋಜನೆಗೆ ರಾಜ್ಯ ಕ್ಯಾಬಿನೆಟ್ ಅನುಮತಿ ಕೊಟ್ಟಿದೆ. ಸಬರ್ಬನ್ ರೈಲು ಆರಂಭಿಸಿದ್ದು, ಕಾವೇರಿ 5ನೇ ಹಂತದ ನೀರು ಕೊಡಲು ಮುಂದಾಗಿದ್ದು, ನೆನೆಗುದಿಗೆ ಬಿದ್ದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವುದು, ಪುರಾವೆ ಇಲ್ಲದೆ ಆರೋಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ನಮ್ಮದು ದೇಶಭಕ್ತರ ಪಕ್ಷ. ನರೇಂದ್ರ ಮೋದಿಜಿ ಅವರ ರೂಪದಲ್ಲಿ ಸರ್ವಶ್ರೇಷ್ಠ ನಾಯಕತ್ವ ನಮ್ಮ ಪಕ್ಷಕ್ಕಿದೆ. ಆರ್ಥಿಕ- ಸಾಮಾಜಿಕ-ಶೈಕ್ಷಣಿಕ ಪ್ರಗತಿ ಜೊತೆ ವಿಶ್ವಮಾನ್ಯ ಭಾರತ ಮಾಡಿದ ನಾಯಕರು ನರೇಂದ್ರ ಮೋದಿಜಿ ಅವರು ಎಂದು ವಿವರಿಸಿದರು. ಸ್ಮಾರ್ಟ್ ಸಿಟಿ ಯೋಜನೆ ತಂದವರು ಮೋದಿಜಿ. ರೂ.500 ಕೋಟಿಯನ್ನು ಬೆಂಗಳೂರಿಗೆ ಅವರು ನೀಡಿದ್ದಾರೆ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಕುರಿತ ಸತ್ಯವನ್ನು ಜನರಿಗೆ ತಿಳಿಹೇಳಬೇಕು. ಶಾಸಕರು ದಿಕ್ಕು ತಪ್ಪಿಸದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಶಿವಾಜಿನಗರ ಒಂದು ಸ್ಲಂ ಆಗಿತ್ತು. ಇವತ್ತು ಅದು ಅಭಿವೃದ್ಧಿ ಆಗಿದೆ. ಬೆಂಗಳೂರಿಗೆ ಅಭಿವೃದ್ಧಿಗಾಗಿ ರೂ. 8 ಸಾವಿರ ಕೋಟಿಯನ್ನು ನಮ್ಮ ಸರಕಾರ ಕೊಟ್ಟಿದೆ. ಆದರೆ, ಮಳೆ ಹೆಚ್ಚಾದ ಕಾರಣ ಅಲ್ಲಲ್ಲಿ ಹೊಂಡಗಳಾದುದನ್ನೇ ದೊಡ್ಡ ವಿಚಾರವಾಗಿ ವಿಪಕ್ಷಗಳು ಬಿಂಬಿಸಿದವು ಎಂದು ಟೀಕಿಸಿದರು.
ಬೂತ್ ಪ್ರಮುಖರ ಸಭೆ ಕರೆಯಬೇಕು. ವಾರ್ಡಿನ ಕೀ ಓಟರ್ಸ್ ಸಭೆ ಕರೆದು ಸಕ್ರಿಯವಾಗಿ ಕೆಲಸ ಮಾಡುವ 100 ಜನರ ಬೂತ್ ಕಮಿಟಿ ರಚಿಸಬೇಕು. ಪ್ರತಿ ಬೂತ್‍ನಲ್ಲಿ ಎಸ್‍ಸಿ, ಎಸ್‍ಟಿ, ಒಬಿಸಿ, ಮಹಿಳೆ, ಯುವಕರು ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.
ಪೇಜ್ ಕಮಿಟಿಯಲ್ಲಿ ಪೇಜ್ ಪ್ರಮುಖರಿದ್ದಾರೆ. ಕೀ ಓಟರ್ಸ್‍ಗಳನ್ನು ಸೇರಿಸಿ 20-25 ಜನರ ಸಮಿತಿ ಮಾಡಿ 3 ತಿಂಗಳು ಮನೆಮನೆಗೆ ತೆರಳಿ ಅಭಿಯಾನ ಮಾಡಬೇಕು. ಕನಿಷ್ಠ 4 ಬಾರಿ ಪ್ರತಿ ಮನೆಗೆ ತೆರಳಬೇಕು. ಬಿಜೆಪಿ ಕೇಂದ್ರ- ರಾಜ್ಯ ಸರಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಗೂ ಕಾಂಗ್ರೆಸ್ ಜನವಿರೋಧಿ ನೀತಿಯನ್ನು ತಿಳಿಸಬೇಕು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಸ್ಥಳೀಯ ಸಮಸ್ಯೆ ಈಡೇರಿಸಲು ಬದ್ಧವಾಗಿದೆ. ಬೂತ್ ಸಂಘಟನೆ ಎಂದರೆ ಪಕ್ಷದ ಸಾಧನೆ ಹೇಳುವುದರ ಜೊತೆ ಸಮಸ್ಯೆಗಳನ್ನು ಆಲಿಸುವ ಕೆಲಸವೂ ಆಗಬೇಕು. ಜನರ ಸುತ್ತ ಅಭಿವೃದ್ಧಿ ಆಗಬೇಕೆಂಬ ಚಿಂತನೆ ನಮ್ಮದು ಎಂದು ತಿಳಿಸಿದರು. ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ನಮ್ಮ ಬೂತ್ ಸಮಿತಿಗಳು ಕಾರ್ಯ ನಿರ್ವಹಿಸಲಿ ಎಂದು ತಿಳಿಸಿದರು.
ಬಿಜೆಪಿಯ ಪೀಪಲ್ ಪಾಲಿಟಿಕ್ಸ್; ಕಾಂಗ್ರೆಸ್‍ನಿಂದ ಪವರ್ ಪಾಲಿಟಿಕ್ಸ್
ಕಾಂಗ್ರೆಸ್ ಪವರ್ ಪಾಲಿಟಿಕ್ಸ್ ಮಾಡುತ್ತದೆ. ಜನರನ್ನು ಜಾತಿ- ಮತ- ಪಂಥದ ಮೂಲಕ ಒಡೆದು ಅಧಿಕಾರ ಪಡೆಯುವವರು ಕಾಂಗ್ರೆಸ್ಸಿಗರು ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನಮ್ಮದು ಪೀಪಲ್ ಪಾಲಿಟಿಕ್ಸ್. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು; ಅದು ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದೆ. ಬಿಜೆಪಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ತಿಳಿಸಿದರು.
ಶಿವಾಜಿನಗರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇನೆ. ಇಲ್ಲಿ ಗೆಲುವಿಗೆ ಬೂತ್ ಸಶಕ್ತ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು. ಶಿರಹಟ್ಟಿಯ ಮಾದರಿಯಲ್ಲಿ ಇಲ್ಲಿಯೂ ಬೂತ್ ಸಶಕ್ತೀಕರಣ ಮತ್ತು ಗೆಲುವು ಆಗಲಿ ಎಂದು ಆಶಿಸಿದರು.
ಸಂಸದ ಪಿ.ಸಿ.ಮೋಹನ್ ಅವರು ಮಾತನಾಡಿ, ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂಬ ಅಮಿತ್ ಶಾ ಅವರ ಮಾತನ್ನು ಉಲ್ಲೇಖಿಸಿದರು. ಸಂಘಟನೆ ನಿರಂತರ ಇರಬೇಕೆಂಬ ಪಕ್ಷದ ಹಿರಿಯರ ಆಶಯವನ್ನು ಪಕ್ಷವು ಸದಾ ಪಾಲಿಸುತ್ತ ಬಂದಿದೆ ಎಂದು ವಿವರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಭಾರಿ ಅಶ್ವತ್ಥನಾರಾಯಣ್, ಮಂಡಲ ಅಧ್ಯಕ್ಷ ಬಾಲಾಜಿ ಮಣಿ, ಮಾಜಿ ಕಾರ್ಪೊರೇಟರ್‍ಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
[02/01, 6:12 PM] Bjp Media: 2-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ಬಿಜೆಪಿ ಪರ ಅಲೆಯಿಂದ ವಿಚಲಿತ ಕಾಂಗ್ರೆಸ್ಸಿಗರಿಂದ ಕೀಳು ಅಭಿರುಚಿಯ ಹೇಳಿಕೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಇಡೀ ರಾಜ್ಯದಲ್ಲಿ ಎದ್ದಿರುವ ಬಿಜೆಪಿ ಪರ ಅಲೆಯನ್ನು ನೋಡಿ ವಿಚಲಿತರಾದ ಕಾಂಗ್ರೆಸ್ಸಿಗರು ಕೀಳು ಅಭಿರುಚಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೇ ಅಧಿಕಾರಕ್ಕೆ ಬರ್ತೀವಿ ಅಂತ ಹೇಳ್ತಿದ್ದೀರಾ. ಇದು ಸುಲಭವಲ್ಲ. ನೀವು 50ರಿಂದ 60 ಸೀಟು ಪಡೆಯುವುದು ಬಹಳ ಕಷ್ಟ. ನಾವು 140 ಸೀಟು ಗೆದ್ದು ಅಧಿಕಾರ ಮಾಡಲಿದ್ದೇವೆ ಎಂದು ಸವಾಲು ಹಾಕಿದರು.
ಇತ್ತೀಚೆಗೆ ಕಾಂಗ್ರೆಸ್ ಮುಖಂಡರು, ಬಿಜೆಪಿ ಮುಖಂಡರನ್ನು ಗುರಿ ಮಾಡಿಕೊಂಡು ಕೀಳಾಗಿ ಮಾತನಾಡಿ, ವ್ಯಕ್ತಿಗತ ನಿಂದನೆ ಮಾಡುತ್ತಿದ್ದಾರೆ. ಮೇಲ್ಮನೆ ವಿರೋಧ ಪಕ್ಷದ ನಾಯಕರಾದ ಹರಿಪ್ರಸಾದ್ ಅವರು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸಿ.ಟಿ ರವಿ ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದರು.
ಅವರೊಬ್ಬ ಕುಡುಕ, ಗಾಂಜಾ ಹೊಡೀತಾರೆ ಎಂದಿದ್ದಾರೆ. ಸಿದ್ದರಾಮಯ್ಯ ಕೂಡ ಅದೇ ದಾಟಿಯಲ್ಲಿ ಎಲ್ಲರನ್ನೂ ಮೂದಲಿಸುತ್ತಾರೆ ಎಂದು ಟೀಕಿಸಿದರು. ಹರಿಪ್ರಸಾದ್ ಅವರು ಯಾಕೆ ಈ ರೀತಿ ಸಣ್ಣತನಕ್ಕೆ ಇಳಿದಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನಿಮ್ಮನ್ನು ನಾವು ಕುಡುಕರು ಅಂತ ಹೇಳುವುದಿಲ್ಲ. ನೀವು ಕುಡೀತೀರೋ ಇಲ್ಲವೋ ನನಗೂ ಗೊತ್ತಿಲ್ಲ. ನೀವು ಗಾಂಜಾ ಹೊಡೀತೀರಾ ಅಂತ ಗೊತ್ತಿಲ್ಲ; ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ನಾವು ತಿಳಿದುಕೊಂಡಂತೆÉ ನೀವು ಹಿರಿಯ ರಾಜಕಾರಣಿ. ಸುಮಾರು 18 ವರ್ಷ ರಾಜ್ಯಸಭೆಯಲ್ಲಿ ಇದ್ದು ಬಂದವರು. ಹೀಗೆಲ್ಲ ಇದ್ದರೂ ನೀವ್ಯಾಕೆ ಇಷ್ಟು ಕೀಳುಮಟ್ಟಕ್ಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು. ನೀವು ಸಿ.ಟಿ ರವಿ ಅವರನ್ನು ಕುಡುಕ ಅನ್ನುತ್ತೀರಿ. ಅವರು ನಿಮ್ಮ ಜೊತೆ ಯಾವಾಗಾದ್ರೂ ಕುಡಿದಿದ್ರಾ.? ಎಂದು ಪ್ರಶ್ನಿಸಿದರು.
ನಿಮ್ಮ ಜೊತೆ ಅವರು ಕುಡಿದಿದ್ರೆ ನಮ್ಮ ಜೊತೆ ಕುಡಿದಿದ್ದ ಅಂತ ಹೇಳಿ. ಗಾಂಜಾ ಹೊಡೆದಿದ್ರೆ ನೋಡಿದ್ದರೆ ಹೇಳಿ. ಇಂಥ ಕೆಟ್ಟ ಸಂಸ್ಕøತಿಯನ್ನು ಈ ದೇಶದ ಜನ ಒಪ್ಪುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಮಾತುಗಳನ್ನು ಬದಲಿಸಿಕೊಳ್ಳುವುದು ಅತ್ಯಂತ ಮುಖ್ಯವಾದುದು ಎಂದು ಆಗ್ರಹಿಸಿದರಲ್ಲದೆ ಕಾಂಗ್ರೆಸ್ ಪಕ್ಷದವರ ಕೀಳು ಅಭಿರುಚಿಯಿಂದಲೇ ಆ ಪಕ್ಷ ನೆಲಕಚ್ಚಿದೆ ಎಂದು ತಿಳಿಸಿದರು.
ಮದ್ಯ ಸೇವಿಸುವಂತಿಲ್ಲ ಎಂದು ಕಾಂಗ್ರೆಸ್ ಸಂವಿಧಾನದಲ್ಲೇ ಇದೆ. ಅಂಥವರಿಗೆ ಕಾಂಗ್ರೆಸ್‍ನಲ್ಲಿ ಸದಸ್ಯತ್ವ ಕೊಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಯಾರೂ ಕುಡಿಯುವುದಿಲ್ಲವೇ? ಸಿದ್ದರಾಮಯ್ಯ, ಡಿಕೆಶಿ, ನೀವು, ಬೇರೆಯವರು ಯಾರೂ ಕುಡಿಯುವುದಿಲ್ಲವೇ? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಮೇಲೆ ಅಪಾದನೆ ಮಾಡಿದ್ದರಲ್ಲವೇ? ಅದನ್ಯಾಕೆ ತಿರುಚಿ ಸಿ.ಟಿ.ರವಿ ಮೇಲೆ ಹೇಳ್ತಿದ್ದೀರಾ? ರಾಹುಲ್ ಗಾಂಧಿಯವರನ್ನು ಕುಡುಕ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಲಾಗಿದೆ. ಡ್ರಗ್ ಪೆಡ್ಲರ್ ಅಂದಿದ್ದಾರೆ. ನಾವು ಅದನ್ನೆಲ್ಲ ಹೇಳುವುದಿಲ್ಲ. ನಿಮಗೆ ತಾಕತ್ತಿದ್ದರೆ ರಾಹುಲ್ ಗಾಂಧಿಯವರನ್ನು ನೀವೇ ಕೇಳಿ ಎಂದು ಸವಾಲೆಸೆದರು.
ಕಾಂಗ್ರೆಸ್ ನಲ್ಲಿ ಕುಡುಕರಿಗೆ ಸದಸ್ಯತ್ವ ಕೊಡಲ್ಲ ಅಂತಿದೆ. ಆದ್ರೆ ಇಡೀ ಕಾಂಗ್ರೆಸ್ ರಾತ್ರಿ ಕುಡಿದು ಮಲಗುತ್ತೆ. ಆದ್ರೆ ನಾನು ಕಾಂಗ್ರೆಸ್‍ನಲ್ಲಿ ಇದ್ದು ಬಂದವನು. ನಿಮ್ಮ ಎಲ್ಲಾ ವಿಚಾರ ನನಗೆ ಗೊತ್ತು, ಇಲ್ಲಿಗೆ ಬಂದೆ ಅಂತ ನಾನು ಮಾತನಾಡುವುದಿಲ್ಲ. ಗಾಜಿನಮನೆಯಲ್ಲಿ ಕುಳಿತು, ಕಂಡವರ ಮೇಲೆ ಕಲ್ಲು ಹೊಡೆಯುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.
ನಿಮ್ಮ ಚರಿತ್ರೆಗಳನ್ನು ಹಿಂದೆ ತಿರುಗಿ ನೋಡಿ. ನಿಮಗೆ ಅಂಟಿಕೊಂಡ ಜಾಡ್ಯಗಳೇನು ಎಂದು ನೋಡಿ. ಜನ ನಿಮ್ಮನ್ನು ಯಾವರೀತಿ ಗುರುತಿಸ್ತಾರೆ ಎಂದು ನೋಡಿಕೊಳ್ಳಿ. ಇದನ್ನು ಗಮನಿಸಿದ ಬಳಿಕ ಬೇರೆಯವರ ಕುರಿತು ಮಾತನಾಡಿ ಎಂದು ತಿಳಿಸಿದರು.
ಊಟ ಮಾಡೋದು, ಕುಡಿಯೋದು ಅವರವರ ಸ್ವಂತ ವಿಷಯ. ಅದನ್ನು ರಾಜಕೀಯಕ್ಕೆ ತರುವುದು ಸರಿಯಲ್ಲ. ನಿಮ್ಮ ಲೆವೆಲ್ಲಿಗೆ ಇದು ಸರಿಯಾ ಅಂತ ಪ್ರಶ್ನೆ ಮಾಡಿಕೊಳ್ಳಿ. ಇಂಥವುಗಳಿಗೆ ತೆರೆ ಎಳೆಯಿರಿ ಎಂದು ಆಗ್ರಹಿಸಿದರು.
ಚುನಾವಣೆ ಹತ್ತಿರ ಬರುತ್ತಿದೆ. ಜನರು ಎಲ್ಲರನ್ನು ತಕ್ಕಡಿಯಲ್ಲಿಟ್ಟು ತೂಗುವ ಕೆಲಸ ಮಾಡುತ್ತಾರೆ. ನಿಮ್ಮ ಪರಂಪರೆ ಬದಲಿಸಿಕೊಳ್ಳದಿದ್ದರೆ ನಿಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಎಚ್ಚರಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
[02/01, 8:13 PM] Bjp Media: 2-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ಎಚ್ಡಿಕೆಗೆ ಜೆಡಿಎಸ್ ನೆಲಕಚ್ಚುವ ಭೀತಿ- ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ರಾಜಕೀಯ ಚಾಣಕ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿಯ ಬಳಿಕ ಜೆಡಿಎಸ್‍ಗೆ ಹಳೆ ಮೈಸೂರು ಭಾಗದಲ್ಲೂ ಸಂಪೂರ್ಣ ನೆಲಕಚ್ಚುವ ಭೀತಿ ಉಂಟಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಅಮೂಲ್ -ಕೆಎಂಎಫ್ (ನಂದಿನಿ) ಜೊತೆ ವಿಲೀನ ಇಲ್ಲ ಎಂದು ಮುಖ್ಯಮಂತ್ರಿಗಳು ಮತ್ತು ರಾಜ್ಯದ ಸಹಕಾರ ಸಚಿವರು ಈಗಾಗಲೇ ತಿಳಿಸಿದ್ದಾರೆ. ಪರಸ್ಪರ ಸಹಕಾರದೊಂದಿಗೆ, ಉತ್ತಮ ಅಂಶಗಳನ್ನು ಹಂಚಿಕೊಂಡು ಬೆಳೆಯಬೇಕೆಂಬ ಆಶಯವನ್ನು ಅಮಿತ್ ಶಾ ಅವರು ವ್ಯಕ್ತಪಡಿಸಿದ್ದರು. ಆದರೆ, ಕಣ್ಣೀರಿನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಮಾಲೆ ರೋಗದವರಂತೆ ಎಲ್ಲೆಡೆ ಹಳದಿ ಕಂಡಂತೆ ಭ್ರಮಿಸಿ ಮಾತನಾಡಲು ಆರಂಭಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಹೊಂದಾಣಿಕೆ ರಾಜಕೀಯದಲ್ಲಿ ನಿಸ್ಸೀಮರಾದ ಕುಮಾರಸ್ವಾಮಿ ಅವರಿಗೆ ಹಳೆ ಮೈಸೂರು ಭಾಗದಲ್ಲಿ ಸೋಲುವ ಭೀತಿ ಹೆಚ್ಚಾಗಿದೆ. ಮಂಡ್ಯದಲ್ಲಿ ಅಮಿತ್ ಶಾ ಅವರ ಸಮಾವೇಶದ ಯಶಸ್ಸು, ಬೆಂಗಳೂರಿನಲ್ಲೂ ಸಮಾವೇಶಕ್ಕೆ ಅಪಾರ ಜನರು ಬಂದಿರುವುದನ್ನು ಗಮನಿಸಿ ಅವರ ಆತಂಕ ಹೆಚ್ಚಿದೆ. ಅದೇ ಕಾರಣಕ್ಕೆ ಅವರು ಬುದ್ಧಿ ಭ್ರಮಣೆಗೆ ಒಳಗಾದವರಂತೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷವು ಮಂಡ್ಯ, ಮೈಸೂರು, ಹಾಸನ ಸೇರಿ ಹಳೆ ಮೈಸೂರು ಭಾಗದಲ್ಲಿ ಸೊರಗುತ್ತಿದೆ. ಇದರಿಂದ ವಿಚಲಿತರಾದ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಸುದ್ದಿ ಹಬ್ಬಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಅವರಿಗೆ ಚುನಾವಣೆ ಬಂದಾಗ ಕನ್ನಡಾಭಿಮಾನ ಉಕ್ಕಿ ಹರಿಯುತ್ತದೆ; ನೆಲ, ಜಲದ ಕುರಿತು ಅವರು ಮೊಸಳೆಕಣ್ಣೀರು ಹಾಕುತ್ತಾರೆ ಎಂದು ಆಕ್ಷೇಪಿಸಿದ್ದಾರೆ.
ಜೆಡಿಎಸ್ ಮುಖಂಡರ ಕಪಟ ರಾಜಕೀಯವನ್ನು ಜನರು ಈಗಾಗಲೇ ತಿರಸ್ಕರಿಸಿದ್ದಾರೆ. ಭವಿಷ್ಯದಲ್ಲಿ ಜನತೆ ಸ್ಥಿರ ಸರಕಾರಕ್ಕಾಗಿ ಬಿಜೆಪಿಗೆ ಪೂರ್ಣ ಬಹುಮತ ಕೊಡಲಿದ್ದು, ಜೆಡಿಎಸ್ ಪಕ್ಷಕ್ಕೆ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
[02/01, 8:13 PM] Bjp Media: 2-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
1 ಲಕ್ಷಕ್ಕಿಂತ ಹೆಚ್ಚು ಮನೆಗಳ ಮೇಲೆ ಬಿಜೆಪಿ
ಧ್ವಜ: ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿದೆ. 1 ಲಕ್ಷಕ್ಕಿಂತ ಹೆಚ್ಚು ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಸಚಿವರು, ಶಾಸಕರು, ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಗುರಿ ಇದ್ದು, ಅಭಿಯಾನ ಯಶಸ್ಸು ಕಾಣಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಶೀಘ್ರವೇ ಜೈಲಿಗೆ: ಮಂಗಳೂರಿನಲ್ಲಿ ಇಂದು ಬೂತ್ ವಿಜಯ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯೊಳಗಡೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಕುರಿತಂತೆ ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಮೇಲೆ ಹರಿಹಾಯ್ದ ಅವರು, ಕಾಂಗ್ರೆಸ್ 100% ಭ್ರμÁ್ಟಚಾರಿಗಳ ಪಕ್ಷವಾಗಿದೆ. ಕಾಂಗ್ರೆಸ್ ಭ್ರμÁ್ಟಚಾರಿಗಳ ಪಕ್ಷ, ಭ್ರμÁ್ಟಚಾರದ ಪಿತಾಮಹರು ಆ ಪಕ್ಷದಲ್ಲಿದ್ದಾರೆ. ಭ್ರμÁ್ಟಚಾರಿಗಳಲ್ಲಿ ಮಹಾಭ್ರμÁ್ಟಚಾರಿಗಳು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದರು.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ? ಎಂದು ಕೇಳಿದ ಅವರು, 40% ದಾಖಲೆಗಳಿದ್ದರೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಬಹುದು ಎಂದು ಸವಾಲು ಹಾಕಿದರು.
ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೆÇೀಟಿ ಆರಂಭವಾಗಿದೆ. ಇದು ಕಾಂಗ್ರೆಸ್ ಪಕ್ಷದ ಅವನತಿಗೆ ಕಾರಣವಾಗಲಿದೆ ಎಂದು ವಿಶ್ವಾಸದಿಂದ ನುಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂತ್ರಿ ಸ್ಥಾನಕ್ಕೆ ಹಲವರ ನಡುವೆ ಪೈಪೆÇೀಟಿ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‍ನಲ್ಲಿ ಬೂತ್ ಕೆಲಸ ಮಾಡಲು ಒಬ್ಬ ಹಿಂದೂ ಸಿಗುವುದಿಲ್ಲ. ಆದ್ದರಿಂದ ಮುಂದಿನ 15 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿರುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎಂಟೂ ಸ್ಥಾನದಲ್ಲೂ ಬಿಜೆಪಿ ವಿಜಯ ಸಾಧಿಸಲಿದೆ ಎಂದರು.
ಡಿ.ಕೆ. ಶಿವಕುಮಾರ್ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್ ಒಡೆದು ಮೂರು ಚೂರಾಗಿದೆ. ಆದರೆ ನಾನು ರಾಜ್ಯಾಧ್ಯಕ್ಷನಾದ ಬಳಿಕ ಬಿಜೆಪಿ ಒಂದೇ ಆಗಿದೆ. ನಾವು ಡಂಗೂರ ಸಾರುವುದಿಲ್ಲ. ಬಾಂಬ್, ಸ್ಫೋಟಕ ಸಿಡಿಸುವುದಿಲ್ಲ. ಬದಲಾಗಿ ಮನೆಮನೆಗಳಿಗೆ ಹೋಗಿ ಮನಮನಗಳಲ್ಲಿ ಕಮಲವನ್ನು ಅರಳಿಸುತ್ತೇವೆ. ಆದರೆ ಕಾಂಗ್ರೆಸ್ ಒಡೆದು ಆಳುವ ನೀತಿಯ ಮೂಲಕ ಮನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ಸೇ ಒಡೆದು ಹೋಗಿದೆ. ಆದರೆ ಬಿಜೆಪಿ ಒಂದಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು
ಇಡೀ ರಾಜ್ಯದಲ್ಲಿ ಬಿಜೆಪಿ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಬೆಳೆದಿದೆ. ದೇಶದಲ್ಲಿ ಪರಿವರ್ತನೆ ಕಾಣಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ. ಆದ್ದರಿಂದ 'ಬೂತ್ ವಿಜಯ ಅಭಿಯಾನ', ‘ವಿಜಯ ಸಂಕಲ್ಪ ಅಭಿಯಾನ'ದ ಮೂಲಕ ಅಧಿಕಾರವನ್ನು ಹಿಡಿಯಬೇಕಿದೆ ಎಂದು ತಿಳಿಸಿದರು.
ಜನವರಿ 12ರವರೆಗೆ ಬೂತ್ ವಿಜಯ ಅಭಿಯಾನ ನಡೆಯಲಿದೆ. ಈ 10 ದಿನಗಳಲ್ಲಿ ಬೂತ್ ಕಮಿಟಿ ಬಲಪಡಿಸುವ, ಪೇಜ್ ಪ್ರಮುಖ್ ಸರಿಪಡಿಸುವ, ವಾಟ್ಸ್ ಆಪ್ ಗ್ರೂಪ್ ರಚಿಸುವ, ಒಂದು ಬೂತ್ ಮಟ್ಟದಲ್ಲಿ ಕನಿಷ್ಠ 25 ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆಯುತ್ತದೆ ಎಂದು ವಿವರಿಸಿದರು.
‘ವಿಜಯ ಸಂಕಲ್ಪ ಅಭಿಯಾನ'ವು ಜನವರಿ 21ರಿಂದ 29ರವರೆಗೆ ನಡೆಯಲಿದೆ. ಈ ವೇಳೆ ಮನೆ-ಮನೆಗಳಲ್ಲಿ ಬಿಜೆಪಿಯ ಯೋಜನೆಗಳ ಪ್ರಚಾರ, ‘ನಮ್ಮ ಮನೆ ಬಿಜೆಪಿ ಮನೆ' ಸ್ಟಿಕ್ಕರ್ ಅಭಿಯಾನ, ಪ್ರತೀ ಬೂತ್‍ಗಳಲ್ಲಿ ಗೋಡೆ ಬರಹ, ಸದಸ್ಯತನ ಅಭಿಯಾನ, ಪ್ರತೀ ಬೂತ್‍ಗಳಲ್ಲಿ ಫಲಾನುಭವಿಗಳ ಸಂಪರ್ಕ ಮಾಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
[02/01, 10:39 PM] Bjp Media: 2-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ವಿಜಯಪುರದ ಜೀವಂತ ದೇವರ ಅಗಲುವಿಕೆಯಿಂದ
ನಾಡಿಗೇ ಆಘಾತ- ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಜೀವಂತ ದೇವರು ಎಂದೇ ಪ್ರಸಿದ್ಧರಾದವರು. ಅವರ ಅಗಲುವಿಕೆಯು ನಾಡಿಗೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿನ ಅವರ ಅಪಾರ ಭಕ್ತಸಮೂಹಕ್ಕೆ ಆಘಾತವನ್ನು ಉಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರμÉ್ಟೀ ಅಲ್ಲ ಜ್ಞಾನೋಪಾಸಕರು ಕೂಡ ಆಗಿದ್ದರು. ಅಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕøತ, ಇಂಗ್ಲಿμï, ಮರಾಠಿ ಮತ್ತು ಹಿಂದಿ ಭಾμÉಗಳಲ್ಲಿ ನಿμÁ್ಣತರು. ಒಬ್ಬ ಜ್ಞಾನಯೋಗಿಗಳ ರೂಪದಲ್ಲಿ ಅವರು ಮುಂದೆಯೂ ನಮ್ಮೊಂದಿಗೆ ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿದೆ. ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದವರು. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಿದ್ದರು. ಸೂಜಿಗಲ್ಲಿನಂತಹ ಸೆಳೆತ, ಅವರು ಭಾμÉ, ಧಾಟಿ, ಪದಪ್ರಯೋಗ, ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುತ್ತಿದ್ದರು ಎಂದು ವಿವರಿಸಿದ್ದಾರೆ. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರೆಸಿಕೊಂಡು ಬರುತ್ತಿದ್ದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಎಂಬ ದಾಸ ವಾಣಿಯಂತೆ ಅವರು ನಡೆದವರು ಎಂದಿದ್ದಾರೆ.
ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಞಾನವನ್ನು ಬಳಸಿಕೊಂಡು ಬೋಧÀಪ್ರದ ಪ್ರವಚನಗಳನ್ನು ನೀಡುತ್ತಿದ್ದರು. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯವಾಗಿತ್ತು. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತಿದ್ದವು. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ.
ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದವರು. ಅವರು ಜೀವನವನ್ನು ಆಧ್ಯಾತ್ಮಿಕತೆಗೆ ಮೀಸಲಿಟ್ಟಿದ್ದಾರೆ ಮತ್ತು ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳು ನಮಗೆ ಮಾರ್ಗದರ್ಶನ ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಅನ್ನು ನಯವಾಗಿಯೇ ನಿರಾಕರಿಸಿದ್ದು ಅವರ ಶ್ರೇಷ್ಠ ವ್ಯಕ್ತಿತ್ವಕ್ಕೆ ಕೈಗನ್ನಡಿ ಎಂದು ಅವರು ತಿಳಿಸಿದ್ದಾರೆ.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment